ವಾಲೆಟ್ FAQ ಗಳು

ಬಜಾಜ್ ಫಿನ್‍ಸರ್ವ್ ವಾಲೆಟ್ ಎಂದರೇನು?

ಗ್ರಾಹಕರು ತಮ್ಮ ಡಿಜಿಟಲ್ ಇಎಂಐ ನೆಟ್‌ವರ್ಕ್ ಕಾರ್ಡ್‌ಗಳನ್ನು, ಪಾವತಿಗಳನ್ನು ಮಾಡಲು ಮತ್ತು ಸಂಗ್ರಹಿಸಲು, ಬಿಲ್‌ಗಳನ್ನು ಪಾವತಿಸಲು, ಪ್ರಯಾಣ ಟಿಕೆಟ್‌ಗಳನ್ನು ಕಾಯ್ದಿರಿಸಲು, ಕೊಡುಗೆಗಳನ್ನು ಪರಿಶೀಲಿಸಲು, ಹತ್ತಿರದ ಮಳಿಗೆಗಳನ್ನು ಕಂಡುಹಿಡಿಯಲು ಮತ್ತು ಇನ್ನೂ ಹೆಚ್ಚಿನದನ್ನು ಮಾಡಲು ಮೊಬೈಲ್ ಅಪ್ಲಿಕೇಶನ್ ಬಜಾಜ್ ಫಿನ್‌ಸರ್ವ್ ವಾಲೆಟನ್ನು ಬಳಸುತ್ತಾರೆ. ಇದನ್ನು ಭಾರತದ ಪ್ರಮುಖ ಮೊಬೈಲ್ ಪಾವತಿ ವ್ಯವಸ್ಥೆ ಮತ್ತು ಡಿಜಿಟಲ್ ವ್ಯಾಲೆಟ್ ಕಂಪನಿ - ಮೊಬಿಕ್ವಿಕ್ ನಡೆಸುತ್ತಿದೆ

ಬಜಾಜ್ ಫಿನ್‌ಸರ್ವ್ ಡಿಜಿಟಲ್ EMI ಕಾರ್ಡ್ ಎಂದರೇನು?

EMI ಕಾರ್ಡ್ ಅಸ್ತಿತ್ವದಲ್ಲಿರುವ ಸದಸ್ಯರ ಗುರುತಿನ ಚೀಟಿಯನ್ನು ಸೂಚಿಸುತ್ತದೆ. ಡಿಜಿಟಲ್ ಇಎಂಐ ಕಾರ್ಡ್ ಭೌತಿಕವಲ್ಲದ EMI ಕಾರ್ಡ್ ಆಗಿದ್ದು, ಇದನ್ನು ಬಜಾಜ್ ಫಿನ್‌ಸರ್ವ್ ವಾಲೆಟ್ ಅಪ್ಲಿಕೇಶನ್‌ನಲ್ಲಿ “ಡಿಜಿಟಲ್ EMI ಕಾರ್ಡ್” ಎಂದು ಮೊದಲೇ ಲೋಡ್ ಮಾಡಲಾಗುತ್ತದೆ.. BFL ವ್ಯಾಪಾರಿಗಳ ನೆಟ್‌ವರ್ಕ್‌ನಾದ್ಯಂತ ವಹಿವಾಟು ನಡೆಸಲು ಇದನ್ನು ಬಳಸಬಹುದು.

ಡಿಜಿಟಲ್ EMI ಕಾರ್ಡ್ ಪಡೆಯುವುದು ಹೇಗೆ?

