ಬಜಾಜ್ ಫಿನ್‌ಸರ್ವ್ 6.9% ರಿಂದ ಆರಂಭವಾಗುವ ಬಡ್ಡಿ ದರದಲ್ಲಿ ರೂ. 3.5 ಕೋಟಿಯವರೆಗಿನ ಹೋಮ್ ಲೋನನ್ನು ಆಫರ್ ಮಾಡುತ್ತದೆ*. ನೀವು 240 ತಿಂಗಳವರೆಗಿನ ಫ್ಲೆಕ್ಸಿಬಲ್ ಅವಧಿಯಲ್ಲಿ ಮರುಪಾವತಿ ಮಾಡಬಹುದು, ವಾರ್ಷಿಕ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು, ₹ 50 ಲಕ್ಷದವರೆಗೆ ಅತಿ ಹೆಚ್ಚಿನ ಟಾಪ್-ಅಪ್ ಲೋನನ್ನು ಪಡೆಯಬಹುದು ಮತ್ತು PMAY ಬಡ್ಡಿ ಸಬ್ಸಿಡಿ ಮೂಲಕ ಬಡ್ಡಿಯ ಮೇಲೆ ₹ 2.67 ಲಕ್ಷ* ವರೆಗೆ ಉಳಿತಾಯ ಮಾಡಬಹುದು.
ನೀವು ಮನೆ ಖರೀದಿಸಲು, ನಿರ್ಮಿಸಲು ಅಥವಾ ನವೀಕರಿಸಲು ಬಯಸುತ್ತಿದ್ದರೆ, ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ನಿಮ್ಮ ಹೌಸಿಂಗ್ ಲೋನ್ ಅಗತ್ಯಗಳಿಗೆ ವನ್ ಸ್ಟಾಪ್ ಪರಿಹಾರವಾಗಿದೆ. ಸರಳ ಅರ್ಹತಾ ನಿಯಮಗಳು ಮತ್ತು ಡಾಕ್ಯುಮೆಂಟ್‌ಗಳ ಕನಿಷ್ಠ ಅವಶ್ಯಕತೆಯೊಂದಿಗೆ ನೀವು ಸುಲಭವಾಗಿ ಹಣಕಾಸನ್ನು ಪಡೆಯಬಹುದು. ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯದ ಮೂಲಕ ನಿಮ್ಮ ಅಸ್ತಿತ್ವದಲ್ಲಿರುವ ಹೌಸ್ ಲೋನನ್ನು ನೀವು ರಿಫೈನಾನ್ಸ್ ಮಾಡಬಹುದು ಮತ್ತು ಹಾಗೆ ಮಾಡುವಾಗ ಟಾಪ್-ಅಪ್ ಲೋನನ್ನು ಪಡೆಯಬಹುದು. ಪ್ರಾಪರ್ಟಿ ಡೋಸಿಯರ್ ಸೌಲಭ್ಯದ ಮೂಲಕ, ಪ್ರಾಪರ್ಟಿ ಮಾಲೀಕತ್ವದ ಕಾನೂನು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ನೀವು ತಿಳಿದುಕೊಳ್ಳುತ್ತೀರಿ; ಮತ್ತು ಆರ್ಥಿಕವಾಗಿ ಸುರಕ್ಷಿತವಾಗಿರಲು ನೀವು ಕಸ್ಟಮೈಜ್ ಮಾಡಿದ ಇನ್ಶೂರೆನ್ಸ್ ಯೋಜನೆಗಳನ್ನು ಪಡೆಯಬಹುದು.
ನಿಮ್ಮ ಹೌಸಿಂಗ್ ಫೈನಾನ್ಸ್ ಅಗತ್ಯಗಳನ್ನು ಪೂರೈಸಲು, ಇಂದೇ ಬಜಾಜ್ ಫಿನ್‌ಸರ್ವ್ ಹೋಮ್ ಲೋನಿಗೆ ಅಪ್ಲೈ ಮಾಡಿ ಮತ್ತು ತ್ವರಿತ ಅನುಮೋದನೆ ಪಡೆಯಿರಿ.
ಮೊದಲ ಬಾರಿಗೆ ಮನೆ ಮಾಲೀಕರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಸಹಾಯದಿಂದ ಹೋಮ್ ಲೋನ್‌ಗಳು ಎಂದಿಗಿಂತಲೂ ಹೆಚ್ಚು ಕೈಗೆಟಕುವಂತೆ ಆಗುತ್ತವೆ. ಕೇವಲ 6.9%* ಬಡ್ಡಿ ದರದಲ್ಲಿ ಹೋಮ್ ಲೋನ್ ಪಡೆಯುವ ಮೂಲಕ ನಿಮ್ಮ ಹೋಮ್ ಲೋನ್ EMI ಗಳನ್ನು PMAY ಜೊತೆಗೆ ಕಡಿಮೆ ಮಾಡಿ, ಮತ್ತು ಬಡ್ಡಿಯ ಮೇಲೆ ರೂ. 2.67 ಲಕ್ಷದವರೆಗೆ ಉಳಿತಾಯ ಮಾಡಿ*. ನಿಮ್ಮ ಹೆತ್ತವರು ಮನೆ ಹೊಂದಿದ್ದರೂ ಸಹ, PMAY ಅಡಿಯಲ್ಲಿ ಒಂದು ಹೋಂ ಲೋನ್ ಪಡೆದುಕೊಳ್ಳಿ, ಮತ್ತು ಇದರಿಂದ ನೀವೇ ಮನೆಮಾಲೀಕರಾಗುವ ಅವಕಾಶ ಪಡೆಯಿರಿ.
ಕನಿಷ್ಠ ದಾಖಲಾತಿ ಮತ್ತು ವೇಗವಾದ ಪ್ರಕ್ರಿಯೆಯೊಂದಿಗೆ, ಬಜಾಜ್ ಫಿನ್‌ಸರ್ವ್ ಜೊತೆಗೆ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಅನ್ನು ರಿಫೈನಾನ್ಸ್ ಮಾಡಿ. ಹೋಮ್ ಲೋನ್ ಟ್ರಾನ್ಸ್‌ಫರ್ ಗಾಗಿ ಅಪ್ಲೈ ಮಾಡಿ, ಮತ್ತು ನಾಮಿನಲ್ ಬಡ್ಡಿ ದರದೊಂದಿಗೆ ಟಾಪ್-ಅಪ್ ಲೋನ್ ಪಡೆಯಿರಿ.
ನಿಮ್ಮ ಅಸ್ತಿತ್ವದಲ್ಲಿರುವ ಹೌಸಿಂಗ್ ಲೋನ್ ಮೇಲೆ ಹೆಚ್ಚಿನ ಮೌಲ್ಯದ ಉನ್ನತ ಮಟ್ಟದ ಲೋನ್ನೊಂದಿಗೆ ನಿಮ್ಮ ಇತರ ಅವಶ್ಯಕತೆಗಳಿಗೆ ಹಣಕಾಸು ಒದಗಿಸಿ. ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಇಲ್ಲದೆ, ನಾಮ ಮಾತ್ರದ ಶುಲ್ಕದಲ್ಲಿ ರೂ. 50 ಲಕ್ಷದವರೆಗಿನ ಟಾಪ್ -ಅಪ್ ಲೋನ್ ಪಡೆಯಿರಿ.
ಆಸ್ತಿ ಮಾಲೀಕರಾಗುವ ಎಲ್ಲಾ ಕಾನೂನು ಮತ್ತು ಆರ್ಥಿಕ ಅಂಶಗಳಲ್ಲಿ ನಿಮಗೆ ಸಹಾಯ ಮಾಡುವ ಗ್ರಾಹಕೀಕರಣಗೊಳಿಸಿದ ವರದಿ.
ಲೋನನ್ನು ಕೈಗೆಟುಕುವಂತೆ ಮಾಡಲು ಭಾಗಶಃ ಮುಂಪಾವತಿ ಅಥವಾ ಫೋರ್‌ಕ್ಲೋಸರ್ ಮೇಲೆ ಶುಲ್ಕಗಳಿಲ್ಲ
ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಹೊಂದಿಕೊಳ್ಳಲು 240 ತಿಂಗಳವರೆಗಿನ ಫ್ಲೆಕ್ಸಿಬಲ್ ಕಾಲಾವಧಿಗಳು.
