ಮೀಭೂಮಿ: ಎಪಿ ಭೂ ದಾಖಲೆ
ವಿವಿಧ ಭಾರತೀಯ ರಾಜ್ಯಗಳಲ್ಲಿ ಭೂ ದಾಖಲೆಗಳ ಡಿಜಿಟೈಸೇಶನ್ ಭೂ ಮಾಲೀಕತ್ವ ಮತ್ತು ಸಂಬಂಧಿತ ಸೇವೆಗಳಂತಹ ಮಾಹಿತಿಯನ್ನು ಸರಳಗೊಳಿಸಿದೆ. ರಾಜ್ಯದಲ್ಲಿ ಆಸ್ತಿ ಮಾಲೀಕರಿಗೆ ಸಂಬಂಧಿತ ಸೇವೆಗಳ ಪ್ರವೇಶವನ್ನು ಸುಲಭಗೊಳಿಸಲು ಆಂಧ್ರಪ್ರದೇಶ ರಾಜ್ಯ ಸರ್ಕಾರವು ಮೀಭೂಮಿ ಎಂಬ ಒಂದು ಪೋರ್ಟಲ್ ಅನ್ನು ಪರಿಚಯಿಸಿದೆ.
ಈ ಪೋರ್ಟಲ್‌ಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಹುಡುಕಲು ಓದಿ.
ಮೀಭೂಮಿ ಎಂದರೇನು?
ಭೂಮಿ ಮಾಲೀಕತ್ವಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಸೇವೆಗಳನ್ನು ಡಿಜಿಟೈಸ್ ಮಾಡುವ ಗುರಿಯೊಂದಿಗೆ ಆಂಧ್ರಪ್ರದೇಶ ಸರ್ಕಾರವು 2015 ರಲ್ಲಿ ಮೀಭೂಮಿ AP ಯನ್ನು ಪ್ರಾರಂಭಿಸಿತು. ಈ ಪೋರ್ಟಲ್ ರಾಜ್ಯದ ಎಲ್ಲಾ ರಿಯಲ್ ಎಸ್ಟೇಟ್ ಮಾಲೀಕರು, ಖರೀದಿದಾರರು ಮತ್ತು ಮಾರಾಟಗಾರರಿಗೆ ಭೂ ದಾಖಲೆಗಳನ್ನು ಸುಲಭವಾಗಿ ಅಕ್ಸೆಸ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ಮೀಭೂಮಿ ಪಾಸ್‌ಬುಕ್‌ನೊಂದಿಗೆ ಬರುತ್ತದೆ, ಇದು ಭೂ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಿಸಿದ ವಿವರಗಳಾದ ತೆರಿಗೆ ಪಾವತಿ, ರಾಜ್ಯದ ಯಾವುದೇ ಮೊತ್ತ ಬಾಕಿ ಇತ್ಯಾದಿಗಳನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.
ಮೀಭೂಮಿಯ ಪ್ರಯೋಜನಗಳು ಯಾವುವು?
ಬಳಕೆದಾರರು ಮೀಭೂಮಿ ಪೋರ್ಟಲ್ ಮೂಲಕ ಈ ಎಲ್ಲಾ ಪ್ರಯೋಜನಗಳನ್ನು ಆನಂದಿಸಬಹುದು.
- ಎಪಿ ಭೂ ದಾಖಲೆಗಳಿಗೆ ಆನ್ಲೈನಿನಲ್ಲಿ ಸುಲಭ ಅಕ್ಸೆಸ್.
- ಬಳಕೆದಾರರು ಅಧಿಕೃತ ವೆಬ್‌ಸೈಟ್ ಮೂಲಕ ಗ್ರಾಮ ನಕ್ಷೆಗಳ ಜೊತೆಗೆ ಮೀಭೂಮಿ FMB ಅಥವಾ ಫೀಲ್ಡ್ ಮ್ಯಾನೇಜ್ಮೆಂಟ್ ಬುಕ್ ಅನ್ನು ಕೂಡ ಅಕ್ಸೆಸ್ ಮಾಡಬಹುದು.
- ಜಮೀನು ದಾಖಲೆಗಳ ರಸೀತಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆಯನ್ನು ಇದು ಖಚಿತಪಡಿಸುತ್ತದೆ.
- ಯಾವುದೇ ವ್ಯಕ್ತಿ ಅಥವಾ ಆಂಧ್ರ ಭೂಮಿ ಮಾಲೀಕರು ಈ ವೆಬ್‌ಸೈಟ್ ಮತ್ತು ಆ್ಯಪನ್ನು ಎಲ್ಲಿಂದಲಾದರೂ ಅಕ್ಸೆಸ್ ಮಾಡಬಹುದು.
- ಬಳಕೆದಾರರು ಈ ವೆಬ್‌ಸೈಟಿನಲ್ಲಿ AP ಭೂಮಿ ಸಂಬಂಧಿತ ದೂರುಗಳನ್ನು ಕೂಡ ದಾಖಲಿಸಬಹುದು.
- ಒಂದು SMS ಸೇವೆಯು ಪಟ್ಟದಾರ್‌ಗಳು ಮತ್ತು ಕಚೇರಿ ಅಧಿಕಾರಿಗಳನ್ನು ಸಂಬಂಧಪಟ್ಟ ಪ್ರಕ್ರಿಯೆಯ ಪ್ರಗತಿಯೊಂದಿಗೆ ಅಪ್ಡೇಟ್ ಮಾಡುತ್ತದೆ.
ಮೀಭೂಮಿಯ ಫೀಚರ್‌ಗಳು ಯಾವುವು?
ಭೂ ದಾಖಲೆಗಳು ಮತ್ತು ಸಂಬಂಧಿತ ಸೇವೆಗಳ ಭ್ರಷ್ಟಾಚಾರ-ಮುಕ್ತ ಮತ್ತು ಆರ್ಥಿಕ ಆಡಳಿತಕ್ಕಾಗಿ ಈ ರಾಜ್ಯದಿಂದ ಪ್ರಾರಂಭಿಸಲಾದ ಮೀಭೂಮಿ ಎಪಿ ಪೋರ್ಟಲ್ ಬಳಕೆದಾರರಿಗೆ ಈ ಎಲ್ಲಾ ಪ್ರಯೋಜನಗಳನ್ನು ಒದಗಿಸುತ್ತದೆ.
- AP 1-B ಭೂ ದಾಖಲೆಗಳೊಂದಿಗೆ ಸಂಬಂಧಿಸಿದ ಮಾಹಿತಿಗೆ ಅಕ್ಸೆಸ್
- ಸರ್ವೇ ಶ್ರೇಣಿ
- ಅಪಾಯದ ಪ್ರಾಂತ್ಯ
- ಪಟ್ಟಾ ಹೆಸರುಗಳು
- ಪ್ಲಾಟ್‌ಗೆ ಸಂಬಂಧಿಸಿದ ಹೊಣೆಗಾರಿಕೆ
- ಭೂ ದಾಖಲೆಗಳೊಂದಿಗೆ ಆಧಾರ್ ಕಾರ್ಡಿನ ಲಿಂಕೇಜ್
- ಪಟ್ಟಾ ಪಾಸ್‌ಬುಕ್‌ಗಳು
- ಗ್ರಾಮೀಣ ಭೂಮಾಲೀಕರ ಪಟ್ಟಿ
- ಪಟ್ಟಾ ಬ್ಯಾಂಕ್‌ಬುಕ್‌ನೊಂದಿಗೆ ಸಂಬಂಧಿಸಿದ ಅಂಕಿಅಂಶಗಳು
- ಭೂ ಪರಿವರ್ತನೆ ವಿವರಗಳು
- ವೈಯಕ್ತಿಕ ಮತ್ತು ಗ್ರಾಮೀಣ ಅಡಂಗಲ್ ದಾಖಲೆಗಳು
- ಬೆಳೆ ವಿವರಗಳು
- ಭೂ ಮಾಲೀಕತ್ವ
- ಮಣ್ಣಿನ ಮತ್ತು ನೀರಿನ ಮೂಲದ ವಿಧ
ಬಳಕೆದಾರರು ಮೀಭೂಮಿ ಪೋರ್ಟಲ್ ಮೂಲಕ ಭೂ ಮಾಲೀಕತ್ವಕ್ಕಾಗಿ ರಾಜ್ಯದ ಹಕ್ಕುಗಳ ದಾಖಲೆಗಳಾದ ಅಡಂಗಲ್ ಮತ್ತು 1-B ಸಾಫ್ಟ್‌ಕಾಪಿಗಳನ್ನು ಕೂಡ ಡೌನ್ಲೋಡ್ ಮಾಡಬಹುದು.
ಅಡಂಗಲ್ AP ಎಂದರೇನು?
ಅಡಂಗಲ್ AP ಅಥವಾ ಮೀಭೂಮಿ ಅಡಂಗಲ್ ಆಂಧ್ರಪ್ರದೇಶದ ಭೌಗೋಳಿಕ ಮಿತಿಗಳ ಒಳಗೆ ಇರುವ ಭೂಮಿಯ ಪ್ಲಾಟ್‌ಗೆ ಸಂಬಂಧಿಸಿದ ವಿವರವಾದ ಖಾತೆಯಾಗಿದೆ. ಈ ದಾಖಲೆಯನ್ನು ಸಂಬಂಧಪಟ್ಟ ಗ್ರಾಮದ ಆಡಳಿತಾತ್ಮಕ ಪ್ರಾಧಿಕಾರದಿಂದ ನಿರ್ವಹಿಸಲಾಗುತ್ತದೆ. ಇದು ಒಬ್ಬ ವ್ಯಕ್ತಿ, ಒಡೆತನ, ಮಣ್ಣಿನ ಸ್ವರೂಪ, ಅಸ್ತಿತ್ವದಲ್ಲಿರುವ ಹೊಣೆಗಾರಿಕೆಗಳು ಇತ್ಯಾದಿಗಳ ಪ್ರಕಾರಕ್ಕೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿರಬಹುದು.
ಸ್ಥಳೀಯರು ಅದನ್ನು 'ಗ್ರಾಮ ಲೆಕ್ಕ ಸಂಖ್ಯೆ 3' ಅಥವಾ 'ಪಹಣಿ' ಎಂದು ಕೂಡ ಗುರುತಿಸುತ್ತಾರೆ ಮತ್ತು ಸಾಮಾನ್ಯವಾಗಿ ಭೂಮಿಯ ಮಾರಾಟ ಅಥವಾ ಖರೀದಿಯ ಸಮಯದಲ್ಲಿ ಅದನ್ನು ಬಳಸಲಾಗುತ್ತದೆ.
ಮೀಭೂಮಿ ಅಡಂಗಲ್ ನೋಡಲು ಪ್ರಕ್ರಿಯೆ
ಒಂದು ನಿವೇಶನಕ್ಕಾಗಿ ಅಡಂಗಲ್ ಡಾಕ್ಯುಮೆಂಟ್‌ಗಳನ್ನು ನೋಡಲು ಈ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿ:
- ಅಧಿಕೃತ ಮೀಭೂಮಿ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಡಂಗಲ್ ಆಯ್ಕೆಗೆ ಸ್ಕ್ರೋಲ್ ಮಾಡಿ.
- ಮೆನು ಅಕ್ಸೆಸ್ ಮಾಡಲು ಅಡಂಗಲ್ ಮೇಲೆ ಕ್ಲಿಕ್ ಮಾಡಿ ಮತ್ತು ವೈಯಕ್ತಿಕ ಅಥವಾ ಗ್ರಾಮ ಅಡಂಗಲ್‌ನಿಂದ ಆಯ್ಕೆ ಮಾಡಿ.
- ಜಿಲ್ಲೆ, ವಲಯ, ಗ್ರಾಮ, ಹೆಸರು ಮುಂತಾದ ವಿವರಗಳನ್ನು ಭರ್ತಿ ಮಾಡಲು ನಿಮ್ಮನ್ನು ಕೇಳುವ ಹೊಸ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ. ಈ ವಿವರಗಳನ್ನು ಆಧಾರ್ ನಂಬರ್, ಸರ್ವೇ ನಂಬರ್, ಆಟೋ ಮ್ಯೂಟೇಶನ್ ದಾಖಲೆಗಳು ಮತ್ತು ಅಕೌಂಟ್ ನಂಬರ್ ಸಹಾಯದಿಂದ ಅಕ್ಸೆಸ್ ಮಾಡಿ.
- ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ನಿಮ್ಮ ಮೀಭೂಮಿ ಅಡಂಗಲ್ ವಿವರಗಳನ್ನು ಅಕ್ಸೆಸ್ ಮಾಡಲು 'ಕ್ಲಿಕ್ ಮಾಡಿ' ಮೇಲೆ ಒತ್ತಿ.
ROR 1-B ಡಾಕ್ಯುಮೆಂಟ್ ಎಂದರೇನು?
ಆಂಧ್ರಪ್ರದೇಶದಲ್ಲಿ ಜನಪ್ರಿಯವಾಗಿ 1-B ಎಂದು ಕರೆಯಲ್ಪಡುವ ಹಕ್ಕುಗಳ ದಾಖಲೆ (ROR), ರಾಜ್ಯದ ಆದಾಯ ಇಲಾಖೆಯಿಂದ ನಿರ್ವಹಿಸಲ್ಪಟ್ಟ ಭೂ ದಾಖಲೆಗಳ ವಿವರವನ್ನು ಒದಗಿಸುವ ದಾಖಲೆಯಾಗಿದೆ.
ಮೀಭೂಮಿ ಪೋರ್ಟಲ್‌ನಲ್ಲಿ ಡಿಜಿಟೈಸೇಶನ್ ಪ್ರಕ್ರಿಯೆ ಅನುಷ್ಠಾನಕ್ಕೆ ಮೊದಲು ಭೂ ದಾಖಲೆಗಳನ್ನು ಪಟ್ಟಿ ಮಾಡುವ ಗ್ರಾಮಗಳಲ್ಲಿ ನಿರ್ವಹಿಸಲಾದ ಕೈಪಿಡಿ ಮತ್ತು ಪ್ರತ್ಯೇಕ ನೋಂದಣಿಗಳಿಂದ ಇದನ್ನು ಪಡೆಯಲಾಗುತ್ತದೆ.
ಮೀಭೂಮಿಯಲ್ಲಿ ಆಧಾರ್ ಕಾರ್ಡನ್ನು ಲಿಂಕ್ ಮಾಡುವ ಪ್ರಕ್ರಿಯೆ
ನಿಮ್ಮ ಅಕೌಂಟ್ ನಂಬರ್ ಮತ್ತು ಭೂ ದಾಖಲೆಗಳೊಂದಿಗೆ ನಿಮ್ಮ ಆಧಾರ್ ನಂಬರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಿ. ಒಂದು ವೇಳೆ ಇಲ್ಲದಿದ್ದರೆ, ಭೂಮಿಯೊಂದಿಗೆ ಆಧಾರ್ ಲಿಂಕ್ ಮಾಡುವುದನ್ನು ಪೂರ್ಣಗೊಳಿಸಲು ಈ ಎಲ್ಲಾ ಹಂತಗಳೊಂದಿಗೆ ಮುಂದುವರಿಯಿರಿ.
ಹಂತ 1: ಮೀಭೂಮಿಯ ಪೋರ್ಟಲ್‌ನಲ್ಲಿ, ಟಾಪ್ ಮೆನುಗೆ ಸ್ಕ್ರೋಲ್ ಮಾಡಿ ಮತ್ತು 'ಆಧಾರ್/ ಇತರ ಗುರುತುಗಳನ್ನು' ಆಯ್ಕೆಮಾಡಿ’.
ಹಂತ 2: ತೆರೆಯುವ ಡ್ರಾಪ್-ಡೌನ್‌ನಿಂದ, ಮೊದಲ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ, ಅಂದರೆ 'ಆಧಾರ್ ಲಿಂಕಿಂಗ್', ಮತ್ತು ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಲು ಜೋನ್, ಜಿಲ್ಲೆ ಮತ್ತು ಗ್ರಾಮದ ಹೆಸರು ಮುಂತಾದ ವಿವರಗಳನ್ನು ನಮೂದಿಸಿ.
ಹಂತ 3: ನಂತರದ ಬಾಕ್ಸಿನಲ್ಲಿ ಪ್ರದರ್ಶಿತ ಕೋಡನ್ನು ಭರ್ತಿ ಮಾಡಿ ಮತ್ತು 'ಕ್ಲಿಕ್' ಬಟನ್ ಒತ್ತಿರಿ.
ವಿವರಗಳನ್ನು ಒದಗಿಸಿದ ನಂತರ, ನಿಮ್ಮ ಆಧಾರ್ ನಂಬರ್ ಭೂಮಿ ದಾಖಲೆಗಳಿಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂದು ಪೇಜ್ ತೋರಿಸುತ್ತದೆ. ಪಡಿತರ ಚೀಟಿ, ವೋಟರ್ ID ಕಾರ್ಡ್, ಪಟ್ಟಾದಾರ್ ಪಾಸ್‌ಬುಕ್ ಮುಂತಾದ ಇತರ ಡಾಕ್ಯುಮೆಂಟ್‌ಗಳು ನಿಮ್ಮ ಅಕೌಂಟ್ ಮತ್ತು ಮೀಭೂಮಿಯಲ್ಲಿ ಭೂ ದಾಖಲೆಗಳಿಗೆ ಲಿಂಕ್ ಆಗಿವೆಯೇ ಅಥವಾ ಇಲ್ಲವೇ ಎಂಬುದನ್ನೂ ಅದೇ ಪ್ರಕ್ರಿಯೆಯು ತೋರಿಸುತ್ತದೆ. ಲಿಂಕ್ ಆಗಿದ್ದರೆ, ನೀವು ಈ ಡಾಕ್ಯುಮೆಂಟ್‌ಗಳನ್ನು PDF ಫಾರ್ಮ್ಯಾಟ್‌ನಲ್ಲಿ ಮರುನಿರ್ದೇಶಿತ ಪೇಜಿನಲ್ಲಿ ನೋಡಬಹುದು.
AP ಯಲ್ಲಿ ಇ-ಪಾಸ್‌ಬುಕ್ ಪಡೆಯುವುದು ಹೇಗೆ?
ಆಂಧ್ರಪ್ರದೇಶದ ಭೂಮಾಲೀಕರು ಮೀಭೂಮಿ ಎಪಿ ಪೋರ್ಟಲ್ ಮೂಲಕ ತಮ್ಮ ಪಾಸ್‌ಬುಕ್‌ಗಳನ್ನು ಡಿಜಿಟಲ್ ಆಗಿ ಕೂಡ ಅಕ್ಸೆಸ್ ಮಾಡಬಹುದು. ಆ್ಯಪ್‌ನಲ್ಲಿ ನಿಮ್ಮ ಇ-ಪಾಸ್‌ಬುಕ್ ಅಕ್ಸೆಸ್ ಮಾಡಲು ಈ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿ.
ಹಂತ 1: ಪೋರ್ಟಲ್‌ನಲ್ಲಿ, ಟಾಪ್ ಮೆನುಗೆ ಸ್ಕ್ರೋಲ್ ಮಾಡಿ ಮತ್ತು 'ಎಲೆಕ್ಟ್ರಾನಿಕ್ ಪಾಸ್‌ಬುಕ್' ಆಯ್ಕೆಮಾಡಿ’.
ಹಂತ 2: ಮರುನಿರ್ದೇಶಿತ ಪುಟದಲ್ಲಿ, ಮುಂದುವರೆಯಲು ಅಗತ್ಯವಿರುವ ವಿವರಗಳಾದ ಅಕೌಂಟ್ ನಂಬರ್, ನೋಂದಾಯಿತ ಮೊಬೈಲ್ ನಂಬರ್, ಜೋನ್, ಜಿಲ್ಲೆ ಮತ್ತು ಗ್ರಾಮದ ಹೆಸರನ್ನು ನಮೂದಿಸಿ.
ಹಂತ 3: ಮುಂದೆ, ಒದಗಿಸಲಾದ ಕೋಡ್ ನಮೂದಿಸುವ ಮೂಲಕ ನಿಮ್ಮ ಗುರುತನ್ನು ಖಚಿತಪಡಿಸಿ.
ಸರಿಯಾಗಿ ನಮೂದಿಸಿದ ನಿಮ್ಮ ಎಲ್ಲಾ ವಿವರಗಳೊಂದಿಗೆ, ನಿಮ್ಮ ಇ-ಪಾಸ್‌ಬುಕ್ ಅನ್ನು ತಕ್ಷಣ ಜನರೇಟ್ ಮಾಡಲಾಗುತ್ತದೆ ಮತ್ತು ಸ್ಕ್ರೀನಿನಲ್ಲಿ ಪ್ರದರ್ಶಿಸಲಾಗುತ್ತದೆ.
AP ಭೂ ದಾಖಲೆಗಳನ್ನು ಪರಿಶೀಲಿಸುವ ವಿಧಾನ
ಈ ಕೆಲವು ಹಂತಗಳಲ್ಲಿ 1-B ಅಥವಾ ROR ವಿವರಗಳನ್ನು ಅಕ್ಸೆಸ್ ಮಾಡುವ ಮೂಲಕ ರಾಜ್ಯದಲ್ಲಿ ನಿಮ್ಮ ಆಸ್ತಿಯ ಭೂ ದಾಖಲೆಗಳನ್ನು ನೀವು ಪರಿಶೀಲಿಸಬಹುದು.
- ಮೀಭೂಮಿ ಪೋರ್ಟಲ್‌ನಲ್ಲಿ, ಹೋಮ್‌ಪೇಜಿನಲ್ಲಿರುವ ಟಾಪ್ ಮೆನುಗೆ ಭೇಟಿ ನೀಡಿ ಮತ್ತು ಅಲ್ಲಿಂದ '1-B' ಆಯ್ಕೆಮಾಡಿ.
- ಪ್ರದರ್ಶಿಸಲಾದ ಡ್ರಾಪ್-ಡೌನ್ ಮೇಲೆ, '1-B' ಉಪ-ಆಯ್ಕೆಯನ್ನು ಆರಿಸಿ’.
- ನಂತರ, ಮರುನಿರ್ದೇಶಿತ ಪುಟದಲ್ಲಿ, ಜೋನ್, ಜಿಲ್ಲೆ, ಗ್ರಾಮ ಮುಂತಾದ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ಈ ವಿವರಗಳನ್ನು ನಿಖರವಾಗಿ ಅಕ್ಸೆಸ್ ಮಾಡಲು, ಸರ್ವೇ ನಂಬರ್, ಅಕೌಂಟ್ ನಂಬರ್, ಆಟೋ ಮ್ಯೂಟೇಶನ್ ರೆಕಾರ್ಡ್‌ಗಳು, ಆಧಾರ್ ನಂಬರ್ ಮತ್ತು ಪಟ್ಟಾದಾರ್ ಹೆಸರನ್ನು ಒಳಗೊಂಡಂತೆ ಫಾರ್ಮ್ ಮೇಲಿನ ಯಾವುದೇ ಆಯ್ಕೆಗಳಿಂದ ಆರಿಸಿ.
- ಒಮ್ಮೆ ಭರ್ತಿ ಮಾಡಿದ ನಂತರ, ನಿಮ್ಮ AP ಭೂ ದಾಖಲೆಗಳನ್ನು ನೋಡಲು ನಂತರದ ಬಾಕ್ಸಿನಲ್ಲಿ ಪ್ರದರ್ಶಿಸಲಾದ 5-ಡಿಜಿಟ್ ಕೋಡನ್ನು ನಮೂದಿಸಿ.
1-B ಮತ್ತು ಅಡಂಗಲ್ ಎರಡೂ AP ಭೂಮಿ ದಾಖಲೆಗಳಾಗಿವೆ ಎಂಬುದನ್ನು ಗಮನಿಸಿ. ಆದಾಗ್ಯೂ, ಮೊದಲನೆಯದ್ದನ್ನು ತಹಸೀಲ್ದಾರ್ ನಿರ್ವಹಿಸುತ್ತಾರೆ ಮತ್ತು ಸಾಮಾನ್ಯವಾಗಿ ಮಾರಾಟಗಾರರ ವಿವರಗಳನ್ನು ಹೊಂದಿರುತ್ತದೆ. ಇನೊಂದು, ಭೂಮಿಯ ಪ್ರಕಾರ, ಬಳಕೆಯ ಸ್ವರೂಪ ಮತ್ತು ಇತರ ಭೂ-ನಿರ್ದಿಷ್ಟ ಮಾಹಿತಿಯನ್ನು ಒಳಗೊಂಡಿರುತ್ತವೆ.
ಮೀಭೂಮಿಯಲ್ಲಿ ದೂರಿನ ಸ್ಥಿತಿಯನ್ನು ಟ್ರ್ಯಾಕ್ ಮಾಡುವುದು ಹೇಗೆ?
ಭೂ ದಾಖಲೆಗಳು ಮತ್ತು ಅವುಗಳ ಸರಿಪಡಿಸುವಿಕೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ, ನೀಡಲಾದ ಕೆಲವು ಹಂತಗಳಲ್ಲಿ ನಿಮ್ಮ ದೂರಿನ ಸ್ಥಿತಿಯನ್ನು ಟ್ರ್ಯಾಕ್ ಮಾಡಿ.
- ಈ ಪೋರ್ಟಲ್‌ನ ಹೋಮ್ ಪೇಜಿನ ಟಾಪ್ ಮೆನುವಿನಲ್ಲಿ, 'ದೂರುಗಳು' ಆಯ್ಕೆಗೆ ಸ್ಕ್ರೋಲ್ ಮಾಡಿ.
- ಇದು ಡ್ರಾಪ್-ಡೌನ್ ಮೆನು ತೆರೆಯುತ್ತದೆ; ಲಭ್ಯವಿರುವ ಆಯ್ಕೆಗಳಿಂದ 'ನಿಮ್ಮ ದೂರಿನ ಸ್ಥಿತಿ' ಆಯ್ಕೆಮಾಡಿ.
- ನಂತರ, ಮರುನಿರ್ದೇಶಿತ ಪುಟದಲ್ಲಿ, ಈ ಭೂಮಿ ಇರುವ ಜಿಲ್ಲೆಯ ಹೆಸರನ್ನು ಆಯ್ಕೆಮಾಡಿ ಮತ್ತು ನಿಮ್ಮ ದೂರು ಸಂಖ್ಯೆಯನ್ನು ನಮೂದಿಸಿ.
ಒಮ್ಮೆ ನಮೂದಿಸಿದ ನಂತರ, ಅದು ನಿಮ್ಮ ದೂರಿನ ಸ್ಥಿತಿಯನ್ನು ತಕ್ಷಣವೇ ತೋರಿಸುತ್ತದೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ವಿವಿಧ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ನೀವು ಆಂಧ್ರಪ್ರದೇಶದ ವಿವಿಧ ಭೂ ದಾಖಲೆಗಳನ್ನು ಸಂಬಂಧಿಸಿದ ವಿವರಗಳನ್ನು ಕೂಡ ಅಕ್ಸೆಸ್ ಮಾಡಬಹುದು.
ಆದಾಗ್ಯೂ, ಆಂಧ್ರಪ್ರದೇಶ ಸರ್ಕಾರ ಅಥವಾ ಮೀಭೂಮಿ ಪೋರ್ಟಲ್ ಅಪ್ಲಿಕೇಶನ್ನಿನ ಮೂಲಗಳನ್ನು ಪರಿಶೀಲಿಸಿ ಅಂತಹ ಅಪ್ಲಿಕೇಶನ್‌ಗಳಿಗೆ ಯಾವುದೇ ಸಂಬಂಧ ಅಥವಾ ಸಂಯೋಜನೆಯನ್ನು ಭರಿಸುವುದಿಲ್ಲ. ದೃಢೀಕೃತ AP ಭೂಮಿ ದಾಖಲೆಗಳಿಗಾಗಿ ಮಾತ್ರ ವೆಬ್-ಆಧಾರಿತ ಪೋರ್ಟಲ್ ಅಕ್ಸೆಸ್ ಮಾಡಿ.
ನಿಮ್ಮ ಕನಸಿನ ಮನೆಗೆ ಹತ್ತಿರವಾಗುವುದನ್ನು ಸುಲಭಗೊಳಿಸಲು, ರೂ. 15 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಹೋಮ್ ಲೋನಿಗೆ ಅಪ್ಲೈ ಮಾಡಿ, 30 ವರ್ಷಗಳವರೆಗಿನ ಫ್ಲೆಕ್ಸಿಬಲ್ ಅವಧಿಯೊಂದಿಗೆ ಕಡಿಮೆ ಹೋಮ್ ಲೋನ್ ಬಡ್ಡಿ ದರದಲ್ಲಿ ಅರ್ಹತೆಯ ಆಧಾರದ ಮೇಲೆ ಬಜಾಜ್ ಫಿನ್‌ಸರ್ವ್‌ಗೆ ಅಪ್ಲೈ ಮಾಡಿ. ತಕ್ಷಣ ಅನುಮೋದನೆಯೊಂದಿಗೆ ಕನಿಷ್ಠ ಡಾಕ್ಯುಮೆಂಟೇಶನ್ ಅಗತ್ಯವಿದೆ.