1.ಗ್ರಾಹಕರು ಬಜಾಜ್ ಫಿನ್‌ಸರ್ವ್ ವಾಲೆಟ್ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್ / ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
2.ಗ್ರಾಹಕರು ಲಿಂಕ್‌ನ ಮೂಲಕ ಬಜಾಜ್ ಫಿನ್‌ಸರ್ವ್ ವಾಲೆಟ್ ಅಪ್ಲಿಕೇಶನನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು: 9278066666 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದ ನಂತರ ಲಿಂಕನ್ನು ಪಡೆಯಬಹುದು
ಲಾಗಿನ್ ಮಾಡಲು ಮತ್ತು ಆ್ಯಪ್‌ನಲ್ಲಿ ಡಿಜಿಟಲ್ EMI ಕಾರ್ಡ್ ನೋಡುವ ಹಂತಗಳು:
1.ಆ್ಯಪ್‌ ಇನ್‌‌ಸ್ಟಾಲ್ ಮಾಡಿದ ನಂತರ, ಬಜಾಜ್‌‌ನೊಂದಿಗೆ ನೋಂದಣಿ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಗ್ರಾಹಕರು ನಮೂದಿಸಬೇಕು.
2.ಒನ್-ಟೈಮ್ ಪಾಸ್ವರ್ಡ್ (ಒಟಿಪಿ) ಅನ್ನು ಅದೇ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ; ಗ್ರಾಹಕರು ಒಟಿಪಿ ನಮೂದಿಸಬೇಕು.
3.OTP ಪರಿಶೀಲನೆ ನಂತರ, ಶುಭಾಶಯದ ಪಾಪ್‌‌ಅಪ್ ಬರುತ್ತದೆ. ನಂತರ ಗ್ರಾಹಕರು 'ಹೆಚ್ಚು ತಿಳಿದುಕೊಳ್ಳಿ ಕ್ಲಿಕ್ ಮಾಡಬೇಕು’.
4.ಆ್ಯಪ್‌ ಹುಟ್ಟಿದ ದಿನಾಂಕ ಕೇಳುತ್ತದೆ (DOB). ಗ್ರಾಹಕರು ಹುಟ್ಟಿದ ದಿನಾಂಕ ನಮೂದಿಸಲು ಬಜಾಜ್‌‌ನೊಂದಿಗೆ ನೋಂದಣಿಯಾಗಿರಬೇಕು.
5.ಗ್ರಾಹಕರು ಡಿಜಿಟಲ್ EMI ಕಾರ್ಡ್(ಗಳನ್ನು) ನೋಡುತ್ತಾರೆ.
OTP ಪರಿಶೀಲನೆ ನಂತರ, DOB ನಮೂದಿಸಲು ಒಂದು ವೇಳೆ ಗ್ರಾಹಕರು ವಿಂಡೋವನ್ನು ನೋಡಲು ಸಾಧ್ಯವಾಗದಿದ್ದರೆ, ಆ್ಯಪ್‌‌ನ ಹೋಮ್ ಸ್ಕ್ರೀನಿನಲ್ಲಿ ಬಜಾಜ್ ಫಿನ್‌‌ಸರ್ವ್ ಲೋಗೋ - ‘B’ ಯನ್ನು ಕ್ಲಿಕ್ ಮಾಡುವುದರ ಮೂಲಕ ಗ್ರಾಹಕರು ಡಿಜಿಟಲ್ EMI ಗೆ ಅಕ್ಸೆಸ್ ಆಗಬಹುದು.

ಒಂದು ಸ್ವರೂಪದ ಕಾರ್ಡ್ ಅನ್ನು ಹೊಂದುವುದರ ಬದಲು ಬಜಾಜ್ ಫಿನ್‌‌ಸರ್ವ್ ಡಿಜಿಟಲ್ EMI ಕಾರ್ಡ್ ಅನ್ನು ಹೊಂದುವುದರಿಂದ ಆಗುವ ಪ್ರಯೋಜನಗಳೇನು?

