ಹೋಮ್ ಲೋನ್ ಮಂಜೂರಾತಿ ಹಲವಾರು ಹಂತಗಳನ್ನು ಒಳಗೊಂಡಿವೆ. ಆದಾಗ್ಯೂ, ಈ ಹಂತಗಳನ್ನು ಬೇಗನೆ ಮುಗಿಸಲಾಗುತ್ತದೆ, ಹಾಗೂ ನಿಮ್ಮ ಲೋನನ್ನು 4 ದಿನಗಳಲ್ಲಿ ವಿತರಿಸಬಹುದು.
ಹೋಮ್ ಲೋನ್ ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ –
ಹಂತ 1. ಅಪ್ಲಿಕೇಶನ್
ಮೊದಲನೇ ಹಂತದಲ್ಲಿ ನೀವು, ಹೆಸರು, ಫೋನ್ ನಂಬರ್, ಪಿನ್ ಕೋಡ್, ಕೆಲಸದ ಬಗೆ ಮುಂತಾದ ಕೆಲವು ವಿವರಗಳನ್ನು ಅಪ್ಲಿಕೇಶನ್ನಲ್ಲಿ ಭರ್ತಿ ಮಾಡಬೇಕು. ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ ಮುಂದುವರಿಯಲು ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.
ಹಂತ 2. ಡಾಕ್ಯುಮೆಂಟ್ಗಳನ್ನು ಒಟ್ಟುಗೂಡಿಸುವುದು
ಹೋಮ್ ಲೋನಿಗೆ ಬೇಕಾಗಿರುವ ಡಾಕ್ಯುಮೆಂಟ್ಗಳನ್ನು ಕಲೆ ಹಾಕಲು ನಮ್ಮ ಪ್ರತಿನಿಧಿಯು ನಿಮ್ಮ ಮನೆಬಾಗಿಲಿಗೆ ಬರುತ್ತಾರೆ, ಅವುಗಳು ಇವನ್ನೆಲ್ಲ ಒಳಗೊಂಡಿವೆ
ಹಂತ3. ಡಾಕ್ಯುಮೆಂಟ್ ಪ್ರಕ್ರಿಯೆ ಹಾಗೂ ಪರಿಶೀಲನೆ
ಸಾಲದಾತರು ನಿಮ್ಮ ಡಾಕ್ಯುಮೆಂಟ್ಗಳನ್ನು ಪ್ರಕ್ರಿಯೆಗೊಳಿಸಿ ದೃಢೀಕರಿಸುತ್ತಾರೆ, ಅವರು ನಿಮ್ಮ ಉದ್ಯೋಗ ಅಥವಾ ಕೆಲಸವನ್ನು ದೃಢೀಕರಿಸಲು ಆಫೀಸನ್ನು ಅಥವಾ ಅಗತ್ಯ ಸಂಸ್ಥೆಗಳನ್ನು ಸಂಪರ್ಕಿಸಬಹುದು.
ಈ ಹಂತದಲ್ಲಿ, ಅವರು ಕ್ರೆಡಿಟ್ ವಿಚಾರಣೆಯನ್ನು ಸಹ ನಡೆಸಿ ನಿಮ್ಮ ಸಿಬಿಲ್ ಸ್ಕೋರ್ ಹಾಗೂ ಕ್ರೆಡಿಟ್ ವರದಿಯನ್ನು ಪರೀಕ್ಷಿಸುತ್ತಾರೆ.
ನಿಮ್ಮ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯು ಮುಂದಿನ ಹಂತಕ್ಕೆ ಹೋಗಲು, ಎಲ್ಲಾ ಡಾಕ್ಯುಮೆಂಟ್ಗಳು ಕ್ರಮವಾಗಿರಬೇಕು, ಹಾಗೂ ನಿಮ್ಮ CIBIL ಸ್ಕೋರ್ ಮತ್ತು ಕ್ರೆಡಿಟ್ ವರದಿಯು ತೃಪ್ತಿಕರವಾಗಿರಬೇಕು.
ಹಂತ 4. ಮಂಜೂರಾತಿ ಪತ್ರ
ಮೇಲಿನ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ ನೀವು ಮಂಜೂರು ಪತ್ರವನ್ನು ಸ್ವೀಕರಿಸುತ್ತೀರಿ. ಮಂಜೂರು ಪತ್ರ ಸಾಮಾನ್ಯವಾಗಿ ಈ ವಿವರಗಳನ್ನು ಒಳಗೊಂಡಿರುತ್ತವೆ –
ಅನುಮೋದನೆ ಪತ್ರ ನಿಮ್ಮ ಹೋಮ್ ಲೋನಿನ ಇತರೆ ನಿಯಮಗಳು, ಷರತ್ತುಗಳು ಮತ್ತು ನೀತಿಗಳನ್ನು ಕೂಡ ಒಳಗೊಂಡಿರಬಹುದು. ನೀವು ಈ ಪತ್ರದ ಪ್ರತಿಗೆ ಸಹಿ ಹಾಕಬೇಕು ಮತ್ತು ಅವರ ಆಫರ್ ಅನ್ನು ಸ್ವೀಕರಿಸಲು ಸಾಲದಾತರಿಗೆ ಹಿಂತಿರುಗಿಸಿ.
ಹಂತ 5. ಸುರಕ್ಷಿತ ಶುಲ್ಕದ ಪಾವತಿ
ನೀವು ಮಂಜೂರಾತಿ ಪತ್ರಕ್ಕೆ ಸಹಿ ಮಾಡಿದ ನಂತರ ಒಂದು-ಬಾರಿಯ ಸುರಕ್ಷಿತ ಶುಲ್ಕವನ್ನು ಪಾವತಿಸಬೇಕು. ಸಾಲದಾತರು ಈ ಫೀಸನ್ನು ನಿಮ್ಮಲ್ಲಿ ಮೊದಲಿಗೂ ಕೇಳಬಹುದು.
ಹಂತ 6. ಕಾನೂನು ಮತ್ತು ತಾಂತ್ರಿಕ ಪರಿಶೀಲನೆ
ಸಾಲದಾತರು ನಿಮ್ಮ ಲೋನನ್ನು ವಿತರಣೆ ಮಾಡುವ ಮೊದಲು ಕಾನೂನು ಹಾಗೂ ತಾಂತ್ರಿಕ ಪರಿಶೀಲನೆ ಮಾಡುತ್ತಾರೆ. ಅವರು ಪರಿಶೀಲನೆಗಾಗಿ ಸೈಟಿಗೆ ಪ್ರತಿನಿಧಿಗಳನ್ನು ಕಳುಹಿಸುತ್ತಾರೆ.
ಹಂತ 7. ಲೋನ್ ಒಪ್ಪಂದ ಮತ್ತು ವಿತರಣೆ
ಸಾಲದಾತರು ಅವರ ಎಲ್ಲಾ ಪರಿಶೀಲನೆ ಮಾಡಿದ ನಂತರ ನೀವು ಫೈನಲ್ ಅಗ್ರಿಮೆಂಟ್ ಅನ್ನು ಪಡೆಯುತ್ತೀರಿ. ಕಂಪನಿಯು ನಿಯಮಗಳಿಗೆ ಅನುಸಾರವಾಗಿ ನಿಮ್ಮ ಹೋಮ್ ಲೋನ್ ಅನ್ನು ವಿತರಣೆ ಮಾಡುತ್ತದೆ.
ಹೆಚ್ಚುವರಿ: ಹೋಮ್ ಲೋನಿಗೆ ಅಪ್ಲೈ ಮಾಡುವ ಮೊದಲು ನಿಮ್ಮ ಅರ್ಹತೆಯನ್ನು ಪರೀಕ್ಷಿಸಿ