ನಿಮ್ಮ ಹೋಮ್ ಲೋನ್ ಬಡ್ಡಿದರಗಳನ್ನು ಕಡಿಮೆ ಮಾಡುವುದು ಹೇಗೆ?

2 ನಿಮಿಷದ ಓದು

ತನ್ನ ಬೃಹತ್ ಮಂಜೂರಾತಿ ಮೊತ್ತ ಮತ್ತು ದೀರ್ಘ ಅವಧಿಯಿಂದಾಗಿ ಹೋಮ್ ಲೋನ್ ಒಂದು ದುಬಾರಿ ಲೋನ್ ಆಗಿದೆ. ಸ್ವಾಭಾವಿಕವಾಗಿ, ಒಂದು ದಶಕ ಅಥವಾ ಎರಡು ದಶಕಗಳ ದೀರ್ಘ ಅವಧಿಯ ಲೋನ್ ನೀಡುವಾಗ, ಬಡ್ಡಿಯು ತುಂಬಾ ಹೆಚ್ಚಾಗಿಯೇ ಇರುತ್ತದೆ. ಆದಾಗ್ಯೂ, ಕಡಿಮೆ ಬಡ್ಡಿದರವನ್ನು ಪಡೆಯುವ ಮೂಲಕ, ನೀವು ನಿಮ್ಮ ಹೋಮ್ ಲೋನ್ ಮೇಲಿನ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಿ, ಸಾಕಷ್ಟು ಹಣ ಉಳಿಸಬಹುದು.

ನಿಮ್ಮ ಹೋಮ್ ಲೋನ್ ಬಡ್ಡಿದರಗಳನ್ನು ಕಡಿಮೆ ಮಾಡುವ ಕೆಲವು ಮಾರ್ಗಗಳು ಹೀಗಿವೆ.

ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಮಾಡಲು ಗಮನಿಸಿ

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಎಂಬುದು ಒಂದು ಸುಗಮ ಪರಿಹಾರವಾಗಿದ್ದು, ಇದು ಹೆಚ್ಚು ಅನುಕೂಲಕರ ಅವಧಿಯುಳ್ಳ ಸಾಲದಾತರಿಗೆ ನಿಮ್ಮ ಲೋನ್ ಅನ್ನು ವರ್ಗಾಯಿಸುವ ಅವಕಾಶ ನೀಡುತ್ತದೆ. ಈ ಕ್ರಮವು ನಿಮಗೆ ನಿಜವಾಗಿಯೂ ಲಾಭದಾಯಕವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಅಪ್ಲೈ ಮಾಡುವ ಮೊದಲು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕ್ಯಾಲ್ಕುಲೇಟರ್ ಬಳಸಿ. ಅತಿಕಡಿಮೆ ದರ ಸಿಕ್ಕಿದರೂ ಸಹ, ಲೋನ್ ಅವಧಿ ಇನ್ನೇನು ಮುಗಿಯುತ್ತಾ ಬಂದಿರುವಾಗ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡುವುದು ಅಷ್ಟೇನೂ ಸೂಕ್ತವಲ್ಲ. ಬುದ್ಧಿವಂತಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಲು, ಈ ಕ್ಯಾಲ್ಕುಲೇಟರ್ ನಿಮಗೆ ಅಗತ್ಯ ಮಾಹಿತಿ ನೀಡುತ್ತದೆ.

ಹೋಮ್ ಲೋನ್‌ ನಲ್ಲಿ ಫ್ಲೋಟಿಂಗ್ ಬಡ್ಡಿ ದರವನ್ನು ಅಯ್ಕೆ ಮಾಡಿ

ಈ ವಿಧಾನವನ್ನು ನೀವು ಲೋನ್ ಪಡೆಯುವ ಮೊದಲೇ ಬಳಸುವುದು ಸೂಕ್ತ. ಹೋಮ್ ಲೋನ್ ಬಡ್ಡಿದರಗಳು ಲೋನ್ ವಿಧದ ಆಧಾರದ ಮೇಲೆ ಬದಲಾಗುವುದರಿಂದ, ಸರಿಯಾದ ವಿಧವನ್ನು ಆಯ್ಕೆ ಮಾಡುವುದು ಮುಖ್ಯ. ನೀವು ಫ್ಲೋಟಿಂಗ್ ಅಥವಾ ಫಿಕ್ಸೆಡ್ ಬಡ್ಡಿದರ ಆಯ್ಕೆ ಮಾಡುವ ಅವಕಾಶ ಹೊಂದಿದ್ದೀರಿ ಮತ್ತು ಫ್ಲೋಟಿಂಗ್ ಬಡ್ಡಿದರವು ಕಾಲಕ್ರಮೇಣ ಹೆಚ್ಚು ಅನುಕೂಲಕರವಾಗಿ ಮಾರ್ಪಡುತ್ತದೆ. ಇದು ದೊಡ್ಡ ಅಪಾಯದ ಸಾಮರ್ಥ್ಯವನ್ನು ಹೊಂದಿರುವವರಿಗೆ ಸೂಕ್ತ ಆಯ್ಕೆಯಾಗಿದ್ದು, ನಿಮಗೆ ಸಾಕಷ್ಟು ಉಳಿತಾಯ ಮಾಡಲು ನೆರವಾಗುವ ಸಾಮರ್ಥ್ಯ ಹೊಂದಿದೆ.

ನೀವು ಹೋಮ್ ಲೋನ್ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲದಿದ್ದರೆ, ಬಡ್ಡಿ ಪಾವತಿಸಲು ತಗಲುವ ಖರ್ಚನ್ನು ಕಡಿಮೆ ಮಾಡಿ. ಅದಕ್ಕೊಂದು ಜಾಣ ಮಾರ್ಗವೆಂದರೆ, ಆಗಾಗ್ಗೆ ಭಾಗಶಃ-ಮುಂಪಾವತಿಗಳನ್ನು ಮಾಡುವುದು. ನಿಮ್ಮ ಅಸಲನ್ನು ಮುಂಗಡ ಪಾವತಿಸುವುದರಿಂದ ಲೋನ್ ಮೇಲಿನ ಬಡ್ಡಿ ಕಡಿಮೆಯಾಗುತ್ತದೆ. ಪ್ರತಿ ಪಾವತಿಯೊಂದಿಗೆ ನೀವು ಎಷ್ಟು ಉಳಿತಾಯ ಮಾಡಬಹುದು ಎಂಬುದನ್ನು ನಿಖರವಾಗಿ ಲೆಕ್ಕ ಹಾಕಲು ಹೋಮ್ ಲೋನ್ ಭಾಗಶಃ ಮುಂಪಾವತಿ ಕ್ಯಾಲ್ಕುಲೇಟರ್ ಬಳಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