ಮುಂಚಿತವಾಗಿ ಲೋಡ್ ಆದ ಡಿಜಿಟಲ್ EMI ಕಾರ್ಡ್‌‌ನೊಂದಿಗಿನ ವಾಲೆಟ್ ಗ್ರಾಹಕರನ್ನು ಕಾರ್ಡ್ ಅನ್ನು ಜತೆಗಿರಿಸಿಕೊಳ್ಳುವುದರಿಂದ ದೂರವಿರಿಸುತ್ತದೆ
ಮೋಸದ ವಹಿವಾಟಿನ ವಿರುದ್ಧ ಹೆಚ್ಚಿದ ಭದ್ರತೆ
ಕಾರ್ಡ್ ಅನ್ನು ನಿರ್ಬಂಧಿಸಲು / ಅನಿರ್ಬಂಧಿಸಲು ಸುಲಭವಾಗಿಸುತ್ತದೆ
ವಹಿವಾಟಿನ ಮತ್ತು ಡಿಜಿಟಲ್ ವ್ಯಾಲೆಟ್ ವಿಭಿನ್ನ ಫೀಚರ್‌ಗಳೊಂದಿಗೆ ಇವೆಲ್ಲವೂ ಇನ್ನಷ್ಟು ಸುಲಭವಾಗಿದೆ.

ಬಜಾಜ್ ಫಿನ್ಸರ್ವ್ ವಾಲೆಟ್ನ ಪ್ರಯೋಜನಗಳು ಯಾವುವು?

1.ಸುಲಭ ಹಣಕಾಸು ಪ್ರವೇಶ ಮತ್ತು ಕನಿಷ್ಠ ದಾಖಲಾತಿ
2.ಕಾರ್ಡುಗಳು ಮತ್ತು ಐತಿಹಾಸಿಕ ವಹಿವಾಟುಗಳ ಸಿಂಗಲ್ ವಿಂಡೋ
3.ಸುಲಭವಾದ ಮತ್ತು ತ್ವರಿತವಾದ ಸೇವಾ ಸಾಧ್ಯತೆಗಳು (ಯಾವುದೇ ಇತರ ಸಂಖ್ಯೆ ಅಥವಾ ಇಮೇಲ್ ಅನ್ನು ಸಂಗ್ರಹಿಸುವ ಅಗತ್ಯವಿಲ್ಲ)
4.ಕಾರ್ಡ್‌ಗಳ ಸಂಪೂರ್ಣ ನಿಯಂತ್ರಣ
5.ಕೊಡುಗೆಗಳು ಮತ್ತು ಹತ್ತಿರದ ಅಂಗಡಿಗಳು

ಆ್ಯಪ್‌ನ ಯಾವ ಫೀಚರ್‌‌ಗಳನ್ನು ಗ್ರಾಹಕರು ಬಳಸಬಹುದು?

ಗ್ರಾಹಕರು ಈ ಕೆಳಗಿನ ಸೌಲಭ್ಯಗಳನ್ನು ಬಳಸಲು ಸಾಧ್ಯವಾಗುತ್ತದೆ:
1.ಡಿಜಿಟಲ್ EMI ಕಾರ್ಡ್: ಗ್ರಾಹಕರು ತಮ್ಮ EMI ಕಾರ್ಡನ್ನು ಆ್ಯಪ್‌ನಲ್ಲಿ ನೋಡಲು ಸಾಧ್ಯವಾಗುತ್ತದೆ (ಆದ್ದರಿಂದ EMI ಕಾರ್ಡನ್ನು ತೆಗೆದುಕೊಂಡು ಹೋಗಬೇಕಾಗಿಲ್ಲ). ಡಿಜಿಟಲ್ EMI ಕಾರ್ಡಿನೊಂದಿಗೆ, ಗ್ರಾಹಕರು ತಮ್ಮ ಆಯಾ ವಹಿವಾಟುಗಳನ್ನು ನೋಡಬಹುದು.
2.ಹತ್ತಿರದ ಮಳಿಗೆಗಳು: ಗ್ರಾಹಕರು ಆಯಾ ಪ್ರದೇಶದ 'ಮಳಿಗೆಗಳು' ವಿಭಾಗದಲ್ಲಿ ಬಜಾಜ್ ಪಾಲುದಾರ ಮಳಿಗೆಗಳನ್ನು ನೋಡಬಹುದು. ಗ್ರಾಹಕರು ನಿರ್ದಿಷ್ಟ ಅಂಗಡಿಯನ್ನು ಸಹ ಹುಡುಕಬಹುದು. ಉದಾಹರಣೆಗೆ. ವಿಜಯ್ ಮಾರಾಟಗಳು.
3.ಆಫರ್‌ಗಳು:ಗ್ರಾಹಕರು 'ಆಫರ್ ವಿಭಾಗದಲ್ಲಿ ಆಫರ್‌ಗಳನ್ನು ಪಡೆಯಬಹುದು’. ಇವುಗಳು ವಿವಿಧ ವರ್ಗಗಳಲ್ಲಿ ಬರುವಂತವು- ಎಲೆಕ್ಟ್ರಾನಿಕ್ಸ್, ಪೀಠೋಪಕರಣ, ಫ್ಯಾಶನ್, ಇತ್ಯಾದಿ.

