ಆಗಾಗ ಕೇಳುವ ಪ್ರಶ್ನೆಗಳು

CPP ಎಂದರೇನು?

CPP ಇದು UK ಮೂಲದ MNC ಆಗಿದ್ದು, 1980. ರಿಂದ ಜಗತ್ತಿನಾದ್ಯಂತ ಇರುವ 15 ದೇಶಗಳಲ್ಲಿ “ ಲೈಫ್ ಅಸಿಸ್ಟನ್ಸ್ ಸೇವೆಗಳನ್ನು” ಒದಗಿಸುತ್ತಿದೆ. ಭಾರತದಲ್ಲಿ 2008 ರಿಂದ ಕಾರ್ಯ ನಿರ್ವಹಿಸುತ್ತಿದೆ.

ಗ್ರಾಹಕ ಯಾಕೆ ಅಸೆಟ್ ಕೇರ್ ಖರೀದಿಸಬೇಕು?

ಅಸೆಟ್ ಕೇರ್ ಸಹಾಯಕ ಫೀಚರ್‌ಗಳು ದಿನದಿಂದ ಸದಸ್ಯತ್ವಕ್ಕೆ ಅನ್ವಯವಾಗುವಂತಹ ಸೆಕ್ಯುರಿಟಿ/ ಮನರಂಜನೆ/ ತುರ್ತು ಪ್ರಯೋಜನಗಳ ಸಂಯೋಜನೆಯನ್ನು ಬಳಸಲು ಒಬ್ಬ ಗ್ರಾಹಕನನ್ನು ಸಕ್ರಿಯಗೊಳಿಸುತ್ತದೆ 1. ಹೆಚ್ಚುವರಿಯಾಗಿ, ಅಸೆಟ್ ಕೇರಿನ ವಿಸ್ತರಿತ ವಾರಂಟಿ ಫೀಚರ್ ಅಡಿಯಲ್ಲಿ, ಗ್ರಾಹಕರು ಅಸಮರ್ಪಕ ಕಾರ್ಯನಿರ್ವಹಣೆ ಮತ್ತು ಉತ್ಪಾದನಾ ವಾರಂಟಿ ಕರಾರು ಅವಧಿಯ ನಂತರ ಹೆಚ್ಚಿನ ದುರಸ್ತಿ ವೆಚ್ಚಗಳಿಂದ ತನ್ನ ಉಪಕರಣಗಳನ್ನು ರಕ್ಷಿಸಬಹುದು.

ಗ್ರಾಹಕರು ಅಸೆಟ್ ಕೇರ್ ಖರೀದಿಸಿದಾಗ ಅವರು ಏನನ್ನು ಪಡೆಯುತ್ತಾರೆ?

ಪ್ರತಿ ಗ್ರಾಹಕರು ಫಿಜಿಕಲ್ ವೆಲ್ಕಮ್ ಪ್ಯಾಕ್ ಪಡೆಯುತ್ತಾರೆ, ಅದನ್ನು ಅವರ ನೋಂದಾಯಿತ ವಿಳಾಸಕ್ಕೆ ಕಳುಹಿಸಲಾಗುತ್ತದೆ: ಪ್ರಯೋಜನದ ಮಾರ್ಗದರ್ಶಿ, ವೆಲ್ಕಮ್ ಲೆಟರ್, ಪ್ರಾಡಕ್ಟ್ ನಿಯಮ ಮತ್ತು ಷರತ್ತುಗಳು, ಇನ್ಶೂರರ್ ಪತ್ರ ಹಾಗೂ ನಿಯಮ ಮತ್ತು ಷರತ್ತುಗಳು, ರಿಡೆಂಪ್ಶನ್ ಕೋಡ್‌ಗಳನ್ನು ಫಿಜಿಕಲ್ ವೆಲ್ಕಮ್ ಪ್ಯಾಕ್ ಹೊಂದಿರುತ್ತದೆ. ಈ, ಮೇಲಿನ ಎಲ್ಲವನ್ನೂ ಹೊಂದಿರುವ ಇ-ವೆಲ್ಕಮ್ ಪ್ಯಾಕನ್ನು ಗ್ರಾಹಕರ ನೋಂದಾಯಿತ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ.

ಗ್ರಾಹಕನು ಖರೀದಿಸಬಹುದಾದ ಅಸೆಟ್ ಕೇರ್ ಸದಸ್ಯತ್ವ ಅವಧಿ ಎಷ್ಟು?

ಅಸೆಟ್ ಕೇರ್ ಸದಸ್ಯತ್ವವನ್ನು 1/2/3 ವರ್ಷಗಳಿಗೆ ಖರೀದಿಸಬಹುದು.

ಅಸೆಟ್ ಕೇರ್ ಸದಸ್ಯತ್ವವನ್ನು ಗ್ರಾಹಕರು ಹೇಗೆ ರದ್ದುಗೊಳಿಸಬಹುದು?

ಸದಸ್ಯತ್ವವನ್ನು ರದ್ದುಗೊಳಿಸಲು CPP/ ಬಜಾಜ್ ಫಿನ್‌ಸರ್ವ್‌ ಟೋಲ್ ಫ್ರೀ ನಂಬರ್‌ಗಳಿಗೆ ಗ್ರಾಹಕರು ಕರೆ ಮಾಡಬಹುದಾಗಿದೆ.

ಗ್ರಾಹಕರು ವೆಲ್‌ಕಮ್ ಪ್ಯಾಕ್ ಸ್ವೀಕರಿಸದಿದ್ದರೇ ಏನಾಗುತ್ತದೆ?

ಗ್ರಾಹಕರು CPP ಇಂಡಿಯಾದ ಟೋಲ್ ಫ್ರೀ ಹೆಲ್ಪ್ ಲೈನ್ ನಂಬರ್ (18602583030) ಬೆಳಿಗ್ಗೆ 11 AM ರಿಂದ 9 PM ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಸಂಪರ್ಕಿಸಬಹುದು ಮತ್ತು ಅವರ ವೆಲ್ಕಮ್ ಪ್ಯಾಕನ್ನು ಮತ್ತೆ ಕಳುಹಿಸಲಾಗುವುದು. ಇ-ವೆಲ್‌ಕಮ್ ಪ್ಯಾಕ್ ಸ್ವೀಕರಿಸಲು ಗ್ರಾಹಕರು ಅವರ ಇ-ಮೇಲ್ ಐಡಿಯನ್ನು ಸಹ ನೀಡಬಹುದು. (ಈಗಾಗಲೇ ಮಾಡದಿದ್ದಲ್ಲಿ).

ಕ್ಲೈಮ್ ಮಾಡಲು ಗ್ರಾಹಕರು ಯಾವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು?

ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಿದೆ: ಉಪಕರಣದ ವಿಸ್ತರಿತ ವಾರಂಟಿ ಪಾಲಿಸಿ ಡಾಕ್ಯುಮೆಂಟ್ ಫೋಟೋ ಜೊತೆಗೆ ಗುರುತಿನ ಅಥವಾ ಸಿರಿಯಲ್ ನಂಬರ್ ಹಾಳಾದ ಪಾರ್ಟ್ (ಆಯ್ಕೆಗೆ ಬಿಟ್ಟಿದ್ದು) ಇನ್ವಾಯ್ಸ್ ಕಾಪಿ ಜಾಬ್ ಕಾರ್ಡ್ ಕಾಪಿ ಅಥವಾ ಸಮೀಕ್ಷೆ ವರದಿ ಐಡಿ ಕಾರ್ಡ್ (ಪ್ಯಾನ್, ಪಾಸ್‌ಪೋರ್ಟ್ ಮುಂತಾದವು.) NEFT ಮ್ಯಾಂಡೇಟ್ ಫಾರಂ ಅಥವಾ ರದ್ದುಗೊಂಡ ಚೆಕ್ ( ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆಗೆ ಅಗತ್ಯ)

ಅಸೆಟ್ ಕೇರ್ ಪಾಲಿಸಿಯ ಹೊಸ ಫೀಚರ್ ಅಡಿಯಲ್ಲಿ ಗ್ರಾಹಕರು ಯಾವಾಗ ಪ್ರಯೋಜನಗಳನ್ನು ಪಡೆಯಬಹುದು?

ಉತ್ಪಾದಕರ ವಾರಂಟಿಗೆ ಖರೀದಿಸಿದ ಅಪ್ಲೈಯನ್ಸ್‌ ಅವಧಿ ಮೀರಿದರೆ ವಿಸ್ತರಿಸಿದ ವಾರಂಟಿ ಫೀಚರ್ ಬಳಕೆ ಮಾಡಬಹುದಾಗಿರುತ್ತದೆ.

ವೆಲ್‍ಕಮ್ ಪ್ಯಾಕನಲ್ಲಿನ ರೆಡೆಂಪ್ಶನ್ ಕೋಡ್‍ಗಳ ಮೂಲಕ ಒದಗಿಸಲಾದ ಫೀಚರ್‌ಗಳನ್ನು ಸಕ್ರಿಯಗೊಳಿಸಲು ಇರುವ ಕಾಲಮಿತಿ ಎಷ್ಟು?

ರೆಡೆಂಪ್ಷನ್ ಕೋಡ್‌ಗಳನ್ನು, ವೆಲ್‌ಕಮ್‌ ಪ್ಯಾಕ್ ಸ್ವೀಕರಿಸಿದ 3 ತಿಂಗಳ ಒಳಗೆ ಸಕ್ರಿಯಗೊಳಿಸಿಕೊಳ್ಳಬೇಕು.

ಗ್ರಾಹಕನು ಅಸೆಟ್ ಕೇರ್ ಅನ್ನು ಯಾವಾಗ ಖರೀದಿಸಬಹುದು?

ಆಸೆಟ್ ಕೇರ್ ಅನ್ನು ಇನ್ವಾಯ್ಸ್ ದಿನಾಂಕದಿಂದ ಮಾರಾಟದ ಹಂತದಲ್ಲಿ 180 ದಿನಗಳಲ್ಲಿ ಖರೀದಿಸಬಹುದು.

ಅಸೆಟ್ ಕೇರ್ ಪಾಲಿಸಿಯಲ್ಲಿ ತಪ್ಪು ವಿವರಗಳು ಕಂಡು ಬಂದರೆ ಏನು ಮಾಡಬೇಕು?

CPP ಇಂಡಿಯಾದ ಟೋಲ್ ಫ್ರೀ ನಂಬರ್ (18602583030) ಗೆ ಕರೆ ಮಾಡುವ ಮೂಲಕ ಮತ್ತು ಬದಲಾವಣೆಗೆ ಅಗತ್ಯ ಡಾಕ್ಯುಮೆಂಟ್‌ಗಳನ್ನು ನೀಡುವ ಮೂಲಕ ತನ್ನ ಸರಿಯಾದ ಅಪ್‌ಡೇಟ್ ಆದ ಪಾಲಿಸಿಯನ್ನು ಗ್ರಾಹಕರು ಪಡೆಯಬಹುದಾಗಿದೆ.

ವಿಸ್ತರಿತ ವಾರಂಟಿ ಪಾಲಿಸಿ ಏನನ್ನು ಕವರ್ ಮಾಡುತ್ತದೆ?

ವಿಸ್ತರಿತ ವಾರಂಟಿ ಪಾಲಿಸಿಯು, 1/2/3 ವರ್ಷಗಳ ಪಾಲಿಸಿ ಅವಧಿಯಲ್ಲಿ, ಮುಂಗಾಣಲಾಗದ ಉತ್ಪಾದನಾ ತೊಂದರೆಗಳು ಅಥವಾ ಕಳಪೆ ಕೆಲಸದಿಂದಾಗಿ ಉಂಟಾಗುವ ಗೃಹೋಪಯೋಗಿ ವಸ್ತುಗಳ ರಿಪೇರಿ/ ಬದಲಾವಣೆ ಖರ್ಚನ್ನು ಕವರ್ ಮಾಡುವ ಇನ್ಶೂರೆನ್ಸ್ ಕಾಂಟ್ರ್ಯಾಕ್ಟ್ ಆಗಿರುತ್ತದೆ.

ಉತ್ಪಾದಕರ ಪ್ರಾಡಕ್ಟ್ ವಾರಂಟಿ ಎಂದರೇನು?

ಉತ್ಪಾದಕರ ಪ್ರಾಡಕ್ಟ್ ವಾರಂಟಿ ಎಂದರೆ ಉತ್ಪಾದಕರು ಪ್ರಾಡಕ್ಟಿಗೆ ಅದರ ಉತ್ಪಾದನಾ ತೊಂದರೆಗಳನ್ನು ಒಳಗೊಳ್ಳುವ ಕವರ್ ಮಾಡಲಾಗುವ ಸೀಮಿತ ವಾರಂಟಿಯಾಗಿದೆ.

EW COI ನಲ್ಲಿ ತಯಾರಕರ ವಾರಂಟಿ ತಪ್ಪಾಗಿ ಉಲ್ಲೇಖಿಸಲಾಗಿದೆ, ಗ್ರಾಹಕರು ಅದನ್ನು ಸರಿಪಡಿಸಲು ಯಾರನ್ನು ಸಂಪರ್ಕಿಸಬೇಕಾಗಿದೆ?

ಗ್ರಾಹಕರು CPP ಸಹಾಯವಾಣಿ ನಂಬರನ್ನು ಸಂಪರ್ಕಿಸಬೇಕಾಗುತ್ತದೆ, ಅಲ್ಲಿ ಉತ್ಪಾದಕರ ವಾರಂಟಿ ಬದಲಾವಣೆಗಳಿಗೆ ಕೋರಿಕೆಯನ್ನು ತೆಗೆದುಕೊಳ್ಳಲಾಗುತ್ತದೆ. ಬದಲಾವಣೆಯ ಕೋರಿಕೆಯು 90 ದಿನಗಳೊಳಗೆ ಇದ್ದರೆ, ಗ್ರಾಹಕರು ಕರೆಯ ಮೂಲಕವೇ ಮಾರ್ಪಾಡಿನ ಕೋರಿಕೆಯನ್ನು ಮಾಡಬಹುದು ಅಥವಾ ಕೋರಿಕೆ ಪತ್ರ ಅಥವಾ ಉತ್ಪಾದಕರ ವಾರಂಟಿ ಕಾರ್ಡ್‍ ಪ್ರತಿಯನ್ನು ಸಲ್ಲಿಸಬಹುದು. ಮಾರ್ಪಾಡಿನ ಕೋರಿಕೆಯು 90 ದಿನಗಳ ನಂತರ ಆದರೆ 365 ದಿನಗಳ ಒಳಗೆ ಆಗಿದ್ದರೆ, ಗ್ರಾಹಕರು ಮನವಿ ಪತ್ರವನ್ನು ಅಥವಾ ಉತ್ಪಾದಕ ವಾರಂಟಿ ಕಾರ್ಡ್‌ನ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. 365 ದಿನಗಳ ನಂತರ ಬದಲಾವಣೆಗಾಗಿ ಕೋರಿಕೆ ಸಲ್ಲಿಸುವುದಾದರೆ, ಗ್ರಾಹಕರು ಉತ್ಪಾದಕರ ವಾರಂಟಿ ಕಾರ್ಡಿನ ಪ್ರತಿಯನ್ನು ಸಲ್ಲಿಸಬೇಕು ಉತ್ಪಾದಕರಿಂದ ಬಂದ ಇಮೇಲ್ ಅಥವಾ ಅಧಿಕೃತ ಸರ್ವಿಸ್ ಸೆಂಟರಿನಿಂದ ಬಂದ ಪತ್ರದ ನಕಲು ಪ್ರತಿಯನ್ನು ಸಲ್ಲಿಸಬೇಕು.

ಉತ್ಪಾದಕರ ಪ್ರಾಡಕ್ಟ್ ವಾರಂಟಿ ಅವಧಿ ಎಂದರೇನು?

ಉತ್ಪಾದಕರ ಪ್ರಾಡಕ್ಟ್ ವಾರಂಟಿ ಅವಧಿಯು ಉತ್ಪಾದಕನ ಪ್ರಾಡಕ್ಟ್ ವಾರಂಟಿಯನ್ನು ನಿರ್ದಿಷ್ಟ ಪ್ರಾಡಕ್ಟಿಗೆ ಅನ್ವಯವಾಗುವ ಅವಧಿಯನ್ನು ಉಲ್ಲೇಖಿಸುತ್ತದೆ. ಗೃಹೋಪಯೋಗಿ ವಸ್ತುಗಳು ಬಹುಪಾಲು ವಾರಂಟಿ ಹೊಂದಿರುತ್ತದೆ, ಉತ್ಪಾದಕರ ಪ್ರಾಡಕ್ಟ್ ವಾರಂಟಿಯ ಮೇರೆಗೆ ಸಾಮಾನ್ಯವಾಗಿ 6 ತಿಂಗಳಿನಿಂದ 12 ತಿಂಗಳುಗಳವರೆಗೆ ನೀಡಲಾಗುತ್ತದೆ. ಒಟ್ಟಾರೆ ಪ್ರಾಡಕ್ಟಿಗೆ ಹೋಲಿಸಿದರೆ ಒಂದು ನಿರ್ದಿಷ್ಟ ಪ್ರಾಡಕ್ಟಿನ ಕೆಲವು ಭಾಗಗಳು ಬೇರೆ ವಾರಂಟಿಯನ್ನು ಹೊಂದಿರಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಉದಾಹರಣೆಯಾಗಿ, ಕಂಪ್ರೆಸ್ಸರ್ (ರೆಫ್ರಿಜಿರೇಟರನ ಒಂದು ಭಾಗ) ಸಾಮಾನ್ಯ ವಾರಂಟಿ ಅವಧಿಯು 5 ವರ್ಷಗಳವರೆಗೆ ಇರುತ್ತದೆ, ಆದರೆ ರೆಫ್ರಿಜಿರೇಟರನ ಎಲ್ಲಾ ಇತರ ಭಾಗಗಳಿಗೆ ಸಾಮಾನ್ಯ ವಾರಂಟಿ ಅವಧಿಯು 1 ವರ್ಷವಾಗಿರುತ್ತದೆ. ಅಂತೆಯೇ, ಈ ಸಂದರ್ಭದಲ್ಲಿ 1 ವರ್ಷವನ್ನು ಉತ್ಪಾದಕರ ಪ್ರಾಡಕ್ಟ್ ವಾರಂಟಿ ಅವಧಿ ಎಂದು ಪರಿಗಣಿಸಲಾಗುತ್ತದೆ.

ವಿಸ್ತರಿತ ವಾರಂಟಿ ಪಾಲಿಸಿಯನ್ನು ವರ್ಗಾವಣೆ ಮಾಡಬಹುದೇ ಮತ್ತು ನವೀಕರಿಸಬಹುದೇ?

ನಿರ್ದಿಷ್ಟ ಗೃಹಬಳಕೆ ವಸ್ತುಗಳ ಮಾಲೀಕತ್ವದಲ್ಲಿ ಬದಲಾವಣೆಯು ಇದ್ದಲ್ಲಿ ವಿಸ್ತರಿತ ವಾರಂಟಿ ಪಾಲಿಸಿ ಮುಕ್ತಾಯಗೊಳ್ಳುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಇದಲ್ಲದೇ, ಪಾಲಿಸಿಯ ಅವಧಿ ಮುಗಿದ ನಂತರ ಪಾಲಿಸಿಯನ್ನು ನವೀಕರಿಸಲಾಗುವುದಿಲ್ಲ.

ಒಂದುವೇಳೆ AC ಕಂಪ್ರೆಸರ್ ವಾರಂಟಿಯು 5 ವರ್ಷಗಳು ಮತ್ತು AC ವಾರಂಟಿಯು 2 ವರ್ಷಗಳಿದ್ದು ಮತ್ತು ಒಂದು ವೇಳೆ ನಾವು ವಿಸ್ತರಿತ ವಾರಂಟಿಯನ್ನು ಮಾಡಲು ಬಯಸಿದರೆ, ಆಗ ವಿಸ್ತರಿತ ವಾರಂಟಿಯು 2ವರ್ಷದ ನಂತರ ಅಥವಾ 5 ವರ್ಷಗಳ ನಂತರ ಆರಂಭವಾಗುತ್ತದೆ?.

ಯಾವುದೇ ತಯಾರಕರ ವಾರಂಟಿ ಕಾರಣದಿಂದ ಗ್ಯಾಸ್ ಲೀಕೇಜ್ ಉಂಟಾದರೆ ನಾವು ಅದನ್ನು ತುಂಬಿಸುತ್ತೇವೆ. ಬೇರಾವುದೇ ಕಾರಣದಿಂದಾಗಿ ಗ್ಯಾಸ್ ಲೀಕೇಜ್ ಆಗಿದ್ದರೆ ವಾರಂಟಿ ಕವರ್ ಆಗುವುದಿಲ್ಲ.

EW ಮಾಡಿದ ನಂತರ ಗ್ರಾಹಕರು ತಮ್ಮ ಪ್ರಾಡಕ್ಟ್ ಬದಲಾಯಿಸಿದರೆ, ಕ್ಲೈಮ್ ಪಡೆಯುವಾಗ ಸೀರಿಯಲ್ ನಂಬರ್ ಬದಲಾವಣೆಯಿಂದಾಗಿ ಯಾವುದೇ ಸಮಸ್ಯೆ ಉಂಟಾಗುವುದೇ.

ಗ್ರಾಹಕರ ಸೀರಿಯಲ್ ನಂಬರ್ ನವೀಕರಿಸಲು ನಾವು SMS ಆಧರಿತ ಪ್ರಕ್ರಿಯೆಯನ್ನು ಮಾಡುತ್ತಿದ್ದೇವೆ. ಗ್ರಾಹಕರು ನವೀಕರಣಗಳನ್ನು ನೀಡದಿದ್ದರೂ ನಾವು ಅದನ್ನು ಇನ್ವಾಯ್ಸ್ ಮೂಲಕ ಮೌಲ್ಯೀಕರಿಸುತ್ತೇವೆ.

ಗ್ರಾಹಕರು ಪ್ರಾಡಕ್ಟ್ ಕುರಿತು ಕ್ಲೈಮ್ ಮಾಡಲು ಲಾಗಿನ್ ಮಾಡಿದರೆ ಎಷ್ಟು ಗಂಟೆಯೊಳಗೆ ಪ್ರಾಡಕ್ಟ್ ರಿಪೇರಿ/ ಬದಲಾವಣೆ ಆಗುತ್ತದೆ.

ಇದು ತೊಂದರೆ ಉಂಟಾದ ಪಾರ್ಟ್‌ಗೆ ಸಂಬಂಧಿಸಿದೆ. ಸಾಮಾನ್ಯವಾಗಿ 90% ಕರೆಗಳು 15 ದಿನಗಳಲ್ಲಿ ಮುಚ್ಚಲ್ಪಡುತ್ತವೆ, ಪ್ಯಾನಲ್ ಮತ್ತು ಮದರ್ ಬೋರ್ಡ್ ಸಂದರ್ಭದಲ್ಲಿ ಅದನ್ನು ಬದಲಿಸಲು 40 ದಿನಗಳನ್ನು ತೆಗೆದುಕೊಳ್ಳಲಾಗುತ್ತದೆ

ಗ್ಯಾಸ್ ಸೋರಿಕೆಯಾದರೆ, ಇದು EW ಕ್ಲೈಮ್ ಪಾಲಿಸಿ ಅಡಿಯಲ್ಲಿ ಕವರ್ ಆಗುತ್ತದೆಯೇ?

EW ಅವಧಿಯಲ್ಲಿ AC ಗ್ಯಾಸ್ ಸೋರಿಕೆಯನ್ನು ನಾವು ಕವರ್ ಮಾಡುತ್ತೇವೆ

ಸರ್ವಿಸ್ ಪ್ರೊವೈಡರ್ ಇಲ್ಲದ ದೂರದ ಸ್ಥಳದಲ್ಲಿ, ಸ್ಥಳೀಯ ಸೇವಾ ಮಾರಾಟಗಾರರು ನಮ್ಮೊಂದಿಗೆ ಎಂಪಿನಲ್ ಮಾಡಲು ಯಾವುದಾದರೂ ಅವಕಾಶವಿದೆಯೇ?.

ನೀವು ಸರ್ವಿಸ್ ಪ್ರೊವೈಡರ್ ಸಂಪರ್ಕ ವಿವರಗಳನ್ನು ನೀಡಿದರೆ ನಾವು ಸ್ಥಳೀಯ ಸರ್ವಿಸ್ ಪ್ರೊವೈಡರನ್ನು ಖಚಿತವಾಗಿಯೂ ನಿಯೋಜಿಸಿಕೊಳ್ಳಬಹುದಾಗಿದೆ, ನಾವು ಇದನ್ನು BAGIC ಜೊತೆಗೆ ಹಂಚಿಕೊಳ್ಳುತ್ತೇವೆ ಮತ್ತು ಅವರನ್ನು ನೋಂದಾಯಿಸಿಕೊಳ್ಳುತ್ತೇವೆ ಮತ್ತು ಗ್ರಾಹಕರು ಅಧಿಕೃತ ಸರ್ವಿಸ್ ರಿಪೇರಿ ಪಡೆಯುತ್ತಾರೆ ಮತ್ತು ನಾವು ರಿಯಂಬರ್ಸ್ ಮಾಡುತ್ತೇವೆ

ನಾವು EW ಮಾಡುತ್ತಿರುವ ಯಾವುದೇ ಪ್ರಾಡಕ್ಟಿಗೆ ಸೀರಿಯಲ್ ನಂಬರ್ ಅಗತ್ಯವಿದೆಯೇ? ಅಥವಾ ನಾವು ಆ ಪ್ರಾಡಕ್ಟ್ ಮೂಲ ಸಿರಿಯಲ್ ನಂಬರನ್ನು ಇರಿಸಬೇಕಾದ ಅಗತ್ಯವಿದೆಯೇ?

ಡಿಜಿಟಲ್ ಕಡ್ಡಾಯವಾಗಿದ್ದಲ್ಲಿ ನೀವು ಸಮರ್ಪಕವಾದ ಸೀರಿಯಲ್ ನಂಬರ್ ಪಡೆಯಲು ಪ್ರಯತ್ನಿಸಬೇಕು, ಆದರೆ, ದೊಡ್ಡ ಗಾತ್ರದ ಪರಿಕರಗಳಾಗಿದ್ದರೆ ನಾವು ಗ್ರಾಹಕರ ಇನ್ವಾಯ್ಸ್ ವಿವರವನ್ನು ಹೋಲಿಕೆ ಮಾಡಿ ದೃಢೀಕರಿಸುತ್ತೇವೆ

ಒಂದು ವೇಳೆ ತಯಾರಕರು 2 ವರ್ಷ ವಾರಂಟಿ ಒದಗಿಸಿ, EW ಪಾಲಿಸಿಯ ಪ್ರಕಾರ FOS ಗ್ರಾಹಕನಿಗೆ 2 ವರ್ಷಗಳ ವಾರಂಟಿ ನೀಡಿದರೆ, ಪಾಲಿಸಿಯು ಎಷ್ಟು ವರ್ಷಗಳವರೆಗೆ ಪ್ರಾಡಕ್ಟ್ ವಾರಂಟಿ ನೀಡುತ್ತದೆ?

ಉತ್ಪಾದಕರ ವಾರಂಟಿ ಮುಗಿದ ನಂತರ ನಮ್ಮ ವಾರಂಟಿ ಪ್ರಾರಂಭವಾಗುತ್ತದೆ, ನಂತರ ನಾವು 2 ವರ್ಷಗಳ ನಂತರ EW ಪ್ರಾರಂಭಿಸುತ್ತೇವೆ. ಸಂಪೂರ್ಣವಾಗಿ 4 ವರ್ಷ ವಾರಂಟಿ (2 ವರ್ಷಗಳ ತಯಾರಿಕೆ + 2 ವರ್ಷಗಳ ವಿಸ್ತರಣೆ) ಕವರ್ ಮಾಡಲಾಗುತ್ತದೆ.

ತಯಾರಕರು ನಿಮಗೆ 03 ವರ್ಷ ವಾರಂಟಿ ನೀಡಿದ್ದರೆ ನಾವು 02 ವರ್ಷಗಳ ವಾರಂಟಿ ನೀಡುತ್ತೇವೆ (ಒಟ್ಟು ವಾರಂಟಿ 05 ವರ್ಷಗಳು). ಆದರೆ ಮಾಡೆಲ್ ತಯಾರಿಕೆ ನಿಂತು ಹೋಗಿದ್ದರೆ ಅಥವಾ ಅದರ ಪಾರ್ಟ್‌ಗಳು ಲಭ್ಯವಿಲ್ಲದಿದ್ದರೆ, ಈ ಸಮಯದಲ್ಲಿ ಪೀಸ್ ಟಿ ಪೀಸ್ ಬದಲಾವಣೆ ಇರುತ್ತದೆ

ಪ್ರಾಡಕ್ಟ್ ರಿಪೇರಿ ಮಾಡಲು ಸಾಧ್ಯವಿಲ್ಲದಿದ್ದರೆ ಪೂರ್ಣ ನಷ್ಟ ಎಂದು ಪರಿಗಣಿಸಿ ಪ್ರತಿ ವರ್ಷಕ್ಕೆ 10% ನಂತೆ ಸವಕಳಿ ವೆಚ್ಚವನ್ನು ಕಡಿತಗೊಳಿಸಿ ಬಾಕಿ ಉಳಿಯುವ ಮೊತ್ತವನ್ನು ಗ್ರಾಹಕರು ತಮ್ಮ ಇಷ್ಟದ ಹೊಸ ಉತ್ಪನ್ನವನ್ನು ಖರೀದಿಸಲು ಅವರಿಗೆ ಹಿಂದಿರುಗಿಸುತ್ತೇವೆ.

ಒಂದು ವೇಳೆ ಗ್ರಾಹಕರು ಓಪನ್ EW ತೆಗೆದುಕೊಂಡಿದ್ದು, ಬೇರೊಂದು ನಗರಕ್ಕೆ ಅಥವಾ ಬೇರೆ ಯಾವುದೇ ದೂರಸ್ಥಳಕ್ಕೆ ವರ್ಗಾವಣೆಗೊಂಡಿದ್ದರೆ, ಆಗ ಆ ವ್ಯಕ್ತಿಯು ಹೇಗೆ ಕ್ಲೈಮ್ ಮಾಡಬಹುದು .

ನಾವು ಕಾಲ್ ಸೆಂಟರ್ ನಂಬರನ್ನು ಸೆಂಟ್ರಲೈಸ್ ಮಾಡಿದ್ದೇವೆ, ಅವರು ಇಲ್ಲಿಗೆ ಕರೆ ಮಾಡಿ ಕ್ಲೈಮ್ ರಿಜಿಸ್ಟರ್ ಮಾಡಬಹುದಾಗಿದೆ ಮತ್ತು ಅವರಿಗೆ ಭಾರತದಲ್ಲಿ ಎಲ್ಲಾದರೂ ಸೇವೆಯನ್ನು ಒದಗಿಸುತ್ತೇವೆ

ರೆಫ್ರಿಜಿರೇಟರ್/ ಎಸಿ/ ವಾಷಿಂಗ್ ಮೆಷಿನ್/ MWO ಪಾರ್ಟ್‌ಗಳು LED ಗಿಂತ ಕಡಿಮೆಯಿದ್ದರೂ ಕೂಡ ಸ್ವಲ್ಪ ಮಾತ್ರ ಕವರ ಆಗುತ್ತದೆ ಮತ್ತು ಪ್ರೀಮಿಯಂ ಹೆಚ್ಚಾಗಿದೆ, ಏಕೆ?

ಸಾಮಾನ್ಯವಾಗಿ AC/ ರೆಫ್ರಿಜರೇಟರ್ ಕಂಪ್ರೆಸರ್ ಬ್ರೇಕ್‌ಡೌನ್ 5% ಆಗಿರುತ್ತದೆ. ಮೆಕ್ಯಾನಿಕಲ್ ಬ್ರೇಕ್‌ಡೌನ್ 35% ಮತ್ತು ಎಲೆಕ್ಟ್ರಿಕಲ್ ಬ್ರೇಕ್‌ಡೌನ್ 60% ಆಗಿರುತ್ತದೆ.

ಎಲ್ಲಾ ಸಂದರ್ಭಗಳಲ್ಲಿಯೂ AC ಗ್ಯಾಸ್ ಲೀಕೇಜ್ ಕವರ್ ಆಗುತ್ತದೆಯೇ?

ಭೌತಿಕ ಹಾನಿಯನ್ನು ಹೊರತುಪಡಿಸಿ ಬೇರೆ ಎಲ್ಲಾ ಸನ್ನಿವೇಶದಲ್ಲಿ ಗ್ಯಾಸ್ ಲೀಕೇಜನ್ನು ನಾವು ಕವರ್ ಮಾಡುತ್ತೇವೆ

ಜನರು ಇವನ್ನೂ ಪರಿಗಣಿಸಿದ್ದಾರೆ

Digital Health EMI Network Card

ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ರೂ. 4 ಲಕ್ಷದವರೆಗಿನ ಮುಂಚಿತ-ಅನುಮೋದಿತ ಮಿತಿಯೊಂದಿಗೆ ತ್ವರಿತ ಸಕ್ರಿಯಗೊಳಿಸುವಿಕೆ

ಈಗಲೇ ಪಡೆಯಿರಿ

EMI ನೆಟ್ವರ್ಕ್

ನಿಮಗೆ ಅಗತ್ಯವಿರುವ ಎಲ್ಲವನ್ನೂ ಸುಲಭವಾದ ಮತ್ತು ಕೈಗೆಟಕುವ EMI ಗಳಲ್ಲಿ ಪಡೆಯಿರಿ

ತಿಳಿಯಿರಿ
Doctor Loan People Considered Image

ಡಾಕ್ಟರ್ ಲೋನ್

ಡಾಕ್ಟರ್‌ಗಳಿಗೆಂದೇ ರೂಪಿಸಲಾದ ಹಣಕಾಸು ಪರಿಹಾರಗಳು

ಅಪ್ಲೈ
Home Loan People Considered Image

ಹೋಮ್ ಲೋನ್‌

ಬ್ಯಾಲೆನ್ಸ್ ವರ್ಗಾವಣೆಯ ಮೇಲೆ ಹೆಚ್ಚಿನ ಟಾಪ್ ಅಪ್ ಮೊತ್ತ

ಅಪ್ಲೈ