45 ಲಕ್ಷದವರೆಗಿನ ಹೋಮ್ ಲೋನ್ ವಿವರಗಳು

ಬಜಾಜ್ ಫಿನ್‌ಸರ್ವ್‌ನೊಂದಿಗೆ, ಸಾಲಗಾರರು ಗಣನೀಯ ಮೊತ್ತವನ್ನು ಪಡೆಯಬಹುದು, ಉದಾಹರಣೆಗೆ, 45 ಲಕ್ಷದ ಹೋಮ್ ಲೋನ್ ಅಥವಾ ಅದಕ್ಕಿಂತ ಹೆಚ್ಚು, ನಿಮ್ಮ ಎಲ್ಲಾ ಹೋಮ್ ಫೈನಾನ್ಸ್ ಅವಶ್ಯಕತೆಗಳನ್ನು ಪೂರೈಸಲು, ಮನೆ ಖರೀದಿ, ಮನೆ ನಿರ್ಮಾಣ ಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಟ್ರಾನ್ಸ್‌ಫರ್ ಮಾಡುವಾಗಲೂ ಕೂಡ.

ಇದಲ್ಲದೆ, ನೀವು ಪಿಎಂಎವೈ ಸಬ್ಸಿಡಿ, ಟಾಪ್-ಅಪ್ ಲೋನ್, ಫ್ಲೆಕ್ಸಿಬಲ್ ಮರುಪಾವತಿ ಅವಧಿ ಮತ್ತು ಇನ್ನೂ ಹೆಚ್ಚಿನ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. ಈ ಹಣಕಾಸು ಪ್ರಾಡಕ್ಟ್‌ನ ಪ್ರಯೋಜನಗಳನ್ನು ಪಡೆಯಲು, ಹೋಮ್ ಲೋನಿಗೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಮತ್ತು ಅವುಗಳನ್ನು ಶ್ರದ್ಧೆಯಿಂದ ಪೂರೈಸಿ.

45 ಲಕ್ಷದ ಹೋಮ್ ಲೋನಿಗೆ ಅರ್ಹತಾ ಮಾನದಂಡ

ಬಜಾಜ್ ಫಿನ್‌ಸರ್ವ್‌ನಿಂದ 45 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹೋಮ್ ಲೋನಿಗೆ ಅರ್ಹತೆ ಪಡೆಯಲು ಹೋಮ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು, ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ:

ಸಂಬಳದ ವ್ಯಕ್ತಿಗಳಿಗೆ

  • ಅರ್ಜಿದಾರರು 23 ಮತ್ತು 62 ವರ್ಷಗಳ** ನಡುವಿನ ವಯಸ್ಸಿನವರಾಗಿರಬೇಕು
  • ಅವರು ಭಾರತದ ನಿವಾಸಿಯಾಗಿರಬೇಕು
  • ಅರ್ಜಿದಾರರು 3 ವರ್ಷಗಳ ಕೆಲಸದ ಅನುಭವದೊಂದಿಗೆ ಸ್ಥಿರ ಉದ್ಯೋಗವನ್ನು ಹೊಂದಿರಬೇಕು
  • ಒಬ್ಬರು ಕನಿಷ್ಠ ಆದಾಯ ಮತ್ತು ಆಸ್ತಿ ಮೌಲ್ಯದ ಅವಶ್ಯಕತೆಯನ್ನು ಪೂರೈಸಬೇಕು

ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ

  • ಅವರು 25-70 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು**
  • ಭಾರತೀಯ ನಿವಾಸಿಯಾಗಿರಬೇಕು
  • ಅರ್ಜಿದಾರರು ಕನಿಷ್ಠ 5 ವರ್ಷಗಳ ಸ್ಥಿರ ಬಿಸಿನೆಸ್ ಹಿನ್ನೆಲೆಯನ್ನು ಹೊಂದಿರಬೇಕು

ಹೋಮ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸುವುದರ ಜೊತೆಗೆ, ವ್ಯಕ್ತಿಗಳು ಹೋಮ್ ಲೋನಿಗೆ ಬೇಕಾದ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಹೊಂದಿರಬೇಕು. ಡಾಕ್ಯುಮೆಂಟ್‌ಗಳು ಹೀಗಿವೆ-

  • ಕೆವೈಸಿ ಡಾಕ್ಯುಮೆಂಟ್‌ಗಳು (ಗುರುತಿನ ಮತ್ತು ವಿಳಾಸದ ಪುರಾವೆ)
  • ಇತ್ತೀಚಿಗಿನ ಸಂಬಳದ ಸ್ಲಿಪ್‌‌ಗಳು ಅಥವಾ ಫಾರಂ 16
  • ಲಾಭ ಮತ್ತು ನಷ್ಟದ ಸ್ಟೇಟ್ಮೆಂಟ್, ಹಿಂದಿನ 2 ವರ್ಷಗಳ TR ಡಾಕ್ಯುಮೆಂಟ್‌ಗಳು
  • ಕಳೆದ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
  • ಬಿಸಿನೆಸ್ ಅಸ್ತಿತ್ವದ ಪುರಾವೆ

** ಲೋನ್ ಮೆಚ್ಯೂರಿಟಿ ಸಮಯದಲ್ಲಿ ಅಧಿಕ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ.

ರೂ. 45 ಲಕ್ಷದ ಹೋಮ್ ಲೋನ್ ಬಡ್ಡಿ ದರ

45 ಲಕ್ಷದ ಹೋಮ್ ಲೋನ್ ಮೇಲೆ, ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ವೃತ್ತಿಪರ ಅರ್ಜಿದಾರರು ಅಗತ್ಯವಿರುವ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ಅನ್ವಯವಾಗುವ ಹೋಮ್ ಲೋನ್ ಬಡ್ಡಿ ದರ ವರ್ಷಕ್ಕೆ 8.50%* ರಿಂದ ಆರಂಭವಾಗುತ್ತದೆ.

ಬಡ್ಡಿ ದರವು ಒಟ್ಟಾರೆ ಲೋನ್ ವೆಚ್ಚದ ಮೇಲೆ ಪರಿಣಾಮ ಬೀರುವುದರಿಂದ, ಹೋಮ್ ಲೋನ್ ಬಡ್ಡಿ ದರಗಳ ಮೇಲೆ ಟ್ಯಾಬ್ ಇಟ್ಟುಕೊಳ್ಳಬೇಕು ಮತ್ತು ಅದಕ್ಕೆ ಅನುಗುಣವಾಗಿ ಲೋನ್ ಪಡೆಯಬೇಕು.

45 ಲಕ್ಷ ಹೋಮ್ ಲೋನ್ ಇಎಂಐ ವಿವರಗಳು

ರೂ. 45 ಲಕ್ಷದ ಹೋಮ್ ಲೋನ್ ಪಡೆಯುವಾಗ ಒಟ್ಟಾರೆ ಇಎಂಐ ವಿಭಜನೆಯನ್ನು ಅರ್ಥಮಾಡಿಕೊಳ್ಳಲು; ಜನರು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಸಹಾಯ ಪಡೆಯಬಹುದು. ಇದು ಏಕೆಂದರೆ ಈ ಮೊತ್ತದ ಇಎಂಐಗಳು ಅವಧಿ ಮತ್ತು ಬಡ್ಡಿ ದರದ ಆಧಾರದ ಮೇಲೆ ಭಿನ್ನವಾಗಿರಬಹುದು.

ಇದಲ್ಲದೆ, ಆನ್ಲೈನ್ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಈ ನಿರ್ಧಾರಗಳನ್ನು ಬದಲಾಯಿಸಲು ವ್ಯಕ್ತಿಗಳಿಗೆ ಅಪೇಕ್ಷಿತ ಫಲಿತಾಂಶಗಳನ್ನು ತಲುಪಲು ಅನುಮತಿ ನೀಡುತ್ತದೆ. ಅಂತಹ ಆನ್ಲೈನ್ ಕ್ಯಾಲ್ಕುಲೇಟರ್‌ಗಳು ಉಚಿತ ಮತ್ತು ಬಳಸಲು ಸುಲಭ.

45 ಲಕ್ಷದ ಹೋಮ್ ಲೋನಿಗೆ ಸಮಗ್ರ ಹೋಮ್ ಲೋನ್ ಇಎಂಐ ರಚನೆಗಾಗಿ, ಇದನ್ನು ಓದಿ.

45 ಲಕ್ಷದ ಹೋಮ್ ಲೋನಿಗೆ ಇಎಂಐ ಲೆಕ್ಕಾಚಾರ

45 ಲಕ್ಷದ ಹೋಮ್ ಲೋನ್‌ಗೆ ಹೋಮ್ ಲೋನ್ ಇಎಂಐ ತಿಳಿದುಕೊಳ್ಳಲು, ವರ್ಷಕ್ಕೆ 8.50%* ಬಡ್ಡಿ ದರದಲ್ಲಿ ನಿಗದಿಪಡಿಸಲಾದ ಬಡ್ಡಿ ದರದೊಂದಿಗೆ ಈ ಕೆಳಗಿನ ಪಟ್ಟಿಯನ್ನು ನೋಡಿ..

30 ವರ್ಷಗಳಿಗೆ ರೂ. 45 ಲಕ್ಷದ ಹೋಮ್ ಲೋನಿಗೆ ಇಎಂಐ

ಹೋಮ್ ಲೋನ್ ಮೊತ್ತ

ರೂ. 45 ಲಕ್ಷ

ಬಡ್ಡಿ ದರ

ವಾರ್ಷಿಕ 8.50%.

ಅವಧಿ

30 ವರ್ಷಗಳು

EMI

ರೂ. 34,921


20 ವರ್ಷಗಳಿಗೆ ರೂ. 45 ಲಕ್ಷದ ಹೋಮ್ ಲೋನಿಗೆ ಇಎಂಐ

ಹೋಮ್ ಲೋನ್ ಮೊತ್ತ

ರೂ. 45 ಲಕ್ಷ

ಬಡ್ಡಿ ದರ

ವಾರ್ಷಿಕ 8.50%.

ಅವಧಿ

20 ವರ್ಷಗಳು

EMI

ರೂ. 39,337


15 ವರ್ಷಗಳಿಗೆ ರೂ. 45 ಲಕ್ಷದ ಹೋಮ್ ಲೋನಿಗೆ ಇಎಂಐ

ಹೋಮ್ ಲೋನ್ ಮೊತ್ತ

ರೂ. 45 ಲಕ್ಷ

ಬಡ್ಡಿ ದರ

ವಾರ್ಷಿಕ 8.50%.

ಅವಧಿ

15 ವರ್ಷಗಳು

EMI

ರೂ. 44,577


ಮೇಲಿನ ವರ್ಗೀಕರಣದಿಂದ, ಸಾಲಗಾರರು 45 ಲಕ್ಷದ ಹೋಮ್ ಲೋನಿಗೆ, 15 ವರ್ಷಗಳ ಮರುಪಾವತಿ ಅವಧಿಯ ಇಎಂಐಯು ಅದೇ ಮೊತ್ತಕ್ಕೆ 20 ವರ್ಷಗಳವರೆಗಿನ ಇಎಂಐಗಿಂತ ಹೆಚ್ಚಾಗಿರುತ್ತದೆ ಎಂದು ನೋಡಬಹುದು. ಆದ್ದರಿಂದ, ದೀರ್ಘಾವಧಿಯಲ್ಲಿ ಮರುಪಾವತಿ ಹೊರೆಯನ್ನು ತಪ್ಪಿಸಲು ಒಬ್ಬರು ಕಾಲಾವಧಿ ಮತ್ತು ಮೊತ್ತವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು.