ಅಗತ್ಯವಾದ ಪೋಷಕ ಡಾಕ್ಯುಮೆಂಟ್‌ಗಳೊಂದಿಗೆ ಪೂರ್ಣಗೊಂಡ ಅಪ್ಲಿಕೇಶನನ್ನು ನಾವು ಸ್ವೀಕರಿಸಿದಲ್ಲಿ, ಈ ಕೆಳಗಿನವುಗಳು ಸಂಭವಿಸುತ್ತವೆ:
ಮೊದಲು BFL ನೀವು ಸಲ್ಲಿಸಿದ ಎಲ್ಲ ಪೇಪರ್‌ಗಳನ್ನು ಪರಿಶೀಲಿಸುತ್ತದೆ. ಈ ಎಲ್ಲವೂ ಸರಿಯಾಗಿದ್ದರೆ, ಈ ಕೆಳಗಿನ ಅಂಶಗಳ ಆಧಾರದ ಮೇಲೆ ನಿಮಗೆ ನಿರ್ದಿಷ್ಠ ಮೊತ್ತದ ಲೋನನ್ನು ಮಂಜೂರು ಮಾಡಲಾಗುವುದು, ಆ ಅಂಶಗಳು ಹೀಗಿವೆ: ನೀವು ಕೇಳಿದ ಮೊತ್ತ, ಅಡಮಾನ ಆಸ್ತಿಯ ಮೌಲ್ಯ ಮತ್ತು ನಿಮ್ಮ ಲೋನ್ ಮರುಪಾವತಿಸುವ ಸಾಮರ್ಥ್ಯ(ವಿಶ್ವಾಸಾರ್ಹತೆ). ಒಂದುವೇಳೆ (ಯಾವುದೇ ಕಾರಣಕ್ಕಾಗಿ) ನಾವು ಲೋನನ್ನು ಮಂಜೂರು ಮಾಡದಿರಲು ತೀರ್ಮಾನಿಸಿದರೆ, ನಾವದನ್ನು ನಿಮಗೆ ಆ ಕೂಡಲೇ ತಿಳಿಸುತ್ತೇವೆ,
ಮುಂದೆ, ನಮ್ಮ ಆಂತರಿಕ ನ್ಯಾಯವಾದಿಗಳು ಮತ್ತು ಆಸ್ತಿ ಪರಿಣಿತರು ಆಸ್ತಿ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸುತ್ತಾರೆ. ಆಮೇಲೆ ಅವರು ಆಸ್ತಿಯನ್ನು ಸಂಪೂರ್ಣ ತಾಂತ್ರಿಕ ಪರಿಶೀಲನೆಗೆ ಒಳಪಡಿಸಿ ಅದರ ಮೌಲ್ಯಮಾಪನ ಮಾಡುತ್ತಾರೆ.
ಈ ಎರಡೂ ಹಂತಗಳು ಮುಗಿದ ಬಳಿಕ, ಬಜಾಜ್ ಫೈನಾನ್ಸ್ ನಿಮ್ಮ ಹೋಮ್ ಲೋನಿನ ವಿತರಣೆಯನ್ನು ಆರಂಭಿಸುತ್ತದೆ.
ಸಹ-ಅರ್ಜಿದಾರರನ್ನು ಹೊಂದುವುದು ಕಡ್ಡಾಯವಲ್ಲ. ಒಂದುವೇಳೆ ಆಸ್ತಿಗೆ ಸಹ-ಮಾಲೀಕರಿದ್ದ ಸಂದರ್ಭದಲ್ಲಿ, ಅವರು ಕೂಡ ಹೋಮ್ ಲೋನ್ ಗೆ ಸಹ-ಅರ್ಜಿದಾರ ಆಗಬೇಕಾದ ಅವಶ್ಯಕತೆ ಇರುತ್ತದೆ. ಒಂದುವೇಳೆ ಆಸ್ತಿಗೆ ನೀವೇ ಏಕೈಕ ಮಾಲೀಕರಿದ್ದಲ್ಲಿ ನಿಮ್ಮ ಕುಟುಂಬದ ಯಾವುದೇ ಒಬ್ಬ ಸದಸ್ಯರು ನಿಮ್ಮ ಸಹ-ಅರ್ಜಿದಾರ ಆಗಬಹುದು.
ಒಮ್ಮೆ ನೀವು ಆಸ್ತಿಯನ್ನು ಆಯ್ಕೆ ಮಾಡಿದ ಬಳಿಕ, ನೀವು ಮನೆ/ಫ್ಲಾಟ್ಗೆ ಹೇಗೆ ಹಣ ಹೊಂದಿಸಲು ಪರಿಹಾರಗಳನ್ನು ಯೋಚಿಸಬೇಕು. ನೀವು ಈ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು:
-> ಅಪ್ಲಿಕೇಶನ್ ಫಾರಂ
-> ಪ್ರಕ್ರಿಯಾ ಶುಲ್ಕಗಳು
-> ಬೇಕಾಗುವ ಡಾಕ್ಯುಮೆಂಟ್‌ಗಳು
-> ವೈಯಕ್ತಿಕ ಚರ್ಚೆ
-> ತನಿಖಾ ಪರಿಶೀಲನೆ
-> ಲೋನಿನ ಮಂಜೂರು
-> ಲೋನಿನ ಸ್ವೀಕೃತಿ
-> ಕಾನೂನು/ ಆಸ್ತಿಯ ತೀರ್ಮಾನಿಸುವಿಕೆ
-> ಲೋನಿನ ವಿತರಣೆ
'ಲೋನಿನ ಮಂಜೂರು' ಮತ್ತು 'ಹಣದ ವಿತರಣೆ' ಇವೆರಡೂ ಬೇರೆ ಬೇರೆ ಎಂದು ನೀವು ತಿಳಿಯುವ ಅಗತ್ಯವಿದೆ. ನೀವು ಲೋನಿನ ಮಂಜೂರನ್ನು ಮತ್ತು ವಿತರಣೆಯನ್ನು ಹೇಗೆ ಪಡೆಯುವುದು ಎಂಬುದನ್ನು ನಿಮಗೆ ಅರ್ಥವಾಗುವ ಹಾಗೆ ವಿವರಿಸಲಾಗಿದೆ:
ಅಪ್ಲಿಕೇಶನ್ ಫಾರಂ:
-> ನಿಮ್ಮ ಸಾಲದಾತರು ( ಬಜಾಜ್ ಫೈನಾನ್ಸ್) ಈ ಡಾಕ್ಯುಮೆಂಟನ್ನು ನಿಮ್ಮ ಲೋನ್ ಮೊತ್ತವನ್ನು ಅನುಮೋದಿಸುವಲ್ಲಿ (ಅಥವಾ ''ಮಂಜೂರು'' ಮಾಡುವಲ್ಲಿ) ತೀರ್ಮಾನಿಸಲು ಪ್ರಧಾನ ಡಾಕ್ಯುಮೆಂಟ್ ಆಗಿ ಪರಿಗಣಿಸುತ್ತಾರೆ. ನಿಮ್ಮ ಅಪ್ಲಿಕೇಶನ್ ಫಾರಂ ಇತರ ಡಾಕ್ಯುಮೆಂಟ್ಗಳಾದ ಸಾಲಗಾರರ (ನಿಮ್ಮ) ವೈಯಕ್ತಿಕ ಮಾಹಿತಿ, ನಿಮ್ಮ ಕಾಂಟಾಕ್ಟ್ ವಿವರಗಳು, ಅಡಮಾನ ಆಸ್ತಿಯ ವಿವರಗಳು, ಆ ಆಸ್ತಿಯ ಒಟ್ಟು ಮೌಲ್ಯ, ಬೇಕಾದ ಒಟ್ಟು ಲೋನ್ ಮೊತ್ತ, ನಿಮ್ಮ ಆದಾಯಕ್ಕೆ ಸಂಬಂಧಿಸಿದ ವಿವರಗಳು, ಮತ್ತು ಕೋರಲಾದ ಲೋನ್ ಕಾಲಾವಧಿಯನ್ನು ಒಳಗೊಂಡಿರುತ್ತದೆ. ಅಷ್ಟೇ ಅಲ್ಲದೇ ಇಲ್ಲಿ ನೀವು ಪ್ರಕ್ರಿಯಾ ಶುಲ್ಕದ ಚೆಕ್ ಅನ್ನೂ ಒಳಪಡಿಸಬೇಕು.
ಪ್ರಕ್ರಿಯಾ ಶುಲ್ಕಗಳು:
-> ನಿಮಗೆ ಒಂದು ಲೋನ್ ಅಪ್ಲಿಕೇಶನ್ ಫಾರಂ ಅನ್ನು ಕೊಡಲಾಗುವುದು, ಮತ್ತು ಭರ್ತಿ ಮಾಡಲಾದ ಅಪ್ಲಿಕೇಶನ್ ಫಾರಂ ಮತ್ತು ಡಾಕ್ಯುಮೆಂಟ್‌ಗಳ ಜತೆಗೆ ಪ್ರಕ್ರಿಯಾ ಶುಲ್ಕವನ್ನು ಡೆಪಾಸಿಟ್ ಮಾಡಲು ಕೇಳಿಕೊಳ್ಳಲಾಗುವುದು.
ಡಾಕ್ಯುಮೆಂಟ್‌ಗಳು:
-> ನೀವು ಸಲ್ಲಿಸಲಾದ ಲೋನ್ ಅಪ್ಲಿಕೇಶನ್ ಡಾಕ್ಯುಮೆಂಟ್‌ಗಳನ್ನು (ವಿವರಗಳಿಗಾಗಿ 'ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು' ಪುಟವನ್ನು ನೋಡಿ) ಆಧರಿಸಿ ನೀವು ಡಾಕ್ಯುಮೆಂಟ್‌ಗಳ ಸೆಟ್ ಅನ್ನು ಸಲ್ಲಿಸಬೇಕು.
ನೀವು ಅಗತ್ಯ ಡಾಕ್ಯುಮೆಂಟ್ಗಳಿಗಾಗಿ ಇಲ್ಲಿ ನೋಡಬಹುದು, ಆದರೆ ಇದು ನಿಮ್ಮ ಗ್ರಾಹಕರ ಪ್ರೊಫೈಲಿಗೆ ಅನುಗುಣವಾಗಿ ಬದಲಾಗಬಹುದು ಎಂಬುದನ್ನು ಗಮನಿಸಿ:
-> ಐಡಿ ಪುರಾವೆ
-> ಅಡ್ರೆಸ್ ಪುರಾವೆ
-> ಆದಾಯ ಪುರಾವೆ
-> ಶೈಕ್ಷಣಿಕ ಅರ್ಹತೆಗಳ ಪುರಾವೆಗಳು
-> ವಯಸ್ಸಿನ ಪುರಾವೆ
-> ಉದ್ಯೋಗ ವಿವರಗಳು
-> ಬ್ಯಾಂಕ್ ಸ್ಟೇಟ್ಮೆಂಟ್‌ಗಳು
ನೀವು ಮುಂಚಿತವಾಗಿಯೇ ತೀರ್ಮಾನಿಸಿದ್ದಲ್ಲಿ ಆಸ್ತಿಯ ವಿವರಗಳು
ನಿಮ್ಮ ಹೊಸ ಮೇಲ್ ಅಡ್ರೆಸ್ ಮತ್ತು ನೀವು ಲೋನ್ ತೆಗೆದುಕೊಂಡ ಅಡ್ರೆಸ್ ಎರಡೂ ಒಂದೇ ಆಗಿದ್ದರೆ, ನೀವು ಅದನ್ನು ಈ ಕೆಳಗೆ ತೋರಿಸಿರುವ ಯಾವುದಾದರೂ ರೀತಿಯಲ್ಲಿ ಬದಲಾಯಿಸಬಹುದು:
ಈ ನಂಬರಿಗೆ ಕರೆ ಮಾಡುವ ಮೂಲಕ 020 3957 4151 (ಕರೆ ಶುಲ್ಕಗಳು ಅನ್ವಯ) (2 ಮೇ 2015 ದಿಂದ ಜಾರಿ)
ನಿಮ್ಮ ನೋಂದಾಯಿತ ಇಮೇಲ್ ಐಡಿಯನ್ನು ಬಳಸುವ ಮೂಲಕ ನಮ್ಮನ್ನು ಇಲ್ಲಿ ಸಂಪರ್ಕಿಸಿ: https://www.bajajfinserv.in/reach-us
ನಿಮ್ಮ ಹೊಸ ಮೇಲ್ ಅಡ್ರೆಸ್ ಮತ್ತು ನೀವು ಲೋನ್ ಪಡೆದಾಗ ಒದಗಿಸಿದ ಅಡ್ರೆಸ್ ಎರಡೂ ಬೇರೆಯಾಗಿದ್ದರೆ, ನೀವು ನಿಮ್ಮ ಮೂಲ ಪ್ರತಿ ಮತ್ತು ನಿಮ್ಮ ಹೊಸ ಅಡ್ರೆಸ್ ಪುರಾವೆಯ ಸ್ವಯಂ-ದೃಢೀಕೃತ ಪ್ರತಿ ಮತ್ತು ಫೋಟೋ ಐಡೆಂಟಿಟಿಯೊಂದಿಗೆ ನಿಮ್ಮ ಹತ್ತಿರದ ಬ್ರಾಂಚನ್ನು ವೈಯಕ್ತಿಕವಾಗಿ ಭೇಟಿಯಾಗಬೇಕು. ಡಾಕ್ಯುಮೆಂಟ್‌ಗಳ ಪಟ್ಟಿಗಾಗಿ ಒದಗಿಸಿದ ಹೊಸ ಮನೆಯ ಪರಿಶೀಲನಾ ಪುರಾವೆಯನ್ನು ನಾವು ಅಂಗೀಕರಿಸಬಹುದು.
ನಿಮ್ಮ ಮೊಬೈಲ್ ನಂಬರ್ ಮತ್ತು ಇ-ಮೇಲ್ ಅಡ್ರೆಸ್‌ಅನ್ನು ಈ ಕೆಳಗಿನ ಯಾವುದೇ ರೀತಿಯಲ್ಲಿ ನೀವು ಅಪ್‌ಡೇಟ್ ಮಾಡಬಹುದು:
ಈ ನಂಬರಿಗೆ ಕರೆ ಮಾಡುವ ಮೂಲಕ 020 3957 4151 (ಕರೆ ಶುಲ್ಕಗಳು ಅನ್ವಯ) (2 ಮೇ 2015 ದಿಂದ ಜಾರಿ)
• ನಿಮ್ಮ ನೋಂದಾಯಿತ ಇಮೇಲ್ ಐಡಿಯನ್ನು ಬಳಸುವ ಮೂಲಕ ನಮ್ಮನ್ನು ಇಲ್ಲಿ ಸಂಪರ್ಕಿಸಿ: https://www.bajajfinserv.in/reach-us
ಪ್ರೊವಿಜನಲ್ ಬಡ್ಡಿ ಪ್ರಮಾಣಪತ್ರವು ಶೆಡ್ಯೂಲ್ ಮಾಡಲಾದ EMI ಗೆ ಸಂಪೂರ್ಣ ಹಣಕಾಸು ವರ್ಷಕ್ಕೆ ಅಂದರೆ ಏಪ್ರಿಲ್ದಿಂದ ಮಾರ್ಚ್‌ವರೆಗೆ ಅಸಲು ಮೊತ್ತ ಮತ್ತು ಬಡ್ಡಿಯ ಬ್ರೇಕಪ್ ಅನ್ನು ನೀಡುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಮತ್ತು ಸೆಕ್ಷನ್ 24 ಅಡಿಯಲ್ಲಿ ತಕ್ಕ ಸಂದರ್ಭಗಳಲ್ಲಿ ಈ ಲೆಕ್ಕಾಚಾರವನ್ನು ಆದಾಯ ತೆರಿಗೆ ರೀಬೇಟ್ಗಳನ್ನು ಕ್ಲೈಮ್ ಮಾಡಲು ಬಳಸಬಹುದು. ಚಾಲ್ತಿ ಹಣಕಾಸು ವರ್ಷದಲ್ಲಿ ದಾಖಲು ಮಾಡಲಾದ ಬದಲಾವಣೆಗಳ ಜತೆಗೆ ಈ ಲೆಕ್ಕಾಚಾರಗಳು ಚಾಲ್ತಿ ಅಸಲಿನ ಬ್ಯಾಲೆನ್ಸ್, ಚಾಲ್ತಿ ROI ಮತ್ತು ಚಾಲ್ತಿ EMI ಗಳನ್ನು ಆಧರಿಸಿರುತ್ತದೆ. ಹಣಕಾಸು ವರ್ಷ ಮುಗಿಯುವ ಮೊದಲು ಆಗಬಹುದಾದ ಯಾವುದೇ ಬದಲಾವಣೆಗಳು, ಲೆಕ್ಕಾಚಾರವನ್ನು ಮತ್ತು ಅಂಕಿಅಂಶಗಳನ್ನು ಬದಲಿಸುತ್ತವೆ. ನೀವು ಇದನ್ನು ಈ ಕೆಳಗಿನ ರೀತಿಯಲ್ಲಿ ಪಡೆಯಬಹುದು
• ನಮ್ಮ ಗ್ರಾಹಕ ಪೋರ್ಟಲ್ ''ಎಕ್ಸ್‌ಪೀರಿಯ''ದಲ್ಲಿ ಲಾಗಿನ್ ಮಾಡುವ ಮೂಲಕ
• ನಮ್ಮನ್ನು ಇಲ್ಲಿ ಸಂಪರ್ಕಿಸಿ: https://www.bajajfinserv.in/reach-us
ಪ್ರೊವಿಜನಲ್ ಆದಾಯ ತೆರಿಗೆ ಪ್ರಮಾಣಪತ್ರವು ಬಡ್ಡಿದರದಲ್ಲಿ ಆಗುವ ಬದಲಾವಣೆಗಳಂಥ ಸಂದರ್ಭಗಳಲ್ಲಿ ಬದಲಾಗಬಲ್ಲದು. ಈ ಪ್ರಾಜೆಕ್ಶನನ್ನು ಹೇಗಿದೆಯೋ ಹಾಗೇ ಎಂಬುದರ ರೀತಿಯಲ್ಲಿ ಲೆಕ್ಕ ಮಾಡಲಾಗಿದೆ ಮತ್ತು ಬಡ್ಡಿಯಲ್ಲಿ, EMI ನಲ್ಲಿ, ಅಸಲು ಮೊತ್ತದಲ್ಲಿ ಮುಂದೆ ಆಗಬಹುದಾದ ಯಾವುದೇ ಬದಲಾವಣೆಗಳನ್ನು ಪರಿಗಣಿಸಲಾಗುವುದಿಲ್ಲ.
ನಿಮ್ಮ EMI ಯು ಎರಡು ಭಾಗವಾಗಿದೆ- ನೀವು ಪಡೆದ ಲೋನಿನ ಅಸಲು ಮೊತ್ತವನ್ನು ಹಿಂತಿರುಗಿಸುವುದು, ಜೊತೆಗೆ ಅದರ ಮೇಲೆ ವಿಧಿಸಿದ ಬಡ್ಡಿದರ. ಈ ಇಕ್ವೇಶನ್ನಿನಲ್ಲಿ ಮೂರು ಅಂಶಗಳಿವೆ-ನೀವು ಲೋನ್ ಪಡೆದ ಮೊತ್ತ, ಬಡ್ಡಿ ದರ ಮತ್ತು ಲೋನ್ ಅವಧಿ. ನಿಮ್ಮ EMI ಅನ್ನು ಇಳಿಸುವ ದಾರಿಗಳಿವೆ; ಒಂದು, ಬಡ್ಡಿದರಗಳಲ್ಲಿ ಇಳಿಕೆಯಾದರೆ ಅದು ಸಹಜವಾಗಿ ಕಡಿಮೆಯಾಗುತ್ತದೆ, ಅಥವಾ ಒಂದುವೇಳೆ ನೀವು ಪಾವತಿಸಬೇಕಾದ ಮೊತ್ತಕ್ಕಿಂತ ಹೆಚ್ಚು ಪಾವತಿಸಿದಾಗ ('ಭಾಗಶಃ ಮುಂಪಾವತಿ' ಎಂದು ಕರೆಯಲಾಗುತ್ತದೆ) ಕೂಡ ಕಡಿಮೆಯಾಗುತ್ತದೆ.
ಇದನ್ನು ಮಾಡಲು ಎರಡು ಮಾರ್ಗಗಳಿವೆ:
• ಇಲೆಕ್ಟ್ರಾನಿಕ್ ಕ್ಲಿಯರಿಂಗ್ ಸರ್ವಿಸ್ (ECS) ಒಂದು ಸುಲಭವಾದ ಮತ್ತು ಅನುಕೂಲಕರವಾದ ಆಯ್ಕೆಯಾಗಿದ್ದು, ಬ್ಯಾಂಕ್ ಅಕೌಂಟನ್ನು ಹೊಂದಿರುವವರಿಗೆ ವಿಶೇಷವಾಗಿ ಲಭ್ಯವಿದೆ. ನಿಮ್ಮ EMI ಗಳು ಪ್ರತಿ ತಿಂಗಳು ನಿರ್ದಿಷ್ಠ ದಿನಾಂಕದಂದು ನಿಮ್ಮ ಅಕೌಂಟಿನಿಂದ ತಾನಾಗಿಯೇ ಪಾವತಿಯಾಗುತ್ತವೆ.
