ಕ್ರೆಡಿಟ್ ಕಾರ್ಡ್‌ನಲ್ಲಿ ಬಡ್ಡಿ ದರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

2 ನಿಮಿಷದ ಓದು

ಕ್ರೆಡಿಟ್ ಕಾರ್ಡ್ ಬಡ್ಡಿ ದರಗಳು ಎರವಲು ಪಡೆದ ಮೊತ್ತದ ಮೇಲೆ ಕ್ರೆಡಿಟ್ ಕಾರ್ಡ್ ವಿತರಕರು ವಿಧಿಸುವ ಶುಲ್ಕಗಳಾಗಿವೆ. ಆದಾಗ್ಯೂ, ಕಾರ್ಡ್‌ದಾರರು ತಮ್ಮ ಬಾಕಿ ಬಿಲ್ಲನ್ನು ಪ್ರತಿ ತಿಂಗಳು ಪೂರ್ಣವಾಗಿ ಪಾವತಿಸಲು ವಿಫಲವಾದಾಗ ಮಾತ್ರ ಬಡ್ಡಿ ಶುಲ್ಕಗಳು ಅನ್ವಯವಾಗುತ್ತವೆ.

ಪ್ರತಿ ಬಿಲ್ಲಿಂಗ್ ಸೈಕಲ್‌ನ ಕೊನೆಯಲ್ಲಿ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಜನರೇಟ್ ಮಾಡಲಾಗುತ್ತದೆ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರು ಪಾವತಿ ಗಡುವು ದಿನಾಂಕ ಮತ್ತು ಗ್ರೇಸ್ ಅವಧಿಯ ಮೊದಲು ಬಾಕಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಒಂದು ವೇಳೆ ಕಾರ್ಡ್ ಹೋಲ್ಡರ್ ಸಮಯಕ್ಕೆ ಸರಿಯಾಗಿ ಬಾಕಿ ಮೊತ್ತವನ್ನು ಪಾವತಿಸಲು ವಿಫಲವಾದರೆ, ಬಿಲ್ಲಿಂಗ್ ಸೈಕಲ್‌ಗೆ ಬಳಸಿದ ಕ್ರೆಡಿಟ್ ಮಿತಿಯ ಮೇಲೆ ಬಡ್ಡಿಯನ್ನು ವಿಧಿಸಲಾಗುತ್ತದೆ. ಪಾವತಿ ದಿನಾಂಕದವರೆಗೆ ಡೀಫಾಲ್ಟ್ ದಿನದಿಂದ ಬಡ್ಡಿ ಲೆಕ್ಕಾಚಾರದ ಅವಧಿಯನ್ನು ವಿಧಿಸಲಾಗುತ್ತದೆ.

ಇದನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಇಲ್ಲಿ ಉದಾಹರಣೆ ಇದೆ - ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಪ್ರತಿ ತಿಂಗಳ 20 ರಂದು ಕೊನೆಗೊಳ್ಳುತ್ತದೆ ಮತ್ತು 14 ದಿನಗಳ ಗ್ರೇಸ್ ಅವಧಿಯೊಂದಿಗೆ ಬರುತ್ತದೆಯಾದರೆ, ಬಿಲ್ ಪಾವತಿಯ ಕೊನೆಯ ದಿನವು ಮುಂದಿನ ತಿಂಗಳ 5 ರಂದು ಇರುತ್ತದೆ.

ತಿಂಗಳ 5 ಮತ್ತು 9 ರಂದು ಎರಡು ವಹಿವಾಟುಗಳಿವೆ ಎಂದು ಊಹಿಸಿ. 10 ನೇ ದಿನಾಂಕದಂದು ಬಿಲ್ ಪಾವತಿ ಮಾಡಿದರೆ, 5 ಜನವರಿಯಲ್ಲಿ ಮಾಡಲಾದ ಖರೀದಿಯು ಡೀಫಾಲ್ಟ್ ಸಂದರ್ಭದಲ್ಲಿ ಐದು ದಿನಗಳವರೆಗೆ ಬಡ್ಡಿಯನ್ನು ಆಕರ್ಷಿಸುತ್ತದೆ. ಜನವರಿ 9 ರಂದು ಮಾಡಿದ ಟ್ರಾನ್ಸಾಕ್ಷನ್‌ಗಳಿಗೆ, ಬಡ್ಡಿ ಲೆಕ್ಕಾಚಾರವು ಒಂದು ದಿನಕ್ಕೆ ಮಾತ್ರ.

ಬಜಾಜ್ ಫಿನ್‌ಸರ್ವ್ ಪ್ರತಿ ತಿಂಗಳಿಗೆ 3.99% ಕಡಿಮೆ ಬಡ್ಡಿ ದರದ ಕ್ರೆಡಿಟ್ ಕಾರ್ಡ್‌ಗಳನ್ನು ಒದಗಿಸುತ್ತದೆ (ವಾರ್ಷಿಕ 47.88%).

ಗ್ರೇಸ್ ಅವಧಿಯೊಳಗೆ ಕಾರ್ಡ್ ಹೋಲ್ಡರ್ ಕನಿಷ್ಠ ಬಾಕಿ ಮೊತ್ತವನ್ನು ಪಾವತಿಸಲು ವಿಫಲವಾದರೆ ಮಾತ್ರ ಕ್ರೆಡಿಟ್ ಕಾರ್ಡ್ ಬಡ್ಡಿ ದರಗಳು ಅನ್ವಯವಾಗುತ್ತವೆ. ಕನಿಷ್ಠ ಮೊತ್ತವು ಬಡ್ಡಿಯನ್ನು ಕೂಡ ಒಳಗೊಂಡಿರಬಹುದು. ಆದ್ದರಿಂದ, ಒಟ್ಟು ಬಾಕಿ ಮೊತ್ತವನ್ನು ಪಾವತಿಸುವುದರಿಂದ ಕಾರ್ಡ್‌ಹೋಲ್ಡರ್‌ಗಳು ಯಾವುದೇ ಹೆಚ್ಚುವರಿ ಬಡ್ಡಿಯನ್ನು ಪಾವತಿಸುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಬಡ್ಡಿ ದರಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಮಾಸಿಕ ಶೇಕಡಾವಾರು ದರ (ಎಂಪಿಆರ್) ಮತ್ತು ವಾರ್ಷಿಕ ಶೇಕಡಾವಾರು ದರ (ಎಪಿಆರ್) ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ಬಡ್ಡಿ ದರಗಳನ್ನು ಲೆಕ್ಕ ಹಾಕಲಾಗುತ್ತದೆ. ಎಪಿಆರ್ ಎನ್ನುವುದು ಸಂಪೂರ್ಣ ವರ್ಷದ ಬಡ್ಡಿ ದರವಾಗಿದೆ. ಎಂಪಿಆರ್ ಎಂದರೆ ಮಾಸಿಕ ಬಾಕಿಗಳಿಗೆ ಬಡ್ಡಿ ದರಗಳನ್ನು ಲೆಕ್ಕ ಹಾಕುವಾಗ ಅಪ್ಲೈ ಮಾಡುವ ದರವಾಗಿದೆ.

ಯಾವುದೇ ವಾರ್ಷಿಕ ಶುಲ್ಕವಿಲ್ಲದೆ ಕ್ರೆಡಿಟ್ ಕಾರ್ಡ್‌ಗಳು

ಕ್ರೆಡಿಟ್ ಕಾರ್ಡ್ ನವೀಕರಿಸಲು ವಾರ್ಷಿಕ ಶುಲ್ಕ ಅಗತ್ಯವಿದೆ. ಬಜಾಜ್ ಫಿನ್‌ಸರ್ವ್ ಯಾವುದೇ ವಾರ್ಷಿಕ ಶುಲ್ಕವಿಲ್ಲದೆ ಕ್ರೆಡಿಟ್ ಕಾರ್ಡ್‌ಗಳನ್ನು ಒದಗಿಸುತ್ತದೆ.

ಇಂದೇ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡಿಗೆ ಅಪ್ಲೈ ಮಾಡಿ ಮತ್ತು ಕಡಿಮೆ ಬಡ್ಡಿ ದರದ ಕ್ರೆಡಿಟ್ ಕಾರ್ಡ್ ಆಫರ್‌ಗಳನ್ನು ಪಡೆಯಿರಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಕ್ರೆಡಿಟ್ ಕಾರ್ಡ್ ಬಡ್ಡಿ ದರ ಎಂದರೇನು?

ನಿಗದಿತ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ನೀವು ಪಾವತಿಸದಿದ್ದಾಗ ಕಾರ್ಡ್ ವಿತರಕರು ಬಾಕಿ ಉಳಿಕೆಯ ಮೇಲೆ ವಿಧಿಸುವ ಶುಲ್ಕವಾಗಿದೆ. ಈ ದರವು ಒಂದು ಕಾರ್ಡಿನಿಂದ ಇನ್ನೊಂದಕ್ಕೆ ಬದಲಾಗುತ್ತದೆ ಮತ್ತು ಇದು ನಿಮ್ಮ ಕ್ರೆಡಿಟ್ ಇತಿಹಾಸವನ್ನು ಕೂಡ ಅವಲಂಬಿಸಿರುತ್ತದೆ. ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್ ಪ್ರತಿ ತಿಂಗಳಿಗೆ 3.99% ನಷ್ಟು ಕಡಿಮೆ ಬಡ್ಡಿ ದರವನ್ನು ಆಫರ್ ಮಾಡುತ್ತದೆ.

ನನ್ನ ಕ್ರೆಡಿಟ್ ಕಾರ್ಡ್ ಮೇಲಿನ ಬಡ್ಡಿಯನ್ನು ಪಾವತಿಸುವುದನ್ನು ನಾನು ಹೇಗೆ ತಪ್ಪಿಸಬಹುದು?

ಕನಿಷ್ಠ ಬಾಕಿ ಮೊತ್ತ ಮತ್ತು ಗಡುವು ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಬಾಕಿ ಇರುವ ಒಟ್ಟು ಮೊತ್ತವನ್ನು ಕ್ಲಿಯರ್ ಮಾಡುವ ಮೂಲಕ ನೀವು ಕ್ರೆಡಿಟ್ ಕಾರ್ಡ್ ಇಎಂಐ ಬಡ್ಡಿ ದರವನ್ನು ಪಾವತಿಸುವುದನ್ನು ತಪ್ಪಿಸಬಹುದು. ಪ್ರತಿ ಬಿಲ್ಲಿಂಗ್ ತಿಂಗಳು ಬಾಕಿ ಮೊತ್ತದ ಮೇಲೆ ಬಡ್ಡಿಯನ್ನು ವಿಧಿಸಲಾಗುತ್ತದೆ. ಆದ್ದರಿಂದ, ನೀವು ನಿಮ್ಮ ಬ್ಯಾಲೆನ್ಸ್ ಅನ್ನು ಪೂರ್ತಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಪಾವತಿಸುವಾಗ ಕ್ರೆಡಿಟ್ ಕಾರ್ಡ್ ಬಡ್ಡಿ ದರವನ್ನು ಪಾವತಿಸಬೇಕಾಗಿಲ್ಲ.

ಕ್ರೆಡಿಟ್ ಕಾರ್ಡ್ ಬಡ್ಡಿ ದರವು ಹೇಗೆ ಕೆಲಸ ಮಾಡುತ್ತದೆ?

ಗಡುವು ದಿನಾಂಕದ ಮೊದಲು ನೀವು ಒಟ್ಟು ಬಾಕಿ ಮೊತ್ತವನ್ನು ಮರುಪಾವತಿಸಲು ವಿಫಲವಾದಾಗ ಕ್ರೆಡಿಟ್ ಕಾರ್ಡ್ ಬಡ್ಡಿ ದರವನ್ನು ಬಾಕಿ ಉಳಿಕೆಯ ಮೇಲೆ ವಿಧಿಸಲಾಗುತ್ತದೆ. ಕಾರ್ಡ್ ಪ್ರಕಾರವನ್ನು ಅವಲಂಬಿಸಿ ಅದನ್ನು ದೈನಂದಿನ ಅಥವಾ ಮಾಸಿಕವಾಗಿ ವಿಧಿಸಬಹುದು. ಕೆಲವು ಕ್ರೆಡಿಟ್ ಕಾರ್ಡ್‌ಗಳು ವಾರ್ಷಿಕ ಶೇಕಡಾವಾರು ದರವನ್ನು (ಎಪಿಆರ್) ಕೂಡ ಲೆಕ್ಕ ಹಾಕುತ್ತವೆ, ವಾರ್ಷಿಕವಾಗಿ ಲೆಕ್ಕ ಹಾಕಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಬಡ್ಡಿ ದರವನ್ನು ಮಾಸಿಕವಾಗಿ ವಿಧಿಸಲಾಗುತ್ತದೆಯೇ?

ಕಾರ್ಡ್ ನೀಡುವವರ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ಬಡ್ಡಿ ದರಗಳನ್ನು ಮಾಸಿಕ ಮತ್ತು ವಾರ್ಷಿಕವಾಗಿ ಎರಡು ರೀತಿಯಲ್ಲಿಯೂ ವಿಧಿಸಬಹುದು.

ಯಾವ ಕ್ರೆಡಿಟ್ ಕಾರ್ಡ್ ಅತ್ಯಧಿಕ ಬಡ್ಡಿ ದರವನ್ನು ಹೊಂದಿದೆ?

ಭಾರತದಲ್ಲಿ ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ಗಳು ಅತಿ ಹೆಚ್ಚಿನ ಬಡ್ಡಿ ದರಗಳನ್ನು ಹೊಂದಿವೆ. ಅವುಗಳು ಹೆಚ್ಚಿನ ಸೇರ್ಪಡೆ ಮತ್ತು ವಾರ್ಷಿಕ ಶುಲ್ಕದೊಂದಿಗೆ ಬರುತ್ತವೆ ಮತ್ತು ವಿಶೇಷ ಲಾಭಗಳು ಮತ್ತು ಪ್ರಯೋಜನಗಳನ್ನು ನೀಡುತ್ತವೆ. ಈ ಕಾರ್ಡ್‌ಗಳ ಕ್ರೆಡಿಟ್ ಕಾರ್ಡ್ ಬಡ್ಡಿ ದರಗಳು, ನೀಡುವ ಬ್ಯಾಂಕುಗಳನ್ನು ಅವಲಂಬಿಸಿರುತ್ತವೆ.

ಕಡಿಮೆ ಕ್ರೆಡಿಟ್ ಕಾರ್ಡ್ ಬಡ್ಡಿ ದರ ಎಷ್ಟು?

ಹಲವಾರು ಕ್ರೆಡಿಟ್ ಕಾರ್ಡ್‌ಗಳು ಕಡಿಮೆ ಬಡ್ಡಿ ದರದ ಕ್ರೆಡಿಟ್ ಕಾರ್ಡ್‌ಗಳ ಕೆಟಗರಿಯಲ್ಲಿ ಬರುತ್ತವೆ. ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಪ್ರತಿ ತಿಂಗಳಿಗೆ 3.99% ಕಡಿಮೆ ಬಡ್ಡಿ ದರಗಳನ್ನು ಹೊಂದಿದೆ.

ಇನ್ನಷ್ಟು ಓದಿರಿ ಕಡಿಮೆ ಓದಿ