ಹೋಮ್ ಲೋನ್‌ಗೆ ಅರ್ಹತೆಯನ್ನು ಲೆಕ್ಕ ಹಾಕಿ

ಹೋಮ್ ಲೋನ್ ಅರ್ಹತೆ ಕ್ಯಾಲ್ಕುಲೇಟರ್ ಬಳಸುವುದು ಹೋಮ್ ಲೋನ್‌ಗೆ ಅರ್ಹತೆಯನ್ನು ನಿರ್ಧರಿಸುವ ಸುಲಭ ಮಾರ್ಗಗಳಲ್ಲಿ ಒಂದಾಗಿದೆ. ಸಾಲ ನೀಡುವ ಸಂಸ್ಥೆಗಳು ಮೂಲಭೂತ ಮಾಹಿತಿಯ ಜೊತೆಗೆ, ಮಾಸಿಕ ಸಂಬಳ, ಲೋನ್ ಮರುಪಾವತಿ ಅವಧಿ, ಮಾಸಿಕ ಆದಾಯದ ಇತರ ಮೂಲ, ಇತರ ಯಾವುದೇ ಹೊಣೆಗಾರಿಕೆ ಮತ್ತು ಪಾವತಿಸಬೇಕಾದ ಇಎಂಐಗಳಂತಹ ಹಲವಾರು ಅಂಶಗಳನ್ನು ಪರಿಗಣಿಸುತ್ತವೆ. ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ನೊಂದಿಗೆ, ಯಾವುದೇ ವ್ಯಕ್ತಿಯು ಈ ಕ್ಷೇತ್ರಗಳಿಗೆ ತ್ವರಿತವಾಗಿ ಮೌಲ್ಯಗಳು ಅಥವಾ ಇನ್ಪುಟ್‌ಗಳನ್ನು ಸೆಟ್ ಮಾಡಬಹುದು ಮತ್ತು ಯಾವುದೇ ತೊಂದರೆಯಿಲ್ಲದೆ ತಮ್ಮ ಅರ್ಹತೆಯನ್ನು ಪರಿಶೀಲಿಸಬಹುದು. ಈ ಆನ್ಲೈನ್ ಟೂಲ್ ಖರೀದಿದಾರರಿಗೆ ಮಾಹಿತಿಯುಕ್ತ ಆಯ್ಕೆಯನ್ನು ಮಾಡಲು ಮತ್ತು ಲೋನ್ ಅಪ್ಲಿಕೇಶನ್ ತಿರಸ್ಕಾರ ತಪ್ಪಿಸಲು ಸಹಾಯ ಮಾಡುವ ಮೂಲಕ ಅವರ ಕ್ರೆಡಿಟ್ ನಡವಳಿಕೆ ಮತ್ತು ಸಿಬಿಲ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಆಗುವುದನ್ನು ತಪ್ಪಿಸುತ್ತದೆ.

ಅಲ್ಲದೆ, ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಮೂಲಕ ನೀವು ಅನೇಕ ಸಾಲದಾತರಲ್ಲಿ ಲೋನಿಗೆ ಅಪ್ಲೈ ಮಾಡುವುದನ್ನು ತಪ್ಪಿಸಬಹುದು.

ಹೋಮ್ ಲೋನ್ ಪಡೆಯಲು ಅರ್ಹತೆ ಏನು?

Every borrower needs to meet the eligibility criteria required to qualify for a housing loan. This ensures that he/ she can repay the loan amount effortlessly without defaulting. Failing to meet the eligibility criteria may lead to the rejection of the loan application, leaving a negative mark on the individual’s credit profile. So, ensure to complete the processing faster and smoothly by fulfilling the required eligibility criteria.

ಹೋಮ್ ಲೋನ್ ಅರ್ಹತೆಯ ಮಾನದಂಡ

ಹೋಮ್ ಲೋನಿಗೆ ಅರ್ಹರಾಗಲು, ನಿಮ್ಮ ಸಂಬಳ, ವಯಸ್ಸು, ಕ್ರೆಡಿಟ್ ಸ್ಕೋರ್, ಲೊಕೇಶನ್, ಕೆಲಸದ ಅನುಭವ ಮತ್ತು ಮಾಸಿಕ ಹಣಕಾಸಿನ ಬದ್ಧತೆಗಳನ್ನು ಒಳಗೊಂಡಂತೆ ಹಲವಾರು ಅಂಶಗಳನ್ನು ಪರಿಗಣಿಸಲಾಗುತ್ತದೆ. ಹೋಮ್ ಲೋನ್ ಅನ್ನು ಸುಲಭವಾಗಿ ಪಡೆದುಕೊಳ್ಳುವಂತೆ ಮಾಡಲು, ಬಜಾಜ್ ಫಿನ್‌‌ಸರ್ವ್ ಸರಳವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಪರಿಚಯಿಸಿದೆ.. ಕೆಳಗೆ ವಿವರದೊಂದಿಗೆ ಚಾರ್ಟ್ ನೀಡಲಾಗಿದೆ.

