ಹೋಮ್ ಲೋನಿಗೆ ಸೂಕ್ತವಾದ ಅವಧಿ ಎಷ್ಟು?

2 ನಿಮಿಷದ ಓದು

ಪಾವತಿಸಬೇಕಾದ ಒಟ್ಟು ಬಡ್ಡಿಯನ್ನು ನಿರ್ಧರಿಸುವಲ್ಲಿ ಹೋಮ್ ಲೋನ್ ಅವಧಿ ಪಾತ್ರ ವಹಿಸುತ್ತದೆ. ಅವಧಿಯು ಹೆಚ್ಚಾದಷ್ಟು ಸಣ್ಣ ಇಎಂಐಗಳಲ್ಲಿ ಪಾವತಿಸಬಹುದಾದರು, ಪಾವತಿಸಬೇಕಾದ ಬಡ್ಡಿ ಮೊತ್ತ ಹೆಚ್ಚುತ್ತದೆ. ಸರಿಯಾಗಿ ನಿಗದಿಯಾದ ಸೂಕ್ತ ಹೋಮ್ ಲೋನ್ ಅವಧಿ, ಬಡ್ಡಿಯ ಮೇಲೆ ಉಳಿತಾಯ ಮಾಡಲು ನಿಮಗೆ ಸಹಾಯ ಮಾಡುವ ಜೊತೆಗೆ, ಆರಾಮದಾಯಕ ಇಎಂಐಗಳಲ್ಲಿ ಪಾವತಿಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಅವಧಿಯನ್ನು ಸರಿಹೊಂದಿಸಲು ಮತ್ತು ಪಾವತಿಸಬೇಕಾದ ಮೊತ್ತವನ್ನು ತಿಳಿದುಕೊಳ್ಳಲು ನಿಮಗೆ ಅನುಮತಿ ನೀಡುತ್ತದೆ.

ನಿಮಗಾಗಿ ಅತ್ಯುತ್ತಮ ಹೋಮ್ ಲೋನ್ ಅವಧಿಯನ್ನು ನೀವು ಗುರುತಿಸಬಹುದು ಮತ್ತು ನಿಮ್ಮ ಸಾಲದಾತರನ್ನು ವಿಶ್ವಾಸದಿಂದ ಸಂಪರ್ಕಿಸಬಹುದು. ಬಜಾಜ್ ಫಿನ್‌ಸರ್ವ್ ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಸ್ಪರ್ಧಾತ್ಮಕ ಬಡ್ಡಿ ದರದ ಆಯ್ಕೆಗಳೊಂದಿಗೆ ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ವೃತ್ತಿಪರರಿಗೆ ವರ್ಷಕ್ಕೆ 8.50%* ರಿಂದ ಆರಂಭವಾಗುವ ಆಕರ್ಷಕ ಬಡ್ಡಿ ದರದಲ್ಲಿ ಹೋಮ್ ಲೋನ್‌ಗಳನ್ನು ಒದಗಿಸುತ್ತದೆ. ನಾವು ನೀಡುವ ಹೋಮ್ ಲೋನ್ ಅವಧಿಯು 30 ವರ್ಷಗಳವರೆಗಿನ ಶ್ರೇಣಿಯಲ್ಲಿರುತ್ತದೆ.

ದೀರ್ಘಾವಧಿ ಅಥವಾ ಅಲ್ಪಾವಧಿ ಹೋಮ್ ಲೋನ್ ಅವಧಿಯಲ್ಲಿ ಯಾವುದು ಉತ್ತಮ?

ನಿಮ್ಮ ಹಣಕಾಸಿನ ಪ್ರೊಫೈಲ್ ಮೇಲೆ ನಿಮಗೆ ಸೂಕ್ತವಾದ ನಿಖರ ಅವಧಿ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ನಿಮ್ಮ ಆದಾಯ ಗಣನೀಯ ಮೊತ್ತದ್ದಾಗಿದ್ದರೆ, ಕೆಲವೇ ಅಥವಾ ಯಾವುದೇ ಜವಾಬ್ದಾರಿಗಳಿಲ್ಲದೆ, ನಿಮಗೆ ಅಲ್ಪಾವಧಿ ಸೂಕ್ತವಾಗಿರುತ್ತದೆ. ಅಲ್ಪಾವಧಿಯೊಂದಿಗೆ, ನೀವು ಲೋನ್‌ ಮೊತ್ತವನ್ನು ಆದಷ್ಟು ಬೇಗ ಮರುಪಾವತಿ ಮಾಡಿ ಸಾಲದಿಂದ ಮುಕ್ತಿ ಪಡೆಯಬಹುದು.

ಇನ್ನೊಂದೆಡೆ, ನೀವು ಗಮನಾರ್ಹ ಜವಾಬ್ದಾರಿಗಳನ್ನು ಹೊಂದಿದ್ದರೆ, ದೀರ್ಘಾವಧಿಯನ್ನು ಆಯ್ಕೆ ಮಾಡುವುದೇ ಉತ್ತಮ. ದೀರ್ಘಾವಧಿಯೊಂದಿಗೆ, ನಿಮ್ಮ ಇಎಂಐಗಳು ತುಲನಾತ್ಮಕವಾಗಿ ಕಡಿಮೆಯಾಗಿ, ಆರಾಮದಾಯಕ ಮಾಸಿಕ ಮರುಪಾವತಿಗೆ ಅನುವು ಮಾಡಿಕೊಡುತ್ತವೆ.

ಹೋಮ್ ಲೋನ್ ಅವಧಿಯನ್ನು ಆಯ್ಕೆ ಮಾಡುವ ಮೊದಲು ಪರಿಗಣಿಸಬೇಕಾದ ಅಂಶಗಳು

ಹೋಮ್ ಲೋನ್ ತೆಗೆದುಕೊಳ್ಳುವಾಗ ಪರಿಗಣಿಸಬೇಕಾದ ಪ್ರಮುಖ ಅಂಶಗಳು ಯಾವುವೆಂದರೆ, ನಿಮ್ಮ ಆದಾಯ, ನೀವಿನ್ನು ಕೆಲಸದಲ್ಲಿರುವಷ್ಟು ವರ್ಷಗಳು ಮತ್ತು ದೀರ್ಘಾವಧಿಯಲ್ಲಿ ಆದಾಯ ಅಥವಾ ಜವಾಬ್ದಾರಿಗಳಲ್ಲಿ ಯಾವುದೇ ಹೆಚ್ಚಳ. ಲೋನ್‌ ಕಾಲಾವಧಿಯು ನಿಮ್ಮ ಇಎಂಐ ನಿರ್ಧರಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದ್ದು, ಮುಂಬರುವ ವರ್ಷಗಳಲ್ಲಿ ನಿಮ್ಮ ಮೇಲಿನ ನಿಯಮಿತ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ, ನೀವು ಇಂದಿನ ನಿಮ್ಮ ಆದಾಯ, ಹೊಣೆಗಾರಿಕೆಗಳು ಮತ್ತು ಕೈಗೆಟುಕುವಿಕೆಯನ್ನು ಮಾತ್ರವಲ್ಲದೆ, ಭವಿಷ್ಯದ ದಿನಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ.

ನಿಮ್ಮ ಲೋನ್ ಅವಧಿಯನ್ನು ನಿರ್ಧರಿಸುವಾಗ ಪರಿಗಣಿಸಬೇಕಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

  • ನಿಮ್ಮ ವಯಸ್ಸು ಮತ್ತು ಉಳಿದಿರುವ ನಿಮ್ಮ ಕೆಲಸದ ಕಾಲಾವಧಿ
  • ನಿಮ್ಮ ಆದಾಯ, ಹೊಣೆಗಾರಿಕೆಗಳು ಮತ್ತು ತೆರಿಗೆ ಪಾವತಿಯ ನಂತರದ ಆದಾಯ ಅಂದರೆ ಡಿಸ್ಪೋಸೆಬಲ್‌ ಇನ್ಕಮ್
  • ಹೋಮ್ ಲೋನ್ ಬಡ್ಡಿ ದರ ಮತ್ತು ಬಡ್ಡಿ ಹೊರಹರಿವು

*ನಿಯಮ ಮತ್ತು ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