ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಫೀಚರ್ ಮತ್ತು ಪ್ರಯೋಜನಗಳು
-
ಸುಲಭ EMI ಪರಿವರ್ತನೆ
ರೂ. 2,500 ಮತ್ತು ಅದಕ್ಕಿಂತ ಹೆಚ್ಚಿನ ಖರೀದಿಗಳನ್ನು ಸುಲಭ ಇಎಂಐಗಳಾಗಿ ಪರಿವರ್ತಿಸಿ.
-
ತುರ್ತು ಮುಂಗಡ*
ಶೂನ್ಯ ಪ್ರಕ್ರಿಯಾ ಶುಲ್ಕ ಮತ್ತು ಪ್ರತಿ ತಿಂಗಳಿಗೆ 1.16% ಬಡ್ಡಿ ದರದೊಂದಿಗೆ ನಿಮ್ಮ ಲಭ್ಯವಿರುವ ನಗದು ಮಿತಿಯನ್ನು 3 ತಿಂಗಳಿಗೆ ಪರ್ಸನಲ್ ಲೋನ್ ಆಗಿ ಪರಿವರ್ತಿಸಿ.
-
ಬಡ್ಡಿ-ಮುಕ್ತ ನಗದು ಹಿಂಪಡೆಯುವಿಕೆ
50 ದಿನಗಳವರೆಗೆ ನಗದು ವಿತ್‌ಡ್ರಾವಲ್‌ಗಳ ಮೇಲೆ ಯಾವುದೇ ಬಡ್ಡಿ ಇಲ್ಲ.
-
5% ಕ್ಯಾಶ್‌ಬ್ಯಾಕ್
ಯಾವುದೇ ಬಜಾಜ್ ಫಿನ್‌ಸರ್ವ್ ಪಾಲುದಾರ ಮಳಿಗೆಯಲ್ಲಿ ಡೌನ್ ಪೇಮೆಂಟ್ ಮೇಲೆ 5% ಕ್ಯಾಶ್‌ಬ್ಯಾಕ್ ಪಡೆಯಿರಿ.
-
ಪಾಯಿಂಟ್‌ಗಳೊಂದಿಗೆ ಪಾವತಿಸಿ
ಇಎಂಐ ನೆಟ್ವರ್ಕ್‌ನಲ್ಲಿ ಡೌನ್ ಪೇಮೆಂಟ್ ಪಾವತಿಸಲು ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.
-
ಇನ್ನಷ್ಟು ಶಾಪಿಂಗ್ ಮಾಡಿ, ಹೆಚ್ಚು ಉಳಿತಾಯ ಮಾಡಿ
ನೀವು ಸೂಪರ್‌ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡುವಾಗ ರೂ. 55,000+ ವರೆಗೆ ವಾರ್ಷಿಕ ಉಳಿತಾಯ.
-
ಏರ್ಪೋರ್ಟ್ ಲೌಂಜ್ ಅಕ್ಸೆಸ್
ಒಂದು ವರ್ಷದಲ್ಲಿ ಎಟ್ಟು ಕಾಂಪ್ಲಿಮೆಂಟರಿ ಏರ್ಪೋರ್ಟ್ ಲೌಂಜ್ ಅಕ್ಸೆಸ್ ಪಡೆಯಿರಿ.
-
ಉಚಿತ ಚಲನಚಿತ್ರ ಟಿಕೆಟ್‌ಗಳು
ಸೂಪರ್‌ಕಾರ್ಡ್‌ನೊಂದಿಗೆ BookMyShow ನಲ್ಲಿ 1+1 ಸಿನಿಮಾ ಟಿಕೆಟ್‌ಗಳನ್ನು ಪಡೆಯಿರಿ.
ಬಜಾಜ್ ಫಿನ್‌ಸರ್ವ್, RBL ಬ್ಯಾಂಕಿನ ಸಹಯೋಗದೊಂದಿಗೆ, ನಿಮಗೆ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ ಅನ್ನು ನೀಡುತ್ತದೆ. ಯುಟಿಲಿಟಿ ಬಿಲ್‌ಗಳನ್ನು ಪಾವತಿಸುವುದರಿಂದ ಹಿಡಿದು ಹೋಮ್ ಅಪ್ಲಾಯನ್ಸ್‌ಗಳನ್ನು ಖರೀದಿಸುವುದು ಮತ್ತು ಇನ್ನೂ ಅನೇಕ ರೀತಿಯಲ್ಲಿ, ನಿಮ್ಮ ಎಲ್ಲಾ ಖರ್ಚುಗಳನ್ನು ಸುಲಭವಾಗಿ ಕವರ್ ಮಾಡಲು ಈ ತ್ವರಿತ ಕ್ರೆಡಿಟ್ ಕಾರ್ಡ್ ನಿಮಗೆ ಸಹಾಯ ಮಾಡುತ್ತದೆ.
