ಹೋಮ್ ಲೋನ್ ತಾತ್ಕಾಲಿಕ ಪ್ರಮಾಣಪತ್ರ ಎಂದರೇನು?

ಹೋಮ್ ಲೋನ್ ತಾತ್ಕಾಲಿಕ ಪ್ರಮಾಣಪತ್ರವು ಹೋಮ್ ಲೋನ್ ಮರುಪಾವತಿಯ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬಡ್ಡಿಯ ಸಾರಾಂಶ ಮತ್ತು ಹಣಕಾಸು ವರ್ಷದಲ್ಲಿ ಮರುಪಾವತಿಸಿದ ಅಸಲು ಮೊತ್ತವನ್ನು ಒಳಗೊಂಡಿರುವ ಸ್ಟೇಟ್ಮೆಂಟ್ ಆಗಿದೆ.

ನೀವು ಆ ವರ್ಷದಲ್ಲಿ ಪಾವತಿಸಬೇಕಾದ ಅಸಲು ಮತ್ತು ಬಡ್ಡಿ ಮೊತ್ತವನ್ನು ಸೂಚಿಸಲು ನಿಮ್ಮ ಸಾಲದಾತರು ಹಣಕಾಸು ವರ್ಷದ ಆರಂಭದಲ್ಲಿ ಹೋಮ್ ಲೋನ್ ಗಾಗಿ ತಾತ್ಕಾಲಿಕ ಪ್ರಮಾಣಪತ್ರ ನೀಡಬಹುದು.

ಹೋಮ್ ಲೋನ್ ತಾತ್ಕಾಲಿಕ ಪ್ರಮಾಣಪತ್ರವನ್ನು ಪಡೆಯುವುದು ಹೇಗೆ?

ಹೋಮ್ ಲೋನಿಗೆ ತಾತ್ಕಾಲಿಕ ಪ್ರಮಾಣಪತ್ರವನ್ನು ಪಡೆಯುವುದು ಸುಲಭ, ಏಕೆಂದರೆ ಹೆಚ್ಚಿನ ಸಾಲದಾತರು ತಮ್ಮ ಗ್ರಾಹಕರಿಗೆ ತಮ್ಮ ಹೋಮ್ ಲೋನ್ ವಿವರಗಳನ್ನು ಆನ್‌ಲೈನ್‌ನಲ್ಲಿ ಅಕ್ಸೆಸ್ ಮಾಡಲು ಅನುವು ಮಾಡಿಕೊಡುತ್ತಾರೆ. ಆದ್ದರಿಂದ, ನೀವು ಕೇವಲ ನಿಮ್ಮ ಸಾಲದಾತರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಅಥವಾ ಆ್ಯಪನ್ನು ಡೌನ್ಲೋಡ್ ಮಾಡಬೇಕು, ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ ಮತ್ತು ನಿಮ್ಮ ಹೋಮ್ ಲೋನ್ ಸ್ಟೇಟ್ಮೆಂಟ್, ಹೋಮ್ ಲೋನ್ ತಾತ್ಕಾಲಿಕ ಪ್ರಮಾಣಪತ್ರ ಮತ್ತು ಇತರ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಅಕ್ಸೆಸ್ ಮಾಡಬೇಕು.

ಬಜಾಜ್ ಫಿನ್‌ಸರ್ವ್‌ ಗ್ರಾಹಕರಿಗೆ, ಅದು ಎಕ್ಸ್‌ಪೀರಿಯ ಆ್ಯಪ್‌ನಲ್ಲಿ ಮಾನ್ಯವಾಗಿರುತ್ತದೆ.

ಹೋಮ್ ಲೋನ್ ತಾತ್ಕಾಲಿಕ ಪ್ರಮಾಣಪತ್ರದ ಬಳಕೆ ಏನು?

ಹೋಮ್ ಲೋನ್ ತೆರಿಗೆ ಕಡಿತಗಳಿಗಾಗಿ ನೀವು ತಾತ್ಕಾಲಿಕ ಪ್ರಮಾಣಪತ್ರವನ್ನು ಬಳಸಬಹುದು. ಅಸಲು ಮತ್ತು ಬಡ್ಡಿ ಮರುಪಾವತಿಗೆ ವಿವಿಧ ತೆರಿಗೆ ಕಡಿತಗಳಿವೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಮರುಪಾವತಿಸಿದ ಅಸಲಿನ ವಿರುದ್ಧ ನೀವು ನಿರ್ದಿಷ್ಟ ಮೊತ್ತವನ್ನು ಕ್ಲೈಮ್ ಮಾಡಬಹುದು. ಈ ವಿಭಾಗದ ಅಡಿಯಲ್ಲಿ, ನೀವು ನೋಂದಣಿ ಶುಲ್ಕ ಮತ್ತು ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳನ್ನು ಕಡಿತಗಳಾಗಿ ಕ್ಲೈಮ್ ಮಾಡಬಹುದು. ಅದೇ ರೀತಿ, ನೀವು ಸೆಕ್ಷನ್ 24 ಮತ್ತು ಸೆಕ್ಷನ್ 80EE/ 80EEA ಅಡಿಯಲ್ಲಿ ಮರುಪಾವತಿಸಿದ ಬಡ್ಡಿಯ ಭಾಗವನ್ನು ಕ್ಲೈಮ್ ಮಾಡಬಹುದು.

ಹೋಮ್ ಲೋನ್ ತೆರಿಗೆ ಪ್ರಯೋಜನಗಳನ್ನು ಯಶಸ್ವಿಯಾಗಿ ಪಡೆಯಲು, ನಿಮ್ಮ ಹೋಮ್ ಲೋನ್ ಪ್ರಮಾಣಪತ್ರ ಅಥವಾ ನಿಮ್ಮ ಆದಾಯವನ್ನು ಸಲ್ಲಿಸುವಾಗ ಹೋಮ್ ಲೋನ್ ತಾತ್ಕಾಲಿಕ ಪ್ರಮಾಣಪತ್ರವನ್ನು ಸಲ್ಲಿಸಿ.