ಫೀಚರ್‌ಗಳು ಮತ್ತು ಪ್ರಯೋಜನಗಳು

ಹೆಲ್ತ್ ಇನ್ಶೂರೆನ್ಸ್ ಅಗತ್ಯವಾಗಿದೆ. ಇದು ನಿಮ್ಮನ್ನು ಕಾಯಿಲೆ ಗಳು ಮತ್ತು ಇತರ ಅಪಘಾತ ವೈದ್ಯಕೀಯ ವೆಚ್ಚಗಳಿಂದ ರಕ್ಷಣೆ ನೀಡುತ್ತದೆ. ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ತೆಗೆದುಕೊಳ್ಳುವಾಗ, ಆಸ್ಪತ್ರೆಗೆ ಸೇರಿದ ಸಮಯದಲ್ಲಿ ನಿಮ್ಮ ವೈದ್ಯಕೀಯ ಚಿಕಿತ್ಸೆಯ ವೆಚ್ಚಗಳು ಪ್ರೀಮಿಯಂ ವಾರ್ಷಿಕ ಪಾವತಿಗೆ ನೀವು ಆಯ್ಕೆ ಮಾಡಿದ ಮೊತ್ತದ ಸಮ್ ಅಸ್ಯೂರ್ಡ್‍ಗೆ ಕವರ್ ಮಾಡಲ್ಪಟ್ಟಿರುತ್ತದೆ. ವೈದ್ಯಕೀಯ ಚಿಕಿತ್ಸೆಗಾಗಿ ಸ್ವಯಂ ನೀವೇ ಪಾವತಿಸಬಹುದು ಅಥವಾ ನಂತರ ಪಾಲಿಸಿಯ ಮೂಲಕ ಮರು ಪಾವತಿಸಬಹುದು, ಅಥವಾ ನಿಮ್ಮ ಚಿಕಿತ್ಸೆಗಾಗಿ ನೆಟವರ್ಕ್ ಆಸ್ಪತ್ರೆಗೆ ಹೋಗಿ, ಆ ಆಸ್ಪತ್ರೆಯಲ್ಲಿ ವೆಚ್ಚಗಳು ಚಿಕಿತ್ಸೆಯ ಮುಂಚಿನಿಂದಲೇ ಕವರ್ ಆಗಿರುತ್ತವೆ. ಇದರ ಜೊತೆಗೆ, ಆದಾಯ ತೆರಿಗೆ ಕಾಯಿದೆಯ ಸೆಂಕ್ಷನ್ 80 D ಅಡಿಯಲ್ಲಿ ಈ ಪಾಲಿಸಿಗೆ ಪಾವತಿಸಿದ ಪ್ರೀಮಿಯಂ, 1961 ತೆರಿಗೆ ಕಡಿತವಾಗಿ ಪರಿಗಣಿಸಲ್ಪಡುತ್ತದೆ.

ಒಬ್ಬ ವ್ಯಕ್ತಿಗೆ ಅಥವಾ ಕುಟುಂಬಕ್ಕೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸಬಹುದು. ಗಂಭೀರ ರೋಗಗಳಿಗೆ ಅಥವಾ ಹೆರಿಗೆ ಸಮಯದಲ್ಲಿ ನೀವು ಎದುರಿಸಬಹುದಾದ ಯಾವುದೇ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಲು ಅವುಗಳನ್ನು ಖರೀದಿಸಬಹುದು. ನಿಮ್ಮ ಖರೀದಿಯ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ಪರಿಗಣಿಸಬಹುದಾದ ಹೆಲ್ತ್ ಇನ್ಶೂರೆನ್ಸ್ ಪ್ರಕಾರಗಳನ್ನು ನೋಡೋಣ.

