ಪಿಎಂಎವೈ ಗ್ರಾಮೀಣ್ ಪಟ್ಟಿ 2022-23

ಪಿಎಂಎವೈ-ಯು ಮತ್ತು ಪಿಎಂಎವೈ-ಜಿ ಅಡಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲರಿಗೂ ಕೈಗೆಟಕುವ ವಸತಿ ಕಲ್ಪಿಸಲು ಕೇಂದ್ರ ಸರ್ಕಾರವು ಪಿಎಂ ಆವಾಸ್ ಯೋಜನೆಯನ್ನು ಪ್ರಾರಂಭಿಸಿತು. ಮೂಲತಃ 1985 ರಲ್ಲಿ 'ಇಂದಿರಾ ಆವಾಸ್ ಯೋಜನೆ' ಎಂದು ಪ್ರಾರಂಭಿಸಲ್ಪಟ್ಟ ಈ ಯೋಜನೆಯನ್ನು, 2016 ರಲ್ಲಿ ಪ್ರಸ್ತುತ ಸರ್ಕಾರವು 'ಎಲ್ಲರಿಗೂ ವಸತಿ' ಎನ್ನುವ ಗುರಿಯನ್ನು ಸಾಧಿಸಲು ಪಿಎಂಎವೈ ಎಂದು ಮರು ನಾಮಕರಣ ಮತ್ತು ಮರು ಪ್ರಾರಂಭ ಮಾಡಿದೆ'.

ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (ಪಿಎಂಎವೈ-ಜಿ) ಉದ್ದೇಶವೆಂದರೆ ಎಲ್ಲಾ ಅರ್ಹ ಗ್ರಾಮೀಣ ಕುಟುಂಬಗಳಿಗೆ ನೀರು, ವಿದ್ಯುತ್ ಮತ್ತು ನೈರ್ಮಲ್ಯದ ಮೂಲಭೂತ ಸೌಲಭ್ಯಗಳೊಂದಿಗೆ ಪಕ್ಕಾ ಮನೆಗಳನ್ನು ನಿರ್ಮಿಸುವುದು. ಈ ಗ್ರಾಮೀಣ ವಸತಿ ಯೋಜನೆಯಡಿ ಫಲಾನುಭವಿಗಳು ವಿವಿಧ ಪ್ರಯೋಜನಗಳು ಮತ್ತು ಸಬ್ಸಿಡಿಗಳನ್ನು ಪಡೆಯಬಹುದು. ಈ ಮಾಹಿತಿಯು ಪಿಎಂಎವೈ ಗ್ರಾಮೀಣ ಪಟ್ಟಿಯಲ್ಲಿ ಲಭ್ಯವಿದೆ.

ಪಿಎಂಎವೈ ಗ್ರಾಮೀಣ ಫೀಚರ್‌ಗಳು

ಪಿಎಂಎವೈ-ಜಿ ಯೋಜನೆಯು ಅನೇಕ ಪ್ರಮುಖ ಫೀಚರ್‌ಗಳನ್ನು ಹೊಂದಿದೆ. ಅವುಗಳೆಂದರೆ:

 • Housing for all

  ಎಲ್ಲರಿಗೂ ವಸತಿ

  ಸರ್ಕಾರವು 31 ಮಾರ್ಚ್ 2024 ರ ಒಳಗೆ 2.9 ಕೋಟಿ ಪಕ್ಕಾ ವಸತಿ ಘಟಕಗಳನ್ನು ನಿರ್ಮಿಸುವ ಗುರಿಯನ್ನು ಪೂರೈಸಲು ಎರಡು ಹಂತಗಳಲ್ಲಿ ಯೋಜಿಸುತ್ತಿದೆ. ಮೊದಲ ಹಂತವು ಪೂರ್ಣಗೊಂಡಿದ್ದು, ಪ್ರಸ್ತುತ ಎರಡನೇ ಹಂತವು ಕಾರ್ಯ ನಿರ್ವಹಣೆಯಲ್ಲಿದೆ.

 • Monetary aid

  ಹಣಕಾಸಿನ ನೆರವು

  PMAY ಗ್ರಾಮೀಣದ ಅಡಿಯಲ್ಲಿ, ಸರಳ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸಲು ರೂ. 1.2 ಲಕ್ಷದವರೆಗೆ ಮತ್ತು ಹಿಲ್ಲಿ ಪ್ರದೇಶಗಳು, ಈಶಾನ್ಯ ರಾಜ್ಯಗಳು ಮತ್ತು ಕೆಲವು ಇತರ ಪ್ರದೇಶಗಳಲ್ಲಿ ರೂ. 1.3 ಲಕ್ಷದವರೆಗೆ ಹಣಕಾಸಿನ ನೆರವು ನೀಡಲಾಗುತ್ತದೆ.

 • Cost sharing

  ವೆಚ್ಚ ಹಂಚಿಕೆ

  ಅಗತ್ಯ ವಸತಿ ಘಟಕಗಳನ್ನು ನಿರ್ಮಿಸುವ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 60:40 ಅನುಪಾತದಲ್ಲಿ ಹಂಚಿಕೊಳ್ಳಲಾಗುತ್ತದೆ. ಈಶಾನ್ಯ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ಪರ್ವತ ಪ್ರದೇಶಗಳಲ್ಲಿ, ಈ ಅನುಪಾತವು 90:10 ಗೆ ಬದಲಾಗುತ್ತದೆ.

 • Assistance for toilets

  ಶೌಚಾಲಯಗಳಿಗೆ ಸಹಾಯ

  ಸ್ವಚ್ಛ ಭಾರತ್ ಮಿಷನ್ ಅಥವಾ ಇತರ ಯಾವುದೇ ಯೋಜನೆಯ ಮೂಲಕ ಶೌಚಾಲಯಗಳನ್ನು ನಿರ್ಮಿಸಲು ಫಲಾನುಭವಿಗಳು ರೂ. 12,000 ಸಹಾಯವನ್ನು ಪಡೆಯಬಹುದು.

 • Employment benefits

  ಉದ್ಯೋಗ ಪ್ರಯೋಜನಗಳು

  ಕಡಿಮೆ ವೆಚ್ಚದ ವಸತಿ ಅವಶ್ಯಕತೆಗಳನ್ನು ಒದಗಿಸುವುದರ ಹೊರತಾಗಿ, ಪಿಎಂ ಆವಾಸ್ ಯೋಜನೆ ಮನರೇಗಾ ಅಡಿಯಲ್ಲಿ ಫಲಾನುಭವಿಗಳಿಗೆ 90-95 ದಿನಗಳ ಉದ್ಯೋಗವನ್ನು ಒದಗಿಸುತ್ತದೆ.

 • Housing unit size

  ವಸತಿ ಘಟಕದ ಸೈಜ್

  ಕನಿಷ್ಠ ಪ್ರದೇಶ ಅಥವಾ ಮನೆಗಳ ಗಾತ್ರವನ್ನು 20 ಚದರ ಮೀಟರ್‌ನಿಂದ 25 ಚದರ ಮೀಟರ್‌ಗೆ ಹೆಚ್ಚಿಸಲಾಗಿದೆ.

 • Borrowing facility

  ಲೋನ್ ಪಡೆಯುವ ಸೌಲಭ್ಯ

  ಯಾವುದೇ ಅಧಿಕೃತ ಹಣಕಾಸು ಸಂಸ್ಥೆಯಿಂದ ರೂ. 70,000 ವರೆಗಿನ ಹೋಮ್ ಲೋನ್‌ಗಳನ್ನು ಪಡೆಯಬಹುದು.

 • House design

  ಮನೆ ವಿನ್ಯಾಸ

  ಫಲಾನುಭವಿಗಳು ಸ್ಥಳ, ಹವಾಮಾನ, ಸಂಸ್ಕೃತಿ ಮತ್ತು ಇತರ ವಸತಿ ಅಭ್ಯಾಸಗಳ ಆಧಾರದ ಮೇಲೆ ತಮ್ಮ ಮನೆಯ ವಿನ್ಯಾಸವನ್ನು ಆಯ್ಕೆ ಮಾಡಬಹುದು.

ಪೂರ್ಣಗೊಂಡ ಯೋಜನೆಗಳ ರಾಜ್ಯವಾರು ಹೊಸ ಪಿಎಂಎವೈ ಗ್ರಾಮೀಣ ಪಟ್ಟಿ:

ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ನಿಗದಿಪಡಿಸಲಾದ ವಸತಿ ಘಟಕಗಳ ಸಮಗ್ರ ಪಟ್ಟಿ; ಮತ್ತು ಇಲ್ಲಿಯವರೆಗೆ ಪೂರ್ಣಗೊಂಡ ಘಟಕಗಳ ಸಂಖ್ಯೆ ಇಲ್ಲಿದೆ.

ರಾಜ್ಯಗಳು/ಯುಟಿ

ಟಾರ್ಗೆಟ್

ಪೂರ್ಣಗೊಂಡಿದೆ

ಪೂರ್ಣಗೊಂಡ %

ಆಂಧ್ರ ಪ್ರದೇಶ

1,71,000

46,718

27.33%

ಅರುಣಾಚಲ ಪ್ರದೇಶ

18,721

209

1.12%

ಅಸ್ಸಾಂ

5,16,000

2,30,000

44.67%

ಬಿಹಾರ್

21,89,000

8,82,000

40.3%

ಛತ್ತೀಸಘಡ

9,39,000

7,39,000

78.72%

ಗುಜರಾತ್

3,35,000

2,03,000

60.48%

ಗೋವಾ

427

25

5.85%

ಜಾರ್ಖಂಡ್

8,51,000

5,73,000

67.35%

ಜಮ್ಮು & ಕಾಶ್ಮೀರ

1,02,000

21,190

20.83%

ಕೇರಳ

42,431

16,635

39.2%

ಕರ್ನಾಟಕ

2,31,000

79,547

37.38%

ಮಹಾರಾಷ್ಟ್ರ

8,04,000

4,03,000

50.13%

ಮಧ್ಯ ಪ್ರದೇಶ

22,36,000

15,24,000

68.15%

ಮಿಜೋರಾಂ

8,100

2,526

31.19%

ಮೇಘಾಲಯ

37,945

15,873

41.83%

ಮಣಿಪುರ

18,640

8,496

45.58%

ನಾಗಾಲ್ಯಾಂಡ್

14,381

1,483

10.31%

ಒಡಿಶಾ

17,33,022

10,96,413

63.27%

ಪಂಜಾಬ್

24,000

13,623

56.76%

ರಾಜಸ್ಥಾನ

11,37,907

7,43,072

65.3%

ಸಿಕ್ಕಿಂ

1,079

1,045

96.85%

ತ್ರಿಪುರಾ

53,827

26,220

48.71%

ತಮಿಳುನಾಡು

5,27,552

2,19,182

41.55%

ಉತ್ತರಾಖಂಡ್

12,666

12,354

97.57%

ಉತ್ತರ ಪ್ರದೇಶ

14,62,000

13,90,000

95.04%

ಪಶ್ಚಿಮ ಬಂಗಾಳ

24,81,000

14,22,000

57.33%

ಅಂಡಮಾನ್ & ನಿಕೋಬಾರ್

1,372

273

19.9%

ದಮನ್ & ದೀಯು

15

13

86.67%

ದಾದ್ರಾ & ನಗರ್ ಹವೇಲಿ

7,605

411

5.4%

ಲಕ್ಷದ್ವೀಪ

115

3

2.61%

ಪುದುಚೇರಿ

0

0

0%


ಪಿಎಂಎವೈ-ಜಿ ಗಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡುವುದು ತುಂಬಾ ಅನುಕೂಲಕರವಾಗಿದೆ. ಪಿಎಂಎವೈ ಪ್ರಯೋಜನಗಳನ್ನು ಪಡೆಯಲು ಆಸಕ್ತಿ ಹೊಂದಿರುವವರು ವೆಬ್‌ಸೈಟ್‌ನ ಎಲ್ಲಾ ಮಾಹಿತಿಯನ್ನು ಪಡೆಯಬಹುದು ಮತ್ತು ಅಗತ್ಯ ಡಾಕ್ಯುಮೆಂಟೇಶನ್ ಜೊತೆಗೆ ತಮ್ಮ ಅರ್ಹತೆಯನ್ನು ಪರಿಶೀಲಿಸಬಹುದು. ಪಿಎಂಎವೈ ಫಲಾನುಭವಿ ಸ್ಥಿತಿಯನ್ನು ಪೋರ್ಟಲ್‌ನಲ್ಲಿ ಕೂಡ ಆರಾಮದಾಯಕವಾಗಿ ಟ್ರ್ಯಾಕ್ ಮಾಡಬಹುದು. ಸಂಪೂರ್ಣ ಪ್ರಕ್ರಿಯೆಯನ್ನು ಸುಲಭಗೊಳಿಸುವ ಗ್ರಾಮೀಣ ವಸತಿ ಯೋಜನೆಯ ವಿವಿಧ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಪಿಎಂಎವೈ ಗ್ರಾಮೀಣ್ ಆನ್ಲೈನ್ 2022 ಗೆ ನಾನು ಹೇಗೆ ಅಪ್ಲೈ ಮಾಡಬಹುದು?

ಆಸಕ್ತ ಅಭ್ಯರ್ಥಿಗಳು ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ಅಪ್ಲೈ ಮಾಡಬಹುದು, ಫಲಾನುಭವಿಯ ಹೆಸರುಗಳನ್ನು ಸೇರಿಸಬಹುದು ಅಥವಾ ಪಿಎಂಎವೈಗಾಗಿ ನೋಂದಣಿ ಮಾಡಬಹುದು:

 1. 1 ಅಧಿಕೃತ ಪಿಎಂಎವೈ ಗೆ ಭೇಟಿ ನೀಡಿ ವೆಬ್‌ಸೈಟ್
 2. 2 ಅಗತ್ಯವಿರುವ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ - ಲಿಂಗ, ಮೊಬೈಲ್ ನಂಬರ್, ಆಧಾರ್ ನಂಬರ್ ಇತ್ಯಾದಿ
 3. 3 'ಹುಡುಕಿ' ಬಟನ್ ಕ್ಲಿಕ್ ಮಾಡಿ ಮತ್ತು ಫಲಾನುಭವಿಯ ಹೆಸರು, ಪಿಎಂಎವೈ ಐಡಿ ಮತ್ತು ಆದ್ಯತೆಯನ್ನು ಹುಡುಕಿ
 4. 4 'ನೋಂದಣಿ ಮಾಡಲು ಆಯ್ಕೆಮಾಡಿ' ಕ್ಲಿಕ್ ಮಾಡಿ'
 5. 5 ಫಲಾನುಭವಿ ವಿವರಗಳು, ಮನರೇಗಾ ಜಾಬ್ ಕಾರ್ಡ್ ನಂಬರ್ ಮತ್ತು ಸ್ವಚ್ಛ ಭಾರತ್ ಮಿಷನ್ ನಂಬರ್ ನಮೂದಿಸಿ
 6. 6 ನಿಮ್ಮ ನೋಂದಣಿ ಸಂಖ್ಯೆಯನ್ನು ರಚಿಸಲು 'ಸಲ್ಲಿಸಿ' ಕ್ಲಿಕ್ ಮಾಡಿ

ಪಿಎಂಎವೈ-ಜಿ ಯೋಜನೆಯಡಿ ಫಲಾನುಭವಿಗಳು

ಪಿಎಂಎವೈ-ಜಿ ಫಲಾನುಭವಿಗಳಲ್ಲಿ ಪಟ್ಟಿ ಮಾಡಲು ಆದ್ಯತೆಯನ್ನು ನಿರ್ಧರಿಸುವ ಕೆಲವು ಸಾಮಾಜಿಕ-ಆರ್ಥಿಕ ಅಂಶಗಳನ್ನು ಪೂರೈಸಬೇಕು. ಅವುಗಳು ಇದನ್ನು ಒಳಗೊಂಡಿದೆ:

 • ಕುಟುಂಬದಲ್ಲಿ 16 ರಿಂದ 59 ವರ್ಷಗಳ ನಡುವಿನ ವಯಸ್ಕ ಸದಸ್ಯರ ಅನುಪಸ್ಥಿತಿ
 • 25 ವರ್ಷಕ್ಕಿಂತ ಮೇಲ್ಪಟ್ಟ ಸುಶಿಕ್ಷಿತ ಸದಸ್ಯರು ಇಲ್ಲದಿರುವುದು
 • 16 ರಿಂದ 59 ವರ್ಷಗಳ ನಡುವಿನ ವಯಸ್ಕ ಸದಸ್ಯರು ಇಲ್ಲದೆ ಮಹಿಳೆಯರಿಂದ ನಡೆಯುತ್ತಿರುವ ಕುಟುಂಬಗಳು
 • ಅಂಗವಿಕಲ ಸದಸ್ಯರನ್ನು ಮತ್ತು ಅನಾರೋಗ್ಯ ಪೀಡಿತ ವಯಸ್ಕರನ್ನು ಹೊಂದಿರುವ ಕುಟುಂಬ
 • ಯಾವುದೇ ಭೂಮಿಯನ್ನು ಹೊಂದಿರದ ಮತ್ತು ಹೆಚ್ಚಾಗಿ ಸಾಮಾನ್ಯ ಕೆಲಸದಿಂದ ಗಳಿಸುವ ಕುಟುಂಬಗಳು
 • ಸಂಗಾತಿ ಮತ್ತು ಅವಿವಾಹಿತ ಮಕ್ಕಳನ್ನು ಒಳಗೊಂಡಿರುವ ಕುಟುಂಬ

ಪಿಎಂಎವೈ-ಜಿ ಫಲಾನುಭವಿ ಪಟ್ಟಿ ಎಂದರೇನು?

ಪಿಎಂಎವೈ-ಜಿ ಫಲಾನುಭವಿ ಪಟ್ಟಿಯು ಪಿಎಂಎವೈ ಗ್ರಾಮೀಣರಿಗೆ ಅರ್ಹವಾದ ಆದಾಯದ ಆಧಾರದ ಮೇಲೆ ವರ್ಗಗಳ ಸಂಪೂರ್ಣ ಪಟ್ಟಿಯಾಗಿದೆ. ಈ ವರ್ಗಗಳು:
 • ರೂ. 3 ಲಕ್ಷದವರೆಗಿನ ಆದಾಯದೊಂದಿಗೆ ಆರ್ಥಿಕ ದುರ್ಬಲ ವಿಭಾಗಗಳ ಕುಟುಂಬಗಳು (ಇಡಬ್ಲ್ಯೂಎಸ್)
 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು
 • ರೂ. 3 ಲಕ್ಷದಿಂದ ರೂ. 6 ಲಕ್ಷದ ನಡುವಿನ ಗಳಿಕೆ ಹೊಂದಿರುವ ಕಡಿಮೆ ಆದಾಯ ಗುಂಪು (ಎಲ್‌ಐಜಿ) ಕುಟುಂಬಗಳು
 • ರೂ. 6 ಲಕ್ಷದಿಂದ ರೂ. 18 ಲಕ್ಷದವರೆಗಿನ ಸಂಬಳದ ಪ್ರಮಾಣವನ್ನು ಹೊಂದಿರುವ ಮಧ್ಯಮ ಆದಾಯ ಗುಂಪು (ಎಂಐಜಿ) ಕುಟುಂಬಗಳು

ಪಿಎಂಎವೈ ಗ್ರಾಮೀಣ್ ಪಟ್ಟಿಯಲ್ಲಿ ಆಗಾಗ್ಗೆ ಕೇಳುವ ಪ್ರಶ್ನೆಗಳು

ಪಿಎಂ ಆವಾಸ್ ಯೋಜನೆ ಗ್ರಾಮೀಣ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ?

ಪಿಎಂಎವೈ-ಜಿ ಅಡಿಯಲ್ಲಿ ನೋಂದಾಯಿಸಲಾದ ಅರ್ಜಿದಾರರು ಈ ಕೆಳಗಿನ ವಿಧಾನಗಳಲ್ಲಿ ತಮ್ಮ ನೋಂದಣಿ ಸಂಖ್ಯೆಯೊಂದಿಗೆ ಅಥವಾ ನೋಂದಣಿ ಸಂಖ್ಯೆ ಇಲ್ಲದೆ ಪಿಎಂಎವೈ ಗ್ರಾಮೀಣ ಪಟ್ಟಿಯಲ್ಲಿ ಸುಲಭವಾಗಿ ತಮ್ಮ ಹೆಸರನ್ನು ಪರಿಶೀಲಿಸಬಹುದು:

ಹಂತ 1: ಅಧಿಕೃತ ಪಿಎಂಎವೈ-ಜಿ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಹೋಮ್‌ಪೇಜ್ ಮೆನು ಬಾರ್‌ನಲ್ಲಿ 'ಸ್ಟೇಕ್‌ಹೋಲ್ಡರ್‌ಗಳು' ಆಯ್ಕೆಗೆ ಸ್ಕ್ರೋಲ್ ಮಾಡಿ
ಹಂತ 3: ಡ್ರಾಪ್-ಡೌನ್ ಮೆನು ಕಾಣಿಸಿಕೊಳ್ಳುತ್ತದೆ. 'ಐಎವೈ/ ಪಿಎಂಎವೈ-ಜಿ ಫಲಾನುಭವಿ' ಮೇಲೆ ಕ್ಲಿಕ್ ಮಾಡಿ

ಎ) ನೋಂದಣಿ ಸಂಖ್ಯೆಯೊಂದಿಗೆ

ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ಫಲಾನುಭವಿಯ ಪಟ್ಟಿಯನ್ನು ನೀವು ಪರಿಶೀಲಿಸಲು ಬಯಸಿದರೆ, ಖಾಲಿ ಜಾಗದಲ್ಲಿ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು 'ಸಲ್ಲಿಸಿ' ಕ್ಲಿಕ್ ಮಾಡಿ'. ನಿಮ್ಮ ಹೆಸರು ಪಿಎಂಎವೈ ಗ್ರಾಮೀಣ ಪಟ್ಟಿಯಲ್ಲಿ ಕಾಣಿಸಿಕೊಂಡರೆ, ನೀವು ನಂತರ ಸಂಬಂಧಿತ ವಿವರಗಳನ್ನು ಪರಿಶೀಲಿಸಬಹುದು.

ಬಿ) ನೋಂದಣಿ ಸಂಖ್ಯೆ ಇಲ್ಲದೆ

ನೀವು ನೋಂದಣಿ ಸಂಖ್ಯೆ ಇಲ್ಲದೆ ಫಲಾನುಭವಿ ಪಟ್ಟಿಯನ್ನು ಪರಿಶೀಲಿಸಲು ಬಯಸಿದರೆ, ಈ ಹಂತಗಳನ್ನು ಅನುಸರಿಸಿ:

 • ಪೇಜ್‌ನ ಕೆಳಗೆ ಬಲ-ಭಾಗದಲ್ಲಿರುವ 'ಸುಧಾರಿತ ಹುಡುಕಾಟ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
 • ನಿರ್ದಿಷ್ಟ ವಿವರಗಳನ್ನು ಭರ್ತಿ ಮಾಡಿ - ರಾಜ್ಯ, ಜಿಲ್ಲೆ, ಬ್ಲಾಕ್, ಪಂಚಾಯತಿ ಇತ್ಯಾದಿ
 • ಮುಂದುವರೆಯಲು ಈ ಯಾವುದೇ ವಿವರಗಳನ್ನು ಒದಗಿಸಿ - ಹೆಸರು, ಅಕೌಂಟ್ ನಂಬರ್ ಜೊತೆಗೆ ಬಿಪಿಎಲ್ ನಂಬರ್, ಮಂಜೂರಾತಿ ಆರ್ಡರ್, ತಂದೆ/ ಪತಿಯ ಹೆಸರು
 • ಲಿಸ್ಟ್‌ನಲ್ಲಿ ನಿಮ್ಮ ಹೆಸರನ್ನು ಹುಡುಕಲು 'ಹುಡುಕಿ' ಕ್ಲಿಕ್ ಮಾಡಿ
ಪಿಎಂಎವೈ ಗ್ರಾಮೀಣ ಪಟ್ಟಿಯನ್ನು ನಾನು ಹೇಗೆ ಪಡೆಯಬಹುದು?

ಹಂತ 1: ಪಿಎಂಎವೈ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ
ಹಂತ 2: ಹೋಮ್ ಪೇಜ್‌ನಲ್ಲಿರುವ 'Awaassoft' ಅಡಿಯಲ್ಲಿ 'ವರದಿಗಳು' ಮೇಲೆ ಕ್ಲಿಕ್ ಮಾಡಿ
ಹಂತ 3: ಈಗ, 'ಸೋಶಿಯಲ್ ಆಡಿಟ್ ರಿಪೋರ್ಟ್‌ಗಳು' ಗೆ ಹೋಗಿ'
ಹಂತ 4: ಪರಿಶೀಲನೆಗಾಗಿ 'ಫಲಾನುಭವಿ ವಿವರಗಳು' ಮೇಲೆ ಕ್ಲಿಕ್ ಮಾಡಿ
ಹಂತ 5: 'ಆಯ್ಕೆ ಫಿಲ್ಟರ್‌ಗಳು' ಅಡಿಯಲ್ಲಿ ಅಗತ್ಯವಿರುವ ಜಾಗಗಳನ್ನು ಆಯ್ಕೆಮಾಡಿ'. ವರ್ಷ, ಯೋಜನೆ, ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಪಂಚಾಯತಿಯನ್ನು ಆಯ್ಕೆಮಾಡಿ.
ಹಂತ 6: ಕ್ಯಾಪ್ಚಾ ಕೋಡ್ ನಮೂದಿಸಿ. 'ಸಲ್ಲಿಸಿ' ಕ್ಲಿಕ್ ಮಾಡಿ'

ಸ್ಕ್ರೀನಿನಲ್ಲಿ ಪಿಎಂಎವೈ-ಜಿ ಪಟ್ಟಿಯು ಕಾಣಿಸುತ್ತದೆ. ಈ ಪಟ್ಟಿಯನ್ನು ಎಕ್ಸೆಲ್ ಅಥವಾ ಪಿಡಿಎಫ್ ಫಾರ್ಮ್ಯಾಟ್‌ನಲ್ಲಿ ಡೌನ್ಲೋಡ್ ಮಾಡಬಹುದು.

ಪಿಎಂಎವೈ ಗ್ರಾಮೀಣ ಯೋಜನೆಯನ್ನು ವಿಸ್ತರಿಸಲಾಗಿದೆಯೇ?

ಸರ್ಕಾರವು ಮತ್ತೊಂದು ಎರಡು ವರ್ಷಗಳವರೆಗೆ, ಅಂದರೆ ಮಾರ್ಚ್ 31, 2024 ವರೆಗೆ ಪಿಎಂಎವೈ-ಜಿ ಅಥವಾ ಪಿಎಂಎವೈ-ಆರ್ ಯೋಜನೆಯನ್ನು ವಿಸ್ತರಿಸಲಾಗಿದೆ. 2.95 ಕೋಟಿ ಪಕ್ಕಾ ಮನೆ ನಿರ್ಮಾಣದ ಅಧಿಕೃತ ಗುರಿಯನ್ನು ಸಾಧಿಸಲು ಉಳಿದ 1.3 ಕೋಟಿ ಮನೆಗಳನ್ನು ಪೂರ್ಣಗೊಳಿಸಲು ಹಣಕಾಸಿನ ನೆರವು ನೀಡಲಾಗಿದೆ. 1.65 ಕೋಟಿ ಪಿಎಂಎವೈ-ಜಿ ಮನೆಗಳನ್ನು ನವೆಂಬರ್ 2021 ರಂತೆ ನಿರ್ಮಿಸಲಾಗಿದೆ.

ಪಿಎಂಎವೈ ಗ್ರಾಮೀಣ್‌ನ ಒಟ್ಟು ಮೊತ್ತ ಎಷ್ಟು?

ಪಿಎಂಎವೈ ಗ್ರಾಮೀಣ್‌ಗಾಗಿ ಕೇಂದ್ರ ಸರ್ಕಾರವು ಅನುಮೋದಿಸಿದ ಒಟ್ಟು ಫಂಡಿಂಗ್ ರೂ. 2,17,257 ಕೋಟಿ ಆಗಿದೆ - ಇದರಲ್ಲಿ ಕೇಂದ್ರದ ಪಾಲು ಅಂದಾಜು ರೂ. 1,25,106 ಕೋಟಿ, ರಾಜ್ಯದ ಪಾಲು ರೂ. 73,475 ಕೋಟಿ ಆಗಿದೆ.

ಇನ್ನಷ್ಟು ಓದಿರಿ ಕಡಿಮೆ ಓದಿ