back

ಆದ್ಯತೆಯ ಭಾಷೆ

ಆದ್ಯತೆಯ ಭಾಷೆ

ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳು

ಕಾರ್ ಇನ್ಶೂರೆನ್ಸನ್ನು ಯಾವುದೇ ಸಮಯದಲ್ಲಾದರೂ ಕಸ್ಟಮೈಜ್ ಮಾಡಬಹುದು. ಹೆಚ್ಚುವರಿ ಪ್ರೀಮಿಯಂನೊಂದಿಗೆ ಅತಿ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ.
ನಿಮ್ಮ ಕಾರು ಇನ್ಶೂರೆನ್ಸಿನಲ್ಲಿ ಸೇರಿಸಬಹುದಾದ ಆ್ಯಡ್ ಆನ್ ಕವರ್‌ಗಳು:

 • 1 ಶೂನ್ಯ ಸವಕಳಿ

  ಯಾವುದೇ ಸವಕಳಿಯನ್ನು ಕಡಿತಗೊಳಿಸದೆ ಬದಲಿಸಿದ ಕಾರು ಭಾಗಗಳ ಪೂರ್ಣ ವೆಚ್ಚವನ್ನು ನೀವು ಪಡೆಯುವಲ್ಲಿ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ, ಕ್ಲೈಮ್ ಸೆಟಲ್ ಮಾಡುವ ಮೊದಲು ಕಾರು ಭಾಗಗಳ ಸವಕಳಿ ಮೌಲ್ಯವನ್ನು ಕಳೆಯಲಾಗುತ್ತದೆ. ಶೂನ್ಯ ಸವಕಳಿ ಕವರ್ ಮೂಲಕ, ನೀವು ಹಾನಿಯಾದ ಕಾರಿನ ಭಾಗಗಳ ಎಲ್ಲಾ ವೆಚ್ಚಗಳನ್ನೂ ಕ್ಲೈಮ್ ಮಾಡಬಹುದು.

 • 2 ಇಂಜಿನ್ ರಕ್ಷಣೆ

  ಈ ಆ್ಯಡ್-ಆನ್, ಅಪಘಾತಕ್ಕೆ ಸಂಬಂಧಿಸದಿದ್ದರೂ ಸಹ ಯಾವುದೇ ಎಂಜಿನ್-ಬ್ರೇಕ್‌ಡೌನ್ ಮತ್ತು ರಿಪೇರಿಗಳ ವೆಚ್ಚವನ್ನು ಕವರ್ ಮಾಡುತ್ತದೆ. ನಿಮ್ಮ ಕಾರಿನ ಇಂಜಿನ್‌ಗೆ ಅದನ್ನು ಒಂದು ಗ್ಯಾರಂಟಿ ಆಗಿ ಪರಿಗಣಿಸಿ. ಮೂರು ವರ್ಷ ಹಳೆಯದಾಗಿರುವ ಕಾರುಗಳಿಗೆ ಆ್ಯಡ್ ಆನ್ ಸೌಲಭ್ಯವಿದೆ.

 • 3 ರಿಟರ್ನ್ ಟು ಇನ್ವಾಯ್ಸ್

  'ರಿಟರ್ನ್ ಟು ಇನ್ವಾಯ್ಸ್’ ಆ್ಯಡ್ ಆನ್ ಮೂಲಕ ಅಪಘಾತ ಅಥವಾ ಕಳ್ಳತನವಾದಾಗ ನಿಮ್ಮ ಕಾರಿಗೆ ಒಟ್ಟು ನಷ್ಟವಾದರೆ, ನಿಮಗೆ ಕಾರಿನ ಮಾರುಕಟ್ಟ ಮೌಲ್ಯ ಲಭ್ಯವಾಗುತ್ತದೆ ಹಾಗೂ ಪಾವತಿ ಮಾಡಿದ ನೋಂದಣಿ ಶುಲ್ಕ ಮತ್ತು ರಸ್ತೆ ತೆರಿಗೆ ವಾಪಸ್ ಲಭ್ಯವಾಗುತ್ತದೆ.