ಹೋಮ್ ಲೋನ್‌ಗಾಗಿ ಅರ್ಹತೆಯ ಮಾನದಂಡ

ಸಂಬಳದ ವ್ಯಕ್ತಿಗಳ ವಯೋಮಿತಿ

23 ವರ್ಷಗಳಿಂದ 65 ವರ್ಷಗಳು

ಸ್ವ-ಉದ್ಯೋಗಿ ವ್ಯಕ್ತಿಗಳ ವಯೋಮಿತಿ

23 ವರ್ಷಗಳಿಂದ 75 ವರ್ಷಗಳು

ಹೋಮ್ ಲೋನಿಗೆ ಅಗತ್ಯವಿರುವ ಕ್ರೆಡಿಟ್ ಸ್ಕೋರ್

725 ಅಥವಾ ಅದಕ್ಕಿಂತ ಹೆಚ್ಚು

ಸಂಬಳದ ಅರ್ಜಿದಾರರ ಕೆಲಸದ ಅನುಭವ

ಕನಿಷ್ಠ 3 ವರ್ಷಗಳು

ಬಿಸಿನೆಸ್‌ನ ಅವಧಿ

ಕನಿಷ್ಠ 5 ವರ್ಷಗಳು

ಕನಿಷ್ಠ ಸಂಬಳ

ರೂ. 25,000*

ರಾಷ್ಟ್ರೀಯತೆ

ಭಾರತೀಯ, ದೇಶದ ಒಳಗೇ ವಾಸಿಸುತ್ತಿದ್ದೇನೆ


** ಲೋನ್ ಮೆಚ್ಯೂರಿಟಿಯ ಸಮಯದಲ್ಲಿ ಪರಿಗಣಿಸಲಾದ ಗರಿಷ್ಠ ವಯಸ್ಸು.

ಅರ್ಜಿದಾರರು ತಮ್ಮ ಅರ್ಹತೆಯ ಆಧಾರದ ಮೇಲೆ ರೂ. 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹೋಮ್ ಲೋನ್ ಪಡೆಯಬಹುದು. ಅಪ್ಲೈ ಮಾಡುವ ಮೊದಲು ಹೋಮ್ ಲೋನ್ ಅರ್ಹತಾ ಮಾನದಂಡ ಮತ್ತು ಹೋಮ್ ಲೋನಿಗೆ ಬೇಕಾದ ಡಾಕ್ಯುಮೆಂಟ್‌ಗಳನ್ನು ತಿಳಿಯಿರಿ.

ಸಂಬಳದ ಆಧಾರದ ಮೇಲೆ ಹೋಮ್ ಲೋನ್ ಅರ್ಹತೆ

ನಿವ್ವಳ ಸಂಬಳವು (ಕೈಸೇರುವ ಸಂಬಳ) ನೀವು ಎಷ್ಟು ಲೋನನ್ನು ಪಡೆಯಬಹುದು ಎಂದು ನಿರ್ಧರಿಸುವ ಅರ್ಹತಾ ಮಾನದಂಡಗಳಲ್ಲಿ ಒಂದಾಗಿ. ನಿಮ್ಮ ಮರುಪಾವತಿ ಸಾಮರ್ಥ್ಯಗಳನ್ನು ಅಂದಾಜು ಮಾಡಲು ಸಹಾಯ ಮಾಡುವುದರಿಂದ ನಿಮ್ಮ ಸಂಬಳವು ನಿರ್ಣಾಯಕವಾಗಿದೆ.

ನೀವು ಅರ್ಹತೆಯ ಲೋನ್ ಮೊತ್ತವನ್ನು ನಿಮ್ಮ ಆದಾಯವು ನಿರ್ಧರಿಸುತ್ತದೆ. ಸಾಲದಾತರು ನಿಮ್ಮ ಮನೆಗೆ ಕೊಂಡು ಹೋಗುವ ಸಂಬಳ, ಕೆಲವು ಸಾಮಾನ್ಯ ಕಡಿತಗಳಾದ ಗ್ರಾಚ್ಯುಯಿಟಿ, PF, ESI, ಇತ್ಯಾದಿಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ತೆಗೆದುಕೊಳ್ಳುವ ಸಂಬಳವು ನೀವು ಪಾವತಿಸಲು ಸಾಧ್ಯವಾಗುವ EMI ಮೊತ್ತವನ್ನು ನಿರ್ಧರಿಸುತ್ತದೆ ಮತ್ತು ಹೀಗೆ ನೀವು ಪಡೆಯಬಹುದಾದ ಒಟ್ಟು ಮೊತ್ತವನ್ನು ನಿರ್ಧರಿಸುತ್ತದೆ.

How to calculate home loan eligibility

ಉದಾಹರಣೆಗೆ, ನಿಮ್ಮ ಕೈಗೆ ಸಿಗುವ ಸಂಬಳ ರೂ. 25,000 ಆಗಿದ್ದರೆ, ನೀವು ರೂ. 40 ಲಕ್ಷದ ಮನೆ ಖರೀದಿಸಲು ರೂ. 18.64 ಲಕ್ಷಗಳಷ್ಟು ಲೋನ್ ಪಡೆಯಬಹುದು (ನೀವು ಯಾವುದೇ ಅಸ್ತಿತ್ವದಲ್ಲಿರುವ ಹಣಕಾಸಿನ ಜವಾಬ್ದಾರಿಗಳನ್ನು ಹೊಂದಿಲ್ಲದಿದ್ದರೆ) ಆದರೆ ನಿಮ್ಮ ಕೈಗೆ ಬರುವ ಸಂಬಳ ರೂ. 50,000 ಆಗಿದ್ದರೆ, ನೀವು ಅದೇ ಆಸ್ತಿಗೆ ರೂ. 37.28 ಲಕ್ಷದ ಲೋನ್ ಮೊತ್ತವನ್ನು ಪಡೆಯಬಹುದು. ನಂತರ, ನಿಮ್ಮ ಕೈಗೆ ದೊರಕುವ ಸಂಬಳ ರೂ. 75,000 ಆಗಿದ್ದರೆ ನೀವು ನಿಮ್ಮ ಅರ್ಹತೆಯನ್ನು ರೂ. 55.93 ಲಕ್ಷದವರೆಗಿನ ಲೋನ್ ಮೊತ್ತಕ್ಕೆ ಹೆಚ್ಚಿಸಬಹುದು.

ನಿವ್ವಳ ಮಾಸಿಕ ಆದಾಯ (ರೂ.)

ಲೋನ್ ಮೊತ್ತ (ರೂ.)

25,000

18.64 ಲಕ್ಷಗಳು

50,000

37.28 ಲಕ್ಷಗಳು

75,000

55.93 ಲಕ್ಷಗಳು


ವಯಸ್ಸಿನ ಆಧಾರವಾಗಿ ಹೋಮ್ ಲೋನ್ ಅರ್ಹತೆ

ಲೋನ್ ಅವಧಿಯ ವಿಷಯಕ್ಕೆ ಬಂದಾಗ ವಯಸ್ಸು ಇನ್ನೊಂದು ನಿರ್ಧರಿತ ಅಂಶವಾಗಿದೆ. ನೀವು ಪಡೆಯಬಹುದಾದ ಗರಿಷ್ಠ ಕಾಲಾವಧಿ 30 ವರ್ಷಗಳು.

ನೀವು ಕಡಿಮೆ ವಯಸ್ಸಿನವರಾಗಿದ್ದರೆ ನೀವು ದೀರ್ಘ ಮರುಪಾವತಿ ಅವಧಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಹೆಚ್ಚಿನ ಆದಾಯವನ್ನು ಹೊಂದಿದ್ದರೆ ನೀವು ಹೆಚ್ಚಿನ ಮೌಲ್ಯದ ಹೋಮ್ ಲೋನನ್ನು ಕೂಡ ಪಡೆಯಬಹುದು.

ಹೋಮ್ ಲೋನಿಗೆ ಅಪ್ಲೈ ಮಾಡಲು ಸಂಬಳ ಪಡೆಯುವ ಅರ್ಜಿದಾರರು 23 ಮತ್ತು 62** ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ಸ್ವಯಂ ಉದ್ಯೋಗಿ ಅರ್ಜಿದಾರರು ಲೋನ್ ಪಡೆಯಲು 25 ಮತ್ತು 70** ವರ್ಷಗಳ ವಯಸ್ಸಿನ ಒಳಗಿರಬೇಕು.

**ಲೋನ್ ಮೆಚ್ಯೂರಿಟಿಯ ಸಮಯದಲ್ಲಿ ಪರಿಗಣಿಸಲಾದ ಗರಿಷ್ಠ ವಯಸ್ಸು.

ವ್ಯಕ್ತಿಗಳು ತಮ್ಮ ವಯಸ್ಸಿನ ಆಧಾರದ ಮೇಲೆ ಗರಿಷ್ಠ ಕಾಲಾವಧಿಗೆ ಅರ್ಹರಾಗಿರುತ್ತಾರೆ ಎಂದು ಈ ಕೆಳಗಿನ ಟೇಬಲ್ ತೋರಿಸುತ್ತದೆ:

ವಯಸ್ಸು

ಸಂಬಳದ ಅರ್ಜಿದಾರರಿಗೆ ಗರಿಷ್ಠ ಕಾಲಾವಧಿ

ಸ್ವ-ಉದ್ಯೋಗಿ ಅರ್ಜಿದಾರರಿಗೆ ಗರಿಷ್ಠ ಕಾಲಾವಧಿ

25 ವರ್ಷಗಳು

30 ವರ್ಷಗಳು

30 ವರ್ಷಗಳು

30 ವರ್ಷಗಳು

30 ವರ್ಷಗಳು

30 ವರ್ಷಗಳು

35 ವರ್ಷಗಳು

30 ವರ್ಷಗಳು

30 ವರ್ಷಗಳು

40 ವರ್ಷಗಳು

30 ವರ್ಷಗಳು

30 ವರ್ಷಗಳು

45 ವರ್ಷಗಳು

25 ವರ್ಷಗಳು

25 ವರ್ಷಗಳು

45 ವರ್ಷಗಳು

20 ವರ್ಷಗಳು

20 ವರ್ಷಗಳು


ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ?

