1. ನೀವು ನಿಮ್ಮ ಪ್ರಸ್ತುತವಿರುವ ಸಾಲದಾತರಿಂದ ಕೆಲವು ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಿ, ಅವುಗಳನ್ನು ನಿಮ್ಮ ಹೊಸ ಸಾಲದಾತರಿಗೆ ಸಲ್ಲಿಸಬೇಕು
2. ಹೊಸ ಸಾಲದಾತರು ನಿಮ್ಮೆಲ್ಲಾ ಡಾಕ್ಯುಮೆಂಟ್‌ಗಳನ್ನು ಭೌತಿಕವಾಗಿ ದೃಢೀಕರಿಸುತ್ತಾರೆ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ಅನ್ನು ಪರಿಶೀಲಿಸುತ್ತಾರೆ
ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಬೇಕಾದ ಡಾಕ್ಯುಮೆಂಟ್‌ಗಳ ಸಮಗ್ರ ಪಟ್ಟಿಯೊಂದು ಇಲ್ಲಿದೆ. ಈ ಪಟ್ಟಿಯು ಪ್ರಕ್ರಿಯೆಯ ಆರಂಭದಿಂದ ಕೊನೆಯವರೆಗೆ ಅಗತ್ಯವಾದ ಪ್ರತಿಯೊಂದು ದಾಖಲೆಯನ್ನೂ ಒಳಗೊಳ್ಳುತ್ತದೆ.
ಈ ಪ್ರಕ್ರಿಯೆಯಲ್ಲಿ ಇಬ್ಬರು ಸಾಲದಾತರು ಒಳಗೊಂಡಿರುವುದರಿಂದ, ನೀವು ನಿಮ್ಮ ಪ್ರಸ್ತುತದ ಸಾಲದಾತರಿಂದ ಕೆಲವು ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಿ, ಅವುಗಳನ್ನು ನಿಮ್ಮ ಹೊಸ ಸಾಲದಾತರಿಗೆ ಸಲ್ಲಿಸಬೇಕಾಗುತ್ತದೆ.
ನೀವು ನಿಮ್ಮ ಪ್ರಸ್ತುತದ ಸಾಲದಾತರಿಂದ ಸಂಗ್ರಹಿಸಬೇಕಾದ ಡಾಕ್ಯುಮೆಂಟ್‌ಗಳು:
ನೀವು ಹೋಮ್ ಲೋನ್ ಟ್ರಾನ್ಸ್‌ಫರ್‌ನ ಬಗ್ಗೆ ತಿಳಿಯಪಡಿಸುವ ಒಂದು ಔಪಚಾರಿಕ ಅಪ್ಲಿಕೇಶನನ್ನು ನಿಮ್ಮ ಈಗಿನ ಸಾಲದಾತರಿಗೆ ಸಲ್ಲಿಸಿ, ಸಮ್ಮತಿ ಪತ್ರವನ್ನು ಕೇಳಬೇಕಾಗುತ್ತದೆ..
ನೋ ಅಬ್ಜೆಕ್ಷನ್ ಪ್ರಮಾಣ ಪತ್ರ' ಅಥವಾ NOC, ನಿಮ್ಮ ಹೋಮ್ ಲೋನನ್ನು ಹೊಸ ಸಾಲದಾತರಿಗೆ ವರ್ಗಾಯಿಸಲು ನಿಮ್ಮ ಪ್ರಸ್ತುತದ ಸಾಲದಾತರಿಗೆ ಯಾವುದೇ ತೊಂದರೆಯಿಲ್ಲ ಎಂಬುದನ್ನು ಸೂಚಿಸುತ್ತದೆ.
ಅಂತಿಮವಾಗಿ, ನಿಮ್ಮ ಹೋಮ್ ಲೋನನ್ನು ಸೂಚಿಸಿದ ದಿನಾಂಕದಂದು ಫೋರ್‌ಕ್ಲೋಸ್ ಮಾಡಲಾಗಿದೆ ಮತ್ತು ಯಾವುದೇ ಮೊತ್ತವು ಬಾಕಿ ಉಳಿದಿಲ್ಲವೆಂದು ತಿಳಿಸುವ ಒಂದು ಫೋರ್‌ಕ್ಲೋಸರ್ ಪತ್ರ ಬೇಕಾಗುತ್ತದೆ. ನಿಮ್ಮ ಹೊಸ ಸಾಲದಾತರು ನಿಮ್ಮ ಬಾಕಿ ಉಳಿದ ಲೋನ್ ಮೊತ್ತವನ್ನು ನಿಮ್ಮ ಪ್ರಸ್ತುತದ ಸಾಲದಾತರಿಗೆ ಪಾವತಿಸಿದ ನಂತರ ಈ ಪತ್ರವನ್ನು ನೀಡಲಾಗುತ್ತದೆ.
