Home Loan EMI Payment
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ 10-ಅಂಕಿಯ ಮೊಬೈಲ್ ನಂಬರನ್ನು ನಮೂದಿಸಿ
ಮೊಬೈಲ್ ನಂಬರ್ ಬ್ಲಾಂಕ್ ಆಗಿರಬಾರದು
ದಯವಿಟ್ಟು ನಿಮ್ಮ ವಸತಿ ವಿಳಾಸದ ಪಿನ್ ಕೋಡ್ ನಮೂದಿಸಿ
ಪಿನ್ ಕೋಡ್ ಖಾಲಿ ಇರಬಾರದು
ಶೂನ್ಯ
ಶೂನ್ಯ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ
ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ

0 ಸೆಕೆಂಡ್
ತಪ್ಪಾದ ಮೊಬೈಲ್ ನಂಬರನ್ನು ನಮೂದಿಸಿರುವಿರೇ?
ಶೂನ್ಯ
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ
ಶೂನ್ಯ
ಶೂನ್ಯ
ದಯವಿಟ್ಟು ಆಸ್ತಿ ಸ್ಥಳವನ್ನು ಆಯ್ಕೆ ಮಾಡಿ
ಶೂನ್ಯ
ಜನ್ಮ ದಿನಾಂಕ ಆಯ್ಕೆ ಮಾಡಿ
ನಿಮ್ಮ ಜನ್ಮದಿನಾಂಕವನ್ನು ಆಯ್ಕೆಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪ್ಯಾನ್ ಕಾರ್ಡ್ ಖಾಲಿ ಇರಬಾರದು
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಪರ್ಸನಲ್ ಇಮೇಲ್ ಖಾಲಿ ಇರುವಂತಿಲ್ಲ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಅಧಿಕೃತ ಇಮೇಲ್ ID ಖಾಲಿ ಇರುವಂತಿಲ್ಲ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಬಿಸಿನೆಸ್ ವಿಂಟೇಜ್ ಮೌಲ್ಯವನ್ನು ಆಯ್ಕೆಮಾಡಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ಶೂನ್ಯ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ
ಶೂನ್ಯ
ದಯವಿಟ್ಟು ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಬ್ಯಾಂಕನ್ನು ಆಯ್ಕೆಮಾಡಿ
ಶೂನ್ಯ
ಶೂನ್ಯ
ಆಸ್ತಿಯ ಸ್ಥಳವನ್ನು ಆಯ್ಕೆಮಾಡಿ
ವಾರ್ಷಿಕ ವಹಿವಾಟು ನಮೂದಿಸಿ (18-19)
ನಿಮ್ಮ ವಾರ್ಷಿಕ ವಹಿವಾಟನ್ನು ನಮೂದಿಸಿ 17-18

ಧನ್ಯವಾದಗಳು

IGRS ತೆಲಂಗಾಣ

ತೆಲಂಗಾಣ ಸರ್ಕಾರವು ನೋಂದಣಿ ಮತ್ತು ಸ್ಟ್ಯಾಂಪ್ ಇಲಾಖೆಯ ಮೂಲಕ ತನ್ನ ಹಳೆಯ ದಾಖಲೆಗಳು ಮತ್ತು ಡಾಕ್ಯುಮೆಂಟ್‌‌ಗಳನ್ನು ನಿರ್ವಹಿಸುತ್ತದೆ. ವಿವಾದಗಳ ಸಂದರ್ಭದಲ್ಲಿ ಅವರು ನ್ಯಾಯಾಲಯದ ಸಾಕ್ಷ್ಯದ ಮೂಲಕ ಕಾರ್ಯನಿರ್ವಹಿಸುವುದರಿಂದ ಈ ದಾಖಲೆಗಳು ನಿರ್ಣಾಯಕವಾಗಿವೆ. ಡಾಕ್ಯುಮೆಂಟ್ ನೋಂದಣಿ, ಆದಾಯ ಸಂಗ್ರಹಣೆ ಮುಂತಾದ ಹಲವಾರು ರಾಜ್ಯ ಸೇವೆಗಳಿಗೆ ಸಂಬಂಧಪಟ್ಟ ಇಲಾಖೆಯು ಜವಾಬ್ದಾರಿಯಾಗಿರುತ್ತದೆ ಮತ್ತು IGRS ತೆಲಂಗಾಣದ ಮೂಲಕ ಕಾರ್ಯನಿರ್ವಹಿಸುತ್ತದೆ.


IGRS ತೆಲಂಗಾಣದ ಬಗ್ಗೆ


IGRS ತೆಲಂಗಾಣ ಇದು ತೆಲಂಗಾಣ ಸರ್ಕಾರದ ನೋಂದಣಿ ಮತ್ತು ಸ್ಟ್ಯಾಂಪ್ ಇಲಾಖೆಯ ಅಧಿಕೃತ ವೆಬ್‌ಸೈಟ್ ಆಗಿದೆ. ಇದು ಸಂಯೋಜಿತ ಕುಂದುಕೊರತೆ ಪರಿಹಾರ ವ್ಯವಸ್ಥೆಯ (IGRS) ಆಧಾರಿತವಾಗಿದೆ.

ಇತರವುಗಳಿಗೆ ಹೊರತಾಗಿ, ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಹಲವಾರು ಸೇವೆಗಳನ್ನು ಅಕ್ಸೆಸ್ ಮಾಡಲು ಪೋರ್ಟಲ್ ನಾಗರಿಕರಿಗೆ ಅನುವು ಮಾಡಿಕೊಡುತ್ತದೆ. ಇವುಗಳಲ್ಲಿ ಹೊಣೆಗಾರಿಕೆ ಪ್ರಮಾಣಪತ್ರ, ಸ್ಟ್ಯಾಂಪ್ ಡ್ಯೂಟಿ ಪಾವತಿ ಮತ್ತು ನೋಂದಣಿ ಶುಲ್ಕಗಳು ಇತ್ಯಾದಿಗಳನ್ನು ಒಳಗೊಂಡಿವೆ.

IGRS ತೆಲಂಗಾಣ - ಫೀಚರ್‌ಗಳು ಮತ್ತು ಪ್ರಯೋಜನಗಳು


ಈ ಪೋರ್ಟಲ್‌ನ ಕೆಲವು ಫೀಚರ್‌ಗಳು ಮತ್ತು ಪ್ರಯೋಜನಗಳು ಈ ರೀತಿಯಾಗಿವೆ –

  1. ರೆಡ್ ಟೇಪ್ ಕಡಿತ – ಯಾವುದೇ ಸೇವಾ-ಸಂಬಂಧಿತ ಸಮಸ್ಯೆಗೆ ವ್ಯಕ್ತಿಗಳು ಯಾವುದೇ ಸರ್ಕಾರಿ ಇಲಾಖೆ ಅಥವಾ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ಅವರು ಆನ್ಲೈನಿನಲ್ಲಿ ಮಾಡಬಹುದು ಮತ್ತು ಇದರಿಂದ ರೆಡ್ ಟೇಪ್ ತಪ್ಪಿಸಬಹುದು.
  2. ತೊಂದರೆ ರಹಿತ ದೂರುಗಳ ವಿಧಾನ – ನಾಗರಿಕರು ದೂರುಗಳನ್ನು ಸಲ್ಲಿಸಬಹುದು ಮತ್ತು ಈ ವೆಬ್‌ಸೈಟಿನಿಂದ ಅನುಕೂಲಕರವಾಗಿ ತಮ್ಮ ಕುಂದುಕೊರತೆಗಳನ್ನು ಪರಿಹರಿಸಬಹುದು.
  3. ಸೇವೆಗಳ ಪಾರದರ್ಶಕತೆಯನ್ನು ಉತ್ತೇಜಿಸುತ್ತದೆ – ದುಷ್ಕೃತ್ಯಗಳು ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಈ ಪೋರ್ಟಲ್‌ನ ಪ್ರಾಥಮಿಕ ಉದ್ದೇಶವಾಗಿದೆ.
  4. ಹಲವಾರು ಡಾಕ್ಯುಮೆಂಟ್‌ಗಳ ಲಭ್ಯತೆ – IGRS ಪೋರ್ಟಲ್ ನಾಗರಿಕರಿಗೆ ಹಲವಾರು ಡಾಕ್ಯುಮೆಂಟ್‌ಗಳನ್ನು ಅಕ್ಸೆಸ್ ಮಾಡಲು ಅನುಮತಿ ನೀಡುತ್ತದೆ, ಹೀಗಾಗಿ ನಿಗದಿತ ಕಚೇರಿಗೆ ಮಾನ್ಯುಯಲ್ ಆಗಿ ಭೇಟಿ ನೀಡುವ ಅಗತ್ಯವನ್ನು ನಿವಾರಿಸುತ್ತದೆ.

IGRS ತೆಲಂಗಾಣ ಪೋರ್ಟಲ್‌ನಲ್ಲಿ ಲಭ್ಯವಿರುವ ಸೇವೆಗಳು


ಬಳಕೆದಾರರು ತೆಲಂಗಾಣ ನೋಂದಣಿ ಮತ್ತು ಸ್ಟ್ಯಾಂಪ್‌ಗಳ ವೆಬ್‌ಸೈಟ್ ಮೂಲಕ ಈ ಎಲ್ಲಾ ಸೇವೆಗಳನ್ನು ಪಡೆಯಬಹುದು –

  1. ಪೂರ್ವ ಸಾಲದ ಹುಡುಕಾಟ (SRO ದೊಂದಿಗೆ ನೋಂದಾಯಿಸಲಾದ ಆಸ್ತಿಯ ಮೇಲೆ ಪೂರ್ವ ಸಾಲದ ಹೊಣೆಗಾರಿಕೆ ಪ್ರಮಾಣಪತ್ರ ಹುಡುಕಿ)
  2. ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕ ಪಾವತಿ
  3. ಆಸ್ತಿ ನೋಂದಣಿ
  4. ಹಿಂದೂ ಮದುವೆ ಮತ್ತು ವಿಶೇಷ ಮದುವೆ ನೋಂದಣಿ
  5. ಸಂಸ್ಥೆಯ ನೋಂದಣಿ
  6. ಸೊಸೈಟಿ ನೋಂದಣಿ
  7. ನಿಮ್ಮ SRO (ಉಪ-ನೋಂದಣಿ ಕಚೇರಿ) ತಿಳಿಯಿರಿ
  8. ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ಹುಡುಕಿ
  9. ಚಿಟ್ ಫಂಡ್ ಕಂಪನಿಗಳ ಬಗ್ಗೆ ಮಾಹಿತಿ
  10. ನಿಷೇಧಿತ ಆಸ್ತಿಗಳ ಬಗ್ಗೆ ಮಾಹಿತಿ

ಹೊಣೆಗಾರಿಕೆ ಪ್ರಮಾಣಪತ್ರ ಎಂದರೇನು?

 

ಹೊಣೆಗಾರಿಕೆ ಪ್ರಮಾಣ ಪತ್ರ ಅಥವಾ EC ಯು ಆಸ್ತಿ ಯಾವುದೇ ಸಾಲದ ಹೊಣೆಗಾರಿಕೆಯನ್ನು ಹೊಂದಿಲ್ಲ ಎಂದು ಖಚಿತಪಡಿಸುವ ದಾಖಲೆಯಾಗಿದೆ (ನಿರ್ಮಿತ ಆಸ್ತಿ ಅಥವಾ ಭೂಮಿ). ಅಂತಹ ಹೊಣೆಗಾರಿಕೆಗಳು ಕಾನೂನು ವಿವಾದಗಳಿಂದ ಅಥವಾ ಆಸ್ತಿಯನ್ನು ಅಡಮಾನ ಮಾಡಿದರೆ ಉಂಟಾಗಬಹುದು.

ಆಸ್ತಿಯನ್ನು ಮಾರಾಟ ಮಾಡುವಾಗ ಅಥವಾ ಖರೀದಿಸುವಾಗ EC ಕಡ್ಡಾಯವಾಗಿದೆ. ಹೋಮ್ ಲೋನ್ ಅಥವಾ ಆಸ್ತಿ ಮೇಲಿನ ಲೋನನ್ನು ಪಡೆಯಲು ಇದು ಅಗತ್ಯ ಡಾಕ್ಯುಮೆಂಟ್ ಆಗಿದೆ. ಸಾಮಾನ್ಯವಾಗಿ, ಸಾಲದಾತರು ಸಾಲವನ್ನು ಮಂಜೂರು ಮಾಡುವ ಮೊದಲು 10 ರಿಂದ 15 ವರ್ಷಗಳ ಸಾಲದ ಸ್ಟೇಟ್ಮೆಂಟನ್ನು ಕೇಳುತ್ತಾರೆ.

ತೆಲಂಗಾಣದ ನಾಗರಿಕರು ರಾಜ್ಯದ ನೋಂದಣಿ ಮತ್ತು ಸ್ಟ್ಯಾಂಪ್‌ಗಳ ಅಧಿಕೃತ ವೆಬ್‌ಸೈಟಿನಿಂದ ಆಸ್ತಿಯ EC ಯನ್ನು ಅಕ್ಸೆಸ್ ಮಾಡಬಹುದು. ಕೆಲವು ಸಂಬಂಧಿತ ಹುಡುಕಾಟದ ವಿವರಗಳನ್ನು ನಮೂದಿಸುವ ಮೂಲಕ ಅವರು ಒಂದು ನಿರ್ದಿಷ್ಟ ಆಸ್ತಿಯ ಪ್ರಮಾಣಪತ್ರವನ್ನು ಹುಡುಕಬಹುದು.

 

IGRS ತೆಲಂಗಾಣ ಪೋರ್ಟಲ್‌ನಲ್ಲಿ TS ಹೊಣೆಗಾರಿಕೆ ಪ್ರಮಾಣಪತ್ರ ಹುಡುಕಲು ಪ್ರಕ್ರಿಯೆ

 

IGRS TS ಪೋರ್ಟಲ್‌ನಲ್ಲಿ ಹೊಣೆಗಾರಿಕೆ ಪ್ರಮಾಣಪತ್ರ ಹುಡುಕಲು ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ. ಈ ಸೇವೆಯನ್ನು ಪಡೆಯುವ ಮೊದಲು ಈ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿ ಮತ್ತು ಖಾತೆಯನ್ನು ರಚಿಸುವುದನ್ನು ಖಚಿತಪಡಿಸಿಕೊಳ್ಳಿ.

  1. ಹಂತ 1 ತೆಲಂಗಾಣ ನೋಂದಣಿ ಮತ್ತು ಸ್ಟ್ಯಾಂಪ್ಸ್ ಇಲಾಖೆಯ (IGRS) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಹಂತ 2 ಮೊಬೈಲ್ ನಂಬರ್/ಇಮೇಲ್ ID ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಮಾಡಿ.
  3. ಹಂತ 3 'ಆನ್ಲೈನ್ ಸೇವೆಗಳ ಅಡಿಯಲ್ಲಿ 'ಹೊಣೆಗಾರಿಕೆ ಹುಡುಕಾಟ (EC)' ಆಯ್ಕೆಮಾಡಿ’.
  4. ಹಂತ 4 ಹಕ್ಕುತ್ಯಾಗದ ಪುಟದ ಕೆಳಭಾಗದಲ್ಲಿ 'ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ.
  5. ಹಂತ 5 'ಹುಡುಕಾಟದ ಮಾನದಂಡ' ಅಡಿಯಲ್ಲಿ, 'ಡಾಕ್ಯುಮೆಂಟ್ ನಂಬರ್' ಆಯ್ಕೆಮಾಡಿ’.
  6. ಹಂತ 6 ಡಾಕ್ಯುಮೆಂಟ್ ನಂಬರ್ ನಮೂದಿಸಿ.
  7. ಹಂತ 7 'ನೋಂದಣಿ ವರ್ಷ' ಮತ್ತು 'SRO ನಲ್ಲಿ ನೋಂದಾಯಿತ' ಎಂದು ಒದಗಿಸಿ’.
  8. ಹಂತ 8 ಮುಂದಿನದು, 'ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ’.

    ಹುಡುಕಾಟದ ಮಾನದಂಡಗಳಾದ ಗ್ರಾಮ ಕೋಡ್, ನಗರ/ಹಳ್ಳಿಯ ಹೆಸರು ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತೋರಿಸಲಾಗುತ್ತದೆ. 'ಇನ್ನಷ್ಟು ಸೇರಿಸಿ' ಬಟನ್ ಕ್ಲಿಕ್ ಮಾಡುವ ಮೂಲಕ ವ್ಯಕ್ತಿಗಳು ಮನೆ ಸಂಖ್ಯೆ ಮತ್ತು ಸರ್ವೇ ಸಂಖ್ಯೆಯನ್ನು ಇಲ್ಲಿ ನಮೂದಿಸಬಹುದು.
     
  9. ಹಂತ 9 ಈ ಪೇಜಿನ ಬಲದಲ್ಲಿರುವ 'ಮುಂದಿನದು' ಮೇಲೆ ಕ್ಲಿಕ್ ಮಾಡಿ.
  10. ಹಂತ 10 ಹುಡುಕಾಟದ ಅವಧಿಯನ್ನು ನಮೂದಿಸಿ.
  11. ಹಂತ 11 'ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ’.

    ಒದಗಿಸಲಾದ ಹುಡುಕಾಟದ ಮಾನದಂಡ ಮತ್ತು ಸಮಯದ ಅವಧಿಯ ಪ್ರಕಾರ ಅವರ ಆಯಾ ID ಗಳೊಂದಿಗೆ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ತೋರಿಸಲಾಗುತ್ತದೆ.
  12. ಹಂತ 12 ಎಲ್ಲಾ ಡಾಕ್ಯುಮೆಂಟ್‌ಗಳನ್ನು ಆಯ್ಕೆ ಮಾಡಲು ಪ್ರತಿ ಡಾಕ್ಯುಮೆಂಟ್ID ಯ ಬಲದಲ್ಲಿರುವ ಚೆಕ್ ಬಾಕ್ಸ್‌ಗಳನ್ನು ಕ್ಲಿಕ್ ಮಾಡಿ ಅಥವಾ 'ಎಲ್ಲವನ್ನೂ ಆಯ್ಕೆ ಮಾಡಿ' ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
  13. ಹಂತ 13 'ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ’.
 

ಆಸ್ತಿಯ ಮೇಲಿನ ಸಾಲದ ಹೊಣೆಗಾರಿಕೆ ಸ್ಟೇಟ್ಮೆಂಟನ್ನು ಈ ಎಲ್ಲಾ ವಿವರಗಳೊಂದಿಗೆ IGRS ತೆಲಂಗಾಣ ಪೋರ್ಟಲ್ ಪ್ರದರ್ಶಿಸುತ್ತದೆ –

  • ಆಸ್ತಿಯ ವಿವರಣೆ
  • TS ನೋಂದಣಿ ಮತ್ತು ಇತರ ದಿನಾಂಕಗಳು
  • ಆಸ್ತಿಯ ಸ್ವರೂಪ ಮತ್ತು ಮಾರುಕಟ್ಟೆ ಮೌಲ್ಯ
  • ಪಾರ್ಟಿಗಳ ಹೆಸರು - ಕಾರ್ಯನಿರ್ವಾಹಕರು (EX) ಮತ್ತು ಹಕ್ಕುದಾರರು (CL)
  • ದಾಖಲೆ ಸಂಖ್ಯೆ

ಮಾಹಿತಿಯ ಹಾರ್ಡ್‌ಕಾಪಿಯನ್ನು ಪಡೆಯಲು ವ್ಯಕ್ತಿಗಳು ಈ ಪುಟದ ಕೆಳಭಾಗದಲ್ಲಿರುವ 'ಪ್ರಿಂಟ್' ಬಟನ್ ಮೇಲೆ ಕ್ಲಿಕ್ ಮಾಡಬಹುದು.

1ನೇ ಜನವರಿ 1983 ನಂತರ ನೋಂದಾಯಿಸಲಾದ ಆಸ್ತಿಗಳಿಗೆ ಮಾತ್ರ ಹೊಣೆಗಾರಿಕೆ ಪ್ರಮಾಣಪತ್ರಗಳು ಲಭ್ಯವಿವೆ. ಹಳೆಯ ECS ಗಾಗಿ, ವ್ಯಕ್ತಿಗಳು ಆಯಾ ಉಪ-ನೋಂದಣಿ ಕಚೇರಿಗೆ ಭೇಟಿ ನೀಡಬೇಕು.

ಅಲ್ಲದೆ, ನಾಗರಿಕರು ತೆಲಂಗಾಣ ಭೂಮಿ ನೋಂದಣಿ ಮತ್ತು ಸ್ಟ್ಯಾಂಪ್ ಇಲಾಖೆಯ ವೆಬ್‌ಸೈಟಿನಿಂದ ಸಾಲದ ಹೊಣೆಗಾರಿಕೆ ಪ್ರಮಾಣಪತ್ರಕ್ಕೆ ಅಪ್ಲೈ ಮಾಡಲು ಸಾಧ್ಯವಿಲ್ಲ.

ತೆಲಂಗಾಣ ಹೊಣೆಗಾರಿಕೆ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯುವುದು ಹೇಗೆ?


ನಾಗರಿಕರು ಈ ಕೆಲವು ಹಂತಗಳಲ್ಲಿ ಸಾಲದ ಹೊಣೆಗಾರಿಕೆ ಪ್ರಮಾಣಪತ್ರಕ್ಕೆ ಅಪ್ಲೈ ಮಾಡಬಹುದು –

  1. ಹಂತ 1 ತೆಲಂಗಾಣ ಮೀಸೇವಾ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಹಂತ 2 'ಅಪ್ಲಿಕೇಶನ್ ಫಾರ್ಮ್‌‌ಗಳು' ಮೇಲೆ ಕ್ಲಿಕ್ ಮಾಡಿ’.
  3. ಹಂತ 3 'ನೋಂದಣಿ' ಹುಡುಕಲು ಈ ಪುಟವನ್ನು ನ್ಯಾವಿಗೇಟ್ ಮಾಡಿ’.
  4. ಹಂತ 4 'ಸಾಲದ ಹೊಣೆಗಾರಿಕೆ ಪ್ರಮಾಣಪತ್ರ' ಮೇಲೆ ಕ್ಲಿಕ್ ಮಾಡಿ’.

ಸಾಲದ ಹೊಣೆಗಾರಿಕೆ ಪ್ರಮಾಣಪತ್ರಕ್ಕಾಗಿ ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಲಾಗುತ್ತದೆ. ವ್ಯಕ್ತಿಗಳು ಈ ಡಾಕ್ಯುಮೆಂಟನ್ನು ಪ್ರಿಂಟ್ ಮಾಡಬೇಕು ಮತ್ತು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಬೇಕು (ಆಸ್ತಿ ಮಾಲೀಕರ ಹೆಸರು, ಆಸ್ತಿಯ ಮಾರಾಟ/ಖರೀದಿ ಪತ್ರ ಇತ್ಯಾದಿ). ಮುಂದೆ, ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ ಮತ್ತು ಈ ವೆಬ್‌ಸೈಟ್‌ನಲ್ಲಿರುವ ಹತ್ತಿರದ ಮೀಸೇವಾ ಕೇಂದ್ರದಲ್ಲಿ ಈ ಫಾರ್ಮ್ ಅನ್ನು ಸಲ್ಲಿಸಿ.

ಭವಿಷ್ಯದ ರೆಫರೆನ್ಸ್‌ಗಾಗಿ ಅರ್ಜಿದಾರರಿಗೆ ಸ್ವೀಕೃತಿ ಸಂಖ್ಯೆಯನ್ನು ಒದಗಿಸಲಾಗುತ್ತದೆ.

ಸಾಲದ ಹೊಣೆಗಾರಿಕೆಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು


ಸಾಲದ ಹೊಣೆಗಾರಿಕೆ ಪ್ರಮಾಣಪತ್ರ ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳೆಂದರೆ –

  1. ಆಸ್ತಿಯ ವಿವರಗಳು
  2. ದಿನಾಂಕದೊಂದಿಗೆ ನೋಂದಾಯಿತ ಡೀಡ್ ನಂಬರ್
  3. ಸಂಪುಟ/CD ನಂಬರ್
  4. ಆಸ್ತಿಯ ಯಾವುದೇ ಹಿಂದಿನ ಕಾರ್ಯಗತಗೊಳಿಸಿದ ಪತ್ರದ ಫೋಟೋಕಾಪಿ (ಮಾರಾಟ ಪತ್ರ, ವಿಭಜನೆ ಉಡುಗೊರೆ ಪತ್ರ ಇತ್ಯಾದಿ.)
  5. ವ್ಯಕ್ತಿಯ ವಿಳಾಸದ ದೃಢೀಕೃತ ಪ್ರತಿ

ಸಾಲದ ಹೊಣೆಗಾರಿಕೆ ಪ್ರಮಾಣಪತ್ರವನ್ನು ಪಡೆಯಲು ಫೀಸು ಮತ್ತು ಶುಲ್ಕಗಳು



ಪ್ರಮಾಣಪತ್ರಕ್ಕಾಗಿ ಅರ್ಜಿದಾರರು ರೂ. 25 ಸೇವಾ ಶುಲ್ಕವನ್ನು ಪಾವತಿಸಬೇಕು. ಹೆಚ್ಚುವರಿಯಾಗಿ, ಈ ಎಲ್ಲಾ ಕಾನೂನು ಶುಲ್ಕಗಳನ್ನು ಸಹ ಪಾವತಿಸಬೇಕಾಗುತ್ತದೆ.

  1. ಅರ್ಜಿದಾರರು 30 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ರೂ. 500
  2. ರೂ. 200 ಒಂದು ವೇಳೆ ಆತ/ಆಕೆ 30 ಕ್ಕಿಂತ ಕಡಿಮೆಯವರಾಗಿದ್ದರೆ

IGRS ತೆಲಂಗಾಣ EC ಪಡೆಯಲು ಪ್ರಕ್ರಿಯಾ ಸಮಯ ಏನು?


ಸಾಲದ ಹೊಣೆಗಾರಿಕೆ ಪ್ರಮಾಣ ಪತ್ರ ಪಡೆಯಲು ಕನಿಷ್ಠ ಪ್ರಕ್ರಿಯಾ ಸಮಯ 6 ಕೆಲಸದ ದಿನಗಳು. ಕೆಲವು ಸಂದರ್ಭಗಳಲ್ಲಿ ಇದನ್ನು 30 ದಿನಗಳಿಗಿಂತ ಹೆಚ್ಚು ದಿನಗಳವರೆಗೆ ಕೂಡ ವಿಸ್ತರಿಸಬಹುದು.

ನನ್ನ EC ಸ್ಟೇಟಸ್ ಅನ್ನು ನಾನು ಹೇಗೆ ಪರಿಶೀಲಿಸಬಹುದು?


IGRS ತೆಲಂಗಾಣ ನೋಂದಣಿ ಪೋರ್ಟಲ್‌ನಲ್ಲಿ 'ಸಾಲದ ಹೊಣೆಗಾರಿಕೆ ಆಯ್ಕೆಯೊಂದಿಗೆ' ತಮ್ಮ ಹೊಣೆಗಾರಿಕೆ ಪ್ರಮಾಣಪತ್ರ ಸ್ಟೇಟಸ್ ಅನ್ನು ಪರಿಶೀಲಿಸಬಹುದು. ಸ್ಕ್ರೀನಿನಲ್ಲಿ ಪ್ರದರ್ಶಿಸಲಾದ ನಿಮ್ಮ EC ಸ್ಥಿತಿಯನ್ನು ನೋಡಲು ಅಗತ್ಯ ಹುಡುಕಾಟದ ವಿವರಗಳನ್ನು ನಮೂದಿಸಿ.

ತೆಲಂಗಾಣದ ನೋಂದಣಿ ಮತ್ತು ಸ್ಟ್ಯಾಂಪ್ ಇಲಾಖೆಯ ವೆಬ್‌ಸೈಟ್ ಆಸ್ತಿ ಖರೀದಿದಾರರಿಗೆ ಸಾಲದ ಹೊಣೆಗಾರಿಕೆ ಪ್ರಮಾಣಪತ್ರವನ್ನು ಪಡೆದುಕೊಳ್ಳುವುದನ್ನು ಸರಳಗೊಳಿಸಿದೆ. ನಾಗರಿಕರು ಇತರ ಹಲವಾರು ಸೇವೆಗಳನ್ನು ಕೂಡ ಅಕ್ಸೆಸ್ ಮಾಡಬಹುದು ಮತ್ತು ಆಫೀಸಿಗೆ ಭೇಟಿ ನೀಡಬೇಕಾದ ಅಗತ್ಯತೆಯಿಂದ ಹೊರಗುಳಿಯಬಹುದು.