ಫಲಾನುಭವಿಯ ಕುಟುಂಬ
• ಭಾರತದ ಯಾವುದೇ ಭಾಗದಲ್ಲಿ ಅವರು ವಾಸಯೋಗ್ಯ ಮನೆಯನ್ನು (ಸದೃಢ ಮನೆ) ತನ್ನ ಹೆಸರಿನಲ್ಲಿ ಹೊಂದಿರಬಾರದು
• ವಿವಾಹಿತರ ಸಂದರ್ಭದಲ್ಲಿ, ಇಬ್ಬರಲ್ಲಿ ಒಬ್ಬರು ಅಥವಾ ಜಂಟಿ ಮಾಲೀಕತ್ವದಲ್ಲಿ ಇಬ್ಬರೂ ಒಟ್ಟಿಗೆ ಸಿಂಗಲ್ ಮನೆಗೆ ಅರ್ಹರಾಗಿರುತ್ತಾರೆ, ಇದು ಯೋಜನೆ ಅಡಿಯಲ್ಲಿ ಮನೆತನದ ಆದಾಯ ಅರ್ಹತೆಗೆ ಒಳಪಟ್ಟಿರುತ್ತದೆ
• ಫಲಾನುಭವಿ ಕುಟುಂಬವು ಗಂಡ, ಹೆಂಡತಿ, ಮದುವೆಯಾಗಿರದ ಗಂಡು ಮಕ್ಕಳು ಮತ್ತು/ಅಥವಾ ಮದುವೆಯಾಗಿರದ ಹೆಣ್ಣುಮಕ್ಕಳನ್ನು ಹೊಂದಿರುತ್ತದೆ
• ಒಬ್ಬ ಪ್ರೌಢ ಗಳಿಸುವ ಸದಸ್ಯರನ್ನು (ವೈವಾಹಿಕ ಸ್ಥಾನಮಾನವನ್ನು ಲೆಕ್ಕಿಸದೆ) ಪ್ರತ್ಯೇಕ ಕುಟುಂಬವಾಗಿ ಪರಿಗಣಿಸಬಹುದು
ವಿವಿಧ ಕುಟುಂಬಗಳ ಅಗತ್ಯಕ್ಕೆ ಆದಾಯ ನಿಯಮಗಳು ಈ ಕೆಳಗಿನಂತಿವೆ:
• ರೂ. 3.00 ಲಕ್ಷಗಳವರೆಗೆ ವಾರ್ಷಿಕ ಆದಾಯ ಹೊಂದಿರುವ EWS ಮನೆತನಗಳು/ವ್ಯಕ್ತಿಗಳು
• ರೂ. 3.00 ಲಕ್ಷಗಳಿಗಿಂತ ಹೆಚ್ಚು ಮತ್ತು ರೂ. 6.00 ಲಕ್ಷಗಳವರೆಗೆ ವಾರ್ಷಿಕ ಆದಾಯ ಹೊಂದಿರುವ LIG ಮನೆತನಗಳು/ವ್ಯಕ್ತಿಗಳು
• ರೂ. 6.00 ಲಕ್ಷಗಳಿಗಿಂತ ಹೆಚ್ಚು ಮತ್ತು ರೂ. 12.00 ಲಕ್ಷಗಳವರೆಗೆ ವಾರ್ಷಿಕ ಆದಾಯ ಹೊಂದಿರುವ MIG I ಮನೆತನಗಳು/ವ್ಯಕ್ತಿಗಳು
• ರೂ. 12.00 ಲಕ್ಷಗಳಿಂದ ರೂ. 18.00 ಲಕ್ಷಗಳವರೆಗೆ ವಾರ್ಷಿಕ ಆದಾಯವಿರುವ MIG II ಮನೆತನಗಳು/ವ್ಯಕ್ತಿಗಳು
PMAY ಸಬ್ಸಿಡಿ ಸ್ಕೀಮ್ ಅನ್ನು ಪಡೆದುಕೊಳ್ಳಲು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಿರುತ್ತದೆ:
• ಘೋಷಣೆ ಫಾರಂ (ರಾಜ್ಯ ಕಾನೂನುಗಳ ಅನ್ವಯ, ಸ್ಟ್ಯಾಂಪ್ ಶುಲ್ಕಗಳು ಅಫಿಡವಿಟ್‌ನಷ್ಟೇ ಇರಬೇಕು)
• ಪರ್ಮನಂಟ್ ಅಕೌಂಟ್ ನಂಬರ್ (ಪ್ಯಾನ್ ). ಒಂದುವೇಳೆಪ್ಯಾನ್ ನೀಡಿಲ್ಲವಾದರೆ, ಫಾರಂ 60 ಬೇಕಾಗುತ್ತದೆ.