ವ್ಯಕ್ತಿಗಳು ತಮ್ಮ ಆದ್ಯತೆಯ ಸಾಲ ನೀಡುವ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಹೋಮ್ ಲೋನ್ ಅರ್ಹತಾ ಮಾನದಂಡಗಳನ್ನು ಸುಲಭವಾಗಿ ಪರಿಶೀಲಿಸಬಹುದು. ಹೆಚ್ಚಿನ ಪ್ರಮುಖ ಅವಶ್ಯಕತೆಗಳು ಸಾಮಾನ್ಯವಾಗಿ ಒಂದೇ ಆಗಿದ್ದರೂ, ಕೆಲವು ಅರ್ಹತಾ ಮಾನದಂಡಗಳು ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರಬಹುದು. ಈ ಅರ್ಹತಾ ಮಾನದಂಡಗಳು ಮೂಲತಃ ಸಾಲಗಾರರ ಕ್ರೆಡಿಟ್ ಅರ್ಹತೆ ಮತ್ತು ಹಿಂದಿನ ಮರುಪಾವತಿ ನಡವಳಿಕೆಯ ಆಧಾರದ ಮೇಲೆ ಸಾಲದಾತರು ನಿರ್ಣಯಿಸಬಹುದಾದ ಮಾನದಂಡಗಳಾಗಿವೆ. ಇದು ಕ್ರೆಡಿಟ್ ಇತಿಹಾಸ, ವಯಸ್ಸು, ಕ್ರೆಡಿಟ್ ಸ್ಕೋರ್, ಎಫ್ಒಐಆರ್ ಮತ್ತು ಹಣಕಾಸಿನ ಸ್ಥಿತಿಯೊಂದಿಗೆ ವ್ಯಕ್ತಿಯ ಹಣಕಾಸಿನ ಜವಾಬ್ದಾರಿಗಳಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.

ಆನ್ಲೈನ್ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸುವುದು ಲೋನ್ ಅರ್ಹತೆಯನ್ನು ನಿರ್ಧರಿಸಲು ಇರುವ ಇನ್ನೊಂದು ಸುಲಭ ಮತ್ತು ತ್ವರಿತ ಮಾರ್ಗವಾಗಿದೆ. ಸಾಧ್ಯವಾದಷ್ಟು ಅನುಕೂಲಕರ ಮತ್ತು ಕೈಗೆಟಕುವ ವಿಧಾನಗಳಲ್ಲಿ ಲೋನ್ ಮೊತ್ತದ ಅವಶ್ಯಕತೆಗಳನ್ನು ಪೂರೈಸಬಹುದಾದ ಪರ್ಸನಲೈಸ್ಡ್ ಕೋಟ್ ಅನ್ನು ಕಂಡುಹಿಡಿಯಲು ಈ ಕ್ಯಾಲ್ಕುಲೇಟರನ್ನು ಬಳಸಬಹುದು.

ಹೋಮ್ ಲೋನ್ ಅರ್ಹತೆಯನ್ನು ಹೇಗೆ ಲೆಕ್ಕ ಹಾಕುತ್ತದೆ?

ಅರ್ಹ ಲೋನ್ ಮೊತ್ತವನ್ನು ಲೆಕ್ಕಹಾಕಲು ಅರ್ಹತಾ ಕ್ಯಾಲ್ಕುಲೇಟರ್ ಗಣಿತ ಸೂತ್ರದಂತೆ ಕಾರ್ಯನಿರ್ವಹಿಸುತ್ತದೆ.. ಇದು ಲೋನ್ ಕಾಲಾವಧಿ, ತೆರಿಗೆಗಳ ನಂತರ ಮಾಸಿಕ ಆದಾಯ, ಯಾವುದೇ ಪ್ರಸ್ತುತ ಲೋನ್ ಅಥವಾ ಲೋನ್ ಮರುಪಾವತಿಗಳು ಮತ್ತು ಯಾವುದೇ ಹೆಚ್ಚುವರಿ ಆದಾಯದಂತಹ ಅಂಶಗಳನ್ನು ಪರಿಗಣಿಸುತ್ತದೆ.

ಹೋಮ್ ಲೋನ್‌ಗೆ ಅರ್ಹತಾ ಕ್ಯಾಲ್ಕುಲೇಟರ್ ಎಂದರೇನು?

ಆನ್ಲೈನ್ ಕ್ಯಾಲ್ಕುಲೇಟರ್ ಬಳಸುವ ಮೂಲಕ ಹೋಮ್ ಲೋನ್ ಅರ್ಹತೆಯನ್ನು ಪರೀಕ್ಷಿಸುವ ಸುಲಭದ ಮಾರ್ಗ.. ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೀವು ಪಡೆಯಲು ಅರ್ಹರಾಗಿರುವ ಮೊತ್ತವನ್ನು ತಕ್ಷಣವೇ ಲೆಕ್ಕ ಹಾಕುತ್ತದೆ. ಇದು ಉತ್ತಮ ಹಣಕಾಸಿನ ಯೋಜನೆಯಲ್ಲಿ ಮತ್ತು ಅಪ್ಲಿಕೇಶನ್ ತಿರಸ್ಕಾರದ ಅವಕಾಶಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.. ಈ ಟೂಲ್ ಮ್ಯಾನುವಲ್ ಆಗಿ ಲೆಕ್ಕ ಹಾಕುವ ತೊಂದರೆಯನ್ನು ಕೂಡ ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ.

