ಬೆಂಗಳೂರಿನಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡುವಾಗ ಮತ್ತು ನೀವು ಬಯಸಿದ ಆಸ್ತಿ ಕೊಳ್ಳುವಾಗ ಅಲ್ಲಿನ ಸ್ಟ್ಯಾಂಪ್ ಡ್ಯೂಟಿ ದರಗಳು ಮತ್ತು ಆಸ್ತಿ ನೋಂದಣಿ ಶುಲ್ಕಗಳ ಬಗ್ಗೆ ನೀವು ತಿಳಿದುಕೊಂಡಿರಬೇಕು. ನೋಂದಣಿ ಶುಲ್ಕವು ಆಸ್ತಿ ಮೌಲ್ಯದ 1% ರಷ್ಟು ಮತ್ತು BBMP ಸ್ಟ್ಯಾಂಪ್ ಡ್ಯೂಟಿಯ 10% ರಷ್ಟು ಇರುತ್ತದೆ, ಗ್ರಾಮೀಣ ಭಾಗಗಳು ಮತ್ತು BMRDA ಗೆ ಸೆಸ್ ಸೇರಿಸಲಾಗುತ್ತದೆ. ಸ್ಟ್ಯಾಂಪ್ ಡ್ಯೂಟಿಯು ಆಸ್ತಿ ಮೌಲ್ಯದ 5-6% ರಷ್ಟು ಇರುತ್ತದೆ. ಸ್ಟ್ಯಾಂಪ್ ಡ್ಯೂಟಿಯ 3% ರಷ್ಟು BMRDA ಮತ್ತು ಇತರ ಮೇಲ್ತೆರಿಗೆ ಆಗಿರುತ್ತವೆ ಮತ್ತು ಸ್ಟ್ಯಾಂಪ್ ಡ್ಯೂಟಿಯ 2% ರಷ್ಟು BBMP ಮತ್ತು ಕಾರ್ಪೋರೇಶನ್ನಿನ ಹೆಚ್ಚುವರಿ ಮೇಲ್ತೆರಿಗೆಗಳಾಗಿರುತ್ತವೆ.
ಬೆಂಗಳೂರಿನಲ್ಲಿ ಸ್ಟ್ಯಾಂಪ್ ಡ್ಯೂಟಿಯನ್ನು ಹಲವಾರು ಅಂಶಗಳಿಂದ ತೀರ್ಮಾನಿಸಲಾಗುತ್ತದೆ. ಅವು ಆಸ್ತಿ ವಯಸ್ಸು, ಮಾಲೀಕರ ಲಿಂಗ, ಆಸ್ತಿ ಮಾಲೀಕರ ವಯಸ್ಸು, ಜಾಗ, ಆಸ್ತಿಯಲ್ಲಿ ದೊರೆಯುವ ಸವಲತ್ತುಗಳು, (ಸವಲತ್ತು ಹೆಚ್ಚಾದಂತೆ ಹೆಚ್ಚಿನ ಸ್ಟ್ಯಾಂಪ್ ಡ್ಯೂಟಿ) ಮತ್ತು ಅದರ ಉದ್ದೇಶವೇನೆಂದರೆ ವಸತಿ ಅಥವಾ ಕಮರ್ಷಿಯಲ್ (ಇವುಗಳಿಗೆ ವಸತಿ ಆಸ್ತಿಗಳಿಗಿಂತ ಹೆಚ್ಚಿನ ಸ್ಟ್ಯಾಂಪ್ ಡ್ಯೂಟಿ ಇರುತ್ತದೆ). ನಮ್ಮ ಬಳಸಲು ಸುಲಭವಾದ ಸ್ಟ್ಯಾಂಪ್ ಡ್ಯೂಟಿ ಕ್ಯಾಲ್ಕುಲೇಟರ್ ಮೂಲಕ ಸ್ಟ್ಯಾಂಪ್ ಡ್ಯೂಟಿ ಮತ್ತು ಆಸ್ತಿ ನೋಂದಣಿ ಶುಲ್ಕಗಳನ್ನು ಲೆಕ್ಕ ಹಾಕಿ.
ಇದನ್ನೂ ಓದಿ': ಹೋಮ್ ಲೋನ್ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನೂ ಕವರ್ ಮಾಡುತ್ತದೆಯೇ?