ಫೋಟೋ

> >

ಕಾರ್ ಇನ್ಶೂರೆನ್ಸ್ ಆಗಾಗ ಕೇಳುವ ಪ್ರಶ್ನೆಗಳು

ಆಗಾಗ ಕೇಳುವ ಪ್ರಶ್ನೆಗಳು

ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಖರೀದಿಸುವುದು ಕಡ್ದಾಯವೇ?

ಹೌದು. ಭಾರತದ ರಸ್ತೆಗಳಲ್ಲಿ ಕಾರ್ ಇನ್ಶೂರೆನ್ಸ್ ಇಲ್ಲದೆ ಕಾರುಗಳನ್ನು ಓಡಿಸುವುದು ಕಾನೂನುಬಾಹಿರ.

ಖಾಸಗಿ ಮತ್ತು ಕಮರ್ಶಿಯಲ್ ವಾಹನಗಳೆರಡಕ್ಕೂ ಇನ್ಶೂರೆನ್ಸ್ ಅಗತ್ಯವಿದೆಯೇ?

ಹೌದು. ಖಾಸಗಿಯಾಗಿದ್ದರೂ ಅಥವಾ ಕಮರ್ಶಿಯಲ್ ಆಗಿದ್ದರೂ ಎಲ್ಲಾ ಕಾರುಗಳಿಗೂ ಇನ್ಶೂರೆನ್ಸ್ ಅಗತ್ಯವಿದೆ.

ನನ್ನ ಕಾರ್ ಆ್ಯಕ್ಸಿಡೆಂಟ್ ಆದಲ್ಲಿ ನಾನು ಏನು ಮಾಡಬೇಕು?

- ತಕ್ಷಣದ ಸುರಕ್ಷತಾ ಮುನ್ನೆಚ್ಚರಿಕೆಗಳಾದ ಆಂಬುಲೆನ್ಸ್ (ಅಗತ್ಯವಿದ್ದರೆ), ಪೊಲೀಸರಿಗೆ ಮಾಹಿತಿ ನೀಡಿ, ಮತ್ತು ಅಪಾಯದ ದೀಪಗಳನ್ನು ಬೆಳಗಿ.

- ಅಪಘಾತ ಸಮಯದಲ್ಲಿದ್ದ ಎಲ್ಲ ಡ್ರೈವರುಗಳು, ಪ್ಯಾಸೆಂಜರ್‌ಗಳು ಮತ್ತು ಸಾಕ್ಷಿಗಳು ಸೇರಿದಂತೆ ಪ್ರತಿಯೊಬ್ಬರ ವಿವರಗಳನ್ನು ಸಂಗ್ರಹಿಸಿ.

- ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಸಂಪರ್ಕಿಸಿ ಮತ್ತು ನಿಮ್ಮ ಕ್ಲೈಮ್ ಪ್ರಕ್ರಿಯೆಯನ್ನು ಪ್ರಾರಂಭಿಸಿ.

ನನ್ನ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನಾನು ಹೇಗೆ ಕಡಿಮೆ ಮಾಡಬಹುದು?

ಪ್ರೀಮಿಯಂ ಅನ್ನು ಕಡಿಮೆಗೊಳಿಸುವ ಕೆಲವು ವಿಧಾನಗಳು:

- ಮಾಸಿಕ ಪ್ರೀಮಿಯಂಗೆ ಬದಲಾಗಿ ವಾರ್ಷಿಕ ಪ್ರೀಮಿಯಂ ಅನ್ನು ಪಾವತಿಸಿ

- ಮಾರುಕಟ್ಟೆ ಅಧ್ಯಯನ ಮಾಡಿ ಮತ್ತು ಕೈಗೆಟಕುವ ಪಾಲಿಸಿ ಆರಿಸಿಕೊಳ್ಳಿ

- ಅಗತ್ಯವಿರುವ ಆ್ಯಡ್-ಆನ್‍ಗಳೊಂದಿಗೆ ಮಾತ್ರ ನಿಮ್ಮ ಪಾಲಿಸಿಯನ್ನು ರೂಪಿಸಿಕೊಳ್ಳಿ

ನನ್ನ ಕಾರು ಇನ್ಶೂರೆನ್ಸನ್ನು ನಾನು ಯಾವಾಗ ನವೀಕರಿಸಬಹುದು?

ನಿಮ್ಮ ಕಾರ್ ಇನ್ಶೂರೆನ್ಸನ್ನು ಆನಲೈನಿನಲ್ಲಿ ನವೀಕರಿಸಿ. ಎಕ್ಸ್‌ಪೈರಿ ದಿನಾಂಕದ ಮುಂಚಿತವಾಗಿ ನಿಮಗೆ ಸೂಚಿಸಲಾಗುವುದು, ಗ್ರೇಸ್ ಅವಧಿಗೆ ಮುನ್ನ ಅದನ್ನು ನವೀಕರಿಸಿ.

ನನ್ನ ಕಾರ್‌ಗೆ ನಾನು ಯಾವ ಪ್ರಮಾಣದ ಮೊತ್ತವನ್ನು ಇನ್ಶೂರ್ ಮಾಡಿಸಬಹುದು?

ನಿಮ್ಮ ಕಾರಿನ ಪ್ರಕಾರ, ಮಾದರಿ, ಲೋನ್ ಒಳಗೊಂಡಿರುವ ಹಲವಾರು ಅಂಶಗಳ ಆಧಾರದ ಮೇಲೆ ವಿಮೆಯ ಮೊತ್ತವನ್ನು ಲೆಕ್ಕಹಾಕಲಾಗುತ್ತದೆ. ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಅಗತ್ಯತೆಗಳು ಮತ್ತು ಪಾಲಿಸಿ ಪ್ರಕಾರವನ್ನು ಆಧರಿಸಿ ಕೋಟ್ ಕಸ್ಟಮೈಜ್ ಮಾಡುತ್ತವೆ.

ನೋ-ಕ್ಲೈಮ್ ಬೋನಸ್ (NCB) ಎಂದರೇನು?(NCB)?

ಇಡೀ ವರ್ಷದಲ್ಲಿ ನೀವು ಯಾವುದೇ ಕ್ಲೈಮ್ ಮಾಡದಿದ್ದರೆ, ನೀವು 20% ವರೆಗೆ ನೋ-ಕ್ಲೈಮ್ ಬೋನಸ್ ಪಡೆಯುತ್ತೀರಿ. ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ನಂತರದ ವರ್ಷದ ಪ್ರೀಮಿಯಂನಿಂದ ಇದು ಕಡಿತಗೊಳ್ಳುತ್ತದೆ.

ನನಗೆ ಕಾರ್ ಇನ್ಶೂರೆನ್ಸ್ ಏಕೆ ಬೇಕು?

ನೀವು ರಸ್ತೆಗಳಲ್ಲಿ ಚಾಲನೆ ಮಾಡುತ್ತಿದ್ದರೆ, ನೀವು ಕಾರ್ ಇನ್ಶೂರೆನ್ಸ್ ಹೊಂದಿರಬೇಕು. ಏಕೆಂದರೆ:

1. ಕಡ್ಡಾಯ ಕಾನೂನು: ಮೋಟಾರ್ ವಾಹನ ಕಾಯಿದೆ 1988 ಅಡಿಯಲ್ಲಿ, ಕಾರ್ ಇನ್ಶೂರೆನ್ಸ್ ಇಲ್ಲದೆ ಭಾರತೀಯ ರಸ್ತೆಗಳಲ್ಲಿ ಚಾಲನೆ ಮಾಡುವುದು ಕಾನೂನುಬಾಹಿರವಾಗಿದೆ.

2. ಅನಿರೀಕ್ಷಿತ ವೆಚ್ಚಗಳು: ಕಾರು ಅಪಘಾತವು ಒಂದು ಅನಿರೀಕ್ಷಿತ ಘಟನೆಯಾಗಿದ್ದು, ಭಾರಿ ಪ್ರಮಾಣದ ವೆಚ್ಚವನ್ನು ಉಂಟು ಮಾಡುತ್ತದೆ. ಕಾರಿನ ಇನ್ಶೂರೆನ್ಸ್ ಇಲ್ಲದಿರುವುದರಿಂದ ನಿಮ್ಮ ಉಳಿತಾಯವನ್ನು ಮತ್ತು ನಗದನ್ನು ಕಟ್ಟಿ ಹಾಕಬಹುದು.

3. ಮೂರನೇ ವ್ಯಕ್ತಿ ಹಾನಿಗಳು: ಡಿಕ್ಕಿಯ ಕಾರಣ ಬೇರೊಬ್ಬರ ಆಸ್ತಿ ಅಥವಾ ವಾಹನವನ್ನು ಹಾನಿ ಮಾಡುವುದು ನಿಮ್ಮನ್ನು ಸಂಕೀರ್ಣ ಪರಿಸ್ಥಿತಿಗೆ ದೂಡಬಹುದು. ನಿಮಗೆ ಕಾರಿನ ಇನ್ಶೂರೆನ್ಸ್ ಇದ್ದರೆ ನೀವು ಯಾವುದೇ ತೊಂದರೆಯಿಲ್ಲದೆ ಮೂರನೇ ವ್ಯಕ್ತಿ ಹಾನಿಗಳಿಗೆ ಪರಿಹಾರವನ್ನು ಪಡೆಯಬಹುದು.

ಜನರು ಇವನ್ನೂ ಪರಿಗಣಿಸಿದ್ದಾರೆ

ಹೆಲ್ತ್ ಇನ್ಶೂರೆನ್ಸ್

ತಿಳಿಯಿರಿ

ಹೆಲ್ತ್ ಇನ್ಶೂರೆನ್ಸ್ - ವೈದ್ಯಕೀಯ ತುರ್ತು ಅಗತ್ಯತೆಗಳಿಂದ ಉಂಟಾಗುವ ವೆಚ್ಚಗಳಿಂದ ರಕ್ಷಣೆ

ಅಪ್ಲೈ
ಲೈಫ್ ಇನ್ಶೂರೆನ್ಸ್

ತಿಳಿಯಿರಿ

ಲೈಫ್ ಇನ್ಶೂರೆನ್ಸ್ - ವೈದ್ಯಕೀಯ ತುರ್ತಿನಿಂದಾಗಿ ಉಂಟಾದ ಖರ್ಚುಗಳ ಮೇಲೆ ರಕ್ಷಣೆ

ಅಪ್ಲೈ
ಟ್ರಾವೆಲ್ ಇನ್ಶೂರೆನ್ಸ್

ತಿಳಿಯಿರಿ

ಟ್ರಾವೆಲ್ ಇನ್ಶೂರೆನ್ಸ್ - ಅಪಘಾತ, ಬ್ಯಾಗೇಜ್ ಕಳವು ಮತ್ತು ಟ್ರಿಪ್ ರದ್ದುಗಳ ಮೇಲೆ ನಿಮ್ಮ ಟ್ರಿಪ್ ಅನ್ನು ಇನ್ಶೂರ್ ಮಾಡಿ

ಅಪ್ಲೈ
ಟೂ ವೀಲರ್ ಇನ್ಶೂರೆನ್ಸ್

ತಿಳಿಯಿರಿ

ದ್ವಿ ಚಕ್ರ ವಾಹನ ಇನ್ಶೂರೆನ್ಸ್ -ನಿಮ್ಮ ದ್ವಿ ಚಕ್ರ ವಾಹನಕ್ಕೆ ಸಮಗ್ರ ಇನ್ಶೂರೆನ್ಸ್

ಅಪ್ಲೈ