ಇನ್ಸ್ಟಾ ಇಎಂಐ ಕಾರ್ಡ್
ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಇಎಂಐ ಕಾರ್ಡ್ ಒಂದು ಹಣಕಾಸಿನ ಪರಿಹಾರವಾಗಿದ್ದು, ಇದರಿಂದ ನೋ ಕಾಸ್ಟ್ ಇಎಂಐ ಗಳಲ್ಲಿ ನೀವು 1 ಮಿಲಿಯನ್+ ಉತ್ಪನ್ನಗಳನ್ನು ಕೊಂಡುಕೊಳ್ಳಬಹುದು. ಇನ್ಸ್ಟಾ ಇಎಂಐ ಕಾರ್ಡಿನೊಂದಿಗೆ, ನೀವು ರೂ. 2 ಲಕ್ಷದವರೆಗಿನ ಮುಂಚಿತ-ಅನುಮೋದಿತ ಲೋನ್ ಮಿತಿಯನ್ನು ಪಡೆಯುತ್ತೀರಿ, ಇದನ್ನು ನೀವು 4,000+ ನಗರಗಳಲ್ಲಿ 1.5 ಲಕ್ಷ ಆನ್‌ಲೈನ್ ಮತ್ತು ಆಫ್ಲೈನ್ ಪಾಲುದಾರ ಮಳಿಗೆಗಳಲ್ಲಿ ಬಳಸಬಹುದು. ನಿಮ್ಮ ಖರೀದಿಗೆ 24 ತಿಂಗಳವರೆಗಿನ ಫ್ಲೆಕ್ಸಿಬಲ್ ಮರುಪಾವತಿ ಅವಧಿಯನ್ನು ಕೂಡ ನೀವು ಆಯ್ಕೆ ಮಾಡಬಹುದು.
ನಮ್ಮ ಇನ್ಸ್ಟಾ ಇಎಂಐ ಕಾರ್ಡಿನ ಫೀಚರ್‌ಗಳು ಮತ್ತು ಪ್ರಯೋಜನಗಳು
ನಮ್ಮ ಇನ್ಸ್ಟಾ ಇಎಂಐ ಕಾರ್ಡ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ
ಇನ್ಸ್ಟಾ ಇಎಂಐ ಕಾರ್ಡಿನ ಫೀಚರ್‌ಗಳು ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ. ಕಾರ್ಡ್ ಮಿತಿ, ಆನ್ಲೈನ್ ಮತ್ತು ಆಫ್ಲೈನ್ ಎಲ್ಲಿ ಶಾಪಿಂಗ್ ಮಾಡಬೇಕು, ಮರುಪಾವತಿ ಅವಧಿ ಮತ್ತು ಇನ್ನೂ ಹೆಚ್ಚಿನದರ ಬಗ್ಗೆ ತಿಳಿದುಕೊಳ್ಳಿ.
-
ಖರೀದಿಸಿ
ನೀವು Bajajmall.in ನಂತಹ ಶಾಪಿಂಗ್ ಸೈಟ್‌ಗಳಲ್ಲಿ ಈ ಕಾರ್ಡನ್ನು ಬಳಸಬಹುದು, Amazon, MakeMyTrip, Vijay Sales, Tata Croma, Reliance Digital ಮತ್ತು ಇತರೆ.
-
ಎಲ್ಲವೂ ಇಎಂಐಗಳಲ್ಲಿ
ದೈನಂದಿನ ದಿನಸಿ, ಎಲೆಕ್ಟ್ರಾನಿಕ್ಸ್, ಫಿಟ್ನೆಸ್ ಸಲಕರಣೆಗಳು, ಹೋಮ್ ಅಪ್ಲಾಯನ್ಸ್‌ಗಳು, ಪೀಠೋಪಕರಣಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಖರೀದಿಸಿ ಮತ್ತು ಬಿಲ್‌ಗಳನ್ನು ನೋ ಕಾಸ್ಟ್ ಇಎಂಐಗಳಾಗಿ ವಿಭಜಿಸಿ.
-
ಕಡಿಮೆ-ಇಎಂಐ ವಿಶೇಷ ಯೋಜನೆಗಳು
ದೀರ್ಘ ಮರುಪಾವತಿ ಅವಧಿಯನ್ನು ಒದಗಿಸುವ ಮತ್ತು ನಿಮ್ಮ ಮಾಸಿಕ ಇಎಂಐ ಅನ್ನು ಕಡಿಮೆ ಮಾಡುವ ನಮ್ಮ ವಿಶೇಷ ಇಎಂಐ ಯೋಜನೆಗಳನ್ನು ನೀವು ಆಯ್ಕೆ ಮಾಡಬಹುದು.
-
ಶೂನ್ಯ ಡೌನ್ ಪೇಮೆಂಟ್
ಹಬ್ಬದ ಋತುಗಳಲ್ಲಿ, ನಾವು ಶೂನ್ಯ ಡೌನ್ ಪೇಮೆಂಟ್ ಯೋಜನೆಗಳನ್ನು ಹೊಂದಿದ್ದೇವೆ, ಅಲ್ಲಿ ನೀವು ಖರೀದಿಯ ಸಮಯದಲ್ಲಿ ಏನನ್ನೂ ಪಾವತಿಸಬೇಕಾಗಿಲ್ಲ.
-
1.5 ಲಕ್ಷ+ ಮಳಿಗೆಗಳಲ್ಲಿ ಅಂಗೀಕರಿಸಲಾಗುತ್ತದೆ
ಕಾರ್ಡನ್ನು 4,000 ದೊಡ್ಡ ಮತ್ತು ಸಣ್ಣ ನಗರಗಳಲ್ಲಿ ಅಂಗೀಕರಿಸಲಾಗುತ್ತದೆ. ನೀವು ಎಲ್ಲೇ ಇದ್ದರೂ, ನಮ್ಮ ಪಾಲುದಾರ ಮಳಿಗೆಗಳಿಗೆ ಹೋಗಿ ಮತ್ತು ಇಎಂಐಗಳಲ್ಲಿ ಶಾಪಿಂಗ್ ಮಾಡಿ.
-
ಹೊಂದಿಕೊಳ್ಳುವ ಮರುಪಾವತಿ ಅವಧಿಗಳು
ನಿಮ್ಮ ಖರೀದಿಗಳನ್ನು ಮಾಸಿಕ ಕಂತುಗಳಾಗಿ ಪರಿವರ್ತಿಸಿ ಮತ್ತು 3 ರಿಂದ 24 ತಿಂಗಳಲ್ಲಿ ಮರುಪಾವತಿಸಿ.
-
ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ
ಸಂಪೂರ್ಣ ಅಪ್ಲಿಕೇಶನ್ ಪ್ರಕ್ರಿಯೆಯು ಆನ್ಲೈನಿನಲ್ಲಿದೆ. ಪೂರ್ಣಗೊಳಿಸಲು ಇದು 10 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ.
-
ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.
ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು
ನೀವು ಕೆಳಗೆ ನಮೂದಿಸಿದ ಪ್ರಮುಖ ಮಾನದಂಡಗಳನ್ನು ಪೂರೈಸುವವರೆಗೆ ಯಾರಾದರೂ ಇನ್ಸ್ಟಾ ಇಎಂಐ ಕಾರ್ಡ್ ಪಡೆಯಬಹುದು. ನೀವು ಮಾನದಂಡಗಳನ್ನು ಪೂರೈಸಿದರೆ, ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮಗೆ ಡಾಕ್ಯುಮೆಂಟ್‌ಗಳ ಸೆಟ್ ಅಗತ್ಯವಿರುತ್ತದೆ.
ಅರ್ಹತಾ ಮಾನದಂಡ
- ರಾಷ್ಟ್ರೀಯತೆ: ಭಾರತೀಯ
- ವಯಸ್ಸು: 21 ವರ್ಷಗಳಿಂದ 65 ವರ್ಷಗಳು
- ಆದಾಯ: ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
- ಕ್ರೆಡಿಟ್ ಸ್ಕೋರ್: 720 ಅಥವಾ ಅದಕ್ಕಿಂತ ಹೆಚ್ಚು
ಅಗತ್ಯವಿರುವ ಡಾಕ್ಯುಮೆಂಟ್‌ಗಳು
- ಪ್ಯಾನ್ ಕಾರ್ಡ್
- ವಿಳಾಸದ ಪುರಾವೆ
- ಕ್ಯಾನ್ಸಲ್ ಮಾಡಿದ ಚೆಕ್
- ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್
ಹೊಸ ಗ್ರಾಹಕರಿಗೆ ಮುಂಚಿತ-ಅನುಮೋದಿತ ಆಫರ್‌ಗಳು
ನಮ್ಮ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಮುಂಚಿತ-ಅನುಮೋದಿತ ಕೊಡುಗೆಗಳಿಂದ ಆಯ್ಕೆ ಮಾಡಬಹುದು. ಪರಿಶೀಲಿಸಲು ನಮಗೆ ಬೇಕಾಗಿರುವುದು ಕೇವಲ ನಿಮ್ಮ ಮೊಬೈಲ್ ನಂಬರ್.
ನೀವು ನಮ್ಮ ಮುಂಚಿತ-ಅನುಮೋದಿತ ಗ್ರಾಹಕರಲ್ಲಿ ಒಬ್ಬರಾಗಿದ್ದರೆ ನೀವು ಸಂಪೂರ್ಣ ಅಪ್ಲಿಕೇಶನ್ ಪ್ರಕ್ರಿಯೆಯನ್ನು ನೋಡಬೇಕಾಗಿಲ್ಲ. ಇದನ್ನು ನಮ್ಮ ಗ್ರೀನ್ ಚಾನೆಲ್ ಎಂದು ಪರಿಗಣಿಸಿ.
ನಿಮಗೆ ಈಗ ಕಾರ್ಡ್ ಅಗತ್ಯವಿಲ್ಲ ಅಥವಾ ಮುಂಚಿತ-ಅನುಮೋದಿತ ಆಫರ್ ಇಲ್ಲದಿರಬಹುದು. ನೀವು ಈಗಲೂ ವಿವಿಧ ಕೊಡುಗೆಗಳಿಂದ ಆಯ್ಕೆ ಮಾಡಬಹುದು:
-
ನಿಮ್ಮ ಕ್ರೆಡಿಟ್ ಸ್ಟ್ಯಾಂಡಿಂಗ್ ಅನ್ನು ಪರಿಶೀಲಿಸಿ
ನಿಮಗಾಗಿ ಕೆಲವು ಅತ್ಯಂತ ನಿರ್ಧಾರಿತ ಅಂಶಗಳೆಂದರೆ ಕ್ರೆಡಿಟ್ ಹೆಲ್ತ್ ಮತ್ತು ಸಿಬಿಲ್ ಸ್ಕೋರ್. ನಿಮ್ಮ ಕ್ರೆಡಿಟ್ ಅನ್ನು ಟಿಪ್-ಟಾಪ್ ಆಕಾರದಲ್ಲಿ ಇರಿಸಲು ನಮ್ಮ ಕ್ರೆಡಿಟ್ ಹೆಲ್ತ್ ರಿಪೋರ್ಟ್ ಪಡೆಯಿರಿ.
-
ಜೀವನದ ಸಂದರ್ಭವನ್ನು ಕವರ್ ಮಾಡಲು ನಿಮ್ಮ ಜೇಬಿನಲ್ಲಿ ಇನ್ಶೂರೆನ್ಸ್
ಟ್ರಕ್ಕಿಂಗ್, ಮಾನ್ಸೂನ್ ಸಂಬಂಧಿತ ಅನಾರೋಗ್ಯಗಳು, ಕಾರು ಕೀ ನಷ್ಟ/ಹಾನಿ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ನಿಮ್ಮ ಎಲ್ಲಾ ಜೀವನದ ಅನಿರೀಕ್ಷಿತ ಸಂದರ್ಭಗಳನ್ನು ಕವರ್ ಮಾಡಲು, ನಾವು ಕೇವಲ ರೂ. 19 ರಿಂದ ಆರಂಭವಾಗುವ 400 ಕ್ಕಿಂತ ಹೆಚ್ಚು ಇನ್ಶೂರೆನ್ಸ್ ಕವರ್‌ಗಳನ್ನು ಒದಗಿಸುತ್ತೇವೆ.
-
ಬಜಾಜ್ ಪೇ ವಾಲೆಟ್ ರಚಿಸಿ
ನಿಮ್ಮ ಡಿಜಿಟಲ್ ವಾಲೆಟ್, ಕ್ರೆಡಿಟ್ ಕಾರ್ಡ್ ಮತ್ತು ಯುಪಿಐ ಬಳಸಿಕೊಂಡು ಹಣವನ್ನು ಪಾವತಿಸಲು ಅಥವಾ ಟ್ರಾನ್ಸ್‌ಫರ್ ಮಾಡಲು ಅನುವು ಮಾಡಿಕೊಡುವ ಭಾರತದ ಏಕೈಕ ಫೋರ್-ಇನ್-ಒನ್ ವಾಲೆಟ್.
-
ಪ್ರತಿ ತಿಂಗಳಿಗೆ ಕೇವಲ ರೂ.100 ನೊಂದಿಗೆ ಎಸ್‌ಐಪಿ ಆರಂಭಿಸಿ
SBI, Aditya Birla, HDFC, ICICI Prudential Mutual Fund ಮ್ಯೂಚುಯಲ್ ಫಂಡ್ ಮತ್ತು ಇನ್ನೂ ಹೆಚ್ಚಿನ 40+ ಕಂಪನಿಗಳಲ್ಲಿ 900 ಕ್ಕೂ ಹೆಚ್ಚು ಮ್ಯೂಚುಯಲ್ ಫಂಡ್‌ಗಳಿಂದ ಆಯ್ಕೆಮಾಡಿ.
ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು
ಫೀಸ್ ಮತ್ತು ಶುಲ್ಕಗಳು | |
ಇನ್ಸ್ಟಾ ಇಎಂಐ ಕಾರ್ಡಿಗೆ ಈ ಶುಲ್ಕಗಳು ಅನ್ವಯವಾಗುತ್ತವೆ | |
ಶುಲ್ಕದ ವಿಧ | ಅನ್ವಯವಾಗುವ ಶುಲ್ಕಗಳು |
EMI ನೆಟ್ವರ್ಕ್ ಕಾರ್ಡ್ ಫೀಸ್ | ರೂ. 530/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಆನ್ಲೈನ್ ಕನ್ವೀನಿಯನ್ಸ್ ಶುಲ್ಕ | ಡಿಜಿಟಲ್ ವಿಧಾನದ ಮೂಲಕ ವಿಶೇಷವಾಗಿ ಇನ್ಸ್ಟಾ ಇಎಂಐ ಕಾರ್ಡ್ ಪಡೆಯುವ ಗ್ರಾಹಕರಿಗೆ ರೂ. 69/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಅನ್ವಯವಾಗುತ್ತದೆ |
ಇಎಂಐ ನೆಟ್ವರ್ಕ್ ಕಾರ್ಡ್ ಲೋನ್ ಮಿತಿ ವರ್ಧನೆ ಶುಲ್ಕ | ರೂ. 117/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ವಾರ್ಷಿಕ ಶುಲ್ಕ | ರೂ. 117/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು). ಹಿಂದಿನ ವರ್ಷದಲ್ಲಿ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿಕೊಂಡು ಯಾವುದೇ ಲೋನ್ ಪಡೆದಿಲ್ಲದ ಇಎಂಐ ನೆಟ್ವರ್ಕ್ ಕಾರ್ಡ್ ಹೋಲ್ಡರ್‌ಗಳಿಗೆ ಮಾತ್ರ ವಾರ್ಷಿಕ ಶುಲ್ಕವನ್ನು ವಿಧಿಸಲಾಗುತ್ತದೆ. ಹಿಂದಿನ ವರ್ಷದ ಅವಧಿಯನ್ನು ಕಳೆದ ವರ್ಷದ ಮಾನ್ಯತೆ ತಿಂಗಳಿಂದ 12 ತಿಂಗಳುಗಳಲ್ಲಿ ಲೆಕ್ಕ ಹಾಕಲಾಗುತ್ತದೆ, ಇದನ್ನು ನಿಮ್ಮ EMI ನೆಟ್ವರ್ಕ್ ಕಾರ್ಡಿನ ಮುಂಭಾಗದಲ್ಲಿ ಮುದ್ರಿಸಲಾಗುತ್ತದೆ. ಉದಾಹರಣೆಗೆ, ಇಎಂಐ ನೆಟ್ವರ್ಕ್ ಕಾರ್ಡ್ ಅನ್ನು 2019 ಫೆಬ್ರವರಿ ತಿಂಗಳಲ್ಲಿ ನೀಡಲಾಗಿದ್ದರೆ (ಇಎಂಐ ನೆಟ್ವರ್ಕ್ ಕಾರ್ಡ್‌ನಲ್ಲಿ ' ಇಲ್ಲಿಂದ ಸದಸ್ಯರು' ಎಂದು ಕರೆಯಲಾಗುತ್ತದೆ) ವಾರ್ಷಿಕ ಶುಲ್ಕವನ್ನು ಪಾವತಿಸುವ ದಿನಾಂಕ ಮಾರ್ಚ್ 2020 ಆಗಿರುತ್ತದೆ. |
ಆ್ಯಡ್-ಆನ್ EMI ನೆಟ್ವರ್ಕ್ ಕಾರ್ಡ್ ಫೀ | ರೂ. 199/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಇಎಂಐ ನೆಟ್ವರ್ಕ್ ಕಾರ್ಡ್ ಮೂಲಕ ಲೋನ್ ಮಿತಿಯನ್ನು ಪಡೆಯಲು ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು | |
ಶುಲ್ಕದ ವಿಧ | ಅನ್ವಯವಾಗುವ ಶುಲ್ಕಗಳು |
ಪ್ರಕ್ರಿಯಾ ಶುಲ್ಕ | ರೂ. 1,017/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಮುಂಗಡವಾಗಿ ಸಂಗ್ರಹಿಸಲಾಗಿದೆ |
ಬೌನ್ಸ್ ಶುಲ್ಕಗಳು | ಪ್ರತಿ ಬೌನ್ಸ್‌ಗೆ ರೂ. 500/ |
ದಂಡದ ಬಡ್ಡಿ | ಮಾಸಿಕ ಕಂತು/ ಇಎಂಐ ಪಾವತಿಯಲ್ಲಿ ಯಾವುದೇ ವಿಳಂಬವು ಡೀಫಾಲ್ಟ್ ದಿನಾಂಕದಿಂದ ಮಾಸಿಕ ಕಂತು/ ಇಎಂಐ ಸ್ವೀಕರಿಸುವವರೆಗೆ ಮಾಸಿಕ ಕಂತು/ ಇಎಂಐ ಬಾಕಿಯ ಮೇಲೆ ತಿಂಗಳಿಗೆ 3.5% ದರದಲ್ಲಿ ದಂಡದ ಬಡ್ಡಿಯನ್ನು ಆಕರ್ಷಿಸುತ್ತದೆ. |
ಮ್ಯಾಂಡೇಟ್ ತಿರಸ್ಕೃತ ಶುಲ್ಕಗಳು | ಹೊಸ ಮ್ಯಾಂಡೇಟ್ ನೋಂದಣಿಯಾಗುವವರೆಗೆ ಗ್ರಾಹಕರ ಬ್ಯಾಂಕ್ ಮ್ಯಾಂಡೇಟ್ ತಿರಸ್ಕರಿಸಿದ ಗಡುವು ದಿನಾಂಕದ ಮೊದಲ ತಿಂಗಳಿನಿಂದ ತಿಂಗಳಿಗೆ ರೂ. 450/ |
ಮ್ಯಾಂಡೇಟ್ ನೋಂದಣಿ ಶುಲ್ಕಗಳು | ಅನ್ವಯವಾದರೆ ರೂ. 118/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಲೋನ್ ವರ್ಧನೆ ಶುಲ್ಕಗಳು | ರೂ. 117/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಕನ್ವೀನಿಯನ್ಸ್ ಶುಲ್ಕ | ರೂ. 117/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಆಗಾಗ ಕೇಳುವ ಪ್ರಶ್ನೆಗಳು
ಇಎಂಐ ನೆಟ್ವರ್ಕ್ ಕಾರ್ಡ್ ಎಂದು ಕೂಡ ಕರೆಯಲ್ಪಡುವ ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಇಎಂಐ ಕಾರ್ಡ್, ನಿಮ್ಮ ಎಲ್ಲಾ ಖರೀದಿಗಳನ್ನು ನೋ ಕಾಸ್ಟ್ ಇಎಂಐಗಳನ್ನಾಗಿ ಪರಿವರ್ತಿಸಲು ನಿಮಗೆ ಅವಕಾಶ ನೀಡುತ್ತದೆ. ಇತ್ತೀಚಿನ ಪ್ರಾಡಕ್ಟ್‌ಗಳನ್ನು ಆನ್ಲೈನ್ ಮತ್ತು ಆಫ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ನೀವು ಇದನ್ನು ಬಳಸಬಹುದು.
ನೀವು 21 ವರ್ಷದಿಂದ 65 ವರ್ಷಗಳ ನಡುವಿನ ವಯಸ್ಸಿನವರಾಗಿದ್ದರೆ ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಬಹುದು.
ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಇಎಂಐ ಕಾರ್ಡ್ ಪಡೆಯಲು ಯಾವುದೇ ಭೌತಿಕ ಡಾಕ್ಯುಮೆಂಟ್‌ಗಳ ಅಗತ್ಯವಿಲ್ಲ. ನಿಮಗೆ ಈ ಕೆಳಗಿನ ವಿವರಗಳ ಅಗತ್ಯವಿದೆ:
- ಪ್ಯಾನ್ ಕಾರ್ಡ್ ವಿವರಗಳು
- ಕೆವೈಸಿ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ನಂಬರ್
- ಇ-ಮ್ಯಾಂಡೇಟ್ ನೋಂದಣಿಗಾಗಿ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಐಎಫ್‌ಎಸ್‌ಸಿ ಕೋಡ್
ನಿಮ್ಮ ಇ-ಮ್ಯಾಂಡೇಟ್‌ಗಾಗಿ ನೋಂದಣಿ ಮಾಡಲು, ನೀವು:
- ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಐಎಫ್‌ಎಸ್‌ಸಿ ಕೋಡ್ ಹಂಚಿಕೊಳ್ಳಿ
- ನೀವು ನಮೂದಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸಿ
- ಮೌಲ್ಯಮಾಪನ ಉದ್ದೇಶಗಳಿಗಾಗಿ ಒಟಿಪಿ ಸಲ್ಲಿಸಿ
ನಿಮ್ಮ ಇ-ಮ್ಯಾಂಡೇಟ್‌ಗಾಗಿ ನೋಂದಣಿ ಮಾಡುವ ಮೂಲಕ, ನೀವು:
- ಆಟೋ-ಡೆಬಿಟ್ ಫೀಚರ್‌ನೊಂದಿಗೆ ನಿಮ್ಮ ಇಎಂಐ ಪಾವತಿಗಳನ್ನು ಎಂದಿಗೂ ತಪ್ಪಿಸಿಕೊಳ್ಳಬೇಡಿ
- ನಿಮ್ಮ ಲೋನ್‌ಗಳನ್ನು ಸಮರ್ಥವಾಗಿ ನಿರ್ವಹಿಸಿ
ನೋ ಕಾಸ್ಟ್ ಇಎಂಐಗಳಲ್ಲಿ ನಮ್ಮ ಯಾವುದೇ ಆನ್ಲೈನ್ ಮತ್ತು ಆಫ್ಲೈನ್ ಪಾಲುದಾರ ಮಳಿಗೆಗಳಲ್ಲಿ ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಇಎಂಐ ಕಾರ್ಡ್ ಬಳಸಿ ಶಾಪಿಂಗ್ ಮಾಡಲು ನೀವು ಹಣಕಾಸನ್ನು ಪಡೆಯಬಹುದು. ನೀವು ಮಾಡಬೇಕಾಗಿರುವುದು ಕೇವಲ ನಿಮ್ಮ ಕಾರ್ಡ್ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯೊಂದಿಗೆ ನಿಮ್ಮ ಟ್ರಾನ್ಸಾಕ್ಷನ್ ಅನ್ನು ದೃಢೀಕರಿಸಿ.
ಇನ್ಸ್ಟಾ ಇಎಂಐ ಕಾರ್ಡನ್ನು ಡಿಜಿಟಲ್ ಆಗಿ ನೀಡಲಾಗುತ್ತದೆ ಮತ್ತು ತಕ್ಷಣವೇ ಆನ್ಲೈನಿನಲ್ಲಿ ಸಕ್ರಿಯಗೊಳಿಸಲಾಗುತ್ತದೆ. ಆದ್ದರಿಂದ, ನೀವು ಫಿಸಿಕಲ್ ಕಾರ್ಡನ್ನು ಪಡೆಯುವುದಿಲ್ಲ; ಬಜಾಜ್ ಫಿನ್‌ಸರ್ವ್ ಆ್ಯಪ್‌ನಲ್ಲಿ ಅದನ್ನು ಅಕ್ಸೆಸ್ ಮಾಡಿ.
ನೀವು ಬಜಾಜ್ ಫಿನ್‌ಸರ್ವ್ ಆ್ಯಪ್‌ನಲ್ಲಿ ನಿಮ್ಮ ಕಾರ್ಡ್ ವಿವರಗಳನ್ನು ನೋಡಬಹುದು.
ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ:
- ಆ್ಯಪ್ ಡೌನ್ಲೋಡ್ ಮಾಡಿ
- ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಮೂದಿಸಿ
- ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿ ಯನ್ನು ಸಲ್ಲಿಸಿ
- 'ಇಎಂಐ' ಐಕಾನ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಹುಟ್ಟಿದ ದಿನಾಂಕವನ್ನು ನಮೂದಿಸಿ
- ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ನೋಡಿ
ಬಜಾಜ್ ಫಿನ್‌ಸರ್ವ್ ಆ್ಯಪ್‌ನೊಂದಿಗೆ, ನೀವು:
- ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಮತ್ತು ಎಲ್ಲಾ ಸಂಬಂಧಿತ ವಿವರಗಳನ್ನು ಅಕ್ಸೆಸ್ ಮಾಡಿ
- ವಿಶೇಷ ಆಫರ್‌ಗಳನ್ನು ಪಡೆಯಿರಿ
ಇನ್ಸ್ಟಾ ಇಎಂಐ ಕಾರ್ಡ್ ಬಳಸಿಕೊಂಡು ನೀವು ಟ್ರಾನ್ಸಾಕ್ಟ್ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ಕಾರ್ಡ್ ಬ್ಲಾಕ್ ಆಗಿರಬಹುದು. ನಮ್ಮ ಗ್ರಾಹಕ ಪೋರ್ಟಲ್‌ನಲ್ಲಿ ನನ್ನ ಅಕೌಂಟ್ ಅಥವಾ ಬಜಾಜ್ ಫಿನ್‌ಸರ್ವ್ ಆ್ಯಪ್‌ನಲ್ಲಿ ನಿಮ್ಮ ಕಾರ್ಡ್ ಸ್ಟೇಟಸ್ ಅನ್ನು ನೀವು ಪರಿಶೀಲಿಸಬಹುದು.
ನಿಮ್ಮ ಕಾರ್ಡ್ ಸ್ಟೇಟಸ್ ಪರಿಶೀಲಿಸಲು:
- ಮೈ ಅಕೌಂಟ್ ಗೆ ಸೈನ್-ಇನ್ ಮಾಡಿ
- ಈ ಕೆಳಗಿನ ಇನ್ಸ್ಟಾ ಇಎಂಐ ಕಾರ್ಡ್ ಮೇಲೆ ಕ್ಲಿಕ್ ಮಾಡಿ ನನ್ನ ಸಂಬಂಧ
- ನಿಮ್ಮ ಕಾರ್ಡ್ ಸ್ಟೇಟಸ್ ಮತ್ತು ನಿಮ್ಮ ಕಾರ್ಡ್ ಏಕೆ ಬ್ಲಾಕ್ ಆಗಿದೆ ಎಂಬುದಕ್ಕೆ ಕಾರಣವನ್ನು ಪರಿಶೀಲಿಸಿ
ಒಂದು ವೇಳೆ ನಿಮ್ಮ ಕಾರ್ಡ್ ಬ್ಲಾಕ್ ಆಗದಿದ್ದರೆ ದಯವಿಟ್ಟು ನಿಮ್ಮ ಇ-ಮ್ಯಾಂಡೇಟ್ ಅನ್ನು ನೀವು ಪೂರ್ಣಗೊಳಿಸಿದ್ದೀರಾ ಎಂದು ಪರಿಶೀಲಿಸಿ. ಇಲ್ಲದಿದ್ದರೆ, ನಿಮ್ಮ ಹತ್ತಿರದ ನಮ್ಮ ಯಾವುದೇ ಇಎಂಐ ನೆಟ್ವರ್ಕ್ ಪಾಲುದಾರ ಮಳಿಗೆಗಳಿಗೆ ಭೇಟಿ ನೀಡುವ ಮೂಲಕ ನೀವು ಅದನ್ನು ನನ್ನ ಅಕೌಂಟ್ ಅಥವಾ ಆಫ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದು.
ನಿಮ್ಮ ಇ-ಕಾಮರ್ಸ್ ಟ್ರಾನ್ಸಾಕ್ಷನ್‌ನಲ್ಲಿ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇಎಂಐ ನೆಟ್ವರ್ಕ್ ಪಾಲುದಾರ ಮಳಿಗೆಯಲ್ಲಿ ಮೊದಲ ಟ್ರಾನ್ಸಾಕ್ಷನ್ ಮಾಡುವ ಮೂಲಕ ದಯವಿಟ್ಟು ನಿಮ್ಮ ಪ್ರಸ್ತುತ ವಾಸಿಸುತ್ತಿರುವ ವಿಳಾಸದೊಂದಿಗೆ ನಿಮ್ಮ ಕೆವೈಸಿಯನ್ನು ಪೂರ್ಣಗೊಳಿಸಿ.
ಎರಡನೇ ಟ್ರಾನ್ಸಾಕ್ಷನ್‌ನಿಂದ, ನೀವು ಆನ್ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಟ್ರಾನ್ಸಾಕ್ಷನ್ ಮಾಡಲು ಸಾಧ್ಯವಾಗುತ್ತದೆ.
ಇನ್ಸ್ಟಾ ಇಎಂಐ ಕಾರ್ಡ್ ಪಡೆಯಲು, ನೀವು ಕೇವಲ ರೂ. 530 ಒಂದು ಬಾರಿಯ ಸೇರ್ಪಡೆ ಶುಲ್ಕವನ್ನು ಪಾವತಿಸಬೇಕು. ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಿ.
ನಮ್ಮ ಗ್ರಾಹಕ ಪೋರ್ಟಲ್ 'ಮೈ ಅಕೌಂಟ್' ಮೂಲಕ ನೀವು ನಮ್ಮನ್ನು ಆನ್ಲೈನಿನಲ್ಲಿ ಸಂಪರ್ಕಿಸಬಹುದು’. ನಿಮ್ಮ ಎಲ್ಲಾ ಪ್ರಶ್ನೆಗಳಿಗಾಗಿ ನೀವು ನಮಗೆ +91 8698010101 ನಲ್ಲಿ ಕೂಡ ಕರೆ ಮಾಡಬಹುದು.
ಇನ್ಸ್ಟಾ ಇಎಂಐ ಕಾರ್ಡ್ ಬಳಸಲು ಕನಿಷ್ಠ ಟ್ರಾನ್ಸಾಕ್ಷನ್ ಮೊತ್ತ ರೂ. 2,799.