• ಬಜಾಜ್ ಫೈನಾನ್ಸ್ನಲ್ಲಿ ನೀವು ಯಾವುದೇ ಬ್ಯಾಂಕಿನ ಹೊಸತಾದ ಮುಂದಿನ ದಿನಾಂಕದ ಚೆಕ್ಗಳನ್ನೂ (PDC ಗಳು) ಮುಂಚಿತವಾಗಿಯೇ ಸಲ್ಲಿಸಲು ಆಯ್ಕೆ ಮಾಡಬಹುದು. ಇದು ECS ಅಲ್ಲದ ಜಾಗಗಳಲ್ಲಿನ ಗ್ರಾಹಕರಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂಬುದನ್ನು ಗಮನಿಸಿ.
• ECS ಆದ್ಯತೆಯ ಮಾದರಿಯಾಗಿದೆ, ಇದು ತ್ವರಿತವಾಗಿದೆ ಮತ್ತು ಯಾವ ತಪ್ಪುಗಳಿಗೆ ಎಡೆಯಿಲ್ಲ. ಅಲ್ಲದೇ EMI ಬದಲಾದಾಗ ಅಥವಾ ಮುಗಿದು ಹೋದಾಗ PDC ಅನ್ನು ಬದಲಾಯಿಸುವ ಕಷ್ಟವಿಲ್ಲ.
ಬಡ್ಡಿದರಗಳಲ್ಲಿ ಅನಿರೀಕ್ಷಿತ ಏರಿಕೆಯಾದಾಗ, ಬಜಾಜ್ ಫೈನಾನ್ಸ್ ತನ್ನ ಸಾಧ್ಯ ಪರಿಮಿತಿಗಳಲ್ಲಿ ನಿಮ್ಮ ಲೋನ್ ಕಾಲಾವಧಿಗಳನ್ನು ಹೆಚ್ಚಿಸುವ ಮೂಲಕ ನಿಮಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತದೆ. ಒಂದು ವೇಳೆ ಇದು ಸದ್ಯದ EMI ಗಳ ಒಳಗೆ ಬಡ್ಡಿಯನ್ನು ಕವರ್ ಮಾಡುವ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ- ನಾವು EMI ಅನ್ನು ಹೆಚ್ಚಿಸಬೇಕಾಗುತ್ತದೆ. ಇನ್ನೊಂದು ಪರಿಹಾರ- ಬಡ್ಡಿ ಮೊತ್ತವನ್ನು ಕಡಿಮೆ ಮಾಡಲು ನಿಮ್ಮ ಹತ್ತಿರದ ಬಜಾಜ್ ಫೈನಾನ್ಸ್ ಬ್ರಾಂಚ್ನಲ್ಲಿ ಭಾಗಶಃ ಮುಂಪಾವತಿಯನ್ನು ನೀವು ಮಾಡಬಹುದು. ಅದಕ್ಕೆ ಬದಲಾಗಿ, ನೀವು ಎಕ್ಸ್‌ಪೀರಿಯ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಭಾಗಶಃ ಮುಂಪಾವತಿಮಾಡಲು ಆಯ್ಕೆ ಮಾಡಬಹುದು.
ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೂಲಕ (ECS), ಮುಂದಿನ ದಿನಾಂಕದ ಚೆಕ್ ನೀಡುವ ಮೂಲಕ ಅಥವಾ ನೇರ ಪಾವತಿ ಮಾಡುವ ಮೂಲಕ EMI ಪಾವತಿ ಮಾಡುವ ಆಯ್ಕೆಯನ್ನು ಮಾಡಿಕೊಳ್ಳಬಹುದು.
• ECS ಆಯ್ಕೆಯೊಂದಿಗೆ ಹೋದಾಗ, ನೀವು ಮುಂದಿನ ತಿಂಗಳಿಂದ ಬದಲಾದ ಮೊತ್ತವನ್ನು ಪಾವತಿಸಬೇಕು; ಚಾಲ್ತಿ ತಿಂಗಳಲ್ಲಿ ವ್ಯತ್ಯಾಸದ ಮೊತ್ತವನ್ನು ಬೇರೆಯಾಗಿ ನೀವು ಪಾವತಿಸಬೇಕಾಗುತ್ತದೆ,.
• ನೀವು PDC ಗಳನ್ನು ಆಯ್ಕೆ ಮಾಡಿದಾಗ, ನೀವು ನಿಮ್ಮ ಹಳೆಯ ಚೆಕ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗುತ್ತದೆ.
ನಿಮ್ಮ ಪಾವತಿ ಪ್ರಕಾರವು ಯಾವುದೇ ಇರಲಿ, EMI ಗಳನ್ನು ಗಡುವು ದಿನಾಂಕದ ಒಳಗೇ ಪಾವತಿಸಬೇಕು.
ಲೋನ್ ಅವಧಿಯಲ್ಲಿ ನೀವು EMI ಮೊತ್ತವನ್ನು ಹೆಚ್ಚಿಸಲು ಆಯ್ಕೆ ಮಾಡಬಹುದು. ಇದರ ಲಾಭ ಪಡೆದುಕೊಂಡು, ನೀವು ಲೋನ್ ಕಾಲಾವಧಿಯನ್ನು ಕಡಿಮೆ ಮಾಡಬಹುದು ಮತ್ತು ಲೋನ್ ಮೇಲೆ ಸಾಕಷ್ಟು ಹಣವನ್ನು ಉಳಿಸಬಹುದು. ಈ ಆಯ್ಕೆಯನ್ನು ಪಡೆಯಲು:
• ''ಎಕ್ಸ್‌ಪೀರಿಯ'' ಪೋರ್ಟಲಿನಲ್ಲಿ ಲಾಗಿನ್ ಮಾಡಿ ಅಥವಾ
• ನಮ್ಮನ್ನು ಇಲ್ಲಿ ಸಂಪರ್ಕಿಸಿ: https://www.bajajfinserv.in/reach-us
ಬಡ್ಡಿದರಗಳು ಯಾವಾಗ ಏರುತ್ತವೆಯೋ, EMI ನ ಬಡ್ಡಿ ಅಡಕವೂ ಏರುತ್ತದೆ. ಹಿಂದಿನ ವಿಭಾಗದಲ್ಲಿ ಹೇಳಿದಂತೆ, EMI ಅನ್ನು ಕಾನ್ಸ್ಟಂಟ್ ಆಗಿ ಇಡಲಾಗುತ್ತದೆ, ಇದರಿಂದಾಗಿ ಅಸಲಿನ ಅಡಕವು ಕಡಿಮೆಯಾಗುತ್ತದೆ. ಒಂದುವೇಳೆ ದರಗಳು ಸತತವಾಗಿ ಏರಿಕೆಯಾದರೆ, EMI ಗಿಂತ ಬಡ್ಡಿ ಅಡಕವೇ ಹೆಚ್ಚಾಗುವ ಸಂದರ್ಭ ಬರಬಹುದು. ಅಂತಹ ಸಂದರ್ಭದಲ್ಲಿ ಅಸಲು ಅಡಕವು ನೆಗಟಿವ್ ಫಿಗರನ್ನು ನೀಡುತ್ತದೆ. ಇದರಿಂದಾಗಿ, ಬಾಕಿ ಬ್ಯಾಲೆನ್ಸ್ ಮೊತ್ತವು ಅಸಲು ಅಡಕದ ಜತೆಗೆ ಆರಂಭದ ಅಸಲಿನಿಂದ ಕಡಿಮೆಯಾಗುವುದರ ಬದಲಾಗಿ, ನೆಗಟಿವ್ ಅಸಲು ಅಡಕದೊಂದಿಗೆ ಏರಿಕೆಯಾಗುತ್ತದೆ. ಇದನ್ನು ಸಾಮಾನ್ಯವಾಗಿ ನೆಗಟಿವ್ ಅಮೊರ್ಟೈಸೇಶನ್ ಎಂದು ಕರೆಯುತ್ತಾರೆ.
ಯಾವಾಗ ನಿಯಮಿತ ಪಾವತಿಗಳು ಬಡ್ಡಿ ಅಡಕವನ್ನು ಕವರ್ ಮಾಡಲು ಸಾಕಾಗುವುದಿಲ್ಲವೋ, ಅಮೊರ್ಟೈಸೇಶನ್ ನೆಗೆಟಿವ್ ಇರುವ ಲೋನ್ ಮರುಪಾವತಿ ಆಗುವುದಿಲ್ಲ. ಪಾವತಿಯಾಗದ ಬಡ್ಡಿಯು ಅಸಲಿಗೆ ಸೇರುತ್ತದೆ ಮತ್ತು ಅದನ್ನು ಹೆಚ್ಚಿಸುತ್ತದೆ. ಯಾವಾಗ ಬಡ್ಡಿಯು ಇಳಿಮುಖ ಕಾಣುತ್ತದೆಯೋ ಆಗ ಈ ಪರಿಸ್ಥಿತಿಯು ತಿರುವಾಗುತ್ತದೆ. ಗ್ರಾಹಕರು ಭಾಗಶಃ ಮುಂಪಾವತಿಯನ್ನು ಮಾಡುತ್ತಾರೆ ಅಥವಾ EMI ಅನ್ನು ಹೆಚ್ಚಿಸುತ್ತಾರೆ.
ಬದಲಾಗುವ ದರದ ಹೋಮ್ ಲೋನ್ ಸಂದರ್ಭದಲ್ಲಿ ಬದಲಾವಣೆಗೆ ಒಳಪಟ್ಟ ಬಡ್ಡಿದರದ ಅಡಕಗಳ ಆಧಾರದ ಮೇಲೆ ಬಡ್ಡಿದರವನ್ನು ಲೆಕ್ಕಹಾಕಲಾಗುತ್ತದೆ. ದರಗಳು ಬದಲಾದಾಗ ಈ ಕೆಳಗಿನ ಬದಲಾವಣೆಗಳನ್ನು ಲೋನಿಗೆ ಅನ್ವಯಿಸಬಹುದು:
•ಲೋನಿನ ಅವಧಿಯನ್ನು ಹಿರಿದಾಗಿಸಲಾಗುತ್ತದೆ (ದರಗಳಲ್ಲಿ ಏರಿಕೆಯಾದಾಗ) ಅಥವಾ ಕಿರಿದಾಗಿಸಲಾಗುತ್ತದೆ (ದರಗಳಲ್ಲಿ ಇಳಿಕೆಯಾದಾಗ).
•ಕಂತಿನ (EMI ) ಮೊತ್ತವನ್ನು ರಿಸೆಟ್ ಮಾಡಲಾಗಿದೆ (ದರಗಳಲ್ಲಿ ಏರಿಕೆಯಾದರೆ ಹೆಚ್ಚಾಗುತ್ತದೆ ಮತ್ತು ದರಗಳಲ್ಲಿ ಇಳಿಕೆಯಾದರೆ ಕಡಿಮೆಯಾಗುತ್ತದೆ).
•ಸಾಮಾನ್ಯವಾಗಿ, ಸ್ವ-ಉದ್ಯೋಗಿ ಗ್ರಾಹಕರು PDC ಗಳನ್ನು ನೀಡುತ್ತಾರೆ ಮತ್ತು ದರಗಳಲ್ಲಿ ಆಗುವ ಪ್ರತಿ ಬದಲಾವಣೆಗಾಗಿ ಅವನ್ನು ಬದಲಾಯಿಸುವುದು ಕಷ್ಟವಾದುದು, ಆದ್ದರಿಂದ ಹೋಮ್ ಲೋನಿನ ಅವಧಿಯನ್ನು ವಿಸ್ತರಿಸಲಾಗುತ್ತದೆ. ಆದರೆ ನಿರ್ಮಾಣ ಹಂತದಲ್ಲಿರುವ ಆಸ್ತಿಗಳ ಸಂದರ್ಭದಲ್ಲಿ, EMI ಮುಂಚಿತ ಮೊತ್ತವನ್ನು ಡಿಫಾಲ್ಟ್ ಆಗಿ ಹೆಚ್ಚಿಸಲಾಗುವುದು.
ಸಾಮಾನ್ಯವಾಗಿ, ಬಜಾಜ್ ಫಿನ್ಸರ್ವ್ನೆಗಟಿವ್ ಆಗಿ ಅಮೊರ್ಟೈಸ್ ಆಗುವ ಲೋನ್‌ಗಳನ್ನು ಅನುಮತಿಸುವುದಿಲ್ಲ ಉದಾ: ಹೋಮ್ ಲೋನಿನ ಬಡ್ಡಿ ಅಡಕಗಳಿಗೆ EMI ಹೊಂದದೇ ಇರುವುದು. ಹೋಮ್ ಲೋನಿನ EMI ಬಡ್ಡಿಯ ಅಡಕಗಳಿಗಿಂತ ಕಡಿಮೆಯಾದಾಗ ಸ್ವ-ಉದ್ಯೋಗಿ ಗ್ರಾಹಕರಿಗೆ ತಕ್ಷಣ ತಿಳಿಸಲಾಗುತ್ತದೆ ಮತ್ತು ಈ ಕೆಳಗಿನ ಪರಿಹಾರೋಪಾಯಗಳನ್ನು ಒದಗಿಸಲಾಗುತ್ತದೆ:
•ಲೋನಿನ ಉಳಿದ ಕಾಲಾವಧಿಗೆ ತಕ್ಕ ಹಾಗೆ ಹೊಂದಿಸಲು EMI ಅನ್ನು ಬದಲಾಯಿಸಿ.
•ಅಸಲಿನ ಲಂಪ್ ಸಮ್ ಭಾಗಶಃ ಮುಂಪಾವತಿಯನ್ನು ಪರಿಗಣಿಸುವುದು
•ಗ್ರಾಹಕರ ಅನುಕೂಲದ ಆಧಾರದ ಮೇಲೆ ಈ ಎರಡರ ಸಂಯೋಗದಿಂದ ಗ್ರಾಹಕರು ಈ ಮೇಲಿನ ಯಾವುದಾದರೂ ಒಂದು ಆಯ್ಕೆಯನ್ನು ಆರಿಸಬಹುದು. ಹೋಮ್ ಲೋನಿನ ಬ್ಯಾಲೆನ್ಸ್ ಕಾಲಾವಧಿಗೆ ತಾಳೆ ಮಾಡಲು EMI ಅನ್ನು ಬದಲಾಯಿಸುವುದು ಡಿಫಾಲ್ಟ್ ಆಯ್ಕೆಯಾಗಿರುತ್ತದೆ.
ಯಾವುದೇ ಸಮಯದಲ್ಲಿ ಬಡ್ಡಿ ಅಡಕವು EMI ಮೊತ್ತದ 85% ಅನ್ನು ಮೀರಿದಾಗ, ಅದು ಗ್ರಾಹಕರಿಗೆ ಎಚ್ಚರಿಕೆ ಗಂಟೆಯಾಗುತ್ತದೆ. ಇದರಿಂದಾಗಿ ಬಡ್ಡಿದರಗಳಲ್ಲಿ ಆಗುವ ಬದಲಾವಣೆಗಳು ಯಾವುದೇ ಅನಾನುಕೂಲತೆಯನ್ನು ಆಗದಂತೆ ಖಚಿತಪಡಿಸುತ್ತದೆ.
ಆಂತರಿಕ FRR ಬೆಂಚ್‌ಮಾರ್ಕ್ ರೆಫರೆನ್ಸ್ ದರವಾಗಿದೆ. ಇದನ್ನು ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಕಂಪನಿಯ ಫಂಡ್ ವೆಚ್ಚಗಳ ಆಧಾರದ ಮೇಲೆ ತೀರ್ಮಾನಿಸಲಾಗುತ್ತದೆ. ಈ ಬದಲಾವಣೆಗಳು ಹಲವು ಹೊರಗಣ ಅಂಶಗಳನ್ನು ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತವೆ.
ರಿ-ಪ್ರೈಸಿಂಗ್ ಪಾಲಿಸಿ ಪ್ರಕಾರ, ಹೋಮ್ ಲೋನ್ ಬಡ್ಡಿದರಗಳು ಅನ್ನು ಪ್ರತಿ 2 ತಿಂಗಳಿಗೊಮ್ಮೆ ರಿವ್ಯೂ ಮಾಡಲಾಗುವುದು ಮತ್ತು ಅವುಗಳನ್ನು ಬದಲಾಯಿಸುವುದಾ ಅಥವಾ ಹಾಗೇ ಉಳಿಸಿಕೊಳ್ಳುವುದಾ ಎಂಬುದರ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು.
ಒಂದು ಸೌಜನ್ಯಯುತ ನಡವಳಿಕೆಯಾಗಿ ಮತ್ತು ನಮ್ಮ ಈಗಿನ ಗೌರವಾನ್ವಿತ ಸ್ವ-ಉದ್ಯೋಗಿ ಗ್ರಾಹಕರೊಂದಿಗೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು, ನಮ್ಮ ಪ್ರೊ-ಆ್ಯಕ್ಟಿವ್ ಇಳಿಮುಖ ರಿ-ಪ್ರೈಸಿಂಗ್ ಸ್ಟ್ರ್ಯಾಟಜಿಯ ಮೂಲಕ, ನಮ್ಮ ಯಾವುದೇ ಈಗಿನ ಗ್ರಾಹಕರು 100 BPS ಮತ್ತು ಅದಕ್ಕಿಂತ ಹೆಚ್ಚು ಇರಬಾರದು ಮತ್ತು ಕೊನೆಯ 3 ತಿಂಗಳ ಸರಾಸರಿ ಸೋರ್ಸಿಂಗ್ ದರಕ್ಕಿಂತ ಹೆಚ್ಚು ಇರಬಾರದು ಎಂಬುದನ್ನು ಖಚಿತಪಡಿಸಲು ಅವರಿಗಾಗಿ ಬಡ್ಡಿದರದ ಇಳಿಮುಖ ರಿ-ಪ್ರೈಸಿಂಗ್ ಅನ್ನು ಮಾಡುತ್ತೇವೆ. ಒಂದುವೇಳೆ ಗ್ರಾಹಕರ ಕೊನೆಯ 3 ತಿಂಗಳ ಸರಾಸರಿ ಸೋರ್ಸಿಂಗ್ ದರ
ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಮಂಜೂರಾದ ಹೋಮ್ ಲೋನಿನ ಮಂಜೂರು ನಮ್ಮಿಂದ ಕಂತುಗಳಲ್ಲಿ ವಿತರಣೆ ಆಗುತ್ತದೆ. ಈ ಕಂತುಗಳಲ್ಲಾಗುವ ವಿತರಣೆಗಳನ್ನು ಭಾಗಶಃ/ ಮುಂದಿನ ವಿತರಣೆ ಎಂದು ಕರೆಯಲಾಗುತ್ತದೆ. ಭಾಗಶಃ ವಿತರಣೆಗಾಗಿ ನೀವು ಬಜಾಜ್ ಫಿನ್‌ಸರ್ವ್‌ಗೆ ಆನ್ಲೈನ್ ಕೋರಿಕೆಯನ್ನು ಸಲ್ಲಿಸಬೇಕು.
ಬಜಾಜ್ ಫೈನಾನ್ಸ್ ತೆಗೆದುಕೊಳ್ಳುವ ಸಮಯವು ನಿಮ್ಮ ಆಸ್ತಿಯು ಯಾವ ಕೆಟಗರಿಯಲ್ಲಿ ಬರುತ್ತದೆಯೋ ಎಂಬುದನ್ನು ಅವಲಂಬಿಸಿರುತ್ತದೆ. ನಾವು ಪ್ರತಿಯೊಂದು ಆಸ್ತಿಯನ್ನು APF (ಅನುಮೋದಿತ ಪ್ರಾಜೆಕ್ಟ್ ಸೌಲಭ್ಯ) ಮತ್ತು APF ಅಲ್ಲದ ಎಂದು ಎರಡು ಕೆಟಗರಿಗಳಲ್ಲಿ ವಿಂಗಡಿಸುತ್ತೇವೆ. ಭಾಗಶಃ ವಿತರಣೆಯ ಪ್ರಕ್ರಿಯೆಗಾಗಿ ತೆಗೆದುಕೊಳ್ಳಲಾಗುವ ಸಮಯ
ವಿತರಣೆಯು:
4 ಕೆಲಸದ ದಿನಗಳು - ಒಂದು ವೇಳೆ ಆಸ್ತಿಯು ಅನುಮೋದಿತ ಪ್ರಾಜೆಕ್ಟ್ ಸೌಲಭ್ಯದ ಭಾಗವಾಗಿದ್ದಲ್ಲಿ
7 ಕೆಲಸದ ದಿನಗಳು - ಒಂದು ವೇಳೆ ಆಸ್ತಿಯು ಅನುಮೋದಿತ ಪ್ರಾಜೆಕ್ಟ್ ಸೌಲಭ್ಯದ ಭಾಗವಾಗದೇ ಇದ್ದಲ್ಲಿ.
ಈ ಮುಂದಿನ ಡಾಕ್ಯುಮೆಂಟ್‌ಗಳ ಜೊತೆಗೆ ನೀವು ಬಜಾಜ್ ಫಿನ್ಸರ್ವ್ನ ಭಾಗಶಃ ವಿತರಣೆಗಾಗಿ ನೀವು ಆನ್ಲೈನ್ ವಿನಂತಿಯನ್ನು ಸಲ್ಲಿಸುವ ಅಗತ್ಯವಿರುತ್ತದೆ.
ಬಿಲ್ಡರ್ ಅವರಿಂದ ಡಿಮ್ಯಾಂಡ್ ಲೆಟರ್‌ನ ಸ್ಕ್ಯಾನ್ ಮಾಡಿದ ಪ್ರತಿ.
ಡೆವೆಲಪರ್ ಅವರಿಗೆ ಮಾಡಿದ ಕೊನೆಯ ಪಾವತಿಯ ರಶೀದಿ.
ಇಲ್ಲ, ಲೋನನ್ನು ಫೋರ್‌ಕ್ಲೋಸರ್ ಮಾಡಿದಾಗ ನಿಮ್ಮ CIBIL ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಒಮ್ಮೆ ಲೋನನ್ನು ಫೋರ್‌ಕ್ಲೋಸ್ ಮಾಡಿದಾಗ ಅದನ್ನು ಕ್ಲೋಸ್ ಮಾಡಲಾಗಿದೆ ಎಂದು CIBIL ಗೆ ವರದಿ ನೀಡಲಾಗುತ್ತದೆ ಮತ್ತು ನಿಮ್ಮ CIBIL ಸ್ಕೋರ್ ಮೇಲೆ ಯಾವ ಪರಿಣಾಮ ಬೀರುವುದಿಲ್ಲ.
ಪೂರ್ವ-ಇಎಂಐನ ಬಡ್ಡಿಯೆಂದರೆ ಬಜಾಜ್ ಹಣಕಾಸಿನಿಂದ ನೀವು ಪಡೆದ ಸಾಲದ ಮೇಲಿನ ಬಡ್ಡಿಗೆ ಪಾವತಿಸಬೇಕಾದ ಬಡ್ಡಿಯಾಗಿದೆ. ಪ್ರತಿ ವಿತರಣೆಯ ದಿನಾಂಕದಿಂದ ಆರಂಭವಾಗಿ, EMI ಪಾವತಿಗಳು ಪ್ರಾರಂಭವಾಗುವವರೆಗೆ ನೀವು ಪ್ರತಿ ತಿಂಗಳು ಪಾವತಿಸಬಹುದು."
ಫೋರ್‌ಕ್ಲೋಸರ್ ಸ್ಟೇಟ್ಮೆಂಟ್ ವಿತರಿಸಲು 12 ಕೆಲಸದ ದಿನಗಳ TAT ಬೇಕಾಗುತ್ತವೆ.
ಅಂತಹ ವಿಷಯಗಳಿಗೆ ನೀವು ಈ ಕೆಳಗೆ ಕೊಡಲಾದ ಸಂಬಂಧಿಸಿದ ವ್ಯಕ್ತಿಗಳನ್ನು ಸಂಪರ್ಕಿಸಬೇಕು:
ಉತ್ಪನ್ನ | ಕಾಂಟಾಕ್ಟ್ ಪರ್ಸನ್ | ಮೊಬೈಲ್ ನಂಬರ್ | ಇಮೇಲ್ ಐಡಿ |
---|---|---|---|
ಹೋಮ್ ಲೋನ್ (ವಾಯುವ್ಯ) | ಜಸ್ಪ್ರೀತ್ ಚಡ್ಡಾ | 9168360494 | jaspreet.chadha@bajajfinserv.in |
ಹೋಮ್ ಲೋನ್ (ಆಗ್ನೇಯ) | ಫ್ರಾನ್ಸಿಸ್ ಜೋಬಾಯ್ | 9962111775 | francis.jobai@bajajfinserv.in |
ಗ್ರಾಮೀಣ ಲೋನ್ | ಕುಲದೀಪ್ ಲೋರಿ | 7722006833 | kuldeep.lowry@bajajfinserv.in |
ಆಸ್ತಿ ಮೇಲಿನ ಲೋನ್ | ಪಂಕಜ್ ಗುಪ್ತಾ | 7757001144 | pankaj.gupta@bajajfinserv.in |
ಲೀಸ್ ಬಾಡಿಗೆ ರಿಯಾಯಿತಿ | ವಿಪಿನ್ ಆರೋರಾ | 9765494858 | vipin.arora@bajajfinserv.in |
ಡೆವಲಪರ್ ಫೈನಾನ್ಸ್ | ದುಶ್ಯಂತ್ ಪೋದ್ದಾರ್ | 9920090440 | dushyant.poddar@bajajfinserv.in |
ವೃತ್ತಿಪರ ಲೋನ್‌ಗಳು | ನೀರವ್ ಕಪಾಡಿಯಾ | 9642722000 | nirav.kapadia@bajajfinserv.in |
ಹೋಮ್ ಲೋನ್ ಅಪ್ಲಿಕೇಶನನ್ನು ಪ್ರಕ್ರಿಯೆಗೊಳಿಸಲು ಸಾಲದಾತರು ತೆಗೆದುಕೊಳ್ಳುವ ಶುಲ್ಕವನ್ನು ಮಾರ್ಟ್‌ಗೇಜ್ ಒರಿಜಿನೇಶನ್ ಶುಲ್ಕ ಎಂದು ಕರೆಯಲಾಗುತ್ತದೆ. ಸಾಲದಾತರು ನಿಮ್ಮ ಹೋಮ್ ಲೋನ್ ಅಪ್ಲಿಕೇಶನನ್ನು ಸಲೀಸಾಗಿ ಮತ್ತು ಸಮಯಕ್ಕೆ ಸರಿಯಾಗಿ ಪ್ರಕ್ರಿಯೆಗೊಳಿಸುವುದನ್ನು ಅದು ಖಚಿತಪಡಿಸುತ್ತದೆ. ನೀವು ಮಾರ್ಟ್‌ಗೇಜ್ ಒರಿಜಿನೇಶನ್ ಶುಲ್ಕವನ್ನು ನಿಮ್ಮ ಹೋಮ್ ಲೋನ್ ಸಾಲದಾತರಿಗೆ ಪಾವತಿಸಿದಾಗ, ನಿಮಗೆ ಈ ಕೆಳಗಿನ ಪ್ರಯೋಜನಗಳು ಸಿಗುತ್ತವೆ:
• ಹೋಮ್ ಲೋನಿನ ಅನುಮೋದನೆ ಮೇಲೆ ಮಂಜೂರು ಪತ್ರದ ಸಾಫ್ಟ್ ಕಾಪಿಯನ್ನು ಹಂಚಿಕೊಳ್ಳಬೇಕು (60 ದಿನಗಳಿಗೆ ಮಾನ್ಯ)
• ವಿತರಣೆ ಆಗುವವರೆಗೆ, ಲೋನ್ ಅಪ್ಲಿಕೇಶನ್ ವಿಧಾನದಲ್ಲಿ ನಿಮಗೆ ಸಹಾಯ ಮಾಡಲು ಮೀಸಲಿಟ್ಟ ಒಬ್ಬ ರಿಲೇಶನ್‌ಶಿಪ್ ಮ್ಯಾನೇಜರ್ ಇರುತ್ತಾರೆ
ಉತ್ಪನ್ನ | ಕಾಂಟಾಕ್ಟ್ ಪರ್ಸನ್ | ಮೊಬೈಲ್ ನಂಬರ್ | ಇಮೇಲ್ ಐಡಿ |
---|---|---|---|
ಹೋಮ್ ಲೋನ್ (ವಾಯುವ್ಯ) | ಜಸ್ಪ್ರೀತ್ ಚಡ್ಡಾ | 9168360494 | jaspreet.chadha@bajajfinserv.in |