 • 4 NCB ಪ್ರೊಟೆಕ್ಟ್

  ಕಾರ್ ಇನ್ಶೂರೆನ್ಸ್ ಪಾಲಿಸಿದಾರರು ವರ್ಷವಿಡೀ ಯಾವುದೇ ಕ್ಲೈಮ್‌ಗಳನ್ನು ಮಾಡದಿದ್ದರೆ ನೋ-ಕ್ಲೈಮ್ ಬೋನಸ್ ಗಳಿಸುತ್ತಾರೆ. ಎನ್‌ಸಿಬಿ ಪ್ರೊಟೆಕ್ಟ್ ಆ್ಯಡ್ ಆನ್ ಜೊತೆಗೆ, ನೀವು ನಂತರದ ವರ್ಷದಲ್ಲಿ ಕ್ಲೈಮ್ ಮಾಡಿದ್ದರೆ ಎನ್‌ಸಿಬಿ ಬೋನಸ್ ಉಳಿಸಿಕೊಳ್ಳಬಹುದು. ಎನ್‌ಸಿಬಿ ಸಂಗ್ರಹವಾಗುತ್ತದೆ ಮತ್ತು ಗರಿಷ್ಠ 50% ವರೆಗೆ ಹೋಗಬಹುದು.

 • 5 ರಸ್ತೆಬದಿಯ ನೆರವು

  ಈ ಆ್ಯಡ್ ಆನ್ ಅಡಿಯಲ್ಲಿ, ಟೋವಿಂಗ್, ಫ್ಲಾಟ್‌ ಟೈರ್ ಬದಲಾವಣೆ, ಇಂಧನ ತುಂಬಿಸುವುದು ಅಥವಾ ಬ್ರೇಕ್‌ಡೌನ್ ಆದರೆ ತುರ್ತು ರಿಪೇರಿಯಂತಹ ರಸ್ತೆಬದಿ ನೆರವನ್ನು ಪಡೆಯುತ್ತೀರಿ.

 • 6 ಕಾರು ಪ್ರಯಾಣಿಕರಿಗೆ ಅಪಘಾತದ ಕವರೇಜ್

  ಈ ಆ್ಯಡ್-ಆನ್ ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಆಗಿದೆ. ಅಪಘಾತವಾದ ಸಂದರ್ಭದಲ್ಲಿ, ಗಾಯಗಳಿಗೆ, ಅಂಗವೈಕಲ್ಯತೆಗೆ ಅಥವಾ ಸಾವು ಸಂಭವಿಸಿದರೆ, ಈ ಆ್ಯಡ್-ಆನ್ ಭಾರೀ ಪ್ರಮಾಣದ ಮೊತ್ತವನ್ನು ಪರಿಹಾರವಾಗ ನೀಡುತ್ತದೆ.

 • 7 ಬದಲಿ ಕಾರು

  ಒಂದು ವೇಳೆ ನಿಮ್ಮ ಕಾರು ಅಪಘಾತದಲ್ಲಿ ಜಖಂ ಆದರೆ, ಕಳುವಾದರೆ, ಈ ಆ್ಯಡ್-ಆನ್ ನಿಮಗೆ ಬಾಡಿಗೆಗೆ ಕಾರನ್ನು 15 ದಿನಗಳವರೆಗೆ ಪಡೆಯಲು ಆಗುವ ವೆಚ್ಚವನ್ನು ಭರ್ತಿಮಾಡಿಕೊಡುತ್ತದೆ. ಬದಲಿ ಕಾರುಗಳ ಮಾದರಿಗೆ ಈ ಆ್ಯಡ್-ಆನ್ ಮತ್ತು ಕ್ಲೈಮ್ ಮೊತ್ತದ ಪ್ರೀಮಿಯಂ ಬದಲಾಗಬಹುದು.

 • 8 ಕೀ ಬದಲಿ ಪರಿಹಾರ

  ಈ ಆ್ಯಡ್-ಆನ್, ಹೊಸ ಬೀಗಗಳನ್ನು ಅಳವಡಿಸುವ ಅಥವಾ ಕೊಳ್ಳುವಿಕೆಯ ವೆಚ್ಚವನ್ನು ಕ್ಲೈಮ್ ಮಾಡುತ್ತದೆ, ನೀವು ಕೀಗಳನ್ನು ಕಳೆದುಕೊಂಡರೆ ಅಥವಾ ಅದು ಕಳ್ಳತನವಾಗಿದ್ದರೆ ಸಹಾಯವಾಗುತ್ತದೆ. ಕೀಲಿಗಳು ಕಳುವಾದಲ್ಲಿ ಕ್ಲೈಮ್ ಮೊತ್ತವನ್ನು ಪಡೆಯಲು ಪೋಲೀಸರಿಗೆ ದೂರು ನೀಡಬೇಕು.

 • 9 ಬಳಸಬಹುದಾದ ವಸ್ತುಗಳ ಕವರ್

  ನಟ್‌ ಬೋಲ್ಟ್‌ಗಳು, ಕೂಲಂಟ್, ಇಂಜಿನ್ ತೈಲ, ಬ್ರೇಕ್ ಆಯಿಲ್ ಮುಂತಾದ ಉಪಭೋಗ್ಯದ ಮೌಲ್ಯ; ಬೇರಿಂಗ್‌ಗಳು, ಇತ್ಯಾದಿ ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಒಳಗೊಂಡಿರುವುದಿಲ್ಲ. ಆದರೆ, ‘ಕನ್ಸ್ಯೂಮೇಬಲ್ಸ್ ಕವರ್ ಆ್ಯಡ್-ಆನ್’ ಗಳನ್ನು ನೀವು ತೆಗೆದುಕೊಂಡಲ್ಲಿ, ಇಂಥ ಕನ್ಸ್ಯೂಮೇಬಲ್‌ಗಳನ್ನು ಬದಲಾಯಿಸುವುದಕ್ಕಾಗಿ ವ್ಯಯಿಸಿದ ಹಣಕ್ಕಾಗಿ ಪರಿಹಾರವನ್ನು ನೀವು ಪಡೆಯುತ್ತೀರಿ.

  ಹಕ್ಕುತ್ಯಾಗ - *ಷರತ್ತುಗಳು ಅನ್ವಯ. ಬಜಾಜ್ ಫೈನಾನ್ಸ್ ಲಿಮಿಟೆಡ್ ಮಾಸ್ಟರ್ ಪಾಲಿಸಿದಾರರಾಗಿರುವ ಗ್ರೂಪ್ ಇನ್ಶೂರೆನ್ಸ್ ಯೋಜನೆಯಡಿ ಈ ಪ್ರಾಡಕ್ಟ್ ಆಫರ್ ಮಾಡಲಾಗುತ್ತದೆ. ನಮ್ಮ ಪಾಲುದಾರ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಕವರೇಜನ್ನು ಒದಗಿಸಲಾಗುತ್ತದೆ. ಬಜಾಜ್ ಫೈನಾನ್ಸ್ ಲಿಮಿಟೆಡ್ ಅಪಾಯದ ಹೊಣೆ ಹೊರುವುದಿಲ್ಲ. IRDAI ಕಾರ್ಪೊರೇಟ್ ಏಜೆನ್ಸಿ ನೋಂದಣಿ ನಂಬರ್ CA0101 ಮೇಲೆ ತಿಳಿಸಲಾದ ಪ್ರಯೋಜನಗಳು ಮತ್ತು ಪ್ರೀಮಿಯಂ ಮೊತ್ತವು ವಿಮಾದಾರರ ವಯಸ್ಸು, ಜೀವನಶೈಲಿ ಹವ್ಯಾಸಗಳು, ಆರೋಗ್ಯ ಇತ್ಯಾದಿಗಳಂತಹ ವಿವಿಧ ಅಂಶಗಳಿಗೆ ಒಳಪಟ್ಟಿರುತ್ತದೆ (ಅನ್ವಯವಾದರೆ). ವಿತರಣೆ, ಗುಣಮಟ್ಟ, ಸೇವೆಯ ಸಾಮರ್ಥ್ಯ, ನಿರ್ವಹಣೆ ಮತ್ತು ಮಾರಾಟದ ನಂತರದ ಯಾವುದೇ ಕ್ಲೈಮ್‌ಗಳಿಗೆ BFL ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಈ ಪ್ರಾಡಕ್ಟ್ ಇನ್ಶೂರೆನ್ಸ್ ಕವರೇಜನ್ನು ಒದಗಿಸುತ್ತದೆ. ಈ ಪ್ರಾಡಕ್ಟ್ ಖರೀದಿ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಯಾವುದೇ ಥರ್ಡ್ ಪಾರ್ಟಿ ಪ್ರಾಡಕ್ಟ್‌ಗಳನ್ನು ಕಡ್ಡಾಯವಾಗಿ ಖರೀದಿಸಲು BFL ತನ್ನ ಯಾವುದೇ ಗ್ರಾಹಕರನ್ನು ಒತ್ತಾಯಿಸುವುದಿಲ್ಲ.”

ಉತ್ತಮ ಸಿಬಿಲ್ ಸ್ಕೋರ್, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?