• ಆಧಾರ್ ನಂಬರ್, ಫಲಾನುಭವಿ ಕುಟುಂಬದಲ್ಲಿನ ಎಲ್ಲಾ ಅರ್ಜಿದಾರರು (MIG I & MIG II ಕೆಟಗರಿಗಾಗಿ)
• ಅರ್ಜಿದಾರರ ಆದಾಯ ಪುರಾವೆ [ಅನ್ವಯವಾಗುವ ಆದಾಯ ಪುರಾವೆ ಡಾಕ್ಯುಮೆಂಟ್‌ಗಳು - ITR ಅಥವಾ ಫಾರಂ 16 (1 ವರ್ಷ)/ ಸಂಬಳದ ಸ್ಲಿಪ್ (ಒಟ್ಟು ತಿಂಗಳ ಸಂಬಳ*12)].
• PMAY ಅಡೆಂಡಮ್ (ರಾಜ್ಯ ಕಾನೂನುಗಳ ಅನ್ವಯ, ಸ್ಟ್ಯಾಂಪ್ ಶುಲ್ಕವು ಟಾಪಪ್ ಅಡೆಂಡಮ್‌ನಷ್ಟೇ ಇರಬೇಕು)
• ಅಂತಿಮ ಬಳಕೆಯ ನಿರ್ವಹಣಾ ಪ್ರಮಾಣಪತ್ರ
ಅರ್ಹತೆಯ ಮೇರೆಗೆ ಲೋನ್ ವಿತರಣೆಯಾದ ನಂತರ, (ನ್ಯಾಷನಲ್ ಹೌಸಿಂಗ್ ಬ್ಯಾಂಕ್) NHB ಯಿಂದ ಲೋನ್ ಪಡೆದುಕೊಳ್ಳುವ ಅರ್ಹ ಸಾಲಗಾರರಿಗೆ ಬಿಎಚ್ಎಫ್ಎಲ್ ರಿಯಾಯಿತಿಯ ಪ್ರಯೋಜನದ ಹಕ್ಕನ್ನು ಕೇಳುತ್ತದೆ.
ಅರ್ಹ ಸಾಲಗಾರರಿಗೆ, ಸಬ್ಸಿಡಿ ಮೊತ್ತವನ್ನು BHFL ಗೆ ಪಾವತಿಸಲಾಗುತ್ತದೆ. ಒಮ್ಮೆ BHFL ಬಡ್ಡಿಯ ಸಬ್ಸಿಡಿಯನ್ನು ಪಡೆದಾಗ, ಅದನ್ನು ಲೋನ್ ಮೊತ್ತಕ್ಕೆ ಮುಂಗಡವಾಗಿ ಕ್ರೆಡಿಟ್ ಮಾಡಲಾಗುತ್ತದೆ ಮತ್ತು EMI ಅನ್ನು ಮರು-ಹೊಂದಿಸಲಾಗುತ್ತದೆ.
ಲೋನಿನ ಮೊತ್ತಕ್ಕೆ ಮಿತಿಯಿಲ್ಲ, ಆದರೆ ಬಡ್ಡಿ ಸಬ್ಸಿಡಿಯನ್ನು ಇಡಬ್ಲ್ಯೂಎಸ್/ಎಲ್ಐಜಿಗೆ ಗರಿಷ್ಠ ರೂ. 6 ಲಕ್ಷ, ಎಂಐಜಿ 1 ಗೆ ರೂ. 9 ಲಕ್ಷಗಳು ಮತ್ತು ಎಂಐಜಿ 2ಗೆ ರೂ. 12 ಲಕ್ಷಗಳು ಎಂದು ಲೆಕ್ಕ ಹಾಕಲಾಗುತ್ತದೆ.
ಅಲ್ಲದೆ, ಆಸ್ತಿ ಮೌಲ್ಯಕ್ಕೆ ಯಾವ ಮಿತಿಯೂ ಇರುವುದಿಲ್ಲ. ಆದರೆ ಪ್ರತಿಯೊಂದು ಕೆಟಗರಿಗೂ ಕಾರ್ಪೆಟ್ ಪ್ರದೇಶದ ಮಿತಿ ಇರುತ್ತದೆ.
ಈ ಕ್ರೆಡಿಟ್ಟಿಗೆ ಲಿಂಕ್ ಮಾಡಿದ ಸಬ್ಸಿಡಿಯನ್ನು ಪಡೆಯಲು ಮಿಷನ್ನಿನ ಅಡಕದ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಅಥವಾ ಮಿಗಿಲಾಗಿಸುತ್ತಿರುವ ಮನೆಗಳ ಕಾರ್ಪೆಟ್ ಪ್ರದೇಶವು 30 ಸ್ಕ್ವೇರ್ ಮೀಟರ್‌ಗಳು ಮತ್ತು EWS ಹಾಗೂ LIG ಗಳಿಗೆ 60 ಸ್ಕ್ವೇರ್ ಮೀಟರ್‌ಗಳು ಅನುಕ್ರಮವಾಗಿ ಇರಬೇಕು. ಫಲಾನುಭವಿಯು ತನ್ನ ವಿವೇಚನೆಯ ಮೇರೆಗೆ, ದೊಡ್ಡ ಪ್ರದೇಶದಲ್ಲಿ ಮನೆಯನ್ನು ಕಟ್ಟಿಕೊಳ್ಳಬಹುದು, ಆದರೆ ಬಡ್ಡಿ ಕೊಡುಗೆಯು ಮೊದಲ ರೂ. 6 ಲಕ್ಷಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
MIG I ಕೆಟಗರಿಗಾಗಿ ವಾಸ ಸ್ಥಾನದ ಗರಿಷ್ಠ ಕಾರ್ಪೆಟ್ ಪ್ರದೇಶವು 120 sq.m./1291.67 ಸ್ಕ್ವೇರ್ ಫೀಟ್ ಮತ್ತು MIG II ಕೆಟಗರಿಗಾಗಿ ವಾಸ ಸ್ಥಾನದ ಗರಿಷ್ಠ ಕಾರ್ಪೆಟ್ ಪ್ರದೇಶವು 150 sq.m./1614.59 ಸ್ಕ್ವೇರ್ ಫೀಟ್ ಇರುತ್ತದೆ.
ಪ್ರತಿ ವಿಭಾಗಕ್ಕೆ ಅರ್ಹ ಲೋನ್ ಮೊತ್ತದ ಮೇಲಿನ ಅನ್ವಯಿಕ ಬಡ್ಡಿ ಸಬ್ಸಿಡಿಯನ್ನು ಈ ಕೆಳಗೆ ನೀಡಲಾಗಿದೆ:
a.) EWS/LIG: 6.5%
b.) MIG I: 4%
c.) MIG II: 3%
ಇಲ್ಲ, ಫಲಾನುಭವಿಯ ಕುಟುಂಬ/ ಗೃಹೋಪಯೋಗಿ ಕುಟುಂಬದಲ್ಲಿ ಸಂಗಾತಿಯು ಈಗಾಗಲೇ ಒಂದು ಆಸ್ತಿಯನ್ನು ಹೊಂದಿರುವುದರಿಂದ ಆ ಕುಟುಂಬವು CLSS ಅಡಿಯಲ್ಲಿ ಲಾಭವನ್ನು ತೆಗೆದುಕೊಳ್ಳುವಂತಿಲ್ಲ.
PMAY ಸಬ್ಸಿಡಿಯು ಗರಿಷ್ಠ ಪರಿಗಣಿಸಲಾದ ಕಾಲಾವಧಿ 20 ವರ್ಷಗಳಿಗೆ ಅನ್ವಯವಾಗುತ್ತದೆ. BHFL ಅಸ್ತಿತ್ವದಲ್ಲಿರುವ ಪಾಲಿಸಿಗೆ ಅನುಗುಣವಾಗಿ ಕಾಲಾವಧಿಯನ್ನು ಕೊಡಮಾಡುತ್ತದೆ, ಆದರೆ ಸಬ್ಸಿಡಿಯನ್ನು ಈ ಕೆಳಗಿನವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಲೆಕ್ಕ ಹಾಕಲಾಗುವುದು
a)
b) BHFL ಕೊಡಮಾಡಿದ ಕಾಲಾವಧಿ
ಆಸ್ತಿಯು ಮೂಲಭೂತ ನಾಗರೀಕ ಸೌಕರ್ಯಗಳಾದ ನೀರು, ಶೌಚಾಲಯ, ನೈರ್ಮಲ್ಯ, ಒಳಚರಂಡಿ, ರಸ್ತೆ, ವಿದ್ಯುತ್ ಇತ್ಯಾದಿಗಳನ್ನು ಹೊಂದಿರಬೇಕು.
ಹೌದು. MIG I ಮತ್ತು MIG II ಕೆಟಗರಿಗಳಿಗಾಗಿ PMAY ಯೋಜನೆ ಯ ಅಡಿಯಲ್ಲಿ ಈ ಕೇಸನ್ನು ಪ್ರಕ್ರಿಯೆ ಮಾಡಲು, ಫಲಾನುಭವಿ ಕುಟುಂಬದಲ್ಲಿನ ಎಲ್ಲಾ ಅರ್ಜಿದಾರರ ಆಧಾರ ಕಾರ್ಡ್ ವಿವರಗಳನ್ನು ಕಡ್ಡಾಯವಾಗಿ ಒದಗಿಸುವ ಅಗತ್ಯವಿದೆ
ಯೋಜನೆಯ ಅಡಿಯಲ್ಲಿ ಆದಾಯ ಮಾನದಂಡಗಳಿಗೆ ಅನುಗುಣವಾಗಿ ಅರ್ಹ ಲೋನ್ ಮೊತ್ತಕ್ಕೆ ಫಲಾನುಭವಿಯಿಂದ BHFL ಯಾವುದೇ ಪ್ರಕ್ರಿಯಾ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ಅರ್ಹ ಲೋನ್ ಮೊತ್ತಗಳನ್ನು ಮೀರಿದ ಹೆಚ್ಚುವರಿ ಲೋನ್ ಮೊತ್ತಗಳ ಮೇಲೆ ಬಡ್ಡಿಯ ಸಬ್ಸಿಡಿಗಾಗಿ BHFL ನಿಂದ ಪ್ರಕ್ರಿಯಾ ಶುಲ್ಕಗಳನ್ನು ವಿಧಿಸಲಾಗುವುದು.
ದುರ್ಬಲ ಮನೆಗಳಿಗೆ, ಅರೆ-ಸದೃಢ ಮನೆಗಳಿಗೆ ಮತ್ತು ನವೀಕರಣಗೊಳಿಸಿ ಸದೃಢ ಮಾಡಬೇಕಾದ ಮನೆಗಳಿಗೆ ರಿಪೇರಿ ಕೆಲಸಗಳ ಅಗತ್ಯವಿರುತ್ತದೆ. ಆದರೆ, ಇದು EWS ಮತ್ತು LIG ಕೆಟಗರಿಗಳ ಅರ್ಜಿದಾರರಿಗೆ ಮಾತ್ರ ಅನ್ವಯವಾಗುತ್ತದೆ.
ಫೋರ್‌ಕ್ಲೋಸರ್ ಸ್ಟೇಟ್ಮೆಂಟ್ ವಿತರಿಸಲು 12 ಕೆಲಸದ ದಿನಗಳ TAT ಬೇಕಾಗುತ್ತವೆ.
ಅಂತಹ ವಿಷಯಗಳಿಗೆ ನೀವು ಈ ಕೆಳಗೆ ಕೊಡಲಾದ ಸಂಬಂಧಿಸಿದ ವ್ಯಕ್ತಿಗಳನ್ನು ಸಂಪರ್ಕಿಸಬೇಕು:
ಉತ್ಪನ್ನ | ಕಾಂಟಾಕ್ಟ್ ಪರ್ಸನ್ | ಮೊಬೈಲ್ ನಂಬರ್ | ಇಮೇಲ್ ಐಡಿ |
---|---|---|---|
ಹೋಮ್ ಲೋನ್ (ವಾಯುವ್ಯ) | ಜಸ್ಪ್ರೀತ್ ಚಡ್ಡಾ | 9168360494 | jaspreet.chadha@bajajfinserv.in |
ಹೋಮ್ ಲೋನ್ (ಆಗ್ನೇಯ) | ಫ್ರಾನ್ಸಿಸ್ ಜೋಬಾಯ್ | 9962111775 | francis.jobai@bajajfinserv.in |
ಗ್ರಾಮೀಣ ಲೋನ್ | ಕುಲದೀಪ್ ಲೋರಿ | 7722006833 | kuldeep.lowry@bajajfinserv.in |
ಆಸ್ತಿ ಮೇಲಿನ ಲೋನ್ | ಪಂಕಜ್ ಗುಪ್ತಾ | 7757001144 | pankaj.gupta@bajajfinserv.in |
ಲೀಸ್ ಬಾಡಿಗೆ ರಿಯಾಯಿತಿ | ವಿಪಿನ್ ಆರೋರಾ | 9765494858 | vipin.arora@bajajfinserv.in |
ಡೆವಲಪರ್ ಫೈನಾನ್ಸ್ | ದುಶ್ಯಂತ್ ಪೋದ್ದಾರ್ | 9920090440 | dushyant.poddar@bajajfinserv.in |
ವೃತ್ತಿಪರ ಲೋನ್ಗಳು | ನೀರವ್ ಕಪಾಡಿಯಾ | 9642722000 | nirav.kapadia@bajajfinserv.in |