ಹೋಮ್ ಲೋನ್ (ಆಗ್ನೇಯ) | ಫ್ರಾನ್ಸಿಸ್ ಜೋಬಾಯ್ | 9962111775 | francis.jobai@bajajfinserv.in |
ಗ್ರಾಮೀಣ ಲೋನ್ | ಕುಲದೀಪ್ ಲೋರಿ | 7722006833 | kuldeep.lowry@bajajfinserv.in |
ಆಸ್ತಿ ಮೇಲಿನ ಲೋನ್ | ಪಂಕಜ್ ಗುಪ್ತಾ | 7757001144 | pankaj.gupta@bajajfinserv.in |
ಲೀಸ್ ಬಾಡಿಗೆ ರಿಯಾಯಿತಿ | ವಿಪಿನ್ ಆರೋರಾ | 9765494858 | vipin.arora@bajajfinserv.in |
ಡೆವಲಪರ್ ಫೈನಾನ್ಸ್ | ದುಶ್ಯಂತ್ ಪೋದ್ದಾರ್ | 9920090440 | dushyant.poddar@bajajfinserv.in |
ವೃತ್ತಿಪರ ಲೋನ್‌ಗಳು | ನೀರವ್ ಕಪಾಡಿಯಾ | 9642722000 | nirav.kapadia@bajajfinserv.in |
"ರೆಪೊ" ಎಂದರೆ ಮರು ಖರೀದಿಯ ಆಯ್ಕೆ ಅಥವಾ ಅಗ್ರಿಮೆಂಟ್. ಭಾರತೀಯ ರಿಸರ್ವ್ ಬ್ಯಾಂಕ್ (RBI) ವಾಣಿಜ್ಯ ಹಣಕಾಸಿನ ಸಂಸ್ಥೆಗಳಿಗೆ ಈ ದರದಲ್ಲಿ ಸಾಲವನ್ನು ನೀಡುತ್ತದೆ, ಈಗಿರುವ ನೀತಿಗಳ ಪ್ರಕಾರ ಇದು ಬದಲಾವಣೆಗೆ ಒಳಪಟ್ಟಿರುತ್ತದೆ. ರೆಪೊ ದರದಲ್ಲಿನ ಹೆಚ್ಚಳದೊಂದಿಗೆ, ವಾಣಿಜ್ಯ ಬ್ಯಾಂಕುಗಳ ಕ್ರೆಡಿಟ್ ವೆಚ್ಚ ಹೆಚ್ಚಳವಾಗುತ್ತದೆ, ಹೀಗಾಗಿ ಅವರಿಗೆ ಲೋನ್ ದುಬಾರಿಯಾಗುತ್ತವೆ. ಇದು ಅವರ ಸಾಲ ಪಡೆಯುವ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ ಮತ್ತು ಚಿಲ್ಲರೆ ಸಾಲಗಾರರಿಗೆ ವಿವಿಧ ಸಾಲಗಳು ಮತ್ತು ಮುಂಗಡಗಳಿಗಾಗಿ ಬಡ್ಡಿಯ ದರವನ್ನು ಹೆಚ್ಚಿಸಲು ಪ್ರೇರೇಪಿಸುತ್ತದೆ ಮತ್ತು ಇದಕ್ಕೆ ತದ್ವಿರುದ್ಧವಾಗಿ ಕಡಿಮೆಯಾಗುತ್ತದೆ.
*T&C ಅನ್ವಯ ಮಾಡಲಾಗಿದೆ
ಬಜಾಜ್ ಫಿನ್‌ಸರ್ವ್ ಆಫರ್ ಮಾಡುವ ಸಾಲದ ಅಂತಿಮ ದರವನ್ನು, ಮಾರ್ಕೆಟ್ ರೆಪ್ಯುಟೇಶನ್, ರೆಪೊ ದರ, ಬಡ್ಡಿ, ಕ್ರೆಡಿಟ್ ಮತ್ತು ಸಂಬಂಧಿತ ಬಿಸಿನೆಸ್ ಸೆಗ್ಮೆಂಟಿನಲ್ಲಿನ ಡಿಫಾಲ್ಟ್ ರಿಸ್ಕ್, ಇದೆ ರೀತಿಯ ಏಕರೂಪದ ಗ್ರಾಹಕರ ಐತಿಹಾಸಿಕ ಕ್ಷಮತೆ, ಸಾಲಗಾರರ ಪ್ರೊಫೈಲ್, ಸಾಲಗಾರರೊಂದಿಗಿನ ಸಂಬಂಧದ ಕಾಲಾವಧಿ, ಅಸ್ತಿತ್ವದಲ್ಲಿರುವ ಗ್ರಾಹಕರ ವಿಷಯದಲ್ಲಿ ಸಾಲಗಾರರ ಮರುಪಾವತಿಯ ಟ್ರಾಕ್ ರೆಕಾರ್ಡ್, ಲಭ್ಯವಿರುವ ಸಬ್ವೆನ್ಶನ್ಗಳು, ಬದಲಾವಣೆಗಾಗಿನ ಅನುಮತಿ, ಭವಿಷ್ಯದ ಸಾಮರ್ಥ್ಯ, ಗುಂಪು ಶಕ್ತಿ, ಗ್ರಾಹಕರ ಒಟ್ಟು ಗಳಿಕೆ, ಪ್ರಾಥಮಿಕ ಮತ್ತು ಅಡಮಾನದ ಭದ್ರತೆಯ ಲಕ್ಷಣ ಮತ್ತು ಮೌಲ್ಯ ಇತ್ಯಾದಿಗಳನ್ನು ಪರಿಗಣನೆಗೆ ತೆಗೆದುಕೊಂಡ ಮೇಲೆ ತಲುಪಲಾಗುತ್ತದೆ.
ಅಂತಹ ಮಾಹಿತಿಯನ್ನು ಸಾಲಗಾರರು ಒದಗಿಸಿದ ಮಾಹಿತಿ, ಕ್ರೆಡಿಟ್ ವರದಿಗಳು, ಮಾರ್ಕೆಟ್ ಇಂಟೆಲಿಜೆನ್ಸ್ ಮತ್ತು ಸಾಲಗಾರರ ಆಸುಪಾಸಿನ ಇನ್ಸ್ಪೆಕ್ಷನ್ ಆಧಾರದ ಮೇಲೆ ಸಂಗ್ರಹಿಸಲಾಗುತ್ತದೆ. ವಿವಿಧ ಗ್ರಾಹಕರು ಅದೇ ಅವಧಿಯಲ್ಲಿ ಪಡೆದ ಅದೇ ಪ್ರಾಡಕ್ಟ್ನ ಬಡ್ಡಿ ದರ ಮತ್ತು ಅವಧಿಯನ್ನು ಪ್ರಮಾಣೀಕರಿಸಬೇಕಾಗಿಲ್ಲ. ಮೇಲಿನ ಅಂಶಗಳ ಯಾವುದೇ ಅಥವಾ ಸಂಯೋಜನೆಯನ್ನು ಪರಿಗಣಿಸಿ ಇದು ವಿವಿಧ ಗ್ರಾಹಕರಿಗೆ ಬದಲಾಗಬಹುದು
ಇಂಟರ್ನಲ್ ಅಂಡರ್‌ರೈಟಿಂಗ್ ಪಾಲಿಸಿಯ ಪ್ರಕಾರ ಬಜಾಜ್ ಫಿನ್‌ಸರ್ವ್ ತನ್ನ ಗ್ರಾಹಕರಿಗೆ ರೆಪೊ ರೇಟ್ ಲಿಂಕ್ ಆದ ಬಡ್ಡಿದರವನ್ನು ನೀಡುತ್ತದೆ (ನಿಯಮ ಮತ್ತು ಷರತ್ತುಗಳು ಅನ್ವಯ).