ಆಸ್ತಿ ಮೇಲಿನ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು

ನಮ್ಮ ಆಸ್ತಿ ಮೇಲಿನ ಲೋನ್‌ಗೆ ಅರ್ಜಿ ಹಾಕಲು ಅಗತ್ಯವಿರುವ ಮಾನದಂಡಗಳನ್ನು ತಿಳಿದುಕೊಳ್ಳಲು ಇಲ್ಲಿ ಓದಿ.

ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಕೆಳಗೆ ನಮೂದಿಸಿದ ಮಾನದಂಡಗಳನ್ನು ಪೂರೈಸುವವರೆಗೆ ಯಾರಾದರೂ ನಮ್ಮ ಆಸ್ತಿ ಮೇಲಿನ ಲೋನ್‌ಗೆ ಅರ್ಜಿ ಹಾಕಬಹುದು.

ಅರ್ಹತಾ ಮಾನದಂಡ

  • ರಾಷ್ಟ್ರೀಯತೆ: ನಾವು ಕಾರ್ಯನಿರ್ವಹಿಸುವ ನಗರದಲ್ಲಿ ಆಸ್ತಿ ಹೊಂದಿರುವ ಹಾಗೂ ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕರಾಗಿರಬೇಕು.
  • ವಯಸ್ಸು: ಅರ್ಜಿದಾರರ ಕನಿಷ್ಠ ವಯಸ್ಸು 25 ವರ್ಷಗಳಾಗಿರಬೇಕು* (ಹಣಕಾಸು ಅಲ್ಲದ ಆಸ್ತಿಯ ಮಾಲೀಕರಿಗೆ 18 ವರ್ಷಗಳು)
    * ವೈಯಕ್ತಿಕ ಅರ್ಜಿದಾರ/ಸಹ-ಅರ್ಜಿದಾರರ ಲೋನ್ ಅಪ್ಲಿಕೇಶನ್‌ ಸಂದರ್ಭದಲ್ಲಿ ವಯಸ್ಸು.
    ಅರ್ಜಿದಾರರ ಗರಿಷ್ಠ ವಯಸ್ಸು 70 ವರ್ಷಗಳಾಗಿರಬೇಕು* (ಹಣಕಾಸು ಅಲ್ಲದ ಆಸ್ತಿ ಮಾಲೀಕರಿಗೆ 80 ವರ್ಷಗಳು)
    * ಲೋನ್ ಮೆಚ್ಯೂರಿಟಿಯಲ್ಲಿ ವೈಯಕ್ತಿಕ ಅರ್ಜಿದಾರ/ಸಹ-ಅರ್ಜಿದಾರರ ವಯಸ್ಸು.
  • ಸಿಬಿಲ್ ಸ್ಕೋರ್: ಆಸ್ತಿ ಮೇಲಿನ ಅನುಮೋದಿತ ಲೋನ್ ಪಡೆಯಲು 700 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಸೂಕ್ತವಾಗಿದೆ.
  • ಉದ್ಯೋಗ: ಸಂಬಳ ಪಡೆಯುವವರು, ಡಾಕ್ಟರ್‌ಗಳು ಮತ್ತು ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಮುಂತಾದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಗತ್ಯವಿರುವ ಡಾಕ್ಯುಮೆಂಟ್‌ಗಳು:

  • ಗುರುತಿನ ಪುರಾವೆ/ನಿವಾಸ
  • ಆದಾಯದ ಪುರಾವೆ
  • ಪ್ರಾಪರ್ಟಿ-ಸಂಬಂಧಿತ ಡಾಕ್ಯುಮೆಂಟ್‌ಗಳು
  • ಬಿಸಿನೆಸ್ ಪುರಾವೆ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ), ಮತ್ತು
  • ಕಳೆದ 6 ತಿಂಗಳ ಅಕೌಂಟ್ ಸ್ಟೇಟ್ಮೆಂಟ್‌ಗಳು

ಗಮನಿಸಿ: ಇದು ನಿಮ್ಮ ನಿಜವಾದ ಲೋನ್ ಅಪ್ಲಿಕೇಶನ್ ಆಧಾರದ ಮೇಲೆ ಬದಲಾಗಬಹುದಾದ ಸೂಚನಾತ್ಮಕ ಪಟ್ಟಿಯಾಗಿದೆ.

ಹೆಚ್ಚಿನ ವಿವರಗಳು

ನೀವು ಈ ಅರ್ಹತಾ ವಯೋಮಿತಿಯೊಳಗೆ ಬಂದರೆ, ಆಸ್ತಿ ಮೇಲಿನ ಲೋನ್‌ಗೆ ಅರ್ಜಿ ಹಾಕಬಹುದು. ಆಸ್ತಿ ಮೇಲಿನ ಲೋನ್‌ಗೆ ಅರ್ಹರಾಗಲು, ನೀವು 700 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರಬೇಕು.

ನಾವು ಭಾರತದ ಬಹುತೇಕ ನಗರಗಳಲ್ಲಿ ಕೈಗೆಟಕುವ ಬಡ್ಡಿ ದರದಲ್ಲಿ ಆಸ್ತಿ ಮೇಲಿನ ಲೋನ್ ಒದಗಿಸುತ್ತೇವೆ. ನೀವು ವೈದ್ಯರು, ಸ್ವಯಂ ಉದ್ಯೋಗಿ ವೃತ್ತಿಪರರು ಅಥವಾ ಸಂಬಳ ಪಡೆಯುವ ವೃತ್ತಿಪರರಾಗಿದ್ದರೆ ನೀವು ನಮ್ಮೊಂದಿಗೆ ಆಸ್ತಿ ಮೇಲಿನ ಲೋನ್‌ಗೆ ಸುಲಭವಾಗಿ ಅರ್ಜಿ ಹಾಕಬಹುದು.

ಅಗತ್ಯವಿರುವ ಆದಾಯದ ಪ್ರೊಫೈಲ್‌ಗೆ ಸರಿಹೊಂದುವ ಹಾಗೂ 25 ರಿಂದ 70 ವರ್ಷಗಳ ನಡುವಿನ ಯಾರಾದರೂ ಅರ್ಜಿ ಸಲ್ಲಿಸಬಹುದು. ನೀವು ಒದಗಿಸಿದ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿದ ನಂತರ, ನಿಮ್ಮ ಅಂತಿಮ ಲೋನ್ ಮೊತ್ತವನ್ನು ಅನುಮೋದಿಸಲಾಗುತ್ತದೆ.

ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.

ಆಸ್ತಿ ಮೇಲಿನ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಆಸ್ತಿ ಮೇಲಿನ ಲೋನ್‌ಗೆ ಅರ್ಜಿ ಹಾಕಲು ಹಂತವಾರು ಮಾರ್ಗದರ್ಶಿ

  1. ಈ ಪುಟದಲ್ಲಿನ 'ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ ಪಿನ್ ಕೋಡ್ ನಮೂದಿಸಿ, ಮುಂದುವರೆಯಿರಿ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಪೂರ್ತಿ ಹೆಸರು ಮತ್ತು ಮೊಬೈಲ್ ನಂಬರ್‌ನಂತಹ ಮೂಲಭೂತ ವಿವರಗಳನ್ನು ಒದಗಿಸಿ.
  4. ಈಗ ನೀವು ಅಪ್ಲೈ ಮಾಡಲು ಬಯಸುವ ಲೋನ್ ವಿಧ, ನಿಮ್ಮ ನಿವ್ವಳ ಮಾಸಿಕ ಆದಾಯ, ನಿಮ್ಮ ಪ್ರದೇಶದ ಪಿನ್ ಕೋಡ್ ಮತ್ತು ಅಗತ್ಯವಿರುವ ಲೋನ್ ಮೊತ್ತವನ್ನು ಆಯ್ಕೆಮಾಡಿ.
  5. ನಿಮ್ಮ ಫೋನ್ ನಂಬರನ್ನು ಪರಿಶೀಲಿಸಲು ಒಟಿಪಿ ಜನರೇಟ್ ಮಾಡಿ ಮತ್ತು ಸಲ್ಲಿಸಿ.
  6. ನಿಮ್ಮ ಆಸ್ತಿಯ ಸ್ಥಳ, ಪ್ರಸ್ತುತ ಇಎಂಐ ಮೊತ್ತ/ ಮಾಸಿಕ ಜವಾಬ್ದಾರಿ ಮತ್ತು ಪ್ಯಾನ್ ನಂಬರ್‌ನಂತಹ ಹೆಚ್ಚುವರಿ ವಿವರಗಳನ್ನು ನಮೂದಿಸಿ.
  7. 'ಸಲ್ಲಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ.

ಅಷ್ಟೇ! ನಿಮ್ಮ ಲೋನ್ ಕೋರಿಕೆ ಸಲ್ಲಿಸಲಾಗಿದೆ. ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸಿ, ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.