ಕಾರು ಇನ್ಶೂರೆನ್ಸ್ - ಮುನ್ನೋಟ

ಕಾರ್ ಇನ್ಶೂರೆನ್ಸ್ ಅಪಘಾತ, ಕಳ್ಳತನ ಅಥವಾ ನೈಸರ್ಗಿಕ ವಿಕೋಪದಿಂದಾಗಿ ಉಂಟಾಗುವ ಯಾವುದೇ ಇನ್ಶೂರೆನ್ಸ್ ನಷ್ಟಕ್ಕೆ ನಿಮಗೆ ಪರಿಹಾರ ನೀಡಬಹುದು. ನೀವು ಆಯ್ಕೆ ಮಾಡುವ ಇನ್ಶೂರೆನ್ಸ್ ಮೇಲೆ ಆಧರಿತವಾಗಿ, ಥರ್ಡ್ ಪಾರ್ಟಿಆಸ್ತಿ ಹಾನಿ, ವೈಯುಕ್ತಿಕ ಗಾಯ ಅಥವಾ ಸಾವುಗಳಿಗೂ ಸಹ ನೀವು ವಿಮಾ ರಕ್ಷಣೆಗೊಳಪಡಬಹುದು.

ಕಾರು ವಿಮೆ ವಿಧಗಳು


ಭಾರತದಲ್ಲಿ ಎರಡು ರೀತಿಯ ಕಾರ್ ಇನ್ಶೂರೆನ್ಸ್ ಲಭ್ಯವಿದೆ:

 1. ಸಮಗ್ರ ಇನ್ಶೂರೆನ್ಸ್

 2. ಒಂದು ವೇಳೆ ನಿಮ್ಮ ಕಾರಿಗೆ ಡಿಕ್ಕಿಯಾದರೆ ಅಥವಾ ಆಲಿಕಲ್ಲಿನಿಂದ ಹಾನಿಯಾದರೆ ಅಥವಾ ವಿಧ್ವಂಸಕ್ಕೆ ಬಲಿಯಾದರೆ ಏನಾಗುತ್ತದೆ? ಸಮಗ್ರ ಕಾರ್ ಇನ್ಶೂರೆನ್ಸ್ ಇದೆಲ್ಲದರ ಜೊತೆಗೆ ಇನ್ನೂ ಮುಂತಾದವುಗಳನ್ನು ಕವರ್ ಮಾಡುತ್ತದೆ. ಇದು ಒಂದು ವ್ಯಾಪಕ ಕಾರ್ ಇನ್ಶೂರೆನ್ಸ್ ಆಗಿದ್ದು, ಇದು ನಿಮ್ಮ ಕಾರಿಗೆ ಉಂಟಾದ ಹಾನಿಯ ಜೊತೆಗೆ ಬೇರೆಯವರ ವಾಹನ ಮತ್ತು ಆಸ್ತಿಗಳಿಗೆ ಉಂಟಾದ ಹಾನಿಯನ್ನೂ ಕವರ್ ಮಾಡುತ್ತದೆ. ಇದರ ಜೊತೆಗೆ ನೀವು ಕಳ್ಳತನ, ಬೆಂಕಿ ಆಕಸ್ಮಿಕ, ದುರುದ್ದೇಶಪೂರಿತ ಚಟುವಟಿಕೆ ಅಥವಾ ಪ್ರಕೃತಿ ವಿಕೋಪದ ಕಾರಣದಿಂದಾದ ನಷ್ಟಕ್ಕೂ ಕೂಡಾ ಪರಿಹಾರ ಪಡೆಯಬಹುದು.

 3. ಥರ್ಡ್ ಪಾರ್ಟಿ ಇನ್ಶೂರೆನ್ಸ್

 4. ಎಲ್ಲಾದರೂ ಘರ್ಷಣೆಯಿಂದ ನಿಮ್ಮ ತಪ್ಪು ಸಾಬೀತಾದರೆ ನೀವು ಮೂರನೇ ಪಾರ್ಟಿಗೆ ಹಾನಿಯ ಮೊತ್ತವನ್ನು ಪಾವತಿಸಬೇಕು. ಥರ್ಡ್ ಪಾರ್ಟಿ ಇನ್ಶೂರೆನ್ಸ್ ಈ ಸಂದರ್ಭದಲ್ಲಿ ನೀವು ಕವರ್‌‌ಗೆ ಒಳಪಡುತ್ತೀರಿ.. ನಿಮ್ಮ ಕಾರಿನಿಂದ ಉಂಟಾಗುವ ಇತರರ ವಾಹನಗಳ ಮತ್ತು ಆಸ್ತಿಯ ಹಾನಿಗೆ ಇದು ಪಾವತಿಸುತ್ತದೆ. ಆದಾಗ್ಯೂ, ಒಂದು ವೇಳೆ ನಿಮ್ಮದೇ ತಪ್ಪಿದ್ದರೆ ಕಾರಿಗಾದ ಹಾನಿಯನ್ನು ಅದು ಭರಿಸುವುದಿಲ್ಲ.

ಕಾರು ಇನ್ಶೂರೆನ್ಸ್ ಇತ್ತೀಚೆಗೆ ಕೇಳಲಾದ ಪ್ರಶ್ನೆಗಳು FAQ ಗಳು

ಕಾರ್ ಇನ್ಶೂರೆನ್ಸನ್ನು ನಾನು ಆನ್‌ಲೈನ್‌ನಲ್ಲಿ ಕೊಳ್ಳಬಹುದೇ?

ಹೌದು, ನೀವು ಕಾರು ವಿಮೆಯನ್ನು ಆನ್ ಲೈನ್ ನಲ್ಲಿ ಖರೀದಿಸಬಹುದು. ವಾಸ್ತವವಾಗಿ, ಕಾರ್ ವಿಮೆಯನ್ನು ಆನ್ಲೈನ್‌ನಲ್ಲಿ ಖರೀದಿಸುವುದು ವೇಗವಾಗಿದೆ ಮತ್ತು ಸುಲಭವಾಗಿದೆ. ನಿಮ್ಮ ಕಾರಿಗೆ ವಿಮಾ ರಕ್ಷಣೆಯನ್ನು ಒದಗಿಸುವುದಕ್ಕಾಗಿ ಕ್ವಿಕ್ ಕೋಟ್ಅನ್ನು ಪಡೆಯಲು ನಿಮ್ಮ ಪರ್ಸನಲ್ ವಿವರಗಳು ಹಾಗೂ ಕಾರ್ ಬಗೆಗಿನ ಮಾಹಿತಿಯನ್ನು ಮಾತ್ರ ನೀವು ಒದಗಿಸಬೇಕಿರುತ್ತದೆ. ಕಾರು ಇನ್ಶೂರೆನ್ಸ್‌‌ಗೆ ಆನ್ಲೈನಿನಲ್ಲಿ ಅಪ್ಲೈ ಮಾಡಿ

ನಾನು ನನ್ನ ಕಾರು ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್‌ನಲ್ಲಿ ರಿನೀವ್ ಮಾಡಬಹುದೇ?

ಹೌದು. ನೀವು ನಿಮ್ಮ ಮೋಟಾರು ಪಾಲಿಸಿಯನ್ನು ಆನ್ ಲೈನ್ ಮೂಲಕ ಸುಲಭವಾಗಿ ನವೀಕರಿಸಬಹುದು. ಜತೆಗೆ, ಪಾಲಿಸಿ ರಿನೀವಲ್‌‌ಗೆ ನೀವು ನೋ ಕ್ಲೇಮ್ ಬೋನಸ್ ಅಥವಾ NCBಯನ್ನು (ಅನ್ವಯವಾದರೆ ಮಾತ್ರ) ಮತ್ತು ವಿಶೇಷ ಆನ್ಲೈನ್ ರಿಯಾಯಿತಿಗಳನ್ನು ಪಡೆಯಬಹುದು.

ಕಾರಿನ ಇನ್ಶೂರೆನ್ಸಿನ ಮೇಲೆ ಏನಾದರೂ ರಿಯಾಯಿತಿ ದೊರೆಯುವುದೇ?

ಹೌದು. ಬಜಾಜ್ ಅಲಿಯಾನ್ಸ್‌ನಂತಹ ವಿಮೆಗಾರರು ಕಾಲಕಾಲಕ್ಕೆ ಕಾರು ಇನ್ಶೂರೆನ್ಸಿನ ಮೇಲೆ ರಿಯಾಯಿತಿ ಮತ್ತು ಡೀಲ್‌ಗಳನ್ನು ನೀಡುತ್ತಾರೆ. ನೀವು ಅವರ ವೆಬ್ಸೈಟನ್ನು ಪರಿಶೀಲಿಸಿ ಈಗ ಚಾಲ್ತಿಯಲ್ಲಿರುವ ಉತ್ತಮ ಡೀಲ್‌ಗಳ ಮಾಹಿತಿಯನ್ನು ಪಡೆಯಬಹುದು.