ಈ ಸೂಪರ್‌ಕಾರ್ಡ್ ಕ್ರೆಡಿಟ್, ಡೆಬಿಟ್, ಲೋನ್ ಮತ್ತು ಇಎಂಐ ಕಾರ್ಡ್ ಆಗಿದೆ - ಎಲ್ಲವನ್ನೂ ಒಂದರಲ್ಲೇ ಒಳಗೊಂಡಿದೆ. ಈ ಕ್ರೆಡಿಟ್ ಕಾರ್ಡಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು ಉದ್ಯಮದಲ್ಲೇ ಮೊದಲ ಪ್ರಯೋಜನಗಳನ್ನು ಪಡೆಯಿರಿ.
*RBL ಬ್ಯಾಂಕ್ ತನ್ನ ವಿವೇಚನೆಗೆ ಅನುಗುಣವಾಗಿ ಸಾಲವನ್ನು ಒದಗಿಸುತ್ತದೆ ಮತ್ತು ಅದು ಅದರ ನೀತಿಗಳಿಗೆ ಒಳಪಟ್ಟಿರುತ್ತದೆ.
ಅರ್ಹತಾ ಮಾನದಂಡ
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು
25 ರಿಂದ 65 ವರ್ಷಗಳು
-
ಉದ್ಯೋಗ
ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
-
ಕ್ರೆಡಿಟ್ ಸ್ಕೋರ್
750 ಅಥವಾ ಅದಕ್ಕಿಂತ ಹೆಚ್ಚು
ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಅರ್ಹತೆಯ ಮಾನದಂಡಗಳೇನು?
ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ಬಜಾಜ್ ಫಿನ್‌ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಹೊಂದಿದೆ. ಅವುಗಳು ಇದನ್ನು ಒಳಗೊಂಡಿದೆ:
- ವಯಸ್ಸು 25 ರಿಂದ 65 ವರ್ಷಗಳ ಒಳಗಿರಬೇಕು
- ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
- ಕ್ರೆಡಿಟ್ ಅರ್ಹತೆ, ಕನಿಷ್ಠ 750 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ನೊಂದಿಗೆ ಮತ್ತು ನಿಮ್ಮ ಪಾವತಿಗಳ ಮೇಲೆ ಡೀಫಾಲ್ಟ್ ಮಾಡುವ ಯಾವುದೇ ಹಿಂದಿನ ದಾಖಲೆಗಳಿಲ್ಲ
- ವಸತಿ ವಿಳಾಸ ದೇಶದ ಸೂಪರ್‌ಕಾರ್ಡ್ ಲೈವ್ ಲೊಕೇಶನ್‌ಗಳ ಒಳಗೆ ಇರಬೇಕು
- ಅರ್ಜಿದಾರರು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್ ಗ್ರಾಹಕರಾಗಿರಬೇಕು ಮತ್ತು ಬಜಾಜ್ ಫಿನ್‌ಸರ್ವ್ EMI ನೆಟ್‌ವರ್ಕ್ ಕಾರ್ಡ್‌ಹೋಲ್ಡರ್ ಆಗಿರಬೇಕು
ಕ್ರೆಡಿಟ್ ಕಾರ್ಡನ್ನು ಬಳಸುವುದು ಹೇಗೆ ?
ಬಜಾಜ್ ಫಿನ್‌ಸರ್ವ್ ಒದಗಿಸುವ ವಿವಿಧ ರೀತಿಯ ಕ್ರೆಡಿಟ್ ಕಾರ್ಡ್‌ಗಳು
ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ 17 ವಿವಿಧ ರೂಪಾಂತರಗಳಲ್ಲಿ ಬರುತ್ತದೆ, ಆದರೆ ಪ್ರತಿ ಕಾರ್ಡ್ ವಿವಿಧ ಅರ್ಹತಾ ಮಾನದಂಡಗಳು, ಪ್ರಯೋಜನಗಳು, ಫೀಸ್ ಮತ್ತು ಶುಲ್ಕಗಳನ್ನು ಹೊಂದಿದೆ. ಬಜಾಜ್ ಫಿನ್‌ಸರ್ವ್ ಒದಗಿಸುವ ವಿವಿಧ ರೀತಿಯ ಕ್ರೆಡಿಟ್ ಕಾರ್ಡ್‌ಗಳ ಪಟ್ಟಿ ಇಲ್ಲಿದೆ:
ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?
ಬಜಾಜ್ ಫಿನ್‌ಸರ್ವ್ ಕ್ರೆಡಿಟ್ ಕಾರ್ಡ್ ಪಡೆಯಲು ನೀವು 3 ಪ್ರಾಥಮಿಕ ಡಾಕ್ಯುಮೆಂಟ್ಗಳನ್ನು ಹೊಂದಿರಬೇಕು - ಫೋಟೋ, ಗುರುತಿನ ಮತ್ತು ವಿಳಾಸದ ಪುರಾವೆ. ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್ಗಳು ಬೇಕಾಗಬಹುದು.
ಕ್ರೆಡಿಟ್ ಕಾರ್ಡಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡುವುದು ಹೇಗೆ?
ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ. ಕ್ರೆಡಿಟ್ ಕಾರ್ಡ್ ಪಡೆಯಲು, ಕೆಲವು ಸರಳ ಹಂತಗಳಲ್ಲಿ ಆನ್ಲೈನಿನಲ್ಲಿ ಅಪ್ಲೈ ಮಾಡಿ.
- 1 ಕ್ಲಿಕ್ ಮಾಡಿ ಇಲ್ಲಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
- 2 ಪಡೆದ ಒಟಿಪಿ ಸಲ್ಲಿಸಿ ಮತ್ತು ನೀವು ಬಜಾಜ್ ಫಿನ್‌ಸರ್ವ್ ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಫರ್ ಹೊಂದಿದ್ದೀರಾ ಎಂದು ಪರಿಶೀಲಿಸಿ
- 3 ನಿಮ್ಮ ಬಳಿ ಆಫರ್ ಇದ್ದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಆಫರ್‌ಗಳನ್ನು ಪಡೆಯಿರಿ
- 4 ಯಾವುದೇ ಆಫರ್ ಇಲ್ಲದ ಸಂದರ್ಭದಲ್ಲಿ, ನಿಮ್ಮ ವಿವರಗಳನ್ನು ಸಲ್ಲಿಸಿ
- 5 ನಮ್ಮ ಪ್ರತಿನಿಧಿಯಿಂದ ಕರೆ ಪಡೆಯಿರಿ
- 6 ಅಗತ್ಯ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ
ಫೀಸ್ ಮತ್ತು ಶುಲ್ಕಗಳು
17 ಸೂಪರ್‌ಕಾರ್ಡ್ ವೇರಿಯಂಟ್‌ಗಳಿವೆ, ಮತ್ತು ಪ್ರತಿ ಕಾರ್ಡ್ ಬೇರೆ ಬೇರೆ ಫೀಸ್ ಮತ್ತು ಶುಲ್ಕಗಳನ್ನು ಹೊಂದಿವೆ.
ಕ್ರೆಡಿಟ್ ಕಾರ್ಡಿಗೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಇಲ್ಲಿ ಕ್ಲಿಕ್ ಮಾಡಿ.
ಕ್ರೆಡಿಟ್ ಕಾರ್ಡ್ ಬಳಸುವ ಹಲವಾರು ಪ್ರಯೋಜನಗಳಿವೆ. ಪೂರ್ವನಿರ್ಧರಿತ ಅಥವಾ ಪೂರ್ವ ನಿರ್ಧಾರಿತ ಕ್ರೆಡಿಟ್ ಮಿತಿಯೊಳಗೆ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ನೀವು ಕ್ರೆಡಿಟ್ ಕಾರ್ಡನ್ನು ಬಳಸಬಹುದು ಮತ್ತು ಹೆಚ್ಚುವರಿ ಶುಲ್ಕಗಳಿಲ್ಲದೆ ಬಡ್ಡಿ ರಹಿತ ಅವಧಿಯೊಳಗೆ ಮೊತ್ತವನ್ನು ಮರುಪಾವತಿ ಮಾಡಬಹುದು.
ಆದಾಗ್ಯೂ, ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ ನೀವು ಎದುರಿಸುವ ಕ್ರೆಡಿಟ್ ಕಾರ್ಡ್ ಬಡ್ಡಿ ದರಗಳು ಮತ್ತು ದಂಡ ಶುಲ್ಕಗಳ ಬಗ್ಗೆ ಕೂಡ ನೀವು ಗಮನಹರಿಸಬೇಕು. ನೀವು ಪಾವತಿ ಗಡುವು ದಿನಾಂಕವನ್ನು ತಪ್ಪಿಸಿದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಮೇಲೆ ನೀವು ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತೀರಿ. ಭಾರತದಲ್ಲಿನ ಅತ್ಯುತ್ತಮ ಕ್ರೆಡಿಟ್ ಕಾರ್ಡ್‌ಗಳು ಕನಿಷ್ಠ ಬಡ್ಡಿ ಶುಲ್ಕಗಳೊಂದಿಗೆ ಬರುತ್ತವೆ.