ಅಪ್ಲಿಕೇಶನ್‌ನಲ್ಲಿ ದೋಷ ಕಂಡುಬಂದಲ್ಲಿ ನಾನು ಏನು ಮಾಡಬೇಕು?

ಎಕ್ಸ್‌ಪೀರಿಯಾದಲ್ಲಿ ದಯವಿಟ್ಟು ಪ್ರೊಫೈಲ್ ಪರಿಶೀಲಿಸಿ.
1.ಬಹು ಗ್ರಾಹಕ ID: ಕಸ್ಟಮರ್ ಕೇರ್ ಸಂಪರ್ಕಿಸಿ
2.ಏಕ ಗ್ರಾಹಕ ID: ಅಪ್ಲಿಕೇಶನ್‌ನಲ್ಲಿ ದೋಷವನ್ನು ತೋರಿಸಿದರೆ, “ದಯವಿಟ್ಟು ಸಾಧನದ ಸೆಟ್ಟಿಂಗ್ಗಳಿಂದ ಅಪ್ಲಿಕೇಶನ್ ಡೇಟಾ ಮತ್ತು ಸಂಗ್ರಹವನ್ನು ತೆರವುಗೊಳಿಸಿ. ಹಂತಗಳು: ಸೆಟ್ಟಿಂಗ್> ಅಪ್ಲಿಕೇಶನ್> ವಾಲೆಟ್> ಅಪ್ಲಿಕೇಶನ್ ವಿವರಗಳು / ಸಂಗ್ರಹಣೆ / ಮೆಮೊರಿ> ಡೇಟಾವನ್ನು ತೆರವುಗೊಳಿಸಿ + ಸಂಗ್ರಹವನ್ನು ತೆರವುಗೊಳಿಸಿ”

ಗ್ರಾಹಕರು ಸ್ಮಾರ್ಟ್‌ಫೋನ್ ಹೊಂದಿಲ್ಲದಿದ್ದರೆ, ಗ್ರಾಹಕರು ಬಜಾಜ್ ಫಿನ್ಸರ್ವ್ ವಾಲೆಟ್ ಅನ್ನು ಹೇಗೆ ಬಳಸಬಹುದು?

ಎಲ್ಲಾ BFL ವಿತರಕರೊಂದಿಗೆ ಮೊಬೈಲ್ ಸಂಖ್ಯೆ ಮತ್ತು OTP/PIN ಬಳಸಿ ಗ್ರಾಹಕರು ಇನ್ನೂ ವಹಿವಾಟು ನಡೆಸಬಹುದು.ಫೀಚರ್ ಫೋನ್‌ನಿಂದ OTP ಬಳಸಿ, ಗ್ರಾಹಕರು ಇತರ ಸ್ಮಾರ್ಟ್ ಫೋನ್‌ನಲ್ಲಿ ಅಪ್ಲಿಕೇಶನ್ ಅನ್ನು ಇನ್‌‌ಸ್ಟಾಲ್ ಮಾಡಬಹುದು ಮತ್ತು ಆಫರ್ ಸರ್ಚ್, ಸ್ಟೋರ್ ಸರ್ಚ್, ಟ್ರಾನ್ಸಾಕ್ಷನ್ ವಿವರಗಳು, ಗ್ರಾಹಕ ಸೇವೆಯನ್ನು ಸಂಪರ್ಕಿಸುವುದು ಮುಂತಾದ ಪ್ರಯೋಜನಗಳನ್ನು ಪಡೆಯಬಹುದು.

ಅಪ್ಲಿಕೇಶನ್‌ನಲ್ಲಿ ಯಾವ ಸಮಯದಲ್ಲಿ ಕಾರ್ಡ್ ತೋರಿಸಲಾಗುತ್ತದೆ ಮತ್ತು ಯಾವಾಗ ಬಳಸಬಹುದು?

ನಿಮ್ಮ ಡಿಜಿಟಲ್ ಆಪ್ ಪೋಸ್ಟ್‌ನಲ್ಲಿ ನಿಮ್ಮ ಉತ್ಪನ್ನದ ವಿತರಣೆ ಮಾಡಿದ ಕಾರ್ಡ್ ಸಂಖ್ಯೆ ಪ್ರತಿಬಿಂಬಿಸುತ್ತದೆ. ಸಾಲ ಅನುಮೋದನೆಯು 20 ರಿಂದ 60 ದಿನಗಳೊಳಗೆ ಸಕ್ರಿಯಗೊಳಿಸಲಾಗುತ್ತದೆ. ಕಾರ್ಡ್ ಸಕ್ರಿಯಗೊಂಡ ನಂತರ ಗ್ರಾಹಕರಿಗೆ SMS ಮತ್ತು ಇಮೇಲ್ ಸಹ ಸಿಗುತ್ತದೆ. ಅವರು ಅಪ್ಲಿಕೇಶನ್ ತೆರೆಯಬೇಕು ಮತ್ತು ವಾಲೆಟ್‌ನ ಹೋಮ್ ಸ್ಕ್ರೀನ್ / ಲ್ಯಾಂಡಿಂಗ್ ಪುಟದ ಮೇಲಿನ ಬಲಭಾಗದಲ್ಲಿರುವ ಬಜಾಜ್ ಐಕಾನ್ (‘B’) ಕ್ಲಿಕ್ ಮಾಡಬೇಕಾಗುತ್ತದೆ.

ನಾನು ನನ್ನ ಸ್ಮಾರ್ಟ್‌ಫೋನ್ ಕಳೆದುಕೊಂಡರೆ ಏನು ಮಾಡುವುದು / ಕಾರ್ಡ್ ಅನ್ನು ಹೇಗೆ ನಿರ್ಬಂಧಿಸುವುದು?

ನಿಮ್ಮ ಕಾರ್ಡ್ ಬ್ಲಾಕ್ ಮಾಡಲು, ದಯವಿಟ್ಟು ನಮ್ಮ ಕಾಲ್ ಸೆಂಟರ್ 020 – 39575152 ಕರೆ ಮಾಡಿ (ಕರೆ ಶುಲ್ಕಗಳು ಅನ್ವಯಿಸುತ್ತವೆ) ಮತ್ತು ನಮ್ಮ IVR ನಲ್ಲಿ ನಿಮ್ಮ ಕಾರ್ಡ್ ಅನ್ನು ಬ್ಲಾಕ್ ಮಾಡಬಹುದು. ನಿಮ್ಮ ಎಕ್ಸ್‌ಪೀರಿಯ ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೂಲಕವೂ ನಿಮ್ಮ ಕಾರ್ಡನ್ನು ಬ್ಲಾಕ್ ಮಾಡಬಹುದು.

ನನ್ನ ಕಾರ್ಡ್ ಪಿನ್ ಎಂದರೇನು ಮತ್ತು ನಾನು ಹೇಗೆ ಅದನ್ನು ಪಡೆಯುತ್ತೇನೆ?

ನಿಮ್ಮ ಮೊಬೈಲ್‌ನಲ್ಲಿ ನಿಮ್ಮ EMI ಕಾರ್ಡ್ ಪಿನ್ ಸ್ವೀಕರಿಸಲು, ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಿಂದ 9227564444 ಗೆ PIN ಎಂದು SMS ಕಳುಹಿಸಿ. ಎಕ್ಸ್‌ಪೀರಿಯ ಪೋರ್ಟಲ್‌ನಲ್ಲಿ ಲಾಗಿನ್ ಮಾಡುವ ಮೂಲಕ ನಿಮ್ಮ EMI ಕಾರ್ಡ್ ಪಿನ್ ಅನ್ನು ಬದಲಾಯಿಸಬಹುದು.

