Working capital

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು PAN ಪ್ರಕಾರ ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
ದಯವಿಟ್ಟು ಮಾನ್ಯವಾದ ಪ್ಯಾನ್ ಕಾರ್ಡ್ ನಂಬ‌ರ್‌ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ಮುದ್ರಾ ಲೋನ್ ಎಂದರೆ ಏನು?

ಮುದ್ರಾ ಲೋನ್ ಎಂಬುದು ಕೃಷಿ ಅಲ್ಲದ ಮತ್ತು ಕಾರ್ಪೊರೇಟ್ ಅಲ್ಲದ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಪ್ರಧಾನ್ ಮಂತ್ರಿ ಮುದ್ರಾ ಯೋಜನೆಯ (PMMY) ಅಡಿಯಲ್ಲಿ ನೀಡಲಾಗುವ ಲೋನ್ ಆಗಿದೆ. ಈ ಉದ್ಯಮಗಳು ಮುದ್ರಾ (ಮೈಕ್ರೋ ಯುನಿಟ್ಸ್ ಡೆವಲಪ್ಮೆಂಟ್ & ರಿಫೈನಾನ್ಸ್ ಏಜೆನ್ಸಿ ಲಿಮಿಟೆಡ್) ಯೋಜನೆಯಡಿ ರೂ. 10 ಲಕ್ಷಗಳವರೆಗೆ ಲೋನ್ ಪಡೆಯಬಹುದು.

ಹಕ್ಕುತ್ಯಾಗ:
ನಾವು ಈ ಸಮಯದಲ್ಲಿ ಈ ಪ್ರಾಡಕ್ಟ್ ಅನ್ನು (ಮುದ್ರಾ ಲೋನ್) ನಿಲ್ಲಿಸಿದ್ದೇವೆ. ನಮ್ಮಿಂದ ಒದಗಿಸಲಾದ ಪ್ರಸ್ತುತ ಹಣಕಾಸು ಸೇವೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು +91-8698010101 ನಲ್ಲಿ ನಮ್ಮನ್ನು ಸಂಪರ್ಕಿಸಿ.

ಪ್ರಧಾನ್ ಮಂತ್ರಿ ಮುದ್ರಾ ಲೋನ್ ಯೋಜನೆಯ ಫೀಚರ್‌ಗಳು:

ಶಿಶು ಅಡಿಯಲ್ಲಿ ಲೋನ್ ಮೊತ್ತ ಗರಿಷ್ಠ ರೂ. 50,000
ತರುಣ್ ಅಡಿಯಲ್ಲಿ ಲೋನ್ ಮೊತ್ತ ರೂ. 50,001 ರಿಂದ ರೂ. 500,000
ಕಿಶೋರ್ ಅಡಿಯಲ್ಲಿ ಲೋನ್ ಮೊತ್ತ ರೂ. 500,001 ರಿಂದ ರೂ. 10,00,000
ಪ್ರಕ್ರಿಯಾ ಶುಲ್ಕಗಳು ತರುಣ್ ಲೋನ್‌ಗೆ 0.5%, ಬೇರೆಯವರಿಗೆ ಶೂನ್ಯ
ಅರ್ಹತಾ ಮಾನದಂಡ ಹೊಸ ಮತ್ತು ಅಸ್ತಿತ್ವದಲ್ಲಿರುವ ಯೂನಿಟ್‌ಗಳು
ಮರುಪಾವತಿ ಅವಧಿ 3-5 ವರ್ಷಗಳು

ಪ್ರಧಾನ್ ಮಂತ್ರಿ ಮುದ್ರಾ ಲೋನ್ ಯೋಜನೆಯಡಿ 3 ಪ್ರಾಡಕ್ಟ್‌ಗಳಿವೆ:

1 ಶಿಶು
ಮುದ್ರಾ ಲೋನ್ ಯೋಜನೆಯಡಿಯಲ್ಲಿ ಶಿಶು, ತಮ್ಮ ವ್ಯವಹಾರದ ಆರಂಭಿಕ ಹಂತಗಳಲ್ಲಿರುವ ಅಥವಾ ಒಂದನ್ನು ಪ್ರಾರಂಭಿಸಲು ಬಯಸುವ ಉದ್ಯಮಿಗಳಿಗೆ ರೂ. 50,000 ವರೆಗೆ ಒದಗಿಸುತ್ತದೆ.
ಚೆಕ್‌ಲಿಸ್ಟ್
 • ಖರೀದಿಸಲು ಬಯಸುವ ಮಶಿನರಿಗಳ ಕೊಟೇಶನ್ ಮತ್ತು ಇತರ ವಸ್ತುಗಳು.
 • ಖರೀದಿಸಲು ಬಯಸುವ ಮಶಿನರಿಗಳ ವಿವರಗಳು.
ಸಾಲಗಾರರು ಮಶಿನರಿ ಸರಬರಾಜುದಾರರ ವಿವರಗಳನ್ನು ಕೂಡ ಒದಗಿಸಬೇಕು.

 

2 ಕಿಶೋರ್
ಕಿಶೋರ್, ಮುದ್ರಾ ಲೋನ್ ಯೋಜನೆಯಡಿಯಲ್ಲಿ, ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಲು ಹೆಚ್ಚುವರಿ ಹಣವನ್ನು ಹುಡುಕುತ್ತಿರುವ ವ್ಯಾಪಾರಿಗಳಿಗೆ ರೂ. 10 ಲಕ್ಷದವರೆಗೆ ಆಫರ್ ಮಾಡುತ್ತದೆ.
ಚೆಕ್‌ಲಿಸ್ಟ್

 • ಅಸ್ತಿತ್ವದಲ್ಲಿರುವ ಬ್ಯಾಂಕಿನಿಂದ ಹಿಂದಿನ 6 ತಿಂಗಳ ಅಕೌಂಟ್ ಸ್ಟೇಟ್ಮೆಂಟ್‌ಗಳು, ಯಾವುದಾದರೂ ಇದ್ದಲ್ಲಿ.
 • ಕಳೆದ 2 ವರ್ಷಗಳ ಬ್ಯಾಲೆನ್ಸ್ ಶೀಟ್.
 • ಆದಾಯ / ಮಾರಾಟ ತೆರಿಗೆ ರಿಟರ್ನ್‌ಗಳು.
 • 1 ವರ್ಷದ ಅಥವಾ ಲೋನಿನ ಅವಧಿಗೆ ಅಂದಾಜಿನ ಬ್ಯಾಲೆನ್ಸ್ ಶೀಟ್.
 • ಮೆಮೋರಾಂಡಮ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್, ಯಾವುದಾದರೂ.
 • ಲೋನಿನ ಅಪ್ಲೈ ಮಾಡುವ ಮೊದಲು ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಡಲಾದ ಮಾರಾಟಗಳು.
ಬಿಸಿನೆಸ್ಸಿನ ಆರ್ಥಿಕ ಮತ್ತು ತಾಂತ್ರಿಕ ಕಾರ್ಯಸಾಧ್ಯತೆಯನ್ನು ಒಳಗೊಂಡಿರುವ ವರದಿಯನ್ನು ಕೂಡ ಸಾಲಗಾರರು ಒದಗಿಸಬೇಕು.

 

3 ತರುಣ್
ಪ್ರಧಾನ್ ಮಂತ್ರಿ ಮುದ್ರಾ ಲೋನ್ ವ್ಯವಸ್ಥೆಯಡಿಯಲ್ಲಿ, ಬಿಸಿನೆಸ್ ಮಾಲೀಕರು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ತರುಣ್ ರೂ. 10 ಲಕ್ಷದವರೆಗೆ ಮಂಜೂರು ಮಾಡುತ್ತದೆ.
ಚೆಕ್‌ಲಿಸ್ಟ್
 • ಕಿಶೋರ್‌ ತರಹವೇ ಇದೆ.
ಮೇಲಿನವುಗಳ ಜೊತೆಗೆ, ಸಾಲಗಾರರು ಇದನ್ನೂ ಒದಗಿಸಬೇಕು:
 • SC, ST, OBC, ಇತ್ಯಾದಿಗಳ ಪ್ರಮಾಣಪತ್ರ.
 • ವಿಳಾಸದ ಪುರಾವೆ
 • ಗುರುತಿನ ಪುರಾವೆ

ನೀವು ಯಾವುದೇ ಚಿಂತೆಯಿಲ್ಲದೇ ಹೆಚ್ಚಿನ ಮೊತ್ತದ ಲೋನನ್ನು ಹುಡುಕುತ್ತಿದ್ದರೆ, ಬಜಾಜ್ ಫಿನ್‌ಸರ್ವ್‌ನ ಬಿಸಿನೆಸ್ ಲೋನ್ ಬಜಾಜ್ ಫಿನ್‌ಸರ್ವ್‌ನಿಂದ ನಿಮ್ಮ SME ಗಳಂತವುಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ರೂ. 45 ಲಕ್ಷದವರೆಗಿನ ಸುರಕ್ಷಿತವಲ್ಲದ ಲೋನ್‌ಗಳೊಂದಿಗೆ, ನಿಮ್ಮ ಅಪ್ಲಿಕೇಶನ್ ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ 24 ಗಂಟೆಗಳ ಒಳಗೆ ಅನುಮೋದನೆ ಪಡೆಯುತ್ತದೆ. ಬಜಾಜ್ ಫಿನ್‌ಸರ್ವ್ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಮುಂಚಿತ-ಅನುಮೋದಿತ ಆಫರ್‌ಗಳನ್ನು ಕೂಡ ಒದಗಿಸುತ್ತದೆ, ಇದು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುತ್ತದೆ.
 

PM ಮುದ್ರಾ ಯೋಜನೆಯ ಉದ್ದೇಶ

ಆರ್ಥಿಕ ಮತ್ತು ಸಾಮಾಜಿಕ ಯಶಸ್ಸನ್ನು ಸಾಧಿಸಲು ಒಳಗೊಂಡಿರುವ ಉದ್ಯಮಶೀಲತೆಯ ಸಂಸ್ಕೃತಿಯನ್ನು ರಚಿಸುವ ಗುರಿಯೊಂದಿಗೆ PM ಮುದ್ರಾ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ, ಆರ್ಥಿಕ ಬೆಳವಣಿಗೆಗೆ ಉತ್ತಮ ಅಭ್ಯಾಸಗಳನ್ನು ಪ್ರೋತ್ಸಾಹಿಸಲು ಸಣ್ಣ ವ್ಯವಹಾರಗಳು ಮತ್ತು ಸೂಕ್ಷ್ಮ ಉದ್ಯಮಗಳಿಗೆ ಹಣಕಾಸಿನ ನೆರವು ಮತ್ತು ಇತರ ಬೆಂಬಲವನ್ನು ಒದಗಿಸುವ ಗುರಿಯನ್ನು ಸರ್ಕಾರವು ಹೊಂದಿದೆ.

ಮುದ್ರಾ ಯೋಜನೆಯ ಸಂಗ್ರಹಣೆ

ರೂ. 2,79,481.48 ಕೋಟಿ ಮೌಲ್ಯದ ಲೋನ್‌ಗಳು 2015 ರಲ್ಲಿ ಯೋಜನೆಯ ಆರಂಭದಿಂದ ಪ್ರಧಾನ್ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಕೋಟಿಯನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ, ಒಟ್ಟು ರೂ. 2,64,676.44 ಕೋಟಿಯನ್ನು ವಿತರಿಸಲಾಗಿದೆ.

 

ಮುದ್ರಾ ಲೋನ್ FAQ ಗಳು

 

ಮುದ್ರಾ ಏನನ್ನು ಹೇಳುತ್ತದೆ?

ಭಾರತದ ಕೇಂದ್ರ ಸರ್ಕಾರವು ಸೂಕ್ಷ್ಮ-ಉದ್ಯಮ ಉದ್ಯಮಗಳ ಅಭಿವೃದ್ಧಿಗೆ ಬೆಂಬಲ ನೀಡಲು ಮುದ್ರಾ (ಮೈಕ್ರೋ ಯುನಿಟ್ಸ್ ಡೆವಲಪ್ಮೆಂಟ್ ಆಂಡ್ ರಿಫೈನಾನ್ಸ್ ಏಜೆನ್ಸಿ ಲಿಮಿಟೆಡ್) ಅನ್ನು ಸ್ಥಾಪಿಸಿತು. ಬ್ಯಾಂಕುಗಳು ಮತ್ತು NBFC ಗಳಂತಹ ವಿವಿಧ ಹಣಕಾಸು ಸಂಸ್ಥೆಗಳ ಮೂಲಕ ಸಣ್ಣ ಬಿಸಿನೆಸ್ ವಲಯಕ್ಕೆ ಹಣಕಾಸಿನ ಸೌಲಭ್ಯಗಳನ್ನು ಒದಗಿಸುವುದು PM ಮುದ್ರಾ ಲೋನಿನ ಉದ್ದೇಶವಾಗಿದೆ.

 

ಮುದ್ರಾ ಲೋನಿಗೆ ವಿಧಿಸಲಾಗುವ ಬಡ್ಡಿ ದರ ಎಷ್ಟು?

ಮುದ್ರಾ ಲೋನ್ ಮೇಲಿನ ಬಡ್ಡಿ ದರವು ಕಡಿಮೆಯಾಗಿರುತ್ತದೆ. ಪ್ರಧಾನ್ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ, RBI ಮಾರ್ಗಸೂಚಿಗಳನ್ನು ಅನುಸರಿಸಲು ಮತ್ತು ಸಮಂಜಸವಾದ ಬಡ್ಡಿ ದರವನ್ನು ವಿಧಿಸಲು ಬ್ಯಾಂಕ್‌ಗಳು ಮತ್ತು NBFC ಗಳಿಗೆ ಸಲಹೆ ನೀಡಲಾಗಿದೆ.

 

ಮುದ್ರಾ ಲೋನಿಗೆ ಯಾರು ಅರ್ಹರಾಗಿರುತ್ತಾರೆ?

ಮುದ್ರಾ ಫೈನಾನ್ಸ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡದೊಂದಿಗೆ ಬರುತ್ತದೆ. ನೀವು 18 ಮತ್ತು 65 ವರ್ಷಗಳ ನಡುವಿನ ವಯಸ್ಸಿನ ಭಾರತೀಯ ನಾಗರಿಕರಾಗಿದ್ದರೆ, ಉತ್ಪಾದನೆ, ಪ್ರಕ್ರಿಯೆ ಅಥವಾ ಸೇವಾ ವಲಯದಂತಹ ಯಾವುದೇ ಕೃಷಿಯೇತರ ಚಟುವಟಿಕೆಗಳಿಗೆ ಬಿಸಿನೆಸ್ ಪ್ಲಾನ್ ಹೊಂದಿದ್ದರೆ, ನೀವು ಬ್ಯಾಂಕ್ ಅಥವಾ NBFC ಮೂಲಕ PMMY ಅಡಿಯಲ್ಲಿ ಮುದ್ರಾ ಲೋನಿಗೆ ಅಪ್ಲೈ ಮಾಡಬಹುದು. ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿ ಸಣ್ಣ ಉತ್ಪಾದನಾ ಘಟಕಗಳು, ದುರಸ್ತಿ ಅಂಗಡಿಗಳು, ಏಕಮಾತ್ರ ಮಾಲೀಕತ್ವ ಅಥವಾ ಪಾಲುದಾರಿಕೆ ಸಂಸ್ಥೆಗಳು, ಸಣ್ಣ ಉತ್ಪಾದನಾ ಘಟಕಗಳ ಕಾರ್ಯನಿರ್ವಹಿಸುವವರು, ದುರಸ್ತಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಈ ಸೌಲಭ್ಯ ಲಭ್ಯವಿದೆ.

ನೀವು ಈ ಸರಳ ಮುದ್ರಾ ಲೋನ್ ಅರ್ಹತೆಯ ಮಾನದಂಡಗಳನ್ನುಪೂರೈಸಿದರೆ, ನೀವು ಕಡಿಮೆ ಬಡ್ಡಿ ದರದಲ್ಲಿ PMMY ಮೂಲಕ ಸುಲಭವಾಗಿ ರೂ. 10 ಲಕ್ಷದವರೆಗಿನ ಲೋನನ್ನು ಪಡೆಯಬಹುದು.

ಮುದ್ರಾ ಲೋನಿಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

ನೀವು ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ನೀವು ಮುದ್ರಾ ಲೋನಿಗೆ ಅಪ್ಲೈ ಮಾಡಲು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ. ಮುದ್ರಾ ಲೋನ್ ಡಾಕ್ಯುಮೆಂಟ್‌ಗಳ ಪಟ್ಟಿ ಈ ಕೆಳಗಿನಂತಿವೆ.

ಗುರುತಿನ ಪುರಾವೆ: ಆಧಾರ್ ಕಾರ್ಡ್, PAN ಕಾರ್ಡ್, ಪಾಸ್‌ಪೋರ್ಟ್, ವೋಟರ್ ID ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ.

ವಿಳಾಸದ ಪುರಾವೆ: ಯುಟಿಲಿಟಿ ಬಿಲ್‌ಗಳು, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಇತ್ಯಾದಿ.

ಬಿಸಿನೆಸ್ ಪುರಾವೆ: ಬಿಸಿನೆಸ್ ಅಸ್ತಿತ್ವ, ಪಾಲುದಾರಿಕೆ ಪತ್ರ ಇತ್ಯಾದಿಗಳನ್ನು ಖಚಿತಪಡಿಸುವ ಪರವಾನಗಿ ಅಥವಾ ನೋಂದಣಿ ಡಾಕ್ಯುಮೆಂಟ್.

ಆದಾಯ ಪುರಾವೆ: ಕಳೆದ 2 ವರ್ಷಗಳ ಬ್ಯಾಲೆನ್ಸ್ ಶೀಟ್, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್, ಆದಾಯ ತೆರಿಗೆ ರಿಟರ್ನ್ಸ್ ಇತ್ಯಾದಿ.

ಮುದ್ರಾ ಲೋನ್ ಈಗ ಲಭ್ಯವಿದೆಯೇ?

ಭಾರತ ಸರ್ಕಾರದಿಂದ ಸ್ಥಾಪಿಸಲಾದ ಮುದ್ರಾ ಯೋಜನೆಯು ಬ್ಯಾಂಕುಗಳು ಮತ್ತು NBFC ಗಳಂತಹ ಪ್ರಮುಖ ಹಣಕಾಸು ಸಂಸ್ಥೆಗಳ ಮೂಲಕ ಸಣ್ಣ ವ್ಯವಹಾರಗಳಿಗೆ ರೂ. 10 ಲಕ್ಷದವರೆಗಿನ ಮರುಹಣಕಾಸಿನ ನೆರವನ್ನು ಒದಗಿಸುತ್ತದೆ. ಮುದ್ರಾ ಅಡಿಯಲ್ಲಿ, ಮೂರು ವಿಭಿನ್ನ ಲೋನ್ ಯೋಜನೆಗಳಿವೆ, ಅವುಗಳೆಂದರೆ:

• ಶಿಶು: ಇದು ₹ 50,000 ವರೆಗಿನ ಲೋನ್‌ಗಳನ್ನು ಕವರ್ ಮಾಡುತ್ತದೆ
• ಕಿಶೋರ್: ಇದು ₹ 50,000 ಕ್ಕಿಂತ ಹೆಚ್ಚಿನ ಮತ್ತು ₹ 5 ಲಕ್ಷದವರೆಗಿನ ಲೋನ್‌ಗಳನ್ನು ಕವರ್ ಮಾಡುತ್ತದೆ
• ತರುಣ್: ಇದು ರೂ. 5 ಲಕ್ಷಕ್ಕಿಂತ ಹೆಚ್ಚಿನ ಮತ್ತು ರೂ. 10 ಲಕ್ಷದವರೆಗಿನ ಲೋನ್‌ಗಳನ್ನು ಕವರ್ ಮಾಡುತ್ತದೆ
 

ಮುದ್ರಾ ಲೋನಿನ ಗರಿಷ್ಠ ಮಿತಿ ಎಷ್ಟು?

ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ ನಂತರ, ನೀವು ಕಡಿಮೆ ಬಡ್ಡಿ ದರದಲ್ಲಿ ಮುದ್ರಾ ಲೋನ್ ಯೋಜನೆಯಡಿ ಗರಿಷ್ಠ ರೂ. 10 ಲಕ್ಷ ಮೊತ್ತವನ್ನು ಪಡೆಯಬಹುದು.

 

ಮುದ್ರಾ ಲೋನ್‌ಗಳು ಮಹಿಳೆಯರಿಗೆ ಸುಲಭವಾಗಿ ಲಭ್ಯವಿದೆಯೇ?

ಮಹಿಳೆಯರ ಉದ್ಯಮಶೀಲತೆಯನ್ನು ಬೆಂಬಲಿಸಲು, ಭಾರತ ಸರ್ಕಾರವು ಮಹಿಳೆಯರಿಗೆ ಕೂಡ ಮುದ್ರಾ ಹಣಕಾಸನ್ನು ವಿಸ್ತರಿಸುತ್ತದೆ. ಮಹಿಳೆಯರ ಮುದ್ರಾ ಯೋಜನೆ ಸ್ಕೀಮ್ ಅಡಿಯಲ್ಲಿ, ಉದಯೋನ್ಮುಖ ಮಹಿಳಾ ಉದ್ಯಮಿಗಳು ರೂ. 10 ಲಕ್ಷದವರೆಗಿನ ಮುದ್ರಾ ಲೋನ್ ಪಡೆಯಬಹುದು, ಆದರೆ ಅವರು ಕೃಷಿಯೇತರ ಅಂದರೆ, ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ಬಿಸಿನೆಸ್ ಹೊಂದಿರಬೇಕು.

MSME ಎಂದರೇನು?

MSME ಎಂದರೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ. 2006 ರ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ ಅಭಿವೃದ್ಧಿ (ಎಂಎಸ್ಎಂಇಡಿ) ಕಾಯ್ದೆಯೊಂದಿಗಿನ ಒಪ್ಪಂದದಲ್ಲಿ ಭಾರತ ಸರ್ಕಾರ ಇದನ್ನು ಪರಿಚಯಿಸಿತು. ಈ ಕಾಯ್ದೆಯ ಪ್ರಕಾರ, MSME ಗಳೆಂದರೆ ಸರಕುಗಳು ಮತ್ತು ಸರಕುಗಳ ಉತ್ಪಾದನೆ, ಪ್ರಕ್ರಿಯೆ ಅಥವಾ ಸಂರಕ್ಷಣೆಯಲ್ಲಿ ಒಳಗೊಂಡಿರುವ ಉದ್ಯಮಗಳಾಗಿವೆ. ಆರ್ಥಿಕ ಬೆಳವಣಿಗೆಗೆ ಪ್ರಮುಖವಾಗಿದೆ, ಈ ವಲಯವು ದೇಶದ GDP ಗೆ ಮೂರನೇ ಒಂದು ಭಾಗದ ಕೊಡುಗೆ ನೀಡುತ್ತದೆ ಮತ್ತು ಸುಮಾರು 110 ಮಿಲಿಯನ್ ಜನಸಂಖ್ಯೆಗೆ ಉದ್ಯೋಗವನ್ನು ಸೃಷ್ಟಿಸುತ್ತದೆ.

ಭಾರತದಲ್ಲಿ MSME

ಈ ಹಲವಾರು ಉದ್ಯಮಗಳು ಗ್ರಾಮೀಣ ಭಾರತದಲ್ಲಿ ಕಾರ್ಯನಿರ್ವಹಿಸುವುದರಿಂದ ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. 2018-2019 ರ ಸರ್ಕಾರದ ವಾರ್ಷಿಕ ವರದಿಯ ಪ್ರಕಾರ, ದೇಶದಲ್ಲಿ 6 ಲಕ್ಷಕ್ಕಿಂತ ಹೆಚ್ಚು MSME ಗಳು ಕಾರ್ಯನಿರ್ವಹಿಸುತ್ತವೆ.

ಆರಂಭದಲ್ಲಿ, ಎರಡು ಅಂಶಗಳ ಆಧಾರದ ಮೇಲೆ MSME ಗಳನ್ನು ವರ್ಗೀಕರಿಸಲಾಯಿತು - ಕಾರ್ಖಾನೆ/ಯಂತ್ರೋಪಕರಣಗಳಲ್ಲಿ ಹೂಡಿಕೆ ಮತ್ತು ಉದ್ಯಮಗಳ ವಾರ್ಷಿಕ ವಹಿವಾಟು. ಆದಾಗ್ಯೂ, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಇತ್ತೀಚೆಗೆ ಈ ಎರಡು ಅಂಶಗಳನ್ನು ಒಂದೇ ಮಾನದಂಡವಾಗಿ ಸಂಯೋಜಿಸುವ ಮೂಲಕ ವರ್ಗೀಕರಣವನ್ನು ಪರಿಷ್ಕರಿಸಿದೆ.

ಜನರು ಇವನ್ನೂ ಪರಿಗಣಿಸಿದ್ದಾರೆ

Digital Health EMI Network Card

ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

100% ಕ್ಯಾಶ್‌ಬ್ಯಾಕಿನೊಂದಿಗೆ ನಿಮ್ಮ ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್ ಪಡೆಯಿರಿ

ಈಗಲೇ ಪಡೆಯಿರಿ
Working Capital Loan People Considered Image

ವರ್ಕಿಂಗ್ ಕ್ಯಾಪಿಟಲ್ ಲೋನ್

ಕಾರ್ಯಾಚರಣೆಗಳನ್ನು ನಿರ್ವಹಿಸಲು ರೂ. 45 ಲಕ್ಷದವರೆಗೆ ಪಡೆಯಿರಿ | ಫ್ಲೆಕ್ಸಿಬಲ್ ಕಾಲಾವಧಿ ಆಯ್ಕೆಗಳು

ತಿಳಿಯಿರಿ
Business Loan for Women People Considered Image

ಮಹಿಳೆಯರಿಗೆ ಬಿಸಿನೆಸ್ ಲೋನ್‌

ರೂ. 45 ಲಕ್ಷದವರೆಗೆ ಹಣ ಪಡೆಯಿರಿ | ಕಡಿಮೆ ಡಾಕ್ಯುಮೆಂಟೇಶನ್

ತಿಳಿಯಿರಿ
Business Loan People Considered Image

ಬಿಸಿನೆಸ್ ಲೋನ್

ನಿಮ್ಮ ಬಿಸಿನೆಸ್ ಬೆಳವಣಿಗೆಗೆ ಸಹಾಯ ಮಾಡಲು ರೂ. 45 ಲಕ್ಷದವರೆಗಿನ ಲೋನ್

ಅಪ್ಲೈ