ಆಗಾಗ ಕೇಳುವ ಪ್ರಶ್ನೆಗಳು
ಕ್ರೆಡಿಟ್ ಕಾರ್ಡ್ ಒಂದು ಹಣಕಾಸು ಸಾಧನವಾಗಿದ್ದು, ಇದು ಕಾರ್ಡ್ದಾರರಿಗೆ ಆ ಕೂಡಲೇ ಪಾವತಿ ಮಾಡುವುದನ್ನು ತಪ್ಪಿಸಿ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಕ್ರೆಡಿಟ್ ಕಾರ್ಡ್ ನೀಡುವ ಕಂಪನಿಯು ಕಾರ್ಡ್ ಹೋಲ್ಡರ್ ಪರವಾಗಿ ವಸ್ತು ಅಥವಾ ಸೇವೆಗೆ ಪಾವತಿಸುತ್ತದೆ ಮತ್ತು ಬಿಲ್ಲಿಂಗ್ ಸೈಕಲ್ ಕೊನೆಯಲ್ಲಿ ಕಾರ್ಡ್ ಹೋಲ್ಡರ್ಗೆ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ನೀಡುತ್ತದೆ. ಇದು ನೀಡಬೇಕಾದ ಮೊತ್ತವನ್ನು ನಮೂದಿಸುತ್ತದೆ, ಅದನ್ನು ಗಡುವು ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಮರುಪಾವತಿಸಬೇಕಾಗುತ್ತದೆ.
ಬಿಲ್ಲಿಂಗ್ ಸೈಕಲ್ ಕೊನೆಯಲ್ಲಿ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಯಿಂದ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ನೀಡಲಾಗುತ್ತದೆ. ಇದು ಬಿಲ್ಲಿಂಗ್ ಅವಧಿಯಲ್ಲಿ ನೀವು ಮಾಡಿದ ಎಲ್ಲಾ ಟ್ರಾನ್ಸಾಕ್ಷನ್‌ಗಳ ಸಾರಾಂಶವನ್ನು ಪ್ರಸ್ತುತಪಡಿಸುತ್ತದೆ. ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್‌ನಲ್ಲಿ ನೀವು ಬ್ಯಾಂಕಿಗೆ ನೀಡಬೇಕಾದ ಮೊತ್ತ, ಬಾಕಿ ಇರುವ ಕನಿಷ್ಠ ಮೊತ್ತ ಮತ್ತು ಗಡುವು ದಿನಾಂಕವನ್ನು ನಮೂದಿಸಿರುತ್ತದೆ.
ಕ್ರೆಡಿಟ್ ಕಾರ್ಡ್ ಬಳಸುವ ಅನುಕೂಲಗಳು ಈ ರೀತಿಯಾಗಿವೆ:
- ನೀವು ಕ್ರೆಡಿಟ್ ಮೂಲಕ ಹೈ-ಎಂಡ್ ಪ್ರಾಡಕ್ಟ್‌ಗಳನ್ನು ಖರೀದಿಸಬಹುದು, ಅಂದರೆ ಫಂಡ್‌ಗಳ ಕೊರತೆಯಿಂದಾಗಿ ನಿಮ್ಮ ಪ್ಲಾನ್‌ಗಳನ್ನು ನೀವು ಸ್ಥಗಿತಗೊಳಿಸಬೇಕಾಗಿಲ್ಲ. ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ ರೂ. 2,500 ಕ್ಕಿಂತ ಹೆಚ್ಚಿನ ಬಿಲ್‌ಗಳನ್ನು ಸುಲಭವಾಗಿ ಪಾವತಿಸಬೇಕಾದ ಮಾಸಿಕ ಕಂತುಗಳಾಗಿ ಪರಿವರ್ತಿಸುತ್ತದೆ.
- ಅನೇಕ ಕ್ರೆಡಿಟ್ ಕಾರ್ಡ್‌ಗಳು ಫ್ಯೂಯಲ್ ಸರ್ಚಾರ್ಜ್ ಮನ್ನಾ ಪ್ರಯೋಜನದ ಜೊತೆಗೆ ಕಾಂಪ್ಲಿಮೆಂಟರಿ ಏರ್ಪೋರ್ಟ್ ಲೌಂಜ್ ಅಕ್ಸೆಸ್ ಮತ್ತು ಇತರ ಪರ್ಕ್‌ಗಳು ನೀಡುತ್ತವೆ.
