ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವುದು ಹೇಗೆ?

ನಿಮ್ಮ ಕ್ರೆಡಿಟ್‌ ಕಾರ್ಡ್‌ನ ಮಿತಿಯು ನೀವು ಕ್ರೆಡಿಟ್‌ ಕಾರ್ಡ್‌ನ್ನು ಉಪಯೋಗಿಸಿಕೊಂಡು ವೆಚ್ಚ ಮಾಡಬಹುದಾದ ಅತ್ಯಧಿಕ ಗರಿಷ್ಠ ನಗದಿನ ಮಿತಿಯಾಗಿರುತ್ತದೆ. ಈ ಮಿತಿಯನ್ನು ನಿಮ್ಮ ಕ್ರೆಡಿಟ್‌ ಕಾರ್ಡ್ ಕಂಪನಿ ಅಥವಾ ಬ್ಯಾಂಕಿನಿಂದ ನಿರ್ಧರಿಸಲ್ಪಟ್ಟಿರುತ್ತದೆ. ಈ ಮಿತಿಯು ಸ್ಥಿರವಾಗಿರುವಂತೆ ಕಾಣುತ್ತದೆಯಾದರೂ ನಿಮ್ಮ ಕ್ರೆಡಿಟ್‌ ಮಿತಿಯನ್ನು ಹೆಚ್ಚಿಸಿಕೊಳ್ಳಲು ಹಲವಾರು ಮಾರ್ಗಗಳು ಇದೆ.

ಹೆಚ್ಚಿನ ಸಾಲದಾತರು ಮಿತಿ ಹೆಚ್ಚಳವನ್ನು ಪರಿಗಣಿಸುವ ಮೊದಲು ಸುಮಾರು ಆರು ತಿಂಗಳ ಕಾಲ ನಿಮ್ಮ ಬಳಕೆಯನ್ನು ಗಮನಿಸಬೇಕೆಂದು ಒತ್ತಾಯಿಸುತ್ತಾರೆ, ಇದರ ನಿಯಮಗಳು ಮತ್ತು ಷರತ್ತುಗಳು ಒಬ್ಬರಿಂದ ಇನ್ನೊಬ್ಬ ಸಾಲದಾತರಿಗೆ ಬದಲಾಗುತ್ತವೆ.

ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವುದು ಹೇಗೆ?

ನಿಮ್ಮ ಬಜಾಜ್ ಫಿನ್‌‌ಸರ್ವ್ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಲು ಎರಡು ಸರಳ ಮಾರ್ಗಗಳಿವೆ. ಮೊದಲು ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಲು ನಿಮ್ಮ ಸಾಲದಾತರಿಗೆ ಕಾಯಿರಿ, ಮತ್ತು ಎರಡನೆಯದು ಅದಕ್ಕಾಗಿ ಮನವಿ ಮಾಡುವುದು. ಆದರೂ, ಅಜಾಗರೂಕ ಖರ್ಚು ಮತ್ತು ಕ್ರೆಡಿಟ್ ಕಾರ್ಡ್ ಸಾಲವನ್ನು ಹೆಚ್ಚಿಸುವುದರ ವಿರುದ್ಧ ತಜ್ಞರು ಎಚ್ಚರಿಕೆ ನೀಡುತ್ತಾರೆ.

  • ಸ್ವಯಂಚಾಲಿತವಾಗಿ ಕ್ರೆಡಿಟ್ ಲಿಮಿಟ್ ವಿಸ್ತರಣೆ: ನೀವು ನಂಬಿಕೆಗೆ ಅರ್ಹರಾಗುವ ಗ್ರಾಹಕರಾಗಿದ್ದರೆ, ನಿಮ್ಮ ಸಾಲದಾತರು ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚುಗೊಳಿಸುವ ಆಫರ್ ಮಾಡಬಹುದು. ಈ ರೀತಿಯ ಆಫರ್ ಮಾಡಲು, ನೀವು ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿ ಕ್ರಮಕ್ಕನುಗುಣವಾಗಿ ವಹಿವಾಟುಗಳನ್ನು ಕಡ್ಡಾಯವಾಗಿ ಮಾಡಿರಬೇಕು, ನಿಮ್ಮ ಎಲ್ಲಾ ಬಾಕಿ ಉಳಿಕೆಗಳನ್ನು ಸರಿಯಾದ ಸಮಯದಲ್ಲಿ ಪಾವತಿಸಿ, ಅಧಿಕ ಕ್ರೆಡಿಟ್ ಸ್ಕೋರನ್ನು ಹೊಂದಿರಬೇಕು.

  • ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚುಗೊಳಿಸಲು ಮನವಿ ಮಾಡಿ: ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಅಧಿಕಗೊಳಿಸುವ ಸರಳ ವಿಧಾನವೆಂದರೆ ಕೇವಲ ಅದಕ್ಕಾಗಿ ಬೇಡಿಕೆ ಇಡಿ. ನಿಮ್ಮ ಕ್ರೆಡಿಟ್ ಕಾರ್ಡ್ ಕಂಪನಿಯ ಗ್ರಾಹಕ ಸೇವೆಗೆ ಕರೆ ಮಾಡಿ ಅಥವಾ ನಿಮಗೆ ಹತ್ತಿರದ ಬ್ರಾಂಚಿಗೆ ಭೇಟಿ ನೀಡಿ ಮತ್ತು ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಲು ಅಪ್ಲಿಕೇಶನ್ ಸಲ್ಲಿಸಿ. ನೀವು ಇತ್ತೀಚಿಗೆ ಪ್ರಮೋಶನ್ ಪಡೆದುಕೊಂಡಿದ್ದರೆ ಅಥವಾ ಕೆಲಸವನ್ನು ಬದಲಾಯಿಸಿದ್ದರೆ ಅಥವಾ ಈಗಿರುವ ಲೋನ್ ಅನ್ನು ಪೂರ್ಣಗೊಳಿಸಿದ್ದರೆ ಈ ಬಗ್ಗೆ ವಿಚಾರಿಸುವುದು ಉತ್ತಮ ಯೋಚನೆಯಾಗಿದೆ. ನಿಮ್ಮ ಸಾಲದಾತ ಸಂಬಂಧಿತ ಪುರಾವೆಗಳನ್ನು ತಾಳೆ ನೋಡಬಹುದು ಮತ್ತು ನಿಮ್ಮ ಮನವಿಗೆ ಒಪ್ಪಿಗೆ ನೀಡಬಹುದು. ಆದರೆ ನೆನಪಿರಲಿ, ಕ್ರೆಡಿಟ್ ಮಿತಿಯನ್ನು ಅಧಿಕಗೊಳಿಸುವುದು ಅಥವಾ ವಿಸ್ತರಿಸಲು ಒಪ್ಪಿಗೆ ನೀಡುವುದು ಅಥವಾ ತಿರಸ್ಕರಿಸುವುದು ಸಂಪೂರ್ಣವಾಗಿ ನಿಮ್ಮ ಸಾಲದಾತನ ನಿರ್ಧಾರವನ್ನು ಅವಲಂಬಿಸಿದೆ.

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಬಗ್ಗೆ ತಿಳಿದುಕೊಳ್ಳಿ ಮತ್ತು 1. ರಲ್ಲಿ 4 ಕಾರ್ಡ್‌ಗಳ ಪ್ರಯೋಜನವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಿ. ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಿ ಮತ್ತು ಇನ್ನಷ್ಟು ತಿಳಿಯಿರಿ.

ಮುಂಚಿತ ಅನುಮೋದಿತ ಆಫರ್