ಪಿಎಂಎವೈ ಫೀಚರ್‌ಗಳು ಮತ್ತು ಪ್ರಯೋಜನಗಳು

'ಎಲ್ಲರಿಗೂ ವಸತಿ' (ಎಚ್ಎಫ್ಎ) ಮಿಷನ್ ಅಡಿಯಲ್ಲಿ 2015 ರಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಅದರ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಪ್ರಕಾರ, ಹೋಮ್ ಲೋನ್ ಆಯ್ಕೆ ಮಾಡುವ ಫಲಾನುಭವಿಗಳು ರೂ. 2.67 ಲಕ್ಷದವರೆಗಿನ ಬಡ್ಡಿ ಸಬ್ಸಿಡಿ ಪಡೆಯಬಹುದು. ಮನೆಗಳ ಸ್ವಾಧೀನ ಅಥವಾ ನಿರ್ಮಾಣ ಹಾಗೂ ಮರು-ಖರೀದಿಗೆ ಹೌಸಿಂಗ್ ಲೋನ್ ತೆಗೆದುಕೊಳ್ಳುವ ಅರ್ಹ ಫಲಾನುಭವಿಗಳಿಗೆ ಈ ಮೊತ್ತವನ್ನು ಒದಗಿಸಲಾಗುತ್ತದೆ.

PMAY 2021-22 ಫಲಾನುಭವಿ

 • ಫಲಾನುಭವಿ ಕುಟುಂಬವು ಗಂಡ, ಹೆಂಡತಿ, ಅವಿವಾಹಿತ ಮಕ್ಕಳು ಮತ್ತು/ ಅಥವಾ ಅವಿವಾಹಿತ ಹೆಣ್ಣುಮಕ್ಕಳನ್ನು ಒಳಗೊಂಡಿರುತ್ತದೆ
 • ಒಬ್ಬ ಪ್ರೌಢ ಗಳಿಸುವ ಸದಸ್ಯರನ್ನು (ವೈವಾಹಿಕ ಸ್ಥಾನಮಾನವನ್ನು ಲೆಕ್ಕಿಸದೆ) ಪ್ರತ್ಯೇಕ ಕುಟುಂಬವಾಗಿ ಪರಿಗಣಿಸಬಹುದು

PM ಆವಾಸ್ ಯೋಜನೆ 2022 ಪ್ರಮುಖ ಮಾನದಂಡಗಳು*:

 

ವಿವರಗಳು

MIG I

MIG II

ಮನೆಯ ಆದಾಯ (ರೂ. ವಾರ್ಷಿಕ)

6,00,001-12,00,000

12,00,001-18,00,000

ಬಡ್ಡಿ ಸಬ್ಸಿಡಿಗಾಗಿ ಅರ್ಹ ಹೌಸಿಂಗ್ ಲೋನ್‌‌ ಮೊತ್ತ (ರೂ.)

9, 00, 000 ವರೆಗೆ

12, 00, 000 ವರೆಗೆ

ಬಡ್ಡಿ ಸಬ್ಸಿಡಿ (% ವಾರ್ಷಿಕವಾಗಿ)

4.00%

3.00%

ಗರಿಷ್ಠ ಲೋನ್ ಅವಧಿ (ವರ್ಷಗಳಲ್ಲಿ)

20

20

ವಾಸದ ಘಟಕದ ಗರಿಷ್ಠ ಕಾರ್ಪೆಟ್ ಪ್ರದೇಶ

160 Sq. ಎಂ.

200 Sq. ಎಂ.

ನಿವ್ವಳ ಪ್ರಸ್ತುತ ಮೌಲ್ಯಕ್ಕೆ (NPV) ರಿಯಾಯಿತಿ ದರ ಬಡ್ಡಿ ಸಬ್ಸಿಡಿಯ (%) ಲೆಕ್ಕಾಚಾರ

9.00%

9.00%

ಗರಿಷ್ಠ ಬಡ್ಡಿ ಸಬ್ಸಿಡಿ ಮೊತ್ತ (ರೂ.)

2,35,068

2,30,156

ಸಬ್ಸಿಡಿ ಅನ್ವಯವಾಗುವ ಲೋನ್‌ ಮೊತ್ತಕ್ಕೆ ಸಂಸ್ಕರಣಾ ಶುಲ್ಕದ (ರೂ.) ಬದಲಿಗೆ PLIಗಳಿಗೆ ಮಂಜೂರಾದ ಒಟ್ಟಾರೆ ಮೊತ್ತ

2,000

2,000

ಮಂಜೂರಾದ ಲೋನ್ ಮೇಲೆ ಅಥವಾ ಅದರ ನಂತರ ಪಡೆದ ಸ್ಕೀಮ್ ಮೇಲಿನ ಅಪ್ಲಿಕೇಶನ್

01.01.2017

ಯಾವುದೇ ಪುಕ್ಕಾ ಮನೆಯಿಲ್ಲದಿರುವವರಿಗೆ ಅನ್ವಯ

ಹೌದು

ಹೌದು

ಮಹಿಳಾ ಮಾಲೀಕತ್ವ/ಸಹ-ಮಾಲೀಕತ್ವ

ಕಡ್ಡಾಯವಲ್ಲ

ಕಡ್ಡಾಯವಲ್ಲ

ಮನೆ/ಫ್ಲಾಟ್ ನಿರ್ಮಾಣದ ಗುಣಮಟ್ಟ

ರಾಷ್ಟ್ರೀಯ ಬಿಲ್ಡಿಂಗ್ ಕೋಡ್, BIS ಕೋಡ್‌ಗಳು ಮತ್ತು NDMA ಮಾರ್ಗದರ್ಶಿಗಳನ್ನು ಅಳವಡಿಸಲಾಗಿದೆ

ಕಟ್ಟಡ ವಿನ್ಯಾಸಕ್ಕೆ ಅನುಮೋದನೆಗಳು

ಕಡ್ಡಾಯ

ಮೂಲಭೂತ ನಾಗರೀಕ ಸೌಲಭ್ಯಗಳು (ನೀರು, ನಿರ್ಮಲೀಕರಣ, ಒಳಚರಂಡಿ, ರಸ್ತೆ, ವಿದ್ಯುತ್ ಇತ್ಯಾದಿ)

ಕಡ್ಡಾಯ


*ಪ್ರಧಾನ ಮಂತ್ರಿ ಆವಾಸ ಯೋಜನೆ (PMAY) ಅಡಿಯಲ್ಲಿ ಭಾರತ ಸರ್ಕಾರ ರೂಪಿಸಿದ ಸ್ಕೀಮ್ ಆಧಾರದಲ್ಲಿ ಈ ಮೇಲಿನ ವಿವರಗಳನ್ನು ನಮೂದಿಸಲಾಗಿದೆ.. ಭಾರತ ಸರ್ಕಾರವು ಈ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಿದಾಗ ಇವು ಬದಲಾಗಬಹುದು. ಈ ಯೋಜನೆಯ ಅಡಿಯಲ್ಲಿನ ಪ್ರಯೋಜನಗಳನ್ನು ಬಜಾಜ್ ಫಿನ್‌ಸರ್ವ್‌ ಒದಗಿಸುವ ಹೋಮ್ ಲೋನಿಗೆ ಮಾತ್ರ ಪಡೆಯಬಹುದು.

ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY) - 2022 ಬಗ್ಗೆ

ಏರುತ್ತಿರುವ ರಿಯಲ್ ಎಸ್ಟೇಟ್ ದರಗಳ ನಡುವೆಯೂ ಜನರು ಮನೆ ಖರೀದಿಸುವಂತಾಗಲು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯನ್ನು (ಪಿಎಂಎವೈ) ಭಾರತ ಸರ್ಕಾರ ಆರಂಭಿಸಿತು. ಈ ಯೋಜನೆಯು 31 ಮಾರ್ಚ್ 2022 ರ ಒಳಗೆ "ಎಲ್ಲರಿಗೂ ವಸತಿ" ಉದ್ದೇಶವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಈ ವರ್ಷವು ಮಹಾತ್ಮಾ ಗಾಂಧಿಯ 150ನೇ ಜನ್ಮ ವರ್ಷವಾಗಿದೆ ಮತ್ತು ಈ ಯೋಜನೆಯು ದೇಶಾದ್ಯಂತ 20 ಮಿಲಿಯನ್ ಮನೆಗಳನ್ನು ನಿರ್ಮಿಸುವ ಮೂಲಕ ಈ ಗುರಿಯನ್ನು ಪೂರೈಸುವ ಗುರಿಯನ್ನು ಹೊಂದಿದೆ. ಇದು ತಲುಪುವ ಪ್ರದೇಶಗಳ ಆಧಾರದ ಮೇಲೆ, ಈ ಯೋಜನೆಯು, ನಗರ ಮತ್ತು ಗ್ರಾಮೀಣ ಎಂಬ ಎರಡು ಭಾಗಗಳನ್ನು ಹೊಂದಿದೆ.

1. ಪ್ರಧಾನ್ ಮಂತ್ರಿ ಆವಾಸ್ ಯೋಜನೆ – ನಗರ (ಪಿಎಂಎವೈ-ಯು)

ಸದ್ಯಕ್ಕೆ, ಪಿಎಂಎವೈ-ಎಚ್‌ಎಫ್‌ಎ (ನಗರ) ಯೋಜನೆಯು ಸುಮಾರು 4,331 ಪಟ್ಟಣಗಳು ಮತ್ತು ನಗರಗಳನ್ನು ವ್ಯಾಪಿಸುತ್ತದೆ. ಇದು ನಗರಾಭಿವೃದ್ಧಿ ಪ್ರಾಧಿಕಾರ, ವಿಶೇಷ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ, ಅಭಿವೃದ್ಧಿ ಪ್ರದೇಶ, ಅಧಿಸೂಚಿತ ಯೋಜನೆ ಮತ್ತು ನಗರ ಯೋಜನೆ ಮತ್ತು ನಿಬಂಧನೆಗಳಿಗೆ ಜವಾಬ್ದಾರರಾಗಿರುವ ಇತರ ಎಲ್ಲ ಪ್ರಾಧಿಕಾರಗಳನ್ನು ಸಹ ಒಳಗೊಂಡಿದೆ.

ಈ ಯೋಜನೆಯ ಈ ಕೆಳಗಿನ ಮೂರು ಹಂತಗಳಲ್ಲಿ ಪ್ರಗತಿಯಾಗಿದೆ:
ಹಂತ 1: ಏಪ್ರಿಲ್ 2015 ಮತ್ತು ಮಾರ್ಚ್ 2017 ರ ನಡುವೆ ಆಯ್ದ ರಾಜ್ಯಗಳು ಮತ್ತು ಯುಟಿಗಳಲ್ಲಿ 100 ನಗರಗಳನ್ನು ಕವರ್ ಮಾಡುವುದು.
ಹಂತ 2: ಏಪ್ರಿಲ್ 2017 ಮತ್ತು ಮಾರ್ಚ್ 2019 ರ ನಡುವೆ 200 ಹೆಚ್ಚುವರಿ ನಗರಗಳನ್ನು ಕವರ್ ಮಾಡುವುದು.
ಹಂತ 3: ಏಪ್ರಿಲ್ 2019 ಮತ್ತು ಮಾರ್ಚ್ 2022 ರ ನಡುವೆ ಉಳಿದ ನಗರಗಳನ್ನು ಕವರ್ ಮಾಡುವುದು.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಡೇಟಾ ಪ್ರಕಾರ, 1ನೇ ಜುಲೈ 2019 ರಂತೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿಎಂಎವೈ-ಯು ಪ್ರಗತಿ ಈ ಕೆಳಗಿನಂತಿದೆ:

 • ಮಂಜೂರಾದ ಮನೆಗಳು: 83.63 ಲಕ್ಷ
 • ಪೂರ್ಣಗೊಂಡ ಮನೆಗಳು: 26.08 ಲಕ್ಷ
 • ಸ್ವಾಧೀನಪಡಿಸಿಕೊಂಡ ಮನೆಗಳು: 23.97 ಲಕ್ಷ

ಅದೇ ಡೇಟಾ ಪ್ರಕಾರ, ಹೂಡಿಕೆ ಮಾಡಲಾಗಿದೆ ಎಂದು ಪರಿಗಣಿಸಲಾದ ಒಟ್ಟು ಮೊತ್ತವು ರೂ. 4,95,838 ಕೋಟಿ, ಇದರಲ್ಲಿ ರೂ. 51,414.5 ಕೋಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

20 ಜನವರಿ 2021 ರಂದು ನಡೆಸಲಾದ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿಯ (ಸಿಎಸ್‌ಎಂಸಿ) 52ನೇ ಸಭೆಯಲ್ಲಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ (ಪಿಎಂಎವೈ-ನಗರ) ಯೋಜನೆಯಡಿ ಭಾರತ ಸರ್ಕಾರವು 1.68 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಹೇಳಿದೆ.

2 ಪ್ರಧಾನ್ ಮಂತ್ರಿ ಆವಾಸ್ ಯೋಜನಾ ಗ್ರಾಮೀಣ (PMAY-G)

ಪ್ರಧಾನ್ ಮಂತ್ರಿ ಆವಾಸ್ ಯೋಜನಾ ಗ್ರಾಮೀಣ ಯೋಜನೆಯನ್ನು ಮುಂಚೆ ಇಂದಿರಾ ಆವಾಸ್ ಯೋಜನೆ ಎಂದು ಕರೆಯಲಾಗುತ್ತಿತ್ತು, ಇದನ್ನು ಮಾರ್ಚ್ 2016 ರಲ್ಲಿ ಮರುಹೆಸರಿಸಲಾಯಿತು. ದೆಹಲಿ ಮತ್ತು ಚಂಡೀಗಢ್ ಹೊರತುಪಡಿಸಿ, ಭಾರತದ ಗ್ರಾಮೀಣ ಪ್ರದೇಶಗಳಿಗೆ ವಸತಿಯ ಅವಕಾಶ ಒದಗಿಸಲು ಮತ್ತು ಕೈಗೆಟಕುವಂತಾಗಲು ಪ್ರಚುರಪಡಿಸುವ ಗುರಿ ಹೊಂದಲಾಗಿದೆ.

ಮನೆ ಇಲ್ಲದವರಿಗೆ ಮತ್ತು ಜೀರ್ಣವಾದ ಮನೆಗಳಲ್ಲಿ ವಾಸವಿರುವವವರಿಗೆ ಪಕ್ಕಾ ಮನೆಯನ್ನು ಕಟ್ಟಲು ಸಹಾಯವಾಗಲು ಹಣಕಾಸು ನೆರವನ್ನು ಒದಗಿಸುವುದೇ ಗುರಿಯಾಗಿರುತ್ತದೆ. ಬಯಲು ಸೀಮೆಯಲ್ಲಿ ವಾಸಿಸುತ್ತಿರುವ ಫಲಾನುಭವಿಗಳು ರೂ. 1.2 ಲಕ್ಷದವರೆಗೆ ಮತ್ತು ಈಶಾನ್ಯ, ಗುಡ್ಡ ಪ್ರದೇಶಗಳು, ಸಂಯೋಜಿತ ಕ್ರಿಯಾ ಯೋಜನೆ (ಐಎಪಿ) ಮತ್ತು ದುರ್ಗಮ ಪ್ರದೇಶಗಳಲ್ಲಿ ವಾಸಿಸುವವರು ಈ ವಸತಿ ಪ್ರಯತ್ನದಿಂದಾಗಿ ರೂ. 1.3 ಲಕ್ಷದವರೆಗೆ ಪಡೆಯಬಹುದು. ಸದ್ಯಕ್ಕೆ, ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ ಲಭ್ಯವಿರುವ ಡೇಟಾ ಪ್ರಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,03,01,107 ಮನೆಗಳನ್ನು ಮಂಜೂರು ಮಾಡಲಾಗಿದೆ.

ರಿಯಲ್ ಎಸ್ಟೇಟ್ ವಲಯದಲ್ಲಿ ಖರೀದಿಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಸರ್ಕಾರವು ಪಿಎಂ ಆವಾಸ್ ಯೋಜನೆಯನ್ನು ಪ್ರಾರಂಭಿಸಿದ್ದು, ಈ ವಸತಿ ಅಭಿವೃದ್ಧಿಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಈ ಕೆಳಗಿನ ವಿಧಾನಗಳಲ್ಲಿ ಹಂಚಿಕೊಳ್ಳಲಾಗುತ್ತದೆ:

 • ಸಮತಟ್ಟು ಪ್ರದೇಶಗಳಿಗೆ60:40
 • 90:10 ಈಶಾನ್ಯ ಭಾರತ ಮತ್ತು ಗುಡ್ಡುಗಾಡು ಪ್ರದೇಶಗಳಿಗೆ

ಪಿಎಂಎವೈ ಯೋಜನೆಯ ಫಲಾನುಭವಿಗಳನ್ನು ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ (ಎಸ್‌ಇಸಿಸಿ) ಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ ಗುರುತಿಸಲಾಗುತ್ತದೆ ಮತ್ತು ಇವುಗಳನ್ನು ಒಳಗೊಂಡಿದೆ:

 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು
 • ಬಿಪಿಎಲ್ ಅಡಿಯಲ್ಲಿ ಎಸ್‌ಸಿ/ ಎಸ್‌ಟಿ ಮತ್ತು ಅಲ್ಪಸಂಖ್ಯಾತರಲ್ಲದವರು
 • ವಿಮುಕ್ತರಾದ ಜೀತದಾಳುಗಳು
 • ಅರೆಸೈನಿಕ ಪಡೆಗಳ ಬಂಧುಗಳು ಮತ್ತು ವಿಧವೆಯರು ಮತ್ತು ವೃತ್ತಿ ಮಾಡುವಾಗ ಕೊಲ್ಲಲ್ಪಟ್ಟ ವ್ಯಕ್ತಿಗಳು, ಮಾಜಿ ಸೈನಿಕರು ಮತ್ತು ನಿವೃತ್ತಿ ಯೋಜನೆಯಡಿ ಲ್ಲಿ ಇರುವ ಜನಗಳು

ಪಿಎಂ ಆವಾಸ್ ಯೋಜನೆಯ ಘಟಕಗಳು 2022

ಈ ಯೋಜನೆಯ ನಾಲ್ಕು ಪ್ರಾಥಮಿಕ ಅಂಶಗಳಿವೆ:

 • ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ (ಸಿಎಲ್‌ಎಸ್‌ಎಸ್)*

  ಈ ಯೋಜನೆಗೆ ಅರ್ಹರಾದವರಿಗೆ ಪಾವತಿಸಬೇಕಾದ ಹೋಮ್ ಲೋನ್ ಬಡ್ಡಿಯ ಮೇಲೆ ಸಿಎಲ್‌ಎಸ್‌ಎಸ್ ಸಬ್ಸಿಡಿಗಳನ್ನು ಒದಗಿಸುತ್ತದೆ. ಪಿಎಂಎವೈ ಸಬ್ಸಿಡಿ ದರ, ಸಬ್ಸಿಡಿ ಮೊತ್ತ, ಗರಿಷ್ಠ ಲೋನ್ ಮೊತ್ತ ಮತ್ತು ಇತರ ವಿವರಗಳನ್ನು ಕೆಳಗಿನ ಪಟ್ಟಿಯಲ್ಲಿ ಪಟ್ಟಿ ಮಾಡಲಾಗಿದೆ:

 

EWS

LIG

ಗರಿಷ್ಠ ಹೋಮ್ ಲೋನ್ ಮೊತ್ತ

3 ಲಕ್ಷದವರೆಗೆ

₹ 3 - 6 ಲಕ್ಷ

ಬಡ್ಡಿ ಸಬ್ಸಿಡಿ

6.50%*

6.50%*

ಗರಿಷ್ಠ ಬಡ್ಡಿ ಸಬ್ಸಿಡಿ ಮೊತ್ತ

ರೂ. 2,67,280

ರೂ. 2,67,280

ಗರಿಷ್ಠ ಕಾರ್ಪೆಟ್ ಏರಿಯಾ

60 Sq. ಎಂ.

60 Sq. ಎಂ.

 

 

MIG I

MIG II

ಗರಿಷ್ಠ ಹೋಮ್ ಲೋನ್ ಮೊತ್ತ

₹ 6 - 12 ಲಕ್ಷ

₹ 12 - 18 ಲಕ್ಷ

ಬಡ್ಡಿ ಸಬ್ಸಿಡಿ

4.00%

3.00%

ಗರಿಷ್ಠ ಬಡ್ಡಿ ಸಬ್ಸಿಡಿ ಮೊತ್ತ

ರೂ. 2,35,068

ರೂ. 2,30,156

ಗರಿಷ್ಠ ಕಾರ್ಪೆಟ್ ಏರಿಯಾ

160 Sq. ಎಂ.

200 Sq. ಎಂ.


CLSS ಅಡಿಯಲ್ಲಿ ಹೋಮ್ ಲೋನ್‌ಗಳು 20 ವರ್ಷಗಳ ಗರಿಷ್ಠ ಕಾಲಾವಧಿಯನ್ನು ಹೊಂದಿವೆ. NPV ಅಥವಾ ಸದ್ಯದ ನಿವ್ವಳ ಮೊತ್ತವನ್ನು ಬಡ್ಡಿ ಸಬ್ಸಿಡಿಯ 9% ರಿಯಾಯಿತಿ ದರದಲ್ಲಿ ಲೆಕ್ಕ ಹಾಕಲಾಗುವುದು

 • "ಭೂಮಿಯನ್ನು ಸಂಪನ್ಮೂಲವಾಗಿ ಬಳಸಿಕೊಂಡು ಇನ್-ಸಿಟು" ಕೊಳೆಗೇರಿ ಪುನರಾಭಿವೃದ್ಧಿ (ಐಎಸ್ಎಸ್ಆರ್)

ಅಂತಹ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಿಗೆ ಮನೆಗಳನ್ನು ಒದಗಿಸಲು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಭೂಮಿಯನ್ನು ಸಂಪನ್ಮೂಲವಾಗಿ ಬಳಸಿ ಕೊಳೆಗೇರಿಗಳನ್ನು ಪುನರ್ವಸತಿ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.. ಕೇಂದ್ರ ಸರ್ಕಾರ ಮನೆಗಳ ಬೆಲೆಗಳನ್ನು ನಿರ್ಧರಿಸುತ್ತದೆ ಮತ್ತು ಫಲಾನುಭವಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಕೊಡುಗೆಯನ್ನು (ಯಾವುದಾದರೂ ಇದ್ದಲ್ಲಿ) ನಿರ್ಧರಿಸುತ್ತದೆ.

 • ಕೈಗೆಟುಕುವ ವಸತಿ ಪಾಲುದಾರಿಕೆ (ಎಎಚ್‌ಪಿ)

ಕೈಗೆಟುಕುವ ವಸತಿ ಪಾಲುದಾರಿಕೆ (AHP) ಮನೆಗಳನ್ನು ಖರೀದಿಸಲು EWS ಕುಟುಂಬಗಳಿಗೆ ಕೇಂದ್ರ ಸರ್ಕಾರದ ಪರವಾಗಿ ರೂ . 1.5 ಲಕ್ಷ ಹಣಕಾಸು ಸಹಾಯವನ್ನು ಒದಗಿಸುತ್ತದೆ. ಅಂತಹ ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಏಜೆನ್ಸಿಗಳು ಅಥವಾ ಖಾಸಗಿ ವಲಯದೊಂದಿಗೆ ಪಾಲುದಾರಿಕೆ ಮಾಡಬಹುದು.

 • ಫಲಾನುಭವಿಗಳ ನೇತೃತ್ವದಲ್ಲಿ ವೈಯಕ್ತಿಕ ಮನೆ ನಿರ್ಮಾಣ ಅಥವಾ ಅಭಿವೃದ್ಧಿ

PM ಆವಾಸ್ ಯೋಜನೆಯ ಈ ಘಟಕವು EWS ಕುಟುಂಬಗಳನ್ನು ಗುರಿಯಾಗಿರಿಸಿಕೊಂಡಿದ್ದು ಯಾರು ಹಿಂದಿನ ಮೂರು ಘಟಕಗಳಲ್ಲಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲವೋ ಅವರಿಗೆ ನೀಡಲಾಗುವುದು. ಅಂತಹ ಫಲಾನುಭವಿಗಳು ಕೇಂದ್ರ ಸರ್ಕಾರದಿಂದ ರೂ. 1.5 ಲಕ್ಷದವರೆಗೆ ಹಣಕಾಸು ಸಹಾಯ ಪಡೆಯುತ್ತಾರೆ ಮತ್ತು ಅದನ್ನು ಮನೆ ಕಟ್ಟಲು ಅಥವಾ ಇದ್ದ ಮನೆಯನ್ನು ಉತ್ತಮವಾಗಿಸಲು ಬಳಸಬಹುದು.

ಹಕ್ಕುತ್ಯಾಗ:

ಪಿಎಂಎವೈ ಯೋಜನೆಯ ಮಾನ್ಯತೆಯನ್ನು ವಿಸ್ತರಿಸಲಾಗಿಲ್ಲ.

 • ಇಡಬ್ಲ್ಯೂಎಸ್/ ಎಲ್ಐಜಿ ಯೋಜನೆಗಳನ್ನು ನಿಲ್ಲಿಸಲಾಗಿದೆ. ಮಾರ್ಚ್ 31, 2022
 • ಎಂಐಜಿ ಯೋಜನೆಗಳನ್ನು (ಎಂಐಜಿ I ಮತ್ತು ಎಂಐಜಿ II) ನಿಲ್ಲಿಸಲಾಗಿದೆ. ಮಾರ್ಚ್ 31, 2021

ಪಿಎಂಎವೈ ಆಗಾಗ ಕೇಳುವ ಪ್ರಶ್ನೆಗಳು

ಪಿಎಂಎವೈ-ಎಚ್‌ಎಫ್‌ಎ (ನಗರ) ಎಂದರೇನು?

ಪ್ರಧಾನ್ ಮಂತ್ರಿ ಆವಾಸ್ ಯೋಜನೆ - ನಗರ (ಪಿಎಂಎವೈ-ಯು), ಹೆಸರೇ ಸೂಚಿಸುವಂತೆ, ಈ ಯೋಜನೆಯು ಭಾರತದಾದ್ಯಂತ ನಗರ ಸ್ಥಳಗಳಲ್ಲಿ ಬಡವರಿಗೆ ಕಡಿಮೆ ವೆಚ್ಚ, ಪಕ್ಕಾ ಮನೆಗಳನ್ನು ಒದಗಿಸುವ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಪಿಎಂಎವೈ-ಯು ಯೋಜನೆಯು ಪಿಎಂಎವೈ ಯೋಜನೆಯಂತೆಯೇ ಗುರಿಯನ್ನು ಹೊಂದಿದೆ - 2022 ರ ಒಳಗೆ ಎಲ್ಲಾ (ಎಚ್ಎಫ್ಎ) ವಸತಿಯನ್ನು ಒದಗಿಸುವುದು.

ಪಿಎಂಎವೈ ಸಬ್ಸಿಡಿ ಎಂದರೇನು?

ಪಿಎಂಎವೈ ಅಥವಾ ಪಿಎಂ ಆವಾಸ್ ಯೋಜನೆಯು 2022 ರ ಒಳಗೆ ಎಲ್ಲರಿಗೂ ವಸತಿ ಒದಗಿಸುವುದರ ಮೇಲೆ ಗಮನಹರಿಸುವ ಸರ್ಕಾರಿ ಯೋಜನೆಯಾಗಿದೆ. ಪಿಎಂಎವೈ ಯೋಜನೆಯು ನಾಲ್ಕು ಸಿಎಲ್‌ಎಸ್‌ಎಸ್ ಕೆಟಗರಿಗಳಾದ ಇಡಬ್ಲ್ಯೂಎಸ್, ಎಲ್‌ಐಜಿ, ಎಂಐಜಿ I, ಮತ್ತು ಎಂಐಜಿ II ಮೂಲಕ ಹೋಮ್ ಲೋನ್‌ಗಳ ಮೇಲೆ 6.5% ವರೆಗಿನ ಬಡ್ಡಿ ಸಬ್ಸಿಡಿಯನ್ನು ಒದಗಿಸುತ್ತದೆ.

ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಯಾರು ಅರ್ಹರಾಗಿದ್ದಾರೆ?

ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಪಿಎಂಎವೈ ಅರ್ಹತಾ ಮಾನದಂಡಗಳು ಈ ರೀತಿಯಾಗಿವೆ:

ಆದಾಯದ ರೇಂಜ್

PMAY ಅರ್ಹತಾ ಮಾನದಂಡ

ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯುಎಸ್):

ರೂ. 3 ಲಕ್ಷದವರೆಗಿನ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳು.

ಕಡಿಮೆ ಆದಾಯದ ಗುಂಪು (ಎಲ್ಐಜಿ):

ರೂ. 3 ಲಕ್ಷ ಮತ್ತು ರೂ. 6 ಲಕ್ಷದ ನಡುವಿನ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳು.

ಮಧ್ಯಮ ಆದಾಯ ಗುಂಪು I (ಎಂಐಜಿ I):

ರೂ. 6 ಲಕ್ಷ ಮತ್ತು ರೂ. 12 ಲಕ್ಷದ ನಡುವಿನ ವಾರ್ಷಿಕ ಆದಾಯದ ಕುಟುಂಬಗಳು.

ಮಧ್ಯಮ ಆದಾಯ ಗುಂಪು II (ಎಂಐಜಿ II):

ರೂ. 12 ಲಕ್ಷ ಮತ್ತು ರೂ. 18 ಲಕ್ಷದ ನಡುವಿನ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳು.

ಇದು ಇಡಬ್ಲ್ಯುಎಸ್ ಮತ್ತು ಎಲ್‌ಐಜಿ ವರ್ಗಗಳು ಮತ್ತು ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ) ಗೆ ಸಂಬಂಧಿಸಿದ ಮಹಿಳೆಯರನ್ನು ಒಳಗೊಂಡಿದೆ.

ಮೇಲಿನವುಗಳ ಜೊತೆಗೆ, ಅರ್ಜಿದಾರರು ಈ ಕೆಳಗಿನ ಮಾನದಂಡಗಳನ್ನು ಕೂಡ ಪೂರೈಸಬೇಕು:

 • ಅರ್ಜಿದಾರರು ದೇಶದ ಯಾವುದೇ ಭಾಗದಲ್ಲಿ ಮನೆಯನ್ನು ಹೊಂದಿರಬಾರದು
 • ಅರ್ಜಿದಾರರು ರಾಜ್ಯ ಅಥವಾ ಕೇಂದ್ರ ಸರ್ಕಾರವು ನೀಡುವ ಯಾವುದೇ ಇತರ ವಸತಿ ಯೋಜನೆಯ ಪ್ರಯೋಜನಗಳನ್ನು ಪಡೆದಿರಬಾರದು
ಪಿಎಂಎವೈ ಯೋಜನೆ 2021-22 ಗೆ ನಾನು ಹೇಗೆ ಅಪ್ಲೈ ಮಾಡಬಹುದು?

ನೀವು ಪಿಎಂಎವೈ ಗೆ ಅಪ್ಲೈ ಮಾಡಬಹುದು:

 • ಆನ್ಲೈನ್‌
  ಮಾನ್ಯ ಆಧಾರ್ ಕಾರ್ಡ್ ಬಳಸಿ ಆನ್ಲೈನಿನಲ್ಲಿ ಅಪ್ಲೈ ಮಾಡಲು ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು
 • ಆಫ್ಲೈನ್
  ಸಾಮಾನ್ಯ ಸೇವಾ ಕೇಂದ್ರದಲ್ಲಿ (ಸಿಎಸ್‌ಸಿ) ಲಭ್ಯವಿರುವ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಆಫ್‌ಲೈನ್‌ನಲ್ಲಿ ಅಪ್ಲೈ ಮಾಡಿ. ಫಾರ್ಮ್‌ಗೆ ನೀವು ರೂ. 25 + ಜಿಎಸ್‌ಟಿ ಪಾವತಿಸಬೇಕು.
ಪಿಎಂಎವೈ 2022 ಫಲಾನುಭವಿ ಪಟ್ಟಿಯಲ್ಲಿ ನಾನು ನನ್ನ ಹೆಸರನ್ನು ಹೇಗೆ ಪರಿಶೀಲಿಸಬಹುದು?

ಯೋಜನೆಗೆ ಅರ್ಹರಾಗಿರುವವರು ಈ ಕೆಲವು ಹಂತಗಳನ್ನು ಅನುಸರಿಸುವ ಮೂಲಕ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಪಟ್ಟಿ ನಲ್ಲಿ ತಮ್ಮ ಹೆಸರನ್ನು ಪರಿಶೀಲಿಸಬಹುದು:

 • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
 • 'ಫಲಾನುಭವಿಯನ್ನು ಹುಡುಕಿ' ಕ್ಲಿಕ್ ಮಾಡಿ’
 • ಆಧಾರ್ ನಂಬರ್ ನಮೂದಿಸಿ
 • 'ತೋರಿಸಿ' ಕ್ಲಿಕ್ ಮಾಡಿ’.
ಅಸ್ತಿತ್ವದಲ್ಲಿರುವ ಹೋಮ್ ಲೋನ್ ಸಾಲಗಾರರಿಗೆ PM ಆವಾಸ್ ಯೋಜನೆ ಲಭ್ಯವಿದೆಯೇ?

ಅಸ್ತಿತ್ವದಲ್ಲಿರುವ ಹೋಮ್ ಲೋನ್ ಸಾಲಗಾರರು ಈ ಯೋಜನೆಗೆ ಅರ್ಹರಾಗಿದ್ದಾರೆ ಆದರೆ ಅವರು ಎಲ್ಲಾ ಸಂಬಂಧಿತ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.

ಕೈಗೆಟುಕುವ ವಸತಿಯನ್ನು ಒದಗಿಸುವಲ್ಲಿ ಪಿಎಂ ಆವಾಸ್ ಯೋಜನೆಯು ಗಮನಾರ್ಹ ಪಾತ್ರವನ್ನು ವಹಿಸಿದೆ. ಈ ಯೋಜನೆಯ ಪಾತ್ರವು ಎಲ್ಲರಿಗೂ ವಸತಿಯನ್ನು ಅಕ್ಸೆಸ್ ಮಾಡಲು ಮತ್ತು ಕೈಗೆಟಕುವಂತೆ ಮಾಡಲು ಸೀಮಿತವಾಗಿಲ್ಲ. ಇದು ರಿಯಲ್ ಎಸ್ಟೇಟ್ ವಲಯದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸಿದೆ. ಈ ಯೋಜನೆಯು, RERA ಸೇರ್ಪಡೆಯೊಂದಿಗೆ, ರಾಷ್ಟ್ರದಾದ್ಯಂತ ಸುಮಾರು 6.07 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲು ಕಾರಣವಾಯಿತು.

ಇನ್ನಷ್ಟು ಓದಿರಿ ಕಡಿಮೆ ಓದಿ