ಫ್ಲಾಟ್ ಮತ್ತು ಕಡಿಮೆಯಾಗುವ ಬಡ್ಡಿ ದರದ ನಡುವಿನ ವ್ಯತ್ಯಾಸವೇನು?

2 ನಿಮಿಷದ ಓದು

ಸಾಲದಾತರು 2 ವಿಧಾನಗಳಲ್ಲಿ ಲೋನ್ ಬಡ್ಡಿಯನ್ನು ಲೆಕ್ಕ ಹಾಕುತ್ತಾರೆ: ಫ್ಲಾಟ್ ಬಡ್ಡಿದರ ಮತ್ತು ರೆಡ್ಯೂಸಿಂಗ್ ಬಡ್ಡಿದರ. ಈ ವಿಧಾನಗಳ ಆಧಾರದ ಮೇಲೆ ನೀವು ಪಾವತಿಸಬೇಕಾದ ಬಡ್ಡಿ ಮೊತ್ತದಲ್ಲಿ ವ್ಯತ್ಯಾಸವಾಗುತ್ತದೆ.

ನೀವು ಲೋನ್‌ಗೆ ಅಪ್ಲೈ ಮಾಡುವ ಮೊದಲೇ, ಆ ಎರಡು ವಿಧಾನಗಳು ಯಾವುವು ಮತ್ತು ಅವುಗಳ ನಡುವಿನ ವ್ಯತ್ಯಾಸವೇನು ಎಂದು ಅರ್ಥಮಾಡಿಕೊಳ್ಳಿ.

ಫ್ಲಾಟ್ ಬಡ್ಡಿ ದರ ಎಂದರೇನು?

ಈ ಸಂದರ್ಭದಲ್ಲಿ, ಲೋನ್ ಅವಧಿಯ ಉದ್ದಕ್ಕೂ ಬಡ್ಡಿದರವು ಸ್ಥಿರವಾಗಿರುತ್ತದೆ. ಹಾಗಾಗಿ, ಮರುಪಾವತಿ ಅವಧಿಯ ಉದ್ದಕ್ಕೂ ನಿಮ್ಮ ಮರುಪಾವತಿ ಹೊಣೆಗಾರಿಕೆಯು ಸ್ಥಿರವಾಗಿರುತ್ತದೆ. ಅದರ ಫಲವಾಗಿ, ನೀವು ಮುಂಚಿತವಾಗಿ ಮರುಪಾವತಿಯನ್ನು ಪ್ಲಾನ್ ಮಾಡಬಹುದು. ಆದಾಗ್ಯೂ, ಈ ವಿಧಾನದಲ್ಲಿ ರೆಡ್ಯೂಸಿಂಗ್ ಬಡ್ಡಿದರದ ವಿಧಾನಕ್ಕಿಂತ ಸ್ವಲ್ಪ ಹೆಚ್ಚಿನ ಬಡ್ಡಿದರವನ್ನು ವಿಧಿಸಲಾಗುತ್ತದೆ. ಒಟ್ಟಾರೆಯಾಗಿ, ನೀವು ಭರಿಸಬೇಕಾದ ವೆಚ್ಚವು ಸ್ವಲ್ಪ ಹೆಚ್ಚಾಗಿರುತ್ತದೆ.

ಪ್ರತಿ ಕಂತುಗಳ ಮೇಲಿನ ಬಡ್ಡಿ = (ಲೋನ್ ಅಸಲು x ಒಟ್ಟು ಲೋನ್ ಅವಧಿ x ವಾರ್ಷಿಕ ಬಡ್ಡಿದರ) / ಒಟ್ಟು ಕಂತುಗಳು

ಕಡಿಮೆ ಬಡ್ಡಿ ದರ ಎಂದರೇನು?

ನೀವು ಪಾವತಿಸುವ ಪ್ರತಿ ಇಎಂಐ, ಬಡ್ಡಿ ಮತ್ತು ಅಸಲನ್ನು ಒಳಗೊಂಡಿರುತ್ತದೆ. ಆದ್ದರಿಂದ ಪ್ರತಿ ಇಎಂಐ ಪಾವತಿಸಿದ ನಂತರ ಬಾಕಿಯಿರುವ ಅಸಲು ಮೊತ್ತ ಕಡಿಮೆಯಾಗುತ್ತದೆ. ಈ ವಿಧಾನದಲ್ಲಿ, ಬಡ್ಡಿ ಲೆಕ್ಕಾಚಾರವು ಬಾಕಿ ಇರುವ ಲೋನ್ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ. ಬಾಕಿ ಅಸಲಿನ ಮೇಲೆ ಮಾತ್ರ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ, ಒಟ್ಟಾರೆ ಅಸಲಿನ ಮೇಲೆ ಅಲ್ಲ. ಜೊತೆಗೆ, ಪರಿಣಾಮಕಾರಿ ಲೆಂಡಿಂಗ್ ದರಗಳನ್ನು ಕೂಡ ಪರಿಗಣಿಸಲಾಗುತ್ತದೆ.

ಪ್ರತಿ ಕಂತಿಗೆ ಪಾವತಿಸಬೇಕಾದ ಬಡ್ಡಿ = ಬಾಕಿ ಇರುವ ಲೋನ್ ಮೊತ್ತ x ಪ್ರತಿ ಕಂತಿಗೆ ಅನ್ವಯವಾಗುವ ಬಡ್ಡಿದರ

ಸರಳವಾಗಿ ಹೇಳಬೇಕೆಂದರೆ, ನೀವು ಸರಳ ಲೆಕ್ಕಾಚಾರ ಮತ್ತು ಕಡಿಮೆ ಅಪಾಯವನ್ನು ನಿರೀಕ್ಷಿಸುತ್ತಿದ್ದರೆ, ಫ್ಲಾಟ್ ಬಡ್ಡಿದರ ಹೊಂದಿರುವ ಲೋನ್ ಅನ್ನು ಆರಿಸಿಕೊಳ್ಳಿ.

ಈಗ ನಿಮಗೆ, ಬಡ್ಡಿದರದ ಲೆಕ್ಕಾಚಾರವು ನಿಮ್ಮ ಹಣಕಾಸಿನ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದು ತಿಳಿದಿದೆ, ಪರ್ಸನಲ್ ಲೋನ್ ಪಡೆಯುವ ಮುಂಚೆ ನಿಮ್ಮ ಸಾಲದಾತರ ಬಳಿ ಲೆಕ್ಕಾಚಾರದ ವಿಧಾನದ ಬಗ್ಗೆ ವಿಚಾರಿಸಿ.

ಇನ್ನಷ್ಟು ಓದಿ: ಫಿಕ್ಸೆಡ್ ವರ್ಸಸ್ ಫ್ಲೋಟಿಂಗ್ ಬಡ್ಡಿ ದರ

ಇನ್ನಷ್ಟು ಓದಿರಿ ಕಡಿಮೆ ಓದಿ