ಹೋಮ್ ಲೋನ್ EMI ಪಾವತಿ

  1. ಹೋಮ್
  2. >
  3. ಹೋಮ್ ಲೋನ್‌
  4. >
  5. ಹೋಮ್ ಲೋನ್ ಸ್ಟ್ಯಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕಗಳನ್ನು ಕೂಡ ಒಳಗೊಂಡಿರುತ್ತದೆಯೇ?

ಹೋಮ್ ಲೋನ್ ಸ್ಟ್ಯಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕಗಳನ್ನು ಕೂಡ ಒಳಗೊಂಡಿರುತ್ತದೆಯೇ?

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಹೋಮ್ ಲೋನ್ ಸ್ಟ್ಯಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕಗಳನ್ನು ಕೂಡ ಒಳಗೊಂಡಿರುತ್ತದೆಯೇ?

ಮನೆ ಖರೀದಿಸುವ ಪ್ರಕ್ರಿಯೆಯು ಮನೆಗೆ ಪಾವತಿಸುವುದು ಮಾತ್ರವಲ್ಲದೆ ವಿವಿಧ ಹೆಚ್ಚುವರಿ ಖರ್ಚುಗಳನ್ನೂ ಒಳಗೊಂಡಿರುತ್ತದೆ. ಅದರಲ್ಲಿ ಪಾರ್ಕಿಂಗ್ ಜಾಗಕ್ಕಾಗಿ ಅಥವಾ ನಿರ್ವಹಣಾ ಶುಲ್ಕವನ್ನು ಪಾವತಿಸುವುದು ಒಂದು ರೀತಿಯ ಖರ್ಚಾದರೆ, ಮತ್ತೊಂದು ಕಡ್ಡಾಯ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು, ಅವುಗಳನ್ನು ನಿಮ್ಮ ಮನೆ ಖರೀದಿಯ ಫಾರ್ಮಾಲಿಟಿಗಳನ್ನು ಪೂರ್ಣಗೊಳಿಸುವುದಕ್ಕಾಗಿ ಪಾವತಿಸಲೇಬೇಕಾಗುತ್ತದೆ. ಆಸ್ತಿ ಬೆಲೆಗಳು ಹೆಚ್ಚಾಗಿರುವಾಗ, ಮನೆ ಖರೀದಿಯ ಗರಿಷ್ಠ ಖರ್ಚುಗಳನ್ನು ಭರಿಸುವ ಒಂದು ಉತ್ತಮ ಹೋಮ್ ಲೋನ್ ಮಂಜೂರಾತಿಗಾಗಿ ನೀವು ಎದುರುನೋಡಬೇಕಾಗುತ್ತದೆ. ಆದರೆ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನು ಸಾಮಾನ್ಯವಾಗಿ ನಿಮ್ಮ ಹೋಮ್ ಲೋನ್ ಮಂಜೂರಾತಿಯಿಂದ ಹೊರಗಿಡಲಾಗುತ್ತದೆ. ಆದ್ದರಿಂದ ಈ ಶುಲ್ಕಗಳು ಪಾಕೆಟ್ ಹೊರಗಿನ ಖರ್ಚುಗಳಾಗಿವೆ, ಹಾಗಾಗಿ ಅದಕ್ಕೆ ತಕ್ಕಂತೆ ಉಳಿತಾಯ ಮಾಡಬೇಕಾಗುತ್ತದೆ

ಈಗಿನ ದರಗಳಿಗೆ ಹೋಲಿಸಿದರೆ ಕೆಲವು ರಾಜ್ಯಗಳಲ್ಲಿ 12% ರಷ್ಟಿರುವ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನು ಆಸ್ತಿಯ ವೆಚ್ಚದ 5–6% ರಷ್ಟು ಕಡಿಮೆ ಮಾಡಿದರೆ ಹೇಗೆ ಎಂದು ಇತ್ತೀಚೆಗೆ ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಸ್ತುತ, ಶೇಕಡಾವಾರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸಗೊಳ್ಳುತ್ತದೆ ಹಾಗೂ ಅದನ್ನು ಸರ್ಕಾರದ ನಿರ್ಧಾರಕ್ಕೆ ಅನುಸಾರವಾಗಿ ನಿರ್ಧರಿಸಲಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರಗಳು NHB ಯ ವಿನಂತಿಗೆ ಒಪ್ಪಿದಲ್ಲಿ, ಈ ಶುಲ್ಕಗಳನ್ನು ಮುಂದಿನ ದಿನಗಳಲ್ಲಿ ಕಡಿಮೆಗೊಳಿಸಲಾಗುತ್ತದೆ, ಅದರಿಂದ ಮನೆ ಖರೀದಿಯು ನಿಮಗೆ ಹೆಚ್ಚು ಅಗ್ಗವಾಗಬಹುದು.

ಈ ನಡುವೆ ನೀವು ಈ ಶುಲ್ಕಗಳ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿದುಕೊಳ್ಳಿ.

ಸ್ಟ್ಯಾಂಪ್ ಡ್ಯೂಟಿ ಎಂದರೇನು ಮತ್ತು ಅದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಸ್ಟ್ಯಾಂಪ್ ಡ್ಯೂಟಿ ಎಂದರೆ ನಿಮ್ಮ ಮನೆ ಖರೀದಿಯನ್ನು ಪೂರ್ಣಗೊಳಿಸುವಾಗ ನಡೆಯುವ ಯಾವುದೇ ರೀತಿಯ ಹಣದ ವಹಿವಾಟಿನ ಮೇಲೆ ವಿಧಿಸಲಾಗುವ ತೆರಿಗೆಯಾಗಿದೆ ಹಾಗೂ ಇದು 1899.ರಲ್ಲಿ ಅಂಗೀಕಾರವಾದ ಭಾರತೀಯ ಸ್ಟ್ಯಾಂಪ್ ಕಾಯ್ದೆಯ ನಂತರ ಚಾಲ್ತಿಗೆ ಬಂದಿದೆ. ಇದು ವರ್ಗಾವಣೆ ಪತ್ರ, ಮಾರಾಟ ಪತ್ರ ಮತ್ತು ವಕಾಲತ್ತು ನಾಮೆ ಅಧಿಕಾರ ಪತ್ರಗಳ ವಹಿವಾಟುಗಳ ಮೇಲಿನ ತೆರಿಗೆಯನ್ನು ಒಳಗೊಳ್ಳುತ್ತದೆ. ನೀವು ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ ನಂತರ ಈ ಡಾಕ್ಯುಮೆಂಟ್‌ಗಳನ್ನು ಕ್ಲೈಮ್ ಮಾಡಬಹುದು. ಪ್ರತಿಯೊಂದು ದಾಖಲೆಯ ಮೇಲಿನ ಡ್ಯೂಟಿಯ ನಿಖರವಾದ ಮೊತ್ತವನ್ನು ನಿಮ್ಮ ಆಸ್ತಿಯ ಮೌಲ್ಯ ಮತ್ತು ಸ್ವರೂಪವನ್ನು ಮೌಲ್ಯಮಾಪನ ಮಾಡುವ ಮೂಲಕ ಲೆಕ್ಕ ಹಾಕಲಾಗುತ್ತದೆ. ನಂತರ ಅದನ್ನು ವಲಯ ದರದ ಜೊತೆಗೆ ಹೋಲಿಸಲಾಗುತ್ತದೆ. ಹೆಚ್ಚಾಗಿರುವ ಮೌಲ್ಯದ ಮೇಲೆ ನಂತರ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ.

ನಿಮ್ಮ ಪ್ರಾಪರ್ಟಿಯ ಮೇಲಿನ ನೋಂದಣಿ ಶುಲ್ಕ ಎಂದರೇನು?

ನೋಂದಣಿ ಶುಲ್ಕ ಎಂದರೆ ಆಸ್ತಿಯು ನಿಮ್ಮ ಹೆಸರಿನಲ್ಲಿ ನೋಂದಣಿಯಾಗಲು ನೀವು ಸ್ಟ್ಯಾಂಪ್ ಡ್ಯೂಟಿಯ ಮೇಲೆ ಪಾವತಿಸಬೇಕಾದ ಒಂದು ವೆಚ್ಚವಾಗಿದೆ. ನೀವು ಆಸ್ತಿಯನ್ನು ಎಲ್ಲಿ ಖರೀದಿಸುತ್ತೀರಿ ಎನ್ನುವುದನ್ನು ಆಧರಿಸಿ ಆಸ್ತಿಯ ಒಟ್ಟು ವೆಚ್ಚ ಅಥವಾ ಅದರ ಮಾರುಕಟ್ಟೆ ಮೌಲ್ಯದ 1% ಆಗಿ ಈ ಶುಲ್ಕವನ್ನು ಲೆಕ್ಕ ಹಾಕಲಾಗುತ್ತದೆ. ಉದಾಹರಣೆಗಾಗಿ, ಮುಂಬೈಯಲ್ಲಿ ಇದು ಆಸ್ತಿಯ ಒಟ್ಟು ಮಾರುಕಟ್ಟೆ ಅಥವಾ ಒಪ್ಪಂದ ಮೌಲ್ಯದ 1% ಆಗಿದೆ ಅಥವಾ ರೂ. 30,000, ಯಾವುದು ಕಡಿಮೆಯಾಗಿರುತ್ತದೆಯೋ ಅದು. ಕೋಲ್ಕತ್ತಾದಲ್ಲಿ, ಇದು ಪ್ರಾಪರ್ಟಿಯ ಒಟ್ಟು ವೆಚ್ಚದ 1% ಆಗಿದೆ. ಆದ್ದರಿಂದ ಉದಾಹರಣೆಗಾಗಿ ನೀವು ರೂ. 70 ಲಕ್ಷಕ್ಕೆ ಒಂದು ಮನೆ ಖರೀದಿಸಿದಲ್ಲಿ, ಮನೆಯ ನೋಂದಣಿ ಶುಲ್ಕವು ಆ ಮೊತ್ತದ 1% ಆಗಿರುತ್ತದೆ, ಅಂದರೆ ರೂ. 70,000.

ನೀವು ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಹೇಗೆ ಮಾಡುತ್ತೀರಿ?

ನೋಂದಣಿ ಪ್ರಕ್ರಿಯೆಯನ್ನು 1908.ರ ಭಾರತೀಯ ನೋಂದಣಿ ಕಾಯ್ದೆಗೆ ಅನುಸಾರವಾಗಿ ನಡೆಸಲಾಗುತ್ತದೆ. ನಿಮ್ಮ ಆಸ್ತಿಯಿರುವ ಸ್ಥಳದ ಸಬ್-ರಿಜಿಸ್ಟ್ರಾರ್ ಬಳಿ ನಿಮ್ಮ ಮನೆಯನ್ನು ನೋಂದಣಿ ಮಾಡಿಸಲು ನೀವು ಈ ಹಂತಗಳನ್ನು ಅನುಸರಿಸಬಹುದು.

• ನಿಮ್ಮ ಪ್ರಾಪರ್ಟಿಯ ಮೌಲ್ಯವನ್ನು ಅಂದಾಜು ಮಾಡಿ ಮತ್ತು ಸ್ಟ್ಯಾಂಪ್ ಡ್ಯೂಟಿಯನ್ನು ಲೆಕ್ಕ ಹಾಕಿ.
• ಅಗತ್ಯ ಮೊತ್ತದ ನಾನ್-ಜುಡಿಸಿಯಲ್ ಸ್ಟ್ಯಾಂಪ್ ಪೇಪರ್‌ಗಳನ್ನು ಖರೀದಿಸಿ. ನೀವು ಆನ್‌ಲೈನ್‌ನಲ್ಲಿ ಇ-ಸ್ಟ್ಯಾಂಪ್ ಪೇಪರ್‌ಗಳನ್ನೂ ಖರೀದಿಸಬಹುದು.
• ಖರೀದಿದಾರರಾದ ನಿಮ್ಮ ಪರವಾಗಿ ಕಾರ್ಯನಿರ್ವಹಿಸುವ ಒಬ್ಬ ಅಧಿಕೃತ ಅಟಾರ್ನಿ(ನ್ಯಾಯವಾದಿ)ಯನ್ನು ನೇಮಿಸುವ ಮೂಲಕ ಮಾರಾಟ ಪತ್ರವನ್ನು ಸಿದ್ಧಗೊಳಿಸಿ.
• ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನು ಪಾವತಿಸಿ.
• ಇಬ್ಬರು ಸಾಕ್ಷಿಗಳ ಸಹಿಗಳೊಂದಿಗೆ ಪತ್ರವನ್ನು ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿ.
• ಗುರುತಿನ ಪುರಾವೆ, ವಿಳಾಸದ ಪುರಾವೆ ಮತ್ತು ನೋ ಅಬ್ಜೆಕ್ಷನ್ ಪ್ರಮಾಣಪತ್ರ (NOC) ಮೊದಲಾದ ಅವಶ್ಯಕ ದಾಖಲೆಗಳನ್ನು ಸಲ್ಲಿಸಿ.
• ದಾಖಲೆಯನ್ನು ಪರಿಶೀಲಿಸಿದ ನಂತರ, ನೋಂದಣಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ನೀವು ಡಾಕ್ಯುಮೆಂಟ್‌ಗಳ ಅಸಲು ಪ್ರತಿಯನ್ನು ಪಡೆಯುತ್ತೀರಿ ಹಾಗೂ ಸಬ್-ರಿಜಿಸ್ಟ್ರಾರ್ ಕಚೇರಿಯು ಡಾಕ್ಯುಮೆಂಟ್‌ಗಾಗಿ ಅದರ ಒಂದು ಪ್ರತಿಯನ್ನು ಇರಿಸಿಕೊಳ್ಳುತ್ತದೆ.

ಈಗ ನೀವು ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳ ಬಗ್ಗೆ ಹಾಗೂ ನಿಮ್ಮ ಪ್ರಾಪರ್ಟಿಯನ್ನು ಹೇಗೆ ನೋಂದಣಿ ಮಾಡಿಸುವುದು ಎಂಬುದರ ಬಗ್ಗೆ ತಿಳಿದುಕೊಂಡಿರಿ, ನೀವು ಮನೆ ಖರೀದಿಸಲು ಯೋಜಿಸುವಾಗ ಈ ಮೊತ್ತಕ್ಕೆ ಹಣ ಹೊಂದಿಸಲು ಮರೆಯದಿರಿ. ಭಾರತದ ಎಲ್ಲಾ ರಾಜ್ಯಗಳಲ್ಲಿನ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು ನಮ್ಮ ಸ್ಟ್ಯಾಂಪ್ ಡ್ಯೂಟಿ ಕ್ಯಾಲ್ಕುಲೇಟರ್ ಅನ್ನು ಬಳಸಿ.

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