ಬಜಾಜ್ ಫಿನ್ಸರ್ವ್ ಕ್ರೆಡಿಟ್ ಕಾರ್ಡ್ ಸಂಪರ್ಕ ವಿವರಗಳು ನಿಮ್ಮ ಫೋನ್ ನಂಬರ್, ಇ-ಮೇಲ್ id, ವಿಳಾಸ ಇತ್ಯಾದಿಗಳನ್ನು ಒಳಗೊಂಡಿರಬಹುದು. ನಿಮ್ಮ ಕ್ರೆಡಿಟ್ ಕಾರ್ಡಿನೊಂದಿಗೆ ನಿಮ್ಮ ಸಂಪರ್ಕ ವಿವರಗಳನ್ನು ಅಪ್ಡೇಟ್ ಆಗಿ ಇಡುವುದು ಅಗತ್ಯವಾಗಿದೆ. ಒಂದು ವೇಳೆ ಇಲ್ಲಿ ಯಾವುದಾದರೂ ಬದಲಾವಣೆ ಇದ್ದಲ್ಲಿ ಆ ಮಾಹಿತಿಯನ್ನು ಕೂಡ ಅಪ್ಡೇಟ್ ಮಾಡುವುದು ಅಗತ್ಯ. ಇದು ಕಾರ್ಡ್ ಬಳಕೆಗೆ ಭದ್ರತೆ ಮತ್ತು ಅನುಕೂಲತೆಯ ಭರವಸೆ ನೀಡುತ್ತದೆ. ನಮ್ಮ ಗ್ರಾಹಕ ಸೇವೆ 24x7 ರಲ್ಲಿ ಲಭ್ಯವಿದೆ ಮತ್ತು ನೀವು ಈ ಮೂಲಕ ಯಾವುದೇ ಸಮಯದಲ್ಲಿ ನಮ್ಮನ್ನು ಸಂಪರ್ಕಿಸಬಹುದು:
RBL ಬ್ಯಾಂಕ್ ಸೂಪರ್ ಕಾರ್ಡಿಗೆ ಸಂಬಂಧಿಸಿದ ದಕ್ಷ ಸೇವೆಯೊಂದಿಗೆ, ಬಜಾಜ್ ಫಿನ್ಸರ್ವ್ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ಗಳಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಯನ್ನು ಸುಲಭವಾಗಿ ಆರಂಭಿಸುವುದನ್ನು ಖಾತ್ರಿಪಡಿಸುತ್ತದೆ. ಕಾರ್ಡ್ ಹೋಲ್ಡರ್ಗಳು ನಮ್ಮ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಬಹುದು ಅಥವಾ ಯಾವುದೇ ವಿವರಗಳು ಅಥವಾ ವಿಚಾರಣೆಗಳಿಗೆ ನಮಗೆ ಬರೆಯಬಹುದು.
ಕ್ರೆಡಿಟ್ ಕಾರ್ಡ್ ಸಂಪರ್ಕ ವಿವರಗಳಿಗೆ ಸಂಬಂಧಿಸಿದಂತೆ ಕಾರ್ಡ್ ಹೋಲ್ಡರ್ಗಳು ಕೇಳಿರಬಹುದಾದ ಕೆಲವು ಸಾಮಾನ್ಯ ಪ್ರಶ್ನೆಗಳು ಇಲ್ಲಿವೆ.
ಸಹಾಯಕ್ಕಾಗಿ, ದಯವಿಟ್ಟು RBL ಬ್ಯಾಂಕ್ ಹೆಲ್ಪ್ಲೈನಿಗೆ ಕರೆ ಮಾಡಿ:
ಈ ವಿಧಾನಗಳಲ್ಲಿ ನಿಮ್ಮ ಬಜಾಜ್ ಫಿನ್ಸರ್ವ್ rbl ಬ್ಯಾಂಕ್ ಸೂಪರ್ ಕಾರ್ಡಿಗಾಗಿ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನು ನೀವು ಅಪ್ಡೇಟ್ ಮಾಡಬಹುದು -
ನಮ್ಮ ವೆಬ್ಸೈಟಿಗೆ ಲಾಗಿನ್ ಆಗಿ
i. ಬಜಾಜ್ ಫಿನ್ಸರ್ವ್ನೊಂದಿಗಿನ ನಿಮ್ಮ ಕ್ರೆಡಿಟ್ ಕಾರ್ಡ್ ಅಕೌಂಟಿಗೆ ಲಾಗಿನ್ ಆಗಲು ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್ವರ್ಡನ್ನು ಬಳಸಿ.
ii. 'ಕಸ್ಟಮೈಸ್ಡ್ ಸೆಟ್ಟಿಂಗ್' ಗೆ ಹೋಗಿ ಮತ್ತು 'ವೈಯಕ್ತಿಕ ವಿವರಗಳು' ಆಯ್ಕೆ ಮಾಡಿ.’
iii. ಮುಂದೆ, ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಯನ್ನು ಮೌಲ್ಯೀಕರಿಸಿ.
iv. ಈಗ ಹೊಸ ಇ ಮೇಲ್ IDಯನ್ನು ಒದಗಿಸಿ ಮತ್ತು ಮೊಬೈಲ್ ನಂಬರ್ ಅಪ್ಡೇಟ್ ಮಾಡಿ.
