ಫೋಟೋ

ಕೀಲಿ ಬದಲಿ ಇನ್ಶೂರೆನ್ಸ್

ಮೇಲ್ನೋಟ

ನಿಮ್ಮ ಮನೆ ಅಥವಾ ನಿಮ್ಮ ಕಾರಿನ ಕೀಲಿಗಳನ್ನು ನೀವು ಕಳೆದುಕೊಂಡಿದ್ದೀರಾ? ಇಂತಹ ತುರ್ತುಸ್ಥಿತಿಗಳಲ್ಲಿ ನಿಮ್ಮ ಸಹಾಯಕ್ಕಾಗಿ ಬಜಾಜ್ ಫಿನ್‌ಸರ್ವ್‌ನ ಒಂದು ಕೀಲಿ ಬದಲಿ ಪಾಲಿಸಿಯನ್ನು ಆಯ್ಕೆಮಾಡಿ. ಮನೆ ಮತ್ತು ವಾಹನದ ಕೀಲಿಗಳು ಕಳೆದುಹೋಗುವಿಕೆ ಅಥವಾ ಕಳ್ಳತನದ ಕವರೇಜ್ ಅನ್ನು ಪಡೆಯಿರಿ, ಬೀಗ ತಯಾರಕರ ವೆಚ್ಚ ಮತ್ತು ಕೀಲಿ ಬದಲಿ ವೆಚ್ಚಗಳನ್ನು ಪಡೆಯಿರಿ.

ಕೀಲಿ ಬದಲಿ ಇನ್ಶೂರೆನ್ಸ್ ಫೀಚರ್‌ಗಳು ಮತ್ತು ಪ್ರಯೋಜನಗಳು

 • ನಿಮ್ಮ ನಿವಾಸ ಅಥವಾ ವಾಹನಕ್ಕಾಗಿ ನಕಲಿ ಕೀಲಿಗಳನ್ನು ಸೃಷ್ಟಿಸುವ ವೆಚ್ಚದ ಕವರೇಜ್ ಪಡೆಯಿರಿ

 • ಬೀಗಗಳನ್ನು ಬದಲಿಸಲು ಉಂಟಾಗುವ ಕಾರ್ಮಿಕ ವೆಚ್ಚದ ರಿಯಂಬರ್ಸ್ಮೆಂಟ್ ಪಡೆಯಿರಿ

 • ನಿಮ್ಮ ವಾಹನದ ಕೀಲಿ ಬದಲಿಸುವಿಕೆಗೆ 24 ಗಂಟೆಗಳ ಸಮಯ ತಗಲುತ್ತಿದ್ದರೆ, ಬಾಡಿಗೆ ಕಾರಿನ ವೆಚ್ಚದ ರಿಯಂಬರ್ಸ್ಮೆಂಟ್ ಪಡೆಯಿರಿ.

 • ಸುಲಭ ಮತ್ತು ತೊಂದರೆ ಇಲ್ಲದ ಕ್ಲೈಮ್ ಪ್ರಕ್ರಿಯೆ

 • ಕೀಲಿ ಬದಲಿಯ ಇನ್ಶೂರೆನ್ಸ್ - ಪಾಲಿಸಿ ಕವರೇಜ್

 • ಕೀಲಿಗಳ ಬದಲಿ

  ನಿಮ್ಮ ನಿವಾಸ ಮತ್ತು ನಿಮ್ಮ ವಾಹನದ ಕೀಲಿಗಳನ್ನು ಬದಲಾಯಿಸುವ ವೆಚ್ಚದ ಮರುಪಾವತಿ. ಕವರ್ ಬೀಗ ತಯಾರಕರಿಗೆ ಹೊಸ ಕೀಲಿಯನ್ನು ಮಾಡಿಕೊಡಲು ನೀವು ಪಾವತಿಸುವ ಮೊತ್ತಕ್ಕೆ ಮಾತ್ರ ಲಭ್ಯವಿರುತ್ತದೆ.

 • ಬ್ರೇಕ್-ಇನ್ ಪ್ರೊಟೆಕ್ಷನ್

  ಯಾರಾದರೂ ನಿಮ್ಮ ವಾಹನವನ್ನು ಒಡೆದಿದ್ದಲ್ಲಿ, ಬೀಗಗಳು ಮತ್ತು ಕೀಲಿಗಳನ್ನು ಬದಲಿಸುವ ವೆಚ್ಚವನ್ನು ಕೀಲಿ ಬದಲಿ ಇನ್ಶೂರೆನ್ಸ್ ಪೂರೈಸುತ್ತದೆ. ನೆನಪಿಡಿ, ನಾವು ಬೀಗದ ವೆಚ್ಚವನ್ನು ಕವರ್ ಮಾಡುವುದಿಲ್ಲ. ನಾವು ಲಾಕ್ ಬದಲಿಸಲು ಕಾರ್ಮಿಕ ವೆಚ್ಚಗಳನ್ನು ಮಾತ್ರ ಕವರ್ ಮಾಡುತ್ತೇವೆ.

 • ಲಾಕ್ ಔಟ್ ಸಂದರ್ಭದಲ್ಲಿ ರಿಯಂಬರ್ಸ್ಮೆಂಟ್

  ನಿಮ್ಮ ಮನೆ ಅಥವಾ ಕಾರಿನಿಂದ ನೀವು ಹೊರಗಡೆ ಉಳಿದಲ್ಲಿ ನಿಮ್ಮ ಬೀಗ ತಯಾರಕರಿಗೆ ನೀಡುವ ವೆಚ್ಚವನ್ನು ನಾವು ಮರುಪಾವತಿಸುತ್ತೇವೆ.

 • ಬಾಡಿಗೆ ಕಾರು ರಿಯಂಬರ್ಸ್ಮೆಂಟ್

  ಕೆಲವೊಮ್ಮೆ ಕೀಲಿ ಬದಲಿಯ ಕೆಲಸವು 24ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅಂತಹ ಸಂದರ್ಭಗಳಲ್ಲಿ, ನಾವು ಬಾಡಿಗೆ ಕಾರಿನ ವೆಚ್ಚವನ್ನು ಭರಿಸುತ್ತೇವೆ.

 • ಕೀಲಿ ಬದಲಿ - ನಾವು ಏನನ್ನು ಕವರ್ ಮಾಡುವುದಿಲ್ಲ

 • ಮೇಲೆ ಪಟ್ಟಿ ಮಾಡಲಾಗಿರುವುದನ್ನು ಹೊರತುಪಡಿಸಿ ಯಾವುದಾದರೂ ಇತರ ವೆಚ್ಚಗಳು

 • ನೀವು ಕಳೆದುಕೊಂಡ ನಿಮ್ಮ ಮುಖ್ಯ ಮನೆಯ ಕೀಯನ್ನು ಹೊರತುಪಡಿಸಿ ಬೇರೆ ಮನೆಗೆ ಸಂಬಂಧಿಸಿದ ಶುಲ್ಕಗಳು. ನಿಮ್ಮ ಎರಡನೆ ಮನೆಯನ್ನು ಕವರ್ ಮಾಡಲು ನೀವು ಪ್ರತ್ಯೇಕ ಪಾಲಿಸಿ ಕೊಳ್ಳುವ ಅಗತ್ಯವಿದೆ.

 • ನಿಮ್ಮ ವೈಯಕ್ತಿಕ ಬಳಕೆಗಾಗಿ ನೀವು ಬಳಸದೆ ಇರುವ ವಾಹನಗಳ ಕೀಲಿಗಳನ್ನು ಬದಲಿಸುವ ವೆಚ್ಚ

 • ಕೀಲಿ ಬದಲಿ ಇನ್ಶೂರೆನ್ಸ್ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಮಾತ್ರ

ಕೀ ರಿಪ್ಲೇಸ್‌‌ಮೆಂಟ್ ಇನ್ಶೂರೆನ್ಸ್‌‌ಗೆ ಅಗತ್ಯ ಡಾಕ್ಯುಮೆಂಟ್‌‌ಗಳು

•    ಕಳ್ಳತನವಾದ ರಕ್ಷಣೆ ಕ್ಲೈಮ್‌ಗಳ ರಿಯಂಬರ್ಸ್ಮೆಂಟ್ ಕ್ಲೈಮ್ ಮಾಡಲು ಸಂಬಂಧಿಸಿದ ಸಮಯದ ಚೌಕಟ್ಟಿನೊಳಗೆ ಸಂಭವಿಸಿದ ಘಟನೆಯನ್ನು ವಿವರಿಸುವ ಅಧಿಕೃತ ಪೋಲೀಸ್ FIR

ಅಪಘಾತದ ನಂತರ ಅಥವಾ ಕೀಲಿ ನಷ್ಟದ ನಂತರ ಏನು ಮಾಡಬೇಕು

• ನಮ್ಮ 1800-11-9966 ನಂಬರಿಗೆ ಕರೆಮಾಡಿ
• ಅಲ್ಲದೇ, ನಷ್ಟವನ್ನು ಪತ್ತೆ ಹಚ್ಚಿದ 24 ಗಂಟೆಗಳ ಒಳಗೆ ಲಿಖಿತ ಪತ್ರವನ್ನು ಸಲ್ಲಿಸಿ
• ಇದು ಕ್ಲೈಮ್ ಸಲ್ಲಿಸಲು ಮತ್ತು ಅಗತ್ಯ ಫಾರಂಗಳು ಮತ್ತು ಸೂಚನೆಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ
• ಕೀಲಿ ಕಳೆದುಹೋದ ಅಥವಾ ಕಳ್ಳತನದ ಪ್ರಯತ್ನದ ಬಗ್ಗೆ ತಿಳಿದ 24 ಗಂಟೆಗಳ ಒಳಗೆ ಪೋಲೀಸರಲ್ಲಿ FIR ದಾಖಲಿಸಿ.
• ಕ್ಲೈಮ್‌ಗಳ ಫಾರಂಗಳನ್ನು ತುಂಬಿ ಮತ್ತು ಅದರೊಂದಿಗೆ ಸೇರಿರುವ ಡಾಕ್ಯುಮೆಂಟ್‌ಗಳೊಂದಿಗೆ ನಮಗೆ ಅದನ್ನು ಮರಳಿಸಿ.
• ಇದು ಪೋಲೀಸ್ ರಿಪೋರ್ಟ್, ಬೀಗ ಮತ್ತು ಕೀಲಿಗಳನ್ನು ಬದಲಿಸುವ ರಸೀದಿಗಳು ಮತ್ತು ಕಂಪನಿಯು ಕೇಳುವ ಎಲ್ಲಾ ಇತರ ಡಾಕ್ಯುಮೆಂಟ್‌ಗಳನ್ನು ಒಳಗೊಂಡಿದೆ.
• 3 ದಿನಗಳಲ್ಲಿ ಕಂಪನಿಗೆ ಕ್ಲೈಮ್‌ಗಳ ಫಾರಂಗಳನ್ನು ಸಲ್ಲಿಸಿ
 

ಕ್ಲೈಮ್ ಪ್ರಕ್ರಿಯೆ

•    ನೀವು ಕೀಲಿಯನ್ನು ಕಳೆದುಕೊಂಡರೆ, ಪಾಲಿಸಿಯ ಡಾಕ್ಯುಮೆಂಟ್‌ನಲ್ಲಿ ಒದಗಿಸಿದ ಫೋನ್ ನಂಬರಿಗೆ ಕರೆ ಮಾಡಿ ನೀವು ಇನ್ಶೂರೆನ್ಸ್ ಕಂಪನಿಯನ್ನು ಸಂಪರ್ಕಿಸಬಹುದು.
• ಘಟನೆಯನ್ನು ವಿವರಿಸುವ ಲಿಖಿತ ಅಪ್ಲಿಕೇಶನನ್ನು ಸಲ್ಲಿಸಿ.
• ಯಾರಾದರೂ ನಿಮ್ಮ ಮನೆ ಅಥವಾ ವಾಹನವನ್ನು ಒಡೆದಿದ್ದರೆ, ನೀವು ಘಟನೆಯನ್ನು ಪತ್ತೆಹಚ್ಚಿದ 24 ಗಂಟೆಗಳ ಒಳಗೆ ಪೋಲೀಸ್ ದೂರನ್ನು ದಾಖಲಿಸಬೇಕು ಮತ್ತು FIR ಪ್ರತಿಯನ್ನು ಪಡೆಯಬೇಕು.
• ಡಾಕ್ಯುಮೆಂಟ್‌ಗಳ ನಕಲನ್ನು (ಪೊಲೀಸ್ FIR) ಕಂಪನಿಗೆ ಸಲ್ಲಿಸಿ
• ಈ ಮಧ್ಯೆ, ಕೀಲಿ ಬದಲಿ ವೆಚ್ಚಗಳ ರಸೀದಿಗಳನ್ನು, ಬೀಗ ತಯಾರಕರಿಗೆ ನೀಡಿದ ಕಾರ್ಮಿಕ ಶುಲ್ಕಗಳು, ಇತ್ಯಾದಿಗಳನ್ನು ಇಟ್ಟುಕೊಳ್ಳಿ.
• ಕಂಪನಿಗೆ ರಸೀದಿಗಳನ್ನು ಸಲ್ಲಿಸಿ ಹಾಗೂ ಬದಲಿ ವೆಚ್ಚಗಳ ಮರುಪಾವತಿಯನ್ನು ಪಡೆಯಿರಿ