ನನಗೆ ಕಾರ್ ಇನ್ಶೂರೆನ್ಸ್ ಏಕೆ ಬೇಕು?

ನೀವು ರಸ್ತೆಗಳಲ್ಲಿ ಚಾಲನೆ ಮಾಡುತ್ತಿದ್ದರೆ, ನೀವು ಕಾರ್ ಇನ್ಶೂರೆನ್ಸ್ ಹೊಂದಿರಬೇಕು. ಏಕೆಂದರೆ:

 1. ಕಡ್ಡಾಯ ಕಾನೂನು: ಮೋಟಾರ್ ವಾಹನ ಕಾಯಿದೆ 1988 ಅಡಿಯಲ್ಲಿ, ಕಾರು ವಿಮೆ ಇಲ್ಲದೆ ಭಾರತೀಯ ರಸ್ತೆಗಳಲ್ಲಿ ಚಾಲನೆ ಮಾಡುವುದು ಕಾನೂನುಬಾಹಿರವಾಗಿದೆ.

 2. ಅನಿರೀಕ್ಷಿತ ವೆಚ್ಚಗಳು: ಕಾರು ಅಪಘಾತವು ಒಂದು ಅನಿರೀಕ್ಷಿತ ಘಟನೆಯಾಗಿದ್ದು, ಭಾರಿ ಪ್ರಮಾಣದ ವೆಚ್ಚವನ್ನು ಉಂಟು ಮಾಡುತ್ತದೆ. ಕಾರಿನ ವಿಮೆ ಇಲ್ಲದಿರುವುದರಿಂದ ನಿಮ್ಮ ಉಳಿತಾಯವನ್ನು ಮತ್ತು ನಗದನ್ನು ಕಟ್ಟಿ ಹಾಕಬಹುದು.

 3. ಮೂರನೇ ವ್ಯಕ್ತಿ ಹಾನಿಗಳು: ಘರ್ಷಣೆಯ ಕಾರಣ ಬೇರೊಬ್ಬರ ಆಸ್ತಿ ಅಥವಾ ವಾಹನವನ್ನು ಹಾನಿ ಮಾಡುವುದು ನಿಮ್ಮನ್ನು ಸಂಕೀರ್ಣ ಪರಿಸ್ಥಿತಿಗೆ ದೂಡಬಹುದು. ನಿಮಗೆ ಕಾರಿನ ವಿಮೆ ಇದ್ದರೆ ನೀವು ಯಾವುದೇ ತೊಂದರೆಯಿಲ್ಲದೆ ತೃತೀಯ ಪಕ್ಷದ ಹಾನಿಗಳಿಗೆ ಪರಿಹಾರವನ್ನು ಪಡೆಯಬಹುದು.

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಯಾವುದೆಲ್ಲಾ ಕವರ್ ಆಗುತ್ತದೆ?

ಇದು ನೀವು ಆಯ್ಕೆ ಮಾಡಿದ ಕಾರು ಇನ್ಶೂರೆನ್ಸ್ ಪಾಲಿಸಿಯನ್ನು ಅವಲಂಬಿಸಿದೆ.. ಕಾಂಪ್ರೆಹೆನ್ಸಿವ್ ಕಾರ್ ಇನ್ಷ್ಯೂರನ್ಸ್ ಈ ಕೆಳಗಿನವುಗಳಿಗೆ ಸಂಬಂಧಿಸಿದಂತೆ ನಿಮಗೆ ರಕ್ಷಣೆ ಒದಗಿಸುತ್ತದೆ:

 • ಅಪಘಾತದಿಂದಾಗಿ ಹಾನಿ
 • ಪ್ರವಾಹಗಳು, ಚಂಡಮಾರುತ, ಮಿಂಚು, ಭೂಕಂಪ, ಭೂಕುಸಿತ, ಆಲಿಕಲ್ಲು, ಹಿಮಕೊರೆತ ಮುಂತಾದ ನೈಸರ್ಗಿಕ ವಿಕೋಪಗಳು (ದೈವ ನಿಯಮ) ಕಾರಣದಿಂದಾಗಿ ನಷ್ಟ ಉಂಟಾಗುವುದು.
 • ಬೆಂಕಿ ಅಥವಾ ಸೆಲ್ಫ್ ಇಗ್ನಿಷನ್‌ನಿಂದಾಗಿ ಹಾನಿ
 • ಕಳ್ಳತನ, ಗಲಭೆಗಳು, ಅಥವಾ ಯಾವುದೇ ದುರುದ್ದೇಶಪೂರಿತ ಅಥವಾ ಭಯೋತ್ಪಾದಕ ಚಟುವಟಿಕೆಗಳಿಂದಾದ ನಷ್ಟ
 • ರಸ್ತೆ, ರೈಲು, ಒಳನಾಡಿನ ಜಲಮಾರ್ಗ, ಲಿಫ್ಟ್, ಎಲಿವೇಟರ್ ಅಥವಾ ವಿಮಾನದ ಮೂಲಕ ಸಾಗಣೆಯಾಗುವಾಗ ಉಂಟಾದ ಹಾನಿ
 • ಇನ್ಷುರೆನ್ಸ್ ಮಾಡಲ್ಪಟ್ಟ ಕಾರಿನ ಮಾಲೀಕರು / ಚಾಲಕರಿಗೆ ಗಾಯಗಳ ಅಪಘಾತ ರಕ್ಷಣೆ
 • ಸಾವು ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಪರಿಹಾರ

ಕಾರ್ ಇನ್ಷ್ಯೂರನ್ಸ್, ಥರ್ಡ್ ಪಾರ್ಟಿ ಲಯೇಬಿಲಿಟಿಗಳನ್ನೂ ಸಹ ಕವರ್ ಮಾಡುತ್ತದೆ. ಇದು ಒಳಗೊಳ್ಳುತ್ತದೆ:

 • ಸಾರ್ವಜನಿಕ ಸ್ಥಳದಲ್ಲಿ ವಿಮೆಗೆ ಒಳಪಟ್ಟ ಕಾರಿನಿಂದ ವಾಹನ ಅಥವಾ ಸ್ವತ್ತುಹಾನಿ
 • ಅಪಘಾತದೊಂದಾಗಿ ಮೂರನೇ ಪಕ್ಷದ ಚಾಲಕರಿಗೆ ಆಗುವ ಯಾವುದೇ ಗಾಯಗಳು

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಯಾವುದೆಲ್ಲಾ ಕವರ್ ಆಗುವುದಿಲ್ಲ?

ಕಾರು ಇನ್ಶೂರೆನ್ಸಿನಲ್ಲಿ ಈ ಕೆಳಗಿನವು ಕವರ್ ಆಗಿರುವುದಿಲ್ಲ:

 • ಯಾಂತ್ರಿಕ ಅಥವಾ ವಿದ್ಯುತ್ ಸ್ಥಗಿತ
 • ಸವಕಳಿ ಅಥವಾ ಕಾರಿನ ಬಳಕೆಯಿಂದಾಗುವ ಶಿಥಿಲತೆ
 • ಮದ್ಯ/ ಮಾದಕವಸ್ತುಗಳ ಪ್ರಭಾವದಡಿಯಲ್ಲಿ ಚಾಲನೆ ಮಾಡುವಾಗ ಉಂಟಾದ ಹಾನಿ
 • ಸರಿಯಾದ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವಾಗ ಉಂಟಾದ ಹಾನಿ
 • ಬಾಡಿಗೆಗೆ ಅಥವಾ ಬಹುಮಾನವಾಗಿ, ಸಂಘಟಿತ ರೇಸಿಂಗ್ ಅಥವಾ ವೇಗ ಪರೀಕ್ಷೆ ಇತ್ಯಾದಿಗಳಿಗಾಗಿ ಕಾರನ್ನು ಬಳಸುತ್ತಿರುವಾಗ ಉಂಟಾದ ಹಾನಿ.
 • ಅಪಘಾತದಿಂದ ಉಂಟಾಗದ ಟೈರ್ ಹಾನಿ
 • ಕಳ್ಳತನದಿಂದಾದ ಕಾರು ಬಿಡಿಭಾಗಗಳ ನಷ್ಟ

ಕಾರ್ ಇನ್ಶೂರೆನ್ಸನ್ನು ಆನ್ಲೈನ್ ಮೂಲಕ ಖರೀದಿಸುವುದರಿಂದ ಯಾವ ಪ್ರಯೋಜನಗಳಿವೆ?

ಕಾರ್ ಇನ್ಶೂರೆನ್ಸ್ ಕೊಳ್ಳಲು ನೀವು ಖುದ್ದಾಗಿ ವಿವಿಧ ಇನ್ಶೂರೆನ್ಸ್ ಕಂಪನಿಗಳಿಂದ ಹಲವಾರು ಬ್ರೌಶರ್‌ಗಳನ್ನು ತಂದು ಅವುಗಳನ್ನು ಹೋಲಿಸಿ ನೋಡುವುದನ್ನು ಊಹಿಸಿ ನೋಡಿ. ತುಂಬಾ ಕಷ್ಟ ಎನಿಸುತ್ತಿದೆ, ಅಲ್ಲವೇ? ನೀವು ಕಾರ್ ಇನ್ಶೂರೆನ್ಸನ್ನು ಆನ್ಲೈನ್ ಮೂಲಕ ಖರೀದಿಸಿದಾಗ ಬಹಳಷ್ಟು ಲಾಭ ಪಡೆಯುವಿರಿ, ಅವುಗಳೆಂದರೆ:

 • ಸುಲಭ ಹೋಲಿಕೆ: ಉತ್ಪನ್ನಗಳು ಹಾಗೂ ಅವುಗಳ ಬೆಲೆಗಳನ್ನು ಹೋಲಿಕೆ ಹಾಗೂ ಸಂಶೋಧನೆಯನ್ನು ಮಾಡುವ ಸರಾಗತೆಯನ್ನು ಆನ್‌ಲೈನ್ ಕಾರ್ ಇನ್ಶೂರೆನ್ಸ್ ನಿಮಗೆ ಒದಗಿಸುತ್ತದೆ. ನೀವು ಗ್ರಾಹಕ ವಿಮರ್ಶೆ ಓದಬಹುದು, ನೀವು ಮಾಹಿತಿ ಹಂಚಿಕೊಳ್ಳಬಹುದು ಅಥವಾ ಇನ್ಶೂರೆನ್ಸ್ ಕಂಪನಿಗೆ ನೇರವಾಗಿ ಪ್ರಶ್ನೆಯನ್ನು ಕೇಳಬಹುದಾಗಿದೆ.
 • ಕನ್ವೀನಿಯನ್ಸ್: ಈ ದಿನಗಳಲ್ಲಿ ಕನ್ವೀನಿಯನ್ಸ್ ಅತ್ಯಂತ ದೊಡ್ಡ ಸೌಲಭ್ಯವಾಗಿದೆ ಕಾರ್ ಇನ್ಶೂರೆನ್ಸನ್ನು ಆನ್‌ಲೈನ್‌‌ನಲ್ಲಿ ಖರೀದಿಸುವ ಸೌಲಭ್ಯವನ್ನು ನೀವು ಹೊಂದಿರುವಾಗ, ಒಂದು ಸ್ಥಳದಿಂದ ಮತ್ತೊಂದಕ್ಕೆ ತಿರುಗುತ್ತ ನಿಮ್ಮ ಸಮಯ ಮತ್ತು ಪ್ರಯತ್ನವನ್ನು ನೀವೇಕೆ ವ್ಯರ್ಥ ಮಾಡುತ್ತೀರಿ?
 • ಸುಲಭ ಅಪ್ಲಿಕೇಶನ್: ಕಾರ್ ಇನ್ಶೂರೆನ್ಸನ್ನು ಆನ್‌ಲೈನ್‌ನಲ್ಲಿ ಕೊಳ್ಳಲು ಈಗಿನ ದಿನಗಳಲ್ಲಿ ಇನ್ಶೂರೆನ್ಸ್ ಕಂಪನಿಗಳು ತಡೆರಹಿತ ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಒದಗಿಸುತ್ತವೆ. ಆನ್ಲೈನ್ ಅಪ್ಲಿಕೇಶನ್ನಿನ ಫಾರಂಗಳು ತ್ವರಿತ, ಸರಳ ಮತ್ತು ಸ್ವಯಂ ನಿರ್ದೇಶಿತವಾಗಿವೆ. ದೋಷಗಳಿಗೆ ಅವಕಾಶಗಳು ಕಡಿಮೆ ಇವೆ ಮತ್ತು ನೀವು ಯಾವುದೇ ಸಮಯದಲ್ಲಿ ನಿಮ್ಮ ಅಪ್ಲಿಕೇಶನನ್ನು ಪರಿಶೀಲಿಸಬಹುದು.
 • ಹಣಪಾವತಿಗಳ ಸರಾಗತೆ: ನೀವು ಆನ್‌ಲೈನ್‌ನಲ್ಲಿ ಕಾರ್ ಇನ್ಶೂರೆನ್ಸ್ ಒಂದನ್ನು ಕೊಂಡಾಗ ಹಣಪಾವತಿಗಾಗಿ ಮಲ್ಟಿಪಲ್ ಆಪ್ಷನ್‌ಗಳನ್ನು ನೀವು ಪಡೆಯುತ್ತೀರಿ, ಉದಾಹರಣೆಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಸ್ಮಾರ್ಟ್ ಕಾರ್ಡ್ ಮುಂತಾದವುಗಳು.
 • ರಿಯಾಯಿತಿ ಮತ್ತು ಡೀಲ್‌ಗಳು: ಅನೇಕ ಬಾರಿ ಆನ್‌ಲೈನ್‌ ಕಾರ್ ಇನ್ಶೂರೆನ್ಸ್ ಅರ್ಜಿದಾರರಿಗೆಂದೇ ಅನೇಕ ರಿಯಾಯಿತಿಗಳು ಮತ್ತು ಡೀಲ್‌ಗಳಿರುತ್ತವೆ.

ನೀವು ಕಾರನ್ನು ಮಾರಾಟ ಮಾಡುವಾಗ ಕಾರ್ ಇನ್ಶೂರೆನ್ಸನ್ನು ವರ್ಗಾವಣೆ ಮಾಡಲು ಇರುವ ವಿಧಾನಗಳು ಏನು?

ಒಳಗೊಂಡಿರುವ ಹಂತಗಳು ಇಲ್ಲಿವೆ:

ಹಂತ 1: ಒಂದು ವೇಳೆ ನೀವು ನೋ ಕ್ಲೇಮ್ ಬೋನಸ್‌‌ಗೆ (NCB) ಅರ್ಹರಾಗಿದ್ದರೆ, ಕಾರು ಇನ್ಶೂರೆನ್ಸ್‌‌ ಟ್ರಾನ್ಸ್‌‌ಫರ್ ಮಾಡುವ ಮೊದಲು ಅದನ್ನು ಕ್ಲೇಮ್ ಮಾಡಿ. ಹೊಸ ಮಾಲೀಕರು NCB ಕ್ಲೇಮ್ ಮಾಡಲಾರರು.
ಹಂತ 2: ಒಂದು ಬಾರಿ ಕಾರು ನೋಂದಣಿಯಾದ ಮೇಲೆ ಮತ್ತು ಪೇಪರ್ ವರ್ಗಾವಣೆ ಮಾಡಿದ ಬಳಿಕ ಹೊಸ ಮಾಲೀಕರಿಗೆ NOC ನೀಡಿ.
ಹಂತ 3: ಕಾರು ವರ್ಗಾವಣೆ ಡಾಕ್ಯುಮೆಂಟ್‌‌ಗಳು, NOC ಪ್ರಮಾಣಪತ್ರ ಮತ್ತು ಹೊಸ ಅಪ್ಲಿಕೇಶನ್ ಫಾರಂನೊಂದಿಗೆ ಹೊಸ ಮಾಲೀಕರಲ್ಲಿ ಇನ್ಶೂರೆನ್ಸ್ ಕಂಪನಿಯನ್ನು ಸಂಪರ್ಕಿಸಲು ಹೇಳಿ.
ಹಂತ 4: ಇನ್ಶೂರೆನ್ಸ್ ಕಂಪನಿ ಕಾರಿನ ಪರಿಶೀಲನೆಯನ್ನು ಮಾಡುತ್ತದೆ ಮತ್ತು ಕಾರು ಇನ್ಶೂರೆನ್ಸ್ ಪಾಲಿಸಿ ಹೊಸ ಖರೀದಿದಾರರಿಗೆ ವರ್ಗಾವಣೆಯಾಗುತ್ತದೆ.

ಕಾರು ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇನ್ನಷ್ಟು FAQ ಗಳನ್ನು ಓದಿ