ನಿಮ್ಮ ಮೊಬೈಲ್ ಆ್ಯಪ್ ಎಕ್ಸ್ಪೀರಿಯಾದಿಂದ ಬದಲಾಯಿಸಿ
ಹಾಗೆಯೇ, ನಮ್ಮ ಗ್ರಾಹಕ ಪೋರ್ಟಲ್ ಎಕ್ಸ್ಪೀರಿಯಾ ಮೂಲಕ ನೀವು ನಿಮ್ಮ ಇ ಮೇಲ್ ID ಮತ್ತು ಸಂಪರ್ಕ ಸಂಖ್ಯೆಯನ್ನು ಅಪ್ಡೇಟ್ ಮಾಡಬಹುದು.
ನಮ್ಮ ಬಜಾಜ್ ಫಿನ್ಸರ್ವ್ ಗ್ರಾಹಕ ಸೇವೆಗೆ ಕರೆ ಮಾಡಿ
ಅಥವಾ, ನಿಮ್ಮ ಸಂಪರ್ಕ ವಿವರಗಳನ್ನು ಅಪ್ಡೇಟ್ ಮಾಡಲು ನಮ್ಮ ಗ್ರಾಹಕ ಸೇವೆ ಪ್ರತಿನಿಧಿಯನ್ನು ಸಂಪರ್ಕಿಸಿ.
ನೀವು ನಿಮ್ಮ ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಅನ್ನು ನಮ್ಮ ಕ್ರೆಡಿಟ್ ಕಾರ್ಡ್ ಗ್ರಾಹಕ ಪೋರ್ಟಲಿನಿಂದ ಪಡೆಯಬಹುದು. ಒಂದನ್ನು ಪಡೆಯಲು ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ.
ಒಮ್ಮೆ ಪಾಸ್ವರ್ಡನ್ನು ರಚಿಸಿದ ನಂತರ, ನೀವು ನಿಮ್ಮ ಗ್ರಾಹಕ ID, ಮೊಬೈಲ್ ನಂಬರ್ ಅಥವಾ ಇಮೇಲ್ ID ಯನ್ನು ಯೂಸರ್ ನೇಮ್ ಆಗಿ ಬಳಕೆ ಮಾಡಬಹುದು ಮತ್ತು ಇನ್ನೊಮ್ಮೆ ಲಾಗಿನ್ ಮಾಡಲು ಪಾಸ್ವರ್ಡ್ ಹಾಕಿ.
ಕೆಳಗೆ ನೀಡಿದ ಹಂತಗಳನ್ನು ಅನುಸರಿಸುವುದರ ಮೂಲಕ ನೀವು ನಿಮ್ಮ ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಸೂಪರ್ಕಾರ್ಡಿಗೆ ಸುಲಭವಾಗಿ ಪಿನ್ ಅನ್ನು ರಚನೆ ಮಾಡಬಹುದು.
ಈಗ ನಿಮ್ಮ ಆಯ್ಕೆಯ ಕ್ರೆಡಿಟ್ ಕಾರ್ಡ್ ಪಿನ್ ಆಯ್ಕೆ ಮಾಡಿ ಮತ್ತು ಪ್ರಕ್ರಿಯೆ ಸಂಪೂರ್ಣಗೊಳಿಸಲು ಸೇವ್ ಮಾಡಿ.
ಬಜಾಜ್ ಫಿನ್ಸರ್ವ್ rbl ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ಗೆ ಈ ವಿಧಾನಗಳ ಮೂಲಕ ನೀವು ನಿಮ್ಮ ಸ್ಟೇಟ್ಮೆಂಟ್ ಅನ್ನು ಪರಿಶೀಲಿಸಬಹುದು.
i. ಆನ್ಲೈನಿನಲ್ಲಿ ಕ್ರೆಡಿಟ್ ಕಾರ್ಡ್ ಅಕೌಂಟ್ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಅನ್ನು ಪರಿಶೀಲಿಸಿ
ಡೌನ್ಲೋಡ್ ಮಾಡಲು ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ಗೆ ಅಕ್ಸೆಸ್ ಪಡೆಯುವುದಕ್ಕಾಗಿ ಬಜಾಜ್ ಫಿನ್ಸರ್ವ್ ವೆಬ್ಸೈಟ್ ಮೂಲಕ ನೀವು ನಿಮ್ಮ ಸೂಪರ್ಕಾರ್ಡ್ ಅಕೌಂಟಿಗೆ ಲಾಗಿನ್ ಆಗಬಹುದು.
ನೀವು ಮೊದಲ ಬಾರಿಯ ಬಳಕೆದಾರರಾಗಿದ್ದರೆ, ನಿಮ್ಮ 16-ಡಿಜಿಟ್ ಕಾರ್ಡ್ ನಂಬರನ್ನು ಬಳಸಿ ಮತ್ತು ಗುರುತು ಪರಿಶೀಲಿಸಿ, ಸ್ಟೇಟ್ಮೆಂಟ್ ತೆರೆಯಲು ಮತ್ತು ಡೌನ್ಲೋಡ್ ಮಾಡಲು ಮುಂದುವರೆಯಿರಿ. ಒಂದು ಬಾರಿ ಡೌನ್ಲೋಡ್ ಆದ ನಂತರ, ನಿಮ್ಮ ಕ್ರೆಡಿಟ್ ಕಾರ್ಡಿಗೆ ಸಂಬಂಧಿತ ವಿವರಗಳಾದ ಬಾಕಿ ಉಳಿಕೆ ಮೊತ್ತ, ಲಭ್ಯವಿರುವ ಕ್ರೆಡಿಟ್ ಮಿತಿ, ಮಾಡಿದ ಟ್ರಾನ್ಸಾಕ್ಷನ್ ಮತ್ತು ನಿಮ್ಮ ಕಾರ್ಡ್ ಸ್ಟೇಟ್ಮೆಂಟ್ನಲ್ಲಿನ ಇನ್ನೂ ಅನೇಕವುಗಳ ಎಲ್ಲಾ ವಿವರಗಳನ್ನು ಪರಿಶೀಲಿಸಿ.
ii. ಇ ಮೇಲ್ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪರಿಶೀಲಿಸಿ
ನಿಮ್ಮ ನೋಂದಾಯಿತ ಇ ಮೇಲ್ ID ಗೆ ನಿಯಮಿತವಾಗಿ ಕಳುಹಿಸುವ ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ನೋಡಿ. ನಿಮ್ಮ ಕ್ರೆಡಿಟ್ ಕಾರ್ಡ್ ಅಕೌಂಟ್ ಸಂಬಂಧಿತ ವಿವರಗಳನ್ನು ಪರಿಶೀಲಿಸಲು ಅಟ್ಯಾಚ್ಮೆಂಟ್ ಆಗಿ ಕಳುಹಿಸಿದ ಸ್ಟೇಟ್ಮೆಂಟ್ ಅನ್ನು ಡೌನ್ಲೋಡ್ ಮಾಡಿ.
iii. ಆಫ್ಲೈನಿನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪರಿಶೀಲಿಸಿ
ನಿಮ್ಮ ನೋಂದಾಯಿತ ಪೋಸ್ಟಲ್ ವಿಳಾಸದಲ್ಲಿ ಒಂದು ಮುದ್ರಿತ ಪ್ರತಿಯನ್ನು ಪಡೆಯಲು ಆಯ್ಕೆ ಮಾಡುವ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟನ್ನು ಆಫ್ಲೈನ್ನಲ್ಲಿ ಪರಿಶೀಲಿಸಿ.
ನೀವು ಕ್ರೆಡಿಟ್ ಕಾರ್ಡ್ ಪಾವತಿ ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಸೂಪರ್ ಕಾರ್ಡ್ ಪಾವತಿಯನ್ನು ಈ ವಿಧಾನಗಳ ಮೂಲಕ ಮಾಡಬಹುದು -
ಎ) RBL MyCard ಆ್ಯಪ್ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
RBL MyCard ಆ್ಯಪ್ ಬಳಸಿ ಯಾವುದೇ ಬ್ಯಾಂಕ್ ಅಕೌಂಟಿನಿಂದ ತ್ವರಿತವಾಗಿ ನಿಮ್ಮ ಬಿಲ್ ಪಾವತಿಗಳನ್ನು ಮಾಡಿ. ಒಂದು ವೇಳೆ ನೋಂದಣಿಯಾಗಿಲ್ಲವಾದರೆ, Google Play ಅಥವಾ App Store ಮೂಲಕ ಸರಳ ಡೌನ್ಲೋಡಿಗೆ ಹೋಗಿ ಮತ್ತು ನೋಂದಾಯಿಸಿ.
ಬಿ) ಬಿಲ್ ಡೆಸ್ಕ್ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
ತ್ವರಿತ ಬಿಲ್ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಪಾವತಿಸಿ – ಯಾವುದೇ ಬ್ಯಾಂಕ್ ಅಕೌಂಟಿನಿಂದ ತ್ವರಿತ ಪಾವತಿಯನ್ನು ಮಾಡಲು ನಿಮಗೆ ಅನುಮತಿ ನೀಡುವ ಸರಳ ಬಿಲ್ ಡೆಸ್ಕ್.
ನಿಮ್ಮ ಸೂಪರ್ಕಾರ್ಡ್ ಬಿಲ್ಗೆ ಒಳಗೊಂಡ ಆನ್ಲೈನ್ ಪಾವತಿಯ ಇತರೆ ವಿಧಾನಗಳು –