ನಿಮ್ಮ ಜಂಟಿ ಹೋಮ್ ಲೋನ್ ಸಹ-ಅರ್ಜಿದಾರನ ಹೆಸರನ್ನು ನೀವು ತೆಗೆದುಹಾಕಲು ಬಯಸಿದರೆ, ನೀವು ನಿಮ್ಮ ಸಾಲದಾತರ ಬಳಿ ಒಪ್ಪಂದದ ಬದಲಾವಣೆಗಾಗಿ ಕೇಳಬೇಕು. ಆಗ ಮೂಲ ಒಪ್ಪಂದಕ್ಕೆ ಬದಲಾಗಿ ಹೊಸ ಒಪ್ಪಂದವು ಪರ್ಯಾಯವಾಗಿ ದೊರೆಯುತ್ತದೆ ಹಾಗೂ ಅವರು ಸಂಪೂರ್ಣವಾಗಿ ಹಣಕಾಸಿನ ಜವಾಬ್ದಾರಿಯನ್ನು ಹೊರುತ್ತಾರೆ.
ಒಂದೊಮ್ಮೆ ನಿಮ್ಮ ಸಾಲದಾತರು ಒಪ್ಪಂದ ಬದಲಾವಣೆಯನ್ನು ಅನುಮತಿಸದಿದ್ದರೆ, ಆಗ ನೀವು ನಿಮ್ಮ ಸಹ-ಮಾಲೀಕರನ್ನು ಹೋಮ್ ಲೋನ್ ರೀಫೈನಾನ್ಸ್ ಮಾಡಲು ಕೇಳಬೇಕು. ಆದಾಗ್ಯೂ, ಅವರ ಕ್ರೆಡಿಟ್ ಸ್ಕೋರ್ ಹೋಮ್ ಲೋನ್ ಅಪ್ಲೈ ಮಾಡಲು ಬೇಕಾದ ಅರ್ಹತೆಯನ್ನು ಹೊಂದಿರಬೇಕು ಹಾಗೂ ಅವರೊಬ್ಬರ ಹೆಸರಿನಲ್ಲಿ ಮಾತ್ರವೇ ಬಾಕಿ ಉಳಿಕೆಯ ವರ್ಗಾವಣೆ ಮಾಡಿಕೊಳ್ಳಲು ತಕ್ಕಷ್ಟು ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಅವರು ಕೆಲವು ಡಾಕ್ಯುಮೆಂಟ್ಗಳನ್ನು ನೀಡಬೇಕಾಗುವುದು, ಯಾವುದೆಂದರೆ 6 ತಿಂಗಳ ಬ್ಯಾಂಕ್ ಅಕೌಂಟಿನ ಸ್ಟೇಟ್ಮೆಂಟ್, ಪೇ ಸ್ಟಬ್ಸ್, ಎರಡು ವರ್ಷಗಳ ಕಾಲದ ತೆರಿಗೆ ರಿಟರ್ನ್ ಮತ್ತು KYC ಡಾಕ್ಯುಮೆಂಟ್ಗಳು.
ಮನೆಯ ಮಾಲೀಕತ್ವವನ್ನು ಬಿಟ್ಟು ಕೊಡಲು ನೀವು ಕ್ವಿಟ್ ಕ್ಲೈಮ್ ಪತ್ರದಲ್ಲಿ ಕೂಡ ಸಹಿ ಮಾಡಬೇಕಾಗುತ್ತದೆ, ಆದರೆ ನಿಮ್ಮ ಸಹ-ಮಾಲೀಕರು ರೀಫೈನಾನ್ಸಿಂಗಿಗೆ ಅರ್ಹತೆ ಪಡೆಯದಿದ್ದರೆ ನೀವು ಆಸ್ತಿಯನ್ನು ಮಾರಾಟ ಮಾಡುವತ್ತ ಗಮನಿಸಬೇಕು.