ಬಜಾಜ್ ಫಿನ್‌ಸರ್ವ್‌ ಜೊತೆಗೆ, ನೀವು ಎಲ್ಲಿಂದಲಾದರೂ ಬೇಕಾದರೂ ಈ ಆನ್ಲೈನ್ ಕ್ಯಾಲ್ಕುಲೇಟರನ್ನು ಅಕ್ಸೆಸ್ ಮಾಡಿ ಮತ್ತು ಇದನ್ನು ಉಚಿತವಾಗಿ ಬಳಸಿ.

ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸುವುದು ಹೇಗೆ?

ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸಲು ಮತ್ತು ಹೋಮ್ ಲೋನ್ ಪಡೆಯುವ ಅವಕಾಶಗಳನ್ನು ಸುಧಾರಿಸಲು ಕೆಲವು ಮಾರ್ಗಗಳು ಇಲ್ಲಿವೆ.

 • ಸಿಬಿಲ್ ಸ್ಕೋರ್ ಸುಧಾರಿಸಿ: ಸಾಲ ನೀಡುವ ಸಂಸ್ಥೆಗಳು 750 ಕ್ಕಿಂತ ಹೆಚ್ಚಿನ ಸೂಕ್ತ ಸಿಬಿಲ್ ಸ್ಕೋರ್ ಹೊಂದಿರುವ ವ್ಯಕ್ತಿಗಳಿಗೆ ಆಕರ್ಷಕ ಬಡ್ಡಿ ದರಗಳಲ್ಲಿ ಹೋಮ್ ಲೋನ್‌ಗಳನ್ನು ಒದಗಿಸುತ್ತವೆ. ಕ್ರೆಡಿಟ್ ಹಿಸ್ಟರಿ, ವಯಸ್ಸು, ಕ್ರೆಡಿಟ್ ಸ್ಕೋರ್, ಸಾಲ, ಆದಾಯಕ್ಕೆ ಹೋಲಿಸಿದರೆ ನಿಗದಿತ ಜವಾಬ್ದಾರಿಗಳು ಮತ್ತು ವ್ಯಕ್ತಿಯ ಹಣಕಾಸಿನ ಸ್ಥಿತಿಯಂತಹ ಅನೇಕ ವಿಷಯಗಳು ಅದರ ಮೇಲೆ ಪರಿಣಾಮ ಬೀರುತ್ತವೆ..
 • ಅಸ್ತಿತ್ವದಲ್ಲಿರುವ ಲೋನ್‌ಗಳನ್ನು ಕ್ಲಿಯರ್ ಮಾಡಿ: ಸಾಲದಾತರು ವ್ಯಕ್ತಿಯ ಸಾಲದಿಂದ-ಆದಾಯದ ಅನುಪಾತವನ್ನು ಅಳೆಯುವ ಮೂಲಕ ಲೋನ್ ಮರುಪಾವತಿ ಸಾಮರ್ಥ್ಯವನ್ನು ಕೂಡ ಮೌಲ್ಯಮಾಪನ ಮಾಡುತ್ತಾರೆ. ಆದ್ದರಿಂದ, ಹೊಸ ಲೋನಿಗೆ ಅಪ್ಲೈ ಮಾಡುವ ಮೊದಲು ಅಸ್ತಿತ್ವದಲ್ಲಿರುವ ಲೋನ್‌ಗಳನ್ನು ಕ್ಲಿಯರ್ ಮಾಡುವುದರಿಂದ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸಬಹುದು.
 • ಜಂಟಿ ಹೋಮ್ ಲೋನನ್ನು ಆಯ್ಕೆಮಾಡಿ: ಒಬ್ಬ ವ್ಯಕ್ತಿಯು ಸಹ-ಅರ್ಜಿದಾರ ಅಥವಾ ಸಂಗಾತಿಯೊಂದಿಗೆ ಹೋಮ್ ಲೋನಿಗೆ ಅಪ್ಲೈ ಮಾಡಿದರೆ, ಕ್ರೆಡಿಟ್ ಪ್ರಾಡಕ್ಟಿಗೆ ಅವರ ಅರ್ಹತೆಯು ಹೆಚ್ಚಾಗುತ್ತದೆ.

ಹೋಮ್ ಲೋನ್ ಅರ್ಹತಾ ಮಾನದಂಡಗಳ ಬಗ್ಗೆ ಆಗಾಗ್ಗೆ ಕೇಳುವ ಪ್ರಶ್ನೆಗಳು

ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸುವುದು ಹೇಗೆ?

