ಹೋಮ್ ಲೋನ್ EMI ಎಂದರೇನು?
EMI (ಸಮಾನ ಮಾಸಿಕ ಕಂತು) ಎಂದರೆ ನೀವು ನಿಮ್ಮ ಹೋಮ್ ಲೋನನ್ನು ಮರುಪಾವತಿಸಲು ಮಾಡುವ ಮಾಸಿಕ ಪಾವತಿಯಾಗಿದೆ. EMI ಅನ್ನು ವಿವಿಧ ಅನುಪಾತಗಳಲ್ಲಿ ಬಡ್ಡಿ ಮತ್ತು ಅಸಲಿನಿಂದ ಮಾಡಲಾಗುತ್ತದೆ. ನೀವು ಹೋಮ್ ಲೋನ್ ತೆಗೆದುಕೊಂಡಾಗ, ಸಂಪೂರ್ಣ ಲೋನ್ ಕ್ಲಿಯರ್ ಆಗುವವರೆಗೆ ನೀವು ಪ್ರತಿ ತಿಂಗಳು ಅಸಲು ಮತ್ತು ಬಡ್ಡಿಯ ಒಂದು ಭಾಗವನ್ನು ಪಾವತಿಸುತ್ತೀರಿ.
ಹೋಮ್ ಲೋನ್ EMI ಅನ್ನು ಲೆಕ್ಕ ಹಾಕುವ ಫಾರ್ಮುಲಾ:
ಇದಕ್ಕಾಗಿ ಸಾಲದಾತರು ಸಾಮಾನ್ಯವಾಗಿ ಈ ಕೆಳಗಿನ EMI ಲೆಕ್ಕಾಚಾರದ ಫಾರ್ಮುಲಾವನ್ನು ಬಳಸುತ್ತಾರೆ –
EMI = [P x I x (1+I)N]/ [(1+I)N-1]
ಎಲ್ಲಿ,
P – ಅಸಲು ಅಂದರೆ ಲೋನ್ ಮೊತ್ತ
I – ಪ್ರತಿ ತಿಂಗಳ ಬಡ್ಡಿ ದರ
N – ಕಂತುಗಳ ಸಂಖ್ಯೆ
ಹೋಮ್ ಲೋನ್ EMI ಅನ್ನು ಹೇಗೆ ಲೆಕ್ಕ ಹಾಕುವುದು?
1.ಲೋನ್ ಮೊತ್ತ, ಪ್ರತಿ ತಿಂಗಳ ಬಡ್ಡಿ ದರ ಮತ್ತು ಕಂತುಗಳ ನಂಬರನ್ನು ಮೇಲಿನ ಫಾರ್ಮುಲಾದಲ್ಲಿ ಹಾಕಿ.
2. ವಾರ್ಷಿಕ ಬಡ್ಡಿ ದರವನ್ನು 100 ರಿಂದ ಭಾಗಿಸುವ ಮೂಲಕ ಪ್ರತಿ ತಿಂಗಳ ಬಡ್ಡಿ ದರವನ್ನು ಲೆಕ್ಕ ಹಾಕಬಹುದು.
3. EMI ಅನ್ನು ಪಡೆಯಲು ಜಾಗರೂಕತೆಯಿಂದ ಲೆಕ್ಕ ಹಾಕಿ.
ಉದಾಹರಣೆ:
ಅಜಯ್ ಬಕ್ಷಿಗೆ 10 ವರ್ಷಗಳ ಅವಧಿಗೆ ವಾರ್ಷಿಕ 9.5% ಬಡ್ಡಿ ದರದಲ್ಲಿ ರೂ. 25 ಲಕ್ಷ ಹೋಮ್ ಲೋನ್ ಬೇಕಾಗಿದೆ. ಹಾಗಾದರೆ EMI ಅನ್ನು ಕೆಳಗಿನಂತೆ ಲೆಕ್ಕ ಹಾಕಬಹುದು:
ಇಲ್ಲಿ,
P = ರೂ. 25,00,000
I = 9.5/ (12 x 100) = 0.0079
N = 10 ವರ್ಷಗಳು = 120 ತಿಂಗಳು
EMI = [25,00,000 x 0.0079 x (1+0.0079)120/ (1+0.0079)120 -1 = ರೂ. 32329*
*ಈ ಮೌಲ್ಯವು ಪ್ರಕ್ರಿಯೆ ಶುಲ್ಕವನ್ನು ಒಳಗೊಳ್ಳುವುದಿಲ್ಲ
ನೀವು ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಬಹುದು
ಹೋಮ್ ಲೋನ್ EMI ಕ್ಯಾಲ್ಕುಲೇಟರ್ ನಿಮ್ಮ ಮಾಸಿಕ ಹೋಮ್ ಲೋನ್ EMI ಗಳನ್ನು ಲೆಕ್ಕ ಹಾಕಲು.