ಹೋಮ್ ಲೋನ್ EMI ಪಾವತಿ

  1. ಹೋಮ್
  2. >
  3. ಹೋಮ್ ಲೋನ್‌
  4. >
  5. ಬಡ್ಡಿ ದರ ಎಂದರೇನು

ಹೋಮ್ ಲೋನ್‌ ಬಡ್ಡಿ ದರ ಎಷ್ಟು?

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಭಾರತದಲ್ಲಿ ಹೋಮ್ ಲೋನ್ ಬಡ್ಡಿ ದರ

ನಿಮ್ಮ ಹೋಮ್ ಲೋನಿನ ಅಸಲು ಮೊತ್ತದ ಮೇಲಿನ ಬಡ್ಡಿ ದರವು ಅದನ್ನು ಪಡೆಯುವ-ಸಾಮರ್ಥ್ಯವನ್ನು ಸೂಚಿಸುವ ಪ್ರಾಥಮಿಕ ಅಂಶವಾಗಿದೆ. ನೀವು ನಿಮ್ಮ ಹೋಮ್ ಲೋನನ್ನು ಮರುಪಾವತಿಸುವಾಗ, ಪ್ರತಿಯೊಂದು EMI, ಅಸಲು ಮತ್ತು ಬಡ್ಡಿಯೆಡೆಗಿನ ಪಾವತಿಯನ್ನು ಒಳಗೊಳ್ಳುತ್ತದೆ. ಹಾಗಾಗಿ, ಸ್ಪರ್ಧಾತ್ಮಕ ಹೋಮ್ ಲೋನ್ ಬಡ್ಡಿ ದರಗಳ ಲೋನನ್ನು ಪಡೆಯುವುದರಿಂದ ನಿಮ್ಮ ಹೋಮ್ ಲೋನಿನ ಖರ್ಚು-ಉಳಿತಾಯವಾಗುತ್ತದೆ.

ಹೋಮ್ ಲೋನ್ ಬಡ್ಡಿ ದರ ಎಂದರೇನು?

ಬಡ್ಡಿ ದರವೆಂದರೆ ಲೋನ್ ತೆಗೆದುಕೊಳ್ಳುವ ಮೊತ್ತದ ವೆಚ್ಚವಾಗಿದೆ. ಅದನ್ನು ನೀವು ಲೋನ್ ಆಗಿ ತೆಗೆದುಕೊಳ್ಳುವ ಒಟ್ಟು ಮೊತ್ತದ ಮೇಲೆ ವಾರ್ಷಿಕ ಆಧಾರದಲ್ಲಿ ವಿಧಿಸಲಾಗುತ್ತದೆ. ಬಡ್ಡಿ ದರಗಳಲ್ಲಿ ಫಿಕ್ಸೆಡ್ ಮತ್ತು ಫ್ಲೋಟಿಂಗ್ ಎಂಬ ಎರಡು ವಿಧಗಳಿವೆ ಎಂಬುದನ್ನು ತಿಳಿದುಕೊಳ್ಳುವುದು ಅತಿಮುಖ್ಯ. ಪಿಕ್ಸೆಡ್ ಬಡ್ಡಿ ದರವು ನಿಮ್ಮ ಹೋಮ್ ಲೋನ್‌ನ ಅವಧಿಯಾದ್ಯಂತ ಸ್ಥಿರವಾಗಿ ಉಳಿದಿರುತ್ತದೆ. ಫ್ಲೋಟಿಂಗ್ ಬಡ್ಡಿ ದರವು ಕಾಲಾನುಕಾಲಕ್ಕೆ ಬದಲಾಗುತ್ತದೆ. ಅಂದರೆ ಬಡ್ಡಿ ದರದಲ್ಲಿ ಏರಿಕೆಯಾದರೆ, ನಿಮ್ಮ ಲೋನ್‌ನ ಬಡ್ಡಿ ದರವೂ ಸಹ ಏರಿಕೆಯಾಗುತ್ತದೆ. ಆದರೆ ಬಡ್ಡಿ ದರದಲ್ಲಿ ಇಳಿಕೆಯಾದರೆ, ನೀವು ಈ ಪ್ರಯೋಜನವನ್ನು ಕಡಿಮೆ EMI ಗಳ ರೂಪದಲ್ಲಿ ಪಡೆಯುತ್ತೀರಿ. ಪ್ರತಿಯೊಂದು ಅದರದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದ್ದರೂ, ನಿಮ್ಮ ಪರಿಸ್ಥಿತಿಗೆ ಉತ್ತಮವಾಗಿ ಯಾವುದು ಸರಿಹೊಂದುತ್ತದೆ ಎಂಬ ಆಧಾರದಲ್ಲಿ ನೀವು ಆಯ್ಕೆ ಮಾಡುವುದು ಮುಖ್ಯ.

ಹೋಮ್ ಲೋನ್ ಬಡ್ಡಿ ದರಗಳ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು?

ಹೋಮ್ ಲೋನ್‌ನ ಪ್ರಸ್ತುತದ ಬಡ್ಡಿ ದರದ ಮೇಲೆ ಅನೇಕ ಅಂಶಗಳು ಪರಿಣಾಮ ಬೀರುತ್ತವೆ, ಅವುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

1. ರೆಪೊ ರೇಟ್: ರೆಪೊ ರೇಟ್ ಎಂದರೆ ಬ್ಯಾಂಕ್‌ಗಳಿಗೆ RBI ಹಣ ನೀಡುವ ದರವಾಗಿದೆ. ರೆಪೊ ರೇಟ್ ಇಳಿಕೆಯಾದಲ್ಲಿ, ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚು ಹಣವು ಸರ್ಕ್ಯುಲೇಶನ್‌ಗೆ ಬರುತ್ತದೆ. ಅದರಿಂದಾಗಿ ನಿಮ್ಮ ಲೋನ್ ಮೇಲಿನ ಬಡ್ಡಿ ದರವೂ ಸಹ ಇಳಿಕೆಯಾಗುತ್ತದೆ. ಅದೇ ರೀತಿ, ರೆಪೊ ರೇಟ್ ಏರಿಕೆಯಾದಾಗ, ಬಡ್ಡಿ ದರವೂ ಸಹ ಅದಕ್ಕೆ ತಕ್ಕಂತೆ ಹೆಚ್ಚಾಗುತ್ತದೆ.

2. ಲೋನ್‌ಗಳಿಗಿರುವ ಬೇಡಿಕೆ: ಬಡ್ಡಿ ದರಗಳು ಬೇಡಿಕೆ ಮತ್ತು ಪೂರೈಕೆಯನ್ನೂ ಅವಲಂಬಿಸಿರುತ್ತವೆ. ಲೋನ್‌ಗಳಿಗೆ ಹೆಚ್ಚಿನ ಬೇಡಿಕೆಯಿದ್ದರೆ, ಬ್ಯಾಂಕ್‌ಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ಲೋನ್ ನೀಡಲು ಕಡಿಮೆ ಫಂಡ್‍ಗಳನ್ನು ಹೊಂದಿರುತ್ತವೆ. ಅದರಿಂದಾಗಿ ಬಡ್ಡಿ ದರವು ಹೆಚ್ಚಾಗಿರುತ್ತದೆ.

3. ಕ್ಯಾಶ್ ರಿಸರ್ವ್ ರೇಶಿಯೊ: ಇದು RBI ಜೊತೆಗೆ ಬ್ಯಾಂಕ್‌ಗಳು ಹೊಂದಿರಬೇಕಾದ ಹಣದ ಮೊತ್ತವಾಗಿದೆ. CRR ಏರಿಕೆಯಾದರೆ, ಬ್ಯಾಂಕ್‌ಗಳು ಲೋನ್‌ಗಳ ರೂಪದಲ್ಲಿ ಲೋನ್ ನೀಡಲು ಕಡಿಮೆ ಫಂಡ್‍ಗಳನ್ನು ಹೊಂದಿರುತ್ತವೆ. ಅದರ ಪರಿಣಾಮವಾಗಿ ಬಡ್ಡಿ ದರಗಳು ಹೆಚ್ಚಾಗುತ್ತವೆ. ಅದೇ ರೀತಿ CRR ಇಳಿಕೆಯಾದರೆ, ಬ್ಯಾಂಕ್‌ಗಳು ಲೋನ್ ನೀಡಲು ಹೆಚ್ಚು ಹಣ ಹೊಂದಿರುತ್ತವೆ, ಅದರಿಂದಾಗಿ ಬಡ್ಡಿ ದರ ಕಡಿಮೆಯಾಗುತ್ತದೆ.

ಮೇಲಿನವುಗಳನ್ನು ಹೊರತುಪಡಿಸಿ, ಬಡ್ಡಿ ದರವು ಒಬ್ಬ ವ್ಯಕ್ತಿಯಾಗಿ ನಿಮಗೆ ಮತ್ತು ನೀವು ಆರಿಸುವ ಸಾಲದಾತರಿಗೆ ಸಂಬಂಧಿಸಿದ ಅಂಶಗಳನ್ನೂ ಸಹ ಅವಲಂಬಿಸಿರುತ್ತದೆ. ಉದಾಹರಣೆಗಾಗಿ, ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಈಗ ಇರುವ ಲೋನ್, ನಿಮಗೆ ಒದಗಿಸಿದ ಹೋಮ್ ಲೋನ್ ಬಡ್ಡಿಯ ಮೇಲೆ ಪ್ರಭಾವ ಬೀರಬಹುದು. ನಿಮ್ಮ ಸಾಲದಾತರು, ಸೀಸನಲ್ ಆಫರ್‌ಗಳಿಂದಲೂ ಸಹ ಕಡಿಮೆ ಬಡ್ಡಿ ದರಗಳನ್ನು ನೀಡಬಹುದು.

ನೀವು ನಿಮ್ಮ ಹೋಮ್ ಲೋನ್ ಬಡ್ಡಿಯ ಮೇಲೆ ಪರಿಣಾಮ ಬೀರುವ ಅಂಶಗಳನ್ನು ತಿಳಿದುಕೊಂಡ ಮೇಲೆ, ನಿಮಗೆ ಕಡಿಮೆ ಬಡ್ಡಿಯನ್ನು ಒದಗಿಸುವ ಸಾಲದಾತರನ್ನು ಆಯ್ದುಕೊಳ್ಳಿ. ಇದರಿಂದ ನೀವು ಪಡೆದುಕೊಳ್ಳುವ ಲೋನ್ ನಿಮಗೆ ಕೈಗೆಟಕುವಂತೆ ಆಗುತ್ತದೆ. ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಅಂತಹ ಒಂದು ಆಯ್ಕೆ ಆಗಿದೆ. ಕಡಿಮೆ ಬಡ್ಡಿಯ ಜತೆ ಜತೆಗೆ, ಬಜಾಜ್ ಫಿನ್‌ಸರ್ವ್‌ ಒದಗಿಸುವ ಇನ್ನೂ ಅನೇಕ ಪ್ರಯೋಜನಗಳಿವೆ.

ಅವುಗಳು ಯಾವುದೆಂದು ನೋಡಿ.

• ಕನಿಷ್ಠ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳ ಅವಶ್ಯಕತೆಗಳಿಂದಾಗಿ ಈ ಲೋನನ್ನು ಪಡೆಯುವುದು ಸುಲಭ.
• ಇದು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದಾದ ಸರಳ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಹೊಂದಿದೆ.
• ನೀವು ಒಂದು ಸುಭದ್ರ ಗ್ರಾಹಕರ ಪೋರ್ಟಲ್‌ನ ಮೂಲಕ ನಿಮ್ಮ ಅನುಕೂಲತೆಗೆ ತಕ್ಕಂತೆ ನಿಮ್ಮ ಲೋನನ್ನು ನಿಭಾಯಿಸಬಹುದು ಮತ್ತು ಅದರ ಸ್ಟೇಟ್ಮೆಂಟ್‌ಗಳನ್ನು ನೋಡಬಹುದು.
• ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸದೆ ಭಾಗಶಃ ಮುಂಪಾವತಿಗಳನ್ನು ಮಾಡಬಹುದು ಅಥವಾ ಲೋನ್ ಫೋರ್‌ಕ್ಲೋಸ್ ಮಾಡಬಹುದು.
ಫ್ಲೆಕ್ಸಿ ಹೈಬ್ರಿಡ್ ಹೋಮ್ ಲೋನ್ ನಿಮಗೆ 4 ವರ್ಷಗಳವರೆಗೆ ಅಸಲು ರಜೆಯನ್ನು ಆನಂದಿಸಲು ಅನುಮತಿ ನೀಡುತ್ತದೆ. ಇದರ ಜತೆಗೆ, ನೀವು ಬಡ್ಡಿಯನ್ನು ಮಾತ್ರ ನಿಮ್ಮ EMI ಆಗಿ ಮೊದಲ 4 ವರ್ಷಗಳವರೆಗೆ ಪಾವತಿಸಬಹುದು ಮತ್ತು ಈ ಸಮಯವನ್ನು ಮುಂದಿನ ಮರುಪಾವತಿಗಾಗಿ ಪ್ಲಾನ್ ಮಾಡಲು ಮತ್ತು ಉಳಿತಾಯ ಮಾಡಲು ಬಳಸಿಕೊಳ್ಳಿ.
• ಸಲೀಸಾದ ಮರುಪಾವತಿಗೆ 3 EMI ಹಾಲಿಡೇ ಅನ್ನು ಪಡೆದುಕೊಳ್ಳಬಹುದು ಅಥವಾ ಟಾಪ್-ಅಪ್ ಲೋನ್ ಅನ್ನು ಪಡೆದುಕೊಂಡು ಹೆಚ್ಚುವರಿ ಹಣದ ಅವಶ್ಯಕತೆಗಳಿಗೆ ಬಳಸಿಕೊಳ್ಳಬಹುದು.
• ಬಜಾಜ್ ಫಿನ್‌ಸರ್ವ್ ಒದಗಿಸುವ ಪ್ರಾಪರ್ಟಿ ಡಾಸಿಯರ್ ಮತ್ತು ಪ್ರಾಪರ್ಟಿ ಸರ್ಚ್ ಸೇವೆಗಳು ನಿಮಗೆ ನಿಮ್ಮ ಬಜೆಟ್‌ಗೆ ತಕ್ಕಂತೆ ಸೂಕ್ತ ಮನೆಯನ್ನು ಆರಿಸಲು ನೆರವಾಗುತ್ತವೆ ಹಾಗೂ ಮನೆ ಖರೀದಿಸುವ ತಾಂತ್ರಿಕ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುತ್ತವೆ.
 

ಬಡ್ಡಿ ದರಗಳು ಮತ್ತು ಅವು ನಿಮ್ಮ ಲೋನಿನ ಅನುಭವದ ಮೇಲೆ ಹೊಂದಿರುವ ಸಂಬಂಧವನ್ನು ಅರ್ಥಮಾಡಿಕೊಳ್ಳಿ, ನಿಮ್ಮ ಲೋನನ್ನು ಸರಿಯಾಗಿ ಪಾವತಿಸಿ ಮತ್ತು ಲಭ್ಯವಿರುವ ಆಯ್ಕೆಗಳಿಂದ ಅತ್ಯುತ್ತಮ ಹೋಮ್ ಲೋನನ್ನು ಆರಿಸಿ.

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