ನಿಮ್ಮ EMI ಮರುಪಾವತಿ ಟ್ರ್ಯಾಕ್ ರೆಕಾರ್ಡನ್ನು ತೋರಿಸುವ ಹೋಮ್ ಲೋನ್‌ನ ಸ್ಟೇಟ್ಮೆಂಟ್ ಸಂಗ್ರಹಿಸಿ. ಈ ಸ್ಟೇಟ್ಮೆಂಟ್ ಬಾಕಿ ಉಳಿದಿರುವ ಲೋನ್ ಮೊತ್ತವನ್ನೂ ಹೊಂದಿರುತ್ತದೆ.
ನೀವು ನಿಮ್ಮ ಈಗಿನ ಸಾಲದಾತರಿಂದ ನಿಮ್ಮ ಆಸ್ತಿ-ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಬೇಕಾಗುತ್ತದೆ.
ನೀವು ಹೋಮ್ ಲೋನ್ ತೆಗೆದುಕೊಳ್ಳುವಾಗ ಪೋಸ್ಟ್-ಡೇಟೆಡ್ ಚೆಕ್‌ಗಳನ್ನು ಸಲ್ಲಿಸಿರಬಹುದು. ಬಾಕಿ ಚೆಕ್‌ಗಳನ್ನು ಹಿಂದೆ ತೆಗೆದುಕೊಳ್ಳಲು ಮರೆಯದಿರಿ.
ನೀವು ನಿಮ್ಮ ಹೊಸ ಸಾಲದಾತರಿಗೆ ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು:
ಇದು ನಿಮ್ಮ ಗುರುತಿನ ಪರಿಶೀಲನೆಯ ಉದ್ದೇಶಕ್ಕಾಗಿ. ನೀವು ಕೆಳಗೆ ಸೂಚಿಸಿದ ಪಟ್ಟಿಯಿಂದ ಕನಿಷ್ಠ ಒಂದು ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ:
- ವೋಟರ್ ಐಡಿ
- ಡ್ರೈವಿಂಗ್ ಲೈಸೆನ್ಸ್
- NREGA ನೀಡಿದ ಜಾಬ್ ಕಾರ್ಡ್
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್ (ಪ್ಯಾನ್ ಕಾರ್ಡ್ ಗುರುತಿನ ಪುರಾವೆಯಾಗಿ ಮಾತ್ರ)
ಇದು ನಿಮ್ಮ ವಿಳಾಸದ ವಿವರಗಳ ಪರಿಶೀಲನೆಯ ಉದ್ದೇಶಕ್ಕಾಗಿ. ನೀವು ಕೆಳಗೆ ಸೂಚಿಸಿದ ಪಟ್ಟಿಯಿಂದ ಕನಿಷ್ಠ ಒಂದು ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ:
- ಪಾಸ್‌ಪೋರ್ಟ್
- ವೋಟರ್ ಐಡಿ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
- ಆಧಾರ್ ಕಾರ್ಡ್
ಇದು ನಿಮ್ಮ ಮರುಪಾವತಿಯ ಸಾಮರ್ಥ್ಯ ಮತ್ತು ಆದಾಯ ಮೂಲದ ಪರಿಶೀಲನೆಯ ಉದ್ದೇಶಕ್ಕಾಗಿ. ನೀವು ಕೆಳಗೆ ಸೂಚಿಸಿದ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ:
- ಫಾರಂ 16
- ಇತ್ತೀಚಿನ ಸಂಬಳದ ಸ್ಲಿಪ್‌ಗಳು
- ಕಳೆದ ಆರು ತಿಂಗಳ ಸಂಬಳದ ಅಕೌಂಟಿನ ಬ್ಯಾಂಕ್ ಸ್ಟೇಟ್ಮೆಂಟ್‌ಗಳು
