ಪಿಲ್‌ಗ್ರಿಮೇಜ್ ಕವರ್

ವಿವಿಧ ತೀರ್ಥಯಾತ್ರೆ ಸ್ಥಳಗಳಿಗೆ ಪ್ರಯಾಣಿಸುವುದು ಈಗ ಸುಲಭವಾಗಿದೆ, ಆದರೆ ವೈಯಕ್ತಿಕ ಅಪಘಾತ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನಷ್ಟ ಅಥವಾ ಅದಕ್ಕಿಂತ ಹೆಚ್ಚಿನ ಅಪಾಯಗಳಿಂದ ನಿಮ್ಮ ಪ್ರಯಾಣವನ್ನು ಸುರಕ್ಷಿತಗೊಳಿಸುವುದು ಬಹಳ ಮುಖ್ಯವಾಗಿದೆ. CPP ಯ ಪಿಲಿಗ್ರಿಮೇಜ್ ಕವರ್‌ನೊಂದಿಗೆ, ಯಾವುದೇ ಅನಿರೀಕ್ಷಿತ ಘಟನೆಯ ಸಂದರ್ಭದಲ್ಲಿ ಸಾಕಷ್ಟು ಕವರೇಜ್ ಪಡೆಯಿರಿ. ನೀವು ನಿಮ್ಮ ವಾಲೆಟ್ ಅನ್ನು ಕಳೆದುಕೊಂಡರೆ 24-7 ಕಾರ್ಡ್ ಬ್ಲಾಕಿಂಗ್ ಸೇವೆಯನ್ನು ಒಳಗೊಂಡಂತೆ ವಿಶಾಲ ಶ್ರೇಣಿಯ ಪ್ರಯೋಜನಗಳನ್ನು ಈ ಪ್ಲಾನ್ ಒದಗಿಸುತ್ತದೆ, ನೀವು ತೀರ್ಥಯಾತ್ರೆಯಲ್ಲಿ ಸಿಕ್ಕಿಹಾಕಿಕೊಂಡರೆ ತುರ್ತು ಪ್ರಯಾಣ ಮತ್ತು ಹೋಟೆಲ್ ನೆರವು ಸಿಗುತ್ತದೆ ಮತ್ತು ನಿಮಗೆ ಅಪಘಾತ ಸಂಭವಿಸಿದರೆ ಕಾಂಪ್ಲಿಮೆಂಟರಿ ಪ್ರೊಟೆಕ್ಷನ್ ಅನ್ನು ಒದಗಿಸುತ್ತದೆ.

CPP ಯ ಪಿಲಿಗ್ರಿಮೇಜ್ ಕವರ್ ಕೇವಲ ರೂ. 599 ಗೆ ರೂ. 3 ಲಕ್ಷದವರೆಗಿನ ಕವರೇಜನ್ನು ಆಫರ್ ಮಾಡುತ್ತದೆ.
 

ಫೀಚರ್‌ಗಳು ಮತ್ತು ಪ್ರಯೋಜನಗಳು

ಪ್ಲಾನ್ ಅಡಿಯಲ್ಲಿ ನೀಡಲಾಗುವ ಪ್ರಯೋಜನಗಳು ಇಲ್ಲಿವೆ:

 • ಪ್ರಯಾಣ ಮತ್ತು ಹೋಟೆಲ್ ನೆರವು

  ನಿಮ್ಮ ತೀರ್ಥಯಾತ್ರೆಯಲ್ಲಿ ನೀವು ಸಿಕ್ಕಿಹಾಕಿಕೊಂಡರೆ ಯಾವುದೇ ತುರ್ತು ವೆಚ್ಚಗಳನ್ನು ನೋಡಿಕೊಳ್ಳಲು ಭಾರತದಲ್ಲಿ ರೂ. 50,000 ವರೆಗಿನ ಪ್ರಯಾಣ ಮತ್ತು ಹೋಟೆಲ್ ನೆರವು ಮತ್ತು ವಿದೇಶದಲ್ಲಿ ರೂ. 1 ಲಕ್ಷದವರೆಗಿನ ಕವರೇಜ್ ಪಡೆಯಿರಿ. ಗರಿಷ್ಠ 28 ದಿನಗಳವರೆಗೆ ಬಡ್ಡಿ ರಹಿತ ಮುಂಗಡವಾಗಿ ಹಣಕಾಸಿನ ನೆರವನ್ನು ನೀಡಲಾಗುತ್ತದೆ. 28 ದಿನಗಳಲ್ಲಿ ನೀವು ಮೊತ್ತವನ್ನು ಮರುಪಾವತಿಸಬೇಕು.

 • 24-7 ಕಾರ್ಡ್ ಬ್ಲಾಕಿಂಗ್ ಸೇವೆ

  ನಿಮ್ಮ ಯಾತ್ರೆಯಲ್ಲಿ ನೀವು ವಾಲೆಟ್ ಅನ್ನು ಕಳೆದುಕೊಂಡರೆ ಕೇವಲ ಒಂದು ಕರೆಯ ಮೂಲಕ ನಿಮ್ಮ ಎಲ್ಲಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌‌ಗಳನ್ನು ಬ್ಲಾಕ್ ಮಾಡಿ. ಈ ಸೇವೆಯನ್ನು ಪಡೆಯಲು ನೀವು ಟೋಲ್-ಫ್ರೀ ನಂಬರ್ 1800-419-4000 ಗೆ ಕರೆ ಮಾಡಬಹುದು.

 • ಕಾಂಪ್ಲಿಮೆಂಟರಿ ಪ್ರೊಟೆಕ್ಷನ್

  ವೈಯಕ್ತಿಕ ಅಪಘಾತಗಳು, ಆಕಸ್ಮಿಕ ಆಸ್ಪತ್ರೆ ದಾಖಲಾತಿ, ತುರ್ತು ವೈದ್ಯಕೀಯ ಸಮಸ್ಯೆ ಅಥವಾ ನೀವು ಪ್ರಯಾಣದಲ್ಲಿದ್ದ ಸಂದರ್ಭದಲ್ಲಿ ನಿಮ್ಮ ಮನೆ ಕಳ್ಳತನವಾದರೆ ರೂ. 3 ಲಕ್ಷದವರೆಗಿನ ಕಾಂಪ್ಲಿಮೆಂಟರಿ ಪ್ರೊಟೆಕ್ಷನ್ ಕವರೇಜ್ ಪಡೆಯಿರಿ.

 • ಬದಲಿ ಪ್ಯಾನ್ ಕಾರ್ಡ್

  ನೀವು ತೀರ್ಥಯಾತ್ರೆಯಲ್ಲಿದ್ದಾಗ PAN ಕಾರ್ಡ್ ಕಳೆದುಹೋದರೆ ಅದರ ಬದಲಾವಣೆ ವೆಚ್ಚದ ಮೇಲೆ ಕವರೇಜ್ ಪಡೆಯಿರಿ. ನೀವು ಡಾಕ್ಯುಮೆಂಟೇಶನ್ ಪ್ರಕ್ರಿಯೆಯಲ್ಲಿ ಸಹಾಯವನ್ನು ಪಡೆಯುತ್ತೀರಿ.

 • ಟ್ರಾವೆಲ್ ಸೇಫ್ ಮೆಂಬರ್‌‌ಶಿಪ್ ಕವರೇಜ್

  CPP ಪಿಲಿಗ್ರಿಮೇಜ್ ಕವರ್ ಒಂದು ವರ್ಷದ ಟ್ರಾವೆಲ್ ಸೇಫ್ ಸದಸ್ಯತ್ವವನ್ನು ಕೂಡ ಒಳಗೊಂಡಿದೆ.

ಯಾವುದು ಕವರ್ ಆಗಿಲ್ಲ

ನೀವು ಪಾನಮತ್ತರಾಗಿರುವಾಗ ನಿಮ್ಮ ಮೌಲ್ಯಯುತ ವಸ್ತುಗಳ ನಷ್ಟವನ್ನು ಈ ಯೋಜನೆಯಡಿ ಕವರ್ ಮಾಡಲಾಗುವುದಿಲ್ಲ.

ಅಪ್ಲೈ ಮಾಡುವುದು ಹೇಗೆ

ಪ್ಲಾನಿಗೆ ಅಪ್ಲೈ ಮಾಡುವ ಹಂತಗಳು ಇಲ್ಲಿವೆ:

 • 'ಈಗ ಖರೀದಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಆನ್ಲೈನ್ ಅಪ್ಲಿಕೇಶನ್ ಫಾರಂನಲ್ಲಿ ನಿಮ್ಮ ಬೇಸಿಕ್ ವಿವರಗಳನ್ನು ಹಂಚಿಕೊಳ್ಳಿ
 • ನಿಮ್ಮ ಮೊಬೈಲ್ ನಂಬರ್‌ನಲ್ಲಿ ಪಡೆದ OTP ಯನ್ನು ನಮೂದಿಸುವ ಮೂಲಕ ನಿಮ್ಮ ಅಪ್ಲಿಕೇಶನನ್ನು ಪರಿಶೀಲಿಸಿ ಮತ್ತು ಖಚಿತಪಡಿಸಿ
 • ಕ್ರೆಡಿಟ್/ಡೆಬಿಟ್ ಕಾರ್ಡ್, UPI, ಮೊಬೈಲ್ ವಾಲೆಟ್ ಅಥವಾ ಇತರ ಯಾವುದೇ ಲಭ್ಯವಿರುವ ಆನ್ಲೈನ್ ಪಾವತಿ ವಿಧಾನದ ಮೂಲಕ ಪ್ರೀಮಿಯಂ ಪಾವತಿಸಿ
 • ಇಮೇಲ್/WhatsApp ಮೂಲಕ ನಿಮ್ಮ ಸದಸ್ಯತ್ವದ ವಿವರಗಳನ್ನು ನೀವು ಪಡೆಯುತ್ತೀರಿ

ಕ್ಲೈಮ್ ಅನ್ನು ಪ್ರೊಸೆಸ್ ಮಾಡುವುದು ಹೇಗೆ

ಕ್ಲೈಮ್ ಮಾಡಲು, ನೀವು ಈ ಕೆಳಗಿನ ವಿಧಾನಗಳ ಮೂಲಕ ವಿಮಾದಾತರನ್ನು ಸಂಪರ್ಕಿಸಬಹುದು:

ಕರೆ: 24 ಗಂಟೆಗಳ ಒಳಗೆ 1800-419-4000.
ಇಮೇಲ್: feedback@cppindia.com

ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಕ್ಲೈಮ್ ಪ್ರಕ್ರಿಯೆಗೊಳಿಸಲು ಅಗತ್ಯವಿರುವ ಡಾಕ್ಯುಮೆಂಟ್‌ಗಳು ಇಲ್ಲಿವೆ:

 • KYC ಡಾಕ್ಯುಮೆಂಟ್‌ಗಳು
 • ಟ್ರಾವೆಲ್ ಸೇಫ್ ಸದಸ್ಯತ್ವದ ಪತ್ರ

ನಮ್ಮನ್ನು ಸಂಪರ್ಕಿಸಿ

ಪಾಲಿಸಿಗೆ ಸಂಬಂಧಿಸಿದ ವಿಚಾರಣೆಗಳಿಗಾಗಿ, ದಯವಿಟ್ಟು wecareinsurance@bizsupportc.com ಗೆ ಇಮೇಲ್ ಮಾಡುವ ಮೂಲಕ ನಮಗೆ ಬರೆಯಿರಿ.

ಹಕ್ಕುತ್ಯಾಗ - ಬಜಾಜ್ ಫೈನಾನ್ಸ್ ಲಿಮಿಟೆಡ್ (BFL) ಕೇವಲ ಮೇಲಿನ ಪ್ರಾಡಕ್ಟ್‌ಗಳ ಡಿಸ್ಟ್ರಿಬ್ಯೂಟರ್ ಆಗಿದ್ದು, CPP ಅಸಿಸ್ಟೆನ್ಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (CPP) ಮಾಲೀಕತ್ವದಲ್ಲಿದೆ. ಈ ಪ್ರಾಡಕ್ಟ್‌‌ಗಳನ್ನು ನೀಡುವುದು CPP ಯ ಸಂಪೂರ್ಣ ವಿವೇಚನೆಯಾಗಿದೆ. ಈ ಪ್ರಾಡಕ್ಟ್ ಅನ್ನು CPP ಪ್ರಾಡಕ್ಟ್ ನಿಯಮ ಮತ್ತು ಷರತ್ತುಗಳಿಂದ ನಿಯಂತ್ರಿಸಲಾಗುತ್ತದೆ ಮತ್ತು BFL ವಿತರಣೆ, ಗುಣಮಟ್ಟ, ಸೇವೆಗಳು, ನಿರ್ವಹಣೆ ಮತ್ತು ಮಾರಾಟ ನಂತರದ ಯಾವುದೇ ಕ್ಲೈಮ್‌ಗಳಿಗೆ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಇದು ಇನ್ಶೂರೆನ್ಸ್ ಪ್ರಾಡಕ್ಟ್ ಅಲ್ಲ ಮತ್ತು CPP ಅಸಿಸ್ಟೆನ್ಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಇನ್ಶೂರೆನ್ಸ್ ಕಂಪನಿ ಅಲ್ಲ. ಈ ಪ್ರಾಡಕ್ಟ್ ಖರೀದಿ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಯಾವುದೇ ಥರ್ಡ್ ಪಾರ್ಟಿ ಪ್ರಾಡಕ್ಟ್‌‌ಗಳನ್ನು ಕಡ್ಡಾಯವಾಗಿ ಖರೀದಿಸಲು BFL ತನ್ನ ಯಾವುದೇ ಗ್ರಾಹಕರನ್ನು ನಿರ್ಬಂಧಿಸುವುದಿಲ್ಲ.”

ಉತ್ತಮ ಸಿಬಿಲ್ ಸ್ಕೋರ್, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?