ಗ್ರಾಹಕನು ತನ್ನ ಮೊಬೈಲ್ ನಂಬರನ್ನು ನಮ್ಮೊಂದಿಗೆ ಹೇಗೆ ನವೀಕರಿಸಬಹುದು?

ಇಲ್ಲಿ 3 ಆಯ್ಕೆಗಳು ಲಭ್ಯವಿದೆ:
ಆಯ್ಕೆ 1: ಕಾಲ್ ಹಾಟ್‍ಲೈನ್ ನಂಬರ್ : 020 - 39574100
ಆಯ್ಕೆ 2: ನೀವು ಎಕ್ಸ್‌ಪೀರಿಯಾ ಪೋರ್ಟಲ್‌ಗೆ ಲಾಗಿನ್ ಮಾಡಬಹುದು
ಆಯ್ಕೆ 3: ನೀವು ಕಾಲ್ ಸೆಂಟರ್ ಅನ್ನು 020 - 39575152 ಗೆ ಕರೆ ಮಾಡುವುದರ ಮೂಲಕ ಸಂಪರ್ಕಿಸಬಹುದು

ಈ ಬಜಾಜ್ ಫಿನ್‌ಸರ್ವ್ ವಾಲೆಟ್ ಅನ್ನು ಎಲ್ಲಿ ಬಳಸಬಹುದು?

ಮೊಬೈಲ್ ಫೋನುಗಳು, ಕಂಪ್ಯೂಟಿಂಗ್ ಸಾಧನಗಳು, ರೀಟೇಲ್ ಫ್ಯಾಷನ್ (ಬಟ್ಟೆ, ಬಿಡಿಭಾಗಗಳು, ಪ್ರಯಾಣ, ದಿನಸಿ ಸಾಮಾನುಗಳು, ಸಣ್ಣ ಉಪಕರಣಗಳು ಮತ್ತು ಹೆಚ್ಚಿನವು), ಎಲೆಕ್ಟ್ರಾನಿಕ್ಸ್ ಮತ್ತು ಸಲಕರಣೆಗಳು, ಪವರ್ ಬ್ಯಾಕಪ್, ಹಾಲಿಡೇ ಪ್ಯಾಕೇಜುಗಳು, ಕಣ್ಣಿನ ಸಲಕರಣೆಗಳು, ಶಿಕ್ಷಣ (ಕೋಚಿಂಗ್ ಕ್ಲಾಸ್‌ಗಳು), ವಾಚ್‌ಗಳಂಥ ಕೆಟಗರಿಗಳಲ್ಲಿ ಖರೀದಿಗಳನ್ನು ಮಾಡಲು MobiKwik ಮರ್ಚೆಂಟ್ ನೆಟ್ವರ್ಕ್ ಮತ್ತು ಯಾವುದೇ BFL ಪಾಲುದಾರ ಮಳಿಗೆಗಳಲ್ಲಿ ನೀವು ಈ ಕಾರ್ಡ್ ಅನ್ನು ಬಳಸಬಹುದು.

ಬೇರೆಯವರು ನನ್ನ ಪರವಾಗಿ ಬಜಾಜ್ ಫಿನ್‌ಸರ್ವ್‌ ವಾಲೆಟ್ ಬಳಸಬಹುದೇ?

ಸುರಕ್ಷತೆ ಮತ್ತು ಭಧ್ರತಾ ಕಾರಣಗಳಿಗಾಗಿ, ಖರೀದಿಗಳನ್ನು ಮಾಡಲು ಕಾರ್ಡ್ ಹೊಂದಿರುವವರು ಮಾತ್ರ EMI ಕಾರ್ಡ್ ಅನ್ನು ಬಳಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ. EMI ಕಾರ್ಡನ್ನು ಬಳಸಿ ಪಡೆದ ಲೋನಿನ ಹೊಣೆಗಾರಿಕೆಯು EMI ಕಾರ್ಡ್ ಹೋಲ್ಡರ್ ಅವರ ಮೇಲೆಯೇ ಇರುತ್ತದೆ.

