ಲೈಫ್‌ ಇನ್ಶೂರೆನ್ಸ್‌ ಕುರಿತು ಆಗಾಗ ಕೇಳುವ ಪ್ರಶ್ನೆಗಳು | ಬಜಾಜ್‌ ಫಿನ್‌ಸರ್ವ್

ಆಗಾಗ ಕೇಳುವ ಪ್ರಶ್ನೆಗಳು

ಮೈನರ್ ನನ್ನು ಇನ್ಶೂರೆನ್ಸ್ ಪಾಲಿಸಿಯ ನಾಮಿನಿಯನ್ನಾಗಿ ಮಾಡಬಹುದೇ?

ಹೌದು, ಚಿಕ್ಕವರನ್ನು ಸಹ ಪಾಲಿಸಿಯ ನಾಮಿನಿಯನ್ನಾಗಿಸಬಹುದು. ಆದರೂ, ಅವನು ಅಥವಾ ಅವಳು ನೇಮಕಾತಿ ರೂಪದಲ್ಲಿ ಒಂದು ಕಾನೂನು ಗಾರ್ಡಿಯನ್ ಹೊಂದಿರಬೇಕು.

ನಾನು ನನ್ನ ಇನ್ಶೂರೆನ್ಸ್ ಪಾಲಿಸಿಯಲ್ಲಿ ನಾಮಿನಿಯನ್ನು ಬದಲಾಯಿಸಬಹುದೇ?

ಹೌದು. ಪಾಲಿಸಿಯ ಮುಕ್ತಾಯ ದಿನಾಂಕಕ್ಕಿಂತ ಮುಂಚಿತವಾಗಿ ನೀವು ಲೈಫ್ ಇನ್ಶೂರೆನ್ಸ್ ಪಾಲಿಸಿ ಹೋಲ್ಡರ್ ಆಗಿ ನಿಮ್ಮ ನಾಮಿನಿಯನ್ನು ಬದಲಾಯಿಸಬಹುದು

ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೀತಿಯ ಲೈಫ್ ಇನ್ಶೂರೆನ್ಸ್ ಪಾಲಿಸಿಗಳು ಯಾವುವು?

ಇನ್ಶೂರೆನ್ಸ್ ಪಾಲಿಸಿಗಳನ್ನು ವಿಸ್ತಾರವಾಗಿ ಲೈಫ್ ಮತ್ತು ಜನರಲ್ ಇನ್ಶೂರೆನ್ಸ್ ಪ್ರಾಡಕ್ಟ್‌ಗಳಾಗಿ ವಿಂಗಡಿಸಲಾಗಿದೆ. ಲೈಫ್ ಇನ್ಶೂರೆನ್ಸ್ ಪಾಲಿಸಿಗಳು ಜೀವನದ ನಷ್ಟದ ವಿರುದ್ಧ ಹಣಕಾಸಿನ ರಕ್ಷಣೆ ನೀಡುತ್ತವೆ. ಜನರಲ್ ಇನ್ಶೂರೆನ್ಸ್ ಪ್ರಾಡಕ್ಟ್‌ಗಳು ಜೀವನದ ಹಂತಗಳಿಗೆ ಸಂಬಂಧಪಡದ ವೈದ್ಯಕೀಯ ಅವಶ್ಯಕತೆಗಳು, ಅಪಘಾತಗಳು, ಮನೆಗಳು, ಪ್ರಯಾಣ, ಆಟೋಮೊಬೈಲ್‌ಗಳು ಮುಂತಾದವುಗಳ ಮೇಲೆ ಆರ್ಥಿಕ ರಕ್ಷಣೆ ನೀಡುತ್ತದೆ.

ನನ್ನ ಇನ್ಶೂರೆನ್ಸ್ ಅಗತ್ಯವನ್ನು ನಾನು ಹೇಗೆ ಖಚಿತಪಡಿಸಿಕೊಳ್ಳಬೇಕು ಅಥವಾ ಪ್ರಮಾಣೀಕರಿಸಬೇಕು?

ನೀವು ಆಯ್ಕೆ ಮಾಡುವ ಇನ್ಸೂರೆನ್ಸ್ ಕವರ್ ಮೊತ್ತವು ನಿಮ್ಮ ರಕ್ಷಣೆಯ ಅಗತ್ಯತೆ ಮೇಲೆ ಆಧಾರಿತವಾಗಿರುತ್ತದೆ. ಒಂದುವೇಳೆ ನೀವು ಆಸ್ತಿ ಇನ್ಶೂರೆನ್ಸಿಗೆ ಅಪ್ಲೈ ಮಾಡುತ್ತಿದ್ದಲ್ಲಿ ಅದರ ಮೌಲ್ಯವು ಸಾಮಾನ್ಯವಾಗಿ ಆ ಆಸ್ತಿಯನ್ನು ಬದಲಾಯಿಸುವ ಖರ್ಚನ್ನು ಒಳಗೊಂಡಿರಬೇಕು. ಅದೇ ತೆರನಾಗಿ ಟರ್ಮ್ ಪ್ಲಾನ್ ನ ಅಂತಿಮ ಪಾವತಿಯು ಒಂದು ವೇಳೆ ನೀವು ತೀರಿಕೊಂಡ ಸಮಯದಲ್ಲಿ ನಿಮ್ಮ ಕುಟುಂಬಕ್ಕೆ ಉಂಟಾಗುವ ಹಣಕಾಸು ನಷ್ಟವನ್ನು ಭರಿಸಬೇಕು. ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ (ULIP), ಇಂಡೋವ್ಮೆಂಟ್ ಅಥವಾ ಹೋಲ್ ಲೈಫ್ ಪಾಲಿಸಿಗಳು ನಿಮ್ಮ ಒಟ್ಟಾರೆ ಹಣಕಾಸು ಪ್ಲಾನಿನ ಲೈನಿನಲ್ಲಿ ಬರಬೇಕು ಮತ್ತು ನೀವು ಬಳಸಲು ನಿರೀಕ್ಷಿಸಿದ ಸಮಯದಲ್ಲಿ ನೀವು ಹಣವನ್ನು ಪಡೆಯಲು ನಿಮ್ಮನ್ನು ಸಬಲರನ್ನಾಗಿ ಮಾಡಬೇಕು.

ನನಗೆ ಇನ್ಶೂರೆನ್ಸ್ ಏಕೆ ಬೇಕು?

ಮರಣ, ಅಪಘಾತ, ಅನಾರೋಗ್ಯ, ಇತ್ಯಾದಿ ಅನಿರೀಕ್ಷಿತ ಘಟನೆಗಳಿಂದ ವ್ಯಕ್ತಿಯ, ಒಬ್ಬರ ಕುಟುಂಬ ಮತ್ತು ಆಸ್ತಿಗಳಿಗೆ ಹಣಕಾಸಿನ ರಕ್ಷಣೆ ಒದಗಿಸುವ ಉದ್ದೇಶವನ್ನು ಇನ್ಶೂರೆನ್ಸ್ ಹೊಂದಿದೆ. ಒಂದು ಕ್ಲಾಸಿಕ್ ಇನ್ಶೂರೆನ್ಸ್ ಪಾಲಿಸಿ ಅಂದರೆ, ಟರ್ಮ್ ಯೋಜನೆ, ನಿಮ್ಮ ಮರಣದಂತಹ ಅನಿರೀಕ್ಷಿತ ಘಟನೆಯಲ್ಲಿ ನಿಮ್ಮ ಕುಟುಂಬಕ್ಕೆ ಹಣಕಾಸಿನ ಸಹಾಯವನ್ನು ಒದಗಿಸುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ನಿಮ್ಮ ದಿನನಿತ್ಯದ ಸಂಪತ್ತು, ನಿವೃತ್ತಿಯ ಯೋಜನೆ, ನಿಮ್ಮ ಮನೆ ಮತ್ತು ವೈಯಕ್ತಿಕ ವಸ್ತುಗಳ ರಕ್ಷಣೆ, ವೈದ್ಯಕೀಯ ಖರ್ಚುಗಳನ್ನು ಮರುಪಾವತಿಸುವುದು, ಆಸ್ಪತ್ರೆಗಳ ಬಿಲ್‌‌ಗಳು ಇತ್ಯಾದಿಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡಲು ಆಧುನಿಕ ಇನ್ಶೂರೆನ್ಸ್ ಪಾಲಿಸಿಗಳು ವಿಕಸನಗೊಂಡಿವೆ.

ಲೈಫ್ ಇನ್ಶೂರೆನ್ಸ್ ಎಂದರೇನು?

ಲೈಫ್ ಇನ್ಶೂರೆನ್ಸ್ ಎಂಬುದು ಒಂದು ಯೋಜನೆಯಾಗಿದ್ದು, ವಿಮಾದಾರನ ಮರಣದ ರೀತಿಯ ದುರದೃಷ್ಟಕರ ಸಂಭವನೀಯತೆಯ ಸಂದರ್ಭದಲ್ಲಿ ವಿಮಾದಾರನ ಕುಟುಂಬ ಸದಸ್ಯರಿಗೆ ಹಣಕಾಸಿನ ರಕ್ಷಣೆ ಒದಗಿಸುವ ಗುರಿಯನ್ನು ಹೊಂದಿದೆ.