ಇದು ನಿಮ್ಮ ಪ್ರಾಪರ್ಟಿಯ ಪರಿಶೀಲನೆಯ ಉದ್ದೇಶಕ್ಕಾಗಿ. ನೀವು ಕೆಳಗೆ ಸೂಚಿಸಿದ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ:
- ಆಸ್ತಿ ಖರೀದಿಯ ಡಾಕ್ಯುಮೆಂಟ್‌ಗಳು ಅಥವಾ ಆಸ್ತಿಯ ಮಾಲೀಕತ್ವವನ್ನು ರುಜುವಾತುಪಡಿಸುವ ಡಾಕ್ಯುಮೆಂಟ್‌ಗಳು
- ನಿಮ್ಮ ಡೆವಲಪರ್/ಹೌಸಿಂಗ್ ಸೊಸೈಟಿಯ NOC
- ನೋಂದಣಿ, ಸ್ಟ್ಯಾಂಪ್ ಡ್ಯೂಟಿ ಪಾವತಿಗಳು
ಇದನ್ನು ನಿಮ್ಮ ಪ್ರಸ್ತುತದ ಲೋನ್ ವಿವರಗಳನ್ನು ಪರಿಶೀಲಿಸಲು ಮತ್ತು ನಿಮ್ಮ ಹೋಮ್ ಲೋನನ್ನು ಟ್ರಾನ್ಸ್‌ಫರ್ ಮಾಡಲು ನಿಮ್ಮ ಸಾಲದಾತರಿಗೆ ಯಾವುದೇ ಆಕ್ಷೇಪಣೆ ಇಲ್ಲ ಎಂಬುದನ್ನು ದೃಢೀಕರಿಸುವುದಕ್ಕಾಗಿ ಮಾಡಲಾಗುತ್ತದೆ. ನೀವು ಈ ದಾಖಲೆಗಳನ್ನು ನಿಮ್ಮ ಪ್ರಸ್ತುತದ ಸಾಲದಾತರಿಂದ ಸಂಗ್ರಹಿಸಿ ನಿಮ್ಮ ಹೊಸ ಸಾಲದಾತರಿಗೆ ಸಲ್ಲಿಸಬೇಕು:
- ನಿಮ್ಮ ಈಗಿನ ಸಾಲದಾತರೊಂದಿಗಿನ ಲೋನ್ ಒಪ್ಪಂದ ಅಥವಾ ಲೋನ್ ಮಂಜೂರಾತಿ ಪತ್ರ
- ನಿಮ್ಮ ಈಗಿನ ಸಾಲದಾತರಿಂದ ಅನುಮೋದನೆಗಳು (ಸಮ್ಮತಿ ಪತ್ರ, NOC, ಫೋರ್‌ಕ್ಲೋಸರ್ ಪತ್ರ)
- ಇಂದಿನವರೆಗಿನ ಹೋಮ್ ಲೋನ್ ಸ್ಟೇಟ್ಮೆಂಟ್
ಮೇಲೆ ಸೂಚಿಸಿದ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ, ಪರಿಶೀಲಿಸಿದ ನಂತರ, ನಿಮ್ಮ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪ್ರಕ್ರಿಯೆಯು ಸರಾಗವಾಗುತ್ತದೆ.
ನೀವು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯದ ಪ್ರಯೋಜನವನ್ನು ಪಡೆಯಲು ಬಯಸಿದರೆ, ಈ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ಬರೆದಿಟ್ಟುಕೊಳ್ಳಿ ಮತ್ತು ಅವುಗಳನ್ನು ಸಂಗ್ರಹಿಸಲು ಆರಂಭಿಸಿ.
ಹೋಮ್ ಲೋನ್ EMI ಕ್ಯಾಲ್ಕುಲೇಟರ್ | ಬಜಾಜ್ ಫಿನ್ಸರ್ವ್
ನಿಮಗೆ ಏನು ಇಷ್ಟವಾಗಲಿಲ್ಲ?
ನಿಮಗೆ ಏನು ಇಷ್ಟವಾಗಲಿಲ್ಲ?
ನಿಮಗೆ ಏನು ಇಷ್ಟವಾಯಿತು?
ನಿಮಗೆ ಏನು ಇಷ್ಟವಾಯಿತು?
ನಿಮಗೆ ಏನು ಇಷ್ಟವಾಯಿತು?