ಜೀವನದಲ್ಲಿ ಮಹತ್ವದ ವಸ್ತುಗಳಿಗೆ ಇನ್ಶೂರೆನ್ಸ್ ಮಾಡಿಸಬೇಕು ಮತ್ತು ನಿಮ್ಮ ಟೂ ವೀಲರ್ ವಾಹನವು ಇಂತಹ ಒಂದು ವಸ್ತುವಾಗಿದೆ. ನೀವು ಟೂ ವೀಲರ್ ವಾಹನದ ಮಾಲೀಕರಾಗಿದ್ದರೆ, ಅದಕ್ಕೆ ನೀವು ಒಂದು ಮಾನ್ಯವಾದ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಟೂ ವೀಲರ್ ಇನ್ಶೂರೆನ್ಸನ್ನು ಬೈಕ್ ಇನ್ಶೂರೆನ್ಸ್ ಅಥವಾ ಮೋಟಾರು ಸೈಕಲ್ ಇನ್ಶೂರೆನ್ಸ್ ಎಂದೂ ಕರೆಯಲಾಗುತ್ತದೆ ಹಾಗೂ ಇದು ಅಪಘಾತಗಳು, ಬೆಂಕಿ, ಕಳ್ಳತನ ಅಥವಾ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಯಾವುದೇ ಹಾನಿ ಅಥವಾ ನಷ್ಟದಿಂದ ನಿಮ್ಮ ಟೂ ವೀಲರ್ ವಾಹನವನ್ನು ರಕ್ಷಿಸುತ್ತದೆ.
ಮೋಟಾರ್ ವಾಹನ ಕಾಯಿದೆ, 1988. ಅಡಿಯಲ್ಲಿ ಟೂ ವೀಲರ್ ಇನ್ಶೂರೆನ್ಸ್ ಅಥವಾ ಕನಿಷ್ಠ ಮೂರನೇ ವ್ಯಕ್ತಿಯ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ, ಹಾಗೂ ಜೊತೆಗೆ ಇದು ನಿಮ್ಮನ್ನು ರಸ್ತೆಗಳಲ್ಲಿ ಸುರಕ್ಷಿತ ಸವಾರರನ್ನಾಗಿ ಮಾಡುತ್ತದೆ. ಟೂ ವೀಲರ್ ಇನ್ಶೂರೆನ್ಸ್ ಸಮಗ್ರ ಪ್ಯಾಕೇಜ್ಗಳಲ್ಲಿ ಬರುತ್ತಿದ್ದು ಇದರಲ್ಲಿ ನೀವು ನಿಮ್ಮ ಟೂ ವೀಲರ್, ಸವಾರರು, ಮತ್ತು ಮೂರನೇ ವ್ಯಕ್ತಿಗೆ ಉಂಟಾಗಬಹುದಾದ ನಷ್ಟ ಅಥವಾ ಹಾನಿಗೆ ಕವರ್ ಪಡೆಯಬಹುದು.
ನಿಮ್ಮ ಟೂ ವೀಲರ್ ಇನ್ಶೂರೆನ್ಸ್ ಖರೀದಿಸುವುದು ಅಥವಾ ನವೀಕರಿಸುವುದು ಇತ್ತೀಚಿನ ದಿನಗಳಲ್ಲಿ ತ್ವರಿತ ಮತ್ತು ಸುಲಭವಾಗಿದೆ. ನಿಮ್ಮ ಟೂ ವೀಲರ್ ಇನ್ಶೂರೆನ್ಸನ್ನು ನೀವು ಕೆಲವು ಸರಳ ಹಂತಗಳಲ್ಲಿ ಆನ್ಲೈನ್ನಲ್ಲಿ ಖರೀದಿಸಬಹುದು / ನವೀಕರಿಸಬಹುದು.
