ಹೌಸಿಂಗ್ ಲೋನ್ ಮೇಲಿನ ಬಡ್ಡಿ ದರವನ್ನು ಲೆಕ್ಕ ಹಾಕುವುದು ಹೇಗೆ?

2 ನಿಮಿಷದ ಓದು

ಹೋಮ್ ಲೋನ್ ಮೇಲೆ ಪಾವತಿಸಬೇಕಾದ ಬಡ್ಡಿಯನ್ನು ಲೆಕ್ಕ ಹಾಕಲು ದೋಷ-ಮುಕ್ತ ಮತ್ತು ಸುಲಭ ಮಾರ್ಗವೆಂದರೆ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸುವುದು. ಫಲಿತಾಂಶಗಳನ್ನು ಪಡೆಯಲು ನೀವು ಹೋಮ್ ಲೋನ್ ಬಡ್ಡಿ ದರ, ಅಸಲು ಮೊತ್ತ ಮತ್ತು ಅವಧಿಯಂತಹ ಲೋನ್ ವಿಷಯಗಳನ್ನು ನಿರ್ದಿಷ್ಟವಾಗಿ ನಮೂದಿಸಬೇಕು.

ನೀವು ಈ ವಿವರಗಳನ್ನು ನಿಖರವಾಗಿ ನಮೂದಿಸಿದಾಗ, ನೀವು ಒಟ್ಟು ಇಎಂಐ ಮೌಲ್ಯ, ಪಾವತಿಸಬೇಕಾದ ಒಟ್ಟು ಲೋನ್ ಮೊತ್ತ ಮತ್ತು ಲೋನಿಗೆ ಪಾವತಿಸಬೇಕಾದ ಒಟ್ಟು ಬಡ್ಡಿಯನ್ನು ಕಂಡುಕೊಳ್ಳಬಹುದು.

ಹೋಮ್ ಲೋನ್‌ಗಳ ವಿಷಯಕ್ಕೆ ಬಂದಾಗ, ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಜಾಣತನವಾಗಿದೆ. ಪಾವತಿಸಬೇಕಾದ ಬಡ್ಡಿಯ ಕಲ್ಪನೆಯೊಂದಿಗೆ, ನೀವು ಲೋನ್‌ನ ವೆಚ್ಚವನ್ನು ನಿರ್ಣಯಿಸಲು ಮತ್ತು ನೀವು ಅದನ್ನು ಭರಿಸಬಹುದೇ ಎಂದು ನಿರ್ಧರಿಸಲು ಸುಲಭವಾಗುತ್ತದೆ. ಇದಕ್ಕಾಗಿಯೇ ಇಎಂಐ ಕ್ಯಾಲ್ಕುಲೇಟರ್ ಎಂಬುದು ಹೋಮ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯ ಅನಿವಾರ್ಯ ಭಾಗವಾಗಿದೆ, ಏಕೆಂದರೆ ಇದು ನಿಖರವಾದ ಮಾಹಿತಿಯ ಆಧಾರದ ಮೇಲೆ ನಿಮಗೆ ಯೋಜನೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ನಿಮ್ಮ ಲೋನ್ ಅನ್ನು ಯೋಜಿಸುವಾಗ, ಹೋಮ್ ಲೋನ್ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುವ ಅಂಶಗಳನ್ನು ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ. ಇವುಗಳು ಆರ್‌ಬಿಐ ಪಾಲಿಸಿ ಮತ್ತು ಹಣದ ಪೂರೈಕೆಯನ್ನು ಒಳಗೊಂಡಿವೆ, ಆದರೆ ವೈಯಕ್ತಿಕವಾಗಿ, ನಿಮ್ಮ ಕ್ರೆಡಿಟ್ ರೇಟಿಂಗ್ ಕೂಡ ನಿಮಗೆ ನೀಡುವ ದರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೆಚ್ಚಿನ ಕ್ರೆಡಿಟ್ ಸ್ಕೋರ್ ರಿಯಾಯಿತಿ ದರ ಅಥವಾ ಉತ್ತಮ ಲೋನ್ ಡೀಲ್ ಅನ್ನು ಪಡೆಯಲು ನಿಮಗೆ ಸಹಾಯ ಮಾಡಬಹುದು.

ಹೋಮ್ ಲೋನ್ ಬಡ್ಡಿದರಗಳ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳು ಹೀಗಿವೆ:

  • ಆರ್‌ಬಿಐ ಪಾಲಿಸಿ: ಆರ್‌ಬಿಐ ಪಾಲಿಸಿಯಲ್ಲಿನ ಯಾವುದೇ ಬದಲಾವಣೆಗಳು ನಿಮ್ಮ ಹೋಮ್ ಲೋನ್ ಬಡ್ಡಿ ದರದಲ್ಲಿ ಬದಲಾವಣೆಯನ್ನು ತರುತ್ತವೆ. ಉದಾಹರಣೆಗೆ, ಎಂಸಿಎಲ್‌ಆರ್ ವ್ಯವಸ್ಥೆಯ ಇತ್ತೀಚಿನ ಪರಿಚಯದ ನಂತರ, ನೀವು ಈಗ ಒಂದು ದಿನಾಂಕವನ್ನು (ಸಾಮಾನ್ಯವಾಗಿ ಪ್ರತಿ 6 ತಿಂಗಳು ಅಥವಾ ಒಂದು ವರ್ಷ) ನಿಗದಿಸಿ, ಈ ಸಮಯದಲ್ಲಿ ನಿಮ್ಮ ಬಡ್ಡಿ ದರವನ್ನು ರಿಸೆಟ್ ಮಾಡಲಾಗುತ್ತದೆ. ಇದು ಬಡ್ಡಿದರಗಳ ಕುಸಿತದಿಂದ ತ್ವರಿತ ರೀತಿಯಲ್ಲಿ ಪ್ರಯೋಜನ ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.
     
  • ಕ್ರೆಡಿಟ್ ರೇಟಿಂಗ್: ನಿಮ್ಮ ಕ್ರೆಡಿಟ್ ರೇಟಿಂಗ್ ನಿಮ್ಮ ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸುತ್ತದೆ. ನಿಮ್ಮ ಸ್ಕೋರ್ ಹೆಚ್ಚಾಗಿದ್ದರೆ, ನಿಮಗೆ ಕ್ರೆಡಿಟ್ ಅರ್ಹತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಕಡಿಮೆ ಬಡ್ಡಿ ದರವನ್ನು ನೀಡಬಹುದು. ಅದೇ ರೀತಿ, ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ, ನೀವು ಹೆಚ್ಚಿನ ಅಪಾಯವನ್ನು ಹೊಂದಿರುವಂತೆ ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ, ಲೋನ್ ಸೌಲಭ್ಯವನ್ನು ಪಡೆಯಲು ನೀವು ಹೆಚ್ಚಿನ ಬಡ್ಡಿ ದರವನ್ನು ಪಾವತಿಸಬೇಕಾಗಬಹುದು.
     
  • ಹಣದ ಸರಬರಾಜು: ಹಣಕಾಸು ಸಂಸ್ಥೆಗಳು ಸಾಲ ನೀಡಲು ಹೆಚ್ಚು ಹಣವನ್ನು ಹೊಂದಿದ್ದಾಗ, ನೋಟು ಅಮಾನ್ಯೀಕರಣ ನಂತರದ ಸಂದರ್ಭದಲ್ಲಿ, ಅವರು ಕಡಿಮೆ ಹೌಸಿಂಗ್ ಲೋನ್ ಬಡ್ಡಿ ದರಗಳನ್ನು ನೀಡಬಹುದು. ಆದಾಗ್ಯೂ, ಆರ್ಥಿಕತೆಯಲ್ಲಿ ಹಣದ ಕೊರತೆ ಇದ್ದರೆ, ಅವರು ಮಂಜೂರಾತಿಯ ಮೇಲೆ ಹೆಚ್ಚಿನ ಬಡ್ಡಿ ದರವನ್ನು ವಿಧಿಸುವ ಸಾಧ್ಯತೆ ಇರುತ್ತದೆ. ಅಲ್ಲದೆ, ಲೋನ್‌ಗಳ ಬೇಡಿಕೆ ಹೆಚ್ಚಾದಾಗ ಅಥವಾ ಕಡಿಮೆಯಾದಾಗ, ಬಡ್ಡಿ ದರವೂ ಕೂಡ ಬದಲಾಗುತ್ತದೆ.

ಹೌಸಿಂಗ್ ಲೋನ್ ಮೇಲಿನ ಬಡ್ಡಿಯನ್ನು ಲೆಕ್ಕ ಹಾಕುವುದು ಹೇಗೆ?

ನಿಮ್ಮ ಲೋನಿನ ಮೇಲಿನ ಬಡ್ಡಿ ದರವನ್ನು ಲೆಕ್ಕ ಹಾಕಲು ನೀವು ಈ ಸರಳ ಸೂತ್ರವನ್ನು ಉಪಯೋಗಿಸಬಹುದು.

EMI = [P x R x (1+R)/\N]/ [(1+R)/\N-1]

ಈ ಸೂತ್ರದಲ್ಲಿ 'P' ಅಸಲನ್ನು ಪ್ರತಿನಿಧಿಸುತ್ತದೆ, N ಮಾಸಿಕ ಕಂತುಗಳ ಸಂಖ್ಯೆ ಮತ್ತು R ಮಾಸಿಕ ಆಧಾರದ ಮೇಲೆ ಬಡ್ಡಿ ದರವಾಗಿದೆ. ಇದನ್ನು ಮಾನ್ಯುಯಲ್ ಆಗಿ ಲೆಕ್ಕ ಹಾಕುವುದು ಕಷ್ಟಕರವಾಗಿರಬಹುದು ಮತ್ತು ದೋಷಗಳಿಗೆ ಒಳಗಾಗಬಹುದು, ಹೋಮ್ ಲೋನ್ ಬಡ್ಡಿ ಕ್ಯಾಲ್ಕುಲೇಟರ್ ಬಳಸುವ ಮೂಲಕ ನೀವು ನಿಮ್ಮ ಹೋಮ್ ಲೋನ್ ಬಡ್ಡಿ ದರವನ್ನು ಸುಲಭವಾಗಿ ಲೆಕ್ಕ ಹಾಕಬಹುದು.

ಬಜಾಜ್ ಫಿನ್‌ಸರ್ವ್‌ ಸೇರಿದಂತೆ ಹೆಚ್ಚಿನ ಸಾಲದಾತರು ತಮ್ಮ ವೆಬ್‌ಸೈಟ್‌ನಲ್ಲಿ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಒದಗಿಸುತ್ತಾರೆ. ಈ ಸುಲಭವಾದ ಟೂಲ್ ನಿಮಗೆ ಅಸಲು, ಬಡ್ಡಿ ದರ ಮತ್ತು ಅವಧಿಯನ್ನು ನಮೂದಿಸಲು ಅನುವು ಮಾಡಿಕೊಡುತ್ತದೆ. ನೀವು ಈ ಮೊತ್ತಗಳನ್ನು ಸರಿಹೊಂದಿಸಬಹುದು ಮತ್ತು ನಿಮ್ಮ ಇಎಂಐ ಮೌಲ್ಯವನ್ನು ನೋಡಬಹುದು. ಪ್ರಮುಖವಾಗಿ, ನೀವು ಪಾವತಿಸಬೇಕಾದ ಒಟ್ಟು ಬಡ್ಡಿ ಮತ್ತು ನೀವು ಮರುಪಾವತಿಸಬೇಕಾದ ಒಟ್ಟು ಮೊತ್ತವನ್ನು (ಬಡ್ಡಿ ಮತ್ತು ಅಸಲು) ನೋಡಬಹುದು.

ಅಲ್ಲದೆ, ಸ್ವಲ್ಪ ಹೆಚ್ಚಿನ ಇಎಂಐ ಗಳಿಗೆ ಬದಲಾಗಿ ನಿಮ್ಮ ಹೋಮ್ ಲೋನ್ ಮೇಲೆ ಕಡಿಮೆ ಬಡ್ಡಿಯನ್ನು ನೀವು ಹೇಗೆ ಪಾವತಿಸಬಹುದು ಎಂಬುದನ್ನು ನೋಡಲು ನೀವು ಕಾಲಾವಧಿಯನ್ನು ಕಡಿಮೆ ಮಾಡಬಹುದು. ಉದಾಹರಣೆಗೆ, ನೀವು ರೂ. 20 ಲಕ್ಷದ ಲೋನ್ ತೆಗೆದುಕೊಂಡರೆ, 115 ತಿಂಗಳಿಗೆ 11% ಬಡ್ಡಿ ದರದಲ್ಲಿ, ಪ್ರತಿ ಇಎಂಐ ರೂ. 28,212 ಆಗಿರುತ್ತದೆ ಮತ್ತು ನಿಮ್ಮ ಒಟ್ಟು ಬಡ್ಡಿ ಪಾವತಿಯು ರೂ. 12,44,389 ಆಗಿರುತ್ತದೆ.

ಮತ್ತೊಂದೆಡೆ, ನೀವು ಎಲ್ಲಾ ಮೌಲ್ಯಗಳನ್ನು ಸ್ಥಿರವಾಗಿರಿಸಿದರೂ ಅವಧಿಯನ್ನು 100 ತಿಂಗಳಿಗೆ ಕಡಿಮೆ ಮಾಡಿದರೆ, ನಿಮ್ಮ ಇಎಂಐ ರೂ. 30,633 ಆಗಿರುತ್ತದೆ ಮತ್ತು ನಿಮ್ಮ ಒಟ್ಟು ಬಡ್ಡಿ ಪಾವತಿಯು ರೂ. 10,63,350 ಆಗುತ್ತದೆ.

ಹೋಮ್ ಲೋನ್ ಬಡ್ಡಿಯ ಕ್ಯಾಲ್ಕುಲೇಟರ್‌ ಅನ್ನು ಉಪಯೋಗಿಸಿದರೆ ದೊರೆಯುವ ಪ್ರಯೋಜನಗಳ ತ್ವರಿತ ನೋಟವು ಇಲ್ಲಿದೆ.

  • ಹೋಮ್ ಲೋನಿನಲ್ಲಿ ಎಷ್ಟು ಬಡ್ಡಿಯನ್ನು ವಿಧಿಸಲಾಗಿದೆ ಎಂಬುದನ್ನು ನೋಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ.
  • ಇದು ನಿಮಗೆ ಸರಿಯಾದ ಅವಧಿಯನ್ನು ಆರಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಇದು ಲೋನ್ ನಿಮಗೆ ಅನುಕೂಲವಾಗುವಂತಿದೆಯೇ ಅಥವಾ ಇಲ್ಲವೇ ಎಂದು ತೋರಿಸುತ್ತದೆ.
  • ಮನೆ ಖರೀದಿಗಾಗಿ ನಿಮ್ಮ ಬಜೆಟ್ ಅನ್ನು ತೀರ್ಮಾನಿಸಲು ನಿಮಗೆ ಸಹಾಯ ಮಾಡುತ್ತದೆ.
  • ನಿಖರವಾದ ಹಾಗೂ ದೋಷ ರಹಿತ ಫಲಿತಾಂಶಗಳನ್ನು ನೀಡುತ್ತದೆ.

ಈ ಮಾಹಿತಿಯೊಂದಿಗೆ, ನಿಮ್ಮ ಹೋಮ್ ಲೋನ್ ಬಡ್ಡಿಯನ್ನು ಲೆಕ್ಕ ಹಾಕುವುದು ಹೇಗೆ ಎಂದು ಮಾತ್ರವಲ್ಲದೆ, ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ ಬಡ್ಡಿ ದರ ಮತ್ತು ಸಮಯದ ಮೇಲೆ ಪರಿಣಾಮ ಬೀರುವ ಅಂಶಗಳನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