ಸರ್ಕಾರವು ಯಾವ ಹೋಮ್ ಲೋನ್ ಸಬ್ಸಿಡಿಯನ್ನು ನೀಡುತ್ತದೆ?
ಭಾರತ ಸರ್ಕಾರವು ಪರಿಚಯಿಸಿದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ), ಮಾರ್ಚ್ 2022 ರ ಒಳಗೆ ಎಲ್ಲರಿಗೂ ವಸತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯು ಪಿಎಂಎವೈ ಯ ಗಮನಾರ್ಹ ಭಾಗವಾಗಿದೆ, ಇದು ಸಾಲಗಾರರಿಗೆ ಹೋಮ್ ಲೋನ್ ಬಡ್ಡಿ ಸಬ್ಸಿಡಿಯನ್ನು ಒದಗಿಸುತ್ತದೆ. ಪಿಎಂಎವೈ ಯ ಇತರ ಮೂರು ಅಂಶಗಳೆಂದರೆ ಸಿಟು ಸ್ಲಮ್ ಮರುಅಭಿವೃದ್ಧಿ, ಫಲಾನುಭವಿ-ನೇತೃತ್ವದ ನಿರ್ಮಾಣ ಮತ್ತು ಪಾಲುದಾರಿಕೆಯಲ್ಲಿ ಕೈಗೆಟಕುವ ವಸತಿ.
ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್‌ಎಸ್‌ಎಸ್) ಭಾರತದಲ್ಲಿ ವಿವಿಧ ಹಣಕಾಸು ಸಂಸ್ಥೆಗಳ ಮೂಲಕ ಅರ್ಹ ವ್ಯಕ್ತಿಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಈ ಕಾರ್ಯಕ್ರಮದೊಂದಿಗೆ, ವಸತಿ ಅವಶ್ಯಕತೆಗಳಿಗೆ ಹಣಕಾಸು ಸಂಸ್ಥೆಗಳಲ್ಲಿ ಸಾಲದ ಹರಿವಿನ ಹೆಚ್ಚಳವನ್ನು ಸರ್ಕಾರವು ಉತ್ತೇಜಿಸುತ್ತದೆ. ರಾಷ್ಟ್ರೀಯ ವಸತಿ ಮಂಡಳಿ ಮತ್ತು ವಸತಿ ಮತ್ತು ನಗರ ಅಭಿವೃದ್ಧಿ ನಿಗಮವು ಈ ಯೋಜನೆಯನ್ನು ಮುಂದುವರಿಸಲು ಅಧಿಕಾರವನ್ನು ಪಡೆದ ಕೇಂದ್ರ ನೋಡಲ್ ಏಜೆನ್ಸಿಗಳಾಗಿವೆ.
ಪಿಎಂಎವೈ ಯೋಜನೆಯಡಿ ಬಜಾಜ್ ಫಿನ್‌ಸರ್ವ್‌ನಂತಹ ಸಾಲದಾತರಿಂದ ಹೋಮ್ ಲೋನ್ ಪಡೆಯುವ ಸಾಲಗಾರರು ರೂ. 2.67 ಲಕ್ಷದವರೆಗಿನ ಬಡ್ಡಿ ಸಬ್ಸಿಡಿಯನ್ನು ಆನಂದಿಸಬಹುದು.
ಪ್ರಧಾನ್ ಮಂತ್ರಿ ಹೋಮ್ ಲೋನ್ ಸಬ್ಸಿಡಿಗೆ ಯಾರು ಅರ್ಹರಾಗಿರುತ್ತಾರೆ?
ಭಾರತ ಸರ್ಕಾರದ ಹೋಮ್ ಲೋನ್ ಮೇಲಿನ ಬಡ್ಡಿ ಸಬ್ಸಿಡಿಯು 3 ಆದಾಯ ಗುಂಪುಗಳಿಗೆ ಲಭ್ಯವಿದೆ: ಇಡಬ್ಲ್ಯುಎಸ್, ಎಲ್‌ಐಜಿ ಮತ್ತು ಎಂಐಜಿ. ಇಡಬ್ಲ್ಯುಎಸ್ ಅಥವಾ ಆರ್ಥಿಕವಾಗಿ ದುರ್ಬಲ ವಿಭಾಗದ ಅರ್ಹತಾ ಮಾನದಂಡಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಓದಿ. ಮನೆಯ ವಾರ್ಷಿಕ ಆದಾಯ - ರೂ. 3 ಲಕ್ಷದವರೆಗೆ
- ಸಬ್ಸಿಡಿಯನ್ನು ಲೆಕ್ಕ ಹಾಕಲಾಗುವ ಹೋಮ್ ಲೋನ್ ಮೊತ್ತ - ರೂ. 6 ಲಕ್ಷದವರೆಗೆ
- ಬಡ್ಡಿ ಸಬ್ಸಿಡಿ ದರ – 6.50%
- ಮನೆಯ ಕಾರ್ಪೆಟ್ ಜಾಗ - 60 ಚದರ ಮೀಟರ್‌ಗಳವರೆಗೆ
ಕಡಿಮೆ ಆದಾಯ ಗುಂಪಿಗೆ ಅರ್ಹತಾ ಮಾನದಂಡ
ಎಲ್‌ಐಜಿ ಅಥವಾ ಕಡಿಮೆ ಆದಾಯ ಗುಂಪಿನ ಅಡಿಯಲ್ಲಿ ಬರುವ ಅರ್ಜಿದಾರರಿಗೆ
- ಮನೆತನದ ವಾರ್ಷಿಕ ಆದಾಯ - ರೂ. 3 ಲಕ್ಷದಿಂದ ರೂ. 6 ಲಕ್ಷದವರೆಗೆ
- ಸಬ್ಸಿಡಿಯನ್ನು ಲೆಕ್ಕ ಹಾಕಲಾಗುವ ಹೋಮ್ ಲೋನ್ ಮೊತ್ತ - ರೂ. 6 ಲಕ್ಷದವರೆಗೆ
- ಬಡ್ಡಿ ಸಬ್ಸಿಡಿ ದರ – 6.50%.
