back

ಆದ್ಯತೆಯ ಭಾಷೆ

ಆದ್ಯತೆಯ ಭಾಷೆ

ಮೇಲ್ನೋಟ

ಜೀವನದಲ್ಲಿ ಬರುವ ಅನಿರೀಕ್ಷಿತ ಘಟನೆಗಳು ಮತ್ತು ಅಪಾಯಗಳು ನಿಮ್ಮ ಕುಟುಂಬದ ಹಣಕಾಸಿನ ಭದ್ರತೆಯನ್ನು ಇಕ್ಕಟ್ಟಿನಲ್ಲಿ ತಂದು ನಿಲ್ಲಿಸುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಕುಟುಂಬವನ್ನು ಕವರ್ ಮಾಡುವ ಲೈಫ್ ಇನ್ಶೂರೆನ್ಸ್ ಯೋಜನೆಗಳ ಬಗ್ಗೆ ನೀವು ಯೋಚಿಸಿದ್ದೀರಾ? ನಿಮ್ಮ ಕುಟುಂಬವನ್ನು ಕವರ್ ಮಾಡುವ ಸರಿಯಾದ ಲೈಫ್ ಇನ್ಶೂರೆನ್ಸ್ ಕವರ್ ಬಗ್ಗೆ ತಿಳಿದುಕೊಳ್ಳಿ ಮತ್ತು ವಿಶೇಷವಾಗಿ ನಮ್ಮ ಯೋಜನೆಗಳೊಂದಿಗಿನ ಪ್ರಯೋಜನಗಳ ಸಾಲನ್ನು ಆನಂದಿಸಿ. ನಿಮ್ಮ ಅನಾರೋಗ್ಯ, ಸಾವು ಅಥವಾ ತೀವ್ರ ಅನಾರೋಗ್ಯ ಈ ರೀತಿಯ ಅನಿರೀಕ್ಷಿತ ಸಂದರ್ಭದಲ್ಲಿ ಲೈಫ್ ಇನ್ಶೂರೆನ್ಸ್ ಪಾಲಿಸಿ ನಿಮ್ಮ ಕುಟುಂಬವನ್ನು ರಕ್ಷಿಸುವ ಒಂದು ಸುರಕ್ಷಿತ ಮಾರ್ಗ. ಲೈಫ್ ಇನ್ಶೂರೆನ್ಸ್‌‌ನಲ್ಲಿ ನೀವು ಗಣನೆಗೆ ತೆಗೆದುಕೊಳ್ಳಬಹುದಾದ ನಿಮ್ಮ ಅಗತ್ಯಕ್ಕೆ ತಕ್ಕಂತಿರುವ ಆಯ್ಕೆಗಳತ್ತ ದೃಷ್ಟಿ ಹರಿಸೋಣ.

  • ಟರ್ಮ್ ಇನ್ಶೂರೆನ್ಸ್

    ಇದು ನಿಗದಿತ ಕಾಲಾವಧಿಗೆ ಹಣಕಾಸಿನ ರಕ್ಷಣೆ ನೀಡಲು ವಿನ್ಯಾಸಗೊಳಿಸಲಾದ ಸರಳ ಮತ್ತು ಅಗ್ಗದ ವಿಮೆಯಾಗಿದೆ. ನಿಮ್ಮ ಸಾವಿನ ನಂತರ ಆರ್ಥಿಕವಾಗಿ ಸ್ಥಿರವಾದ ಜೀವನವನ್ನು ನಡೆಸಲು ನಿಮ್ಮ ಕುಟುಂಬಕ್ಕೆ ಪೂರ್ಣ ಇನ್ಶೂರೆನ್ಸ್ ಮೊತ್ತವನ್ನು ನೀಡುವುದರೊಂದಿಗೆ ರಕ್ಷಣೆಯನ್ನು ನೀಡುತ್ತದೆ. ಆದರೂ, ನೀವು ಟರ್ಮ್ ಅವಧಿಯನ್ನು ಪೂರ್ತಿಗೊಳಿಸಿದ್ದರೆ, ವಿಮಾದಾರಾನಿಗೆ ಏನನ್ನೂ ಪಾವತಿಸಲಾಗುವುದಿಲ್ಲ.

  • ULIP

    ULIP ಅಥವಾ ಯುನಿಟ್ ಲಿಂಕ್ ಆದ ಇನ್ಶೂರೆನ್ಸ್ ಯೋಜನೆಯಲ್ಲಿ, ಪ್ರೀಮಿಯಂನ ಒಂದು ಭಾಗವು ಲೈಫ್ ಕವರ್‌ ನೀಡಲು ಹೋಗುತ್ತದೆ, ಉಳಿದ ಭಾಗವು ಷೇರುಗಳು ಅಥವಾ ಡೆಟ್‌‌ಗಳಲ್ಲಿ ಹೂಡಿಕೆಯಾಗುತ್ತದೆ. ULIP ನಲ್ಲಿನ ಹೂಡಿಕೆ ಭಾಗವು ಅಸ್ಥಿರ ಮಾರುಕಟ್ಟೆಯನ್ನು ಹೊಂದಿರುತ್ತದೆ.

  • ಚೈಲ್ಡ್ ಪ್ಲಾನ್‌‌ಗಳು

    ಹೆಚ್ಚುತ್ತಿರುವ ಶೈಕ್ಷಣಿಕ ವೆಚ್ಚವೂ ಪಾಲಕರನ್ನು ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದ, ನಿಮ್ಮ ಅನುಪಸ್ಥಿತಿಯಲ್ಲಿಯೂ ನಿಮ್ಮ ಮಗುವಿಗೆ ಸುರಕ್ಷಿತ ಜೀವನವನ್ನು ನೀಡಲು ಉತ್ತಮ ಚೈಲ್ಡ್ ಇನ್ಶೂರೆನ್ಸ್ ಪ್ಲಾನ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮ. ಚೈಲ್ಡ್ ಲೈಫ್ ಇನ್ಶೂರೆನ್ಸ್ ಪ್ಲಾನ್ ಪಾಲಿಸಿದಾರರ ಮರಣದ ನಂತರ ಫಲಾನುಭವಿಗೆ (ಅಂದರೆ ಮಗುವಿಗೆ) ದೊಡ್ಡ ಮೊತ್ತವನ್ನು ಒದಗಿಸುತ್ತದೆ.

  • ಪಿಂಚಣಿ ಯೋಜನೆ

    ಒಬ್ಬ ವ್ಯಕ್ತಿಗೆ ನಿವೃತ್ತ ಜೀವನವನ್ನು ಕಳೆಯಲು ಸಹಾಯ ಮಾಡಲು ಪಿಂಚಣಿದಾರರ ಇನ್ಶೂರೆನ್ಸ್ ಯೋಜನೆಗಳನ್ನು ಇನ್ಶೂರೆನ್ಸ್ ಕಂಪನಿಗಳು ಒದಗಿಸುತ್ತವೆ. ನಿವೃತ್ತಿಯ ನಂತರವೂ ಆರ್ಥಿಕವಾಗಿ ಸುರಕ್ಷಿತ ಜೀವನವನ್ನು ನಡೆಸಲು ವ್ಯಕ್ತಿಗೆ ಸಹಾಯ ಮಾಡುತ್ತದೆ. ಪಾಲಿಸಿದಾರರ ದುರದೃಷ್ಟಕರ ಮರಣದ ಸಂದರ್ಭದಲ್ಲಿ, ನಾಮಿನಿಗಳು ಪೂರ್ಣ ಪ್ರಮಾಣದ ಮೊತ್ತವನ್ನು ಪಡೆಯಬಹುದು ಅಥವಾ ಪಾಲಿಸಿಯ ಉಳಿದ ಕಾಲಾವಧಿಯವರೆಗೆ ಸಾಮಾನ್ಯ ಪಿಂಚಣಿಯನ್ನು ಪಡೆಯಬಹುದು.

  • ಈ ನಡುವೆ ಹೆಚ್ಚು ತಿಳಿಯಲು, ನೀವು ನಮ್ಮ ಈ ನಂಬರಿಗೆ 09289222406 ಕರೆಮಾಡಬಹುದು

ಫೀಚರ್‌ಗಳು ಮತ್ತು ಪ್ರಯೋಜನಗಳು

• ಪ್ರೀಮಿಯಂ ಕಡಿಮೆ ವೆಚ್ಚದಲ್ಲಿ ಲೈಫ್ ಕವರ್‌ನ ಪ್ರಯೋಜನವನ್ನು ಪಡೆಯಿರಿ
• ಪಾವತಿಯ ಆಯ್ಕೆಗಳು - ದುರದೃಷ್ಟಕರ ಸಾವು ಅಥವಾ ಮುಕ್ತಾಯದ ಸಂದರ್ಭದಲ್ಲಿ ಒಟ್ಟು ಮೊತ್ತ ಅಥವಾ ಮಾಸಿಕ ಪಾವತಿಯ ಆಯ್ಕೆಗಳಿಂದ ಆರಿಸಿಕೊಳ್ಳಿ.
• ಪಾಲಿಸಿಯ ಅವಧಿ - ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಅವಧಿಯನ್ನು 5 ರಿಂದ 30 ವರ್ಷಗಳವರೆಗೆ ಆಯ್ಕೆಮಾಡಿ.
• ಒಂದು ಪಾಲಿಸಿಯಲ್ಲಿ ಜಂಟಿ ಲೈಫ್ ಕವರೇಜ್. ನಿಮ್ಮ ಸಂಗಾತಿಯನ್ನು ಪ್ರಸ್ತುತ ಪಾಲಿಸಿಯಲ್ಲಿ ಸೇರಿಸಿಕೊಳ್ಳಿ ಅಪಘಾತದಿಂದಾದ ಅಂಗವಿಕಲತೆ, ಅನಾರೋಗ್ಯದ ಸಂದರ್ಭದಲ್ಲಿ ಆದಾಯದ ನಷ್ಟವಾದಲ್ಲಿ ಇದು ಬದಲಿ ಹಣಕಾಸಿನ ಮಾರ್ಗವಾಗುತ್ತದೆ
• ಗಂಭೀರ ಅನಾರೋಗ್ಯ – ಗಂಭೀರ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆದಲ್ಲಿ, ಪೂರ್ಣ ಮೊತ್ತ ಪಡೆದುಕೊಳ್ಳಿ
• ಹೆಚ್ಚುವರಿ ಪ್ರಯೋಜನಗಳು - ಅಪಘಾತದ ಸಾವಿನ ಸಂದರ್ಭದಲ್ಲಿ ಹೆಚ್ಚುವರಿ ಇನ್ಶೂರೆನ್ಸ್ ಮೊತ್ತ
• ಧೂಮಪಾನಿಗಳಲ್ಲದವರಿಗಾಗಿ ಆದ್ಯತೆಯ ದರಗಳು.
• ತೆರಿಗೆ ವಿನಾಯಿತಿಗಳು- ತೆರಿಗೆ ವಿನಾಯಿತಿ u/s 80C ಮತ್ತು 10(10d) ಭಾರತೀಯ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80d ಅಡಿ ವಿನಾಯಿತಿಗೆ ಅರ್ಹವಾಗುತ್ತದೆ ಹಾಗೂ ತುರ್ತು ಅನಾರೋಗ್ಯದಲ್ಲಿ ಪ್ರಯೋಜನವಾಗುವಂತೆ ಪ್ರೀಮಿಯಂ ಪಾವತಿಸಲಾಗುವುದು

ಅಪ್ಲೈ ಮಾಡುವುದು ಹೇಗೆ

ನಮ್ಮ ಸೇವೆಗಳನ್ನು ಈ ಮೊದಲು ಬಳಸಿಕೊಳ್ಳದಿದ್ದರೂ ಬಜಾಜ್ ಫಿನ್‌ಸರ್ವ್‌ನಲ್ಲಿ ಲೈಫ್ ಇನ್ಶೂರೆನ್ಸ್ ಪಾಲಿಸಿ ಪಡೆದುಕೊಳ್ಳುವುದು ಎಷ್ಟು ಸುಲಭವೆಂದು ತಿಳಿದುಕೊಂಡರೆ ನೀವು ಆಶ್ಚರ್ಯಗೊಳ್ಳುತ್ತೀರಿ. ಕೇವಲ ನಿಮ್ಮ ವಿವರಗಳನ್ನು ಈ ಪೇಜ್‌‌ನಲ್ಲಿ ಭರ್ತಿ ಮಾಡಿ, ಅಥವಾ 09289 222 406 ಕ್ಕೆ ನಮಗೆ ಮಿಸ್ ಕಾಲ್ ನೀಡಿ ಮತ್ತು ನಿಮ್ಮ ಜತೆ ನಾವು ಸಂಪರ್ಕದಲ್ಲಿರುತ್ತೇವೆ ಮತ್ತು ಪ್ರಕ್ರಿಯೆಯ ಉದ್ದಕ್ಕೂ ನಿಮ್ಮನ್ನು ಕರೆದುಕೊಳ್ಳುತ್ತೇವೆ.

ನೀವು ಖರೀದಿಸುವ ಮುನ್ನ ಪರಿಗಣಿಸಬೇಕಾದ ವಿಷಯಗಳು

ನಿಮಗೆ ಯಾವ ರೀತಿಯ ಲೈಫ್ ಇನ್ಶೂರೆನ್ಸ್ ಪ್ಲಾನ್ ಬೇಕಾಗಿದೆ, ಟರ್ಮ್ ಇನ್ಶೂರೆನ್ಸ್, ULIP, ಚೈಲ್ಡ್ ಅಥವಾ ಪೆನ್ಶನ್ ಪ್ಲಾನ್?
• ವಿಮೆ ಮಾಡುವ ಮೊತ್ತ ಮತ್ತು ಅವಧಿ ಮುಕ್ತಾಯದ ಸಮಯ ಯಾವುದು?
• ಕ್ಲೈಮ್ ಮಾಡಲು ಅನುಸರಿಸಬೇಕಾದ ವಿಧಾನಗಳು ಯಾವುವು?
• ಕ್ಲೈಮ್ ಸೆಟಲ್ಮೆಂಟ್ ಅನುಪಾತ ಎಂದರೇನು?

ಹಕ್ಕುತ್ಯಾಗ - *ಷರತ್ತುಗಳು ಅನ್ವಯ. ಬಜಾಜ್ ಫೈನಾನ್ಸ್ ಲಿಮಿಟೆಡ್ ಮಾಸ್ಟರ್ ಪಾಲಿಸಿದಾರರಾಗಿರುವ ಗ್ರೂಪ್ ಇನ್ಶೂರೆನ್ಸ್ ಯೋಜನೆಯಡಿ ಈ ಪ್ರಾಡಕ್ಟ್ ಆಫರ್ ಮಾಡಲಾಗುತ್ತದೆ. ನಮ್ಮ ಪಾಲುದಾರ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಕವರೇಜನ್ನು ಒದಗಿಸಲಾಗುತ್ತದೆ. ಬಜಾಜ್ ಫೈನಾನ್ಸ್ ಲಿಮಿಟೆಡ್ ಅಪಾಯದ ಹೊಣೆ ಹೊರುವುದಿಲ್ಲ. IRDAI ಕಾರ್ಪೊರೇಟ್ ಏಜೆನ್ಸಿ ನೋಂದಣಿ ನಂಬರ್ CA0101 ಮೇಲೆ ತಿಳಿಸಲಾದ ಪ್ರಯೋಜನಗಳು ಮತ್ತು ಪ್ರೀಮಿಯಂ ಮೊತ್ತವು ವಿಮಾದಾರರ ವಯಸ್ಸು, ಜೀವನಶೈಲಿ ಹವ್ಯಾಸಗಳು, ಆರೋಗ್ಯ ಇತ್ಯಾದಿಗಳಂತಹ ವಿವಿಧ ಅಂಶಗಳಿಗೆ ಒಳಪಟ್ಟಿರುತ್ತದೆ (ಅನ್ವಯವಾದರೆ). ವಿತರಣೆ, ಗುಣಮಟ್ಟ, ಸೇವೆಯ ಸಾಮರ್ಥ್ಯ, ನಿರ್ವಹಣೆ ಮತ್ತು ಮಾರಾಟದ ನಂತರದ ಯಾವುದೇ ಕ್ಲೈಮ್‌ಗಳಿಗೆ BFL ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಈ ಪ್ರಾಡಕ್ಟ್ ಇನ್ಶೂರೆನ್ಸ್ ಕವರೇಜನ್ನು ಒದಗಿಸುತ್ತದೆ. ಈ ಪ್ರಾಡಕ್ಟ್ ಖರೀದಿ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಯಾವುದೇ ಥರ್ಡ್ ಪಾರ್ಟಿ ಪ್ರಾಡಕ್ಟ್‌ಗಳನ್ನು ಕಡ್ಡಾಯವಾಗಿ ಖರೀದಿಸಲು BFL ತನ್ನ ಯಾವುದೇ ಗ್ರಾಹಕರನ್ನು ಒತ್ತಾಯಿಸುವುದಿಲ್ಲ.”

ಉತ್ತಮ ಸಿಬಿಲ್ ಸ್ಕೋರ್, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?