ನಿಮ್ಮ ಲೋನ್ ವೇಗವಾಗಿ ಪಡೆಯಲು ಸಹಾಯ ಮಾಡಲು ಸುಲಭವಾದ ಹೋಮ್ ಲೋನ್ ಅರ್ಹತಾ ಮಾನದಂಡ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್
ನಿಮ್ಮ ಅನುಕೂಲಕ್ಕಾಗಿ ನಮ್ಮ ಡಿಜಿಟಲ್ ಗ್ರಾಹಕ ಪೋರ್ಟಲ್ ಅನ್ನು ಬಳಸಿಕೊಂಡು ನಿಮ್ಮ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ನ ಆನ್ಲೈನ್ ನಿರ್ವಹಣೆ ಮಾಡಿ
ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ಹೋಮ್ ಲೋನ್ ಅನ್ನು ಮರುಪಾವತಿಸುವ ಹೊರೆಯಿಂದ ನಿಮ್ಮ ಕುಟುಂಬವನ್ನು ರಕ್ಷಿಸಲು ಕಸ್ಟಮೈಜ್ ಮಾಡಿದ ಮಾಡಿದ ಇನ್ಶೂರೆನ್ಸ್ ಯೋಜನೆಗಳು
ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ನ ಅರ್ಹತಾ ಮಾನದಂಡಗಳು ಸರಳವಾಗಿವೆ ಮತ್ತು ಉತ್ತಮ ಹಣಕಾಸು ಪ್ರೊಫೈಲ್ನೊಂದಿಗೆ ಯಾವುದೇ ಭಾರತೀಯ ಪ್ರಜೆಯು ಹಣವನ್ನು ಪಡೆಯಬಹುದು. ನೀವು ಸಂಬಳ ಪಡೆಯುವ ವ್ಯಕ್ತಿ ಅಥವಾ ಸ್ವಯಂ ಉದ್ಯೋಗಿ ಎಂಬುದರ ಆಧಾರದ ಮೇಲೆ ಮಾನದಂಡಗಳು ಭಿನ್ನವಾಗಿರುತ್ತವೆ. ಮಾನದಂಡಗಳು ಇಂಟರ್-ಡಿಪೆಂಡೆಂಟ್ ಆಗಿರುತ್ತವೆ. ಉದಾಹರಣೆಗೆ, ಒಂದೇ ವಯಸ್ಸಿನ ಎರಡು ವ್ಯಕ್ತಿಗಳಿಗೆ, ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿಯು ಹೆಚ್ಚಿನ ಮೊತ್ತದ ಲೋನ್ ಪಡೆಯಲು ಸಾಧ್ಯವಾಗುತ್ತದೆ.
ಅರ್ಹತಾ ಮಾನದಂಡ | ಸಂಬಳದಾರರಿಗಾಗಿ | ಸ್ವಯಂ ಉದ್ಯೋಗಿಗಳಿಗೆ |
---|---|---|
ರಾಷ್ಟ್ರೀಯತೆ | ನಿವಾಸಿ ಭಾರತೀಯ | ನಿವಾಸಿ ಭಾರತೀಯ |
ವಯಸ್ಸು | 23 ರಿಂದ 62 ವರ್ಷಗಳು | 25 ರಿಂದ 70 ವರ್ಷಗಳು |
ಕೆಲಸದ ಅನುಭವ / ಬಿಸಿನೆಸ್ ಅವಧಿ | 3 ವರ್ಷಗಳು ಅಥವಾ ಹೆಚ್ಚು | 5 ವರ್ಷಗಳು ಅಥವಾ ಹೆಚ್ಚು |
ಗರಿಷ್ಠ ಲೋನ್ | ₹3.5 ಕೋಟಿ | ₹3.5 ಕೋಟಿ |
ವರ್ಗ | ಡಾಕ್ಯುಮೆಂಟ್‌ಗಳು |
---|---|
ಗುರುತಿನ ಪುರಾವೆ (ಯಾವುದಾದರೂ ಒಂದು) | - PAN ಕಾರ್ಡ್ - ಡ್ರೈವಿಂಗ್ ಲೈಸೆನ್ಸ್ - ವೋಟರ್ ಐಡಿ - ಮಾನ್ಯ ಪಾಸ್‌ಪೋರ್ಟ್ |
ವಿಳಾಸದ ಪುರಾವೆ (ಯಾವುದಾದರೂ ಒಂದು) | - ವಿದ್ಯುತ್ ಬಿಲ್/ ನೀರಿನ ಬಿಲ್/ ಟೆಲಿಫೋನ್ ಬಿಲ್ - ಮಾನ್ಯ ಪಾಸ್‌ಪೋರ್ಟ್ - ಆಧಾರ್ ಕಾರ್ಡ್ - ಡ್ರೈವಿಂಗ್ ಲೈಸೆನ್ಸ್ - ವೋಟರ್ ಐಡಿ |
ಇತರೆ ಡಾಕ್ಯುಮೆಂಟುಗಳು | - ಪಾಸ್‌ಪೋರ್ಟ್ ಗಾತ್ರದ ಫೋಟೋ - 5 ವರ್ಷಗಳ ಬಿಸಿನೆಸ್ ಅವಧಿ ಪುರಾವೆಯ ಡಾಕ್ಯುಮೆಂಟ್ (ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ) |
ಇದಕ್ಕಾಗಿ ಹೋಮ್ ಲೋನ್: | ಡಾಕ್ಯುಮೆಂಟ್‌ಗಳು |
---|---|
ಸ್ವಯಂ ಉದ್ಯೋಗಿ ಮತ್ತು ಸಂಬಳದ ವ್ಯಕ್ತಿಗಳು | - ಇತ್ತೀಚಿಗಿನ ಸಂಬಳದ ಸ್ಲಿಪ್‌ಗಳು ಅಥವಾ ಫಾರಂ 16 - ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು |
*ಮೇಲಿನ ಪಟ್ಟಿಯು ಸೂಚನಾತ್ಮಕವಾಗಿದೆ ಮತ್ತು ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು ಎಂಬುದನ್ನು ಗಮನಿಸಿ.
ನೀವು ಬಜಾಜ್ ಫಿನ್‌ಸರ್ವ್ ಹೋಮ್ ಲೋನ್ ಪಡೆಯಲು ಆಯ್ಕೆ ಮಾಡಿಕೊಂಡಾಗ, ಮೇಲೆ ತಿಳಿಸಿದ ಫೀಚರ್ಗಳಷ್ಟೇ ಅಲ್ಲದೇ ಉದ್ಯಮ-ಪ್ರಮುಖ <ಹೋಮ್ ಲೋನ್ ಬಡ್ಡಿ ದರಗಳು> ಪ್ರಯೋಜನವನ್ನು ಕೂಡ ನೀವು ಪಡೆಯುತ್ತೀರಿ. ಜೊತೆಯಲ್ಲಿ, ಶೂನ್ಯ ಭಾಗಶಃ ಮುಂಪಾವತಿಯ ಅಥವಾ ಫೋರ್‌ಕ್ಲೋಸರ್ ಶುಲ್ಕಗಳು, PMAY ಫಲಾನುಭವಿಗಳಿಗೆ ಬಡ್ಡಿ ಸಹಾಯಧನ ಮತ್ತು ಸಂಪೂರ್ಣವಾಗಿ ಕಸ್ಟಮೈಜ್ ಮಾಡಿದ ಆಸ್ತಿ ದಸ್ತಾವೇಜು ಮುಂತಾದ ಅಂಶಗಳು ಈ ಹೋಮ್ ಲೋನನ್ನು ದೇಶದ ಅತ್ಯುತ್ತಮ ಲೋನ್ಗಳಲ್ಲಿ ಒಂದಾಗಿಸಿದೆ.
ಈ ಹಲವು ಫೀಚರ್‌ಗಳು ಇರುವ ಹೌಸಿಂಗ್ ಲೋನಿಗೆ ನಿಮ್ಮ ಅರ್ಹತೆಯನ್ನು ಸುಲಭವಾಗಿ ಲೆಕ್ಕ ಹಾಕಲು, ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ ಮತ್ತು ನಿಮ್ಮ EMI ಗಳನ್ನು ತಿಳಿಯಲು ಹೋಮ್ ಲೋನ್ EMI ಕ್ಯಾಲ್ಕುಲೇಟರನ್ನು ಅನುಸರಿಸಿ. ಬಳಿಕ, ಅಪ್ಲೈ ಮಾಡಲು ಸಣ್ಣ ಆನ್ಲೈನ್ ಫಾರಂ ಒಂದನ್ನು ಭರ್ತಿ ಮಾಡಿ.ಹೋಮ್>
ಹೋಮ್ ಲೋನ್ ಒಂದು ಹಣಕಾಸಿನ ಪರಿಹಾರವಾಗಿದ್ದು ಇದನ್ನು ಸುಲಭವಾಗಿ ನೀವು ಮನೆ ಖರೀದಿಸಲು ಪಡೆಯಬಹುದು. ಇಲ್ಲಿ, ನೀವು ಕೊಂಡುಕೊಳ್ಳುತ್ತಿರುವ ಭೂಮಿ, ಮನೆ ಅಥವಾ ಇತರ ಆಸ್ತಿ ಅಡಮಾನದಂತೆ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಮನೆಯನ್ನು ನವೀಕರಿಸಲು, ದುರಸ್ತಿ ಮಾಡಲು ಅಥವಾ ನಿರ್ಮಿಸಲು ಸಹ ನೀವು ಈ ಲೋನನ್ನು ಆರಿಸಿಕೊಳ್ಳಬಹುದು. ಬಜಾಜ್ ಫಿನ್‌ಸರ್ವ್ ₹ 3.5 ಕೋಟಿವರೆಗಿನ ಅಧಿಕ ಮೌಲ್ಯದ ಹಣಕಾಸನ್ನು ಒದಗಿಸಲಿದ್ದು, ಅತ್ಯಲ್ಪ ಬಡ್ಡಿದರದಲ್ಲಿ 30 ವರ್ಷಗಳವರೆಗಿನ ದೀರ್ಘಾವಧಿಯಲ್ಲಿ ಮರುಪಾವತಿಸಬಹುದು. ಇದು ಹೋಮ್ ಲೋನ್ ತೆಗೆದುಕೊಳ್ಳುವ ನಿರ್ಧಾರವನ್ನು ವೆಚ್ಚ-ಪರಿಣಾಮಕಾರಿಯಾಗಿಸುತ್ತದೆ.
ಒಮ್ಮೆ ನೀವು ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಿ ಆನ್ಲೈನಿನಲ್ಲಿ ಅಪ್ಲೈ ಮಾಡಿ.
ಹೌದು, ಹೋಮ್ ಲೋನ್ ತೆರಿಗೆ ಕಡಿತಕ್ಕೆ ಅರ್ಹವಾಗಿದೆ. ಹೋಮ್ ಲೋನ್ ತೆರಿಗೆ ಪ್ರಯೋಜನಗಳು ಅಸಲು ಮರುಪಾವತಿಯ ಮೇಲೆ ಸೆಕ್ಷನ್ 80C ಗಳ ಕಡಿತವನ್ನು ಮತ್ತು ಸೆಕ್ಷನ್ 24B ಬಡ್ಡಿ ಮರುಪಾವತಿಯ ಮೇಲೆ ರೂ. 2 ಲಕ್ಷ ಕಡಿತವನ್ನು ಒಳಗೊಂಡಿದೆ. ಸೆಕ್ಷನ್ 80C ಅಡಿಯಲ್ಲಿ ನೋಂದಣಿ ಫೀಸ್ ಮತ್ತು ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳಿಗೆ ನೀವು ಹೋಮ್ ಲೋನ್ ತೆರಿಗೆ ಕಡಿತಕ್ಕೆ ಕೂಡ ಕ್ಲೇಮ್ ಮಾಡಬಹುದು. ಕೇಂದ್ರ ಬಜೆಟ್ 2021 ರಲ್ಲಿ, ರೂ. 45 ಲಕ್ಷದವರೆಗಿನ ವೆಚ್ಚದ ಮನೆ ಖರೀದಿಸಲು, ಸೆಕ್ಷನ್ 80EEA ಅಡಿಯಲ್ಲಿ 31 ಮಾರ್ಚ್ 2022 ಒಳಗೆ ಹೋಮ್ ಲೋನ್ ಮೇಲಿನ ಬಡ್ಡಿ ಮರುಪಾವತಿಗೆ ಸರ್ಕಾರವು ರೂ. 1.5 ಲಕ್ಷದ ಹೆಚ್ಚುವರಿ ಕಡಿತವನ್ನು ವಿಸ್ತರಿಸಿದೆ. ಈಗಾಗಲೇ ಇರುವ 2 ಲಕ್ಷ ಕಡಿತಕ್ಕಿಂತ ಹೆಚ್ಚಿನ ಮತ್ತು ಮೇಲೆ ಈ ಹೆಚ್ಚುವರಿ ಕಡಿತವನ್ನು ಒದಗಿಸಲಾಗುತ್ತಿದೆ.
RBI ಮಾರ್ಗಸೂಚಿ ಪ್ರಕಾರ, ಯಾವುದೇ ಸಾಲದಾತರು 100% ಹೋಮ್ ಲೋನ್ ಫೈನಾನ್ಸಿಂಗಿಗೆ ಅನುಮತಿ ಹೊಂದಿಲ್ಲ. ಆಸ್ತಿ ಖರೀದಿ ದರದ ಮೇಲಿನ 10-20% ಮೊತ್ತವನ್ನು ನೀವು ಡೌನ್ ಪೇಮೆಂಟ್ ಮಾಡುವ ಅವಶ್ಯಕತೆ ಇದೆ. ವಿಶೇಷವಾಗಿ, ನಿಮ್ಮ ಆಸ್ತಿಗೆ 80% ವರೆಗಿನ ಹೌಸಿಂಗ್ ಲೋನ್ ಹಣಕಾಸನ್ನು ನೀವು ಪಡೆಯಬಹುದು.
ಬಜಾಜ್ ಫಿನ್‌ಸರ್ವ್ ಮೂಲಕ, ಉತ್ತಮ ಹಣಕಾಸಿನ ಪ್ರೊಫೈಲ್ ಹೊಂದಿರುವ ಯಾವುದೇ ಭಾರತೀಯ ಪ್ರಜೆ ಹೋಮ್ ಲೋನ್ ಪಡೆದುಕೊಳ್ಳಬಹುದು. ಹೋಮ್ ಲೋನ್ ಅರ್ಹತಾ ಮಾನದಂಡ ಇವುಗಳನ್ನು ಒಳಗೊಂಡಿದೆ:
ಹೌಸಿಂಗ್ ಲೋನ್ ಪಡೆಯಲು ನೀವು ರೂ. 25,000 ದಿಂದ ರೂ. 30,000 ವರೆಗೆ ನಿವ್ವಳ ತಿಂಗಳ ಆದಾಯ ಹೊಂದಿರಬೇಕೆಂದು ಬಜಾಜ್ ಫಿನ್‌ಸರ್ವ್ ಬಯಸುತ್ತದೆ. ದೆಹಲಿ, ಗುರುಗ್ರಾಮ್, ಮುಂಬೈ ಮತ್ತು ಥಾಣೆಯಂತಹ ಸ್ಥಳಗಳಲ್ಲಿ ನಿಮ್ಮ ಸಂಬಳ ಕನಿಷ್ಠ ರೂ. 30,000 ಆಗಿರಬೇಕು. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಗೋವಾದಂತಹ ನಗರಗಳಲ್ಲಿ ನೀವು ಕನಿಷ್ಠ ರೂ. 25,000 ಗಳಿಸಬೇಕು.
