ಸಿಬಿಲ್/ಕ್ರೆಡಿಟ್ ಸ್ಕೋರ್ ಎಂದರೇನು?

2 ನಿಮಿಷದ ಓದು

ನಿಮ್ಮ ಕ್ರೆಡಿಟ್ ಸ್ಕೋರ್ 3-ಅಂಕಿಯ ನಂಬರ್ ಆಗಿದ್ದು, ಇದು 300 ರಿಂದ 900 ವರೆಗೆ ಇರುತ್ತದೆ ಮತ್ತು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ. ಒಮ್ಮೆ ಕ್ರೆಡಿಟ್ (ಕ್ರೆಡಿಟ್ ಕಾರ್ಡ್ ಅಥವ ಲೋನ್) ಪಡೆದ ಪ್ರತಿಯೊಬ್ಬ ವ್ಯಕ್ತಿಯು ಕೂಡಾ ಕ್ರೆಡಿಟ್ ಸ್ಕೋರ್ ಹೊಂದಿರುತ್ತಾರೆ. ಭಾರತದಲ್ಲಿ, ಸಿಬಿಲ್ ಒದಗಿಸಿದ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿನ ಹಣಕಾಸು ಸಂಸ್ಥೆಗಳು ಅಂಗೀಕರಿಸುತ್ತವೆ ಮತ್ತು ಇದನ್ನು ಸಿಬಿಲ್ ಸ್ಕೋರ್ ಎಂದು ಕೂಡ ಕರೆಯಲಾಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ನಿಮ್ಮ ಸಿಬಿಲ್ ವರದಿ ಅಥವಾ ಕ್ರೆಡಿಟ್ ಮಾಹಿತಿ ವರದಿಯಲ್ಲಿ ಕಂಡುಬಂದ ಮಾಹಿತಿಯ ಆಧಾರದ ಮೇಲೆ ಇರುತ್ತದೆ.

ಹೆಚ್ಚಿನ ಸಿಬಿಲ್ ಸ್ಕೋರ್ ಕ್ರೆಡಿಟ್‌ನೊಂದಿಗೆ ಉತ್ತಮ ಇತಿಹಾಸವನ್ನು ಸೂಚಿಸುತ್ತದೆ, ಕಡಿಮೆ ಸ್ಕೋರ್ ಡೀಫಾಲ್ಟ್‌ಗಳು ಅಥವಾ ಕ್ರೆಡಿಟ್‌ಗೆ ಸಾಕಷ್ಟು ಮಾನ್ಯತೆ ಇಲ್ಲದಿರುವುದನ್ನು ಸೂಚಿಸುತ್ತದೆ.

ಹೋಮ್ ಲೋನ್‌ಗೆ ಉತ್ತಮ ಸಿಬಿಲ್ ಸ್ಕೋರ್ ಏನು?

ಹೋಮ್ ಲೋನ್ಗಾಗಿ ಉತ್ತಮ ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಾಗಿರುತ್ತದೆ

ಹೋಮ್ ಲೋನ್‌ಗಳಿಗೆ ನನ್ನ CIBIL ಸ್ಕೋರ್ ಅನ್ನು ಹೇಗೆ ಬಳಸಲಾಗುತ್ತದೆ?

ನೀವು ಹೋಮ್ ಲೋನಿಗೆ ಅಪ್ಲೈ ಮಾಡಲು ಅರ್ಹರಾಗಿದ್ದೀರಾ ಎಂಬುದನ್ನು ನಿರ್ಧರಿಸಲು ಸಾಲದಾತರು ನಿಮ್ಮ ಸಿಬಿಲ್ ಸ್ಕೋರ್ ಅನ್ನು ಬಳಸುತ್ತಾರೆ. ಅದನ್ನು ಪರಿಶೀಲಿಸಲು ಅವರು ಕ್ರೆಡಿಟ್ ವಿಚಾರಣೆಯನ್ನು ಮಾಡುತ್ತಾರೆ. ಅಂತಹ ವಿಚಾರಣೆಗಳ ಸಮಯದಲ್ಲಿ ಸಾಲದಾತರು ನಿಮ್ಮ ಕ್ರೆಡಿಟ್ ರಿಪೋರ್ಟ್ ಕೂಡ ಪರಿಶೀಲಿಸುತ್ತಾರೆ. ಕ್ರೆಡಿಟ್ ವರದಿಯಲ್ಲಿ ನಿಮ್ಮ CIBIL ಸ್ಕೋರ್‌ ಮೇಲೆ ಪ್ರಭಾವ ಬೀರುವ ಎಲ್ಲಾ ವಿವರಗಳು ಇರುತ್ತವೆ.

ಹೌಸಿಂಗ್ ಲೋನ್ ಪಡೆಯಲು ನಿಮ್ಮ CIBIL ಸ್ಕೋರನ್ನು ಹೆಚ್ಚಿಸುವುದು ಹೇಗೆ?

  • ಸಮಯಕ್ಕೆ ಸರಿಯಾಗಿ ಮತ್ತು ಪೂರ್ತಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸಿ
  • ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯ 30% ಅಥವಾ ಅದಕ್ಕಿಂತ ಕಡಿಮೆ ಬಳಸಿ
  • ನಿಮ್ಮ ಸಿಬಿಲ್ ವರದಿಯಲ್ಲಿ ದೋಷಗಳನ್ನು ಸರಿಪಡಿಸಿ
  • ಪ್ರತಿ ಕ್ರೆಡಿಟ್ ವಿಚಾರಣೆಯು ನಿಮ್ಮ ಸಿಬಿಲ್ ಸ್ಕೋರ್ ಅನ್ನು ಕೆಲವು ಪಾಯಿಂಟ್‌ಗಳಷ್ಟು ಕಡಿಮೆ ಮಾಡುವುದರಿಂದ ಅಲ್ಪಾವಧಿಯಲ್ಲಿ ಅನೇಕ ಹೋಮ್ ಲೋನ್ ಅಪ್ಲಿಕೇಶನ್ ಸಲ್ಲಿಸುವುದನ್ನು ತಪ್ಪಿಸಿ

ಹೋಮ್ ಲೋನಿನ ಮಂಜೂರಾತಿಗೆ ಬೇಕಿರುವ ಕನಿಷ್ಟ CIBIL ಸ್ಕೋರ್ ಎಷ್ಟು?

ಹೋಮ್ ಲೋನ್‌ಗೆ ಕನಿಷ್ಠ ಸಿಬಿಲ್ ಸ್ಕೋರ್ 750. ಆದಾಗ್ಯೂ, ಹೋಮ್ ಲೋನ್ ಸುರಕ್ಷಿತವಾಗಿರುವುದರಿಂದ ಕೆಲವು ಸಾಲದಾತರು ನಿಮಗೆ ಕಡಿಮೆ ಸ್ಕೋರ್ ಮೇಲೆ ಲೋನನ್ನು ಒದಗಿಸಬಹುದು.

ಇದನ್ನೂ ಓದಿ: ಸಂಬಳದ ಮೇಲೆ ಎಷ್ಟು ಹೋಮ್ ಲೋನ್ ಪಡೆಯಬಹುದು?

ಇನ್ನಷ್ಟು ಓದಿರಿ ಕಡಿಮೆ ಓದಿ