ಗ್ರಾಹಕರು ಎಲ್ಲಿ ಬಜಾಜ್ ಫಿನ್‌ಸರ್ವ್‌ ಡಿಜಿಟಲ್ EMI ಕಾರ್ಡ್ ಮಿತಿಯನ್ನು ನೋಡುತ್ತಾರೆ?

ಇಲ್ಲಿ 4 ಆಯ್ಕೆಗಳು ಲಭ್ಯವಿದೆ:
ಆಯ್ಕೆ 1- ಹೋಮ್ ಸ್ಕ್ರೀನಿನ 'ಅವೈಲೆಬಲ್ ಬ್ಯಾಲೆನ್ಸ್ ಐಕಾನ್‍
ಆಯ್ಕೆ 2- ಹೋಮ್ ಸ್ಕ್ರೀನಿನಲ್ಲಿರುವ 'ವಾಲೆಟ್' ವಿಭಾಗದಲ್ಲಿ
ಆಯ್ಕೆ 3: ಹೋಮ್ ಸ್ಕ್ರೀನ್ -> ಬಲದಿಂದ ಎಡಕ್ಕೆ ಸ್ಲೈಡ್ -> ನನ್ನ ವಾಲೆಟ್ -> ಅಕೌಂಟ್ ವಿವರಗಳು ವಿಭಾಗ
ಆಯ್ಕೆ 4: ಲಭ್ಯವಿರುವ ಮಿತಿಯಲ್ಲಿ EMI ಕಾರ್ಡ್ ಕೆಳಗೆ ‘B’ ಬಜಾಜ್ ಲೋಗೊ ಕ್ಲಿಕ್ ಮಾಡಿ

ಆ್ಯಪ್‌ ಡೌನ್ಲೋಡ್ ಮಾಡಿದ ನಂತರ ಅಥವಾ ಮಾಡುವಾಗ ಯಾವುದೇ ತೊಂದರೆ?

ಯಾವುದೇ ವಾಲೆಟ್ ಸಮಸ್ಯೆಗೆ (ಡೆಬಿಟ್ ಸಮಸ್ಯೆ), ದಯವಿಟ್ಟು ಆ್ಯಪ್‌ನಲ್ಲಿರುವ 'ಸಹಾಯ' ಹಂತಗಳನ್ನು ಅನುಸರಿಸಿ.

ಬಜಾಜ್ ಫಿನ್‌ಸರ್ವ್ ಡಿಜಿಟಲ್ EMI ಕಾರ್ಡ್ ಸಂಬಂಧಿತ ಸಮಸ್ಯೆಗಳಾದ ನಿರ್ಬಂಧಿಸುವಿಕೆಗಾಗಿ. ಅನ್‌‌ಬ್ಲಾಕ್ ಮಾಡುವುದು, ಕಾರ್ಡ್ ಮಿತಿ, ಮುಂತಾದವುಗಳಿಗಾಗಿ ದಯವಿಟ್ಟು www.bajajfinserv.in/reach-us ರಲ್ಲಿ ನಮ್ಮನ್ನು ಸಂಪರ್ಕಿಸಿ ಅಥವಾ 020-39575152 ನಂಬರ್‌ಗೆ ಕರೆ ಮಾಡಿ.

ಮೊಬಿಕ್ವಿಕ್ ವಾಲೆಟ್ (ಡೆಬಿಟ್ ಫೀಚರ್‌ಗಳನ್ನು) ರೀಚಾರ್ಜ್, ಟಿಕೆಟ್ ಬುಕಿಂಗ್, ಮುಂತಾದವುಗಳ ವಿಚಾರಣೆಗಳಿಗೆ bajajsupport@mobikwik.com ನಲ್ಲಿ ಮೊಬಿಕ್ವಿಕ್ ಸಂಪರ್ಕಿಸಿ.