- ಮನೆಯ ಕಾರ್ಪೆಟ್ ಜಾಗ - 60 ಚದರ ಮೀಟರ್‌ಗಳವರೆಗೆ
ಇಡಬ್ಲ್ಯುಎಸ್ ಮತ್ತು ಎಲ್‌ಐಜಿ ಕೆಟಗರಿಗಳ ಅರ್ಜಿದಾರರು ರೂ. 2.67 ಲಕ್ಷದವರೆಗಿನ ಗರಿಷ್ಠ ಹೋಮ್ ಲೋನ್ ಸಬ್ಸಿಡಿಯನ್ನು ಪಡೆಯಬಹುದು.
ಮಧ್ಯಮ ಆದಾಯ ಗುಂಪಿಗೆ ಅರ್ಹತಾ ಮಾನದಂಡ I
ಮಧ್ಯಮ ಆದಾಯ ಗುಂಪು ಅಥವಾ ಎಂಐಜಿ I ಅಡಿಯಲ್ಲಿ ಬರುವವರಿಗೆ
- ಮನೆಯ ವಾರ್ಷಿಕ ಆದಾಯ - ರೂ. 6 ಲಕ್ಷದಿಂದ ರೂ. 12 ಲಕ್ಷದವರೆಗೆ
- ಸಬ್ಸಿಡಿಯನ್ನು ಲೆಕ್ಕ ಹಾಕಲಾಗುವ ಹೋಮ್ ಲೋನ್ ಮೊತ್ತ - ರೂ. 9 ಲಕ್ಷದವರೆಗೆ
- ಬಡ್ಡಿ ಸಬ್ಸಿಡಿ ದರ – 4%
- ಮನೆಯ ಕಾರ್ಪೆಟ್ ಜಾಗ - 160 ಚದರ ಮೀಟರ್‌ಗಳವರೆಗೆ
ಮಧ್ಯಮ ಆದಾಯ ಗುಂಪಿಗೆ ಅರ್ಹತಾ ಮಾನದಂಡ I
ಮಧ್ಯಮ ಆದಾಯ ಗುಂಪು ಅಥವಾ ಎಂಐಜಿ II ಅಡಿಯಲ್ಲಿ ಬರುವವರಿಗೆ
- ಮನೆತನದ ವಾರ್ಷಿಕ ಆದಾಯ - ರೂ. 12 ಲಕ್ಷದಿಂದ ರೂ. 18 ಲಕ್ಷದವರೆಗೆ
- ಸಬ್ಸಿಡಿಯನ್ನು ಲೆಕ್ಕ ಹಾಕಲಾಗುವ ಹೋಮ್ ಲೋನ್ ಮೊತ್ತ - ರೂ. 12 ಲಕ್ಷದವರೆಗೆ
- ಬಡ್ಡಿ ಸಬ್ಸಿಡಿ ದರ – 3%
- ಮನೆಯ ಕಾರ್ಪೆಟ್ ಜಾಗ - 200 ಚದರ ಮೀಟರ್‌ಗಳವರೆಗೆ
ಎಂಐಜಿ I ಮತ್ತು ಎಂಐಜಿ II ಕೆಟಗರಿಗಳ ಅರ್ಹ ಅಭ್ಯರ್ಥಿಗಳು ರೂ. 2.35 ಲಕ್ಷದವರೆಗಿನ ಹೋಮ್ ಲೋನ್ ಬಡ್ಡಿಯ ಮೇಲೆ ಗರಿಷ್ಠ ಸಬ್ಸಿಡಿ ಪಡೆಯಬಹುದು.
ಗಮನಿಸಿ: ಕಾರ್ಪೆಟ್ ಪ್ರದೇಶವು ನೀವು ಕಾರ್ಪೆಟ್ ರಚಿಸಬಹುದಾದ ಗೋಡೆಗಳ ಒಳಗೆ ನಿಜವಾದ ಪ್ರದೇಶವಾಗಿದೆ. ಇದು ಒಳಗಿನ ಗೋಡೆಯ ದಪ್ಪ ಮತ್ತು ಸಿಡಿಗಳು ಅಥವಾ ಲಾಬಿಯಂತಹ ಸಾಮಾನ್ಯ ಸ್ಥಳಗಳನ್ನು ಹೊರತುಪಡಿಸುತ್ತದೆ.
ಇತರ ಅರ್ಹತಾ ಅಂಶಗಳು
ವಾರ್ಷಿಕ ಆದಾಯದ ಹೊರತಾಗಿ, ಅರ್ಜಿದಾರರು ಈ ಕೆಳಗಿನ ಅವಶ್ಯಕತೆಗಳನ್ನು ಪೂರೈಸಬೇಕು:
- ಇಡಬ್ಲ್ಯುಎಸ್/ ಎಲ್‌ಐಜಿ ಗುಂಪುಗಳಿಗಾಗಿ, ಮಹಿಳಾ ಸದಸ್ಯರು ಮನೆಯನ್ನು ಹೊಂದಿರಬೇಕು ಅಥವಾ ಸಹ-ಮಾಲೀಕತ್ವ ಹೊಂದಿರಬೇಕು (ನಿಯಮ ಮತ್ತು ಷರತ್ತುಗಳನ್ನು ಅನ್ವಯಿಸಲಾಗಿದೆ).
- ಮನೆಯ ಯಾವುದೇ ಸದಸ್ಯರು ಈ ದೇಶದಲ್ಲಿ ಎಲ್ಲಿಯಾದರೂ ಪಕ್ಕಾ ಮನೆಯನ್ನು ಹೊಂದಿರಬಾರದು. ಹೊಸ ಆಸ್ತಿಯು ಅವರ ಮೊದಲ ಮನೆಯಾಗಿರಬೇಕು
- ಫಲಾನುಭವಿಯ ಕುಟುಂಬವು ಈ ಮೊದಲು ಯಾವುದೇ ಸರ್ಕಾರಿ ಬೆಂಬಲಿತ ವಸತಿ ಯೋಜನೆಯನ್ನು ಪಡೆದಿರಬಾರದು
- ಸಿಎಲ್‌ಎಸ್‌ಎಸ್ ಪ್ರಯೋಜನಗಳನ್ನು ಪಡೆಯುವ ಕುಟುಂಬವು ತಮ್ಮ ಅವಿವಾಹಿತ ಮಕ್ಕಳೊಂದಿಗೆ (ಮಗ/ಮಗಳು) ಪತಿ ಮತ್ತು ಪತ್ನಿಯನ್ನು ಒಳಗೊಂಡಿರಬೇಕು
- ವಿವಾಹಿತ ಅರ್ಜಿದಾರರ ಸಂದರ್ಭದಲ್ಲಿ, ಅಥವಾ ಎರಡೂ ಸಂಗಾತಿಗಳು ಒಂದೇ ಆಸ್ತಿಯ ಮೇಲೆ ಹೋಮ್ ಲೋನ್ ಮೇಲೆ ಸಬ್ಸಿಡಿಯನ್ನು ಪಡೆಯಲು ಅರ್ಹರಾಗಬಹುದು
- ಕುಟುಂಬದ ವಯಸ್ಕ ಗಳಿಸುವ ಸದಸ್ಯರನ್ನು ಈ ಹೋಮ್ ಲೋನ್ ಬಡ್ಡಿ ಸಬ್ಸಿಡಿಯ ಸ್ವತಂತ್ರ ಫಲಾನುಭವಿ ಎಂದು ಪರಿಗಣಿಸಲಾಗುತ್ತದೆ
- ವಸತಿ ಆಸ್ತಿಯ ಖರೀದಿ, ನಿರ್ಮಾಣ ಅಥವಾ ನವೀಕರಣಕ್ಕಾಗಿ ಬಳಸಿದ ಹಣಕ್ಕೆ ಹೋಮ್ ಲೋನ್ ಬಡ್ಡಿ ದರ ಮೇಲಿನ ಸಬ್ಸಿಡಿ ಅನ್ವಯವಾಗುತ್ತದೆ. ಆದಾಗ್ಯೂ, ಎಂಐಜಿ I ಮತ್ತು ಎಂಐಜಿ II ಅರ್ಜಿದಾರರು ಮನೆ ಖರೀದಿಸಲು ಮಾತ್ರ ಲೋನ್ ಮೊತ್ತವನ್ನು ಬಳಸಬಹುದು
- ಈ ಪಿಎಂಎವೈ ಸಿಎಲ್‌ಎಸ್‌ಎಸ್ ಯೋಜನೆಯ ಅಡಿಯಲ್ಲಿ, ಹೋಮ್ ಲೋನ್‌ನ ಗರಿಷ್ಠ ಅವಧಿಯು 20 ವರ್ಷಗಳಾಗಿರಬೇಕು
ಸಿಎಲ್‌ಎಸ್‌ಎಸ್ ಪ್ರಯೋಜನಕ್ಕಾಗಿ ಅರ್ಜಿಗಳನ್ನು ಅನುಮೋದಿಸುವಾಗ, ಸರ್ಕಾರವು ಮಹಿಳೆಯರು, ಮಂಗಳಮುಖಿಯರು, ಅಲ್ಪಸಂಖ್ಯಾತರು ಮತ್ತು ವಿಧವೆಯರಿಗೆ ಮನೆ ಮಾಲೀಕತ್ವ ನೀಡಲು ಪ್ರೋತ್ಸಾಹಿಸಲು ಆದ್ಯತೆ ನೀಡುತ್ತದೆ.
ಸಿಎಲ್‌ಎಸ್‌ಎಸ್‌ನ ಪ್ರಯೋಜನಗಳು ಯಾವುವು?
- ಸಾಲಗಾರರು ತಮ್ಮ ಲೋನ್ ಅಕೌಂಟಿನಲ್ಲಿ ನೇರವಾಗಿ ಸರ್ಕಾರದಿಂದ ಸಬ್ಸಿಡಿ ಮೊತ್ತವನ್ನು ಪಡೆಯುತ್ತಾರೆ. ಇದು ಅವರ ಬಾಕಿ ಅಸಲು ಮೊತ್ತವನ್ನು ಕಡಿಮೆ ಮಾಡುತ್ತದೆ, ಹೀಗಾಗಿ ಅವರ ನಂತರದ ಇಎಂಐಗಳನ್ನು ಕಡಿಮೆ ಮಾಡುತ್ತದೆ
- ಇಎಂಐ ಗಳು ಹೆಚ್ಚು ನಿರ್ವಹಿಸಬಹುದಾದ್ದರಿಂದ, ಹೌಸಿಂಗ್ ಲೋನನ್ನು ಮರುಪಾವತಿಸುವುದು ಸುಲಭ. ಆದಾಗ್ಯೂ, ಸಾಲಗಾರರು ಮೂಲ ಇಎಂಐ ಮೊತ್ತವನ್ನು ಪಾವತಿಸುವುದನ್ನು ಮುಂದುವರೆಸಲು ಆಯ್ಕೆ ಮಾಡಿದರೆ, ಲೋನ್ ಅವಧಿಯು ಕಡಿಮೆಯಾಗುತ್ತದೆ. ಸಾಲಗಾರರಾಗಿ, ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನೀವು ಸೂಕ್ತ ಆಯ್ಕೆಯನ್ನು ಆರಿಸಬಹುದು
- ಈ ಬಡ್ಡಿ ಸಬ್ಸಿಡಿಯನ್ನು ಕ್ಲೈಮ್ ಮಾಡುವ ಅರ್ಜಿದಾರರು ಹೋಮ್ ಲೋನ್ ಮೇಲೆ ತೆರಿಗೆ ಪ್ರಯೋಜನಗಳನ್ನು ಕೂಡ ಪಡೆಯಬಹುದು. ಐಟಿ ಕಾಯ್ದೆ 1961 ಪ್ರಕಾರ, ಪಾವತಿಸಬೇಕಾದ ಬಡ್ಡಿಯ ಮೇಲೆ ರೂ. 2 ಲಕ್ಷದವರೆಗಿನ ತೆರಿಗೆ ವಿನಾಯಿತಿಗಳು ಮತ್ತು ಅಸಲು ಮರುಪಾವತಿಯ ಮೇಲೆ ರೂ. 1.5 ಲಕ್ಷದವರೆಗೆ ಒಂದು ಹಣಕಾಸು ವರ್ಷದಲ್ಲಿ ಕ್ಲೈಮ್ ಮಾಡಬಹುದು
ಉದಾಹರಣೆಯೊಂದು ಇಲ್ಲಿದೆ:
ನೀವು 20 ವರ್ಷಗಳ ಮರುಪಾವತಿ ಅವಧಿಯೊಂದಿಗೆ ರೂ. 32 ಲಕ್ಷದ ಲೋನ್ ಪಡೆಯುತ್ತೀರಿ, ಮತ್ತು ನೀವು ಎಂಐಜಿ II ವರ್ಗದ ಅಡಿಯಲ್ಲಿ ಬರುತ್ತೀರಿ. ಎಂದುಕೊಳ್ಳಿ ಸಾಮಾನ್ಯವಾಗಿ, ಪ್ರತಿ ತಿಂಗಳ ಇಎಂಐ ಗಳು ಸುಮಾರು ರೂ. 31,000 ಗೆ ಬರುತ್ತವೆ. ಈಗ, ಬಡ್ಡಿ ಸಬ್ಸಿಡಿಗೆ ಅರ್ಹವಾದ ಲೋನ್ ಮೊತ್ತ ರೂ. 12 ಲಕ್ಷ. ಎಕ್ಸೆಲ್ ಪಿಎಂಟಿ ಫಾರ್ಮುಲಾ ಆಧಾರದ ಮೇಲೆ 3% ಸಬ್ಸಿಡಿ ದರದೊಂದಿಗೆ ನಿಮ್ಮ ಇಎಂಐಗಳನ್ನು ನೀವು ಲೆಕ್ಕ ಹಾಕಿದರೆ, ಇಎಂಐ ಗಳು ಪ್ರತಿ ತಿಂಗಳಿಗೆ ಸುಮಾರು ರೂ. 7,000 ಆಗಿರುತ್ತವೆ.
