ನೀವು ನಿಮ್ಮ ಹೋಮ್ ಲೋನ್ ಮರುಪಾವತಿಸಲು ಹೆಚ್ಚು ಸಮಯ ತೆಗೆದುಕೊಂಡಷ್ಟು, ಹೆಚ್ಚು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಇದನ್ನು ತಪ್ಪಿಸಲು, ನೀವು ಸಾಧ್ಯವಾದಷ್ಟು ನಿಮ್ಮ ಲೋನ್ ಅವಧಿಯನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು.
ನೀವು ಕೆಲವು ವರ್ಷಗಳ ಹಿಂದೆ ಒಂದು ಮನೆಯನ್ನು ಖರೀದಿಸಿದ್ದೀರೆಂದು ಊಹಿಸೋಣ, ಅದಕ್ಕಾಗಿ ನೀವು 11% ಬಡ್ಡಿ ದರದಲ್ಲಿ ರೂ. 50 ಲಕ್ಷದ ಹೋಮ್ ಲೋನ್ ತೆಗೆದುಕೊಂಡಿದ್ದೀರಿ. ನಿಮ್ಮ ಲೋನ್ನ ಅವಧಿ 20 ವರ್ಷಗಳು ಮತ್ತು ನಿಮ್ಮ EMI ಮೊತ್ತ ರೂ. 51,610. RBI ಮಾರ್ಗದರ್ಶನ ಸೂತ್ರಗಳಿಗೆ ಅನುಸಾರವಾಗಿ ಬ್ಯಾಂಕ್ಗಳು ನಿಯತ ಕ್ರಮದಲ್ಲಿ ಹೋಮ್ ಲೋನ್ ಬಡ್ಡಿ ದರ ವನ್ನು ಬದಲಾಯಿಸುತ್ತಿರುತ್ತವೆ. ನಿಮ್ಮ ಬ್ಯಾಂಕ್ ಇಂದು ಬಡ್ಡಿ ದರವನ್ನು 10.75% ಗೆ ಇಳಿಕೆ ಮಾಡಿದೆಯೆಂದು ಊಹಿಸೋಣ. ಅದರರ್ಥ ನಿಮ್ಮ EMI ರೂ. 50,671 ಗೆ ಇಳಿಕೆಯಾಗುತ್ತದೆ.
ನೀವು ಮೊದಲ EMI (ರೂ. 51,610) ಅನ್ನು ಪಾವತಿಸುತ್ತಾ ಇದ್ದಲ್ಲಿ, ನಿಮ್ಮ ಲೋನ್ ಅವಧಿಯನ್ನು 1 ವರ್ಷ ಕಾಲ ಕಡಿಮೆ ಮಾಡಬಹುದು, ಏಕೆಂದರೆ ನೀವು ನಿಮ್ಮ ಲೋನ್ ಮರುಪಾವತಿಯನ್ನು ಬೇಗನೆ ಕೊನೆಗೊಳಿಸುತ್ತೀರಿ ಹಾಗೂ ಬಡ್ಡಿ ದರದ ಮೇಲೆ ರೂ. 6.71 ಲಕ್ಷ ಉಳಿತಾಯ ಮಾಡುತ್ತೀರಿ. ಅದಕ್ಕಾಗಿ ನೀವು ಮಾಡಬೇಕಿರುವುದಿಷ್ಟೇ ನೀವು ಅಧಿಕ EMI ಪಾವತಿಸುತ್ತಾ ಇರಬೇಕು.
ನಿಮ್ಮ ಅಪೇಕ್ಷಿತ ಅವಧಿಯಲ್ಲಿ ಲೋನನ್ನು ಕೊನೆಗೊಳಿಸಲು ಎಷ್ಟು EMI ಪಾವತಿಸಬೇಕು ಎಂಬುದನ್ನು ಲೆಕ್ಕ ಹಾಕಲು, ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ.