ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್

ಪರ್ಸನಲ್ ಲೋನ್‌ - ರೂ. 10,000 ಕ್ಕಿಂತ ಕಡಿಮೆ ಸಂಬಳದವರಿಗೆ

ಮೇಲ್ನೋಟ:

ನಿಮ್ಮ ಪರ್ಸನಲ್ ಲೋನ್‌ ಅಪ್ಲಿಕೇಶನ್ ಅನುಮೋದನೆ ಪಡೆಯಲು, ಸಾಮಾನ್ಯವಾಗಿ ನೀವು ಅಧಿಕ CIBIL ಸ್ಕೋರ್ ಹೊಂದಿರಬೇಕು ಮತ್ತು ನಿಮ್ಮ ಸಾಲದಾತರು ಕನಿಷ್ಠ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ಇದರಲ್ಲಿ ಹೆಸರುವಾಸಿಯಾದ ಕಂಪನಿಯಲ್ಲಿ ಕೆಲಸ ಮಾಡುವುದು ಮತ್ತು ಸಾಕಷ್ಟು ಅಧಿಕ ಸಂಬಳದ ಮೊತ್ತವನ್ನು ಹೊಂದಿರುವುದು ಒಳಗೊಂಡಿರುತ್ತದೆ.

ಆದರೆ ನಿಮ್ಮ ಸಂಬಳ ರೂ. 10,000 ಗಿಂತ ಕಡಿಮೆ ಇದ್ದರೆ, ನೀವು ಆದಾಯದ ಪರ್ಯಾಯ ಮೂಲಗಳನ್ನು ಹೊಂದಿದ್ದೀರಿ ಮತ್ತು ಅದು ನಿಮ್ಮ ಲೋನ್ ಮೊತ್ತದ ಮರುಪಾವತಿಗೆ ನಿಮಗೆ ಸಹಾಯ ಮಾಡುತ್ತದೆ ಎಂದು ನಿಮ್ಮ ಸಾಲದಾತರಿಗೆ ನೀವು ಮನವರಿಕೆ ಮಾಡಬೇಕಾಗಬಹುದು.

ನಿಮ್ಮ ಪ್ರಾಥಮಿಕ ವಿವರಗಳನ್ನು ನಮೂದಿಸುವ ಮೂಲಕ ಪ್ರಾರಂಭಿಸಿ ಮತ್ತು ನಿಮಗೆ ಕಡಿಮೆ ಸಂಬಳ ಇದ್ದರೂ, ನಿಮ್ಮ ಮುಂಚಿತ-ಅನುಮೋದಿತ ಆಫರ್‌ಗಳನ್ನು ಪರಿಶೀಲಿಸಿ. ಲೋನಿಗೆ ನೀವು ಅರ್ಹತೆಯನ್ನು ಹೊಂದಿದ್ದೀರಿ ಎಂದು ಒಮ್ಮೆ ಬಜಾಜ್ ಫಿನ್‌ಸರ್ವ್ ಕಂಡುಕೊಂಡರೆ, ನಿಮಗೆ ಅಗತ್ಯವಿರುವ ಮೊತ್ತವನ್ನು ಮಂಜೂರು ಮಾಡಲಾಗುತ್ತದೆ.

ಫೀಚರ್‌ಗಳು ಮತ್ತು ಪ್ರಯೋಜನಗಳು

 • ತಕ್ಷಣದ ಅನುಮೋದನೆ

  ನಿಮ್ಮ ಪರ್ಸನಲ್ ಲೋನ್‌ ಅಪ್ಲಿಕೇಶನನ್ನು ತಕ್ಷಣವೇ ಪ್ರಕ್ರಿಯೆಗೊಳಿಸಲಾಗುವುದು ಮತ್ತು ಅನುಮೋದಿಸಲಾಗುವುದು, ಆದ್ದರಿಂದ ನೀವು ಯಾವುದೇ ವಿಳಂಬವಿಲ್ಲದೇ ಹಣವನ್ನು ಪಡೆಯಬಹುದು.

 • ಕಡಿಮೆ ಡಾಕ್ಯುಮೆಂಟೇಶನ್

  ನಿಮ್ಮ ಪರ್ಸನಲ್ ಲೋನ್‌ ಪಡೆಯಲು, ನೀವು ನಿಮ್ಮ ಪ್ರಾಥಮಿಕ ಡಾಕ್ಯುಮೆಂಟ್‌ಗಳನ್ನು ಮಾತ್ರ ಅಪ್ಲೋಡ್ ಮಾಡಿ, ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಸಾಕು.

 • ತ್ವರಿತ ವಿತರಣೆ

  ಒಮ್ಮೆ ನಿಮ್ಮ ಅಪ್ಲಿಕೇಶನನ್ನು ಅನುಮೋದಿಸಿದ ನಂತರ, ಬಜಾಜ್ ಫಿನ್‌ಸರ್ವ್ ಸಾಮಾನ್ಯವಾಗಿ 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಲೋನ್ ಮೊತ್ತವನ್ನು ವಿತರಿಸುತ್ತದೆ.

 • ಹೊಂದಿಕೊಳ್ಳುವ ಅವಧಿಗಳು

  ನಿಮ್ಮ ಪರ್ಸನಲ್ ಲೋನಿನೊಂದಿಗೆ ನಿಮ್ಮ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಿ ಮತ್ತು 12 ತಿಂಗಳುಗಳಿಂದ 60 ತಿಂಗಳುಗಳವರೆಗೆ, ಅನುಕೂಲಕರ ಅವಧಿಗಳಲ್ಲಿ ಮರುಪಾವತಿ ಮಾಡಿ.

 • ಮುಂಚಿತ ಅನುಮೋದಿತ ಆಫರ್‌ಗಳು

  ಮುಂಚಿತ ಅನುಮೋದಿತ ಆಫರ್‌ಗಳು

  ಬಜಾಜ್ ಫಿನ್‌ಸರ್ವ್‌ನಿಮ್ಮ ಮುಂಚಿತ-ಅನುಮೋದಿತ ಲೋನ್ ಆಫರ್‌ಗಳನ್ನು ಒದಗಿಸುತ್ತದೆ. ನಿಮ್ಮ ಸಂಪರ್ಕ ವಿವರಗಳನ್ನು ಹಂಚಿಕೊಳ್ಳಿ, ನಿಮ್ಮ ಫೋನ್‌ಗೆ ಕಳುಹಿಸಲಾದ ಒಂದು-ಬಾರಿಯ ಪಾ‌ಸ್‌ವರ್ಡ್ (OTP) ನಮೂದಿಸಿ ಮತ್ತು ನಿಮ್ಮ ಮುಂಚಿತ-ಅನುಮೋದಿತ ಆಫರ್ ಪರಿಶೀಲಿಸಿ.

 • ಅಡಮಾನವಿಲ್ಲದ ಲೋನ್‌

  ಬಜಾಜ್ ಫಿನ್‌ಸರ್ವ್ ಒದಗಿಸುವ ಪರ್ಸನಲ್ ಲೋನ್‌ಗಳು ಸುರಕ್ಷಿತವಲ್ಲದ ಲೋನ್‌ಗಳಾಗಿವೆ - ನೀವು ಅಡಮಾನದ ಬಗ್ಗೆ ಚಿಂತೆ ಮಾಡದೇ, ನಿಮಗೆ ಬೇಕಾದ ಮೊತ್ತವನ್ನು ಲೋನ್‌ ರೂಪದಲ್ಲಿ ಪಡೆಯಬಹುದು.

 • ಯಾವುದೇ ಗುಪ್ತ ಶುಲ್ಕಗಳಿಲ್ಲ

  ಸರಳ ನಿಯಮ ಮತ್ತು ಷರತ್ತುಗಳೊಂದಿಗೆ, ನಿಮ್ಮ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ ಯಾವುದೇ ಗುಪ್ತ ಶುಲ್ಕಗಳನ್ನು ಹೊಂದಿಲ್ಲ. ನಿಮ್ಮ ಪರ್ಸನಲ್ ಲೋನ್‌ ಬಗ್ಗೆ ಓದಿ ಮತ್ತು ಮಾಹಿತಿಪೂರ್ಣ ನಿರ್ಧಾರವನ್ನು ತೆಗೆದುಕೊಳ್ಳಿ.

 • ಆನ್ಲೈನ್ ​​ಲೋನ್‌ ಅಕೌಂಟ್

  ಬಳಸಲು ಸುಲಭವಾದ ಆನ್‌ಲೈನ್ ಲೋನ್ ಅಕೌಂಟ್‌ನೊಂದಿಗೆ,, ನಿಮ್ಮ EMI ಗಳನ್ನು ನಿರ್ವಹಿಸಿ, ನಿಮ್ಮ ಅಕೌಂಟ್‌ ಸ್ಟೇಟ್ಮೆಂಟ್ ಪರಿಶೀಲಿಸಿ ಮತ್ತು ನಿಮ್ಮ ಮರುಪಾವತಿಯ ವೇಳಾಪಟ್ಟಿಯನ್ನು ಟ್ರ್ಯಾಕ್ ಮಾಡಿ.

ಪರ್ಸನಲ್ ಲೋನ್ ಅರ್ಹತೆ

ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್‌ ಹೊಂದಿರುವ ಪ್ರಸ್ತುತ ಗ್ರಾಹಕರಾಗಿದ್ದರೆ, ನೀವು ಸುಲಭವಾಗಿ ಪರ್ಸನಲ್ ಲೋನನ್ನು ಪಡೆಯಬಹುದು. ಪರ್ಸನಲ್ ಲೋನ್‌ EMI ಕ್ಯಾಲ್ಕುಲೇಟರ್ ಸಹಾಯದಿಂದ, ನಿಮ್ಮ ಮಾಸಿಕ ಮರುಪಾವತಿಯ ಮೊತ್ತವನ್ನು ನೀವು ನಿರ್ಧರಿಸಬಹುದು. ಈ ಮೂಲಕ, ನಿಮ್ಮ ಲೋನ್ ಪಾವತಿಗಳಲ್ಲಿ ಸುಸ್ತಿದಾರರಾಗುವ ಸಾಧ್ಯತೆಗಳನ್ನು ತಪ್ಪಿಸಬಹುದು.

ಇನ್ನಷ್ಟು ತಿಳಿಯಲು ನೀವು ಸಹ ಪರ್ಸನಲ್ ಲೋನ್ ಅರ್ಹತೆಯನ್ನು ಅಳೆಯುವ ಕ್ಯಾಲ್ಕುಲೇಟರ್ ನೋಡಿ.

ರೂ. 10, 000 ಕ್ಕಿಂತ ಕಡಿಮೆ ಸಂಬಳದೊಂದಿಗೆ ಪರ್ಸನಲ್ ಲೋನಿಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ

ಈ 6 ಸರಳ ಹಂತಗಳೊಂದಿಗೆ ಅಪ್ಲಿಕೇಶನ್ ಫಾರಂ ಭರ್ತಿ ಮಾಡುವ ಮೂಲಕ ನಿಮ್ಮ ಮುಂಚಿತ-ಅನುಮೋದಿತ ಪರ್ಸನಲ್ ಲೋನ್‌ ಆಫರನ್ನು ಪರಿಶೀಲಿಸಿ:

ಹಂತ 1

ನಿಮ್ಮ ಮೊಬೈಲ್ ನಂಬರನ್ನು ಹಂಚಿಕೊಳ್ಳಿ.

ಹಂತ 2

ನಿಮ್ಮ ವೈಯಕ್ತಿಕ ಇಮೇಲ್ ID ನಮೂದಿಸಿ.

ಹಂತ 3

ನಿಮಗೆ ಬೇಕಾದ ಲೋನ್ ಮೊತ್ತವನ್ನು ನಮೂದಿಸಿ.

ಹಂತ 4

'ನಾನು ಅಧಿಕಾರ ನೀಡುತ್ತೇನೆ' ಚೌಕವನ್ನು ಗುರುತಿಸಿ.

ಹಂತ 5

ಮುಂದುವರಿಯಲು 'ಈಗ ಸಲ್ಲಿಸಿ' ಕ್ಲಿಕ್ ಮಾಡಿ.

ಹಂತ 6

ನಮ್ಮ ಗ್ರಾಹಕ ಸಂಪರ್ಕ ಪ್ರತಿನಿಧಿಯು ನಿಮ್ಮನ್ನು ಶೀಘ್ರವಾಗಿ ಸಂಪರ್ಕಿಸುತ್ತಾರೆ.