ನಿಮ್ಮ ಸಬ್ಸಿಡಿ ಮೊತ್ತ ಮತ್ತು ನೀವು ತ್ವರಿತವಾಗಿ ಬರುವ ಕೆಟಗರಿಯನ್ನು ಪರಿಶೀಲಿಸಲು ಬಜಾಜ್ ಫಿನ್‌ಸರ್ವ್ ಒದಗಿಸುವ ಆನ್ಲೈನ್ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಕ್ಯಾಲ್ಕುಲೇಟರ್ ಬಳಸಿ. ನೀವು ಈ ಕೆಳಗಿನ ವಿವರಗಳನ್ನು ಮಾತ್ರ ನಮೂದಿಸಬೇಕು - ಮರುಪಾವತಿ ಅವಧಿ, ಹೋಮ್ ಲೋನ್ ಮೊತ್ತ, ನಿಮ್ಮ ಮನೆಯ ವಾರ್ಷಿಕ ಆದಾಯ ಮತ್ತು ಕಾರ್ಪೆಟ್ ಏರಿಯಾ. ಅಲ್ಲದೆ, ಅರ್ಹತೆ ಪಡೆಯಲು ಇದು ನಿಮ್ಮ 1ನೇ ಪಕ್ಕಾ ಮನೆ ಎಂದು ಖಚಿತಪಡಿಸಿ.
ಹೋಮ್ ಲೋನ್ ಸಬ್ಸಿಡಿಗೆ ಅಪ್ಲೈ ಮಾಡುವುದು ಹೇಗೆ?
ಅರ್ಹ ಅರ್ಜಿದಾರರು ಪಿಎಲ್‌ಐಗಳು ಅಥವಾ ಪ್ರೈಮ್ ಲೆಂಡಿಂಗ್ ಸಂಸ್ಥೆಗಳೊಂದಿಗೆ ಸಿಎಲ್‌ಎಸ್‌ಎಸ್ ಅಡಿಯಲ್ಲಿ ನೇರವಾಗಿ ಹೋಮ್ ಲೋನಿಗೆ ಅಪ್ಲೈ ಮಾಡಬಹುದು. ಹೌಸಿಂಗ್ ಲೋನ್‌ಗಳ ಮೇಲೆ ಸಬ್ಸಿಡಿ ದರಗಳನ್ನು ನೀಡಲು ಕೇಂದ್ರ ನೋಡಲ್ ಏಜೆನ್ಸಿಗಳೊಂದಿಗೆ ಪಾಲುದಾರಿಕೆ ಹೊಂದಿರುವ ಎನ್‌ಬಿಎಫ್‌ಸಿಗಳು, ಸಹಕಾರಿ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಪಿಎಲ್‌ಐಗಳಾಗಿವೆ. 70 ಹಣಕಾಸು ಸಂಸ್ಥೆಗಳು ಎನ್‌ಎಚ್‌ಬಿ ಮತ್ತು ಹುಡ್ಕೋ ಜೊತೆಗೆ ಸಹಯೋಗ ಮಾಡಿವೆ. ಅನುಸರಿಸಲು ಹಂತಗಳು ಹೀಗಿವೆ.
- ಸಂಪರ್ಕದಲ್ಲಿರಿ
ನಮ್ಮನ್ನು ಸಂಪರ್ಕಿಸಿ ಮತ್ತು ಸಿಎಲ್‌ಎಸ್‌ಎಸ್ ಪ್ರಯೋಜನಗಳಿಗಾಗಿ ನೀವು ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಅಪ್ಲೈ
ನೀವು ಲೋನ್ ಸಬ್ಸಿಡಿ ಅಪ್ಲಿಕೇಶನ್ ಫಾರ್ಮ್ ಅನ್ನು ಪಡೆಯುತ್ತೀರಿ. ನಿಖರ ವಿವರಗಳೊಂದಿಗೆ ಅದನ್ನು ಭರ್ತಿ ಮಾಡಿ.
- ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ
ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್‌ಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಸಲ್ಲಿಸಿ. ಅಪ್ಡೇಟ್ ಆದ ಪೇಪರ್‌ಗಳನ್ನು ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಿ.
- ಲೋನ್ ಪಡೆಯಿರಿ
ಡಾಕ್ಯುಮೆಂಟ್‌ಗಳು ಮತ್ತು ಆಸ್ತಿಯ ಪರಿಶೀಲನೆಯ ನಂತರ ಲೋನ್ ಮೊತ್ತವನ್ನು ನಿಮ್ಮ ಅಕೌಂಟಿಗೆ ವಿತರಿಸಲಾಗುತ್ತದೆ.
- ಸಬ್ಸಿಡಿಯ ಮರುಪಾವತಿ
ನಿಮ್ಮ ಅಪ್ಲಿಕೇಶನನ್ನು ಪ್ರಕ್ರಿಯೆಗೊಳಿಸಲು ಮತ್ತು ನಿಮ್ಮ ಲೋನ್ ಅಕೌಂಟಿನಲ್ಲಿ ಸಬ್ಸಿಡಿ ಇರುವ ಹಣವನ್ನು ಮರುಪಾವತಿಸಲು ಬಜಾಜ್ ಫಿನ್‌ಸರ್ವ್ ನೋಡಲ್ ಏಜೆನ್ಸಿಗಳನ್ನು ಸಂಪರ್ಕಿಸುತ್ತದೆ.
ಗಮನಿಸಿ: ಯಾವುದೇ ಸಾಲ ನೀಡುವ ಸಂಸ್ಥೆಯು ಸಿಎಲ್‌ಎಸ್‌ಎಸ್ ಅಡಿಯಲ್ಲಿ ಹೋಮ್ ಲೋನನ್ನು ಮಂಜೂರು ಮಾಡಲು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ಹಕ್ಕುತ್ಯಾಗ:
ಪಿಎಂಎವೈ ಯೋಜನೆಯ ಮಾನ್ಯತೆಯನ್ನು ವಿಸ್ತರಿಸಲಾಗಿಲ್ಲ.
- ಇಡಬ್ಲ್ಯೂಎಸ್/ ಎಲ್ಐಜಿ ಯೋಜನೆಗಳನ್ನು ನಿಲ್ಲಿಸಲಾಗಿದೆ. ಮಾರ್ಚ್ 31, 2022
- ಎಂಐಜಿ ಯೋಜನೆಗಳನ್ನು (ಎಂಐಜಿ I ಮತ್ತು ಎಂಐಜಿ II) ನಿಲ್ಲಿಸಲಾಗಿದೆ. ಮಾರ್ಚ್ 31, 2021
ಬಡ್ಡಿ ಸಬ್ಸಿಡಿಯೊಂದಿಗೆ ಹೋಮ್ ಲೋನಿಗಾಗಿ ಬಜಾಜ್ ಫಿನ್‌ಸರ್ವ್ ಅನ್ನು ಏಕೆ ಸಂಪರ್ಕಿಸಬೇಕು?
ನಿಮ್ಮ ಆಸ್ತಿ ಖರೀದಿ ಅಥವಾ ನಿರ್ಮಾಣದ ಅಗತ್ಯಗಳನ್ನು ಪೂರೈಸಲು ಕಸ್ಟಮೈಜ್ ಮಾಡಿದ ಅತ್ಯಂತ ಸ್ಪರ್ಧಾತ್ಮಕ ಹೌಸಿಂಗ್ ಫೈನಾನ್ಸ್ ಪರಿಹಾರಗಳಲ್ಲಿ ಒಂದನ್ನು ಬಜಾಜ್ ಫಿನ್‌ಸರ್ವ್ ಒದಗಿಸುತ್ತದೆ. ನಿಮ್ಮ ಮೊದಲ ಹೋಮ್ ಲೋನ್ ಮೇಲೆ ಬಡ್ಡಿ ಸಬ್ಸಿಡಿಯನ್ನು ಪಡೆಯಿರಿ ಮತ್ತು ನಮ್ಮೊಂದಿಗೆ ಲೋನಿಗೆ ಅಪ್ಲೈ ಮಾಡುವ ಮೂಲಕ ರೂ. 2.67 ಲಕ್ಷದವರೆಗೆ ಉಳಿತಾಯ ಮಾಡಿ ಮತ್ತು ಸ್ಪರ್ಧಾತ್ಮಕ ಬಡ್ಡಿ ದರವನ್ನು ಸಹ ಆನಂದಿಸಿ. ಕುಟುಂಬದ ಗಳಿಕೆದಾರ ಸದಸ್ಯರಾಗಿ, ನಿಮ್ಮ ಹೆಸರಿನಲ್ಲಿ ಆಸ್ತಿಯನ್ನು ಹೊಂದಲು ಈ ಕೈಗೆಟಕುವ ಹೌಸಿಂಗ್ ಲೋನನ್ನು ಪಡೆಯಿರಿ.
ಬಜಾಜ್ ಫಿನ್‌ಸರ್ವ್ ಸಂಬಳದ ಮತ್ತು ಸ್ವಯಂ ಉದ್ಯೋಗಿಗಳಿಗೆ ಹೆಚ್ಚಿನ ಮೌಲ್ಯದ ಹಣಕಾಸನ್ನು ಒದಗಿಸುತ್ತದೆ. ಸಂಬಳದ ಅರ್ಜಿದಾರರು ರೂ. 10 ಲಕ್ಷದಿಂದ ಆರಂಭವಾಗುವ ಲೋನಿಗೆ ಅಪ್ಲೈ ಮಾಡಬಹುದು. ನಿಮ್ಮ ಹೋಮ್ ಲೋನ್ ಮೇಲೆ ತ್ವರಿತ ಅನುಮೋದನೆಗಾಗಿ ಈ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿ.
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು
ಸಂಬಳ ಪಡೆಯುವ ವ್ಯಕ್ತಿಗಳಿಗೆ 28 ರಿಂದ 58 ವರ್ಷಗಳು, ಸ್ವಯಂ ಉದ್ಯೋಗಿಗಳಿಗೆ 25 ರಿಂದ 70 ವರ್ಷಗಳು
-
ಉದ್ಯೋಗ ಸ್ಥಿತಿ
ಸಂಬಳ ಪಡೆಯುವ ವ್ಯಕ್ತಿಗಳಿಗೆ ಕನಿಷ್ಠ 3 ವರ್ಷಗಳ ಅನುಭವ, ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಕನಿಷ್ಠ 5 ವರ್ಷಗಳ ಬಿಸಿನೆಸ್ ನಿರಂತರತೆ.
-
ಸಿಬಿಲ್ ಸ್ಕೋರ್
750 ಅಥವಾ ಅದಕ್ಕಿಂತ ಹೆಚ್ಚು
ನಿಮ್ಮ ನಿವಾಸದ ರಾಜ್ಯದ ಪ್ರಕಾರ ಕನಿಷ್ಠ ಸಂಬಳದ ಅವಶ್ಯಕತೆಗಳನ್ನು ನೋಡಲು ಹೋಮ್ ಲೋನಿಗೆ ಸಂಪೂರ್ಣ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
ಬಜಾಜ್ ಫಿನ್‌ಸರ್ವ್ ಹೋಮ್ ಲೋನ್‌ಗಳ ಪ್ರಯೋಜನಗಳು
ಒಮ್ಮೆ ನೀವು ಅರ್ಹರಾದರೆ, ಈ ಅಡಮಾನ ಲೋನಿಗೆ ಅಪ್ಲೈ ಮಾಡಿ ಮತ್ತು ಈ ಕೆಳಗಿನಂತಹ ವಿಶೇಷ ಪ್ರಯೋಜನಗಳನ್ನು ಪಡೆಯಿರಿ.
- ಯಾವುದೇ ಭಾಗಶಃ-ಮುಂಪಾವತಿ ಮತ್ತು ಫೋರ್‌ಕ್ಲೋಸರ್ ಶುಲ್ಕಗಳಿಲ್ಲ
- ಆಸ್ತಿ ಹುಡುಕಾಟ ಮತ್ತು ಆಸ್ತಿ ಪತ್ರಗಳಂತಹ ಮೌಲ್ಯವರ್ಧಿತ ಸೇವೆಗಳು
- ಆನ್ಲೈನ್ ಅಕೌಂಟ್ ನಿರ್ವಹಣಾ ಸೌಲಭ್ಯ 24X7
- ಆನ್ಲೈನ್ ಹೋಮ್ ಲೋನ್
- ಕಡಿಮೆ ಡಾಕ್ಯುಮೆಂಟೇಶನ್
- ನಿಮಿಷಗಳಲ್ಲಿ ಡಿಜಿಟಲ್ ಮಂಜೂರಾತಿ ಪತ್ರ
- ಅನುಕೂಲಕರ ಕಾಲಾವಧಿ
- ಆರಂಭಿಕ ಅವಧಿಯಲ್ಲಿ ನಿಮ್ಮ ಇಎಂಐಗಳನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡುವ ಫ್ಲೆಕ್ಸಿ ಹೈಬ್ರಿಡ್ ಫೀಚರ್
ಇದಲ್ಲದೆ, ಕಡಿಮೆ ಬಡ್ಡಿ ದರಗಳನ್ನು ಆನಂದಿಸಲು ನಿಮ್ಮ ಅಸ್ತಿತ್ವದಲ್ಲಿರುವ ಸಾಲದಾತರಿಂದ ನಿಮ್ಮ ಮನೆಯನ್ನು ನಮಗೆ ಬದಲಾಯಿಸಲು ಸುಲಭವಾದ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯದ ಪ್ರಯೋಜನವನ್ನು ನೀವು ಪಡೆಯುತ್ತೀರಿ. ಈ ಸಂದರ್ಭದಲ್ಲಿ, ನೀವು ಸಾಕಷ್ಟು ಟಾಪ್-ಅಪ್ ಲೋನನ್ನು ಕೂಡ ಪಡೆಯಬಹುದು. ಇದು ನಾಮಮಾತ್ರದ ಬಡ್ಡಿ ದರದಲ್ಲಿ ಮನೆ-ಸಂಬಂಧಿತ ಅಥವಾ ಇತರ ಯಾವುದೇ ವೆಚ್ಚಗಳನ್ನು ಪರಿಹರಿಸಲು ನೀವು ಪಡೆಯಬಹುದಾದ ಹೆಚ್ಚುವರಿ ಕ್ರೆಡಿಟ್ ಅನ್ನು ಸೂಚಿಸುತ್ತದೆ.
ಗಮನಿಸಿ: ನೀವು ಈಗಾಗಲೇ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಮೇಲೆ ಬಡ್ಡಿ ಸಬ್ಸಿಡಿಯನ್ನು ಪಡೆದಿದ್ದರೆ, ಉತ್ತಮ ದರಗಳಿಗಾಗಿ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯವನ್ನು ಪಡೆಯುವಾಗ ನೀವು ಇನ್ನೊಂದು ಸಬ್ಸಿಡಿಯನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ.
ನಿಮ್ಮ ಮಾಸಿಕ ಕಂತುಗಳನ್ನು ಮುಂಚಿತವಾಗಿ ಲೆಕ್ಕ ಹಾಕಿ
ಬಜಾಜ್ ಫಿನ್‌ಸರ್ವ್ ನಾಮಮಾತ್ರದ ಸಂಬಂಧಿತ ಶುಲ್ಕಗಳು ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲದೆ ಅತ್ಯಂತ ಕೈಗೆಟಕುವ ಹೋಮ್ ಲೋನ್ ಬಡ್ಡಿ ದರಗಳಲ್ಲಿ ಒಂದನ್ನು ಒದಗಿಸುತ್ತದೆ. ನಮ್ಮ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ಲೋನ್ ಮರುಪಾವತಿಗೆ ನಿಮ್ಮ ಮಾಸಿಕ ಹೊರಹರಿವುಗಳನ್ನು ನೀವು ಪರಿಶೀಲಿಸಬಹುದು
ಇದು ಆನ್ಲೈನ್ ಕ್ಯಾಲ್ಕುಲೇಟರ್ ಆಗಿದ್ದು, ಅಸಲು ಮತ್ತು ಬಡ್ಡಿ ಮತ್ತು ಒಟ್ಟು ಪಾವತಿಸಬೇಕಾದ ಬಡ್ಡಿಯನ್ನು ಒಳಗೊಂಡಂತೆ ನಿಮ್ಮ ಲೋನ್ ಇಎಂಐಗಳನ್ನು ಲೆಕ್ಕ ಹಾಕುತ್ತದೆ. ಮೂಲಭೂತ ವಿವರಗಳನ್ನು ಒದಗಿಸಿ - ಲೋನ್ ಮೊತ್ತ, ನಿಮ್ಮ ಆದ್ಯತೆಯ ಅವಧಿ ಮತ್ತು ಬಡ್ಡಿ ದರ. ಇದು ಗಣಿತದ ಫಾರ್ಮುಲಾ ಇಎಂಐ = [P x R x (1+R)^N]/[(1+R)^N-1] ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಆನ್ಲೈನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಮರುಪಾವತಿಯನ್ನು ಕಾರ್ಯತಂತ್ರವಾಗಿ ಯೋಜಿಸಲು ಮತ್ತು ನಿಮ್ಮ ಹಣಕಾಸನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ನಿಮ್ಮ ಹಣಕಾಸಿನ ಸಾಮರ್ಥ್ಯಗಳನ್ನು ಪರಿಗಣಿಸಿ, ಆದ್ಯತೆಯ ಲೋನ್ ಮೊತ್ತವು ನಿಮಗೆ ಸಾಧ್ಯವಾಗುತ್ತದೆಯೇ ಎಂಬುದನ್ನು ಮೌಲ್ಯಮಾಪನ ಮಾಡಲು ನೀವು ಅದನ್ನು ಬಳಸಬಹುದು.
ಆದ್ದರಿಂದ, ಉತ್ತಮ ಫೀಚರ್‌ಗಳು ಮತ್ತು ಪ್ರಯೋಜನಗಳಿಗಾಗಿ ಇಂದೇ ಬಜಾಜ್ ಫಿನ್‌ಸರ್ವ್‌ನಿಂದ ಹೋಮ್ ಲೋನಿಗೆ ಅಪ್ಲೈ ಮಾಡಿ ಮತ್ತು ನಿಮ್ಮ ಮೊದಲ ಮನೆಯನ್ನು ಸುಲಭವಾಗಿ ಪಡೆಯಿರಿ.