ಅರ್ಹತಾ ಕ್ಯಾಲ್ಕುಲೇಟರ್ ಬಳಸುವುದು ತುಂಬಾ ಸುಲಭ ಮತ್ತು ಸರಳವಾಗಿದೆ. ನಿಮ್ಮ ಹುಟ್ಟಿದ ದಿನಾಂಕ ಮತ್ತು ವಾಸಿಸುತ್ತಿರುವ ಪಟ್ಟಣ ಒಳಗೊಂಡಂತೆ ಬೇಕಾದ ಎಲ್ಲಾ ವಿವರಗಳನ್ನು ನಮೂದಿಸಿ,.

 • DD/MM/YYYY ಫಾರ್ಮ್ಯಾಟ್‌ನಲ್ಲಿ ಹುಟ್ಟಿದ ದಿನಾಂಕವನ್ನು ನಮೂದಿಸಿ
 • ನೀವು ವಾಸಿಸುತ್ತಿರುವ ಸ್ಥಳವನ್ನು ಒದಗಿಸಿ
 • ನೇರವಾಗಿ ಮೊತ್ತವನ್ನು ನಮೂದಿಸುವ ಮೂಲಕ ಅಥವಾ ಒದಗಿಸಲಾದ ಬಾರನ್ನು ಹೊಂದಾಣಿಕೆ ಮಾಡುವ ಮೂಲಕ ನಿವ್ವಳ ಮಾಸಿಕ ಸಂಬಳವನ್ನು ಸೆಟ್ ಮಾಡಿ
 • ನಿಮ್ಮ ಹಣಕಾಸಿನ ಯೋಜನೆಗಳು ಮತ್ತು ಮರುಪಾವತಿ ಸಾಮರ್ಥ್ಯದ ಪ್ರಕಾರ ನಿಮ್ಮ ಆದ್ಯತೆಯ ಕಾಲಾವಧಿಯನ್ನು 30 ವರ್ಷಗಳವರೆಗೆ ಹೊಂದಿಸಿ
 • ಪ್ರತಿ ತಿಂಗಳಿಗೆ ಯಾವುದಾದರೂ ಇತರ ಆದಾಯಗಳಿದ್ದರೆ ವಿವರಗಳನ್ನು ನಮೂದಿಸಿ. ನೀವು ಇತರ ಆದಾಯ ಮೂಲಗಳನ್ನು ಹೊಂದಿಲ್ಲದಿದ್ದರೆ ಈ ಹಂತವನ್ನು ಸ್ಕಿಪ್ ಮಾಡಿ
 • ನಿಮ್ಮ ಅಸ್ತಿತ್ವದಲ್ಲಿರುವ ಸಾಲಗಳಿಗೆ ನೀವು ಪ್ರಸ್ತುತ ಪಾವತಿಸುತ್ತಿರುವ ಒಟ್ಟು ಇಎಂಐ ಮೊತ್ತವನ್ನು ಒದಗಿಸಿ. ಯಾವುದೂ ಇಲ್ಲದಿದ್ದರೆ ತಪ್ಪಿಸಿ

ಸರಿಯಾದ ಫಲಿತಾಂಶಗಳನ್ನು ಲೆಕ್ಕ ಹಾಕಲು ನಿಖರ ಮಾಹಿತಿ ಒದಗಿಸಲು ಖಾತ್ರಿಪಡಿಸಿಕೊಳ್ಳಿ. ಎಲ್ಲಾ ನಮೂದುಗಳನ್ನು ಇನ್ನೊಮ್ಮೆ ಪರಿಶೀಲಿಸಿ ಮತ್ತು 'ನಿಮ್ಮ ಅರ್ಹತೆ ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ. ಬಜಾಜ್ ಫಿನ್‌ಸರ್ವ್‌ ಕಡೆಯಿಂದ ತ್ವರಿತವಾಗಿ ನೀವು ಪಡೆಯಬಹುದಾದ ಗರಿಷ್ಠ ಲೋನ್ ಮೊತ್ತವನ್ನು ತಕ್ಷಣ ತೋರಿಸುತ್ತದೆ.

ಸಾಧ್ಯವಾದ ಇತರ ಕಾಲಾವಧಿಗಳಿಗೆ ಬಾರ್ ಅನ್ನು ಸರಿಹೊಂದಿಸಿ ಮತ್ತು ನೀವು ಪಡೆಯಬಹುದಾದ ಮೊತ್ತವನ್ನು ಪರಿಶೀಲಿಸಿ. ಒಂದು ಬಾರಿ ನೀವು ಗರಿಷ್ಠ ಅರ್ಹತಾ ಮೊತ್ತವನ್ನು ಪಡೆದುಕೊಂಡ ನಂತರ, ನಿಮ್ಮ ಅವಶ್ಯಕತೆಗೆ ತಕ್ಕಂತೆ ಹೋಮ್ ಲೋನಿಗೆ ಅಪ್ಲೈ ಮಾಡಿ.

ಯಾವ ವಿಚಾರಗಳು ಹೋಮ್ ಲೋನ್ ಅರ್ಹತೆಯನ್ನು ನಿರ್ಧರಿಸುತ್ತದೆ?

