ಪರ್ಸನಲ್ ಲೋನ್

ಬಜಾಜ್ ಫಿನ್‌ಸರ್ವ್‌ನಲ್ಲಿ ಪರ್ಸನಲ್ ಲೋನ್‌ ಬಡ್ಡಿ ದರ ಎಷ್ಟು?

ಬಜಾಜ್ ಫಿನ್‌ಸರ್ವ್‌ನಲ್ಲಿ ಪರ್ಸನಲ್ ಲೋನ್‌ ಬಡ್ಡಿ ದರ ಎಷ್ಟು?

ಬಜಾಜ್ ಫಿನ್‌ಸರ್ವ್ 12.99% ನಿಂದ ಪ್ರಾರಂಭವಾಗುವ ಬಡ್ಡಿ ದರಗಳಲ್ಲಿ ಪರ್ಸನಲ್ ಲೋನ್‌ಗಳನ್ನು ನೀಡುತ್ತದೆ.
ಪ್ರಕ್ರಿಯಾ ಶುಲ್ಕಗಳು, EMI ಬೌನ್ಸ್ ಶುಲ್ಕಗಳು, ದಂಡ ಬಡ್ಡಿ ಮತ್ತು ಭದ್ರತಾ ಶುಲ್ಕಗಳಂತಹ (ಆನ್‌ಲೈನ್‌ನಲ್ಲಿ ಮಾತ್ರ) ಹೆಚ್ಚುವರಿ ಶುಲ್ಕಗಳನ್ನು, ಅಪ್ಲಿಕೇಶನ್ ಸಲ್ಲಿಸುವ ಸಮಯದಲ್ಲಿ ವಿಧಿಸಬಹುದು.

ಪರ್ಸನಲ್ ಲೋನ್‌ ಬಡ್ಡಿ ದರಗಳ ಬಗ್ಗೆ ಇನ್ನಷ್ಟು ಓದಿ.

ಬಡ್ಡಿಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ?
• ನೀವು ತೆಗೆದುಕೊಳ್ಳುವ ಯಾವುದೇ ಪರ್ಸನಲ್ ಲೋನ್‌ ಅನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಬೇಕಾಗುತ್ತದೆ. ಲೋನ್ ಮೊತ್ತವನ್ನು ಅಸಲು ಎಂದು ಕರೆಯಲಾಗುತ್ತದೆ ಮತ್ತು ಅದಕ್ಕೆ ಸೇರಿಸಲಾದ ಮೊತ್ತವನ್ನು ಬಡ್ಡಿ ಎಂದು ಕರೆಯಲಾಗುತ್ತದೆ. ಪರ್ಸನಲ್ ಲೋನ್‌ ಸುರಕ್ಷಿತವಲ್ಲದ ಲೋನ್ ಆಗಿರುವುದರಿಂದ, ಇದಕ್ಕೆ ಯಾವುದೇ ಭದ್ರತೆ ನೀಡುವ ಅಥವಾ ಆಸ್ತಿಯನ್ನು ಅಡಮಾನ ಇಡುವ ಅಗತ್ಯವಿಲ್ಲ ಎಂದರ್ಥ, ಇದರ ಬಡ್ಡಿ ದರಗಳು ಸ್ವಲ್ಪ ಹೆಚ್ಚಾಗಿರುತ್ತವೆ.
• 12 ರಿಂದ 60 ತಿಂಗಳವರೆಗೆ ಇರುವ ನಿಮ್ಮ ಅವಧಿಯಲ್ಲಿ, EMI ಗಳಲ್ಲಿ ಅಥವಾ ಮಾಸಿಕ ಸಮಾನ ಕಂತುಗಳ ಮೂಲಕ, ಲೋನ್ ಮೊತ್ತವನ್ನು ನೀವು ಮರುಪಾವತಿಸುತ್ತೀರಿ.
• ಈ ಕಂತಿನಲ್ಲಿ ಅಸಲು ಮತ್ತು ಬಡ್ಡಿಯ ಅಂಶಗಳೆರಡೂ ಒಳಗೊಂಡಿರುತ್ತದೆ.

ಪರ್ಸನಲ್ ಲೋನ್‌ ಬಡ್ಡಿ ದರದ ಮೇಲೆ ಪ್ರಭಾವ ಬೀರುವ ಅಂಶಗಳು:
• ನಿಮ್ಮ ಕ್ರೆಡಿಟ್ ಇತಿಹಾಸ
• ನಿಮ್ಮ ಮಾಸಿಕ ಸಂಬಳ ಅಥವಾ ಸ್ಥಿರ ಆದಾಯ
• ಲೋನ್ ಪಡೆಯುತ್ತಿರುವ ಮೊತ್ತ
• ಮಾರುಕಟ್ಟೆ ಪರಿಸ್ಥಿತಿಗಳು

ಕಡಿಮೆ ಬಡ್ಡಿ ದರಕ್ಕೆ ಕಾರಣವಾಗುವ ಅಂಶ ಯಾವುದು?
• ಉತ್ತಮ ಕ್ರೆಡಿಟ್ ಇತಿಹಾಸ ಮತ್ತು ಸ್ಕೋರ್ ಹೊಂದಿರುವುದು
• ನಿಮ್ಮ ಎಲ್ಲಾ ಬಿಲ್ಲುಗಳನ್ನು ಮತ್ತು ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು

ನಿಮ್ಮ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ ಬಡ್ಡಿ ಮೊತ್ತವನ್ನು ಲೆಕ್ಕ ಹಾಕಿ
• ನೀವು ಪ್ರತಿ ತಿಂಗಳು EMI ರೂಪದಲ್ಲಿ ಪಾವತಿಸುವ ನಿಖರವಾದ ಮೊತ್ತವನ್ನು ತಿಳಿಯಲು; ನೀವು ಪರ್ಸನಲ್ ಲೋನ್ EMI ಮೊತ್ತವನ್ನು ಲೆಕ್ಕಹಾಕಬಹುದು.