ಮೈ ಅಕೌಂಟಿನಲ್ಲಿ ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ನಿರ್ವಹಿಸಿ

ಮೈ ಅಕೌಂಟಿನಲ್ಲಿ ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ನಿರ್ವಹಿಸಿ

ನಮ್ಮ ಗ್ರಾಹಕ ಪೋರ್ಟಲ್‌ನಲ್ಲಿ ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಟ್ರ್ಯಾಕ್ ಮಾಡಿ

ಫಿಕ್ಸೆಡ್ ಡೆಪಾಸಿಟ್ ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದ್ದು ಅದು ನಿಮಗೆ ಪೂರ್ವ-ನಿರ್ಧರಿತ ಅವಧಿಗೆ ಒಟ್ಟು ಮೊತ್ತವನ್ನು ಹೂಡಿಕೆ ಮಾಡಲು ಅನುಮತಿಸುತ್ತದೆ ಮತ್ತು ಸುರಕ್ಷಿತ ಆದಾಯವನ್ನು ನೀಡುತ್ತದೆ.

ಆದಾಗ್ಯೂ, ನಿಮ್ಮ ಹೂಡಿಕೆ ಮಾಡಿದ ಮೊತ್ತದ ಮೇಲೆ ನೀವು ಪಡೆದ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗಳನ್ನು ನಿರ್ವಹಿಸುವುದು ಮುಖ್ಯವಾಗಿದೆ.

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಅತ್ಯಧಿಕ ಸುರಕ್ಷತೆ ಮತ್ತು ವಿಶ್ವಾಸಾರ್ಹತಾ ರೇಟಿಂಗ್‌ಗಳನ್ನು ಹೊಂದಿದೆ, ಇದು ನಿಮ್ಮ ಹೂಡಿಕೆ ಮಾಡಿದ ಮೊತ್ತವನ್ನು ನಮ್ಮೊಂದಿಗೆ ಸುರಕ್ಷಿತವಾಗಿರಿಸುವುದನ್ನು ಖಚಿತಪಡಿಸುತ್ತದೆ. ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡಲು ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್‌ನಲ್ಲಿ ನಾವು ಅನೇಕ ಸ್ವಯಂ-ಸೇವಾ ಆಯ್ಕೆಗಳನ್ನು ಒದಗಿಸುತ್ತೇವೆ.

ಪ್ರಾರಂಭಿಸಲು ಮತ್ತು ಕೆಳಗೆ ನಮೂದಿಸಿದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಸೈನ್-ಇನ್ ಮಾಡಿ:

 • Track your FD details

  ನಿಮ್ಮ ಎಫ್‌ಡಿ ವಿವರಗಳನ್ನು ಟ್ರ್ಯಾಕ್ ಮಾಡಿ

  ನಿಮ್ಮ ಮೆಚ್ಯೂರಿಟಿ ದಿನಾಂಕ, ಬಡ್ಡಿ ದರ, ಕಾಲಾವಧಿ, ಬ್ಯಾಂಕ್ ಅಕೌಂಟ್ ವಿವರಗಳು ಮತ್ತು ಇನ್ನೂ ಹೆಚ್ಚಿನದನ್ನು ಪರಿಶೀಲಿಸಿ.

 • Renew your fixed deposit

  ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ನವೀಕರಿಸಿ

  ಕೆಲವೇ ಕ್ಲಿಕ್‌ಗಳಲ್ಲಿ ಚಾಲ್ತಿಯಲ್ಲಿರುವ ಬಡ್ಡಿ ದರದಲ್ಲಿ ಆದಾಯವನ್ನು ಹೆಚ್ಚಿಸಲು ಮರುಹೂಡಿಕೆ ಮಾಡಿ.

 • Download your FD receipt

  ನಿಮ್ಮ ಎಫ್‌ಡಿ ರಶೀದಿಯನ್ನು ಡೌನ್ಲೋಡ್ ಮಾಡಿ

  ನಿಮ್ಮ ಫಿಕ್ಸೆಡ್ ಡೆಪಾಸಿಟ್ ರಶೀದಿ, ಅಕೌಂಟ್ ಸ್ಟೇಟ್ಮೆಂಟ್ ಮತ್ತು ಇತರ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಸುಲಭವಾಗಿ ನೋಡಿ.

 • Manage your nominee

  ನಿಮ್ಮ ನಾಮಿನಿಯನ್ನು ನಿರ್ವಹಿಸಿ

  ಸುಲಭವಾದ ಆನ್ಲೈನ್ ಪ್ರಕ್ರಿಯೆಯ ಮೂಲಕ ಕೆಲವೇ ಹಂತಗಳಲ್ಲಿ ನಿಮ್ಮ ಎಫ್‌ಡಿ ನಾಮಿನಿಯನ್ನು ಸೇರಿಸಿ ಅಥವಾ ಅಪ್ಡೇಟ್ ಮಾಡಿ.

 • Manage your bank account

  ನಿಮ್ಮ ಬ್ಯಾಂಕ್ ಅಕೌಂಟನ್ನು ನಿರ್ವಹಿಸಿ

  ತೊಂದರೆ ರಹಿತ ಪ್ರಕ್ರಿಯೆಯಲ್ಲಿ ನಿಮ್ಮ ಎಫ್‌ಡಿ ಮೆಚ್ಯೂರಿಟಿ ಬ್ಯಾಂಕ್ ಅಕೌಂಟ್ ವಿವರಗಳನ್ನು ಬದಲಾಯಿಸಿ.

 • Apply for a TDS waiver

  ಟಿಡಿಎಸ್ ಮನ್ನಾಕ್ಕಾಗಿ ಅಪ್ಲೈ ಮಾಡಿ

  ಬ್ರಾಂಚ್‌ಗೆ ಭೇಟಿ ಮಾಡದೆ ನಿಮ್ಮ ಫಾರ್ಮ್ 15ಜಿ/ಎಚ್ ಸಲ್ಲಿಸಿ ಮತ್ತು ಟಿಡಿಎಸ್ ಮನ್ನಾಕ್ಕಾಗಿ ಅಪ್ಲೈ ಮಾಡಿ.

 • Get a loan against your fixed deposit

  ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೇಲೆ ಲೋನ್ ಪಡೆಯಿರಿ

  ಕಡಿಮೆ ಬಡ್ಡಿ ದರದಲ್ಲಿ ಹಣವನ್ನು ಸಾಲ ಪಡೆಯಲು ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ಅಡಮಾನವಾಗಿ ಬಳಸಿ.

 • Withdraw your FD prematurely

  ನಿಮ್ಮ ಎಫ್‌ಡಿಯನ್ನು ಮೆಚ್ಯೂರಿಟಿಗೆ ಮುಂಚಿತವಾಗಿ ವಿತ್‌ಡ್ರಾ ಮಾಡಿ

  ಮೆಚ್ಯೂರಿಟಿ ದಿನಾಂಕಕ್ಕಿಂತ ಮೊದಲು ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ವಿತ್‌ಡ್ರಾ ಮಾಡಲು ಆನ್ಲೈನಿನಲ್ಲಿ ಕೋರಿಕೆಯನ್ನು ಸಲ್ಲಿಸಿ.

 • Submit FATCA declaration

  ಎಫ್ಎಟಿಸಿಎ ಘೋಷಣೆಯನ್ನು ಸಲ್ಲಿಸಿ

  ಕೆಲವೇ ಕ್ಲಿಕ್‌ಗಳಲ್ಲಿ ಎಫ್ಎಟಿಸಿಎ ಘೋಷಣೆಯನ್ನು ಸುಲಭವಾಗಿ ಆನ್ಲೈನಿನಲ್ಲಿ ಸಲ್ಲಿಸುವುದು.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ನಿಮ್ಮ ಫಿಕ್ಸೆಡ್ ಡೆಪಾಸಿಟ್ ವಿವರಗಳನ್ನು ನೋಡಿ

ನೀವು ನಮ್ಮೊಂದಿಗೆ ಫಿಕ್ಸೆಡ್ ಡೆಪಾಸಿಟ್ ಬುಕ್ ಮಾಡಿದಾಗ, ನೀವು ಎಫ್‌ಡಿ ನಂಬರ್ ಎಂದು ಕರೆಯಲ್ಪಡುವ ವಿಶಿಷ್ಟ ನಂಬರ್ ನಿಯೋಜಿಸಲಾಗುತ್ತದೆ. ನಿಮ್ಮ ಎಫ್‌ಡಿ ನಂಬರ್ ಮೆಚ್ಯೂರಿಟಿ ಮೊತ್ತ, ಬಡ್ಡಿ ದರ, ಮೆಚ್ಯೂರಿಟಿ ದಿನಾಂಕ, ಬ್ಯಾಂಕ್ ವಿವರಗಳು ಮತ್ತು ನಾಮಿನಿ ವಿವರಗಳಂತಹ ನಿಮ್ಮ ಫಿಕ್ಸೆಡ್ ಡೆಪಾಸಿಟ್ ವಿವರಗಳನ್ನು ಟ್ರ್ಯಾಕ್ ಮಾಡಲು ನಿಮಗೆ ಸಹಾಯ ಮಾಡುತ್ತದೆ.

ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ಈ ಎಲ್ಲಾ ವಿವರಗಳನ್ನು ಮತ್ತು ಇನ್ನೂ ಹೆಚ್ಚಿನದನ್ನು ಪರಿಶೀಲಿಸಬಹುದು.

 • Check your fixed deposit details

  ನಿಮ್ಮ ಫಿಕ್ಸೆಡ್ ಡೆಪಾಸಿಟ್ ವಿವರಗಳನ್ನು ಪರಿಶೀಲಿಸಿ

  ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಎಫ್‌ಡಿ ಮೆಚ್ಯೂರಿಟಿ ದಿನಾಂಕ, ಬಡ್ಡಿ ದರ, ಮೆಚ್ಯೂರಿಟಿ ಮೊತ್ತ ಮತ್ತು ಇನ್ನೂ ಮುಂತಾದವನ್ನು ಪರಿಶೀಲಿಸಬಹುದು:

  • ಈ ಪುಟದಲ್ಲಿನ 'ಸೈನ್-ಇನ್' ಬಟನ್ ಕ್ಲಿಕ್ ಮಾಡುವ ಮೂಲಕ ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಿ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಸೈನ್-ಇನ್ ಮಾಡಲು ಒಟಿಪಿ ಸಲ್ಲಿಸಿ.
  • 'ನನ್ನ ಸಂಬಂಧಗಳು' ವಿಭಾಗದಿಂದ, ನೀವು ವಿವರಗಳನ್ನು ನೋಡಲು ಬಯಸುವ ಫಿಕ್ಸೆಡ್ ಡೆಪಾಸಿಟ್ ಅನ್ನು ಆಯ್ಕೆಮಾಡಿ.
  • ಎಫ್‌ಡಿ ನಂಬರ್, ಕಾಲಾವಧಿ, ಬಡ್ಡಿ ದರ ಮುಂತಾದ ವಿವರಗಳನ್ನು ಹುಡುಕಿ.


  'ನಿಮ್ಮ ಎಫ್‌ಡಿ ವಿವರಗಳನ್ನು ನೋಡಿ' ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಫಿಕ್ಸೆಡ್ ಡೆಪಾಸಿಟ್ ವಿವರಗಳನ್ನು ಕೂಡ ಪರಿಶೀಲಿಸಬಹುದು’. 'ಮೈ ಅಕೌಂಟ್‌ಗೆ' ಸೈನ್-ಇನ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ, ಅಲ್ಲಿ ನೀವು ಎಫ್‌ಡಿಯನ್ನು ಆಯ್ಕೆ ಮಾಡಬಹುದು ಮತ್ತು ವಿವರಗಳನ್ನು ಹುಡುಕಬಹುದು.

  ನಿಮ್ಮ ಎಫ್‌ಡಿ ವಿವರಗಳನ್ನು ನೋಡಿ

 • ನಾಮಿನಿ, ಬ್ಯಾಂಕ್ ಅಕೌಂಟ್ ಅಥವಾ ಜಂಟಿ ಅಕೌಂಟ್ ಹೋಲ್ಡರ್‌ನಂತಹ ನಿಮ್ಮ ಎಫ್‌ಡಿ ವಿವರಗಳನ್ನು ಅಪ್ಡೇಟ್ ಮಾಡಲು ನೀವು ಬಯಸಿದರೆ, ಈ ಪುಟದ ಮೇಲ್ಭಾಗದಲ್ಲಿರುವ ಆಯಾ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ
 • ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಪರಿಶೀಲಿಸಿ

  ಎರಡು ಸರಳ ಹಂತಗಳಲ್ಲಿ ನಮ್ಮ ಗ್ರಾಹಕ ಪೋರ್ಟಲ್‌ಗೆ ಸೈನ್-ಇನ್ ಮಾಡಿ ಮತ್ತು ನಿಮ್ಮ ಎಫ್‌ಡಿ ವಿವರಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಿ

ನಿಮ್ಮ ಎಫ್‌ಡಿ ನವೀಕರಣವನ್ನು ನಿರ್ವಹಿಸಿ

ನೀವು ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಿದಾಗ, ಪೂರ್ವ-ನಿರ್ಧರಿತ ಅವಧಿಗೆ ಅದರ ಮೇಲೆ ಬಡ್ಡಿಯನ್ನು ಗಳಿಸಲು ನಿಮ್ಮ ಹಣವನ್ನು ನೀವು ಕೂಡಿಡುತ್ತೀರಿ. ನಿಮ್ಮ ಎಫ್‌ಡಿ ಮೆಚ್ಯೂರ್ ಆದ ನಂತರ, ನೀವು ಒಟ್ಟುಗೂಡಿಸಿದ ಎಫ್‌ಡಿಯನ್ನು ಆಯ್ಕೆ ಮಾಡಿದ್ದರೆ, ನೀವು ಸಂಗ್ರಹಿಸಿದ ಬಡ್ಡಿಯೊಂದಿಗೆ ನಿಮ್ಮ ಹೂಡಿಕೆ ಮಾಡಿದ ಫಂಡ್‌ಗಳನ್ನು ಪಡೆಯುತ್ತೀರಿ. ಆದಾಗ್ಯೂ, ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೆಚ್ಯೂರ್ ಆದ ನಂತರ, ನೀವು ಒಟ್ಟುಗೂಡಿಸದ ಎಫ್‌ಡಿ ಯನ್ನು ಆಯ್ಕೆ ಮಾಡಿದ್ದರೆ, ನೀವು ಆಯ್ಕೆ ಮಾಡಿದ ಪಾವತಿ ಆಯ್ಕೆಯ ಪ್ರಕಾರ ಅಸಲು ಮತ್ತು ಬಡ್ಡಿ ಮೊತ್ತವನ್ನು ಪಡೆಯುತ್ತೀರಿ.

ನಿಮ್ಮ ಉಳಿತಾಯವನ್ನು ಹೆಚ್ಚಿಸಲು ನಿಮ್ಮ ಹೂಡಿಕೆ ಮಾಡಿದ ಮೊತ್ತದ ಮೇಲೆ ಹೆಚ್ಚಿನ ಬಡ್ಡಿಯನ್ನು ಗಳಿಸಲು ನೀವು ಬಯಸಿದರೆ, ನಿಮ್ಮ ಫಿಕ್ಸೆಡ್ ಡೆಪಾಸಿಟ್ ನವೀಕರಣವನ್ನು ನೀವು ಆಯ್ಕೆ ಮಾಡಬಹುದು. ಬಜಾಜ್ ಫೈನಾನ್ಸ್ ಲಿಮಿಟೆಡ್ ನವೀಕರಣ ಯೋಜನೆ - ನೀವು ಮರುಹೂಡಿಕೆ ಮಾಡಲು ಬಯಸುವ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡುವ ಫ್ಲೆಕ್ಸಿಬಿಲಿಟಿಯನ್ನು ಒದಗಿಸುತ್ತದೆ. ಮೆಚ್ಯೂರಿಟಿ ದಿನಾಂಕಕ್ಕಿಂತ 24 ಗಂಟೆಗಳ ಮೊದಲು ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ನೀವು ನವೀಕರಿಸಬಹುದು.

 • Renew your fixed deposits in My Account

  ಮೈ ಅಕೌಂಟಿನಲ್ಲಿ ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗಳನ್ನು ನವೀಕರಿಸಿ

  ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಅನ್ನು ಕೆಲವೇ ಕ್ಲಿಕ್‌ಗಳಲ್ಲಿ ನವೀಕರಿಸಬಹುದು.

  • ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ನನ್ನ ಅಕೌಂಟಿಗೆ ಭೇಟಿ ನೀಡಿ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಸೈನ್-ಇನ್ ಮಾಡಲು ಒಟಿಪಿ ಸಲ್ಲಿಸಿ.
  • 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಫಿಕ್ಸೆಡ್ ಡೆಪಾಸಿಟ್ ಆಯ್ಕೆಮಾಡಿ.
  • 'ತ್ವರಿತ ಕ್ರಮಗಳು' ವಿಭಾಗದಿಂದ 'ನಿಮ್ಮ ಎಫ್‌ಡಿ ನವೀಕರಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಅಸ್ತಿತ್ವದಲ್ಲಿರುವ ಎಫ್‌ಡಿ ವಿವರಗಳನ್ನು ಪರಿಶೀಲಿಸಿ ಮತ್ತು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.
  • ಮೊತ್ತ, ಕಾಲಾವಧಿ ಮತ್ತು ನವೀಕರಣ ಆಯ್ಕೆಯಂತಹ ನವೀಕರಣ ಯೋಜನೆಯ ವಿವರಗಳನ್ನು ಆಯ್ಕೆಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯೊಂದಿಗೆ ನಿಮ್ಮ ವಿವರಗಳನ್ನು ಪರಿಶೀಲಿಸಿ ಮತ್ತು ನವೀಕರಣದೊಂದಿಗೆ ಮುಂದುವರಿಯಿರಿ.


  ಮೈ ಅಕೌಂಟಿಗೆ ಸೈನ್-ಇನ್ ಮಾಡಲು ಈ ಕೆಳಗಿನ 'ನಿಮ್ಮ ಫಿಕ್ಸೆಡ್ ಡೆಪಾಸಿಟ್ ನವೀಕರಿಸಿ' ಟೆಕ್ಸ್ಟ್ ಮೇಲೆ ಕ್ಲಿಕ್ ಮಾಡಬಹುದು. ನಂತರ, ನಿಮ್ಮ ಫಿಕ್ಸೆಡ್ ಡೆಪಾಸಿಟ್ ಆಯ್ಕೆಮಾಡಿ, 'ತ್ವರಿತ ಕ್ರಮಗಳು' ವಿಭಾಗದಿಂದ 'ನಿಮ್ಮ ಎಫ್‌ಡಿ ನವೀಕರಿಸಿ' ಮೇಲೆ ಕ್ಲಿಕ್ ಮಾಡಿ, ನಿಮ್ಮ ನವೀಕರಣ ಯೋಜನೆಯನ್ನು ಆಯ್ಕೆಮಾಡಿ ಮತ್ತು ಮುಂದುವರಿಯಿರಿ.

  ನಿಮ್ಮ ಎಫ್‌ಡಿ ಜಂಟಿ ಅಕೌಂಟ್ ಹೋಲ್ಡರ್ ಹೊಂದಿದ್ದರೆ, ಜಂಟಿ ಅಕೌಂಟ್ ಹೋಲ್ಡರ್‌ಗಳ ನೋಂದಾಯಿತ ಮೊಬೈಲ್ ನಂಬರಿಗೆ ಕೂಡ ಒಟಿಪಿಯನ್ನು ಕಳುಹಿಸಲಾಗುತ್ತದೆ. ಆದಾಗ್ಯೂ, ನವೀಕರಣದ ಕೋರಿಕೆಯನ್ನು ಪ್ರಾಥಮಿಕ ಅಕೌಂಟ್ ಹೋಲ್ಡರ್ ಆರಂಭಿಸಬೇಕು.

  ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ನವೀಕರಿಸಿ

 • ಚಾಲ್ತಿಯಲ್ಲಿರುವ ಬಡ್ಡಿ ದರಗಳನ್ನು ಹೆಚ್ಚಿಸಲು ನೀವು ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗಳನ್ನು ನವೀಕರಿಸಬಹುದು. ಬಜಾಜ್ ಫೈನಾನ್ಸ್ ಲಿಮಿಟೆಡ್ 8.60% ವರೆಗಿನ ಸುರಕ್ಷಿತ ಲಾಭವನ್ನು ಒದಗಿಸುತ್ತದೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ನಿಮ್ಮ ಎಫ್‌ಡಿ ರಶೀದಿಯನ್ನು ನೋಡುವುದು ಹೇಗೆ

ನಿಮ್ಮ ಫಿಕ್ಸೆಡ್ ಡೆಪಾಸಿಟ್ ರಶೀದಿಯನ್ನು ನೋಡಿ

ನೀವು ನಮ್ಮಲ್ಲಿ ಎಫ್‌ಡಿ ಬುಕ್ ಮಾಡಿದ ನಂತರ ಫಿಕ್ಸೆಡ್ ಡೆಪಾಸಿಟ್ ರಶೀದಿಯನ್ನು (ಎಫ್‌ಡಿಆರ್) ನೀಡಲಾಗುತ್ತದೆ. ಈ ಎಫ್‌ಡಿಆರ್ ನ ಫಿಸಿಕಲ್ ಪ್ರತಿಯನ್ನು ನಿಮ್ಮ ನೋಂದಾಯಿತ ವಿಳಾಸಕ್ಕೆ ಕೂಡ ಕಳುಹಿಸಲಾಗುತ್ತದೆ.

 • Download your fixed deposit receipt

  ನಿಮ್ಮ ಫಿಕ್ಸೆಡ್ ಡೆಪಾಸಿಟ್ ರಶೀದಿಯನ್ನು ಡೌನ್ಲೋಡ್ ಮಾಡಿ

  • ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಸೈನ್-ಇನ್ ಮಾಡಲು ಒಟಿಪಿ ಸಲ್ಲಿಸಿ.
  • 'ಡಾಕ್ಯುಮೆಂಟ್ ಸೆಂಟರ್' ವಿಭಾಗಕ್ಕೆ ಭೇಟಿ ನೀಡಿ ಮತ್ತು ನಿಮ್ಮ ಎಫ್‌ಡಿ ಯನ್ನು ಆಯ್ಕೆಮಾಡಿ.
  • ಅದನ್ನು ಡೌನ್ಲೋಡ್ ಮಾಡಲು 'ಫಿಕ್ಸೆಡ್ ಡೆಪಾಸಿಟ್ ರಶೀದಿ' ಮೇಲೆ ಕ್ಲಿಕ್ ಮಾಡಿ.

  ಪರ್ಯಾಯವಾಗಿ, ನಿಮ್ಮ ಫಿಕ್ಸೆಡ್ ಡೆಪಾಸಿಟ್ ರಶೀದಿಯನ್ನು ಡೌನ್ಲೋಡ್ ಮಾಡಲು ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು.

  ನಿಮ್ಮ ಫಿಕ್ಸೆಡ್ ಡೆಪಾಸಿಟ್ ರಶೀದಿಯನ್ನು ಡೌನ್ಲೋಡ್ ಮಾಡಿ

ನಮ್ಮನ್ನು ಸಂಪರ್ಕಿಸಿ

ವಿಚಾರಣೆ ಅಥವಾ ಕಳಕಳಿಯ ಸಂದರ್ಭದಲ್ಲಿ, ನೀವು ಈ ಕೆಳಗಿನ ವಿಧಾನಗಳಲ್ಲಿ ಒಂದರಲ್ಲಿ ನಮ್ಮನ್ನು ಸಂಪರ್ಕಿಸಬಹುದು:

 • ಆನ್ಲೈನ್ ಸಹಾಯಕ್ಕಾಗಿ, ನಮ್ಮ ಸಹಾಯ ಮತ್ತು ಬೆಂಬಲ ವಿಭಾಗಕ್ಕೆ ಭೇಟಿ ನೀಡಿ.
 • ವಂಚನೆಯ ದೂರುಗಳ ಸಂದರ್ಭದಲ್ಲಿ, ದಯವಿಟ್ಟು +91 8698010101 ರಲ್ಲಿ ನಮ್ಮ ಸಹಾಯವಾಣಿ ನಂಬರ್ ಅನ್ನು ಸಂಪರ್ಕಿಸಿ
 • ನಮ್ಮನ್ನು ಸಂಪರ್ಕಿಸಲು ನೀವು Play Store/ App Store ನಿಂದ ನಮ್ಮ ಆ್ಯಪನ್ನು ಡೌನ್ಲೋಡ್ ಮಾಡಬಹುದು.
 • ನಿಮ್ಮ ಲೊಕೇಶನ್‌ಗೆ ಹತ್ತಿರದಲ್ಲಿರುವ ನಮ್ಮ ಬ್ರಾಂಚ್ ಹುಡುಕಿ ಮತ್ತು ನಿಮ್ಮ ಪ್ರಶ್ನೆಗಳನ್ನು ಪರಿಹರಿಸಿಕೊಳ್ಳಿ.
 • 'ನಮ್ಮನ್ನು ಸಂಪರ್ಕಿಸಿ' ಪುಟಕ್ಕೆ ಭೇಟಿ ನೀಡುವ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು.

ನಿಮ್ಮ ಎಫ್‌ಡಿ ನಾಮಿನಿಯನ್ನು ನಿರ್ವಹಿಸಿ

ನೀವು ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಲು ಆಯ್ಕೆ ಮಾಡಿದಾಗ, ನಾಮಿನಿಯನ್ನು ಸೇರಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ನಿಮ್ಮ ಅಕಾಲಿಕ ಮರಣದ ಸಂದರ್ಭದಲ್ಲಿ ನಿಮ್ಮ ಎಫ್‌ಡಿಯನ್ನು ನಿಮ್ಮ ಪ್ರೀತಿಪಾತ್ರರಿಗೆ ಸುಲಭವಾಗಿ ಟ್ರಾನ್ಸ್‌ಫರ್ ಮಾಡಲಾಗುತ್ತದೆ ಎಂಬುದನ್ನು ಈ ಸೌಲಭ್ಯವು ಖಚಿತಪಡಿಸುತ್ತದೆ.

ಆದಾಗ್ಯೂ, ನೀವು ನಾಮಿನಿಯನ್ನು ಸೇರಿಸದಿದ್ದರೆ, ಮೆಚ್ಯೂರಿಟಿಯಲ್ಲಿ ಎಫ್‌ಡಿ ಕ್ಲೈಮ್ ಮಾಡಲು ನ್ಯಾಯಾಲಯದ ಆದೇಶ ಅಥವಾ ಉತ್ತರಾಧಿಕಾರ ಪ್ರಮಾಣಪತ್ರವನ್ನು ನೀಡಲು ನಿಮ್ಮ ಸರಿಯಾದ ಉತ್ತರಾಧಿಕಾರಿಯನ್ನು ಕೇಳಬಹುದು.

 • Modify nominee details for your fixed deposit

  ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗಾಗಿ ನಾಮಿನಿ ವಿವರಗಳನ್ನು ಮಾರ್ಪಡಿಸಿ

  • ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ನಮ್ಮ ಗ್ರಾಹಕ ಪೋರ್ಟಲ್‌ಗೆ ಹೋಗಿ.
  • ಸೈನ್-ಇನ್ ಮಾಡಲು ನಿಮ್ಮ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಒಟಿಪಿ ಸಲ್ಲಿಸಿ.
  • 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಫಿಕ್ಸೆಡ್ ಡೆಪಾಸಿಟ್ ಆಯ್ಕೆಮಾಡಿ.
  • 'ನಾಮಿನಿ ವಿವರಗಳು' ವಿಭಾಗದ ಕೆಳಗಿರುವ 'ನಾಮಿನಿಯನ್ನು ಸೇರಿಸಿ' ಅಥವಾ 'ನಾಮಿನಿಯನ್ನು ಎಡಿಟ್ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸದಂತಹ ನಿಮ್ಮ ನಾಮಿನಿಯ ವಿವರಗಳನ್ನು ನಮೂದಿಸಿ. ನಿಮ್ಮ ನಾಮಿನಿಯು ಮೈನರ್ ಆಗಿದ್ದರೆ (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ), ನಿಮ್ಮನ್ನು ಪಾಲಕರ ಮಾಹಿತಿಯನ್ನು ಒದಗಿಸಲು ಕೇಳಲಾಗುತ್ತದೆ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯೊಂದಿಗೆ ನಿಮ್ಮ ವಿವರಗಳನ್ನು ಪರಿಶೀಲಿಸಿ.


  ಈ ಕೆಳಗಿನ 'ನಿಮ್ಮ ಎಫ್‌ಡಿ ನಾಮಿನಿ ವಿವರಗಳನ್ನು ನಿರ್ವಹಿಸಿ' ಟೆಕ್ಸ್ಟ್ ಮೇಲೆ ನೀವು ಕ್ಲಿಕ್ ಮಾಡಬಹುದು. ನಂತರ, ನಿಮ್ಮ ಎಫ್‌ಡಿ ಆಯ್ಕೆಮಾಡಿ, ಮತ್ತು 'ನಾಮಿನಿ ವಿವರಗಳು' ವಿಭಾಗದ ಕೆಳಗಿರುವ 'ನಾಮಿನಿಯನ್ನು ಸೇರಿಸಿ' ಅಥವಾ 'ನಾಮಿನಿಯನ್ನು ಎಡಿಟ್ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ಮುಂದುವರೆಯಿರಿ.

  ನಿಮ್ಮ ಎಫ್‌ಡಿಯು ಜಂಟಿ ಅಕೌಂಟ್ ಹೋಲ್ಡರ್ ಹೊಂದಿದ್ದರೆ, ಒಟಿಪಿಯನ್ನು ಅವರ ನೋಂದಾಯಿತ ಮೊಬೈಲ್ ನಂಬರಿಗೆ ಕೂಡ ಕಳುಹಿಸಲಾಗುತ್ತದೆ. ಆದಾಗ್ಯೂ, ಎಫ್‌ಡಿ ಯ ಪ್ರಾಥಮಿಕ ಅಕೌಂಟ್ ಹೋಲ್ಡರ್ ಮಾತ್ರ ನವೀಕರಣ ಬದಲಾವಣೆಗಳನ್ನು ಆರಂಭಿಸಬಹುದು.

  ನಿಮ್ಮ ಎಫ್‌ಡಿ ನಾಮಿನಿ ವಿವರಗಳನ್ನು ನಿರ್ವಹಿಸಿ

 • ಈ ಪುಟದ ಮೇಲ್ಭಾಗದಲ್ಲಿರುವ ಆಯಾ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಇತರ ಎಫ್‌ಡಿ ಸಂಬಂಧಿತ ವಿವರಗಳಾದ ಮೆಚ್ಯೂರಿಟಿ ದಿನಾಂಕ, ಬಡ್ಡಿ ದರ, ಕಾಲಾವಧಿ ಮತ್ತು ಇನ್ನೂ ಹೆಚ್ಚಿನವುಗಳನ್ನು ಕೂಡ ನೋಡಬಹುದು.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ಮ್ಯಾನೇಜ್ ಮಾಡಿ

ನೀವು ನಮ್ಮೊಂದಿಗೆ ಫಿಕ್ಸೆಡ್ ಡೆಪಾಸಿಟ್ ತೆರೆದಾಗ, ನೀವು ಹಣವನ್ನು ಹೂಡಿಕೆ ಮಾಡುವ ಬ್ಯಾಂಕ್ ಅಕೌಂಟನ್ನು ಬಳಸುತ್ತೀರಿ. ಈ ಬ್ಯಾಂಕ್ ಅಕೌಂಟ್, ಡೀಫಾಲ್ಟ್ ಆಗಿ, ನಿಮ್ಮ ಮೆಚ್ಯೂರಿಟಿ ಬ್ಯಾಂಕ್ ಅಕೌಂಟ್ ಆಗುತ್ತದೆ, ಅಂದರೆ ನಿಮ್ಮ ಎಫ್‌ಡಿ ಮೆಚ್ಯೂರ್ ಆದ ನಂತರ, ನೀವು ಈ ಅಕೌಂಟಿನಲ್ಲಿ ಹಣವನ್ನು ಪಡೆಯುತ್ತೀರಿ. ನಿಮ್ಮ ಎಫ್‌ಡಿ ಅವಧಿಯಲ್ಲಿ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ, ಮೈ ಅಕೌಂಟ್‌ನಲ್ಲಿ ಕೋರಿಕೆಯನ್ನು ಸಲ್ಲಿಸುವ ಮೂಲಕ ನೀವು ಅದನ್ನು ಅಪ್ಡೇಟ್ ಮಾಡಬಹುದು.

 • Update your maturity bank account details

  ನಿಮ್ಮ ಮೆಚ್ಯೂರಿಟಿ ಬ್ಯಾಂಕ್ ಅಕೌಂಟ್ ವಿವರಗಳನ್ನು ಅಪ್ಡೇಟ್ ಮಾಡಿ

  • ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಲು ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಸೈನ್-ಇನ್ ಮಾಡಲು ಒಟಿಪಿ ಸಲ್ಲಿಸಿ.
  • 'ನನ್ನ ಸಂಬಂಧಗಳು' ವಿಭಾಗದಿಂದ ಎಫ್‌ಡಿ ನಂಬರನ್ನು ಆಯ್ಕೆಮಾಡಿ.
  • ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳಿಗೆ ಕೆಳಗಿನ 'ಬ್ಯಾಂಕ್ ವಿವರಗಳನ್ನು ಅಪ್ಡೇಟ್ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಸಂಬಂಧಿತ ವಿಚಾರಣೆ ಮತ್ತು ಉಪ-ವಿಚಾರಣೆ ಪ್ರಕಾರವನ್ನು ಆಯ್ಕೆಮಾಡಿ.
  • ಅಗತ್ಯವಿದ್ದರೆ, ಯಾವುದೇ ಹೆಚ್ಚುವರಿ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ಕೋರಿಕೆಯನ್ನು ಸಲ್ಲಿಸಿ.


  ಈ ಕೆಳಗಿನ 'ಮೆಚ್ಯೂರಿಟಿ ಬ್ಯಾಂಕ್ ಅಕೌಂಟ್ ಅಪ್ಡೇಟ್ ಮಾಡಿ' ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನೇರವಾಗಿ ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಬಹುದು. ಸೈನ್-ಇನ್ ಮಾಡಿದ ನಂತರ, ನಿಮ್ಮನ್ನು 'ನನ್ನ ಸಂಬಂಧಗಳು' ವಿಭಾಗಕ್ಕೆ ಕಳುಹಿಸಲಾಗುತ್ತದೆ. ನಂತರ ನೀವು ನಿಮ್ಮ ಎಫ್‌ಡಿಯನ್ನು ಆಯ್ಕೆ ಮಾಡಬಹುದು, ನಿಮ್ಮ ಬ್ಯಾಂಕ್ ವಿವರಗಳ ವಿಭಾಗದ ಕೆಳಗಿನ 'ಬ್ಯಾಂಕ್ ಅಕೌಂಟನ್ನು ಅಪ್ಡೇಟ್ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ಕೋರಿಕೆಯನ್ನು ಸಲ್ಲಿಸಲು ಮುಂದುವರಿಯಿರಿ.

  ನೀವು ನಿಮ್ಮ ಕೋರಿಕೆಯನ್ನು ಸಲ್ಲಿಸಿದ ನಂತರ, ಮುಂದಿನ ಹಂತಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ನಮ್ಮ ಪ್ರತಿನಿಧಿಯು 48 ಕೆಲಸದ ಗಂಟೆಗಳ ಒಳಗೆ ನಿಮ್ಮನ್ನು ಸಂಪರ್ಕಿಸುತ್ತಾರೆ.

  ಮೆಚ್ಯೂರಿಟಿ ಬ್ಯಾಂಕ್ ಅಕೌಂಟನ್ನು ಅಪ್ಡೇಟ್ ಮಾಡಿ

 • ನಿಮ್ಮ ಬೇರೆ ಎಫ್‌ಡಿ ಅಕೌಂಟ್ ವಿವರಗಳನ್ನು ನೋಡಲು ಮತ್ತು ನಿರ್ವಹಿಸಲು, ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಟಿಡಿಎಸ್ ಮನ್ನಾಕ್ಕಾಗಿ ಅಪ್ಲೈ ಮಾಡಿ

ಮೂಲದಲ್ಲಿ ಕಡಿತಗೊಳಿಸಲಾದ ಟಿಡಿಎಸ್ ಅಥವಾ ತೆರಿಗೆಯು ಪಾವತಿಸಬೇಕಾದ ನಿಮ್ಮ ಬಡ್ಡಿಯಿಂದ ಕಡಿತಗೊಳಿಸಲಾಗುವ ತೆರಿಗೆಯಾಗಿದೆ. ಫಿಕ್ಸೆಡ್ ಡೆಪಾಸಿಟ್ ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದ್ದರೂ, ಅದರ ಮೇಲೆ ಗಳಿಸಿದ ಬಡ್ಡಿಯನ್ನು ನಿಮ್ಮ ಆದಾಯದ ಭಾಗವಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ, ಟಿಡಿಎಸ್ ಈ ಬಡ್ಡಿ ಮೊತ್ತಕ್ಕೆ ಅನ್ವಯವಾಗುತ್ತದೆ.

ಆದಾಗ್ಯೂ, ನಿಮ್ಮ ಒಟ್ಟು ಆದಾಯವು ಕನಿಷ್ಠ ತೆರಿಗೆ ಮಿತಿಗಿಂತ ಕಡಿಮೆ ಇದ್ದರೆ, ನೀವು ಫಾರ್ಮ್ 15ಜಿ ಅಥವಾ ಫಾರ್ಮ್ 15ಎಚ್ ಸಲ್ಲಿಸುವ ಮೂಲಕ ಮತ್ತು ಟಿಡಿಎಸ್ ಮನ್ನಾಕ್ಕಾಗಿ ಅಪ್ಲೈ ಮಾಡುವ ಮೂಲಕ ಅದನ್ನು ಘೋಷಿಸಬಹುದು. ನಿಮ್ಮ ವಯಸ್ಸು 60 ಕ್ಕಿಂತ ಕಡಿಮೆ ಇದ್ದರೆ, ನೀವು ಫಾರ್ಮ್ 15ಜಿ ಅನ್ನು ಸಲ್ಲಿಸಬೇಕು, ನೀವು 60 ಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ನೀವು ಫಾರ್ಮ್ 15ಎಚ್ ಅನ್ನು ಸಲ್ಲಿಸಬೇಕು.

ಒಮ್ಮೆ ನೀವು ಈ ಘೋಷಣೆಯನ್ನು ಸಲ್ಲಿಸಿದ ನಂತರ, ನಿಮ್ಮ ಡೆಪಾಸಿಟ್‌ಗಳ ಮೇಲೆ ಗಳಿಸಿದ ಬಡ್ಡಿಯಿಂದ ಯಾವುದೇ ಟಿಡಿಎಸ್ ಕಡಿತಗೊಳಿಸಲಾಗುವುದಿಲ್ಲ ಎಂಬುದನ್ನು ಇದು ಖಚಿತಪಡಿಸುತ್ತದೆ.

ಬಜಾಜ್ ಫೈನಾನ್ಸ್ ಲಿಮಿಟೆಡ್ ಕೆಲವು ಸುಲಭ ಹಂತಗಳಲ್ಲಿ ಈ ಘೋಷಣೆಯನ್ನು ಆನ್ಲೈನಿನಲ್ಲಿ ಸಲ್ಲಿಸುವ ಸೌಲಭ್ಯವನ್ನು ನಿಮಗೆ ಒದಗಿಸುತ್ತದೆ. ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಫಾರ್ಮ್ 15ಜಿ/ಎಚ್ ಸಲ್ಲಿಸಬಹುದು.

 • Submit Form 15G/ H to get a TDS waiver

  ಟಿಡಿಎಸ್ ಮನ್ನಾ ಪಡೆಯಲು ಫಾರ್ಮ್ 15ಜಿ/ಎಚ್ ಸಲ್ಲಿಸಿ

  ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಘೋಷಣೆಯನ್ನು ಸಲ್ಲಿಸಬಹುದು:

  • ಈ ಪುಟದಲ್ಲಿನ 'ಸೈನ್-ಇನ್' ಬಟನ್ ಕ್ಲಿಕ್ ಮಾಡುವ ಮೂಲಕ ನಮ್ಮ ಗ್ರಾಹಕ ಪೋರ್ಟಲ್‌ಗೆ ಹೋಗಿ.
  • ನಿಮ್ಮ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಸೈನ್-ಇನ್ ಮಾಡಲು ಒಟಿಪಿ ಸಲ್ಲಿಸಿ.
  • 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ಆಯ್ಕೆಮಾಡಿ.
  • 'ತ್ವರಿತ ಕ್ರಮಗಳು' ವಿಭಾಗದಿಂದ 'ಫಾರ್ಮ್ 15ಜಿ/ಎಚ್' ಆಯ್ಕೆಯನ್ನು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಫಾರ್ಮ್ 15ಜಿ ಅಥವಾ ಫಾರ್ಮ್ 15ಎಚ್ ನೋಡಿ ಮತ್ತು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.
  • ಅಗತ್ಯವಿರುವ ಯಾವುದೇ ಹೆಚ್ಚುವರಿ ಮಾಹಿತಿಯನ್ನು ನಮೂದಿಸಿ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ನೀವು ಪಡೆದ ಒಟಿಪಿಯೊಂದಿಗೆ ವೆರಿಫೈ ಮಾಡಿ ಮತ್ತು ಸಲ್ಲಿಕೆಯೊಂದಿಗೆ ಮುಂದುವರೆಯಿರಿ.


  ಈ ಕೆಳಗಿನ 'ಟಿಡಿಎಸ್ ಮನ್ನಾಕ್ಕಾಗಿ ಅಪ್ಲೈ ಮಾಡಿ' ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ನೇರವಾಗಿ ನಮ್ಮ ಗ್ರಾಹಕ ಪೋರ್ಟಲ್‌ಗೆ ಹೋಗಬಹುದು. ಒಮ್ಮೆ ಸೈನ್ ಇನ್ ಆದ ನಂತರ, ನಿಮ್ಮನ್ನು 'ನನ್ನ ಸಂಬಂಧಗಳು' ವಿಭಾಗಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ನೀವು ನಿಮ್ಮ ಎಫ್‌ಡಿಯನ್ನು ಆಯ್ಕೆ ಮಾಡಬಹುದು. ನಂತರ ನೀವು 'ತ್ವರಿತ ಕ್ರಮಗಳು' ವಿಭಾಗದಲ್ಲಿ 'ಫಾರ್ಮ್ 15ಜಿ/ಎಚ್ ಸಲ್ಲಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಬಹುದು ಮತ್ತು ನಿಮ್ಮ ಘೋಷಣೆಯೊಂದಿಗೆ ಮುಂದುವರಿಯಬಹುದು.

  ಟಿಡಿಎಸ್ ಮನ್ನಾಕ್ಕಾಗಿ ಅಪ್ಲೈ ಮಾಡಿ

 • ಈ ಪುಟದ ಮೇಲ್ಭಾಗದಲ್ಲಿರುವ 'ಎಫ್‌ಡಿ ರಶೀದಿ' ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಎಫ್‌ಡಿ ಡಾಕ್ಯುಮೆಂಟ್‌ಗಳಾದ ರಶೀದಿ, ಅಕೌಂಟ್ ಸ್ಟೇಟ್ಮೆಂಟ್, ಬಡ್ಡಿ ಪ್ರಮಾಣಪತ್ರ ಮತ್ತು ಇನ್ನೂ ಹೆಚ್ಚಿನವುಗಳನ್ನು ನೋಡಬಹುದು.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೇಲೆ ಲೋನ್ ಪಡೆಯಿರಿ

ಯಾವುದೇ ಹಣಕಾಸಿನ ತುರ್ತುಸ್ಥಿತಿಯ ಸಂದರ್ಭದಲ್ಲಿ, ಮೆಚ್ಯೂರಿಟಿ ದಿನಾಂಕಕ್ಕಿಂತ ಮೊದಲು ನಿಮ್ಮ ಎಫ್‌ಡಿಯನ್ನು ವಿತ್‌ಡ್ರಾ ಮಾಡುವ ಬದಲು, ನೀವು ಅದನ್ನು ಅಡಮಾನವಾಗಿ ಬಳಸಬಹುದು ಮತ್ತು ಅದರ ಮೇಲೆ ಲೋನನ್ನು ಪಡೆಯಬಹುದು. ಈ ಸೌಲಭ್ಯವು ನೀವು ಕಡಿಮೆ ಬಡ್ಡಿ ದರದಲ್ಲಿ ಹಣವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಮತ್ತು ನಿಮ್ಮ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ನಷ್ಟವಾಗುವುದಿಲ್ಲ. ಲೋನ್ ಮೊತ್ತವು ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೊತ್ತವನ್ನು ಅವಲಂಬಿಸಿರುತ್ತದೆ, ಆದರೆ ಮರುಪಾವತಿ ಅವಧಿಯು ಎಫ್‌ಡಿ ಮೆಚ್ಯೂರಿಟಿ ದಿನಾಂಕದವರೆಗೆ ಇರಬಹುದು. ಆದಾಗ್ಯೂ, ನಿಮ್ಮ ಡೆಪಾಸಿಟ್ ಮೂರು ತಿಂಗಳ ಲಾಕ್-ಇನ್ ಅವಧಿಯನ್ನು ಪೂರ್ಣಗೊಳಿಸಿದ ನಂತರ, ನೀವು ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನಿಗೆ ಅಪ್ಲೈ ಮಾಡಬಹುದು.

ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ಕೆಲವು ಸುಲಭ ಹಂತಗಳಲ್ಲಿ ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು.

 • A step-by-step guide to applying for a loan against FD

  ಎಫ್‌ಡಿ ಮೇಲಿನ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

  • ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಲು ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಸೈನ್-ಇನ್ ಮಾಡಲು ಒಟಿಪಿ ಸಲ್ಲಿಸಿ.
  • ನೀವು ಲೋನಿಗೆ ಅಪ್ಲೈ ಮಾಡಲು ಬಯಸುವ 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಎಫ್‌ಡಿಯನ್ನು ಆಯ್ಕೆಮಾಡಿ.
  • 'ತ್ವರಿತ ಕ್ರಮಗಳು' ವಿಭಾಗದಲ್ಲಿ 'ಎಫ್‌ಡಿ ಮೇಲಿನ ಲೋನ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ರಿವ್ಯೂ ಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯೊಂದಿಗೆ ನಿಮ್ಮ ವಿವರಗಳನ್ನು ಪರಿಶೀಲಿಸಿ ಮತ್ತು ಲೋನ್ ಒಪ್ಪಂದ ಮತ್ತು ಬ್ಯಾಂಕ್ ವಿವರಗಳ ದೃಢೀಕರಣದೊಂದಿಗೆ ಮುಂದುವರಿಯಿರಿ.


  ಈ ಕೆಳಗಿನ 'ಎಫ್‌ಡಿ ಮೇಲಿನ ಲೋನಿಗೆ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನೇರವಾಗಿ ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಬಹುದು. ಸೈನ್-ಇನ್ ಮಾಡಿದ ನಂತರ, ನಿಮ್ಮನ್ನು 'ನನ್ನ ಸಂಬಂಧಗಳು' ವಿಭಾಗಕ್ಕೆ ಕಳುಹಿಸಲಾಗುತ್ತದೆ. ನಂತರ ನೀವು ನಿಮ್ಮ ಎಫ್‌ಡಿಯನ್ನು ಆಯ್ಕೆಮಾಡಿ, 'ತ್ವರಿತ ಕ್ರಮಗಳು' ವಿಭಾಗದಲ್ಲಿ 'ಎಫ್‌ಡಿ ಮೇಲಿನ ಲೋನ್' ಮೇಲೆ ಕ್ಲಿಕ್ ಮಾಡಿ, ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ಮುಂದುವರಿಯಿರಿ.

  ಒಮ್ಮೆ ನೀವು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, 24 ಕೆಲಸದ ಗಂಟೆಗಳ ಒಳಗೆ ಹಣವನ್ನು ಪಡೆಯುತ್ತೀರಿ.

  ಒಂದು ವೇಳೆ ನಿಮ್ಮ ಎಫ್‌ಡಿ ಯು ಜಂಟಿ ಅಕೌಂಟ್ ಹೋಲ್ಡರ್ ಅನ್ನು ಹೊಂದಿದ್ದರೆ, ಪರಿಶೀಲನೆಗಾಗಿ ಅವರು ಒಟಿಪಿ ಯನ್ನು ಪಡೆಯುತ್ತಾರೆ.

  ಎಫ್‌ಡಿ ಮೇಲಿನ ಲೋನಿಗೆ ಅಪ್ಲೈ ಮಾಡಿ

 • ಒಟ್ಟುಗೂಡಿಸಿದ ಡೆಪಾಸಿಟ್‌ಗಾಗಿ ನೀವು 75% ವರೆಗೆ ಮತ್ತು ಒಟ್ಟುಗೂಡಿಸದ ಡೆಪಾಸಿಟ್‌ಗಾಗಿ 60% ವರೆಗೆ ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನಿಗೆ ಅಪ್ಲೈ ಮಾಡಬಹುದು.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಎಫ್‌ಡಿ ಯ ಮೆಚ್ಯೂರ್ ಮುಂಚಿತ ವಿತ್‌ಡ್ರಾವಲ್

ಯಾವುದೇ ಅನಿರೀಕ್ಷಿತ ವೆಚ್ಚಗಳ ಸಂದರ್ಭದಲ್ಲಿ, ಮೆಚ್ಯೂರಿಟಿ ದಿನಾಂಕದ ಮೊದಲು ನೀವು ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಇಟ್ಟಿರುವ ಹಣವನ್ನು ನೀವು ವಿತ್‌ಡ್ರಾ ಮಾಡಬಹುದು. ಇದನ್ನು ಫಿಕ್ಸೆಡ್ ಡೆಪಾಸಿಟ್‌ನ ಮೆಚ್ಯೂರ್ ಮುಂಚಿತ ವಿತ್‌ಡ್ರಾವಲ್ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಡೆಪಾಸಿಟ್ ಅಂಗೀಕರಿಸಿದ ದಿನಾಂಕದಿಂದ ಮೂರು ತಿಂಗಳ ನಂತರ ನೀವು ಮೆಚ್ಯೂರಿಟಿಗೆ ಮುಂಚಿತವಾಗಿ ವಿತ್‌ಡ್ರಾವಲ್‌ಗಾಗಿ ಕೋರಿಕೆಯನ್ನು ಸಲ್ಲಿಸಬಹುದು.

ನಿಮ್ಮ ಎಫ್‌ಡಿಯನ್ನು ನೀವು ಡೆಪಾಸಿಟ್ ಮಾಡಿದ ದಿನಾಂಕದಿಂದ ಮೂರು ತಿಂಗಳ ನಂತರ ಆದರೆ ಆರು ತಿಂಗಳ ಒಳಗೆ ವಿತ್‌ಡ್ರಾ ಮಾಡಿದರೆ, ನೀವು ಅಸಲು ಮೊತ್ತವನ್ನು ಮಾತ್ರ ಪಡೆಯುತ್ತೀರಿ - ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ.

ಆದಾಗ್ಯೂ, ಒಂದು ವೇಳೆ ನೀವು ನಿಮ್ಮ ಎಫ್‌ಡಿ ಯನ್ನು ಆರು ತಿಂಗಳ ನಂತರ ಮೆಚ್ಯೂರ್ ಮುಂಚಿತವಾಗಿ ಲಿಕ್ವಿಡೇಟ್ ಮಾಡಲು ಆಯ್ಕೆ ಮಾಡಿದರೆ, ಪಾವತಿಸಬೇಕಾದ ಬಡ್ಡಿಯು 2% ಅಗಿದ್ದು, ಪಬ್ಲಿಕ್ ಡೆಪಾಸಿಟ್‌ಗೆ ಅದು ಹೊಂದಿರುವ ಅವಧಿಗೆ ಅನ್ವಯವಾಗುವ ಬಡ್ಡಿ ದರಕ್ಕಿಂತ ಕಡಿಮೆಯಾಗಿರುತ್ತದೆ.

ಒಂದು ವೇಳೆ ಆ ಅವಧಿಗೆ ಯಾವುದೇ ದರವನ್ನು ನಿರ್ದಿಷ್ಟಪಡಿಸದಿದ್ದರೆ, ಪಾವತಿಸಬೇಕಾದ ಬಡ್ಡಿ ದರವು ಬ್ಯಾಂಕಿಂಗ್ ಅಲ್ಲದ ಫೈನಾನ್ಸ್ ಕಂಪನಿಯಿಂದ ಪಬ್ಲಿಕ್ ಡೆಪಾಸಿಟ್ ಸ್ವೀಕರಿಸಿದ ಕನಿಷ್ಠ ಬಡ್ಡಿದರಕ್ಕಿಂತ 3% ಕಡಿಮೆ ಇರುತ್ತದೆ.

ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ಮೆಚ್ಯೂರ್ ಮುಂಚಿತ ವಿತ್‌ಡ್ರಾವಲ್ ಕೋರಿಕೆಯನ್ನು ಸಲ್ಲಿಸಬಹುದು.

 • Apply for pre-mature FD withdrawal

  ಮೆಚ್ಯೂರ್ ಮುಂಚಿತ ಎಫ್‌ಡಿ ವಿತ್‌ಡ್ರಾವಲ್‌ಗೆ ಅಪ್ಲೈ ಮಾಡಿ

  • ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಲು ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ನಮ್ಮ 'ಕೋರಿಕೆಯನ್ನು ಸಲ್ಲಿಸಿ' ವಿಭಾಗಕ್ಕೆ ಭೇಟಿ ನೀಡಲು ಒಟಿಪಿ ಸಲ್ಲಿಸಿ.
  • ನಿಮ್ಮ ಪ್ರಾಡಕ್ಟ್ ಆಗಿ 'ಫಿಕ್ಸೆಡ್ ಡೆಪಾಸಿಟ್' ಆಯ್ಕೆಮಾಡಿ ಮತ್ತು ಎಫ್‌ಡಿ ನಂಬರ್ ಆಯ್ಕೆಮಾಡಿ.
  • ನಿಮ್ಮ ವಿಚಾರಣೆಯ ಪ್ರಕಾರವನ್ನು 'ಪ್ರಿ-ಮೆಚ್ಯೂರಿಟಿ' ಎಂದು ಆಯ್ಕೆಮಾಡಿ ಮತ್ತು ನಿಮ್ಮ ಉಪ-ವಿಚಾರಣೆ ಪ್ರಕಾರದಲ್ಲಿ 'ಪ್ರಿ-ಮೆಚ್ಯೂರಿಟಿ ವಿವರಗಳ ಅಗತ್ಯವಿದೆ' ಆಯ್ಕೆಮಾಡಿ.
  • ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ ಮತ್ತು ಕೋರಿಕೆಯನ್ನು ಸಲ್ಲಿಸಿ.


  ಈ ಕೆಳಗಿನ 'ಮೆಚ್ಯೂರ್ ಮುಂಚಿತ ಎಫ್‌ಡಿ ವಿತ್‌ಡ್ರಾವಲ್‌ಗೆ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನೇರವಾಗಿ ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಬಹುದು. ಒಮ್ಮೆ ಸೈನ್-ಇನ್ ಮಾಡಿದ ನಂತರ, ನಿಮ್ಮನ್ನು 'ಕೋರಿಕೆಯನ್ನು ಸಲ್ಲಿಸಿ' ವಿಭಾಗಕ್ಕೆ ಕಳುಹಿಸಲಾಗುತ್ತದೆ. ನಂತರ ನೀವು ನಿಮ್ಮ ಎಫ್‌ಡಿಯನ್ನು ಆಯ್ಕೆ ಮಾಡಬಹುದು, ಸಂಬಂಧಿತ ವಿಚಾರಣೆ ಮತ್ತು ಉಪ-ವಿಚಾರಣೆ ಪ್ರಕಾರವನ್ನು ನಮೂದಿಸಬಹುದು ಮತ್ತು ಸಲ್ಲಿಸಲು ಮುಂದುವರೆಯಬಹುದು.

  ಒಮ್ಮೆ ನೀವು ಕೋರಿಕೆಯನ್ನು ಸಲ್ಲಿಸಿದ ನಂತರ, ಮುಂದಿನ ಹಂತಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಲು ನಮ್ಮ ಪ್ರತಿನಿಧಿ 48 ಕೆಲಸದ ಗಂಟೆಗಳ ಒಳಗೆ ನಿಮ್ಮನ್ನು ಸಂಪರ್ಕಿಸುತ್ತಾರೆ.

  ಮೆಚ್ಯೂರ್ ಮುಂಚಿತ ಎಫ್‌ಡಿ ವಿತ್‌ಡ್ರಾವಲ್‌ಗೆ ಅಪ್ಲೈ ಮಾಡಿ

 • ನಿಮಗೆ ತುರ್ತು ಪರಿಸ್ಥಿತಿಗಾಗಿ ಹಣದ ಅಗತ್ಯವಿದ್ದರೆ, ನೀವು ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನಿಗೆ ಕೂಡ ಅಪ್ಲೈ ಮಾಡಬಹುದು. ಹೆಚ್ಚಿನ ವಿವರಗಳಿಗಾಗಿ ಈ ಪುಟದ ಮೇಲ್ಭಾಗದಲ್ಲಿರುವ 'ಎಫ್‌ಡಿ ಮೇಲಿನ ಲೋನ್' ಮೇಲೆ ಕ್ಲಿಕ್ ಮಾಡಿ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಎಫ್ಎಟಿಸಿಎ ಘೋಷಣೆ

ನೀವು ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಅನ್ನು ಆಯ್ಕೆ ಮಾಡಿದ್ದರೆ, ನೀವು ಎಫ್‌ಎಟಿಸಿಎ (ವಿದೇಶಿ ಅಕೌಂಟ್ ತೆರಿಗೆ ಅನುಸರಣೆ ಕಾಯ್ದೆ) ಘೋಷಣೆಯನ್ನು ಸಲ್ಲಿಸಬೇಕು. ಆದಾಗ್ಯೂ, ನೀವು ಅನಿವಾಸಿ ಭಾರತೀಯರಾಗಿದ್ದರೆ, ನಿಮ್ಮ ತೆರಿಗೆ ಹೊಣೆಗಾರಿಕೆಗಳನ್ನು ನಿವಾಸಿ ದೇಶದಿಂದ ನಿಯಂತ್ರಿಸಲಾಗುವುದರಿಂದ ನಿಮ್ಮ ಎಫ್‌ಎಟಿಸಿಎ ಸಲ್ಲಿಸುವುದು ಕಡ್ಡಾಯವಾಗಿದೆ.

ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ಕೆಲವು ಸುಲಭ ಹಂತಗಳಲ್ಲಿ ಎಫ್ಎಟಿಸಿಎ ಫಾರ್ಮ್ ಅನ್ನು ಆನ್ಲೈನಿನಲ್ಲಿ ಸಲ್ಲಿಸಬಹುದು.

 • Submit your FATCA declaration online

  ನಿಮ್ಮ ಎಫ್ಎಟಿಸಿಎ ಘೋಷಣೆಯನ್ನು ಆನ್ಲೈನಿನಲ್ಲಿ ಸಲ್ಲಿಸಿ

  ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಮೈ ಅಕೌಂಟಿನಲ್ಲಿ ಎಫ್ಎಟಿಸಿಎ ಫಾರ್ಮ್ ಸಲ್ಲಿಸಬಹುದು:

  • ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ನೀವು ನಮ್ಮ ಗ್ರಾಹಕ ಪೋರ್ಟಲ್‌ಗೆ ಸೈನ್-ಇನ್ ಮಾಡಬಹುದು.
  • 'ನನ್ನ ಸಂಬಂಧಗಳು' ವಿಭಾಗದಿಂದ ಫಿಕ್ಸೆಡ್ ಡೆಪಾಸಿಟ್ ಆಯ್ಕೆಮಾಡಿ.
  • 'ತ್ವರಿತ ಕ್ರಮಗಳು' ವಿಭಾಗದಿಂದ 'ಎಫ್ಎಟಿಸಿಎ ಫಾರ್ಮ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ ಮತ್ತು 'ಒಟಿಪಿ ಜನರೇಟ್ ಮಾಡಿ' ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಾಯಿತ ನಂಬರಿಗೆ ಕಳುಹಿಸಲಾದ ಒಟಿಪಿಯೊಂದಿಗೆ ನಿಮ್ಮ ವಿವರಗಳನ್ನು ಪರಿಶೀಲಿಸಿ.


  ಈ ಕೆಳಗಿನ 'ನಿಮ್ಮ ಎಫ್ಎಟಿಸಿಎ ಘೋಷಣೆಯನ್ನು ಸಲ್ಲಿಸಿ' ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನೇರವಾಗಿ ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಬಹುದು. ಸೈನ್-ಇನ್ ಮಾಡಿದ ನಂತರ, ನಿಮ್ಮನ್ನು ನಮ್ಮ 'ನನ್ನ ಸಂಬಂಧಗಳು' ವಿಭಾಗಕ್ಕೆ ಕಳುಹಿಸಲಾಗುತ್ತದೆ. ನಂತರ ನೀವು ನಿಮ್ಮ ಎಫ್‌ಡಿಯನ್ನು ಆಯ್ಕೆಮಾಡಿ, 'ತ್ವರಿತ ಕ್ರಮಗಳು' ವಿಭಾಗದಲ್ಲಿ 'ಎಫ್‌ಎಟಿಸಿಎ ಫಾರ್ಮ್' ಮೇಲೆ ಕ್ಲಿಕ್ ಮಾಡಿ ಮತ್ತು ಮುಂದುವರೆಯಿರಿ.

  ನೀವು ಘೋಷಣೆಯನ್ನು ಸಲ್ಲಿಸಿದ ನಂತರ ನಿಮ್ಮ ಸ್ಕ್ರೀನಿನಲ್ಲಿ ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ.

  ನಿಮ್ಮ ಎಫ್ಎಟಿಸಿಎ ಘೋಷಣೆಯನ್ನು ಸಲ್ಲಿಸಿ

 • ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಫಾರ್ಮ್ 15 ಜಿ/ಎಚ್ ಅನ್ನು ಸಲ್ಲಿಸಬಹುದು ಮತ್ತು ಟಿಡಿಎಸ್ ಮನ್ನಾಕ್ಕಾಗಿ ಅಪ್ಲೈ ಮಾಡಬಹುದು.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ನಿಮ್ಮ ಎಫ್‌ಡಿ ಗಾಗಿ ಜಂಟಿ ಅಕೌಂಟ್ ಹೋಲ್ಡರನ್ನು ಸೇರಿಸಿ

ನಿಮ್ಮ ಬ್ಯಾಂಕ್ ಅಕೌಂಟ್‌ಗಳಂತೆ, ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗೆ ನೀವು ಜಂಟಿ ಅಕೌಂಟ್ ಹೋಲ್ಡರನ್ನು ಸೇರಿಸಬಹುದು. ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ಕೆಲವು ಕ್ಲಿಕ್‌ಗಳಲ್ಲಿ ಜಂಟಿ ಅಕೌಂಟ್ ಹೋಲ್ಡರ್ ವಿವರಗಳನ್ನು ಅಪ್ಡೇಟ್ ಮಾಡಬಹುದು.

 • Manage your joint account holder details

  ನಿಮ್ಮ ಜಂಟಿ ಅಕೌಂಟ್ ಹೋಲ್ಡರ್ ವಿವರಗಳನ್ನು ನಿರ್ವಹಿಸಿ

  • ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಲು ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು 'ಕೋರಿಕೆಯನ್ನು ಸಲ್ಲಿಸಿ' ವಿಭಾಗಕ್ಕೆ ಹೋಗಲು ಒಟಿಪಿ ಸಲ್ಲಿಸಿ.
  • ನಿಮ್ಮ ಪ್ರಾಡಕ್ಟ್‌ಗಾಗಿ 'ಫಿಕ್ಸೆಡ್ ಡೆಪಾಸಿಟ್' ಆಯ್ಕೆಮಾಡಿ ಮತ್ತು ಜಂಟಿ ಅಕೌಂಟ್ ಹೋಲ್ಡರ್ ಅನ್ನು ನೀವು ಅಪ್ಡೇಟ್ ಮಾಡಲು ಬಯಸುವ ಎಫ್‌ಡಿ ನಂಬರ್ ಅನ್ನು ಆಯ್ಕೆಮಾಡಿ.
  • ನಿಮ್ಮ ವಿಚಾರಣೆ ಪ್ರಕಾರವಾಗಿ 'ಎಫ್‌ಡಿ ವಿವರಗಳು' ಮತ್ತು ನಿಮ್ಮ ಉಪ-ವಿಚಾರಣೆ ಪ್ರಕಾರವಾಗಿ 'ಜಂಟಿ ಅಕೌಂಟ್ ಹೋಲ್ಡರ್ ಸೇರ್ಪಡೆ' ಆಯ್ಕೆಮಾಡಿ.
  • ಬೇಕಾದರೆ ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ಬೆಂಬಲಿತ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.
  • ನಿಮ್ಮ ವಿವರಗಳನ್ನು ರಿವ್ಯೂ ಮಾಡಿ ಮತ್ತು ಕೋರಿಕೆಯನ್ನು ಸಲ್ಲಿಸಲು ಮುಂದುವರೆಯಿರಿ.


  ಈ ಕೆಳಗಿನ 'ನಿಮ್ಮ ಜಂಟಿ ಅಕೌಂಟ್ ಹೋಲ್ಡರ್ ವಿವರಗಳನ್ನು ಅಪ್ಡೇಟ್ ಮಾಡಿ' ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನೇರವಾಗಿ ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಬಹುದು. ಒಮ್ಮೆ ಸೈನ್-ಇನ್ ಮಾಡಿದ ನಂತರ, ನಿಮ್ಮನ್ನು 'ಕೋರಿಕೆಯನ್ನು ಸಲ್ಲಿಸಿ' ವಿಭಾಗಕ್ಕೆ ಕಳುಹಿಸಲಾಗುತ್ತದೆ. ನಂತರ ನೀವು ನಿಮ್ಮ ಎಫ್‌ಡಿಯನ್ನು ಆಯ್ಕೆ ಮಾಡಬಹುದು, ಸಂಬಂಧಿತ ವಿಚಾರಣೆ ಮತ್ತು ಉಪ-ವಿಚಾರಣೆ ಪ್ರಕಾರವನ್ನು ನಮೂದಿಸಬಹುದು ಮತ್ತು ಸಲ್ಲಿಸಲು ಮುಂದುವರೆಯಬಹುದು.

  ಒಮ್ಮೆ ನೀವು ಕೋರಿಕೆಯನ್ನು ಸಲ್ಲಿಸಿದ ನಂತರ, ಮುಂದಿನ ಹಂತಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಲು ನಮ್ಮ ಪ್ರತಿನಿಧಿ 48 ಕೆಲಸದ ಗಂಟೆಗಳ ಒಳಗೆ ನಿಮ್ಮನ್ನು ಸಂಪರ್ಕಿಸುತ್ತಾರೆ.

  ನಿಮ್ಮ ಜಂಟಿ ಅಕೌಂಟ್ ಹೋಲ್ಡರ್ ವಿವರಗಳನ್ನು ಅಪ್ಡೇಟ್ ಮಾಡಿ

 • ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ನಾಮಿನಿ ಮತ್ತು ಬ್ಯಾಂಕ್ ಅಕೌಂಟ್ ವಿವರಗಳನ್ನು ಅಪ್ಡೇಟ್ ಮಾಡಬಹುದು ಅಥವಾ ಈ ಪುಟದ ಮೇಲ್ಭಾಗದಲ್ಲಿ ಆಯಾ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಹುದು.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ನಿಮ್ಮ ಪ್ರೊಫೈಲನ್ನು ಅಪ್ಡೇಟ್ ಮಾಡಿಕೊಳ್ಳಿ

ನಿಮ್ಮ ಸಂಪರ್ಕ ವಿಳಾಸದಲ್ಲಿ ನಿಮ್ಮ ಫಿಕ್ಸೆಡ್ ಡೆಪಾಸಿಟ್ ರಶೀದಿಯ ತೊಂದರೆ ರಹಿತ ಡೆಲಿವರಿಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಗ್ರಾಹಕ ಪೋರ್ಟಲ್‌ನಲ್ಲಿ ರಚಿಸಲಾದ ನಿಮ್ಮ ಪ್ರೊಫೈಲನ್ನು ಅಪ್ಡೇಟ್ ಮಾಡುವುದು ಮುಖ್ಯವಾಗಿದೆ.

ಆಗಾಗ ಕೇಳುವ ಪ್ರಶ್ನೆಗಳು

ನನ್ನ ಜಂಟಿ ಫಿಕ್ಸೆಡ್ ಡೆಪಾಸಿಟ್ ಅಕೌಂಟಿನಲ್ಲಿ ನಾನು ನಾಮಿನಿಯ ವಿವರಗಳನ್ನು ಬದಲಾಯಿಸಬಹುದೇ?

ನಿಮ್ಮ ಜಂಟಿ ಫಿಕ್ಸೆಡ್ ಡೆಪಾಸಿಟ್ ಅಕೌಂಟಿನಲ್ಲಿ ನಾಮಿನಿ ವಿವರಗಳ ವಿವರಗಳನ್ನು ನೀವು ಬದಲಾಯಿಸಬಹುದು. ಆದಾಗ್ಯೂ, ನೀವು ಅಂತಹ ಯಾವುದೇ ಬದಲಾವಣೆಯನ್ನು ಸಲ್ಲಿಸುವಾಗ ಎಲ್ಲಾ ಜಂಟಿ ಅಕೌಂಟ್ ಹೋಲ್ಡರ್‌ಗಳ ಒಪ್ಪಿಗೆಯನ್ನು ಪಡೆಯಬೇಕು. ಒಂದು ವೇಳೆ ನೀವು ಜಂಟಿ ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ಹೊಂದಿದ್ದರೆ, ನೀವು ನಾಮಿನಿ ವಿವರಗಳಿಗೆ ಬದಲಾವಣೆಗಳನ್ನು ಮಾಡುವಾಗ, ಪ್ರಾಥಮಿಕ ಮತ್ತು ಜಂಟಿ ಅಕೌಂಟ್ ಹೋಲ್ಡರ್ ಪರಿಶೀಲನೆಗಾಗಿ ಒಟಿಪಿಗಳನ್ನು ಪಡೆಯುತ್ತಾರೆ. ಎರಡೂ ಪಾರ್ಟಿಗಳಿಂದ ಪರಿಶೀಲಿಸಿದ ನಂತರ, ನಾಮಿನಿ ವಿವರಗಳನ್ನು ಅಪ್ಡೇಟ್ ಮಾಡಬಹುದು.

ನನ್ನ ಫಿಕ್ಸೆಡ್ ಡೆಪಾಸಿಟ್ ಅಕೌಂಟಿಗೆ?

ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗೆ ನೀವು ಅನೇಕ ನಾಮಿನಿಗಳನ್ನು ಸೇರಿಸಲು ಸಾಧ್ಯವಿಲ್ಲ. ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗೆ ಕೇವಲ ಒಂದು ನಾಮಿನಿಯನ್ನು ನೇಮಕ ಮಾಡಬಹುದು. ಆದಾಗ್ಯೂ, ಪ್ರತ್ಯೇಕ ಫಿಕ್ಸೆಡ್ ಡೆಪಾಸಿಟ್‌ಗಳಿಗಾಗಿ ನೀವು ವಿವಿಧ ನಾಮಿನಿಗಳನ್ನು ನೇಮಿಸಬಹುದು.

ನಾಮಿನಿ ಸೇರಿಸಿ

ಎಫ್‌ಡಿ ನವೀಕರಣದ ಸಮಯದಲ್ಲಿ ನಾನು ನಾಮಿನಿ ಮತ್ತು ಸಹ-ಅರ್ಜಿದಾರರ ಹೆಸರನ್ನು ಬದಲಾಯಿಸಬಹುದೇ?

ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ನವೀಕರಿಸುವಾಗ ನೀವು ನಿಮ್ಮ ನಾಮಿನಿಯನ್ನು ಅಪ್ಡೇಟ್ ಮಾಡಬಹುದು. ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ನಾಮಿನಿ ವಿವರಗಳನ್ನು ನೀವು ಮಾರ್ಪಾಡು ಮಾಡಬಹುದು. ಒಮ್ಮೆ ಸೈನ್-ಇನ್ ಆದ ನಂತರ, ನೀವು ನನ್ನ ಸಂಬಂಧಗಳ ವಿಭಾಗದಿಂದ ನಿಮ್ಮ ಎಫ್‌ಡಿಯನ್ನು ಆಯ್ಕೆ ಮಾಡಬಹುದು. ನಂತರ ನೀವು 'ನಾಮಿನಿಯನ್ನು ಎಡಿಟ್ ಮಾಡಿ' ಮೇಲೆ ಕ್ಲಿಕ್ ಮಾಡಬಹುದು ಮತ್ತು ಮುಂದುವರೆಯಲು ಅಗತ್ಯವಿರುವ ವಿವರಗಳನ್ನು ನಮೂದಿಸಬಹುದು.

ಆದಾಗ್ಯೂ, ಎಫ್‌ಡಿ ನವೀಕರಣದ ಸಮಯದಲ್ಲಿ ಸಹ-ಅರ್ಜಿದಾರರ ಹೆಸರನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ.

ನಿಮ್ಮ ಎಫ್‌ಡಿ ನಾಮಿನಿಯನ್ನು ಎಡಿಟ್ ಮಾಡಿ

ನನ್ನ ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನ್‌ಗೆ ಅನ್ವಯವಾಗುವ ಬಡ್ಡಿ ದರ ಎಷ್ಟು?

ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನಿಗೆ ಬಡ್ಡಿ ದರವು ನಿಮ್ಮ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಕ್ಕಿಂತ 2% ಅಧಿಕವಾಗಿದೆ.

ಉದಾಹರಣೆಗೆ, ನೀವು ವರ್ಷಕ್ಕೆ 7% ಬಡ್ಡಿ ದರದಲ್ಲಿ 12 ತಿಂಗಳಿಗೆ ರೂ. 1 ಲಕ್ಷದ ಎಫ್‌ಡಿ ಹೊಂದಿದ್ದರೆ, ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನಿಗೆ ಬಡ್ಡಿ ದರವು ವರ್ಷಕ್ಕೆ 9% ಆಗಿರುತ್ತದೆ.

ಇದಲ್ಲದೆ, ನಿಮ್ಮ ಲೋನಿನ ಅವಧಿಯು ನಿಮ್ಮ ಎಫ್‌ಡಿ ಮೆಚ್ಯೂರಿಟಿ ದಿನಾಂಕದವರೆಗೆ ಇರುತ್ತದೆ.

ನನ್ನ ಫಿಕ್ಸೆಡ್ ಡೆಪಾಸಿಟ್ ಮೇಲೆ ನಾನು ಪಡೆಯಬಹುದಾದ ಗರಿಷ್ಠ ಲೋನ್ ಮೊತ್ತ ಎಷ್ಟು?

ನೀವು ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನಿಗೆ ಅಪ್ಲೈ ಮಾಡಿದಾಗ ನೀವು ಪಡೆಯಬಹುದಾದ ಗರಿಷ್ಠ ಲೋನ್ ಮೊತ್ತವು ಈ ಕೆಳಗಿನಂತಿರುತ್ತದೆ:

 • ಒಟ್ಟುಗೂಡಿಸಿದ ಫಿಕ್ಸೆಡ್ ಡೆಪಾಸಿಟ್‌ಗಾಗಿ, ನೀವು ನಿಮ್ಮ ಎಫ್‌ಡಿ ಮೊತ್ತದ 75% ವರೆಗೆ ಲೋನ್ ಪಡೆಯಬಹುದು.
 • ಒಟ್ಟುಗೂಡಿಸದ ಫಿಕ್ಸೆಡ್ ಡೆಪಾಸಿಟ್‌ಗಾಗಿ, ನೀವು ನಿಮ್ಮ ಎಫ್‌ಡಿ ಮೊತ್ತದ 60% ವರೆಗೆ ಲೋನ್ ಪಡೆಯಬಹುದು.

ಎಲ್ಎಎಫ್‌ಡಿ ಗೆ ಅಪ್ಲೈ ಮಾಡಿ

ನಾನು ಅನೇಕ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಹೊಂದಿದ್ದರೆ ಮೂಲದಲ್ಲಿ ನನ್ನ ತೆರಿಗೆಯನ್ನು (ಟಿಡಿಎಸ್) ಹೇಗೆ ಕಡಿತಗೊಳಿಸಲಾಗುತ್ತದೆ?

ನಿಮ್ಮ ಪ್ಯಾನ್ ಮೇಲೆ ಟಿಡಿಎಸ್ ಅನ್ನು ಲೆಕ್ಕ ಹಾಕಲಾಗುತ್ತದೆ, ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್ ಸೇರಿದಂತೆ ಎಲ್ಲಾ ಹಣಕಾಸು ಸಂಸ್ಥೆಗಳಲ್ಲಿ ನಡೆಸಲಾದ ನಿಮ್ಮ ಎಲ್ಲಾ ಫಿಕ್ಸೆಡ್ ಡೆಪಾಸಿಟ್‌ಗಳ (ಎಫ್‌ಡಿ) ಬಡ್ಡಿ ಆದಾಯವನ್ನು ಇದು ಒಳಗೊಂಡಿದೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