ಅನೇಕ ಅಂಶಗಳು ಲೋನ್ ಪಡೆಯುವವರ ಹೋಮ್ ಲೋನ್ ಅರ್ಹತೆಯನ್ನು ನಿರ್ಣಯಿಸುತ್ತದೆ. ಅವುಗಳಲ್ಲಿ ಅಗತ್ಯವಾದ ಕೆಲವೊಂದನ್ನು ಈ ಕೆಳಗೆ ಕೊಡಲಾಗಿದೆ:

 • ವಯಸ್ಸಿನ ಮಿತಿ: 25 ರಿಂದ 70 ವರ್ಷದ ವಯಸ್ಸಿನ ಒಳಗೆ ಬರುವ ಸ್ವಯಂ ಉದ್ಯೋಗಿ ಅರ್ಜಿದಾರರು ಲೋನಿಗೆ ಅಪ್ಲೈ ಮಾಡಲು ಅರ್ಹರಾಗಿರುತ್ತಾರೆ. ಸಂಬಳ ಪಡೆಯುವ ವ್ಯಕ್ತಿಗಳು ಅರ್ಹರಾಗಲು 23 ಮತ್ತು 62 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು
 • ಸಿಬಿಲ್ ಸ್ಕೋರ್: ಸಿಬಿಲ್ ಸ್ಕೋರ್ 3-ಅಂಕಿಯ ಮೌಲ್ಯವಾಗಿದ್ದು, ಇದು ವ್ಯಕ್ತಿಯ ಕ್ರೆಡಿಟ್ ಅರ್ಹತೆಯನ್ನು ಸೂಚಿಸುತ್ತದೆ. 300 ರಿಂದ 900 ರ, ಶ್ರೇಣಿಯಲ್ಲಿ 750 ಅನ್ನು ಲೋನ್‌ಗೆ ಅರ್ಹವಾಗಲು ಬೇಕಾದ ಕನಿಷ್ಠ ರೇಟಿಂಗ್ ಎಂದು ಪರಿಗಣಿಸಲಾಗಿದೆ. ಆಕರ್ಷಕ ಫೀಚರ್ ಮತ್ತು ಉತ್ತಮ ಬಡ್ಡಿ ದರಗಳನ್ನು ಪಡೆಯಲು ಆರೋಗ್ಯಕರ ಸಿಬಿಲ್ ಸ್ಕೋರ್ ಪ್ರಯೋಜನಕಾರಿಯಾಗಬಹುದು
 • ಉದ್ಯೋಗ: ಅರ್ಜಿದಾರರು ಸ್ವಯಂ ಉದ್ಯೋಗಿಯಾಗಿರಬೇಕು (ಬಿಸಿನೆಸ್‌ಮನ್, ಡಾಕ್ಟರ್, ಚಾರ್ಟರ್ಡ್ ಅಕೌಂಟೆಂಟ್ ಮತ್ತು ಇತರರು) ಅಥವಾ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ವಲಯದ ಕಂಪನಿ ಅಥವಾ ಎಂಎನ್‌ಸಿಯೊಂದಿಗೆ ಸಂಬಳ ಪಡೆಯುವವರಾಗಿರಬೇಕು
 • ಕನಿಷ್ಠ ಗಳಿಕೆಗಳು: ನಿವಾಸದ ಸ್ಥಳದ ಆಧಾರದ ಮೇಲೆ ಬಜಾಜ್ ಫಿನ್‌ಸರ್ವ್ ಪ್ರತಿ ತಿಂಗಳಿಗೆ ನಿವ್ವಳ ಆದಾಯದ ಶ್ರೇಣಿಯನ್ನು ಒದಗಿಸುತ್ತದೆ. ಅರ್ಜಿದಾರರು ಅನ್ವಯವಾಗುವಂತೆ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಬೇಕು
 • ಎಲ್‌ಟಿವಿ ಮತ್ತು ಆಸ್ತಿ ಮೌಲ್ಯ: ಆಸ್ತಿಯ ಮಾರುಕಟ್ಟೆ ಮೌಲ್ಯವು ಹೆಚ್ಚಾಗಿದ್ದರೆ ಹೆಚ್ಚಿನ ಲೋನ್ ಮೊತ್ತವನ್ನು ಪಡೆಯುವ ಅವಕಾಶ ಹೆಚ್ಚಾಗಿರುತ್ತದೆ. ಒಂದು ವೇಳೆ ನೀವು 20% ಡೌನ್ ಪೇಮೆಂಟ್ ಮಾಡಿದರೆ, ನೀವು ಹೋಮ್ ಲೋನನ್ನು ಶೀಘ್ರವಾಗಿ ಪಡೆಯಬಹುದು

ಅರ್ಹ ಅರ್ಜಿದಾರರು ಭಾಗಶಃ-ಮುಂಗಡ ಪಾವತಿ, ಫೋರ್‌ಕ್ಲೋಸರ್, ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ ಇತ್ಯಾದಿ ಫೀಚರ್‌ಗಳೊಂದಿಗೆ ಸ್ಪರ್ಧಾತ್ಮಕ ಹೋಮ್ ಲೋನ್ ಬಡ್ಡಿ ದರಗಳನ್ನು ಆನಂದಿಸಬಹುದು.

ಹೋಮ್ ಲೋನ್ ಪಡೆಯಲು ಕನಿಷ್ಠ ಸಂಬಳ ಎಷ್ಟು?

ಬಜಾಜ್ ಫಿನ್‌ಸರ್ವ್‌ ಹೋಮ್ ಲೋನಿಗೆ ಅರ್ಹತೆ ಪಡೆಯಲು ನಿಮ್ಮ ಟೇಕ್ ಹೋಮ್ ಸಂಬಳ ತಿಂಗಳಿಗೆ 25,000 ಆಗಿರಬೇಕು.

ನನ್ನ ಸಂಬಳಕ್ಕಾಗಿ ನಾನು ಎಷ್ಟು ಹೋಮ್ ಲೋನನ್ನು ಪಡೆಯಬಹುದು?

ಹೋಮ್ ಲೋನ್ ಮೊತ್ತವನ್ನು ನಿಮ್ಮ ಕ್ರೆಡಿಟ್ ಸ್ಕೋರ್, ಆದಾಯ, ಕೆಲಸದ ಇತಿಹಾಸ, ವಯಸ್ಸು, ಸ್ಥಳ ಮತ್ತು ಅಸ್ತಿತ್ವದಲ್ಲಿರುವ ಹಣಕಾಸಿನ ಬದ್ಧತೆಗಳಂತಹ ಅಂಶಗಳಿಂದ ನಿರ್ಧರಿಸಲಾಗುತ್ತದೆ. ನಿಮ್ಮ ಸಂಬಳದ ಆಧಾರದ ಮೇಲೆ ಹೋಮ್ ಲೋನ್ ಮೊತ್ತವನ್ನು ಲೆಕ್ಕ ಹಾಕಲು ನೀವು ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದು.

ಆದಾಯವು ಲೋನ್ ಅರ್ಹತೆಯ ಮೇಲೆ ಪರಿಣಾಮ ಬೀರುತ್ತದೆಯೇ?

ನಿಮ್ಮ ನಿವ್ವಳ ಮಾಸಿಕ ಆದಾಯ (ಎನ್ಎಂಐ) ನಿಮ್ಮ ಲೋನನ್ನು ಅನುಮೋದಿಸುವ ಮತ್ತು ತಿರಸ್ಕರಿಸುವ ವಿಷಯದಲ್ಲಿ ಸಾಲದಾತರಿಗೆ ನಿರ್ಧಾರ ಕೈಗೊಳ್ಳಲು ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಲೋನಿಗೆ ಅರ್ಹತೆ ಪಡೆಯಲು ನೀವು ಕನಿಷ್ಠ ನಿವ್ವಳ ಮಾಸಿಕ ಆದಾಯ ಗಳಿಸಬೇಕಾಗಿದ್ದರೂ ಕೂಡ, ಅದಕ್ಕಿಂತ ಹೆಚ್ಚಿನ ಆದಾಯವಿದ್ದರೂ ಕೆಲವೊಮ್ಮೆ ನಿಮ್ಮ ಲೋನ್ ಅಪ್ಲಿಕೇಶನನ್ನು ತಿರಸ್ಕರಿಸಬಹುದು. ಒಂದು ವೇಳೆ ನೀವು ಹೆಚ್ಚಿನ ಲೋನ್ ಮೊತ್ತವನ್ನು ಬಯಸಿದರೆ, ಗಳಿಸುವ ಮತ್ತು ನಿಮ್ಮ ಮಾಸಿಕ ಆದಾಯವನ್ನು ಸೇರಿಸುವ ಸಹ-ಅರ್ಜಿದಾರರನ್ನು ನೀವು ಸೇರಿಸಬಹುದು. ಹೋಮ್ ಲೋನಿಗೆ ನಿಮ್ಮ ಅರ್ಹತೆಯನ್ನು ಸುಲಭವಾಗಿ ನಿರ್ಧರಿಸಲು ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

25000 ಸಂಬಳದ ಮೇಲೆ ನಾನು ಎಷ್ಟು ಹೋಮ್ ಲೋನನ್ನು ಪಡೆಯಬಹುದು?

Considering your age is 25, with no other monthly income & obligations - you are eligible for a home loan up to 19,87,150 for tenor of 25 years on your monthly 25,000 salary.

35000 ಸಂಬಳದ ಮೇಲೆ ನಾನು ಎಷ್ಟು ಹೋಮ್ ಲೋನನ್ನು ಪಡೆಯಬಹುದು?

Considering your age is 25, with no other monthly income & obligations - you are eligible for a home loan up to 27,82,011 for tenor of 25 years on your monthly 35,000 salary.

60,000 ಸಂಬಳದಲ್ಲಿ ನಾನು ಎಷ್ಟು ಹೋಮ್ ಲೋನನ್ನು ಪಡೆಯಬಹುದು?

Considering your age is 25, with no other monthly income & obligations - you are eligible for a home loan up to 47,69,161 for tenor of 25 years on your monthly 60,000 salary.

ಇನ್ನಷ್ಟು ಓದಿರಿ ಕಡಿಮೆ ಓದಿ