- ರಿಡೀಮ್ ಮಾಡಬಹುದಾದ ರಿವಾರ್ಡ್ ಪಾಯಿಂಟ್‌ಗಳು ಗಿಫ್ಟ್ ವೌಚರ್‌ಗಳು, ಉಚಿತ ಮೂವಿ ಟಿಕೆಟ್‌ಗಳು ಮುಂತಾದ ಇತರ ರಿವಾರ್ಡ್‌ಗಳನ್ನು ಗಳಿಸಲು ನಿಮಗೆ ಸಹಾಯ ಮಾಡುತ್ತವೆ.
- ಕ್ರೆಡಿಟ್ ಕಾರ್ಡ್‌ಗಳು ವಿವಿಧ ಖರೀದಿಗಳ ಮೇಲೆ ಲಾಭದಾಯಕ ರಿಯಾಯಿತಿಗಳನ್ನು ನೀಡುತ್ತವೆ. ಹೀಗಾಗಿ, ಗಮನಾರ್ಹವಾಗಿ ಉಳಿತಾಯ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ನಲ್ಲಿ ಅರ್ಹತಾ ಮಾನದಂಡಗಳನ್ನು ನೋಡುವ ಮೂಲಕ ನಿಮ್ಮ ಅರ್ಹತೆಯ ಬಗ್ಗೆ ತಿಳಿದುಕೊಳ್ಳಬಹುದು. ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ನೀವು ವಯಸ್ಕರಾಗಿರಬೇಕು (18 ವರ್ಷ ವಯಸ್ಸು) ಮತ್ತು 70 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಾಗಿರಬಾರದು. ಆದಾಗ್ಯೂ, ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡನ್ನು 25 ರಿಂದ 65 ವರ್ಷಗಳ ವಯಸ್ಸಿನವರಿಗೆ ಮಾತ್ರ ನೀಡಲಾಗುತ್ತದೆ. ಸ್ಥಿರ ಆದಾಯದ ಮೂಲ ಮತ್ತು 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವುದು ಅಗತ್ಯ ಅವಶ್ಯಕತೆಗಳಾಗಿವೆ.
ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಎಂದರೆ ನೀವು ಕ್ರೆಡಿಟ್ ಕಾರ್ಡ್ ಕಂಪನಿಗೆ ನೀಡಬೇಕಾದ ಒಟ್ಟು ಮೊತ್ತವಾಗಿದೆ. ಇದನ್ನು ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್‌ನಲ್ಲಿ ನಮೂದಿಸಲಾಗಿದೆ. ಯಾವುದೇ ದಂಡವನ್ನು ತಪ್ಪಿಸಲು ನೀವು ಈ ಮೊತ್ತವನ್ನು ಗಡುವು ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಮರುಪಾವತಿ ಮಾಡಬೇಕು.
ನೀವು ಡೆಬಿಟ್ ಕಾರ್ಡ್ ಬಳಸಿದಾಗ, ನೀವು ಕ್ರೆಡಿಟ್ ಕಾರ್ಡಿಗೆ ವಿರುದ್ಧವಾಗಿ ನಿಮ್ಮ ಬ್ಯಾಂಕ್ ಅಕೌಂಟಿನಿಂದ ಹಣವನ್ನು ವಿತ್‌ಡ್ರಾ ಮಾಡುತ್ತೀರಿ, ಅಲ್ಲಿ ವಿತರಕರು ನಿಮ್ಮ ಪರವಾಗಿ ಮೊತ್ತವನ್ನು ಪಾವತಿಸುತ್ತಾರೆ. ನೀವು ಅಗತ್ಯಕ್ಕೆ ಅನುಗುಣವಾಗಿ ಕ್ರೆಡಿಟ್ ಕಾರ್ಡ್ ಕಂಪನಿಯಿಂದ ಲೋನನ್ನು ತೆಗೆದುಕೊಳ್ಳುತ್ತೀರಿ, ಅದನ್ನು ಗಡುವು ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಮರುಪಾವತಿ ಮಾಡಬೇಕು. ನೀವು ಬಾಕಿಗಳನ್ನು ಕ್ಲಿಯರ್ ಮಾಡಲು ವಿಫಲವಾದರೆ, ಬಾಕಿ ಮೊತ್ತದ ಮೇಲೆ ನಿಮಗೆ ಬಡ್ಡಿಯನ್ನು ವಿಧಿಸಲಾಗುತ್ತದೆ.
ಕ್ರೆಡಿಟ್ ಕಾರ್ಡ್ ಪಡೆಯಲು ನೀವು 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರಬೇಕು.
ಹೌದು, ನೀವು ಎಟಿಎಂ ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡನ್ನು ಬಳಸಬಹುದು. ಆದಾಗ್ಯೂ, ಅಂತಹ ಟ್ರಾನ್ಸಾಕ್ಷನ್‌ಗಳು ಹೆಚ್ಚಿನ ಶುಲ್ಕ ಮತ್ತು ಬಡ್ಡಿ ದರಗಳ ಬ್ಯಾಗೇಜ್‌ನೊಂದಿಗೆ ಬರುತ್ತವೆ. ಅಂದರೆ, ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ ಯಾವುದೇ ಎಟಿಎಂ ನಿಂದ 50 ದಿನಗಳವರೆಗೆ ಬಡ್ಡಿ ರಹಿತವಾಗಿ ನಗದು ವಿತ್‌ಡ್ರಾ ಮಾಡಲು ನಿಮಗೆ ಅನುಮತಿ ನೀಡುತ್ತದೆ.
ಮೊದಲ ಬಾರಿಗೆ ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡುವಾಗ ನೀವು ಈ ಕೆಳಗೆ ನಮೂದಿಸಿದ ಅಂಶಗಳನ್ನು ಪರಿಗಣಿಸಬೇಕು:
- ನೀವು ಸ್ಥಿರ ಆದಾಯದ ಮೂಲವನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಆದಾಯ ಏರಿಳಿತವಾಗುತ್ತಿದ್ದರೆ, ಸುರಕ್ಷಿತ ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡುವುದನ್ನು ಪರಿಗಣಿಸಿ.
- ನೀವು ಕನಿಷ್ಠ 750 ಕ್ರೆಡಿಟ್ ಸ್ಕೋರ್ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಳಪೆ ಕ್ರೆಡಿಟ್ ಇತಿಹಾಸವು ಅನುಮೋದನೆ ಪಡೆಯುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
- ನಿಮ್ಮ ಹಣಕಾಸಿನ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ. ಉದಾಹರಣೆಗೆ, ನೀವು ಬಿಸಿನೆಸ್ ಅಥವಾ ಮೋಜಿಗಾಗಿ ಆಗಾಗ ಪ್ರಯಾಣ ಮಾಡುವವರಾಗಿದ್ದರೆ, ನೀವು ಟ್ರಾವೆಲ್ ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಬಹುದು.
ನಿಮ್ಮ ಆಯ್ಕೆಯ ಯಾವುದೇ ಪ್ರಾಡಕ್ಟ್ ಅನ್ನು ಕ್ರೆಡಿಟ್ ಮೇಲೆ ಖರೀದಿಸಲು ಕ್ರೆಡಿಟ್ ಕಾರ್ಡ್ ನಿಮಗೆ ಅನುಮತಿ ನೀಡುತ್ತದೆ. ಆದಾಗ್ಯೂ, ನಿಗದಿತ ಅವಧಿಯ ನಂತರ ನೀವು ವಿತರಕರಿಗೆ ಹೆಚ್ಚು ಮರುಪಾವತಿ ಮಾಡುತ್ತೀರಿ.
ಕ್ರೆಡಿಟ್ ಕಾರ್ಡ್‌ಗಳು ನಗದು ತೊಂದರೆಯ ಸಮಯದಲ್ಲಿ ಸುಲಭವಾಗಿ ಸಿಗಬಹುದಾದ ಹಣಕಾಸಿನ ಸಾಧನಗಳಾಗಿವೆ.
ಕ್ರೆಡಿಟ್ ಕಾರ್ಡಿಗೆ ಅನುಮೋದನೆ ಪಡೆಯಲು ನೀವು ಆದಾಯ ಅರ್ಹತಾ ಮಾನದಂಡವನ್ನು ಪೂರೈಸಬೇಕು. ಆದಾಗ್ಯೂ, ನೀವು ಆದಾಯ ಮೂಲ ಇಲ್ಲದ ವಿದ್ಯಾರ್ಥಿಯಾಗಿದ್ದರೆ, ನೀವು ಸ್ಟೂಡೆಂಟ್ ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಬಹುದು.
ಕ್ರೆಡಿಟ್ ಕಾರ್ಡ್ ನಂಬರ್ ಎಂಬುದು ಪ್ರತಿ ಕ್ರೆಡಿಟ್ ಕಾರ್ಡಿಗೆ ವಿಶೇಷವಾಗಿ ಇರುವ 16-ಡಿಜಿಟ್ ನಂಬರ್ ಆಗಿದೆ. ಮೊದಲ ಅಂಕಿ ಕ್ರೆಡಿಟ್ ಕಾರ್ಡ್ ಕಂಪನಿಯನ್ನು ಗುರುತಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ವೀಸಾ ಕ್ರೆಡಿಟ್ ಕಾರ್ಡ್‌ಗಳು "4" ಡಿಜಿಟ್‌ನೊಂದಿಗೆ ಆರಂಭವಾಗುತ್ತವೆ, ಅದೇ ರೀತಿ ಮಾಸ್ಟರ್ ಕಾರ್ಡ್ "5 ಡಿಜಿಟ್‌ನೊಂದಿಗೆ ಪ್ರಾರಂಭವಾಗುತ್ತದೆ". ಅದೇ ರೀತಿ, "6" ನಂಬರಿನೊಂದಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಹುಡುಕಿ". ಎರಡರಿಂದ ಆರನೇ ಅಂಕಿಗಳು ಬ್ಯಾಂಕನ್ನು ಗುರುತಿಸಲು ಸಹಾಯ ಮಾಡುತ್ತವೆ. 7 ರಿಂದ 15 ಅಂಕಿಗಳು ಕಾರ್ಡ್‌ಹೋಲ್ಡರ್ ಅಕೌಂಟ್ ನಂಬರ್ ಸೂಚಿಸುತ್ತವೆ. ಕೊನೆಯ ಉಳಿದ ನಂಬರನ್ನು ಚೆಕ್ ಡಿಜಿಟ್ ಎಂದು ಕರೆಯಲಾಗುತ್ತದೆ. ಉಳಿದ ನಂಬರ್‌ಗಳ ಆಧಾರದ ಮೇಲೆ ಇದನ್ನು ಆಟೋಮ್ಯಾಟಿಕ್ ಆಗಿ ಜನರೇಟ್ ಮಾಡಲಾಗುತ್ತದೆ. ಚೆಕ್ ಡಿಜಿಟ್ ಯಾವುದೇ ದೋಷಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಪ್ರತಿ ಕ್ರೆಡಿಟ್ ಕಾರ್ಡ್ ಕೆಲವು ಅಂಕಿಗಳನ್ನು ಒಳಗೊಂಡಿರುತ್ತದೆ, ಇದು ಸಾಮಾನ್ಯವಾಗಿ ಪ್ರತಿ ಕಾರ್ಡಿಗೆ ವಿಶಿಷ್ಟವಾಗಿರುವ 16 ಅಂಕಿಯ ನಂಬರ್ ಆಗಿರುತ್ತದೆ. ಯಾವುದೇ ಟ್ರಾನ್ಸಾಕ್ಷನ್ ಪೂರ್ಣಗೊಳಿಸಲು ಕ್ರೆಡಿಟ್ ಕಾರ್ಡ್ ನಂಬರ್ ಅಗತ್ಯವಾಗಿದೆ. ಇದು ಕಾರ್ಡ್‌ಹೋಲ್ಡರನ್ನು ದೃಢೀಕರಿಸಲು ಸಹಾಯ ಮಾಡುತ್ತದೆ.
ಪ್ರತಿ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ ವಿಭಿನ್ನ ವಾರ್ಷಿಕ ಶುಲ್ಕದೊಂದಿಗೆ ಬರುತ್ತದೆ. ಫೀಸ್ ಮತ್ತು ಶುಲ್ಕಗಳ ವಿಭಾಗದ ಅಡಿಯಲ್ಲಿ ನಿಮ್ಮ ಸೂಪರ್‌ಕಾರ್ಡ್‌ನ ವಾರ್ಷಿಕ ಶುಲ್ಕವನ್ನು ನೀವು ಪರಿಶೀಲಿಸಬಹುದು. ನಿಮ್ಮ ಆಸಕ್ತಿಯ ಕಾರ್ಡ್ ವೇರಿಯಂಟ್‌ನ ವಾರ್ಷಿಕ ಶುಲ್ಕವನ್ನು ನೀವು ಇಲ್ಲಿ ಕೂಡಾ ಪರಿಶೀಲಿಸಬಹುದು.
ವರ್ಲ್ಡ್ ಪ್ರೈಮ್ ಸೂಪರ್‌ಕಾರ್ಡ್, ವರ್ಲ್ಡ್ ಪ್ಲಸ್ ಮತ್ತು ವ್ಯಾಲ್ಯೂ ಪ್ಲಸ್ ಸೂಪರ್‌ಕಾರ್ಡ್‌ನಂತಹ ಕೆಲವು ರೂಪಾಂತರಗಳು ಅಂತಾರಾಷ್ಟ್ರೀಯ ಟ್ರಾನ್ಸಾಕ್ಷನ್ ಸೌಲಭ್ಯವನ್ನು ಒದಗಿಸುತ್ತವೆ.
ನಮ್ಮ ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳು ಯಾವುದೇ ಸೇರ್ಪಡೆ ಶುಲ್ಕವಿಲ್ಲದ ಪ್ರಯೋಜನ ಅಥವಾ ವಾರ್ಷಿಕ ಶುಲ್ಕ ಮನ್ನಾದೊಂದಿಗೆ ಬರುತ್ತವೆ. ವಾರ್ಷಿಕ ಶುಲ್ಕ ಮನ್ನಾ ಮತ್ತು ಮೊದಲ ವರ್ಷದ ಉಚಿತ ಪ್ರಯೋಜನವನ್ನು ನೀಡುವ ನಮ್ಮ ಕ್ರೆಡಿಟ್ ಕಾರ್ಡ್‌ಗಳ ಪಟ್ಟಿ ಇಲ್ಲಿದೆ:
ಯಾವುದೇ ಸೇರ್ಪಡೆ ಶುಲ್ಕವಿಲ್ಲದ ಕ್ರೆಡಿಟ್ ಕಾರ್ಡ್‌ಗಳು-
- ಪ್ಲಾಟಿನಂ ಪ್ಲಸ್ ಸೂಪರ್‌ಕಾರ್ಡ್ - ಮೊದಲ ವರ್ಷ-ಉಚಿತ
- ಬಿಂಜ್ ಸೂಪರ್‌ಕಾರ್ಡ್ - ಮೊದಲ ವರ್ಷ-ಉಚಿತ
- ಪ್ಲಾಟಿನಂ ಚಾಯ್ಸ್ ಸೂಪರ್‌ಕಾರ್ಡ್ - ಮೊದಲ ವರ್ಷ-ಉಚಿತ
ವಾರ್ಷಿಕ ಶುಲ್ಕ ಮನ್ನಾದೊಂದಿಗೆ ಕ್ರೆಡಿಟ್ ಕಾರ್ಡ್‌ಗಳು-
- ಬಿಂಜ್ ಸೂಪರ್‌ಕಾರ್ಡ್
- ಪ್ಲಾಟಿನಂ ಚಾಯ್ಸ್ ಸೂಪರ್‌ಕಾರ್ಡ್
- ಪ್ಲಾಟಿನಂ ಪ್ಲಸ್ ಸೂಪರ್‌ಕಾರ್ಡ್
- ಪ್ಲಾಟಿನಂ ಶಾಪ್ ಡೈಲಿ
- ಪ್ಲಾಟಿನಂ ಎಡ್ಜ್ ಸೂಪರ್‌ಕಾರ್ಡ್
- ಫ್ರೀಡಂ ಸೂಪರ್‌ಕಾರ್ಡ್
- ವರ್ಲ್ಡ್ ಪ್ಲಸ್ ಸೂಪರ್‌ಕಾರ್ಡ್
ಪ್ರತಿ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿವಿಧ ನವೀಕರಣ ಶುಲ್ಕವನ್ನು ಹೊಂದಿದೆ. ಆದಾಗ್ಯೂ, ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ನೀವು ಕನಿಷ್ಠ ಮುಂಚಿತ-ನಿರ್ಧರಿತ ಮೊತ್ತವನ್ನು ಖರ್ಚು ಮಾಡಿದರೆ ಈ ನವೀಕರಣ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.
ಎಲ್ಲಾ 19 ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ವೇರಿಯಂಟ್‌ಗಳು ಟಚ್ ಮತ್ತು ಪಾವತಿ ಸೌಲಭ್ಯವನ್ನು ಹೊಂದಿವೆ, ಇದನ್ನು ಭಾರತದಾದ್ಯಂತ ಯಾವುದೇ ಮಳಿಗೆ/ ಔಟ್‌ಲೆಟ್‌ನಲ್ಲಿ ಪಡೆಯಬಹುದು.
ನಿಯೋಜಿತ ಮಿತಿಯನ್ನು ಮೀರಿ ನಿಮ್ಮ ಕಾರ್ಡ್ ಬಳಸಲು ಸಾಧ್ಯವಿಲ್ಲವಾದ್ದರಿಂದ ನಿಮ್ಮ ಕ್ರೆಡಿಟ್ ಮಿತಿಯನ್ನು ಮೀರುವುದು ಸಾಧ್ಯವಿಲ್ಲ.
ನಿಮ್ಮ ಕ್ರೆಡಿಟ್ ಕಾರ್ಡ್ ಕಳ್ಳತನವಾದರೆ, ನೀವು ಅದನ್ನು ತಕ್ಷಣವೇ RBL ಬ್ಯಾಂಕ್‌ಗೆ ವರದಿ ಮಾಡಬೇಕು. ನೀವು RBL ಬ್ಯಾಂಕಿನ ಗ್ರಾಹಕ ಸಹಾಯವಾಣಿ ಪ್ರತಿನಿಧಿಗಳನ್ನು +91 22 71190900 ನಲ್ಲಿ ಸಂಪರ್ಕಿಸಬಹುದು ಅಥವಾ supercardservice@rblbank.com ಗೆ ಬರೆಯಬಹುದು.