3 ವರ್ಷಗಳ ಕೆಲಸದ ಅನುಭವ ಹೊಂದಿರುವ ಸಂಬಳ ಪಡೆಯುವವರು ರೂ. 3.5 ಕೋಟಿ ಗಳವರೆಗೆ ಹೋಮ್ ಲೋನ್ ಪಡೆಯಬಹುದು ಮತ್ತು 5 ವರ್ಷಗಳಿಂದ ವ್ಯವಹಾರವನ್ನು ಹೊಂದಿರುವ ಸ್ವ-ಉದ್ಯೋಗಿಗಳು ರೂ. 5 ಕೋಟಿವರೆಗೆ ಹಣವನ್ನು ಪಡೆಯಬಹುದು. ನಿಮ್ಮ ಆದಾಯ, ಟೆನರ್ ಮತ್ತು ಸದ್ಯದ ಬಾಧ್ಯತೆಗಳ ಆಧಾರದ ಮೇಲೆ ಗರಿಷ್ಠ ಲೋನಿನ ಮೊತ್ತವನ್ನು ತಿಳಿಯಲು ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
ಬಜಾಜ್ ಫಿನ್‌ಸರ್ವ್‌ನಿಂದ ಪಡೆಯುವ ಹೋಮ್ ಲೋನಿಗೆ ಬೇಕಾದ ಡಾಕ್ಯುಮೆಂಟ್‌ಗಳು ಹೀಗಿವೆ:
ಎರಡೂ ಬಗೆಯ ಹೋಮ್ ಲೋನ್‌ಗಳಿಗೆ ಅವುಗಳದೇ ಆದ ಪರ ವಿರೋಧಗಳಿವೆ. ಫಿಕ್ಸೆಡ್-ದರದ ಹೋಮ್ ಲೋನಿನೊಂದಿಗೆ, ಬಡ್ಡಿದರವು ಕಾಲಾವಧಿಯಲ್ಲಿ ಸ್ಥಿರವಾಗಿರುತ್ತದೆ, ಇದು EMI ಗಳನ್ನು ಅಂದಾಜು ಮಾಡಲು ನಿಮಗೆ ಅನುಮತಿ ನೀಡುತ್ತದೆ. ಯಾವಾಗ ಹೋಮ್ ಲೋನ್ ಬಡ್ಡಿದರಗಳು ಕಡಿಮೆ ಇರುತ್ತವೆಯೋ ಆವಾಗ ಇದನ್ನು ಆಯ್ದುಕೊಳ್ಳಿ. ಫ್ಲೋಟಿಂಗ್ ರೇಟ್ ಹೋಮ್ ಲೋನ್‌ಗಳಿಗೆ, ಬಡ್ಡಿದರಗಳು ಆರ್ಥಿಕ ಬದಲಾವಣೆಗಳ ಮತ್ತು RBI ತೀರ್ಮಾನಗಳ ಆಧಾರಿತವಾಗಿರುತ್ತವೆ. ಮುಂಬರುವ ಸಮಯದಲ್ಲಿ ನೀವು ದರಗಳು ಕಡಿಮೆ ಆಗಹುದು ಎಂಬ ನಿರೀಕ್ಷೆಯಲ್ಲಿದ್ದಾಗ ಈ ಏರಿಳಿತವನ್ನು ಆಯ್ಕೆ ಮಾಡಿ. ಹೆಚ್ಚುವರಿಯಾಗಿ, ನೀವು ಫ್ಲೋಟಿಂಗ್ ರೇಟ್ ಹೋಮ್ ಲೋನ್ ಪಡೆಯುವ ವ್ಯಕ್ತಿಯಾಗಿದ್ದರೆ, ನೀವು ಯಾವ ಮುಂಪಾವತಿ ಶುಲ್ಕ ಅಥವಾ ಫೋರ್‌ಕ್ಲೋಸರ್ ಶುಲ್ಕ ಪಾವತಿಸಬೇಕಿಲ್ಲ ಎಂದು RBI ಕಡ್ಡಾಯವಾಗಿ ಹೇಳುತ್ತದೆ.
ಹೌಸಿಂಗ್ ಲೋನ್‌ಗಳ ವಿವಿಧ ಅವಶ್ಯಕತೆಗಳ ಆಧಾರದ ಮೇಲೆ ಮತ್ತು ವಿವಿಧ ಗ್ರಾಹಕರ ಪ್ರೊಫೈಲ್ಗಳು, ಭಾರತದಲ್ಲಿ ಲಭ್ಯವಿರುವ ಹೋಮ್ ಲೋನ್‌ಗಳ ವಿಧಗಳು ಹೀಗಿವೆ –
ಹೋಮ್ ಲೋನ್ ಪಡೆದುಕೊಳ್ಳಲು ಸಾಲಗಾರರ ಮರುಪಾವತಿ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳುವ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಅರ್ಹತೆ ಮೇಲೆ ಪರಿಣಾಮ ಬೀರುವ ಅಂಶಗಳು –
ಹೌದು, ನಿಮ್ಮ ಹೌಸಿಂಗ್ ಲೋನ್ ಮರುಪಾವತಿ ಅವಧಿಯಲ್ಲಿ ನೀವು ಫ್ಲೋಟಿಂಗ್ ಬಡ್ಡಿದರದಿಂದ ಫಿಕ್ಸೆಡ್ ದರಕ್ಕೆ ಬದಲಾಯಿಸಬಹುದು. ಬದಲಾಯಿಸಲು ನೀವು ನಿಮ್ಮ ಸಾಲದಾತರಿಗೆ ನಾಮಿನಲ್ ಮೊತ್ತವನ್ನು ಪರಿವರ್ತನಾ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.
ಮಾರುಕಟ್ಟೆ ದರಗಳು ಏರಿಕೆಯಾಗುವ ನಿರೀಕ್ಷೆ ಇದ್ದಾಗ ಫ್ಲೋಟಿಂಗ್ ದರದಿಂದ ಫಿಕ್ಸೆಡ್ ದರಕ್ಕೆ ಬದಲಾವಣೆ ಮಾಡುವುದು ಉತ್ತಮವಾಗಿದೆ.
ಹೋಮ್ ಲೋನನ್ನು ಆಯ್ಕೆ ಮಾಡುವುದು ಈ ಕಾರಣಗಳಿಗಾಗಿ ಒಂದು ಸ್ಮಾರ್ಟ್ ಫೈನಾನ್ಷಿಯಲ್ ನಿರ್ಧಾರವಾಗಿದೆ –
ಇಲ್ಲ, CERSAI ಪ್ರಕಾರ ಒಂದೇ ಸಮಯದಲ್ಲಿ ಅದೇ ಆಸ್ತಿಯ ಮೇಲೆ ಎರಡು ಹೌಸಿಂಗ್ ಲೋನ್‌ಗಳನ್ನು ಪಡೆಯುವಂತಿಲ್ಲ. ಆದರೂ, ವ್ಯಕ್ತಿಗಳು ತಮ್ಮ ಅಸ್ತಿತ್ವದಲ್ಲಿರುವ ಹೌಸಿಂಗ್ ಕ್ರೆಡಿಟ್ ಅನ್ನು ಕಡಿಮೆ ಬಡ್ಡಿ ದರಕ್ಕೆ ರಿಫೈನಾನ್ಸ್ ಮಾಡಲು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅನ್ನು ಆಯ್ಕೆ ಮಾಡಬಹುದು. ಈ ಸೌಲಭ್ಯವು ಟಾಪ್-ಅಪ್ ಲೋನ್ ಸೌಲಭ್ಯದೊಂದಿಗೆ ಬರುತ್ತದೆ, ಅಸ್ತಿತ್ವದಲ್ಲಿರುವ ಲೋನ್ ಮೇಲೆ ಮತ್ತು ಅದಕ್ಕಿಂತ ಅಧಿಕ ಮೊತ್ತದ ಹೆಚ್ಚುವರಿ ಲೋನ್. ಸುಲಭವಾಗಿ ವಿವಿಧ ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು ಹಣಕಾಸು ಪಡೆದುಕೊಳ್ಳಿ.
ಹೋಮ್ ಲೋನನ್ನು ಸುಲಭವಾಗಿ ಪಡೆಯಲು ಈ ಹಂತಗಳೊಂದಿಗೆ ಮುಂದುವರೆಯಿರಿ.
ಅಪ್ಲೈ ಮಾಡುವ ಮೊದಲು ಎಲ್ಲಾ ಅರ್ಹತೆಯನ್ನು ಪೂರೈಸಲಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಸಾಲದಾತರು ಪೂರ್ತಿ ಗೃಹ ಸಾಲದ ಮೊತ್ತವನ್ನು ವಿತರಿಸಿದ ನಂತರ ಸಾಲಗಳ ಮರುಪಾವತಿ ಅವಧಿಯು ತಕ್ಷಣವೇ ಆರಂಭವಾಗುತ್ತದೆ. ಆದಾಗ್ಯೂ, ಭಾಗಶಃ ವಿತರಣೆಯ ಸಂದರ್ಭದಲ್ಲಿ, ಅಂತಹ ವಿತರಣೆಯಾದ ಮೊತ್ತದ ಮೇಲೆ ಪಡೆದ ಬಡ್ಡಿಯನ್ನು ಪೂರ್ವ-EMI ಆಗಿ ಪಾವತಿಸಬೇಕಾಗುತ್ತದೆ. ಲೋನಿನ ಪೂರ್ಣ ವಿತರಣೆಯ ನಂತರ ಅಸಲು ಮತ್ತು ಬಡ್ಡಿ ಮೊತ್ತವನ್ನು ಒಳಗೊಂಡು ಪೂರ್ಣ EMI ಪಾವತಿ ಆರಂಭವಾಗುತ್ತದೆ.
ಇಲ್ಲ, ನೀವು ನಿಮ್ಮ ಲೋನ್ ಜತೆಗೆ ಹೋಮ್ ಲೋನ್ ಇನ್ಶೂರೆನ್ಸ್ ತೆಗೆದುಕೊಳ್ಳುವುದು ಕಡ್ಡಾಯವಲ್ಲ. ಆದರೆ, ನಿಮ್ಮ EMI ಗಳಲ್ಲಿನ ಸಣ್ಣ ಹೆಚ್ಚಳದಲ್ಲಿ ನಿಮ್ಮ ಹೊಣೆಗಾರಿಕೆಯನ್ನು ನೋಡಿಕೊಳ್ಳಲು ನೀವು ಇನ್ಶೂರೆನ್ಸ್ ಪಡೆಯುವುದನ್ನು ಪರಿಗಣಿಸಬಹುದು.
ಯಾವಾಗ ವಿತರಣೆ ಚೆಕ್ ರಚನೆಯಾಗುತ್ತದೆಯೋ ನಿಮ್ಮ ಹೋಮ್ ಲೋನ್ EMI ಪಾವತಿ ಆರಂಭವಾಗುತ್ತದೆ. ಒಮ್ಮೆ ನೀವು ಲೋನ್ ಮೊತ್ತವನ್ನು ಪಡೆದ ಬಳಿಕ, ನೀವು EMI ಗಳ ಪಾವತಿಯನ್ನು EMI ಸೈಕಲ್ ಪ್ರಕಾರ ಪಾವತಿಸಲು ಆರಂಭಿಸುತ್ತೀರಿ. ಇದರ ಅರ್ಥವೇನೆಂದರೆ, ನಿಮ್ಮ ಆಯ್ದ EMI ಪಾವತಿ ದಿನಾಂಕವು ತಿಂಗಳ 5 ರಂದು ಇದ್ದಲ್ಲಿ ಮತ್ತು ನೀವು ನೀವು ತಿಂಗಳ 28 ರಂದು ಲೋನ್ ಪಡೆದಲ್ಲಿ, ನಿಮ್ಮ ಮೊದಲ ತಿಂಗಳಿಗೆ EMI ಅನ್ನು, EMI ಮಂಜೂರು ಆದ ದಿನಾಂಕದಿಂದ ನಿಮ್ಮ ಮೊದಲನೆಯ EMI ದಿನಾಂಕದವರೆಗೆ EMI ಅನ್ನು ಲೆಕ್ಕ ಹಾಕಲಾಗುವುದು. ಮುಂದಿನ ತಿಂಗಳಿಂದ, ನೀವು ನಿರಂತರ EMI ಗಳನ್ನು ನಿರ್ದಿಷ್ಟ ದಿನದಂದು ಪಾವತಿಸುತ್ತೀರಿ.
ಬಜಾಜ್ ಫಿನ್‌ಸರ್ವ್ ಹೋಮ್ ಲೋನ್ ಪಡೆಯಲು, ಆನ್ಲೈನ್‌ನಲ್ಲಿ, SMS ಮೂಲಕ ಅಥವಾ ನಮ್ಮ ಬ್ರಾಂಚ್ನಲ್ಲಿ ಅಪ್ಲೈ ಮಾಡಿ.
ಆನ್ಲೈನ್ ಪ್ರಕ್ರಿಯೆ:
SMS ವಿಧಾನ:
9773633633 ಕ್ಕೆ 'HLCI' ಕಳುಹಿಸಿ
ನಿಮ್ಮ ಮುಂಚಿತ- ಅನುಮೋದಿತ ಆಫರ್ನೊಂದಿಗೆ ಬಜಾಜ್ ಫಿನ್‌ಸರ್ವ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ. ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್ ಬ್ರಾಂಚಿಗೆ ಭೇಟಿ ನೀಡುವ ಮೂಲಕ ನೀವು ಹೋಮ್ ಲೋನನ್ನೂ ಪಡೆಯಬಹುದು.
ಅಭಿನಂದನೆಗಳು! ನೀವು ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಆಫರ್ ಹೊಂದಿದ್ದೀರಿ.