ಪರ್ಸನಲ್ ಲೋನ್ ಭಾಗಶಃ-ಮುಂಗಡ ಪಾವತಿ ಮತ್ತು ಫೋರ್‌ಕ್ಲೋಸರ್ ಶುಲ್ಕಗಳು

2 ನಿಮಿಷದ ಓದು

ಭಾಗಶಃ-ಮುಂಪಾವತಿ ಎಂದರೆ ನೀವು ಒಂದು ಇಎಂಐಗಿಂತ ಹೆಚ್ಚಿನ ಮೊತ್ತದೊಂದಿಗೆ ನಿಮ್ಮ ಪರ್ಸನಲ್ ಲೋನನ್ನು ಮರಳಿ ಪಾವತಿಸುವುದು ಎಂದರ್ಥ. ಇದು ನಿಮ್ಮ ಭವಿಷ್ಯದ ಇಎಂಐ ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಭಾಗಶಃ-ಮುಂಗಡ ಪಾವತಿ ಶುಲ್ಕಗಳು ಎಂದರೇನು?

  • ನೀವು ಫ್ಲೆಕ್ಸಿ ವೈಯಕ್ತಿಕ ಲೋನ್ ಆಯ್ಕೆ ಮಾಡಿದ್ದರೆ, ಯಾವುದೇ ಭಾಗಶಃ-ಮುಂಗಡ ಪಾವತಿ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.
  • ನೀವು ಸಾಮಾನ್ಯ ಟರ್ಮ್ ಲೋನ್ ಹೊಂದಿದ್ದು, ನೀವು ಮುಂಪಾವತಿಸಿದ ಮೊತ್ತವು ಒಂದು ಇಎಂಐಗಿಂತ ಹೆಚ್ಚಾಗಿದ್ದರೆ, ಅದರ ಮೇಲೆ ನೀವು 4.72% (ಜೊತೆಗೆ ತೆರಿಗೆಗಳು) ಹೆಚ್ಚುವರಿ ಮೊತ್ತ ಪಾವತಿಸಬೇಕು. ನೀವು ನಿಮ್ಮ ಲೋನ್ ಮೇಲೆ ಕನಿಷ್ಠ ಒಂದು ತಿಂಗಳ ಕಂತು ಪಾವತಿಸಿದ ನಂತರವಷ್ಟೇ ಈ ಶುಲ್ಕಗಳು ಅನ್ವಯವಾಗುತ್ತವೆ.

ಫೋರ್‌ಕ್ಲೋಸರ್ ಶುಲ್ಕಗಳು ಎಂದರೇನು?

ಪರ್ಸನಲ್ ಲೋನ್ ಫೋರ್‌ಕ್ಲೋಸರ್ ಎಂದರೆ ನೀವು ಹಲವಾರು ಇಎಂಐ ಪಾವತಿಗಳನ್ನು ಮಾಡುವ ಬದಲು ನಿಮ್ಮ ಲೋನಿನ ಸಂಪೂರ್ಣ ಬ್ಯಾಲೆನ್ಸ್ ಅನ್ನು ಒಂದೇ ಪಾವತಿಯಲ್ಲಿ ಪಾವತಿಸುವುದು ಎಂದರ್ಥ. ನಿಮ್ಮ ಅಸ್ತಿತ್ವದಲ್ಲಿರುವ ಪರ್ಸನಲ್ ಲೋನನ್ನು ಪಾವತಿಸಲು ನೀವು ಬಳಸಲು ಬಯಸುವ ಹೆಚ್ಚುವರಿ ಹಣವನ್ನು ಹೊಂದಿದ್ದರೆ ನೀವು ಪರ್ಸನಲ್ ಲೋನ್ ಫೋರ್‌ಕ್ಲೋಸರ್ ಆಯ್ಕೆಯನ್ನು ಆರಿಸಿಕೊಳ್ಳಬಹುದು.

ನಿಮ್ಮ ಲೋನ್ ಅಕೌಂಟ್‌ಗೆ ಭಾಗಶಃ ಮುಂಪಾವತಿ ಮಾಡುವುದರಿಂದ ಅಥವಾ ಅದನ್ನು ಸಮಯಕ್ಕಿಂತ ಮೊದಲು ಫೋರ್‌ಕ್ಲೋಸ್ ಮಾಡುವುದರಿಂದ ನಿಮ್ಮ ಲೋನ್ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು. ನೀವು ನಿಮ್ಮ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅನ್ನು ಭಾಗಶಃ ಮುಂಪಾವತಿ ಮಾಡಲು ಅಥವಾ ಫೋರ್‌ಕ್ಲೋಸ್ ಮಾಡಲು ಬಯಸಿದರೆ, ನೀವು ಈ ಕೆಳಗಿನ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ:

  • ನೀವು ನಿಮ್ಮ ಲೋನ್ ಅಕೌಂಟ್ ಅನ್ನು ಫೋರ್‌ಕ್ಲೋಸ್ ಮಾಡಲು ಬಯಸಿದರೆ, ಪೂರ್ಣ ಮುಂಪಾವತಿಯ ದಿನಾಂಕದಂದು ಬಾಕಿಯಿರುವ ಅಸಲಿನ ಮೇಲೆ 4.72% ಹಾಗೂ ಅನ್ವಯವಾಗುವ ತೆರಿಗೆಗಳನ್ನು ಪಾವತಿಸಬೇಕು.
  • ಒಂದು ವೇಳೆ ನೀವು ಫ್ಲೆಕ್ಸಿ ಪರ್ಸನಲ್ ಲೋನ್ ಆಯ್ಕೆ ಮಾಡಿದ್ದರೆ, ನೀವು ವಿತ್‌ಡ್ರಾ ಮಾಡಿದ ಒಟ್ಟು ಮೊತ್ತದ 4.72% ಮತ್ತು ಅನ್ವಯವಾಗುವ ತೆರಿಗೆಗಳು ಮತ್ತು ಸೆಸ್ ಅನ್ನು ಶುಲ್ಕವಾಗಿ ವಿಧಿಸಲಾಗುತ್ತದೆ*.

ಭಾಗಶಃ ಮುಂಪಾವತಿ ಮಾಡಲು ಅಥವಾ ನಿಮ್ಮ ಪರ್ಸನಲ್ ಲೋನನ್ನು ಫೋರ್‌ಕ್ಲೋಸರ್ ಮಾಡಲು ಗ್ರಾಹಕ ಪೋರ್ಟಲ್ - ಬಜಾಜ್ ಫಿನ್‌ಸರ್ವ್‌ ಗ್ರಾಹಕ ಸೇವಾ ಪೋರ್ಟಲ್ ಮೂಲಕ ನಿಮ್ಮ ಅಕೌಂಟನ್ನು ಅಕ್ಸೆಸ್ ಮಾಡಿ.

ಪರ್ಸನಲ್ ಲೋನ್ ಮೇಲಿನ ಬಡ್ಡಿದರ ಮತ್ತು ಅನ್ವಯವಾಗುವ ಶುಲ್ಕಗಳ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಓದಿ.

ಇನ್ನಷ್ಟು ಓದಿರಿ ಕಡಿಮೆ ಓದಿ