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ವಿಧಗಳು

 • ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

  ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ, ಆಯ್ಕೆಮಾಡಿದ ಇನ್ಶೂರೆನ್ಸ್ ಮೊತ್ತವು ನಗದು ರಹಿತ ಆಸ್ಪತ್ರೆ ದಾಖಲಿಸುವಿಕೆ ಮತ್ತು ಇತರ ಪ್ರಯೋಜನಗಳಿಗಾಗಿ ವ್ಯಕ್ತಿಗತ ಆಧಾರದ ಮೇಲೆ ಈ ಯೋಜನೆಯಡಿ ಕವರ್ ಮಾಡಲಾಗುತ್ತದೆ. ಈ ಪಾಲಿಸಿಯಲ್ಲಿ ಕವರ್ ಮಾಡಲಾದ ಪ್ರತಿ ವ್ಯಕ್ತಿಯು ಪೂರ್ತಿ ಮೊತ್ತಕ್ಕೆ ಪ್ರತ್ಯೇಕವಾಗಿ ಹಕ್ಕುದಾರರಾಗಿರುತ್ತಾರೆ.

 • ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

  ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ, ಆಯ್ಕೆ ಮಾಡಲಾದ ಇನ್ಶೂರೆನ್ಸ್ ಮೊತ್ತವು ಒಂದೇ ಕವರ್‌ನಲ್ಲಿ ಎಲ್ಲಾ ಕುಟುಂಬ ಸದಸ್ಯರಿಗೆ ಅನ್ವಯವಾಗುತ್ತದೆ. ಅಂದರೆ ಎಲ್ಲ ಸದಸ್ಯರಿಗೆ ಒಂದೇ ಕವರ್. ಇದನ್ನು ಹಲವು ಕ್ಲೈಮ್‌ಗಳಲ್ಲಿ ಒಬ್ಬ ಸದಸ್ಯ ಅಥವಾ ಹಲವು ಜನರು ಸಂಪೂರ್ಣವಾಗಿ ಬಳಸಬಹುದು.

 • ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

  ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅಸ್ತಿತ್ವದಲ್ಲಿರುವ ವೈಯಕ್ತಿಕ ಯೋಜನೆಯಡಿ ಅಥವಾ ಉದ್ಯೋಗದಾತರ ಕವರೇಜ್ ಅಡಿಯಲ್ಲಿ ಸೀಮಿತ ಹೆಲ್ತ್ ಕವರ್ ಇನ್ಶೂರೆನ್ಸ್ ಹೊಂದಿರುವ ಜನರಿಗೆ ಹೆಚ್ಚುವರಿ ಕವರೇಜ್ ಕಲ್ಪಿಸುತ್ತದೆ. ಪ್ರಸ್ತುತ ಇರುವ ಕವರ್ ಮಿತಿಯು ಸಾಕಾಗದೇ ಇರುವಾಗ ಒಂದು ಕಾಯಿಲೆಯಿಂದ ಉಂಟಾಗುವ ವೆಚ್ಚವನ್ನು ಇದು ಮರುಪಾವತಿ ಮಾಡುವುದು.

 • ಗಂಭೀರ ಅನಾರೋಗ್ಯದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು

  ಇದನ್ನು ಸ್ವತಂತ್ರ ಇನ್ಶೂರೆನ್ಸ್ ಪಾಲಿಸಿ ಎಂದು ಪರಿಗಣಿಸಲಾಗಿದ್ದು, ಗಂಭೀರ ಅನಾರೋಗ್ಯಗಳಾದ ಕ್ಯಾನ್ಸರ್, ಕಿಡ್ನಿ ವೈಫಲ್ಯ, ಹೃದಯಾಘಾತ ಮುಂತಾದವುಗಳ ಚಿಕಿತ್ಸೆಗೆ ಕವರ್ ಮಾಡಲಾಗುತ್ತದೆ. ಈ ಮೇಲೆ ತಿಳಿಸಲಾದ ಯಾವುದೇ ರೋಗಗಳನ್ನು ಪತ್ತೆ ಮಾಡಲಾಗಿದ್ದರೆ ಅಥವಾ ಈಗಾಗಲೇ ಬಳಲುತ್ತಿದ್ದರೆ, ಹೆಚ್ಚಿನ ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಪಾಲಿಸಿಗಳು ಲಂಪ್‌ಸಮ್ ಪಾವತಿಯನ್ನು ಕೊಡಮಾಡುತ್ತವೆ.

 • ಗ್ರೂಪ್/ ಉದ್ಯೋಗಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

  ಗ್ರೂಪ್/ ಎಂಪ್ಲಾಯಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಸಾಮಾನ್ಯವಾಗಿ ಕಂಪನಿಗಳಿಂದ ಖರೀದಿಸಲ್ಪಡುತ್ತವೆ, ಮತ್ತು ಇದು ಆ ಕಂಪನಿಯ ನೌಕರರನ್ನು ವೈದ್ಯಕೀಯ ಆರೈಕೆಯ ವೆಚ್ಚಗಳಿಗೆ ಕವರ್ ಮಾಡುತ್ತವೆ. ಗ್ರೂಪ್ ಮೆಡಿಕಲ್ ಇನ್ಶೂರೆನ್ಸ್ ಯೋಜನೆಗಳ ಪ್ರೀಮಿಯಂಗಳು ಸಾಮಾನ್ಯವಾಗಿ ಸರಾಸರಿಗಿಂತ ಕಡಿಮೆಯಿರುತ್ತದೆ ಮತ್ತು ರೋಗಗಳು ಮತ್ತು ವೈದ್ಯಕೀಯ ಕಾರ್ಯವಿಧಾನಗಳ ಕವರೇಜ್ ಸಾಕಷ್ಟು ವಿಸ್ತಾರವಾಗಿದೆ.

 • ಪರ್ಸನಲ್ ಆ್ಯಕ್ಸಿಡೆಂಟ್ ಕವರ್‌ಗಳು

  ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಅಪಘಾತದ ಪರಿಣಾಮವಾಗಿ, ಮರಣ, ಅಂಗವೈಕಲ್ಯ, ಗಾಯ, ಮತ್ತು ಇತರ ಅನಿರೀಕ್ಷಿತ ಸಂದರ್ಭಗಳಲ್ಲಿ ಸಂಭವಿಸುವ ವೆಚ್ಚಗಳಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸುತ್ತದೆ. ಪರ್ಸನಲ್ ಆ್ಯಕ್ಸಿಡೆಂಟ್ ಕವರನ್ನು ಸ್ವತಂತ್ರವಾಗಿ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಪಾಲಿಸಿಯ ರೈಡರ್ ಆಗಿ ಖರೀದಿಸಬಹುದು.

 • Senior Citizen Health Insurance Policy

  ಹಿರಿಯ ನಾಗರೀಕರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

  ಹಿರಿಯ ನಾಗರೀಕ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು 60 ವಯಸ್ಸಿನ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನವರು ಖರೀದಿಸಬಹುದು. ವೃದ್ಧರ ವೈದ್ಯಕೀಯ ಆರೈಕೆಗೆ ಸಂಬಂಧಿಸಿದ ಖರ್ಚುಗಳನ್ನು ಸರಿದೂಗಿಸಲು ಅವುಗಳನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ಇಂತಹ ಪಾಲಿಸಿಗಳನ್ನು ನೀವು ತೆಗೆದುಕೊಳ್ಳುವ ಮುನ್ನ ಸಾಮಾನ್ಯವಾಗಿ ವೈದ್ಯಕೀಯ ಚೆಕ್ಅಪ್ ಮಾಡಬೇಕಾಗುತ್ತದೆ. ಆದಾಗ್ಯೂ, ಅವುಗಳ ಮೇಲೆ ಪ್ರೀಮಿಯಂ ವೆಚ್ಚಗಳು ಸಾಮಾನ್ಯವಾಗಿ ಮಾಮೂಲಿಗಿಂತ ಕಡಿಮೆಯಾಗಿರುತ್ತದೆ.

 • ಮೆಟರ್ನಿಟಿ ಹೆಲ್ತ್ ಇನ್ಶೂರೆನ್ಸ್

  ಮೆಟರ್ನಿಟಿ ಹೆಲ್ತ್ ಇನ್ಶೂರೆನ್ಸ್ ವಿಶೇಷ ಕವರ್ ಆಗಿದ್ದು ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ಸ್ವತಂತ್ರವಾಗಿ ಖರೀದಿಸಬಹುದು, ಅಥವಾ ಅಸ್ತಿತ್ವದಲ್ಲಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ರೈಡರ್ ಆಗಬಹುದು. ಮೆಟರ್ನಿಟಿ ಹೆಲ್ತ್ ಇನ್ಶೂರೆನ್ಸ್ ತಾಯಿ ಮತ್ತು ಮಗುವಿಗೆ ಸಂಬಂಧಿಸಿದಂತೆ ಹೆರಿಗೆಯ ಕಾರಣದಿಂದ ಉಂಟಾದ ತೊಡಕುಗಳನ್ನು ಒಳಗೊಂಡಂತೆ ಹೆರಿಗೆ ಮುಂಚಿನ, ಹೆರಿಗೆ ನಂತರದ ಮತ್ತು ಆಸ್ಪತ್ರೆಗೆ ತಗಲುವ ವೆಚ್ಚಗಳನ್ನು ಕವರ್ ಮಾಡುತ್ತದೆ.

ಭಾರತದಲ್ಲಿನ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಫೀಚರ್‌ಗಳು ಮತ್ತು ಪ್ರಯೋಜನಗಳು

 • ರೂ. 2 ಲಕ್ಷದಿಂದ ರೂ. 50 ಲಕ್ಷಗಳವರೆಗೆ ಸಮಗ್ರ ಆರೋಗ್ಯ ಕವರೇಜ್ ಇನ್ಶೂರೆನ್ಸ್ ಆಯ್ಕೆಗಳು

 • ನಗದುರಹಿತ ಸೆಟಲ್‌ಮೆಂಟ್ – ನೆಟ್ವರ್ಕ್ ಆಸ್ಪತ್ರೆಗಳಲ್ಲಿ ದಾಖಲಾತಿಯಾದರೆ ನೀವು ಚಿಕಿತ್ಸೆಗೆ೪ ಯಾವುದೇ ಮೊತ್ತವನ್ನು ಪಾವತಿಸಬೇಕಿಲ್ಲ

 • ಆಂಬ್ಯುಲೆನ್ಸ್ ಶುಲ್ಕವನ್ನು ಒಳಗೊಂಡಿದೆ

 • ರೂಮ್ ಬಾಡಿಗೆಯನ್ನು ಭರಿಸಬೇಕಾಗಿಲ್ಲ

 • 10 ವರ್ಷಗಳ ವರೆಗೆ ಚುಚ್ಚುಮದ್ದಿನ ಶುಲ್ಕದೊಂದಿಗೆ ಹೊಸದಾಗಿ ಹುಟ್ಟಿದ ಮಗುವಿನ ವ್ಯಾಪ್ತಿ ಸೇರಿದಂತೆ ಹೆರಿಗೆಯ ಪ್ರಯೋಜನಗಳು

 • 30 ದಿನಗಳ ಆಸ್ಪತ್ರೆ ವಾಸದ ಪೂರ್ವ ಮತ್ತು 60 ದಿನಗಳ ನಂತರದ ಅನುಕೂಲಗಳು

 • 130 ಡೇಕೇರ್ ಕ್ರಮಗಳನ್ನು ಒಳಗೊಳ್ಳಲಾಗುತ್ತದೆ

 • ಅಂಗಾಂಗ ಕಸಿ ಸಮಯದಲ್ಲಿ ಉಂಟಾದ ವೈದ್ಯಕೀಯ ವೆಚ್ಚಗಳು

 • ಎಮರ್ಜನ್ಸಿ ಆ್ಯಂಬ್ಯುಲನ್ಸ್ ಚಾರ್ಜ್‌ಗಳನ್ನು ಕವರ್ ಮಾಡಲಾಗುತ್ತದೆ

 • ಆಯುಶ್ (ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ಚಿಕಿತ್ಸೆಯೂ ಒಳಗೊಂಡಿದೆ

 • ನೋ ಕ್ಲೈಮ್ ಬೋನಸ್ನಂತಹ ಉಚಿತ ಆರೋಗ್ಯ ತಪಾಸಣೆ ಮತ್ತು ರಿಯಾಯಿತಿ ರಶೀದಿಗಳು (ಹಿಂದಿನ ವರ್ಷದಲ್ಲಿ ಒಬ್ಬ ವ್ಯಕ್ತಿಯು ತನ್ನ ಚಿಕಿತ್ಸೆಗಾಗಿ ಯಾವುದೇ ರೀತಿಯ ಹಕ್ಕು ಬೇಡಿಕೆಯನ್ನು ಸಲ್ಲಿಸದಿದ್ದರೆ ಅಂತಹ ವ್ಯಕ್ತಿಯು NCB ಯ ಪ್ರಯೋಜನವನ್ನು ಪಡೆದುಕೊಳ್ಳಬಹುದು)

 • ಪ್ರವೇಶಾತಿ ವಯಸ್ಸು 60 ವರ್ಷಗಳವರೆಗಿನ ವಯಸ್ಸು

 • ಸೆಕ್ಷನ್ 80 ಡಿ ಅಡಿಯಲ್ಲಿ ಆದಾಯ ತೆರಿಗೆ ಲಾಭ

 • ಪ್ರತಿ ಹಕ್ಕು-ಮುಕ್ತ ವರ್ಷದ ನಂತರ ಪಾಲಿಸಿಯನ್ನು ನವೀಕರಿಸಿದಾಗ ನೋ ಕ್ಲೈಮ್ ಬೋನಸನ್ನು ಪಡೆಯಿರಿ

 • ವಿಮೆದಾರರ ಅಡಿಯಲ್ಲಿ ಇದೇ ರೀತಿಯ ಪಾಲಿಸಿಗೆ ಕುಟುಂಬ ಸದಸ್ಯರನ್ನು ಅಥವಾ ಸ್ನೇಹಿತರನ್ನು ಉಲ್ಲೇಖಿಸಿದರೆ ನಂತರದ ಪ್ರೀಮಿಯಂನಲ್ಲಿ ಲಾಯಲ್ಟಿ ರಿಯಾಯಿತಿಗಳನ್ನು ಪಡೆಯಬಹುದು

 • 24/7 ನೀವು ಯಾವುದೇ ಸಮಯದಲ್ಲೂ ನಿಮ್ಮ ಪಾಲಿಸಿಯನ್ನು ಅಕ್ಸೆಸ್ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಟೋಲ್-ಫ್ರೀ ಕಾಲ್ ಸೆಂಟರ್ ಬೆಂಬಲವಿರುತ್ತದೆ

 • ಯಾವುದೇ ಅಡೆತಡೆಗಳ್ಳಿಲ್ಲದೆ ಆನ್ಲೈನ್‌ನಲ್ಲಿ ಪಾಲಿಸಿಗೆ ಅಪ್ಲಿಕೇಶನನ್ನು ಸಲ್ಲಿಸಬಹುದು ಮತ್ತು ನವೀಕರಿಸಬಹುದು

 • ಮುಪ್ಪನ್ನೂ ಒಳಗೊಂಡು ಜೀವಿತವಧಿಯಿಡೀ ಪಾಲಿಸಿಯನ್ನು ನವೀಕರಿಸುವ ಸಾಮರ್ಥ್ಯ

 • ನಿಮ್ಮ ಆಯ್ಕೆಯ ಯಾವುದೇ ಇನ್ಶೂರೆನ್ಸ್ ಪೂರೈಕೆದಾರರಿಗೆ ಇನ್ಶೂರೆನ್ಸ್ ಪಾಲಿಸಿಯನ್ನು ಪೋರ್ಟ್ ಮಾಡುವ ಸಾಮರ್ಥ್ಯ

ಹೆಲ್ತ್ ಇನ್ಶೂರೆನ್ಸ್‌ಗಾಗಿ ಅರ್ಹತೆ ಹಾಗೂ ಬೇಕಾಗುವ ಡಾಕ್ಯುಮೆಂಟ್‌ಗಳು

 • ಕನಿಷ್ಠ 18 ರಿಂದ 21 ವರ್ಷ ವಯಸ್ಸಿನ ವ್ಯಕ್ತಿಗಳು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದು

 • ಈ ಪಾಲಿಸಿಯಡಿ, 90 ದಿನಗಳಿಂದ 25 ವರ್ಷಗಳ ನಡುವಿನ ವಯಸ್ಸಿನ ಅವಲಂಬಿತ ಮಕ್ಕಳಿಗೆ ವಿಮಾ ರಕ್ಷಣೆ ನೀಡಬಹುದಾಗಿದೆ

 • ಹಿರಿಯ ನಾಗರೀಕರು 60 ವರ್ಷದ ನಂತರದಲ್ಲಿ ಅವರಿಗಾಗಿ ವಿನ್ಯಾಸ ಮಾಡಲಾದ ಪಾಲಿಸಿಗಳ ಅಡಿಯಲ್ಲಿ ಕವರ್ ಆಗಬಹುದು

 • ಸಾಮಾನ್ಯವಾಗಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ನಿಖರವಾಗಿ ತುಂಬಿದ ಮತ್ತು ಸಹಿಯೊಂದಿಗಿನ ಅಪ್ಲಿಕೇಶನ್ನಿನ ಫಾರಂ ಅನ್ನು ಹೊರತುಪಡಿಸಿ ಯಾವುದೇ ಡಾಕ್ಯುಮೆಂಟೇಶನ್ ಅಗತ್ಯವಿರುವುದಿಲ್ಲ. ಆದಾಗ್ಯೂ, ನೀವು ಒಂದು ನಿರ್ದಿಷ್ಟ ವಯಸ್ಸು ಮೀರಿ ಇದ್ದರೆ ವೈದ್ಯಕೀಯ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗಬಹುದು.

ನೀವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಖರೀದಿಸುವ ಮುನ್ನ ಪರಿಗಣಿಸಬೇಕಾದ ವಿಷಯಗಳು


 • ಯಾವ ರೀತಿಯ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಖರೀದಿಸಲು ಬಯಸಿದ್ದೀರಿ? ವೈಯಕ್ತಿಕ ಅಥವಾ ಕುಟುಂಬಕ್ಕಾಗಿ?

 • ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ಸೂಕ್ತವಾದ ಇನ್ಶೂರೆನ್ಸ್ ಪಾಲಿಸಿ ಯಾವುದು?

 • ಆಪ್ಷನ್-ಇನ್ ಗಾಗಿ ಯಾವ ಫೀಚರನ್ನು ಸೇರಿಸಬೇಕೆಂದು ನೀವು ಬಯಸಿದ್ದೀರಿ?

 • ಅನ್ವಯವಾಗುವ ಉಪ ಮಿತಿಗಳನ್ನು ತಿಳಿದುಕೊಳ್ಳಿ (ರೂಮ್ ಬಾಡಿಗೆ, ವೈದ್ಯರ ಶುಲ್ಕಗಳು, ವೈದ್ಯಕೀಯ ಪರೀಕ್ಷೆಯ ವೆಚ್ಚ ಮುಂತಾದ ವೆಚ್ಚಗಳನ್ನು ಒಳಗೊಂಡ ಒಟ್ಟು ಮೊತ್ತ)

 • ನೀತಿಯ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳು.

 • ಯಾವ ಕ್ಲೈಮ್‌ ಪ್ರಕ್ರಿಯೆಗಳನ್ನು ಬಯಸುತ್ತೀರಿ? (ನಗದುರಹಿತ, ರಿಯಂಬರ್ಸ್‌ಮೆಂಟ್)

 • ಪಾಲಿಸಿ ಸ್ವೀಕಾರಕ್ಕೆ ಮೊದಲು ವೈದ್ಯಕೀಯ ಪರೀಕ್ಷೆಗಳು ಬೇಕಾಗುತ್ತವೆಯೇ?

ಅಪ್ಲೈ ಮಾಡುವುದು ಹೇಗೆ

ಹೆಲ್ತ್ ಇನ್ಶೂರೆನ್ಸ್‌ಗಾಗಿ ಅಪ್ಲೈ ಮಾಡುವುದು ಸುಲಭ. ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರಂ ಅನ್ನು ಸರಳವಾಗಿ ಭರ್ತಿ ಮಾಡಿ, ಮತ್ತು ನಮ್ಮ ಪ್ರತಿನಿಧಿಯು ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಹೋಗಲು ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ನಿಮ್ಮ ಅಗತ್ಯಗಳಿಗಾಗಿ ಉತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತಾರೆ.