ವರ್ಕಿಂಗ್ ಕ್ಯಾಪಿಟಲ್ ಲೋನ್ ಬಡ್ಡಿಯನ್ನು ಲೆಕ್ಕ ಹಾಕುವುದು ಹೇಗೆ?
ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಲೋನ್ ಮೇಲೆ ಮಾನ್ಯುಯಲ್ ಆಗಿ ಬಡ್ಡಿಯನ್ನು ಲೆಕ್ಕ ಹಾಕುವುದು ದೀರ್ಘವಾದ ಕಾರ್ಯ ಮತ್ತು ದೋಷಪೂರಿತ ಫಲಿತಾಂಶಗಳನ್ನು ಉಂಟುಮಾಡಬಹುದು. ದೋಷ-ರಹಿತ ಫಲಿತಾಂಶಗಳಿಗಾಗಿ ನೀವು ನಮ್ಮ ವರ್ಕಿಂಗ್ ಕ್ಯಾಪಿಟಲ್ ಲೋನ್ ಕ್ಯಾಲ್ಕುಲೇಟರ್ ಬಳಸಬಹುದು ಮತ್ತು ಕೆಲವು ಸುಲಭ ಹಂತಗಳಲ್ಲಿ ಪಾವತಿಸಬೇಕಾದ ಒಟ್ಟು ಬಡ್ಡಿಯನ್ನು ಲೆಕ್ಕ ಹಾಕಬಹುದು. ನೀವು ಲೋನ್ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರವನ್ನು ನಮೂದಿಸಬೇಕು, ಮತ್ತು ಈ ಆನ್ಲೈನ್ ಟೂಲ್ ನಿಮಗೆ ಪಾವತಿಸಬೇಕಾದ ಒಟ್ಟು ಬಡ್ಡಿ ಮತ್ತು ಇಎಂಐ ಮೊತ್ತವನ್ನು ತಕ್ಷಣವೇ ಒದಗಿಸುತ್ತದೆ.
ಬಜಾಜ್ ಫಿನ್‌ಸರ್ವ್ ವಾರ್ಷಿಕ 9.75% - 30% ರಷ್ಟು ಕಡಿಮೆ ಬಡ್ಡಿ ದರಗಳಿಂದ ಆರಂಭವಾಗುವ ರೂ. 50 ಲಕ್ಷದವರೆಗಿನ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳನ್ನು ಒದಗಿಸುತ್ತಿದ್ದು, ಇದನ್ನು 180 ತಿಂಗಳವರೆಗಿನ ಇಎಂಐಗಳಲ್ಲಿ ಅನುಕೂಲಕರವಾಗಿ ಮರುಪಾವತಿಸಬಹುದು. ಅಂತಹ ಲೋನ್‌ಗಳು ನಿಮಗೆ ಅಲ್ಪಾವಧಿಯ ಬಿಸಿನೆಸ್ ವೆಚ್ಚಗಳನ್ನು ನಿರ್ವಹಿಸಲು ಗಮನಾರ್ಹ ಬಂಡವಾಳವನ್ನು ಮಾತ್ರವಲ್ಲದೆ ಆನ್ಲೈನ್ ಅಕೌಂಟ್ ಸೌಲಭ್ಯ, ವಿಶೇಷ ಮುಂಚಿತ-ಅನುಮೋದಿತ ಆಫರ್‌ಗಳು ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತವೆ. ಇದಲ್ಲದೆ, ನೀವು ಕೇವಲ 48 ಗಂಟೆಗಳಲ್ಲಿ ಕೇವಲ ಎರಡು ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ಈ ಲೋನ್‌ಗಳನ್ನು ಪಡೆಯಬಹುದು.