ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ
- ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ತೆರೆಯಲು ಈ ಪುಟದ ಮೇಲ್ಭಾಗದಲ್ಲಿರುವ 'ಅಪ್ಲೈ' ಮೇಲೆ ಕ್ಲಿಕ್ ಮಾಡಿ.
- ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ನಮೂದಿಸಿ ಮತ್ತು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿ ಯನ್ನು ವೆರಿಫೈ ಮಾಡಿ.
- ನಿಮ್ಮ ಪೂರ್ಣ ಹೆಸರು, ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಪಿನ್ ಕೋಡ್‌ನಂತಹ ನಿಮ್ಮ ಬೇಸಿಕ್ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
- ಈಗ, ಲೋನ್ ಆಯ್ಕೆ ಪುಟಕ್ಕೆ ಭೇಟಿ ನೀಡಲು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.
- ನಿಮಗೆ ಬೇಕಾದ ಲೋನ್ ಮೊತ್ತವನ್ನು ನಮೂದಿಸಿ. ನಮ್ಮ ಮೂರು ಪರ್ಸನಲ್ ಲೋನ್ ರೂಪಾಂತರಗಳಾದ ಟರ್ಮ್, ಫ್ಲೆಕ್ಸಿ ಟರ್ಮ್ ಮತ್ತು ಫ್ಲೆಕ್ಸಿ ಹೈಬ್ರಿಡ್ ಲೋನ್‌ನಿಂದ ಆಯ್ಕೆಮಾಡಿ.
- ಮರುಪಾವತಿ ಅವಧಿಯನ್ನು ಆಯ್ಕೆಮಾಡಿ - ನೀವು 12 ತಿಂಗಳಿಂದ 84 ತಿಂಗಳವರೆಗಿನ ಅವಧಿಯ ಆಯ್ಕೆಗಳನ್ನು ಆರಿಸಿಕೊಂಡು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ’.
- ನಿಮ್ಮ ಕೆವೈಸಿ ಪೂರ್ಣಗೊಳಿಸಿ ಮತ್ತು ನಿಮ್ಮ ಅಪ್ಲಿಕೇಶನ್ ಸಲ್ಲಿಸಿ.
ಮುಂದಿನ ಹಂತಗಳ ಬಗ್ಗೆ ನಮ್ಮ ಪ್ರತಿನಿಧಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಡಾಕ್ಯುಮೆಂಟ್‌ಗಳ ಯಶಸ್ವಿ ಪರಿಶೀಲನೆಯ ನಂತರ ಲೋನ್ ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ.