ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳ ಕ್ಯಾಲ್ಕುಲೇಟರ್

ಹೋಮ್ ಲೋನ್ ತೆಗೆದುಕೊಳ್ಳುವಾಗ, ಮನೆ ವೆಚ್ಚಕ್ಕಿಂತ ಇನ್ನು ಹೆಚ್ಚಿನ ಇತರ ವೆಚ್ಚಗಳು ಒಳಗೊಂಡಿರುತ್ತವೆ. ನಿಮ್ಮ ಹೊಸ ಮನೆಯ ಮಾಲೀಕತ್ವವನ್ನು ನೋಂದಾಯಿಸುವಾಗ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳು ಪಾವತಿಸಬೇಕಾದ ಹೆಚ್ಚುವರಿ ಶುಲ್ಕಗಳಾಗಿವೆ. ಬಜಾಜ್ ಫಿನ್‌ಸರ್ವ್‌ ಮುದ್ರಾಂಕ ಶುಲ್ಕದ ಕ್ಯಾಲ್ಕುಲೇಟರ್ ಅನ್ನು ಆಸ್ತಿಯ ಮೇಲೆ ಪಾವತಿಸಬೇಕಾದ ಮುದ್ರಾಂಕ ಶುಲ್ಕದ ಮೊತ್ತವನ್ನು ಖಚಿತವಾಗಿ ಲೆಕ್ಕಹಾಕಲು ವಿನ್ಯಾಸಗೊಳಿಸಲಾಗಿದ್ದು, ಇದರಿಂದ ನಿಮಗೆ ನಿಖರವಾಗಿ ಎಷ್ಟು ಹೋಮ್ ಲೋನ್ ಬೇಕಾಗುತ್ತದೆ ಎಂಬುದು ತಿಳಿಯುತ್ತದೆ.

ಸ್ಟ್ಯಾಂಪ್ ಡ್ಯೂಟಿ ಎಂದರೇನು?

ಸ್ಟ್ಯಾಂಪ್ ಡ್ಯೂಟಿ ಎಂಬುದು ಹೊಸ ಆಸ್ತಿಯನ್ನು ಖರೀದಿಸುವಾಗ ರಾಜ್ಯ ಸರ್ಕಾರವು ವಿಧಿಸುವ ಶುಲ್ಕವಾಗಿದೆ. ಈ ಶುಲ್ಕವನ್ನು, ನಿಮ್ಮ ಹೆಸರಿನಲ್ಲಿ ಆಸ್ತಿಯ ನೋಂದಣಿಯನ್ನು ಮೌಲ್ಯೀಕರಿಸಲು ಮತ್ತು ನಿಮ್ಮ ಆಸ್ತಿ ಮಾಲೀಕತ್ವದ ಡಾಕ್ಯುಮೆಂಟ್ ಅನ್ನು ಕಾನೂನುಬದ್ಧಗೊಳಿಸಲು ಬಳಸಲಾಗುತ್ತದೆ. ಆಸ್ತಿ ನೋಂದಣಿ ಡಾಕ್ಯುಮೆಂಟ್‌ ಜೊತೆಗೆ ಸ್ಟ್ಯಾಂಪ್ ಡ್ಯೂಟಿ ಪಾವತಿಸದಿದ್ದರೆ, ನಿಮ್ಮನ್ನು ಆ ಆಸ್ತಿಯ ಕಾನೂನುಬದ್ಧ ಮಾಲೀಕರೆಂದು ಪರಿಗಣಿಸಲಾಗುವುದಿಲ್ಲ.

ಭಾರತದಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನು ಹೇಗೆ ಲೆಕ್ಕ ಮಾಡಲಾಗುತ್ತದೆ?

ಮುದ್ರಾಂಕ ಶುಲ್ಕದ ವೆಚ್ಚವು ಸಾಮಾನ್ಯವಾಗಿ ಆಸ್ತಿಯ ಮಾರುಕಟ್ಟೆ ಮೌಲ್ಯದ 5-7% ಆಗಿರುತ್ತದೆ. ನೋಂದಣಿ ಶುಲ್ಕಗಳು ಆಸ್ತಿಯ ಮಾರುಕಟ್ಟೆ ಮೌಲ್ಯದ 1% ಆಗಿರುತ್ತವೆ. ಒಂದು ಅರ್ಥದಲ್ಲಿ, ಈ ಶುಲ್ಕಗಳು ಲಕ್ಷಗಟ್ಟಲೆ ಆಗಬಹುದು. ಮನೆ ಖರೀದಿಸಿ ನಿಮ್ಮ ಹೆಸರಿನಲ್ಲಿ ಆಸ್ತಿಯನ್ನು ನೋಂದಾಯಿಸುವಾಗ ಹಣದ ಕೊರತೆಯನ್ನು ತಪ್ಪಿಸಲು, ನೀವು ಹೋಮ್ ಲೋನ್‌ಗೆ ಅಪ್ಲೈ ಮಾಡುವಾಗ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ಕೂಡ ಒದಗಿಸುವಂತೆ ಕೋರಿಕೆ ಪತ್ರವನ್ನು ಸಲ್ಲಿಸಿ.

ನೀವು ಪಾವತಿಸಬೇಕಾದ ಸ್ಟ್ಯಾಂಪ್ ಡ್ಯೂಟಿಯ ನಿಖರವಾದ ಮೊತ್ತವನ್ನು ಕಂಡುಹಿಡಿಯುವ ಅನೇಕ ಅಂಶಗಳಿವೆ. ಅವುಗಳೆಂದರೆ:

  • ಆಸ್ತಿಯ ಮಾರುಕಟ್ಟೆ ಮೌಲ್ಯ
  • ಮಹಡಿಗಳ ನಂಬರನ್ನೂ ಸೇರಿ, ಆಸ್ತಿಯ ವಿಧ
  • ಆಸ್ತಿಯ ಉದ್ದೇಶಿತ ಬಳಕೆ, ವಸತಿ ಅಥವಾ ವಾಣಿಜ್ಯ ಆಗಿರಬಹುದು
  • ಆಸ್ತಿಯ ಸ್ಥಳ
  • ಆಸ್ತಿಯ ಮಾಲೀಕರ ವಯಸ್ಸು ಮತ್ತು ಲಿಂಗ

ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು ಹೋಮ್ ಲೋನ್‌ನಲ್ಲಿ ಸೇರಿಕೊಂಡಿವೆಯೇ?

ನಿಯಮದ ಪ್ರಕಾರ, ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು ಸಾಲದಾತರು ಮಂಜೂರು ಮಾಡಿದ ಹೋಮ್ ಲೋನ್ ಮೊತ್ತದಲ್ಲಿ ಸೇರಿರುವುದಿಲ್ಲ. ಇದು ಖರೀದಿದಾರರು ಭರಿಸಬೇಕಾದ ಪಾಕೆಟ್-ಹೊರಗಿನ ಖರ್ಚಾಗಿರುತ್ತದೆ.

ವಿವಿಧ ನಗರಗಳಲ್ಲಿನ ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳು

ರಾಜ್ಯಗಳು

ಸ್ಟ್ಯಾಂಪ್ ಡ್ಯೂಟಿ ದರಗಳು*

ಆಂಧ್ರ ಪ್ರದೇಶ

5%

ಛತ್ತೀಸಘಡ

ಪುರುಷರು: 7%

ಮಹಿಳೆಯರು: 6%

ಗುಜರಾತ್

4.9%

ಹರ್ಯಾಣ

ಪುರುಷರು - 7%

ಮಹಿಳೆಯರು – 5%

ಕರ್ನಾಟಕ

5% (₹35 ಲಕ್ಷಕ್ಕಿಂತ ಹೆಚ್ಚಿನ ಪರಿಗಣನೆ)

3% (₹21-35 ಲಕ್ಷದವರೆಗೆ ಪರಿಗಣನೆ)

2% (₹20 ಲಕ್ಷಕ್ಕಿಂತ ಕಡಿಮೆ ಪರಿಗಣನೆ)

ಕೇರಳ

8%

ಮಧ್ಯ ಪ್ರದೇಶ

7.50 %

ಮಹಾರಾಷ್ಟ್ರ

6%

ಒಡಿಶಾ

ಪುರುಷ: 5%

ಮಹಿಳೆ: 4%

ಪಂಜಾಬ್

7% (ಪುರುಷ)

5% (ಮಹಿಳೆ)

ರಾಜಸ್ಥಾನ

ಪುರುಷ: 6%

ಮಹಿಳೆ: 5%

ತಮಿಳುನಾಡು

7%

ತೆಲಂಗಾಣ

5%

ಉತ್ತರ ಪ್ರದೇಶ

7%

ಉತ್ತರಾಖಂಡ್

5%

ಪಶ್ಚಿಮ ಬಂಗಾಳ

₹40 ಲಕ್ಷದವರೆಗೆ - 7%

₹40 ಲಕ್ಷಕ್ಕಿಂತ ಮೇಲ್ಪಟ್ಟು - 8%


* ಸ್ಟ್ಯಾಂಪ್ ಡ್ಯೂಟಿಯ ಜೊತೆಗೆ, ಅನ್ವಯವಾಗುವ ನೋಂದಣಿ ಶುಲ್ಕಗಳನ್ನೂ ಪಾವತಿಸಬೇಕು

ಹಕ್ಕುತ್ಯಾಗ

ಈ ದರಗಳು ಸೂಚನಾತ್ಮಕವಾಗಿದ್ದು, ಕಾಲಕಾಲಕ್ಕೆ ಅನ್ವಯವಾಗುವ ಕಾನೂನುಗಳು ಮತ್ತು ಸರ್ಕಾರಿ ಮಾರ್ಗಸೂಚಿಗಳ ಆಧಾರದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತವೆ.. ವೆಬ್‌ಸೈಟ್‌ನಲ್ಲಿ ಒಳಗೊಂಡಿರುವ ಮಾಹಿತಿಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಮೊದಲು ಗ್ರಾಹಕರು ಸ್ವತಂತ್ರ ಕಾನೂನು ಸಲಹೆ ಪಡೆಯುವುದು ಸೂಕ್ತ ಹಾಗೂ ಇದು ಬಳಕೆದಾರರ ಏಕೈಕ ವಿವೇಚನೆಗೆ ಬಿಟ್ಟ ಜವಾಬ್ದಾರಿ ಮತ್ತು ನಿರ್ಧಾರವಾಗಿರುತ್ತದೆ.. ಯಾವುದೇ ಸಂದರ್ಭದಲ್ಲಿ ಬಿಎಫ್ಎಲ್ ಅಥವಾ ಬಜಾಜ್ ಗ್ರೂಪ್ ಅಥವಾ ಅದರ ಏಜೆಂಟ್‌ಗಳು ಅಥವಾ ಯಾವುದೇ ಇತರ ಪಾರ್ಟಿ ಈ ವೆಬ್‌ಸೈಟನ್ನು ರಚಿಸುವುದು, ಉತ್ಪಾದಿಸುವುದು ಅಥವಾ ಹಂಚಿಕೆಯಲ್ಲಿ ಒಳಗೊಂಡು ಯಾವುದೇ ನೇರ, ಪರೋಕ್ಷ, ಶಿಕ್ಷಾತ್ಮಕ, ಪ್ರಾಸಂಗಿಕ, ವಿಶೇಷ, ಪರಿಣಾಮಕಾರಿ ಹಾನಿಗಳಿಗೆ ಕಾರಣವಾದರೆ (ಕಳೆದುಹೋದ ಆದಾಯ ಅಥವಾ ಲಾಭ, ಬಿಸಿನೆಸ್ ನಷ್ಟ ಅಥವಾ ಡೇಟಾ ನಷ್ಟ ಸೇರಿದಂತೆ) ಅಥವಾ ಮೇಲೆ ತಿಳಿಸಿದ ಮಾಹಿತಿಯ ಮೇಲೆ ಬಳಕೆದಾರರ ರಿಲಾಯನ್ಸ್‌ಗೆ ಸಂಬಂಧಿಸಿದ ಯಾವುದೇ ಹಾನಿಗಳಿಗೆ ಹೊಣೆಯಾಗಿರುವುದಿಲ್ಲ.

ಸ್ಟ್ಯಾಂಪ್ ಡ್ಯೂಟಿಯನ್ನು ತೆರಿಗೆ ವಿನಾಯಿತಿಯಾಗಿ ಕ್ಲೈಮ್ ಮಾಡಬಹುದೇ?

ಹೌದು, ಸ್ಟ್ಯಾಂಪ್ ಡ್ಯೂಟಿಯನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತವಾಗಿ, ಗರಿಷ್ಠ ಮಿತಿ ರೂ. 1,50,000 ವರೆಗೆ ಕ್ಲೈಮ್ ಮಾಡಬಹುದು.

ಸ್ಟ್ಯಾಂಪ್ ಡ್ಯೂಟಿ ರಿಫಂಡ್ ಆಗುತ್ತದೆಯೇ?

ಇಲ್ಲ, ಸ್ಟ್ಯಾಂಪ್ ಡ್ಯೂಟಿ ರಿಫಂಡ್ ಆಗುವುದಿಲ್ಲ.

ಸ್ಟ್ಯಾಂಪ್ ಡ್ಯೂಟಿ GST ಅನ್ನು ಒಳಗೊಳ್ಳುವುದೇ?

ಇದುವರೆಗೆ ಸ್ಟ್ಯಾಂಪ್ ಡ್ಯೂಟಿ ಮತ್ತು GST, ಆಸ್ತಿಯ ಮಾರಾಟದ ಮೇಲೆ ವಿಧಿಸಲಾಗುವ ಬೇರೆಬೇರೆ ಶುಲ್ಕಗಳಾಗಿವೆ, ಆದ್ದರಿಂದ ಅವು ಪರಸ್ಪರ ಪ್ರಭಾವ ಬೀರುವುದಿಲ್ಲ.

ಸ್ಟ್ಯಾಂಪ್ ಡ್ಯೂಟಿ ಪಾವತಿಸುವುದು ಹೇಗೆ?

ನೀವು ಈ ಕೆಳಗಿನ ವಿಧಾನಗಳಲ್ಲಿ ಒಂದರ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಆಫ್‌ಲೈನ್‌ನಲ್ಲಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಬಹುದು:

  • ಭೌತಿಕ ಸ್ಟ್ಯಾಂಪ್ ಪೇಪರ್: ಇದು ಸ್ಟ್ಯಾಂಪ್ ಡ್ಯೂಟಿ ಪಾವತಿಸುವ ಅತ್ಯಂತ ಸಾಮಾನ್ಯ ವಿಧಾನವಾಗಿದೆ. ಸ್ಟ್ಯಾಂಪ್ ಪೇಪರನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಬಹುದು. ಖರೀದಿಸಿದ ನಂತರ, ಆಸ್ತಿ ನೋಂದಣಿ ಅಥವಾ ಒಪ್ಪಂದದ ವಿವರಗಳನ್ನು ಈ ಪೇಪರ್‌ನಲ್ಲಿ ಬರೆಯಲಾಗುತ್ತದೆ. ಆದಾಗ್ಯೂ, ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳು ಹೆಚ್ಚಾಗಿದ್ದರೆ, ನೀವು ಹಲವಾರು ಸ್ಟ್ಯಾಂಪ್ ಪೇಪರ್‌ಗಳನ್ನು ಖರೀದಿಸಬೇಕಾದ ಸಂದರ್ಭದಲ್ಲಿ ಈ ವಿಧಾನವು ಅನುಕೂಲಕರವಲ್ಲ
  • ಫ್ರ್ಯಾಂಕಿಂಗ್: ಈ ವಿಧಾನದಲ್ಲಿ, ನೀವು ಅಧಿಕೃತ ಫ್ರ್ಯಾಂಕಿಂಗ್ ಏಜೆಂಟ್‌ ಬಳಿಗೆ ಹೋಗಬೇಕು. ಅವರು ನಿಮ್ಮ ಆಸ್ತಿ ಡಾಕ್ಯುಮೆಂಟ್‌ಗಳಿಗೆ ಸ್ಟ್ಯಾಂಪ್ ಅಪ್ಲೈ ಮಾಡಿ, ಸ್ಟ್ಯಾಂಪ್ ಡ್ಯೂಟಿ ಪಾವತಿಸಲಾಗಿದೆ ಎಂದು ಸೂಚಿಸುತ್ತಾರೆ. ಈ ವಿಧಾನವನ್ನು ಬಳಸಲು ಸಾಮಾನ್ಯವಾಗಿ ಒಂದಷ್ಟು ಕನಿಷ್ಠ ಮೊತ್ತ ಅಗತ್ಯವಿದೆ. ಹೆಚ್ಚುವರಿಯಾಗಿ, ಆ ಏಜೆಂಟ್ ನಿಮಗೆ ಫ್ರ್ಯಾಂಕಿಂಗ್ ಶುಲ್ಕ ವಿಧಿಸುತ್ತಾರೆ, ಅದನ್ನು ನೀವು ಪಾವತಿಸಬೇಕಾದ ಒಟ್ಟಾರೆ ಸ್ಟ್ಯಾಂಪ್ ಡ್ಯೂಟಿಯಿಂದ ಕಡಿತಗೊಳಿಸಲಾಗುತ್ತದೆ. ಬಹುತೇಕ ಬ್ಯಾಂಕುಗಳು ಮನೆ ಖರೀದಿದಾರರಿಗೆ ಫ್ರ್ಯಾಂಕಿಂಗ್ ಏಜೆಂಟ್ ಸೇವೆಗಳನ್ನು ಒದಗಿಸುತ್ತವೆ
  • ಇ-ಸ್ಟ್ಯಾಂಪಿಂಗ್: ಇ-ಸ್ಟ್ಯಾಂಪಿಂಗ್ ಎನ್ನುವುದು ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳನ್ನು ಪಾವತಿಸಲು ಅತ್ಯಂತ ಅನುಕೂಲಕರ ಮಾರ್ಗವಾಗಿದೆ, ಏಕೆಂದರೆ ನೀವು ಎಸ್‌ಹೆಚ್‌ಸಿಐಎಲ್‌ ವೆಬ್‌ಸೈಟ್ (ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ) ಮೂಲಕ ಇದನ್ನು ಆನ್‌ಲೈನ್‌ನಲ್ಲೇ ಮಾಡಬಹುದು. ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಆಸ್ತಿಯು ಇರುವ ರಾಜ್ಯವನ್ನು ಆಯ್ಕೆಮಾಡಿ, ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ, ಅಗತ್ಯ ಮೊತ್ತದ ಸಮೇತ ಅದನ್ನು ಸಂಗ್ರಹ ಕೇಂದ್ರಕ್ಕೆ ಸಲ್ಲಿಸಿದರಾಯ್ತು. ನೀವು ಮೊತ್ತವನ್ನು ಪಾವತಿಸಿದ ನಂತರ, ನಿಮಗೆ ವಿಶಿಷ್ಟ ಗುರುತಿನ ಸಂಖ್ಯೆ (ಯುಐಎನ್‌) ಇರುವ ಇ-ಸ್ಟ್ಯಾಂಪ್ ಪ್ರಮಾಣಪತ್ರ ನೀಡಲಾಗುತ್ತದೆ.

ಪ್ರಮುಖ ನಗರಗಳಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು:

ಮುಂಬೈಯಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು

ದೆಹಲಿಯಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು

ಚೆನ್ನೈಯಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು

ಬೆಂಗಳೂರಿನಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ಆಸ್ತಿಯ ನೋಂದಣಿ ಶುಲ್ಕಗಳು

ಕೋಲ್ಕತ್ತಾದಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ಆಸ್ತಿಯ ನೋಂದಣಿ ಶುಲ್ಕಗಳು

ಥಾಣೆಯಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ಆಸ್ತಿ ನೋಂದಣಿ ಶುಲ್ಕಗಳು

ಅಹಮದಾಬಾದಿನಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ಆಸ್ತಿ ನೋಂದಣಿ ಶುಲ್ಕಗಳು