ಎಲ್ಲಾ ಕೆಳಗಿನ ನಿಯಮಗಳನ್ನು ಪೂರೈಸಿದ ನಂತರ ಅರ್ಜಿದಾರರು ಈ ಉದ್ದೇಶದ ಅಡಿಯಲ್ಲಿ ಅರ್ಹರಾಗಿರುತ್ತಾರೆ:
1. ಫಲಾನುಭವಿ ಕುಟುಂಬ
ಕಡ್ಡಾಯವಾಗಿ ಭಾರತದ ಯಾವುದೇ ಭಾಗದಲ್ಲಿ ಆತನ/ಆಕೆಯ ಹೆಸರಿನಲ್ಲಿ ಅಥವಾ ಆತನ/ಆಕೆಯ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಒಂದು ಪಕ್ಕ ಮನೆಯನ್ನು (ಎಲ್ಲಾ ಹವಾಮಾನದಲ್ಲೂ ವಾಸಕ್ಕೆ ಸೂಕ್ತವಾದ ಸ್ಥಳ) ಹೊಂದಿರಬಾರದು.
2. ಫಲಾನುಭವಿ ಕುಟುಂಬವು
ಕಡ್ಡಾಯವಾಗಿ ಭಾರತ ಸರಕಾರ/ರಾಜ್ಯ ಸರ್ಕಾರದಿಂದ ಯಾವುದೇ ವಸತಿ ಯೋಜನೆ ಅಡಿಯಲ್ಲಿ ಕೇಂದ್ರ ಸಹಾಯವನ್ನು ಪಡೆದುಕೊಂಡಿರಬಾರದು.
3. ಫಲಾನುಭವಿ ಕುಟುಂಬವು
ಕಡ್ಡಾಯವಾಗಿ ಯಾವುದೇ PMAY - CLSS ಸಬ್ಸಿಡಿಯನ್ನು ಪ್ರಾಥಮಿಕ ಸಾಲದಾತ ಸಂಸ್ಥೆಗಳಿಂದ ('PLI') ಪಡೆದಿರಬಾರದು.
4. ಜನಗಣತಿ 2011 ಪ್ರಕಾರ ಎಲ್ಲಾ ಕಾನೂನುಬದ್ಧ ಪಟ್ಟಣಗಳು ಹಾಗೂ ತರುವಾಯ ಸೂಚಿಸಲಾದ ಪಟ್ಟಣಗಳು ಮಿಷನ್ ಅಡಿಯಲ್ಲಿ ಕವರೇಜ್ಗೆ ಅರ್ಹವಾಗಿರುತ್ತವೆ.
5. ಲೋನ್ ಮೊತ್ತದ 1ನೇ ಕಂತನ್ನು ವಿತರಿಸಿದ ದಿನಾಂಕದಿಂದ ಯಾವುದಕ್ಕಾಗಿ ಲೋನ್ ಪಡೆದಿದ್ದೀರೋ ಆ ಕಟ್ಟಡದ ನಿರ್ಮಾಣ/ ವಿಸ್ತರಣೆಯನ್ನು 36 ತಿಂಗಳೊಳಗೆ ಪೂರ್ಣಗೊಳಿಸಬೇಕು.
LIG/EWS ವಿಭಾಗಕ್ಕೆ ಮಾತ್ರ ಹೆಚ್ಚುವರಿ ಮಾನದಂಡ: ಮಿಷನ್ ಅಡಿಯಲ್ಲಿ ಕೇಂದ್ರದ ಸಹಭಾಗಿತ್ವದಿಂದ ಕಟ್ಟಲಾದ/ಸ್ವಾಧೀನಪಡಿಸಿಕೊಳ್ಳಲಾದ ಮನೆಗಳು ಮನೆಯ ಮಹಿಳಾ ಮುಖ್ಯಸ್ಥೆಯ ಹೆಸರಲ್ಲಿರಬೇಕು ಅಥವಾ ಮನೆಯ ಪುರುಷ ಯಜಮಾನ ಮತ್ತು ಆತನ ಹೆಂಡತಿಯ ಜಂಟಿ ಹೆಸರಲ್ಲಿರಬೇಕು, ಮತ್ತು ಕುಟುಂಬದಲ್ಲಿ ಯಾವುದೇ ವಯಸ್ಕ ಮಹಿಳಾ ಸದಸ್ಯರು ಇರದ ಸಂದರ್ಭದಲ್ಲಿ, ಮನೆಯು ಮನೆಯಲ್ಲಿರುವ ಪುರುಷ ಸದಸ್ಯನ ಹೆಸರಲ್ಲಿರಬಹುದು.