ಕೇವಲ ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳಿಗೆ ಕವರ್ ತೆಗೆದುಕೊಳ್ಳಿ ಅಥವಾ ನಿಮ್ಮ ಟೂ ವೀಲರ್ ವಾಹನ, ಸವಾರರು, ಮತ್ತು ಮೂರನೇ ವ್ಯಕ್ತಿಗಾಗಿ ಸಮಗ್ರ ಕವರ್ ಅನ್ನು ಪಡೆಯಿರಿ. ಎರಡನೆಯದನ್ನು ಹೆಚ್ಚಾಗಿ ಸೂಚಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ, ನೀವು ಟೂ ವೀಲರ್ ಇನ್ಶೂರೆನ್ಸ್ ಸೇರಿದಂತೆ ಆನ್ಲೈನ್ನಲ್ಲಿ ಏನು ಬೇಕಾದರೂ ಖರೀದಿಸಬಹುದು. ಕೆಲವು ಸುಲಭ ಹಂತಗಳಲ್ಲಿ ನಿಮ್ಮ ಟೂ ವೀಲರ್ ಇನ್ಶೂರೆನ್ಸನ್ನು ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಖರೀದಿಸಿ. ಯಾವುದೇ ತೊಂದರೆ ಇಲ್ಲದೆ ನಿಮ್ಮ ಟೂ ವೀಲರ್ ಇನ್ಶೂರೆನ್ಸನ್ನು ನೀವು ಆನ್ಲೈನ್ನಲ್ಲಿ ನವೀಕರಿಸಲೂಬಹುದು.
NCB ಎಂದರೆ ನೋ ಕ್ಲೈಮ್ ಬೋನಸ್ ಆಗಿರುತ್ತದೆ ಮತ್ತು ನೀವು ವರ್ಷವಿಡೀ ಯಾವುದೇ ಕ್ಲೈಮ್ಗಳನ್ನು ಮಾಡದಿದ್ದರೆ ಅದನ್ನು ಪಡೆಯಬಹುದು. ಒಂದು ವೇಳೆ, ನೀವು ನಿಮ್ಮ ಇನ್ಶೂರೆನ್ಸ್ ಸೇವಾ ಪೂರೈಕೆದಾರರನ್ನು ಬದಲಿಸಲು ಬಯಸಿದರೆ, ನಿಮ್ಮ ಈಗಿನ 50% ವರೆಗಿನ NCB ಯನ್ನು ಹೊಸ ಇನ್ಶೂರೆನ್ಸ್ ಕಂಪನಿಗೆ ನೀವು ಸುಲಭವಾಗಿ ವರ್ಗಾಯಿಸಬಹುದು.
RDA ಅನುಮೋದಿತ ಇನ್ಶೂರೆನ್ಸ್ ಹೊಂದಿರುವವರು ನಿಮ್ಮ ಬೈಕ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ರಿಯಾಯಿತಿಗಳನ್ನು ನೀಡುತ್ತಾರೆ. ಈ ರಿಯಾಯಿತಿಗಳು ಪಾವತಿಸಿದ ಪ್ರೀಮಿಯಂ ಅಥವಾ NCB ಗಳಾಗಿರಬಹುದು. ನೀವು ಮಾನ್ಯತೆ ಪಡೆದ ಆಟೋಮೋಟಿವ್ ಅಸೋಸಿಯೇಷನ್ ಸದಸ್ಯರಾಗಿದ್ದರೆ, ನೀವು ಒಂದು ಆ್ಯಂಟಿ-ತೆಫ್ಟ್ ಸಾಧನವನ್ನು ಹಾಕಿಕೊಂಡಿದ್ದರೆ ಅಥವಾ ನೀವು ಉತ್ತಮ ಸವಾರರ ಇತಿಹಾಸವನ್ನು ಹೊಂದಿದ್ದರೆ ಸಾಮಾನ್ಯವಾಗಿ ಈ ರಿಯಾಯಿತಿಗಳನ್ನು ನೀಡಲಾಗುತ್ತದೆ.
ಮೋಟಾರ್ ಸೈಕಲ್ ಇನ್ಶೂರೆನ್ಸ್ ಅಥವಾ ಬೈಕ್ ಇನ್ಶೂರೆನ್ಸ್ ಹಿಂಬದಿ ಸವಾರರಿಗೆ ಅಪಘಾತ ಕವರ್, ಸ್ಪೇರ್ ಪಾರ್ಟ್ಗಳು ಅಥವಾ ಬಿಡಿಭಾಗಗಳಿಗೆ ಕವರ್, ಅಥವಾ ಶೂನ್ಯ ಸವಕಳಿ ಕವರ್ನಂತಹ ಕೆಲವು ಹೆಚ್ಚುವರಿ ಕವರ್ಗಳನ್ನು ನೀಡುತ್ತದೆ. ಈ ಕವರ್ಗಳು ನಿಮ್ಮ ಪ್ರೀಮಿಯಂ ಮೊತ್ತವನ್ನು ಸ್ವಲ್ಪ ಹೆಚ್ಚಿಸಿದರೂ ನಿಮಗೆ ಹೆಚ್ಚಿನ ಲಾಭ ನೀಡುತ್ತವೆ.
ನೀವು 3 ವರ್ಷಗಳ ವರೆಗೆ ಟೂ ವೀಲರ್ ಇನ್ಶೂರೆನ್ಸನ್ನು ಪಡೆಯುತ್ತೀರಿ. ಆದ್ದರಿಂದ, ನೀವು ಅದನ್ನು ವಾರ್ಷಿಕವಾಗಿ ನವೀಕರಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಜೊತೆಗೆ, ನಿಮ್ಮ ಪಾಲಿಸಿಯ ಅವಧಿ ಮುಗಿಯುವ ಮೊದಲೇ ನೀವು ಮುಂಚಿತವಾಗಿ ಸೂಚನೆ ಪಡೆಯುತ್ತೀರಿ.
ಟೂ ವೀಲರ್ ವಾಹನದ ಇನ್ಶೂರೆನ್ಸ್ ಪಡೆಯುವುದು ತ್ವರಿತ ಮತ್ತು ಅನುಕೂಲಕರವಾಗಿದೆ. ನೀವು ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ಪೂರ್ಣಗೊಳಿಸಿದ ತಕ್ಷಣ, ಡಿಜಿಟಲಿ ಸಹಿ ಮಾಡಿದ ಟೂ ವೀಲರ್ ವಾಹನದ ಇನ್ಶೂರೆನ್ಸ್ ಪಾಲಿಸಿಯನ್ನು ತಕ್ಷಣವೇ ನೀಡಲಾಗುತ್ತದೆ.
ಟೂ ವೀಲರ್ ಇನ್ಶೂರೆನ್ಸ್ ತಪಾಸಣೆಗಳು ಯಾವುದೇ ತೊಡಕನ್ನು ಹೊಂದಿರುವುದಿಲ್ಲ ಮತ್ತು ಕ್ಲೈಮ್ ಪರಿಹಾರ ಪ್ರಕ್ರಿಯೆಯೂ ಸುಗಮವಾಗಿರುತ್ತವೆ. ಇದು ಸಂಪೂರ್ಣ ಅನುಭವವನ್ನು ಬಹಳ ಅನುಕೂಲಕರವಾಗಿಸುತ್ತದೆ.
ತಪಾಸಣೆ ಅಥವಾ ಡಾಕ್ಯುಮೆಂಟ್ ಅಗತ್ಯವಿಲ್ಲದೇ ನೀವು ನಿಮ್ಮ ಅವಧಿ ಮೀರಿದ ಟೂ ವೀಲರ್ ವಾಹನ ಪಾಲಿಸಿಯನ್ನು ನವೀಕರಿಸಬಹುದು. ಇಲ್ಲಿ ಯಾವುದೇ ಹೆಚ್ಚುವರಿ ಶುಲ್ಕಗಳಿರುವುದಿಲ್ಲ ಮತ್ತು ನವೀಕರಣ ಪ್ರಕ್ರಿಯೆಯು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ನಿಮ್ಮ ಬೈಕ್ ಇನ್ಶೂರೆನ್ಸನ್ನು ನವೀಕರಿಸುವುದು ತುಂಬಾ ಸುಲಭ. ನೀವು ಯಾವುದೇ ಬ್ರಾಂಚಿಗೆ ಹೋಗುವ ಅಗತ್ಯವಿಲ್ಲ. ವಾಸ್ತವವಾಗಿ, ನೀವು ಎಲ್ಲಿಂದಲಾದರೂ ಮತ್ತು ಯಾವಾಗಲಾದರೂ ನಿಮ್ಮ ಟೂ ವೀಲರ್ ಇನ್ಶೂರೆನ್ಸನ್ನು ಆನ್ಲೈನ್ನಲ್ಲಿ ನವೀಕರಿಸಬಹುದು. ಆನ್ಲೈನ್ನಲ್ಲಿ ಟೂ ವೀಲರ್ ಇನ್ಶೂರೆನ್ಸ್ ನವೀಕರಣವು ಕೆಳಗಿನ ಪ್ರಯೋಜನಗಳನ್ನು ಹೊಂದಿದೆ:
ಯಾವುದೇ ತಪಾಸಣೆ ಇಲ್ಲ: ಯಾವುದೇ ಹೊಸ ತಪಾಸಣೆಗಳಿಲ್ಲದೆ ನೀವು ನಿಮ್ಮ ದ್ವಿಚಕ್ರ ವಾಹನದ ಗಡುವು ಮುಗಿದ ಪಾಲಿಸಿಯನ್ನು ನವೀಕರಿಸಬಹುದು.
ಯಾವುದೇ ಹೊಸ ದಾಖಲಾತಿಗಳಿಲ್ಲ: ನಿಮ್ಮ ದ್ವಿಚಕ್ರ ವಾಹನದ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ನವೀಕರಿಸಲು ನಿಮಗೆ ಯಾವುದೇ ಹೊಸ ಡಾಕ್ಯುಮೆಂಟೇಶನ್ ಬೇಕಾಗಿಲ್ಲ.
ಶೀಘ್ರ ಮತ್ತು ಕೈಗೆಟಕಬಲ್ಲ: ಇಲ್ಲಿ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ ಮತ್ತು ನವೀಕರಣ ಪ್ರಕ್ರಿಯೆ ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಉತ್ತಮ ಡೀಲ್ಗಳನ್ನು ಹೋಲಿಸಿ: ಆನ್ಲೈನಿನಲ್ಲಿ ನಿಮ್ಮ ಪಾಲಿಸಿಯನ್ನು ನವೀಕರಿಸುವುದು ಎಂದರೆ ನೀವು ನಿಮ್ಮ ಪ್ರಮುಖ ವಿಮಾದಾರರನ್ನು ಹೋಲಿಸಬಹುದು ಮತ್ತು ಅವರ ಕೋಟ್ಗಳನ್ನು ಪಡೆದುಕೊಳ್ಳಬಹುದು. ನಿಮಗೆ ಉತ್ತಮವಾಗಿ ಹೊಂದುವ ಒಂದನ್ನು ನೀವು ಖರೀದಿಸಬಹುದು.
ಗ್ರಾಹಕರಿಗೆ ಸಹಾಯ: ಒಂದು ವೇಳೆ ಯಾವುದೇ ಅನುಮಾನಗಳಿದ್ದರೆ ಗ್ರಾಹಕ ಸಹಾಯ ತಂಡಗಳಿಂದ ಚಾಟ್ ಮತ್ತು ಫೋನ್ ಮೂಲಕ ಸಹಾಯ ಪಡೆದುಕೊಳ್ಳಿ.
Disclaimer - *Conditions apply. This product is offered under the Group Insurance scheme wherein Bajaj Finance Limited is the Master policyholder. The insurance coverage is provided by our partner Insurance Company. Bajaj Finance Limited does not underwrite the risk. IRDAI Corporate Agency Registration Number CA0101. The above mentioned benefits and premium amount are subject to various factors such as age of insured, lifestyle habits, health, etc (if applicable). BFL does NOT hold any responsibility for the issuance, quality, serviceability, maintenance and any claims post sale. This product provides insurance coverage. Purchase of this product is purely voluntary in nature. BFL does not compel any of its customers to mandatorily purchase any third party products.”
ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಚಾರಗಳು
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.